ಭಾರತ ಹುಣ್ಣಿಮೆ :-
*ಭಾರತ ಹುಣ್ಣಿಮೆ / ವ್ಯಾಸಪೂರ್ಣಿಮೆ*
ಮಾಘ ಶುದ್ಧ ಹುಣ್ಣಿಮೆ – ಈ ದಿನವನ್ನು ವ್ಯಾಸಪೂರ್ಣಿಮೆ, ಮಾಘ ಹುಣ್ಣಿಮೆ, ಭಾರತ ಹುಣ್ಣಿಮೆ ಎಂದೂ ಕರೆಯುತ್ತಾರೆ.
ವೇದವ್ಯಾಸರು ಹಲವು ಬಾರಿ ಅವತಾರ ಮಾಡಿದ್ದಾರೆ, ವೈಶಾಖ ಶುದ್ಧ ತ್ರಯೋದಶಿ, ವೈಶಾಖ ಪೌರ್ಣಮಿ, ಆಷಾಢ ಪೌರ್ಣಮಿ, ಕಾರ್ತೀಕ ಪೌರ್ಣಮಿ ಮತ್ತು ಮಾಘ ಹುಣ್ಣಿಮೆ. ಬೇರೆ ಬೇರೆ ಯುಗಗಳಲ್ಲಿ ಬೇರೆ ಬೇರೆ ದಿನಗಳಂದು ಅವತರಿಸಿದ್ದಾರೆ. ಅದರಲ್ಲಿ 28ನೇ ದ್ವಾಪರ ಯುಗದಲ್ಲಿ ಪರಾಶರ ಸತ್ಯವತಿಯ ಮಗನಾಗಿ ಮಾಘ ಪೂರ್ಣಿಮ ದಿನದಂದು ಕೂಡ ಅವತರಿಸಿದ್ದು, ಆ ದಿನವನ್ನೇ ವ್ಯಾಸ ಪೂರ್ಣಿಮಾ ಎಂದೂ, ಮಹಾಭಾರತ ಕರ್ತೃಗಳಾದ್ದರಿಂದ ಭಾರತ ಹುಣ್ಣಿಮೆ ಎಂದೂ ಕರೆಯುತ್ತಾರೆ.
ಮಾಘ ಮಾಸದ ಶುಕ್ಲ ಪಕ್ಷದ ತ್ರಯೋದಶಿ, ಚತುರ್ದಶಿ ಮತ್ತು ಹುಣ್ಣಿಮೆಯಂದು ಅಂತ್ಯಪುಷ್ಕರಣೀ ಇದ್ದು, ಮಾಘ ಸ್ನಾನದ ಕಡೆಯ ದಿನವಾಗಿದೆ. ಇಂದು ಅರುಣೋದಯ ಕಾಲದಲ್ಲಿ ಎದ್ಧು, ಸ್ನಾನ ಮಾಡಿ ನಿತ್ಯಕರ್ಮಾನುಷ್ಟಾನ ಮಾಡಿ, ದಾನ ಮಾಡುವುದರಿಂದ ವಿಶೇಷ ಫಲವಿದೆ. ಈ ದಿನ ಮುತ್ತೈದೆಯರು ಮರದ ಬಾಗಿನವನ್ನು ಕೊಡುತ್ತಾರೆ.
ಈ ದಿನ ತುಳಜಾಭವಾನಿಯ ಜನ್ಮದಿನವೂ ಆಗಿದ್ದು, ಆ ಒಕ್ಕಲಿನವರು ವಿಶೇಷ ಪೂಜೆ ಸಲ್ಲಿಸುವರು
ಈ ದಿನ ಪವಿತ್ರ ನದಿಗಳ ಸ್ನಾನಕ್ಕೆ ಪ್ರಾಮುಖ್ಯತೆ ಇದೆ, ಪವಿತ್ರ ನದಿಗಳಾದ ಗಂಗಾ, ಸಿಂಧು, ಸರಸ್ವತಿ, ಕಾವೇರಿ, ಗೋದಿವರಿ, ತುಂಗಾ ಮುಂತಾದ ಕಡೆ ಸ್ನಾನ ಮಾಡಿ, ದಾನ ಮಾಡುವುದರಿಂದ ವಿಷ್ಣು ಪ್ರೀತಿಯಾಗುತ್ತದೆ.
ನದಿಗೆ ಕಾಲಿಡುವ ಮೊದಲು ನಮ್ಮ ಕೈಕಾಲು ತೊಳೆದುಕೊಂಡು, ಶುಚಿಯಾಗಿ ನದಿಯಲ್ಲಿ ಕಾಲಿಡಬೇಕು. ಮೊದಲು ನೀರನ್ನು ನಮ್ಮ ಮೇಲೆ ಪ್ರೋಕ್ಷಿಸಿಕೊಳ್ಳಬೇಕು
ಅಪವಿತ್ರ ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |
ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಂತರಶುಚಿ: |
ಭಾರತ ಹುಣ್ಣಿಮೆಯ ಅಂಗವಾಗಿ ಸಪ್ತ ಗುಡ್ಡಗಳ ವಿಶಾಲ ಪ್ರದೇಶದಲ್ಲಿರುವ ಬೆಳಗಾವಿಯ ಜಿಲ್ಲೆಯ ಶ್ರೀಕ್ಷೇತ್ರ ಸೌದತ್ತಿಯ ಎಲ್ಲಮ್ಮ ದೇವಿ ಜಾತ್ರೆಗೆ ಭಕ್ತರ ದಂಡೇ ಹರಿದುಬರುತ್ತದೆ. ಅತಿ ಸಂಭ್ರಮದಿಂದ ಜಾತ್ರೆ ನಡೆಯುತ್ತದೆ
*******
ಸ್ನಾನ ಕ್ರಮ ;
ನದಿಗೆ ಕಾಲಿಡುವ ಮೊದಲು ನಮ್ಮ ಕೈಕಾಲು ತೊಳೆದುಕೊಂಡು, ಶುಚಿಯಾಗಿ ನದಿಯಲ್ಲಿ ಕಾಲಿಡಬೇಕು.
(We have to wash our hands, legs before keeping our foot in the river)
ಗಂಗೆ/ಕಾವೇರಿ ಆದಿ ನದಿಗಳಲ್ಲಿ ಬಾಯಿ ಮುಕ್ಕಳಿಸಬಾರದು.
ನದಿಗಳಲ್ಲಿ ಮಲಮೂತ್ರ ವಿಸರ್ಜನ ಮಾಡಬಾರದು
ಬಟ್ಟೆ ಒಗೆಯಬಾರದು, ಸೋಪು ಹಾಕಿಕೊಳ್ಳಬಾರದು
(ಬೇರೆಯವರು ಮಾಡುತ್ತಾರಲ್ಲ ಎಂದೂ ನಾವೂ ಮಾಡಬಾರದು, ಅವರಿಗೆ ಸ್ನಾನದ ಮಹತ್ವ ತಿಳಿದಿರುವುದಿಲ್ಲ) ಸಾಧ್ಯವಾದರೆ ಅವರಿಗೂ ತಿಳಿಹೇಳಬೇಕು.
Dont’s in the river :
1. Dont spit in the river
2. Dont go for toilets in the river
3. Dont use soap
4. Dont wash clothes
We have to do the prokshane of ganga first with the following mantra –
अपवित्र पवित्रोवा सर्वावस्थां गतोपिवा ।
य: स्मरेत् पुंडरीकाक्षं स बाह्यांतरशुचि: ।
apavitra pavitrOvaa sarvaavasthaaM gatOpivaa |
ya: smarEt puMDarIkaakShaM sa baahyaaMtarashuchi: |
ಮೊದಲು ನೀರನ್ನು ನಮ್ಮ ಮೇಲೆ ಪ್ರೋಕ್ಷಿಸಿಕೊಳ್ಳಬೇಕು
ಅಪವಿತ್ರ ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |
ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಂತರಶುಚಿ: |
ಆಚಮನ, ಕೇಶವಾಯ ಸ್ವಾಹ, ನಾರಾಯಣಾಯ ಸ್ವಾಹಾ; ಮಾಧವಾಯ ಸ್ವಾಹ
ಗೋವಿಂದಾಯ ನಮ:,………………………………..ಹರಯೇ ನಮ:| ಓಂ ಶ್ರೀಕೃಷ್ಣಾಯ ನಮ: |
ಪ್ರಣವಸ್ಯ ಪರಬ್ರಹ್ಮ ಋಷಿ, ಪರಮಾತ್ಮಾ ದೇವತಾ, ……………ಶ್ರೀ…………..ಸಂವತ್ಸರೇ, ದಕ್ಷಿಣಾಯಣೇ/ಉತ್ತರಾಯಣೇ, ಪುಷ್ಯ/ಮಾಘ ಮಾಸೆ, ಕೃಷ್ಣ/ಶುಕ್ಲಪಕ್ಷೇ, ………ತಿಥೌ, ….ವಾಸರೇ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ (ಮನೆದೇವರು), ಪ್ರೇರಣಯಾ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೀತ್ಯರ್ಥ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, _______ಸನ್ನಿಧೌ, (ಕ್ಷೇತ್ರದೈವ), ಏವಂಗುಣ.. ಮಾಘ ಮಾಸಪ್ರಯುಕ್ತ ಮಾಸ ನಿಯಾಮಕ ಶ್ರೀ ಕಮಲಾ ಮಾಧವ ಪ್ರೀತ್ಯರ್ಥಂ ಮಾಘ ಸ್ನಾನಂ ಕರಿಷ್ಯೆ.
ಮಾಘ ಸ್ನಾನಮ್ ಕರಿಶ್ಯಾಮಿ ಮಕರಸ್ಥೆ ದಿವಾಕರೆ|
ಆಸಮಾಪ್ಥಿ ಮಹಾದೇವ ನಿರ‍್ವಿಘ್ನಂ ಕುರು ಮಾಧವ||
Achamana, kEshavaaya svaaha, naaraayaNaaya svaahaa; maadhavaaya svaaha
gOvindaaya nama:,………………………………..harayE nama:| OM shrIkRuShNaaya nama: |
praNavasya parabrahma RuShi, paramaatmaa dEvataa, ……………shrI…………..samvatsarE, dakShiNaayaNE/uttarayaNe, puShya/maaGa maase, kRuShNa/shuklapakShE, ………tithou, ….vaasarE, shrI bhaaratIramaNa muKyapraaNaantargata, shrI lakShmI narasimha/venkaTEsha (manedEvaru), prEraNayaa, shrI lakShmI narasimha/venkaTEsha prItyartha, sakala gangaadi tIrthaabhimaani sannidhou, _______sannidhou, (kShEtradaiva), EvanguNa.. maagha maasaprayukta maasa niyaamaka shrI kamalaa maadhava prItyartham maagha snaanam kariShye.
maagha snaanam karishyaami makarasthe divaakare|
aasamaapthi mahaadEva niRviGnam kuru maadhava||
आचमन, केशवाय स्वाह, नारायणाय स्वाहा; माधवाय स्वाह
गोविंदाय नम:,………………………………..हरये नम:। ओं श्रीकृष्णाय नम: ।
प्रणवस्य परब्रह्म ऋषि, परमात्मा देवता, ……………श्री…………..संवत्सरे, दक्षिणायणे/उत्तरायणे, पुष्य/माघ मासॆ, कृष्ण/शुक्लपक्षे, ………तिथौ, ….वासरे, श्री भारतीरमण मुख्यप्राणांतर्गत, श्री लक्ष्मी नरसिंह/वॆंकटेश (मनॆदेवरु), प्रेरणया, श्री लक्ष्मी नरसिंह/वॆंकटेश प्रीत्यर्थ, सकल गंगादि तीर्थाभिमानि सन्निधौ, _______सन्निधौ, (क्षेत्रदैव), एवंगुण.. माघ मासप्रयुक्त मास नियामक श्री कमला माधव प्रीत्यर्थं माघ स्नानं करिष्यॆ.
माघ स्नानम् करिश्यामि मकरस्थॆ दिवाकरॆ।
आसमाप्थि महादेव निर्विघ्नं कुरु माधव॥
ಸ್ನಾನಾರ್ಘ್ಯ ಮಂತ್ರ –
ನಮ: ಕಮಲನಾಭಾಯ ನಮಸ್ತೇ ಜಲಶಾಯಿನೇ |ನಮಸ್ತೇಸ್ತು ಹೃಷೀಕೇಶ ಗೃಹಾಣಾರ್ಘ್ಯಂ ನಮೋಸ್ತುತೇ |
(ಅರ್ಘ್ಯ ಶ್ರೀಹರಿಗೆ)
ಏಹಿ ಸೂರ್ಯ ಸಹಸ್ರಾಂಶೋ ತೇಜೋರಾಶೇ ಜಗತ್ಪತೇ |
ಅನುಕಂಪಾಯ ಮಾಂಭಕ್ತಂ ಗೃಹಾಣಾರ್ಘ್ಯಂ ನಮೋಸ್ತುತೇ |
(ಅರ್ಘ್ಯ ಸೂರ್ಯನಿಗೆ)
ವಿಷ್ಣುಪಾದಾಬ್ಜಸಂಭೂತೇ ಗಂಗೇ ತ್ರಿಪಥಗಾಮಿನಿ | ಗೃಹಾಣಾರ್ಘ್ಯಂ ಮಯಾ ದತ್ತಂ ಜಲೇ ಸನ್ನಿಹಿತಾ ಭವ |
(ಅರ್ಘ್ಯ ಗಂಗೆಗೆ)
ವೃದ್ಧಗಂಗೇ ಮಹಾಪುಣ್ಯೇ ಗೌತಮಸ್ಯಾಘನಾಶಿನಿ |ಗೋದಾವರೀ ಗ್ರುಹಾಣಾರ್ಘ್ಯಂ ತ್ರ್ಯಂಬಕಸ್ಯ ಜಟೋದ್ಭವೇ | (ಅರ್ಘ್ಯ ಗಂಗೆಯ ಇನ್ನೊಂದು ರೂಪವಾದ ಗೋದಾವರೀಗೆ) स्नानार्घ्य मंत्र –
नम: कमलनाभाय नमस्ते जलशायिने । नमस्तेस्तु हृषीकेश गृहाणार्घ्यं नमोस्तुते ।
(अर्घ्य श्रीहरिगॆ) एहि सूर्य सहस्रांशो तेजोराशे जगत्पते ।अनुकंपाय मांभक्तं गृहाणार्घ्यं नमोस्तुते ।
(अर्घ्य सूर्यनिगॆ) विष्णुपादाब्जसंभूते गंगे त्रिपथगामिनि । गृहाणार्घ्यं मया दत्तं जले सन्निहिता भव ।
(अर्घ्य गंगॆगॆ)
वृद्धगंगे महापुण्ये गौतमस्याघनाशिनि । गोदावरी ग्रुहाणार्घ्यं त्र्यंबकस्य जटोद्भवे ।
(अर्घ्य गंगॆय इन्नॊंदु रूपवाद गोदावरीगॆ)
snaanaarGya mantra –
nama: kamalanaabhaaya namastE jalashaayinE |
namastEstu hRuShIkEsha gRuhaaNaarGyaM namOstutE |
(arGya shrIharige)
Ehi sUrya sahasraamshO tEjOraashE jagatpatE |
anukampaaya maambhaktam gRuhaaNaarGyam namOstutE |
(arGya sUryanige)
viShNupaadaabjasambhUtE gangE tripathagaamini |
gRuhaaNaarGyam mayaa dattam jalE sannihitaa bhava |
(arGya gangege)
vRuddhagangE mahaapuNyE goutamasyaaGanaashini |
gOdaavarI gruhaaNaarGyam tryambakasya jaTOdbhavE |
(arGya gangeya innondu rUpavaada gOdaavarIge)
ಸಕಲ ಗಂಗಾತೀರ್ಥಾಭಿಮಾನಿದೇವತೆಗಳನ್ನೂ ಸ್ಮರಿಸಬೇಕು –
Do the smarana of sakala teertabhimani devategalu
ಗಂಗಾಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ |
ಕೃಷ್ಣಾ ಭೀಮರತೀ ಚ ಫಲ್ಘುಸರಯೂ ಶ್ರೀಗಂಡಕೀ ಗೋಮತೀ |
ಕಾವೇರೀ ಕಪಿಲಾಪ್ರಯಾಗವಿನುತಾ ನೇತ್ರಾವತೀತ್ಯಾದಯೋ |
ನದ್ಯ:ಶ್ರೀ ಹರಿಪಾದಪಂಕಜಭವಾ: ಕುರ್ವಂತು ನೋ ಮಂಗಳಂ ||
गंगासिंधु सरस्वती च यमुना गोदावरी नर्मदा ।
कृष्णा भीमरती च फल्घुसरयू श्रीगंडकी गोमती ।
कावेरी कपिलाप्रयागविनुता नेत्रावतीत्यादयो ।
नद्य:श्री हरिपादपंकजभवा: कुर्वंतु नो मंगळं ॥
gangaasindhu sarasvatI cha yamunaa gOdaavarI narmadaa |
kRuShNaa bhImaratI cha phalGusarayU shrIganDakI gOmatI |
kaavErI kapilaaprayaagavinutaa nEtraavatItyaadayO |
nadya:shrI haripaadapankajabhavaa: kurvantu nO mangaLam ||
ಸ್ನಾನ ಮಾಡುವಾಗ ಶ್ರೀಮನ್ನಾರಾಯಣನನ್ನು ಸ್ಮರಿಸುತ್ತಾ ಶಂಖಮುದ್ರೆಯಿಂದ ಪ್ರೋಕ್ಷಣ ಮಾಡಿಕೊಳ್ಳಬೇಕು.
*ಶಂಖಮುದ್ರೆ* – ನಮ್ಮ ಎಡಗೈಯ ಎಲ್ಲಾ ಬೆರಳುಗಳ ಮಧ್ಯದಲ್ಲಿ ಬಲಗೈಯ ಅಂಗುಷ್ಠವನ್ನು ಮೇಲ್ಮುಖವಾಗಿಟ್ಟುಕೊಂಡು ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಬಲಗೈಯ ಉಳಿದ ಎಲ್ಲಾ ಬೆರಳುಗಳಿಂದ ಎಡಗೈಯನ್ನು ಒತ್ತಿ ಹಿಡಿಯಬೇಕು. ಇದೇ ಶಂಖಮುದ್ರೆ.
ಸ್ನಾನ ಕಾಲದಲ್ಲಿ ನೀರಿನಿಂದಲೇ ದ್ವಾದಶ ನಾಮಗಳನ್ನು ಹಚ್ಚಿಕೊಂಡು ಪಿತೃತರ್ಪಣವನ್ನು (ಅಧಿಕಾರಿಗಳು) ಕೊಡಬೇಕು, ದೇವತೆಗಳು, ಋಷಿಗಳು, ಪಿತೃಗಳು ಇವರಿಗೆ ತರ್ಪಣ ಕೊಡುವುದು.
ನಾವು ಅನುಸಂಧಾನ ಮಾಡಬೇಕಾದ ವಿಧಾನ – ಈ ನೀರೇ ಗಂಗೆಯಲ್ಲ, ಅದರಲ್ಲಿ ಸಕಲ ತೀರ್ಥಾಭಿಮಾನಿ ದೇವತೆಗಳೂ ಇರುತ್ತಾರೆ. ಅವರ ಜೊತೆಗೆ ಅವರ ಪತಿಗಳೂ, ಅವರ ಪತ್ನಿಯರೂ (ಗಂಡು ನದಿಗಳಾದರೆ), ಇದ್ದು, ಅವರೊಳಗೆ ಗಂಗಾ ನದಿಯ ಸಾನ್ನಿಧ್ಯವನ್ನು ಅನುಸಂಧಾನ ಮಾಡಿ, ಆ ಗಂಗಾದೇವಿಯ ಅಂತರ್ಗತನಾದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಕ್ಷೀರಾಬ್ಧಿಶಾಯಿ, ಶ್ರೀ ಲಕ್ಷ್ಮೀನಾರಾಯಣನಿಗೆ ನಮಸ್ಕರಿಸಿ, ಈ ಸ್ನಾನ ನಮಗಲ್ಲ, ನಮಗೊಳಗಿರುವ ಲಕ್ಷ್ಮೀರಮಣನಿಗೆ ಅಭಿಷೇಕ ಎಂದು ಅನುಸಂಧಾನ ಮಾಡಿ, ಶಂಖಮುದ್ರೆಯಿಂದ ನೀರನ್ನು ಪ್ರೋಕ್ಷಿಸಿಕೊಂಡು (ಶಂಖದಲ್ಲಿ ಲಕ್ಷ್ಮಿಯ ಸಾನ್ನಿಧ್ಯವಿರುವುದರಿಂದ – ಶಂಖಮುದ್ರೆಯಿಂದ ಪ್ರೋಕ್ಷಿಸಿಕೊಳ್ಳಬೇಕು.
ಅಷ್ಠೇ ಅಲ್ಲ ಪರಮಾತ್ಮನಿಗೆ ಸ್ನಾನ ಮಾಡಿಸಲು ನಮಗೆ ಯೋಗ್ಯತೆ ಇಲ್ಲ, ಆದ್ದರಿಂದ ಅಲ್ಲಿ ಲಕ್ಷ್ಮಿದೇವಿಯನ್ನು ಅನುಸಂಧಾನ ಮಾಡಬೇಕು), ನಂತರ ಸ್ನಾನ ಮಾಡಬೇಕು.
(Source : Ma/sha/sam Sri S N Ramachandrachar, Rtd professor, Tantrasaragama)
I’m simply impressed by the clear instructions to take Magha snana & tthe conduct to keep our rivers clezaan. With the kind of pollutantsindusyries being let into Ganges, Yamuna & other majority of our tivers, we should. impart awareness prorammes for genrations to use go.?