Purandara Dasaru

Daasarendare Purandara Daasarayya

ಜ್ಞಾನವೈರಾಗ್ಯ ಸಂಪನ್ನಂ ಭಕ್ತಿಮಾರ್ಗ ಪ್ರವರ್ತಕಂ |
ಪುರಂದರಗುರುಂ ವಂದೇ ದಾಸಶ್ರೇಷ್ಟಂ ದಯಾನಿಧಿಂ |

ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ|
ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ ||

 

*ನವಕೋಟಿ ನಾರಾಯಣ ದಾಸ ಶ್ರೇಷ್ಠ

ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರು*

ಆಗರ್ಭ ಶ್ರೀಮಂತನಾಗಿದ್ದ ಶ್ರೀನಿವಾಸ ನಾಯಕ ರತ್ನವಜ್ರ ವ್ಯಾಪಾರಿಯಾಗಿದ್ದು ಯಾರಿಗೂ ಯಾವ ದಾನವನ್ನೂ ಮಾಡದೆ ತನ್ನ ತಿಜೋರಿಯ ತುಂಬಿಸುತ್ತಿದ್ದರು. ಅಂತಹ ಜಿಪುಣ ತನ್ನ ಸಕಲ ಆಸ್ತಿ ಪಾಸ್ತಿಯನ್ನೂ ತೃಣ ಸಮಾನವೆಂದು ಪರಿಗಣಿಸಿ ಸಂಸಾರದಲ್ಲಿ ವಿರಕ್ತಿ ಬಂದು ಮಧುಕರವೃತ್ತಿಯನ್ನು ಅನುಸರಿಸಿ ವ್ಯಾಸರಾಯರ ಬಳಿ ದಾಸ ದೀಕ್ಷೆಯ ಕೋರಿ “ಪುರಂದರ ವಿಠಲ” ಎಂಬ ಅಂಕಿತ ಪಡೆದು ಕರ್ನಾಟಕ ಸಂಗೀತ ಪಿತಾಮಹ ಎನಿಸಿ ಮೆರೆದ ಪುರಂದರದಾಸರು ಇಹಲೋಕವನ್ನು ತ್ಯಜಿಸಿದ ದಿನವೇ ಪುಷ್ಯ ಕೃಷ್ಣ ಅಮಾವಾಸ್ಯೆ.

ಅವರ ಮಾಯಾಮಾಳವಗೌಳ ರಾಗದಲ್ಲಿರುವ ಲಂಬೋದರ ಲಕುಮಿಕರ ಕೃತಿ ಪ್ರತಿಯೊಬ್ಬ ಸಂಗೀತಕಾರನೂ ಸಾಮಾನ್ಯವಾಗಿ ಅಭ್ಯಸಿಸದೇ ಇರುವುದಿಲ್ಲ.

ವ್ಯಾಸರಾಯರು, ವಾದಿರಾಜರು, ಅಣ್ಣಮಾಚಾರ್ಯರು, ಕನಕದಾಸರು ಮುಂತಾದ ಪ್ರಖ್ಯಾತ ವಾಗ್ಗೇಯಕಾರರ ಸಮಕಾಲೀನರೂ ಆಗಿದ್ದ‌ ಅವರು ಮಧ್ವಸಿದ್ಧಾಂತದ ಪ್ರತಿಪಾದಕರಾಗಿದ್ದರು.

ದಾಸರು ಸುಮಾರು 475೦೦೦ ಕೃತಿಗಳನ್ನು ರಚಿಸಿದ್ದಾರೆ ಎನ್ನಲಾಗುತ್ತಿದೆ ಅದರಲ್ಲಿ ಸದ್ಯ ಸುಮಾರು 50೦೦ ಕೃತಿಗಳು ಉಪಲಬ್ಧವಿದೆ.

ದಾಸರ ಕೃತಿಗಳಲ್ಲಿ ಸರಳೆವರಸೆ, ಕೀರ್ತನೆ, ಉಗಾಭೋಗ, ಸುಳಾದಿ, ಮುಂಡಿಗೆ, ಗದ್ಯ ಮುಂತಾದ ಶೈಲಿಯಲ್ಲಿ ದೇವರ ಸ್ತುತಿ, ನಿಂದಾಸ್ತುತಿ, ನೀತಿಕವನ, ಒಗಟಿನ ಕವನ, ಸಂದೇಶಪೂರಿತ ಕೃತಿ, ಕರ್ತವ್ಯ ಸೂಚಕ ಕೃತಿ, ಪ್ರಕೃತಿ ಪರಿಚಯ, ಪರಮಾತ್ಮನ, ರುದ್ರದೇವರ, ಪ್ರಾಣದೇವರ, ಲಕ್ಷ್ಮೀ ಸರಸ್ವತಿ, ಇತರ ದೇವ‌ ದೇವಿಯರ ಸ್ತುತಿ, ಮುಂತಾದವುಗಳನ್ನು ರಚಿಸಿದ್ದಾರೆ. ವ್ಯಾಸರಾಯರು ಇವರ ಕೃತಿಗಳನ್ನು ಸರ್ವಮೂಲದ ಜೊತೆಗಿಟ್ಟು ಪೂಜಿಸಿ “ಪುರಂದರೋಪನಿಷತ್” ಎಂದು ಕರೆದಿದ್ದಾರೆ. ಅವರು ಆಡು ಮುಟ್ಟದ ಗಿಡವಿಲ್ಲವೆಂಬಂತೆ ಅವರ‌ ಕೃತಿಗಳಲ್ಲಿ ಸಿಗದ ವಿಷಯವೇ ಇಲ್ಲ.

ಅವರ ಅನುಗಾಲವೂ ಚಿಂತೆ ಕೃತಿಯಲ್ಲಿ ಮಾನವನ ಚಿಂತನೆ ನಿರಂತರ ಸುಖವಿದ್ದರೂ, ದು:ಖವಿದ್ದರೂ ಚಿಂತೆ ಎಂದು ಹೇಳಿದ್ದಾರೆ.

ಅವರ ಅಂಬಿಗಾ ನಾ ನಿನ್ನ ನಂಬಿದೆ ಕೃತಿಯಲ್ಲಿ ಒಂದು ದೋಣಿ ಮತ್ತು ಅಂಬಿಗಾ ಎಂದು ಮೇಲ್ನೋಟಕ್ಕೆ ಕಂಡರೂ ಅಲ್ಲಿ ಇಡೀ ಜೀವನ ಎಂಬ ನೌಕೆಯ ನಡೆಸುವ ಪರಮಾತ್ಮನೇ ಅಂಬಿಗಾ ಎಂದಿದ್ದಾರೆ.

ನಮ್ಮ ಚಾಡಿ ಹೇಳುವ ನೀಚ ನಾಲಿಗೆಯನ್ನು ತಿದ್ದಲು ಪ್ರಯತ್ನಿಸಿದ್ದಾರೆ.:   “ರಾಗಿ” ತಂದೀರಾ ಕೃತಿಯಲ್ಲಿ ನಾವು ಮಾಡಬೇಕಾದ ಕರ್ತವ್ಯ ತಿಳಿಸಿದ್ದಾರೆ.  ನೈವೇದ್ಯವ ಕೊಳ್ಳಿರೋ ಕೃತಿಯಲ್ಲಿ ನೈವೇದ್ಯ ಸಮರ್ಪಣೆ ಕ್ರಮ ತಿಳಿಸಿದ್ದಾರೆ. “ಮಾಡಿ ಮಡಿ ಎಂದು ಅಡಿಗ್ಹಡಿಗಾರುವಿ” ಕೃತಿಯಲ್ಲಿ ಬೂಟಾಟಿಕೆ ಮಡಿಯ ಮಾಡಬೇಡಿರೆಂದಿದ್ದಾರೆ.

 

“ಶ್ರೀ” – ಶ್ರೀಮಂತ; “ಪು” – ಪುಣ್ಯಾತ್ಮ;

“ರಂ”- ರಂಜಿಪ; “ದ” – ದಯವಂತ;
“ರ” – ರಕ್ಷಕ ; “ಗು” – ಗುಣವಂತ;
“ರ” – ರಜದೂರ ; “ವೇ” – ವೇದವಿಧ;
“ನ” – ನಯವಂತ ; “ಮ:- ಮಹಾಜ್ಞಾನಿ
ಹೀಗೆ “ಶ್ರೀ ಪುರಂದರಗುರವೇ ನಮಃ:” ಎಂದು ಸ್ತುತಿಸಲು ಪುರಂದರದಾಸರು ಅನುಗ್ರಹಿಸುವರು ಎಂದಿದ್ದಾರೆ ಲಕ್ಷ್ಮೀಕಾಂತ ದಾಸರು

 

ಪುರಂದರದಾಸರು ಪ್ರತಿಷ್ಠಾಪಿಸಿದ ಮುಖ್ಯಪ್ರಾಣ ದೇವರು –

– ಹುಳೇಬೀಡುಗ್ರಾಮ., ಆಂಧ್ರಪ್ರದೇಶದ ಕರ್ನೂಲ್ ಜಿಲ್ಲಾ,, ಆಲೂರು ಬಳಿ.  ಶ್ರೀ ವ್ಯಾಸರಾಯರು ತಮ್ಮ ಶಿಷ್ಯನಿಗೆ ಅನುಗ್ರಹ ಮಿಡಿ ಪ್ರತಿಷ್ಠಾಪಿಸಲು ಅಪ್ಪಣೆ ನೀಡಿದರು.

Purandara Mantapa – Sri Krishnadevaraya, the King of Vijayanagar, invited him to his palace and built a Japashala for Purandaradasaru, near Chakrathirtha, now popularly called as “Purandara Mantapa”

Purandara Mantapa @ Hampi

muLLu koneya

 • Mullu koneya mele – Mundige with meaning – click

 • “Sudhaama Charite” – Click

 • ಪುರಂದರ ದಾಸರ ಸಂಕ್ಷಿಪ್ತ ಮಾಹಿತಿ

 • ದಾಸರ ಕಾಲ – 1480 – 1564
 • ಗೋತ್ರ         – ವಸಿಷ್ಟ ಗೋತ್ರ
 •  ವೇದ ಶಾಖ   – ಯಜುರ್ವೇದ
 •  ಕುಲದೈವ     – ತಿರುಪತಿ ವೆಂಕಟರಮಣ
 •  ತಂದೆ         – ಶ್ರೀ ವರದಪ್ಪ ನಾಯಕ
 •  ಮೂಲಸ್ಥಳ    – ಪುರಂದರಘಡ
 •  ತಂದೆಯ ವೃತ್ತಿ- ರತ್ನಪುಡಿ ವ್ಯಾಪಾರ
 •  ಜನ್ಮನಾಮ    – ಶ್ರೀನಿವಾಸ ನಾಯಕ 
 •  ಧರ್ಮಪತ್ನಿ   – ಸರಸ್ವತಿಬಾಯಿ
 •  ಮಕ್ಕಳು       – ನಾಲ್ಕು (ವರದಪ್ಪ, ಗುರುರಾಯ, ಅಭಿನವಪ್ಪ, ಮಧ್ವಪತಿ)
 •  ಇವರನ್ನು ಜನರು ಕರೆಯುತ್ತಿದುದು – ನವಕೋಟಿ ನಾರಾಯಣ
 •  ಇವರ ಪರಿವರ್ತನೆ – ಶ್ರೀಹರಿಯಿಂದ (ವೃದ್ಧ ಬ್ರಾಹ್ಮಣ ವೇಶದಿಂದ)
 •  ವೃದ್ಧ ಬ್ರಾಹ್ಮಣ ಯಾಚಿಸಿದ್ದು – ಮಗನ ಉಪನಯನಕ್ಕೆ ಸಹಾಯ
 •  ಬ್ರಾಹ್ಮಣ ಅಲೆದಾಡಿದ ಕಾಲ – ೬ ತಿಂಗಳ
 •  ಶ್ರೀನಿವಾಸ ನಾಯಕ ನೀಡಿದ್ದು – ಒಂದು ಸವಕಲು ನಾಣ್ಯ
 •  ಸರಸ್ವತೀಬಾಯಿಗೆ ಬ್ರಾಹ್ಮಣ ನೀಡಿದ್ದು – ಮೂಗುತಿ
 •  ವಿಷಪಾನ ಮಾಡಲು ಹೋದ ಸರಸ್ವತಿಬಾಯಿಗೆ ಮೂಗುತಿ ಸಿಕ್ಕಿದ್ದು – ವಿಷದ ಬಟ್ಟಲಿನಲ್ಲಿ
 •  ದಾಸವೃತ್ತಿಗೆ ಕಾರಣ – ಭಗವಂತನ ಲೀಲೆ, ವೈರಾಗ್ಯ – ಶ್ರೀಹರಿಯಲ್ಲಿ ಭಕ್ತಿ, ಸಂಸಾರದಲ್ಲಿ ವಿರಕ್ತಿ
 •  ಮುಂದಿನ ವೃತ್ತಿ – ಮಧುಕರವೃತ್ತಿ
 •  ದಾಸದೀಕ್ಷೆ ನೀಡಿದ್ದು – ಶ್ರೀ ವ್ಯಾಸರಾಯರು
 •  ಲಭ್ಯವಾದ ಅಂಕಿತ – ಪುರಂದರವಿಠಲ
 •  ಮಧುಕರವೃತ್ತಿಯ ಮತ್ತೊಂದು ಹೆಸರು – ಗೋಪಾಳ, ಯಾಯಾವಾರ
 •  ಪುರಂದರ ದಾಸರ ಮಕ್ಕಳ ಅಂಕಿತಗಳು – ವರದ ಪುರಂದರ ವಿಠಲ (ವರದಪ್ಪ), ಗುರುಪುರಂದರ (ಗುರುರಾಯ), ಅಭಿನವಪುರಂದರ (ಅಭಿನವಪ್ಪ), ಗುರುಮಧ್ವಪತಿವಿಠಲ (ಮಧ್ವಪತಿ).
 • ಪುರಂದರದಾಸರ ಆರಾಧ್ಯ ದೈವ – ಪಾಂಡುರಂಗ
 • ಅನುಸರಿಸಿದ ಸಿದ್ಧಾಂತ – ಮಧ್ವಸಿದ್ಧಾಂತ
 • ವ್ಯಾಸರಾಜರು ದಾಸರ ಕೃತಿಗಳಿಗೆ ನೀಡಿದ ಗೌರವ – “ಪುರಂದರೋಪನಿಷತ್”
 • ಸಂಗೀತ ಪ್ರಪಂಚದಲ್ಲಿ ಪುರಂದರ ದಾಸರ ಗೌರವ – ಕರ್ನಾಟಕ ಸಂಗೀತ ಪಿತಾಮಹ
 • “ದಾಸರೆಂದರೆ ಪುರಂದರದಾಸರಯ್ಯ” ಎಂದವರು – ಶ್ರೀ ವ್ಯಾಸರಾಜರು
 • ಸಮಕಾಲೀನರು – ಶ್ರೀ ವ್ಯಾಸರಾಜರು, ಶ್ರೀ ವಿಜಯೀಂದ್ರರು, ಶ್ರೀ ವಾದಿರಾಜರು,   ಶ್ರೀ ಸುರೇಂದ್ರರು, ಶ್ರೀ ರಘುನಾಥರು, ಶ್ರೀ ರಘುವರ್ಯರು, ಶ್ರೀ ಕನಕದಾಸರು,      ಶ್ರೀ ವೈಕುಂಟದಾಸರು, ಶ್ರೀಕೃಷ್ಣದೇವರಾಯ, ಅಣ್ಣಮಾಚಾರ್ಯ ಮುಂತಾದವರು.
 •  ಇಹಲೋಕ ತ್ಯಜಿಸಿದ ದಿನ – ರಕ್ತಾಕ್ಷಿ ಸಂವತ್ಸರ (೧೫೬೪), ಪುಷ್ಯಮಾಸ, ಅಮಾವಾಸ್ಯ, ಭಾನುವಾರ.
 •  ದಾಸರ ಮೂಲ – ನಾರದರು
 •  ದಾಸರು ಕೊನೆಯ ದಿನ ವಾಸಿಸಿದ ಸ್ಥಳ – ಹಂಪಿ
 •  ದಾಸರು ಸ್ವಪ್ನದಲ್ಲಿ ಅಂಕಿತ ನೀಡಿದ್ದು – ವಿಜಯದಾಸರಿಗೆ
 •  ದಾಸರ ಒಟ್ಟು ಕೃತಿಗಳು – ಅಂದಾಜು ೪೨೫೦೦೦
 •  ದಾಸರ ಸಾಹಿತ್ಯ ಪ್ರಕಾರಗಳು – ಸರಳೆವರಸೆ,  ಕೀರ್ತನೆ, ಉಗಾಭೋಗ, ಸುಳಾದಿ, ಗದ್ಯ, ಇತ್ಯಾದಿ
 •  ಉಪಲಬ್ದ ಕೃತಿಗಳು – ಸುಮಾರು ೨೦೦೦Purandara data-page-001
 • Purandaradasaru (English) – click

 • Purandara Mandigegalu – click

 • Purandaropanishat (Devaranamagalu)-1 – click

 1. Purandaropanishat –  He is said to have composed 425000/- devaranamas.  Of which only 5000 are available now.  Sri Vyasarajaru kept the Devaranamas, Suladi, and Ugabobha alongwith Sarvamoola and did the pooja for them and called the devaranamas by Purandaradasaru as “Purandaropanishat”, which is the gist of Bhagavatha and Upanishat.

 2. Character –  He was a miser – Lobhi or jipuna.  He had a lot of wealth and was populaly called as “Navakoti Narayana” but he hardly gave anything to anybody.  Attaining Vairagya –   At the age of 40 years.   “Lobha” gave place to “Vairagya” .  His “Love of Gold” turned as “Love of God” and became Haridasa.    He left Purandaragada alongwith his entire family and visited Pandarapura and came to Vijayanagar and sought the shishyatva of Sri Vyasarajaru, who gave him ankita as Purandara vittala and asked him to compose Devaranamas in Kannada.

 3. Madhukara Vrutti –  After getting the shishyatva of Sri Vyasarajaru, he left everything and started Madhukaravrutti –   His dress consist of a turban, tulasimale, chitike, gejje,  and gopalabutti consisting of voluntarily contributed food and other articles.
 4. Contemporaries – Sri Vyasarajaru, Sri Vadirajaru, Sri Vaikuntadasaru, Sri Kanakadasaru,Sri Annamacharya, Krishnadevaraya, Sripadarajaru

ಮುಂಡಿಗೆ :
ವಹವ್ವಾರೆ ಮೆಣಸಿನಕಾಯಿ
ಒಣರೊಟ್ಟಿಗೆ ತಂದೆನೊ ತಾಯಿ | ಪ |
ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹುರುಚಿಯೆಂಬೆ | ೧ |
ಒಂದೆರಡೆರದರೆ ಬಹುರುಚಿಯೆಂಬೆ
ಮೇಲೆರಡೆರೆದರೆ ಬಹು ಖಾರೆಂಬೆ ಅದೂ
ಎರಡೆರೆದರೆ ಅತಿ ಖಾರೆಂಬೆ | ೨ |
ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕೆ ನಿನ್ನಾಸಾರ
ಬಾಯಲಿ ಕಡಿದರೆ ಬೆಂಕಿಯ ಖಾರ
ಪುರಂದರ ವಿಠಲನನೆನೆಯೋದುಭಾರ | ೩ |

ವಹವ್ವಾರೆ ಮೆಣಸಿನಕಾಯಿ
ಪ್ರತಿಯೊಬ್ಬ ಜೀವಿಗಳು ವಿಚಿತ್ರ ಸ್ವಭಾವವುಳ್ಳವರಾಗಿರುತ್ತಾರೆ.  – ವಹವ್ವಾರೆ.     “ಬಹುಚಿತ್ರ ಜಗದ್ಬಹುದಾಕರಣಾತ್ ಪರಶಕ್ತಿರನಂತ ಗುಣ: ಪರಮ:”.   ಭೇದದಿಂದ ಕೂಡಿರುವ ಈ ಚಿತ್ರ ವಿಚಿತ್ರ ಜಗತ್ತನ್ನು ನೋಡಿಯಾದರೂ ಭಗವಂತನನ್ನು ಅರಿಯಬೇಕು.  ದಪ್ಪ ಮೆಣಸಿನಕಾಯಿ, ಖಾರ ಮೆಣಸಿನಕಾಯಿ, ಚಿಕ್ಕ ಮೆಣಸಿನಕಾಯಿ, ಬೋಂಡ ಮೆಣಸಿನಕಾಯಿ, ಬ್ಯಾಡಗಿ ಮೆಣಸಿನಕಾಯಿ, ಗುಂಟೂರು ಮೆಣಸಿನಕಾಯಿ ವಿಚಿತ್ರ ಆಕಾರ – ರುಚಿ ಹೇಗೆ ಚಿತ್ರ ವಿಚಿತ್ರವಾಗಿರತ್ತೋ ಅದೇ ರೀತಿ ಜೀವಿಗಳೆಲ್ಲ ಸಾತ್ವಿಕ ರಾಜಸ ತಾಮಸವೆಂದು ಭಿನ್ನರಾಗಿರುತ್ತಾರೆ.

ಒಣರೊಟ್ಟಿಗೆ ತಂದೆನೋ ತಾಯಿ : ಒಣರೊಟ್ಟಿ – ಸಾರರಹಿತ ಸಂಸಾರ; ತಾಯಿ – ಪ್ರಕೃತಿ ಮಾತೆ ಲಕ್ಷ್ಮೀದೇವಿ.

ಹುಟ್ಟುತಲೀ ಹಸಿರಾಗುತ ಕಂಡೆ : –  ಮೆಣಸಿನಕಾಯಿ ಹುಟ್ಟಿದಾಗ ಹಸಿರಾಗಿರುತ್ತೆ. ಹುಟ್ಟುವಾಗ (ಬಾಲ್ಯದಲಿ) ಸಂಸಾರದ ಹೊರೆ, ಮುಂದಿನ ಭಯ, ಯಾವುದೂ: ತಿಳಿಯದೆ ಜಗತ್ತು ಹಸಿರಾಗಿಯೇ ಕಂಡಿತು.

ನಟ್ಟನಡುವೆ ಕೆಂಪಾಗುತ ಕಂಡೆ : – ನಟ್ಟನಡುವೆ ಅಂದರೆ ತಾರುಣ್ಯದಲ್ಲಿ – ಬಿಸಿರಕ್ತವಿರುತ್ತದೆ. ಮೆಣಸಿನಕಾಯಿ ಕೆಂಪಾಗಿರುತ್ತೆ.  ಯೌವನ – ಕೋಪತಾಪಗಳ ಸಂಗಮ – ಲೌಕಿಕಾವಸ್ಥೆಯಲ್ಲಿ ಮುಳುಗಿ ಭಗವಂತನನ್ನೇ ಮರೆತಿರುತ್ತೇವೆ.

ಕಟ್ಟೆರಾಯನ ಬಲುರುಚಿಯೆಂಬೆ – ಕಟ್ಟೆರಾಯ ಅಂದರೆ ಭವಂತನಿರುವವರೆಗೂ ಯೌವ್ವನದ ಹಾರಾಟ ನಡೆಯುತ್ತಿರುತ್ತೆ.  ತಟ್ಟೇರಾಯನಂತೆ ತಾನು ಅಸ್ವತಂತ್ರನಾದರೂ ಸ್ವತಂತ್ರನಾದ ಕಟ್ಟೆಯ (ಸಿಂಹಾಸನ) ಮೇಲೆ ಕುಳಿತಿರುವನಂತೆ ತಿಳಿದು ಹಾಳಾಗುವುದು.  ಈ ಸಾಂಸಾರಿಕ ವಿಷಯ ವಸ್ತುಗಳು ವಿಷದಂತಿದ್ದರೂ ಅರ್ಥವಾಗದೆ ಬಲುರುಚಿಯಾಗಿದೆ ಎಂದೇ ಭ್ರಮಿಸುವೆವು.  ಇದನ್ನೇ ಕಟ್ಟೇರಾಯನಿಗೆ ಬಲುರುಚಿಯೆಂಬೆ ಎಂದಿದ್ದಾರೆ.

ಒಂದೆರಡೆರೆದರೆ ಬಹುರುಚಿಯೆಂಬೆ – (ಒಂದು + ಎರಡು = ಮೂರು) ಈ ಸಂಸಾರದಲ್ಲಿ ಯೌವ್ವನ, ಮದದ ಜೊತೆಗೆ ಹಾಳು ಮಾಡಲು ಕಾಮ, ಕ್ರೋಧ, ಲೋಭಗಳು (ಅಂದರೆ ಒಂದರ ಜೊತೆಗೆ ಇನ್ನೊಂದೆರಡು ಮೆಣಸಿನಕಾಯಿ ಸೇರಿಸಿದರೆ) ಬಹುರುಚಿಯೆಂಬಂತೆ ಇರುತ್ತೆ ಈ ಸಂಸಾರ.

ಅದು ಎರಡೆರದರೆ ಅತಿ ಖಾರೆಂಬೆ –  ಈ ಕಾಮ ಕ್ರೋಧಾದಿಗಳ ಜೊತೆ ಇನ್ನೂ ಎರಡು ಮೆಣಸಿನಕಾಯಿ ಸೇರಿದರೆ ( ೩  ೨ = ೬) ಕಾಮಕ್ರೋಧಾದಿ ಆರು ಸೇರಿದರೆ, ಭಗವಂತನ ಸ್ಮರಣೆಯೇ ಇಲ್ಲದೇ ತಾನೇ ಸರ್ವ ಸ್ವತಂತ್ರವೆಂಬ ದುರಹಂಕಾರ ಬಂದು ಮೆರೆವಾಗ, ಇನ್ನೊಬ್ಬ ಬಲಿಷ್ಟನಿಂದ ಅವಮಾನವಾದಾಗ ಬಹುಖಾರೆಂಬ ಅವಮಾನವಾಯಿತು.

ಅದು ಎರಡೆರದರೆ ಅತಿ ಖಾರೆಂಬೆ –  ಈ ಕಾಮಕ್ರೋಧಾದಿಗಳ ಜೊತೆಗೆ ಇನ್ನೂ ಎರಡು ಮೆಣಸಿನಕಾಯಿಗಳು ಸೇರಿದರೆ (೬ + ೨ = ೮) ಅಷ್ಟ ಮದಗಳೂ ಸೇರಿದ್ದರೆ, ಅಂದರೆ ಯೌವ್ವನ, ಧನ, ಅಧಿಕಾರ, ಅವಿವೇಕಾದಿಗಳೂ ಸೇರಿದ್ದರೆ; ಇವುಗಳಲ್ಲಿ ಒಂದೊಂದಿದ್ದರೂ ಅನರ್ಥಕಾರಿ.  ಎಲ್ಲವೂ ಸೇರಿದರೆ ಕೇಳುವುದೇ ಬೇಡ. ಬಡವರಿಗೆಲ್ಲಾ ನಿನ್ನಾಧಾರ – ಭಗವಂತನ ಭಕ್ತರಾದ ಕುಚೇಲ ಮೊದಲಾದವರಿಗೆಲ್ಲ ನಿನ್ನ ನಾಮವೇ ಆಧಾರ.  ಭೋಜನ ಮಾಡುವಾಗಲೂ ಗೋವಿಂದ ಎಂದು ಉಚ್ಚರಿಸುತ್ತಾ ಭುಂಜಿಸಬೇಕು.  ಅಡಿಗೆ ಮಾಡುವಾಗಲೂ ಭಗವಂತನ ನಾಮೋಚ್ಚಾರಣ ಪೂರ್ವಕ ಮಾಡಬೇಕು.

ಬಾಯಲ್ಲಿ ಕಡಿದರೆ ಬೆಂಕಿಯ ಖಾರ –  ಬಾಯಲ್ಲಿ ಮೆಣಸಿನಕಾಯಿ ಕಡಿದರೆ ಹೇಗೆ ಖಾರದಿಂದ ಭಗವಂತನ ಸ್ಮರಣೆ ಕಷ್ಟವೋ, ಹಾಗೆ ಸಂಸಾರಿಕ ವಿಷಗಳಿಂದ ಕಾಮಕ್ರೋಧಾದಿ ಕಿಚ್ಚುಗಳಿಂದ ಪುರಂದರ ವಿಠಲನ ನೆನೆಯೋದು ಅತಿ ಪ್ರಯಾಸಕರವಾದದ್ದು.  ಆದ್ದರಿಂದ ಈ ಮೆಣಸಿನಕಾಯಿಯಂತೆ ಭಗವಂತರನ್ನು ಮರೆಸುವ ಈ ವಿಷಯ ಪದಾರ್ಥಗಳನ್ನು ತೊರೆದು, ಭಗವನ್ನಾಮಾಮೃತವನ್ನು ಪಾನ ಮಾಡಿರಿ ಎಂದಿದ್ದಾರೆ ಪುರಂದರ ದಾಸರು.

(Source for Mundige :  Dr Chaturvedi Vedavyasacharya)

 

 

Leave a Reply

Your email address will not be published.

Sumadhwa Seva © 2022