Surya Grahana ಸೂರ್ಯ ಗ್ರಹಣ

   

click here for PDF file on     SURYAGRAHANA

solar-eclipse

*SURYA GRAHANA ON 25.10.2022*

 

*Grahana Phala for this Surya Grahana*

Shubha : Dhanu, Makara, Vrushaba, Simha,

Mishra  :Kanya, Kumbha, Mesha, Mithuna Ashubha :  Tula, Karka, Vruschika, Meena

Tula Rashi & Chitta Nakshatra, Swati Nakshatra have Vishesha Ashubha phala 

ಶುಭ ಫಲ –   ಧನು, ಮಕರ, ವೃಷಭ, ಸಿಂಹ,  ರಾಶಿ

ಮಿಶ್ರ ಫಲ –   ಕನ್ಯಾ,ಕುಂಭ, ಮೇಷ, ಮಿಥುನ ರಾಶಿ

ಅಶುಭ ಫಲ –  ತುಲಾ, ಕರ್ಕ, ವೃಶ್ಚಿಕ, ಮೀನ  ರಾಶಿ

ವಿಶೇಷ ಅಶುಭ ಫಲ – ತುಲಾ ರಾಶಿ, ಚಿತ್ತಾ ನಕ್ಷತ್ರ, ಸ್ವಾತಿ ನಕ್ಷತ್ರ  – ಅವರು ಹೆಚ್ಚಿನ ಜಪ, ಪಾರಾಯಣ ಮಾಡಬೇಕು 

 

*Grahana sparsha time for different places*

Bangalore   : 5.12 pm
Mysore.       : 5.13 pm
Kolar.           : 5.12 pm
Bellary.         : 5.04 pm
Belgaum.      : 5.00 pm
Chennai.       : 5.14 pm
Coimbatore.  : 5.18pm
Hyderabad    : 4.59 pm
Bagalkot.       : 5.00 pm
Gulbarga.     : 4.57 pm
Kurnool.       : 5.02 pm
Hindupur      : 5.09 pm
Chittoor.       : 5.13 pm
Tirupati.        : 5.11 pm
Mumbai.       : 4.48 pm
Pune.            : 4.51 pm

ಆಯಾ ಪ್ರದೇಶದ ಈ ಸಮಯದ ನಂತರ ಕೂಡಲೇ ಗ್ರಹಣಸ್ಪರ್ಶ ಸ್ನಾನ ಮಾಡುವುದು. ಗ್ರಹಣ ಮೋಕ್ಷ ನಂತರ ಅಂದರೆ 6.20ರ ನಂತರ ಸ್ನಾನ ಮಾಡುವುದು. ಆದರೆ ಪಲಾಹಾರ ಭೋಜನ ಇಲ್ಲ.

ಮಧ್ಯ ಕಾಲ : 05.47 PM

ಸೂರ್ಯಾಸ್ತ ಕಾಲ : 5.57 pm
( ಬೆಂಗಳೂರು )

ಮೋಕ್ಷ ಕಾಲ :6.20 pm
(ಸೂರ್ಯಾಸ್ತ ನಂತರ)

ಗ್ರಹಣದ ಒಟ್ಟು ಕಾಲ : 57 ನಿಮಿಷ

*ವೇಧಾರಂಭ* : 25-10-2022, ಮಂಗಳವಾರ ಸೂರ್ಯೋದಯದಿಂದಲೇ ವೇಧಾರಂಭವಾಗುತ್ತದೆ.

 

Grahana time :

grahana sparsha kaala – 5.12 pm
grahana moksha kaala – 6.20 pm

(Bangalore time)

(please check your local  Grahana Timings for Acharane.  It will vary depending upon sunrise timings at different places) 

 

*Don’t get panic by seeing Ashubha phala..         Do Harinama smarane during the period.  Instead of Ashubha phala,  you will get Adhika  punya*

 

They have to do special japa, parayana, suvarna, rajata daana.

 

ಶಕ್ತಿಯಿದ್ದವರು ಸುವರ್ಣ, ರಜತ ದಾನ ಮಾಡಿ. ಇಲ್ಲದವರು ಒಂದು ಬಟ್ಟಲಲ್ಲಿ ಅಥವಾ ದೊನ್ನೆಯಲ್ಲಿ ಹುರಳೀ ಯಥಾಶಕ್ತಿ ದಕ್ಷಿಣೆ ಸಹಿತ ದಾನ ಮಾಡಿ.

 

ಗ್ರಹಣ ಸಮಯದಲ್ಲಿ ಸಾಧ್ಯವಾದಷ್ಟೂ ಸಾಧನೆ ಮಾಡಿಕೊಳ್ಳಿ ಅಧಿಕ ಪುಣ್ಯ ಗಳಿಸಿ.

========================================

*Informative points on Surya Grahana*

 

ಈ ಪ್ರಶ್ನೆಗೆ ಉತ್ತರವೂ ಕೂಡ ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿ ಸಿಗುತ್ತೆ.

1. ಈ ಸಲದ ಸೂರ್ಯ ಗ್ರಹಣ ಯಾವ ತಿಥಿಯಂದು ಬರುತ್ತದೆ?

ಉತ್ತರ-  ಆಶ್ವಯುಜ ಅಮಾವಾಸ್ಯೆ

2. ಈ ಸಲದ ಗ್ರಹಣ ಯಾವ ದಿನಾಂಕ ಬರುತ್ತದೆ?

ಉತ್ತರ – 25.10.23  ಮಂಗಳವಾರ

3. ಈ ಸಲದ ಗ್ರಹಣ ಯಾವ ನಕ್ಷತ್ರದಲ್ಲಿ ಬರುತ್ತೆ?

ಉತ್ತರ –  ಚಿತ್ತಾ ನಕ್ಷತ್ರ, ತುಲಾ ರಾಶಿ

4. ಈ ಸಲದ ಗ್ರಹಣ ಕಾಲದಲ್ಲಿ ಯಾವ ಯಾವ ರಾಶಿಗಳಿಗೆ ಅಶುಭಫಲವಿದೆ?

ಉತ್ತರ – ಅಶುಭ ಫಲ – ತುಲಾ, ಕರ್ಕ, ವೃಶ್ಚಿಕ, ಮೀನ  ರಾಶಿ

5. ಈ ಸಲದ ಗ್ರಹಣ ಸಮಯ ಬೆಂಗಳೂರಿನಲ್ಲಿ ಯಾವ ಸಮಯದಲ್ಲಿರುತ್ತದೆ?

ಉತ್ತರ – ಬೆಂಗಳೂರಿನಲ್ಲಿ ಸಂಜೆ 5.12pm to 6.20pm

6. ತರ್ಪಣಾಧಿಕಾರಿಗಳು ಯಾವ ಸಮಯದಲ್ಲಿ ತರ್ಪಣ ಕೊಡಬೇಕು?

ಉತ್ತರ – 5.47 pm

7. ಈ ಸಲದ ಗ್ರಹಣ ದೋಷ ಇರುವವರು ಯಾವ ದಾನ ಮಾಡಬೇಕು?

ಉತ್ತರ – ಹುರಳೀ ದಾನ

8. ಸೂರ್ಯಗ್ರಹಣದ ಮುಂಚಿನ ಎಷ್ಟು ಸಮಯದ ಮುಂಚೆ ವೇದಾರಂಭವಾಗುತ್ತೆ?

ಉತ್ತರ – ಗ್ರಹಣಾರಂಭಕ್ಕೆ 12 ಹನ್ನೆರಡು ಗಂಟೆ ಮುಂಚೆ

9. ಗ್ರಹಣ ಸಮಯದಲ್ಲಿ ಹಾಲು, ಮೊಸರು, ತರಕಾರಿ ಮುಂತಾದವುಗಳು ಹಾಳಾಗದಂತೆ ಅವುಗಳ ಮೇಲೆ ಏನನ್ನು ಹಾಕಬೇಕು?

 ಉತ್ತರ – ದರ್ಬೆ 

10. ಗ್ರಹಣ ಹಿಡಿಯುವ ದಿನ ಯಾವ ಯಾವ ಸಮಯದಲ್ಲಿ ಸ್ನಾನ ಮಾಡಬೇಕು?

ಉತ್ತರ – ಗ್ರಹಣ ಸ್ಪರ್ಶ ಸಮಯದಲ್ಲಿ ಮತ್ತು ಗ್ರಹಣ ಮೋಕ್ಷ ನಂತರ (ಆಯಾ ಪ್ರದೇಶದ ಸಮಯ ಅಂತರ್ಜಾಲ ಮೂಲಕ ತಿಳಿದುಕೊಳ್ಳಿ)

11. ತರ್ಪಣಾಧಿಕಾರಿಗಳು ಯಾವ ನೀರಿನಿಂದ ತರ್ಪಣ ನೀಡಬೇಕು?

ಉತ್ತರ – ನಿರ್ಮಾಲ್ಯತೀರ್ಥದಿಂದ .  ನಿರ್ಮಾಲ್ಯ ತೀರ್ಥ ಇಲ್ಲದ ಪಕ್ಷದಲ್ಲಿ ಶುದ್ಧವಾದ ನೀರು ಉಪಯೋಗಿಸಿ.  ಸಂಕಲ್ಪಕ್ಕೆ ಉಪಯೋಗಿಸಿದ ನೀರು ಅರ್ಘ್ಯ , ತರ್ಪಣ, ಪೂಜೆಗೆ ಉಪಯೋಗಿಸಬಾರದು. 

12. ಗ್ರಹಣದ ದಿನ ಯಾವಾಗ ಅಡುಗೆ ಮಾಡಬೇಕು?

ಉತ್ತರ – ಗ್ರಹಣ ಮೋಕ್ಷಾನಂತರ ಸ್ನಾನ ಮಾಡಿ ನಂತರ ತಯಾರಿಸಬೇಕು. ಆದರೆ ಈ ಸಲ ಗ್ರಹಣ ಮೋಕ್ಷಾನಂತರದಲ್ಲಿ ಸೂರ್ಯಾಸ್ತ ಆಗಿರುವುದರಿಂದ ಬರೀ ಸ್ನಾನ ಅಷ್ಟೇ. ಮಾರನೇ ದಿನ ಬೆಳಿಗ್ಗೆ ಸೂರ್ಯೋದಯ ನಂತರ ಸ್ನಾನ ಮಾಡಿ ಪೂಜೆ ಮಾಡಿ ಆಹಾರ ಸ್ವೀಕರಿಸಬಹುದು.

13. ಬೆಳಿಗ್ಗೆ ಅಡಿಗೆ ಮಾಡಿ ಮುಚ್ಚಿಟ್ಟು ದರ್ಬೆ ಹಾಕಿಟ್ಟು ಗ್ರಹಣ ಮೋಕ್ಷ ನಂತರ  ಸ್ನಾನ ಮಾಡಿ ಊಟ ಮಾಡಬಹುದಾ?

ಉತ್ತರ : ಬೇಡ.  ಹಾಲು, ಮೊಹರು, ನೀರು ಮುಂತಾದ ಪದಾರ್ಥಗಳನ್ನು ಮಾತ್ರ ದರ್ಬೆ ಹಾಕಿಟ್ಟು ನಂತರ ಉಪಯೋಗಿಸಬಹುದು.

14. ತರಕಾರಿ ಗ್ರಹಣ ಮುನ್ನ ತಂದಿಟ್ಟು ಹೆಚ್ಚಿಕೊಂಡಿರಬಹುದಾ?

ಉತ್ತರ : ಆಗಬಹುದು

15. ಗ್ರಹಣದ ದಿನ ಹಸ್ತೋದಕ ಯಾವಾಗ ಕೊಡಬೇಕು?

ಉತ್ತರ – ಗ್ರಹಣ ದಿನ ಹಸ್ತೋದಕ ಇಲ್ಲ ಏಕೆಂದರೆ ಯತಿಗಳು ಗ್ರಹಣ ದಿನ ಉಪವಾಸವಿರುತ್ತಾರೆ.

16. ಸೂತಕ ಇದ್ದವರು ಮತ್ತು ರಜಸ್ವಲೆಯಾದವರು ಸ್ನಾನ ಮಾಡಬಹುದಾ ಬೇಡವಾ?

ಉತ್ತರ – ಮಾಡಬೇಕು

17. ಈ ಸಲದ ಆಶ್ವಯುಜ ಅಮಾವಾಸ್ಯೆ ಶ್ರಾದ್ದವಿದ್ದವರು ಎಂದು ಮಾಡಬೇಕು?

ಉತ್ತರ – ಈ ಸಲದ ಅಮಾವಾಸ್ಯೆ ಶ್ರಾದ್ಧವಿರುವವರು 26.10.22ರಂದು ಸೂರ್ಯೋದಯ ನಂತರ ಮಾಡಬೇಕು. 

18 ಸೂರ್ಯಗ್ರಹಣದ ಸೂರ್ಯನ ನೇರ ನೋಡಬಹುದಾ?

ಉತ್ತರ – ನೇರ ನೋಡಬಾರದು 

19. ಈ ಗ್ರಹಣದ ಸಂದರ್ಭದಲ್ಲಿ ಯಾವ ಯಾವ ಸ್ತೋತ್ರ ಪಾರಾಯಣ ಮಾಡಬಹುದು?

ಉತ್ತರ – ವಿಷ್ಣು ಸಹಸ್ರನಾಮ, ವಾಯು ಸ್ತುತಿ, ರಾಯರ ಸ್ತೋತ್ರ ಗಾಯತ್ರಿ ಜಪ, ವೇದ ಪಾರಾಯಣ,  

ಹೆಂಗಸರು ಕೇಶವನಾಮ, ಮಧ್ವನಾಮ, ಲಕ್ಷ್ಮೀ ಶೋಭಾನೆ, ಇತ್ಯಾದಿ.

20. ಹೆಂಗಸರು ಗಾಯತ್ರಿ ಜಪ ಮಾಡಬಹುದಾ?

ಉತ್ತರ – ಮಾಡಬಾರದು.  ಹೆಂಗಸರು ಗಾಯತ್ರಿ ಜಪಕ್ಕೆ ಯಾವಾಗಲೂ ಅನರ್ಹರು.

21. ಗ್ರಹಣ ಸಮಯದಲ್ಲಿ ಏನೇನು ಮಾಡಬಾರದು?

ಉತ್ತರ – ನಿದ್ದೆ, ಊಟ, ತಿಂಡಿ, ಮಲಮೂತ್ರ ವಿಸರ್ಜನೆ , ಮೈಥುನ ನಿಷಿದ್ಧ.     ಅದರಿಂದ ಅನಾರೋಗ್ಯವಾಗುತ್ತೆ.   ಈ ಸಂದರ್ಭದಲ್ಲಿ ಗರ್ಭ ಧರಿಸಿದರೆ ಆ ಮಗುವಿಗೆ ಅಂಗವಿಕಲತೆಯಾಗುವ ಸಂದರ್ಭ ಬರಬಹುದು.

22.  ಎಷ್ಟು ಗಂಟೆಯವರೆಗೆ ಊಟ ಮಾಡಬಹುದು.

ಉತ್ತರ – ಈದಿನ ಯಾವುದೇ ಆಹಾರ ಸ್ವೀಕರಿಸುವಂತಿಲ್ಲ.  ಅಶಕ್ತರು, ಬಸುರಿ,ಬಾಣಂತಿಯರು, ಮತ್ತು ಎಂಟು ವರ್ಷದ ಒಳಗಿನ ಮಕ್ಕಳು  25.10.22 ಸೂರ್ಯ ಗ್ರಹಣದ ಮೂರು ಗಂಟೆ ಮುನ್ನ  ಮಾಡಬಹುದು.    

23. ಯಾರು ಅಶಕ್ತರು ?

ಉತ್ತರ – ಬಸುರಿ, ಬಾಣಂತಿ, ೮೦ ವರ್ಷ ದಾಟಿದವರು, ೮ ವರ್ಷದ ಒಳಗಿನ ಮಕ್ಕಳು, ಮತ್ತು ಕಾಯಿಲೆಯಿಂದ ಅಸ್ವಸ್ಥರಾದವರು

24  ಗ್ರಹಣಾನಂತರ  ಪೂಜೆಗೆ ಹಿಂದಿನ ದಿನ ಒಣಹಾಕಿದ್ದ ಬಟ್ಟೆ ಉಡಬಹುದಾ?

ಉತ್ತರ – ಇಲ್ಲ.  ಗ್ರಹಣಾನಂತರ ಪೂಜೆಗೆ ಹಿಂದಿನ ದಿನ ಹಾಕಿದ್ದ ಬಟ್ಟೆ ಉಡುವಂತಿಲ್ಲ. ನೀರೂ ಕೂಡ ಉಪಯೋಗಿಸುವಂತಿಲ್ಲ. ಸ್ನಾನ ಮಾಡಿ ಮತ್ತೆ ಬಟ್ಟೆಯ ಚೆನ್ನಾಗಿ ಹಿಂಡಿ ಏಳು ಸಲ ಜಾಡಿಸಿ ಉಪಯೋಗಿಸಿ.   

25.  ರಜಸ್ವಲೆಯಾದವರು ಗ್ರಹಣ ಸಮಯದಲ್ಲಿ ಸ್ನಾನ ಮಾಡುವ ವಿಧಾನವೇನು?

ಉತ್ತರ – ಅವರು ನದೀ, ಬಾವಿಯಲ್ಲಿ ಮಾಡುವಂತಿಲ್ಲ.  ಬೇರೆಯವರು ತುಂಬಿಸಿಟ್ಟಿದ್ದ ನೀರಿನಲ್ಲಿ ಸ್ನಾನಗೈದು ದೇವರ ಸ್ಮರಣೆ ಮಾಡಬೇಕು.  ಬೇರಾರನ್ನೂ ಮುಟ್ಟುವಂತಿಲ್ಲ.

26.  ಜಾತಾಶೌಚ ಮತ್ತು ಮೃತಾಶೌಚ ಇರುವವರು ಹೇಗೆ ಆಚರಿಸಬೇಕು?

ಉತ್ತರ – ಅವರೂ ಸ್ನಾನ ಮಾಡಬೇಕು.  ಬಾವಿ, ನದೀ, ಸರೋವರದಲ್ಲಿ ಬೇಡ.  ಮನೆಯಲ್ಲಿ ಮಾಡಿ.  ಮೃತಾಶೌಚವಿರುವವರು ಬೇರೆಯವರನ್ನು ಮುಟ್ಟುವಂತಿಲ್ಲ.  ತಮ್ಮಷ್ಟಕ್ಕೇ ಶುದ್ಧಿಯಾಗಿ ಹರಿಸ್ಮರಣೆ ಮಾಡಿ.  

ದಾನಧರ್ಮ ಮಾಡುವಂತಿಲ್ಲ ಸ್ವೀಕರಿಸುವಂತಿಲ್ಲ.  ಅವರು ಬೇರೆಯವರಿಗೆ ನಮಿಸುವಂತಿಲ್ಲ.  ಬೇರೆಯವರೂ ಅಶೌಚವಿರುವವರಿಗೆ (ಯಾವ ಸಂದರ್ಭದಲ್ಲೂ)  ನಮಿಸುವಂತಿಲ್ಲ.

27.  ಗ್ರಹಣ ನಿಮಿತ್ತ ದಾನ ಯಾವಾಗ ಕೊಡಬೇಕು?

ಉತ್ತರ – ಗ್ರಹಣ ಮಧ್ಯಕಾಲದಲ್ಲಿ ಕೊಡತಕ್ಕದ್ದು. ಅಕಸ್ಮಾತ್ ಆ ಸಮಯದಲ್ಲಿ ಕೊಡಲಾಗದಿದ್ದರೆ ಸಂಕಲ್ಪ ಮಾಡಿ ತೆಗೆದಿಟ್ಟು ನಂತರ ಕೊಡಬಹುದು

28. ತರ್ಪಣಾಧಿಕಾರಿಗಳು ಅಂದರೆ ಯಾರು ?

ಉತ್ತರ – ತಂದೆ ಇಲ್ಲದವರು.  ತಂದೆ ಸತ್ತು ಒಂದು ವರ್ಷ ಆಗಿದ್ರೆ ಮಾತ್ರ.  (ತಾಯಿ ಸತ್ತಿದ್ದು ತಂದೆ ಇದ್ದರೆ ತರ್ಪಣ ಇಲ್ಲ.)

29. ಗ್ರಹಣ ಸಮಯದಲ್ಲಿ ದೇವರ ಪೂಜೆ ಮಾಡಬಹುದೇ?

ಉತ್ತರ ; ಗ್ರಹಣ ಸಮಯದಲ್ಲಿ ಸ್ನಾನ ಮಾಡಿ, ಗೋಪೀಚಂದನ ಹಚ್ಚಿ, ನಿರ್ಮಾಲ್ಯ ವಿಸರ್ಜನೆ ಮಾಡಿ, ಜಪ, ಪಾರಾಯಣ, ಮಾಡಿ.  ಪೂಜೆ ಗ್ರಹಣ ಮೋಕ್ಷ ನಂತರವೇ  ಮಾಡಬೇಕು.  ಆದರೆ ಈ ಸಲ ಪೂಜೆ ಇಲ್ಲ.  ಮಾರನೇ ದಿನ ಬೆಳಿಗ್ಗೆ ಸೂರ್ಯೋದಯ ನಂತರ ಸ್ನಾನ ಮಾಡಿ ಪೂಜಿಸಬೇಕು.

30. ಗ್ರಹಣ ಸಮಯದಲ್ಲಿ ಧರಿಸಿದ ವಸ್ತ್ರ ಸ್ನಾನಾನಂತರ ಧರಿಸಬಹುದೇ?

ಉತ್ತರ : ಅವುಗಳನ್ನು ನೆನೆಸಬೇಕು.  ಬೇರೆ ವಸ್ತುಗಳನ್ನು ಧರಿಸಿ..

31. ಗ್ರಹಣ ಸಮಯದಲ್ಲಿ ಕೆಲವರು ಆಫೀಸಿನಲ್ಲಿ ಇರಲೇಬೇಕಾಗತ್ತೆ. ಅಥವಾ ಪ್ರಯಾಣದಲ್ಲಿರಬೇಕಾಗತ್ತೆ.  ಆ ಸಮಯದಲ್ಲಿ ಸ್ನಾನಕ್ಕೆ ಅವಕಾಶವಿರದಾಗ ಏನು ಮಾಡಬೇಕು?

ಉತ್ತರ : ಸಾಧ್ಯವಾದಷ್ಟೂ ಪ್ರಯತ್ನಿಸಿ.  ಅಸಾಧ್ಯವಿದ್ದಲ್ಲಿ, ಕನಿಷ್ಠ ಮಾನಸಿಕವಾಗಿ ಸ್ನಾನ ಮಾಡಿ, ಮನಸ್ಸಿನಲ್ಲೇ ಎಷ್ಟು ಸಾಧ್ಯವೋ ಅಷ್ಟು ಹರಿಧ್ಯಾನ ಮಾಡಿ. ಆಹಾರ ಸೇವಿಸದಿರಿ .

 

32 ಗ್ರಹಣ ಸಮಯದಲ್ಲಿ ಧರಿಸುವ ಧಾವಳಿ ನೆನೆಸಬಹುದೇ?

ಉತ್ತರ – ದಾವಳಿ ನೆನೆಸಿದರೆ ಮತ್ತೆ ಮಡಿಗೆ ಉಪಯೋಗಕ್ಕೆ ಬರಲ್ಲ.

33 ಗ್ರಹಣ ಸಮಯದಲ್ಲಿ ಭೋಜನ ಮಾಡಿದರೆ ಏನೂ ಆಗಲ್ಲ ಅದೆಲ್ಲ ಮೂಡನಂಬಿಕೆ ಎನ್ನುತ್ತಾರಲ್ಲ ?

ಉತ್ತರ : ಗ್ರಹಣ ಸಮಯದಲ್ಲಿ ಆಹಾರದ ಮೇಲೆ ಪರಿಣಾಮ ಬೀಳಲಿರುವ ಕಿರಣಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅದಕ್ಕೇ ಭುಂಜಿಸಬಾರದು

34 ಈ ಸಲ ಮಾರನೇ ದಿನ ಬಲಿಪಾಡ್ಯಮಿ ಇರುವುದರಿಂದ ಅವತ್ತು ಎಣ್ಣೆ ನೀರು ಹಾಕಿಕೊಳ್ಳಬಹುದಾ ?

ಉತ್ತರ: ಹಾಕಿಕೊಳ್ಳಬಹುದು

 

35. ಗ್ರಹಣ ಕಾಲದಲ್ಲೇ ಸಂಧ್ಯಾವಂದನೆ ಮಾಡಬಹುದಾ ?

*ಉತ್ತರ* – ಮಾಡಬಹುದು

ಒಟ್ಟಿನಲ್ಲಿ ಗ್ರಹಣವೆಂದು ಹೆದರಿಕೆ ಬೇಡ.  ಇದು ನಿಮ್ಮ ಹೆಚ್ಚಿನ ಸಾಧನೆಗೆ, ಪುಣ್ಯಪ್ರಾಪ್ತಿಗೆ ಸಹಾಯಕಾರಿ

 

ಸೂರ್ಯ ಗ್ರಹಣ ಸ್ನಾನ ಸಂಕಲ್ಪ :

ಆಚಮನ, ಕೇಶವಾಯ ಸ್ವಾಹಾ, ನಾರಾಯಣಾಯ ಸ್ವಾಹಾ;

ಮಾಧವಾಯ ಸ್ವಾಹಾ, ಗೋವಿಂದಾಯ ನಮ: ,……….ಹರಯೇ ನಮ:| ಓಂ ಶ್ರೀಕೃಷ್ಣಾಯ ನಮ: |

ಪ್ರಣವಸ್ಯ ಪರಬ್ರಹ್ಮ ಋಷಿ, ಪರಮಾತ್ಮಾ ದೇವತಾ, ………

ಶ್ರೀ …….  ನಾಮ ಸಂವತ್ಸರೇ, …. ಆಯನೇ, ….. ಋತೌ. ,   ಕೃಷ್ಣ ಪಕ್ಷೇ, ಅಮಾವಾಸ್ಯಾಂ  ………ವಾಸರೇ, …ನಕ್ಷತ್ರ, ,….  ಯೋಗ, …….  ಕರಣ,  ಏವಂಗುಣ ವಿಶೇಷಣ ವಿಶಿಷ್ಟಾಯಾಂ,  ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ (ಮನೆದೇವರು),ಪ್ರೇರಣಯಾ,  ……. ಪ್ರೀತ್ಯರ್ಥಂ  ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೀತ್ಯರ್ಥಂ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, _______ಸನ್ನಿಧೌ, (ಕ್ಷೇತ್ರದೈವ), ಏವಂಗುಣ.. ಸೂರ್ಯಗ್ರಹಣ  ನಿಮಿತ್ತ  ಸೂರ್ಯ ಗ್ರಹ ಪೀಡಾ ಪರಿಹಾರಾರ್ಥಂ …ಮಾಸ ನಿಯಾಮಕ ಶ್ರೀ  .….  ಶ್ರೀ ಲಕ್ಷ್ಮೀ ನರಸಿಂಹ/ ವೇಂಕಟೇಶ ಪ್ರೀತ್ಯರ್ಥಂ ಸ್ನಾನಂ ಕರಿಷ್ಯೇ.

 

*ರಾಹು ಕೇತು ಯಾರು* ?

ಭಾರತೀಯ ಪುರಾಣಗಳಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣಗಳನ್ನು  ರಾಹು-ಕೇತುಗಳ *ಸಂಕ್ರಮಣವೆಂದು* ಹೇಳಲಾಗಿದೆ..  ಮೂಲತಃ: ರಾಹುಕೇತು *ಸ್ವರ್ಭಾನು* ಎಂಬ ದೈತ್ಯ.  ಸಮುದ್ರಮಥನ ವೇಳೆ ಬಂದ ಅಮೃತವನ್ನು ಮೋಹಿನಿ ರೂಪದಲ್ಲಿ ಶ್ರೀಹರಿಯು ಹಂಚುವಾಗ ದೇವತೆಗಳು ಒಂದು ಸಾಲು ಮತ್ತು ದೈತ್ಯರು ಒಂದು ಸಾಲಿನಲ್ಲಿ ಕುಳ್ಳಿರಿಸಿ ಕಣ್ಣು ಮುಚ್ಚಿಕೊಂಡು ಕೂಡುವಂತೆ ಹೇಳುತ್ತಾನೆ.   ರಾಕ್ಷಸರಿಗೆ ಅಮೃತ ಪಡೆಯಲು ಯೋಗ್ಯತೆ ಇಲ್ಲದ್ದರಿಂದ ವಿಷ್ಣು ಮೋಹಿನಿ ರೂಪ ತಾಳಿ  ದೇವತೆಗಳಿಗೆ ಮಾತ್ರ ಅಮೃತ ನೀಡುತ್ತಿರುತ್ತಾನೆ.   ದೇವತೆಗಳಿಗೆ ಅಮೃತ ನೀಡಿದರೆ ದೈತ್ಯರಿಗೆ ಬರೀ ಗೆಜ್ಜೆ ಸಪ್ಪಳ ಕೇಳಿಸುತ್ತದೆ.  ವಿಷ್ಣುವಿನ ಮೋಹಿನಿ ರೂಪ ಮತ್ತು ಆತ ರಾಕ್ಷಸರಿಗೆ ಮಾಡುತ್ತಿರುವ ವಂಚನೆ ಸ್ವರ್ಭಾನುವಿಗೆ ಗೊತ್ತಾಗಿ ಅವನು ದೇವತೆಗಳ ಸಾಲಿಗೆ ಹೋಗಿ ಕುಳಿತು ಮೋಹಿನಿ ಕೈಯಿಂದ ಅಮೃತ ಪಡೆಯುತ್ತಾನೆ. ಇದನ್ನು ಸೂರ್ಯ ಮತ್ತು ಚಂದ್ರರು ನೋಡಿ ವಿಷ್ಣುವಿನ ಗಮನಕ್ಕೆ ತರುತ್ತಾರೆ. ಆಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸ್ವರ್ಭಾನುವಿನ ತಲೆ ಕಡಿಯುತ್ತಾನೆ.  ರುಂಡ ಮತ್ತು ಮುಂಡ ಬೇರ್ಪಡುತ್ತದೆ ಅಷ್ಟೇ. ರುಂಡವನ್ನ *ರಾಹು* ಎಂದೂ ಮುಂಡವನ್ನು *ಕೇತು” ಎಂದೂ ಕರೆಯಲಾಗುತ್ತದೆ. ಆದರೆ, ಅಷ್ಟರಲ್ಲೇ ಅವನು ಅಮೃತ ಪಾನ ಮಾಡಿರುತ್ತಾನೆ.  ಸ್ವರ್ಭಾನು ದೈತ್ಯನಾದರೂ ತನ್ನ ಬಾಯಿಗೆ ಅಮೃತ ಬೀಳಲೆಂದು ಶಿವನಲ್ಲಿ ತಪಗೈದಿರುತ್ತಾನೆ.  ಅದೇ ರೀತಿ ಇಲ್ಲಿ ಅವನ ಬಾಯಿಗೆ ಅಮೃತ ಬಿದ್ದಿರುತ್ತದೆ, ಆದರೆ ಕಂಠದಿಂದ ಕೆಳಗೆ ಬೀಳುವ ಮೊದಲೇ ಶಿರಚ್ಛೇದ ಆಗಿರುತ್ತದೆ.   ಅವನ ಬಾಯಿಯಲ್ಲಿ ಅಮೃತ ಬೀಳುವ ವರವೂ ಪೂರ್ಣವಾಯಿತು‌. ಅಮೃತ ಬಿದ್ದಿದ್ದರಿಂದ ಮುಖದ ಭಾಗ ರಾಹುವಾಗಿಯೂ, ಕಂಠದ ಕೆಳಗಿನ ಭಾಗವು ಕೇತುವಾಗಿಯೂ  ನವಗ್ರಹಗಳಲ್ಲಿ ಸೇರಿ  ಪೂಜೆಗೊಳ್ಳುತ್ತಾರೆ.    ಸೂರ್ಯ ಚಂದ್ರರು ವಿಷ್ಣುವಿಗೆ ಹೇಳಿ ತಮ್ಮನ್ನು ಶಿಕ್ಷಿಸಿದ್ದರಿಂದ  ಅವರು  ಸೂರ್ಯ ಚಂದ್ರರನ್ನು ಆಗಾಗ್ಗೆ ಕಾಡುತ್ತಾರೆ. . ಅದೇ *ಸೂರ್ಯಗ್ರಹಣ* ಮತ್ತು *ಚಂದ್ರಗ್ರಹಣ* ಎಂದು ಪುರಾಣ ಕಥೆಗಳು ಹೇಳುತ್ತವೆ.  ವೈಜ್ಞಾನಿಕವಾಗಿ ನೋಡಿದಾಗ ಭೂಮಿ ಮತ್ತು ಸೂರ್ಯನ ಮಧ್ಯೆ ಚಂದ್ರ ಬಂದಾಗ ಸೂರ್ಯ ಮರೆಯಾದರೆ ಅದು ಸೂರ್ಯಗ್ರಹಣವೆನಿಸುತ್ತದೆ.

ವಾಸ್ತವವಾಗಿ ವೈಜ್ಞಾನಿಕವಾಗಿ ಕೂಡ‌ ನಭೋಮಂಡಲದಲ್ಲಿ ಸೂರ್ಯಗ್ರಹದ ಸುತ್ತ ಭೂಮಿ ಸುತ್ತುತ್ತಿದೆ, ಭೂಮಿಯ ಸುತ್ತ ಚಂದ್ರಗ್ರಹ ಸುತ್ತುತ್ತಿದೆ.  ಈ ಅಂಡಾಕಾರದ ಪರಿಕ್ರಮದ ಮಾರ್ಗವನ್ನು ಮಧ್ಯದಿಂದ ವಿಭಜಿಸುವ ಒಂದು ಸರಳರೇಖೆಯುಂಟು… ಆ ಸರಳ ರೇಖೆಯ ಎರಡು ತುದಿಗಳೇ ರಾಹು ಮತ್ತು ಕೇತು ಎಂಬ ಎರಡು ಬಿಂದುಗಳು…  ವಿಷ್ಣು ಸ್ವರ್ಭಾನು ಎಂಬ ಅಸುರನನ್ನು ಕೊಂದಾಗ, ರುಂಡವಿರುವ ಭಾಗ ಒಂದು ಬಿಂದು, ಮುಂಡವಿರುವ ಭಾಗ ಇನ್ನೊಂದು ಬಿಂದುವಾಗಿದೆ

ಈ ಸರಳ ರೇಖೆಯನ್ನೇ ಮಧ್ಯಂತರ ರೇಖೆಯಾಗಿರಿಸಿಕೊಂಡು (Equatorial Point) ಎಂಬಂತೆ ನವಗ್ರಹಗಳು ಸೂರ್ಯನ ಸುತ್ತಲೂ ಸುತ್ತುವುದರ ಮತ್ತು ನಕ್ಷತ್ರ ಹಾಗೂ ರಾಶಿಗಳ ವಿಭಜನೆಗೆ ಈ ರೇಖೆ ಸಂಕೇತವಾಗಿದೆ.   .ರಾಹು – ಕೇತುಗಳು ಸ್ವತಃ ಗ್ರಹಗಳಲ್ಲದಿದ್ದರೂ ಅವುಗಳ ಸಮಾನ ರೇಖೆಯಲ್ಲಿ ಒಮ್ಮೊಮ್ಮೆ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋದಾಗ “ಸೂರ್ಯಗ್ರಹಣ”ವಾಗುತ್ತದೆ.. ಅದು ಅಮಾವಾಸ್ಯೆ ದಿನದಂದು ನಡೆಯುತ್ತದೆ.   ಅಥವಾ ಚಂದ್ರ ತಾನು ಭೂಮಿಯ ಸುತ್ತ ಸುತ್ತುವಾಗ ಸೂರ್ಯ ಮತ್ತು ಭೂಮಿಯೊಟ್ಟಿಗೆ ಸಮಾನಾಂತರ ರೇಖೆಯಲ್ಲಿ ಚಲಿಸುವಾಗ ಭೂಮಿಯ ಇನ್ನೊಂದು ಭಾಗದಲ್ಲಿ ಅಂದರೆ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುವ ಸಮಾನಾಂತರ ರೇಖೆಯಲ್ಲಿ ಹುಣ್ಣಿಮೆಯಂದು  “ಚಂದ್ರಗ್ರಹಣ”ವಾಗುತ್ತದೆ .  ಇದನ್ನೆ ಗ್ಲಹಣಗಳ ಸಂದರ್ಭದಲ್ಲಿ ಸೂರ್ಯ ಅಥವಾ ಚಂದ್ರರನ್ನು  ರಾಹು ಕೇತುಗಳು ನುಂಗುತ್ತಾರೆ ಎನ್ನುತ್ತಾರೆ.

 

*Who is Rahu & Who is Kethu* ?

During  Samudra Mathana,  when Mohini roopi Srihari was distributing the amrutha, there were two rows, one for Daithyas and the other for gods. One daithya by name Swarbhanu,  came in a disguise and sat in the god’s row.   Srihari gave him also Amrutha.  At that time Sun and Moon,  {ಸೂರ್ಯಚಂದ್ರರು} on seeing that Swarbhanu has come in god’s row and taking amrutha, complained to Mohini.   Srihari through his Sudarshana removed the head of that daithya.  Srihari knowingly only distributed the amrutha to the daithya who has entered the god’s row.    Actually that daithya had done penance asking for Amrutha to be falling in his mouth.  As such, Srihari had allowed Amrutha to be swallowed upto its mouth, but it didn’t enter beyond mouth, Srihari removed his head.  As such, the head of the daithya was fixed to a snake’s body to become “Rahu”, and the other portion without head is called as “Kethu”.

=========================================

ಯದಿಚಂದ್ರೋಪರಾಗ: ಸ್ಯಾತ್ ದೈವಾತ್ತಸ್ಯಾಂ ತಿಥೌ ಧರೇ |
ಗ್ರಹಣಾತ್ ಪೂರ್ವಮೇವ ತ್ರೀನ್ ಯಾಮಾನ್ ಹಿತ್ವಾ ತು ಭೋಜಯೇತ್ ||
यदिचंद्रोपराग: स्यात् दैवात्तस्यां तिथौ धरे ।
ग्रहणात् पूर्वमेव त्रीन् यामान् हित्वा तु भोजयेत् ॥

==========================================

*Bhojana Vichara* –

We can take food upto 12 hours before Eclipse.

For Children, patients, aged, and pregnants – upto 3 hours before Eclipse

  • Shubha Phala – this Grahana may give you some good result for you

  • Mishra phala –  As the name indicates it will be both Shubha + Ashubha

  • Ashubha Phala –  This Grahana may harm your progress.  But just hearing this don’t get panic.

There are so many suggestions for overcoming the Ashubha Phala which you can do –  Even if your Rashi is not having Ashubha Phala,  please  do all that is mentioned below to get maximum punya phala during Grahana.

 

“Grahana Period” is parva kaala – Whatever you are doing during Grahana –   the punya is more.

=========================================

*What is Vedaramba*? –

This is a period after start of  which period, we must not take eat/drink any thing. This will be 9 hours prior to Chandra Grahana and 12 hours before Surya Grahana, respectively.

 

*Why we are keeping Darba on all the items during Grahana* ? –

Darba is born from the body of Varaha devaru.   In Darba, there is sannidhana of Srihari, Brahma and Rudradevaru.  So, Darba is always pure.    During Grahana, all these items like milk, curds, vegetables, which are being kept will loose their power and becomes unusable.  But with the use of Darba being kept on these items, their shuddatwa will be maintained and one can use the same after Grahana also.

==========================================

*Stotra to be chanted for Surya Grahana*  –

 

ಯೋಸೌ ವಜ್ರಧರೋ ದೇವ: ಆದಿತ್ಯಾನಾಂ ಪ್ರಭುರ್ಮತ: |
ಸಹಸ್ರನಯನ: ಶಕ್ರೋ ಗ್ರಹಪೀಡಾಂ ವ್ಯಪೋಹತು |
ಮುಖಂ ಯ: ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿ: |
ಸೂರ್ಯ/ ಪರಾಗಸಂಭೂತಾಂ ಅಗ್ನೇ: ಪೀಡಾಂ ವ್ಯಪೋಹತು|
ಯ: ಕರ್ಮಸಾಕ್ಷೀ ಲೋಕಾನಾಂ ಧರ್ಮೋ ಮಹಿಷವಾಹನ: |
ಯಮ: ಸೂರ್ಯಪರಾಗ ಸಂಭೂತಾಂ ಗ್ರಹಪೀಡಾಂ ವ್ಯಪೋಹತು |
ರಕ್ಷೋಗಣಾಧಿಪ: ಸಾಕ್ಷಾತ್ ನೀಲಾಂಜನಸಮಪ್ರಭ: |
ಖಡ್ಗಹಸ್ತೋಽತಿಭೀಮಶ್ಚ ಗ್ರಹಪೀಡಾಂ ವ್ಯಪೋಹತು ||
ನಾಗಪಾಶಧರೋ ದೇವ: ಸದಾ ಮಕರವಾಹನ: |
ಸ ಜಲಾಧಿಪತಿರ್ದೇವ: ಗ್ರಹಪೀಡಾಂ ವ್ಯಪೋಹತು ||
ಪ್ರಾಣರೂಪೋ ಹಿ ಲೋಕಾನಾಂ ಸದಾ ಕೃಷ್ಣಮೃಗಪ್ರಿಯ: |
ವಾಯುಶ್ಚ  ಸೂರ್ಯ ಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು ||
ಯೋಽಸೌ ನಿಧಿಪತಿರ್ದೇವ: ಖಡ್ಗಶೂಲಗದಾಧರ: |
ಸೂರ್ಯ ಪರಾಗಕಲುಷಂ ಧನದೋಽತ್ರ ವ್ಯಪೋಹತು |
ಯೋಽಸಾವಿಂದುಧರೋ ದೇವ: ಪಿನಾಕೀ ವೃಷವಾಹನ: |
ಸೂರ್ಯ ಪರಾಗಪಾಪಾನಿ ವಿನಾಶಯತು ಶಂಕರ:||
ತ್ರೈಲೋಕ್ಯೇ ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|
ಬ್ರಹ್ಮವಿಷ್ಣುರ್ಕರುದ್ರಾಶ್ಚ ದಹಂತು ಮಮ ಪಾತಕಂ ||
योसौ वज्रधरो देव: आदित्यानां प्रभुर्मत: ।
सहस्रनयन: शक्रो ग्रहपीडां व्यपोहतु ।
मुखं य: सर्वदेवानां सप्तार्चिरमितद्युति: ।
सूर्य परागसंभूतां अग्ने: पीडां व्यपोहतु।
य: कर्मसाक्षी लोकानां धर्मो महिषवाहन: ।
यमश्चंद्रोपरागोत्थां ग्रहपीडां व्यपोहतु ।
रक्षोगणाधिप: साक्षात् नीलांजनसमप्रभ: ।
खड्गहस्तोऽतिभीमश्च ग्रहपीडां व्यपोहतु ॥
नागपाशधरो देव: सदा मकरवाहन: ।
स जलाधिपतिर्देव: ग्रहपीडां व्यपोहतु ॥
प्राणरूपो हि लोकानां सदा कृष्णमृगप्रिय: ।
वायुश्चंद्रोपरागोत्थां ग्रहपीडां व्यपोहतु ॥
योऽसौ निधिपतिर्देव: खड्गशूलगदाधर: ।
सूर्य परागकलुषं धनदोऽत्र व्यपोहतु ।
योऽसाविंदुधरो देव: पिनाकी वृषवाहन: ।
सूर्य परागपापानि स नाशयतु शंकर:॥
त्रैलोक्ये यानि भूतानि स्थावराणि चराणि च।
ब्रह्मविष्णुर्करुद्राश्च दहंतु मम पातकं ॥

*ಗ್ರಹಣಕಾಲದಲ್ಲಿ ತರ್ಪಣಾಧಿಕಾರಿಗಳು ತರ್ಪಣ ಕೊಡಬೇಕಾದ ಪದ್ದತಿ* :

ಯಾವ ಸಮಯದಲ್ಲಿ ತರ್ಪಣ ಕೊಡಬೇಕು?

ಉತ್ತರ – 5.47 pm

*ದ್ವಾದಶ ಪಿತೃಗಳಿಗೂ ಕೊಡತಕ್ಕದ್ದು*

೧. ಆಚಮನ
೨. ಪವಿತ್ರ ಧಾರಣ (ಪವಿತ್ರ ಮಾಡಲು ಬರದಿದ್ದರೆ ಪವಿತ್ರದ ಉಂಗುರವಿದ್ದರೂ ಪರವಾಗಿಲ್ಲ)
೩. ಪುನರಾಚಮನ
೪. ಪ್ರಾಣಾಯಾಮ

*ನಂತರ ಸಂಕಲ್ಪ* —
ಶ್ರೀ ಗೋವಿಂದ ಗೋವಿಂದ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ, ಆದ್ಯ ಬ್ರಹ್ಮಣ:, ದ್ವಿತೀಯ ಪರಾರ್ಧೇ, ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ, ಜಂಭೋದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ (ಪರಶುರಾಮಕ್ಷೇತ್ರೇ), ಶ್ರೀ ಪರಮವೈಷ್ಣವ ಸನ್ನಿಧೌ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ನಾಮ ಸಂವತ್ಸರೇ, ದಕ್ಷಿಣಾಯನೇ, ಶರದೃತೌ, ಆಶ್ವಯುಜ ಮಾಸೇ, ಸ್ವಾತಿ ನಕ್ಷತ್ರೇ, ವೈಧೃತಿ ಯೋಗೇ ಶಕುನಿ ಕರಣೇ, ಭೌಮವಾಸರ ಯುಕ್ತಾಯಂ, ಪಿತ್ರಾದಿ ಸಮಸ್ತ ಪಿತ್ರೂಣಾಂ ಅಂತರ್ಗತ, ಮನುನಾಮಕ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೇರಣಯಾ, ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೀತ್ಯರ್ಥಂ, ವಿಷ್ಣು ನಕ್ಷತ್ರ, ವಿಷ್ಣುಯೋಗ, ವಿಷ್ಣು ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥೌ (ಪ್ರಾಚೀನಾವೀತಿ), (ಜನಿವಾರವನ್ನು ಎಡಕ್ಕೆ ಹಾಕಿಕೊಂಡು) ಸದ್ಯ: ತಿಲತರ್ಪಣಂ ಕರಿಷ್ಯೇ –

೧. ಪಿತ್ರು, ಪಿತಾಮಹ, ಪ್ರಪಿತಾಮಹ
೨. ಮಾತ್ರು, ಪಿತಾಮಹಿ, ಪ್ರಪಿತಾಮಹಿ
೩.ಮಾತಾಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ
೪. ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ
ಈ ಮೇಲ್ಕಂಡ 12 ಜನಕ್ಕೂ ಅಲ್ಲದೆ ಸರ್ವಪಿತೃಗಳಿಗೂ ತರ್ಪಣ ಕೊಡಬಹುದು. (ಅಕಸ್ಮಾತ್ ಇವರುಗಳಲ್ಲಿ ಯಾರಾದರೂ ಬದುಕಿದ್ದರೆ ಅವರನ್ನು ಬಿಟ್ಟು).
(ಎಳ್ಳಿನಿಂದ ತರ್ಪಣ ಕೊಡಬೇಕು)

ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ತರ್ಪಣ ಕ್ರಿಯಾದಿಷು| ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ |
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನ |
ಯತ್ಕೃತಂ ತು ಮಯಾ ದೇವ ಪರಿಪೂರ್ಣಂ ತದಸ್ತು ಮೇ ||

ಅನೇನ ತಿಲತರ್ಪಣೇನ ದ್ವಾದಶಪಿತೃಣಾಂ ಅಂತರ್ಗತ / ಪಿತ್ರಾದಿ ಸಮಸ್ತ ಪಿತೃಂಣಾಂತರ್ಗತ ಮನು ನಾಮಕ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ದನ ವಾಸುದೇವ: ಪ್ರೀಯತಾಂ ಪ್ರೀತೋ ವರದೋ ಭವತು||

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||

ತರ್ಪಣಕಾಲೇ ಮಧ್ಯೇ ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಜಪಮಹಂ ಕರಿಷ್ಯೆ ||
ಓಂ ಅಚ್ಯುತಾಯ ನಮಃ ||
ಓಂ ಅನಂತಾಯ ನಮಃ ||
ಓಂ ಗೋವಿಂದಾಯ ನಮಃ ||

ಬೆಳಿಗ್ಯೆ ಎಂದಿನಂತೆ ಮುಂಜಾನೆಯೇ ಎದ್ದು, ಸ್ನಾನ, ಆಹ್ನೀಕಾದಿಗಳನ್ನು ಮಾಡಿ, ನಿರ್ಮಾಲ್ಯ ವಿಸರ್ಜಿಸಿ, ಉಪವಾಸವಿದ್ದು, ಗ್ರಹಣ ಮಧ್ಯಕಾಲದಲ್ಲಿ ತರ್ಪಣಕೊಟ್ಟರೆ ಶ್ರೇಷ್ಠ.

🌹🌹🌹🌹🌹
ನರಹರಿ ಸುಮಧ್ವ
ಸುಮಧ್ವಸೇವಾ
🍀🍀🍀🍀🍀

*Do’s & Dont’s during Grahana Period* :-

  • Do Snaana – during sparsha period (if possible do thirtha snaana)
  • Have Gopichandana, Mudradharana
  • Nirmalya Visarjana to be performed during Grahana, the same Nirmalya should be used for Tarpana.
  • During Madhyakaala give tarpana (tarpanaadhikarees) to sarva pitrugalu.
  • Do more Gayathri Japa as much as possible, for gents,  Vijayarayara kavacha, Madhwanama, Keshavanama,   etc for Ladies
  • Chant Vishnu Sahasra Naama /Harivayustuti/ Shanaishcharakrutha Narasimha Stotra, Navagraha Stotra
  • Do yathashakti daana – During Grahana we must do daanaas – Godaana, Suvarna Daana, Bhoodana, dhaanya dhaana   (yathaashakthi.)
  • After moksha of Grahana – take one more bath.
  • During Grahana Time avoid using Toilets,
  • Hastodaka on Grahana Day not to be given as Yatigalu will be fasting  on Grahana Day.
  • Clothes kept in Madi before Grahana are not to be used after Grahana.    After Grahana, do snaana and clothes to be kept freshly for drying. “ಗ್ರಹಣಪೂರ್ವದಲ್ಲಿ ಒಣಗು ಹಾಕಿದ್ದ ಮಡಿ ಬಟ್ಟೆ  ಗ್ರಹಣ ನಂತರ ಬರುವುದಿಲ್ಲ.  ಗ್ರಹಣಾನಂತರ ಮತ್ತೆ ಸ್ನಾನ ಮಾಡಿ ಹೊಸದಾಗಿ ಬಟ್ಟೆಯನ್ನು  ಒಣಗಿಹಾಕಿ ಕೊಳ್ಳಬೇಕು.”
  • Even those who are observing soothaka also must observe Grahana  snaana.
  • If you don’t know how to chant all the above – u can simply chant .

ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ |
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |

हरे राम हरे राम राम राम हरे हरे ।
हरे कृष्ण हरे कृष्ण कृष्ण कृष्ण हरे हरे ।

Chanting of Sri Ramanama itself is equal to Vishnu Sahasra Naama.
  • “Grahana Period” is parva kaala – Whatever you are doing during  Grahana – it fetches  more punya .
  • Two days prior and two days after Grahana are Varjya for “Shubha  Kaarya”.
  • Pregnants during Suryagrahana – Normally at the time of Surya Grahana,  pregnant women are supposed not to come out of the house, sunlight not to be allowed to enter either by doors or throws windows is to avoid harmful rays.
  • Please do not sleep during Grahana Time.
  • Even the Rajaswala ladies must observe Grahana snaana.
  • While doing sparsha snaana, we must do the snaana with the clothes  we are wearing in.
  • Avoid looking at Sun directly with naked eyes during Solar eclipse.
  • We must use Darbha ( Grass) during eclipse time for   protection of the water and food items from getting  contaminated. Keep Darbha  on all the  stored items like Water, Pickles, Milk, Curd, etc.
  • In case of death anniversary falling on the eclipse day, regular shraddha will be performed only after the eclipse is over.

 

ಸಂಗ್ರಹ – ನರಹರಿ ಸುಮಧ್ವ

(ಆಧಾರ – ನಮ್ಮ ತಂದೆ ಶ್ರೀ SN ರಾಮಚಂದ್ರಾಚಾರ್ಯರ.  ಮಾರ್ಗದರ್ಶನ ಮತ್ತು ಹಲವಾರು ಮಠಗಳ ಪಂಚಾಂಗ, ಶ್ರೀ ಚತುರ್ವೇದಿ ವೇದವ್ಯಾ‌ಸಾಚಾರ್ಯರ ಲೇಖನ, ಹಲವಾರು ಲೇಖನಗಳು)

Leave a Reply

Your email address will not be published.

Sumadhwa Seva © 2022