PrasannaVenkataDasaru

Srinivasa, Bhoodevi And Sridevi – Vigrahaas pooja done by Sri Prasanna Venkata Dasaru

Tamburi used by Sri Prasanna Venkata Dasaru

                               ಶ್ರೀ ಪ್ರಸನ್ನ ವೆಂಕಟದಾಸರು ಉಪಯೋಗಿಸುತ್ತಿದ್ದ ಗೋಪಾಲಬುಟ್ಟಿ

 

ಶ್ರೀ ಶಾತ್ಪ್ರಾಪ್ತ ಸುವಿಜ್ಞಾನಂ ಶ್ರೀಶೈಕ ನಿರತಂ ಸದಾ |
ಪ್ರಸನ್ನ ವೇಂಕಟಾರ್ಯೋಮೇ ಭೂಯಾತ್ ಸರ್ವಾರ್ಥ ಸಿದ್ಧಯೇ |
श्री शात्प्राप्त सुविज्ञानम् श्रीशैक निरतं सदा ।
प्रसन्न वेंकटार्योमे भूयात् सर्वार्थ सिद्धये ।
ಹೆಸರು – ಕಾಖಂಡಕಿ ವೆಂಕಪ್ಪ (ವೆಂಕಟೇಶ)
ಕಾಲ –  1680-1752 AD
ಪುಣ್ಯದಿನ – ಭಾದ್ರಪದ ಶುದ್ಧ ದ್ವಾದಶಿ
ತಂದೆ ತಾಯಿ – ಲಕ್ಷ್ಮೀಬಾಯಿ ಮತ್ತು ಕಾಕಂಡಕಿ ನರಸಪ್ಪಯ್ಯ
ಸ್ಥಳ – ಬಾದಾಮಿ, ಬಾಗಲಕೋಟೆ
ಗೋತ್ರ – ಕಾಶ್ಯಪ
ಗುರುಗಳು – ಮುದ್ಗಲ ಜನಾರ್ದನಚಾರ್ಯರು
ಅಂಕಿತ – ಪ್ರಸನ್ನ ವೆಂಕಟ  ಅಥವಾ ಪ್ರಸನ್ನ ವೆಂಕಟಕೃಷ್ಣ.  ಒಮ್ಮೆ ಸ್ವಾಮಿ ಪುಷ್ಕರಿಣಿತೀರ್ಥದಲ್ಲಿ ಸ್ನಾನಗೈದು , ಶ್ರೀ ಹರಿಯನ್ನು ಸ್ತುತಿಸುತ್ತಿದ್ದಾಗ “ಪ್ರಸನ್ನವೆಂಕಟ” ಮುದ್ರಿಕೆಯನ್ನು ಶ್ರೀಹರಿಯೇ ಸ್ವಪ್ನಗೋಚರನಾಗಿ ಅವರ ನಾಲಿಗೆಯಲ್ಲಿ ಬರೆದನಂತೆ.
ಅಂಗಾರದ ಆಚಾರ್ಯರು – ಶ್ರೀ ಪ್ರಸನ್ನ ವೆಂಕಟದಾಸರು ಒಮ್ಮೆ ಊರಿಂದೂರಿಗೆ ಪ್ರಯಾಣಿಸುವಾಗ ಎದುರಾದ ಹುಲಿಯ ಮೈ ಚಪ್ಪರಿಸಿ ಅದರ ಮೇಲೆ ದೇವರ ಪೆಟ್ಟಿಗೆಯಿಟ್ಟು ತಮ್ಮ ಜೊತೆಗೇ ಊರು ತಲುಪುವವರೆಗೂ ಕರೆದೊಯ್ಯುತ್ತಿದ್ದರಂತೆ.  ಅಲ್ಲಿ ಅದಕ್ಕೆ ಅಂಗಾರ ಹಚ್ಚಿ ಯಾವ ಗೋವುಗಳನ್ನೂ ಹಿಂಸಿಸಬೇಡವೆಂದು ಹೇಳು ಕಳಿಸುತ್ತಿದ್ದರಂತೆ.  ಆ ಹುಲಿಗಳು ಎಂದೂ ಗೋವುಗಳ ತಂಟೆಗೆ ಬರುತ್ತಿರಲಿಲ್ಲವಂತೆ.  ಆದ್ದರಿಂದ ಅವರನ್ನು ಅಂಗಾರದ ಆಚಾರ್ಯರು ಎಂದೇ ಕರೆಯುತ್ತಿದ್ದರು.

 

Gurugalu – Mudgal Janardhanacharya – After swapna labda upadesha from Srihari, he studied under Mudgal Janardhanacharya under various aspects.  As a mark of respect to his beloved guru, he has composed many devaranamas on his guru. Please click the link for devaranamas on his guru.

Contemporaries – Vijayadasaru, Gopaladasaru,

Contributions – More than 400 Keerthanegalu, 20 Ugaboga, 9 Suladigalu and 3 kolu haadu

Some of the krutees by him may be summarised as follows :

  1. “Satyabhaama Vilasa” or “Srikrishna Paarijata” –  It has 51 stanjas
  2. Narayana Panjara – It has 40+ stanzas – comprising of stuti on Srihari
  3. Bedha Muktavali – It is a kolu haadu – praising all the devates taratamyanusaara –  Madhwa matha samarthana kruti
  4. Samastanama Manigana Shatcharana Padyamala – It has 70+ Stanzas – another Haristuti – with more samskruta influence
  5. Narada Koravanji – This is a kruti – wherein Naarada will come as a Koravanji to narrate Rukmini’s birth, Rukmini Kalyana, etc
  6. Bhagavatha – Krishna Charite
  7. Uttaradimutt Guruparampara Kruti – Click the link for MP3 song of the same

ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳ
ಗತಿಯುಂಟು ಸಂತತಿ ಸಂಪತ್ತಿಯುಂಟು || ಪ ||

ಶ್ರೀ ಮಧ್ವ ಪದ್ಮನಾಭ ನರಹರಿ ಮಾಧವ
ಆ ಮೌನಿ ಅಕ್ಷೋಭ್ಯ ಜಯರಾಯ
ವಿದ್ಯಾಧಿರಾಜ ಭೂಮಾ ಕವೀಂದ್ರ ವಾಗೀಶರ || ೧ ||

ಮುನಿರಾಮಚಂದ್ರ ವಿದ್ಯಾನಿಧಿ ರಘುನಾಥ
ಮಾರನ ಗೆಲಿದ ರಘುವರ್ಯ ರಘೋತ್ತಮ
ವೇದವ್ಯಾಸ ಘನ ವಿದ್ಯಾಧೀಶ ವೇದನಿಧಿಗಳ || ೨ ||

ಸತ್ಯವ್ರತ ಸತ್ಯನಿಧಿ ಸತ್ಯನಾಥ ಅನುಪಮ
ಸತ್ಯಾಭಿನವ (ಗುರು) ಕರಪದ್ಮಜ
ನಮ್ಮ ಗುರು ಸತ್ಯಪೂರ್ಣ ಪ್ರಸನ್ವೇಂಕಟಾ ಪ್ರಿಯರ || ೩||

For Devaranamas & other details : CLICK HERE

For Devaranamas on his gurugalu – Click here

Bideno ninnanghri Srinivasa –  Even Today, Mettilotsava Function and many Dasa Sahitya functions at various Places in India ends with his Bideno Ninnanghri Shreenivasa Kruti.

 

ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ನನ್ನ
ದುಡಿಸಿಕೊಳ್ಳೆಲೋ ಶ್ರೀನಿವಾಸ ನಿ-
ನ್ನುಡಿಯ ಜೀತಲ್ಲೋ ಶ್ರೀನಿವಾಸ ನನ್ನ
ನಡೆ ತಪ್ಪು ಕಾಯೋ ಶ್ರೀನಿವಾಸ   | ಪ |
ಬಡಿಯೋ ಬೆನ್ನಲಿ ಶ್ರೀನಿವಾಸ ನ-
ನ್ನೊಡಲ ಹೊಯ್ಯದಿರೋ ಶ್ರೀನಿವಾಸ ನಾ
ಬಡವ ಕಾಣೆಲೋ ಶ್ರೀನಿವಾಸ ನಿ
ನ್ನೊಡಲ ಹೊಕ್ಕೆನೋ ಶ್ರೀನಿವಾಸ   | ೧ |
ಪಂಜುಹಿಡಿವೆನೊ ಶ್ರೀನಿವಾಸ ನಿ
ನ್ನೆಂಜಲ ಬಳಿದುಂಬೆ ಶ್ರೀನಿವಾಸ ನಾ
ಸಂಜೆ ಉದಯಕೆ ಶ್ರೀನಿವಾಸ ಕಾ
ಳಂಜಿಯ ಪಿಡಿವೆನೋ ಶ್ರೀನಿವಾಸ | ೨ |
ಸತ್ತಿಗೆ ಚಾಮರ ಶ್ರೀನಿವಾಸ ನಾ
ನೆತ್ತಿ ಕುಣಿವೆನೋ ಶ್ರೀನಿವಾಸ ನಿನ್ನ
ತತ್ತುನ ಹಾವಿಗೆ ಶ್ರೀನಿವಾಸ ನಾ
ಹೊತ್ತು ನಲಿವೆನೋ ಶ್ರೀನಿವಾಸ | ೩ |
ಹೆಳಿದಂತಾಲಿಹೆ ಶ್ರೀನಿವಾಸ ನಿ
ನ್ನಾಳಿಗಾಳಾಗಿಹೆ ಶ್ರೀನಿವಾಸ ಅವ
ರೂಳಿಗವ ಮಾಳ್ಪೆ ಶ್ರೀನಿವಾಸ ನನ್ನ
ಪಾಲಿಸೋ ಬಿಡದೆ ಶ್ರೀನಿವಾಸ | ೪ |
ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳ
ಕುನ್ನಿ ನಾನಾಗಿಹೆ ಶ್ರೀನಿವಾಸ ಕಟ್ಟಿ
ನಿನ್ನವರೊದ್ದರೆ ಶ್ರೀನಿವಾಸ ನನ
ಗಿನ್ನು ಲಜ್ಜ್ಯಾತಕೆ ಶ್ರೀನಿವಾಸ | ೫ |
ಬೀಸಿ ಕೊಲ್ಲಲವರೆ ಶ್ರೀನಿವಾಸ ಮುದ್ರೆ
ಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕ
ಘಾಸಿ ಗಂಜೆನಯ್ಯ ಶ್ರೀನಿವಾಸ ಎಂಜ
ಲಾಸೆಯ ಬಂಟ ನಾ ಶ್ರೀನಿವಾಸ | ೬ |
ಹೇಸಿ ನಾನಾದರೆ ಶ್ರೀನಿವಾಸ ಹರಿ
ದಾಸರೊಳು ಪೊಕ್ಕೆ ಶ್ರೀನಿವಾಸ ಅವರ
ಭಾಸೆಯ ಕೇಳಿಹೆ ಶ್ರೀನಿವಾಸ ಆ
ವಾಶೆಯ ಸೈರಿಸೊ ಶ್ರೀನಿವಾಸ | ೭ |
ತಿಂಗಳವನಲ್ಲ ಶ್ರೀನಿವಾಸ ವತ್ಸ
ರಂಗಳವನಲ್ಲೋ ಶ್ರೀನಿವಾಸ ರಾ
ಜಂಗಳ ಸವಡಿಪೆ ಶ್ರೀನಿವಾಸ ಭ
ವಂಗಳ ದಾಟುವೆ ಶ್ರೀನಿವಾಸ | ೮ |
ನಿನ್ನವ ನಿನ್ನವ ಶ್ರೀನಿವಾಸ ನಾ
ನನ್ಯವನರಿಯೆನೊ ಶ್ರೀನಿವಾಸ ಅಯ್ಯಾ
ಮನ್ನಿಸೊ ತಾಯ್ತಂದೆ ಶ್ರೀನಿವಾಸ
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ | ೯ |

Click –  http://www.prasannavenkatadasaru.org/ for more information on the great Dasaru

 

 

 

1 Comment

Add a Comment
  1. Bideno ninnangri srinivasa is a very powerful song that reverberates in my heart even when when I wake up in the middle of night ! I knew it must have come from a powerful soul to have such a deep effect on me.I struggled hard to know who it was ,and here I realized it was Prasannavenkata dasaru.I live in USA and I listen to this song every day for the last 1m in morning while I drive to work. My interest in bhakti is all from being exposed to my Guru Kalavati Devi from Belgavi from my childhood.My mother tongue is Marathi but I have great interest in all the compositions of all Dasarus.I am from Dharwad. I know Kannada as good as marathi.We are really blessed to be exposed to such great compositions ! Its a wonderful experience cannot be explained in words.

Leave a Reply

Your email address will not be published. Required fields are marked *

Sumadhwa Seva © 2013