Ganapathi ಗಣಪತಿ ಚಿಂತನೆ

 


      “ಓಂ ಶ್ರೀ ಕ್ಷಿಪ್ರವರದಾಯ ನಮ:”

ganapa

Devaranamagalu on Ganapathi – Click 

Devaranamagalu on Ganesha – click

Pooja Vidhana in Kannada – click
Pooja Vidhana in Sanskrit – click
Pooja Vidhana in Telugu – click

Pooja Vidhana in Tamil – click

 

ದುಷ್ಟಾನಾಂ ವಿಘ್ನಕರ್ತಾ ಸುಚರಿತ-
ಸುಜನಸ್ತೋಮವಿಘ್ನಾಪಹರ್ತಾ !
ತಸ್ಮಾದ್ವಿಘ್ನಾಧಿಪೋsಹಂ ಮತ ಇತಿ
ಸುಧಿಯಾಂ ಸ್ವಷ್ಟಮಾಜ್ಞಾಪನಾಯ!!
ಪೌಲಸ್ತ್ಯೇಚ್ಛಾಂತರಾಯ: ಸುರಮುನಿ-
ನಿಕರಾಭೀಷ್ಟಸಂಪ್ರಾಪ್ಯುಪಾಯ: !
ಶ್ರೇಯೋ ವಿಘ್ನಾಧಿರಾಜ: ಪ್ರದಿಶತು
ಸತತಂ ಭೂರಿ ಗೌರೀತನೂಜ: !!

ಪೂಜೆಗೆ ಬೇಕಾಗುವ ಸಾಮಗ್ರಿಗಳು :

  1. ಪಂಚಪಾತ್ರೆ, ಅರ್ಘಪಾತ್ರೆ, ಕುಂಕುಮ, ಗೆಜ್ಜೆವಸ್ತ್ರ, ಗಂಧ , ಅಕ್ಷತೆ, ಯಜ್ಞೋಪವೀತ, ಗಂಟೆ, ಕಲಶ, ಮಂತ್ರಾಕ್ಷತೆ, ಮಾವಿನ ಸೊಪ್ಪು, ಗರಿಕೆ, ಪತ್ರೆ, ಹೂವು,  ವಿಳ್ಳದೆಲೆ, ಅಡಿಕೆ, ತೆಂಗಿನಕಾಯಿ,  ಪಂಚಾಮೃತ ಮಾಡಲು ಹಾಲು, , ತುಪ್ಜ, ಜೇನುತುಪ್ಪ, (ಮೊಸರು ವ್ರತವಾಗಿರುವುದರಿಂದ ಬರುವುದಿಲ್ಲ)

Pooja Items required –   Panchapaatre, Turmeric, Kunkuma, Gejje vastra, Gandha ;  Yajnopaveeta,  Gantaa,  arGyapaatre,  kalasha,  mantraakshate,  Ganapati idol (yathaashakti),   red vastra (as Ganapati is raktaaMbaradhara);  Garike, patre, davana,  bilva patre,  Flowers, etc

For vaayana daana 2 coconuts, Veelyadele, ADike, Rice, Fruits ;

ನೈವೇದ್ಯಕ್ಕೆ ಮನೆಯಲ್ಲಿ ಮಾಡಿದ ಚಕ್ಕುಲಿ, ಕಡುಬು, ಹಣ್ಣು, ನೀರು, ಮತ್ತು ಅಡಿಗೆ ಖಾದ್ಯಗಳು. ಅಂಗಡಿಯಲ್ಲಿ ತಂದ ತಿಂಡಿಗಳನ್ನು ನಿವೇದಿಸಬೇಡಿ

ಮನೆಯಲ್ಲಿ ಸಿದ್ದಪಡಿಸಲಾಗದಿದ್ದರೆ ಹಣ್ಣು ಕಾಯಿ ನಿವೇದಿಸಿ.

For Naivedya – LaaDu, Chakkali, KaDabu, fruits.

Before start of pooja – make the place shuddha by applying gomaya in that place where you want to instal.  ಪೂಜೆ ಆರಂಭಕ್ಕೆ ಮುನ್ನ ಪೂಜಾಸ್ಥಳವನ್ನು ಗೋಮಯದಿಂದ  ಸಾರಿಸಬೇಕು.

Tulasi not to be used – However, Nirmaalya Tulasi can be applied. ತುಳಸಿಯನ್ನು ಗಣೇಶನ ಪೂಜೆಗೆ ಉಪಯೋಗಿಸುವಂತಿಲ್ಲ. ಆದರೆ ಹರಿಸಮರ್ಪಿತ ತುಳಸಿ ಸಮರ್ಪಿಸಬಹುದು.

Avoid using nirgandha flowers ಪೂಜೆಗೆ ನಿರ್ಗಂಧ ಪುಷ್ಪವನ್ನು ಉಪಯೋಗಿಸಬಾರದು.

Don’t bring bhakshya items made in Hotels, Canteens for naivedya.   If you can’t prepare bhakshya, do the naivedya of fruits and coconuts.

ಗಣಪತಿ ಯಾರು? 

ಗಣಪತಿಯು ಪಾರ್ವತೀ ಪರಮೇಶ್ವರರ ಪುತ್ರ. ಆಕಾಶಾಭಿಮಾನಿ ದೇವತೆ. ಅವನ ವಾಹನ ಮೂಷಿಕ.

ನಾವು ಗಣಪತಿಯನ್ನು ಶ್ರೀಹರಿಯ ಪರಿವಾರ ದೇವತೆಯೆಂದು ಪೂಜಿಸಬೇಕೇ ಹೊರತು ಅವನನ್ನು ಸರ್ವೋತ್ತಮನೆಂದು ತಿಳಿಯಬಾರದು.   ಗಣಪತಿಯು ದೇವತಾ  ಕಕ್ಷ್ಯ ತಾರತಮ್ಯದಲ್ಲಿ 18ನೇ ಕಕ್ಷ್ಯದಲ್ಲಿ ವಿಷ್ವಕ್ಸೇನ, ಶೇಷಶತಸ್ರರೊಂದಿಗೆ ಗುರುತಿಸಲ್ಪಟ್ಟಿದ್ದಾನೆ.  ಕೃಷ್ಣಾವತಾರ ಕಾಲದಲ್ಲಿ “ಚಾರುಧೇಷ್ಣಾ” ಎಂಬ ಹೆಸರಿನಿಂದ ಅವತಾರ ಮಾಡಿದ್ದನು.

ಗಣಪತಿಯ ವಿಗ್ರಹ -. ಇತ್ತೀಚೆಗೆ ವಿಶಿಷ್ಟ ರೂಪದ ಗಣಪತಿಯ ವಿಗ್ರಹ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ.   ಸಿನಿಮಾ ಹೀರೋ ರೂಪದ ಗಣಪ, ರಾಜಕೀಯ ನಾಯಕರ ಹೋಲುವ ಗಣಪ,  ಇನ್ನೂ ಏನೇನೋ ರೂಪದ ಗಣಪತಿಯ ವಿಗ್ರಹಗಳಿವೆ.    ದಯವಿಟ್ಟು ಯಾರೂ ಅಂತಹ ವಿಗ್ರಹ ಕೊಳ್ಳಿದಿರಿ.   ನಾವು ದೇವರ ಪೂಜೆಗೆ ದೇವರಂತಿರುವ ವಿಗ್ರಹವನ್ನು ಪೂಜಿಸಬೇಕು.  ಅದರ ಬದಲು ಯಾವುದೋ ಸಿನಿಮಾ/ ರಾಜಕೀಯ ನಾಯಕನ, ಚಿತ್ರಕ್ಕೆ ಪೂಜಿಸಿದರೆ ದೇವರು ಸನ್ನಿಧಾನ ಹೇಗೆ ಬರುತ್ತದೆ?    ಪೂಜಿಸುವ ವಿಗ್ರಹದಲ್ಲಿ ಆವಾಹನೆ, ಪ್ರಾಣಪ್ರತಿಷ್ಟೆ,  ಮಾಡಿ ಸನ್ನಿಧಾನವನ್ನು ತರಲು ಪ್ರಯತ್ನಿಸಬೇಕು.    ಗಣಪತಿಯು

ವಿಶ್ವಂಭರನ ರೂಪ ಚಿಂತಕ. ವಿಶ್ವಂಭರನ 19 ಮುಖಗಳಲ್ಲಿ ಮಧ್ಯದಲ್ಲಿರುವ ಮುಖ ಆನೆಯ ಮುಖ.     ಅದಕ್ಕೇ ಅವನಿಗಿರುವುದು   ವಿಶ್ವಂಭರನ ಮುಖ.   ಬೇರೆ  ರೀತಿಯ ವಿಗ್ರಹ ಕೊಳ್ಳದಿರಿ.

ಹರಿಕಥಾಮೃತಸಾರದಲ್ಲಿ ಗಣಪತಿಯ ವರ್ಣನೆ : 

ವಿಘ್ನರಾಜನೆ ದುರ್ವಿಷಯದೊಳು 
ಮಗ್ನವಾಗಿಹ ಮನವ ಮಹದೋ-
ಷಘ್ನನಂಘ್ರಿಸರೋಜಯುಗಳಂಗದಿ ಭಕ್ತಿಪೂರ್ವಕದಿ
ಲಗ್ನವಾಗಿಸು ನಿತ್ಯನರಕಭ-
ಯಾಗ್ನಿಗಳಿಗಾನಂಜೆ ಗುರುವರ
ಭಗ್ನಗೈಸೆನ್ನವಗುಣಗಳನು ಪ್ರತಿದಿವಸದಲಿ

ಹರಿಕಥಾಮೃತಸಾರದಲ್ಲಿ ಬರುವ ಗಣಪತಿ ಚಿಂತನೆ –
ಮಹೇಶಸಂಭವ – ರುದ್ರದೇವರಿಂದ ಅವತರಿಸಿದ ಗಣಪತಿ;
ವ್ಯಾಸಕರುಣಾಪಾತ್ರ – ವೇದವ್ಯಾಸದೇವರ ಕರುಣಾಪಾತ್ರ
ಏಕದಂತ -ಏಕದಂತವುಳ್ಳವನು
ಇಭೇಂದ್ರಮುಖ – ಆನೆಮುಖವುಳ್ಳವನು
ವಿಘ್ನರಾಜ – ವಿಘ್ನನಾಶಕ
ಷಣ್ಮುಖನನುಜ – ಷಣ್ಮುಖನ ಅನುಜ
ಚಾರುದೇಷ್ಣಾಹ್ವಯ – ಚಾರುದೇಷ್ಣನೆಂಬ ಹೆಸರಿನಿಂದ ಅವತರಿಸಿದ;
ವಿಶ್ವೋಪಾಸಕ – ಪರಮಾತ್ಮನ “ವಿಶ್ವ”ರೂಪ ಉಪಾಸಕ
ಇಂದುದರ್ಪಹರ – ಚಂದ್ರನ ದರ್ಪವನ್ನು ಹೋಗಲಾಡಿಸಿದವನು
ಪಾಶಪಾಣಿ – ಪಾಶಧರ

ವಿಜಿತಕಂದರ್ಪಶರ – ಮನ್ಮಥನ ಬಾಣಗಳನ್ನು ಜಯಿಸಿದವನು – ಅರ್ಥಾತ್ ಕಾಮನನ್ನು ಗೆದ್ದವನು.   ತಂದೆ ಶಿವ ಕಾಮಹರನಾದರೆ, ಅವನ ಪುತ್ರ ಗಣೇಶ ಕಾಮನನ್ನು ಗೆದ್ದವನು.

ಉದಿತಾರ್ಕಸನ್ನಿಭ – ಗಣೇಶನ ಮೈಬಣ್ಣ ತುಂಬ ಕೆಂಪು ಎಂಬುದನ್ನು ಸೂಚಿಸಿರುವರು.

ಸರ್ಪವರಕಟಿಸೂತ್ರ – ಗಣೇಶ ತನ್ನ ಮಹೋದರದ ಮೇಲೆ ಸರ್ಪವನ್ನು ಕಟ್ಟಿಕೊಂಡುರುವುದು ಸೂಚಿತವಾಗಿದೆ.

ವೈಕೃತಗಾತ್ರ – ಲಂಬೋದರನಾದ್ದರಿಂದ ವಿಕೃತದೇಹ.

ಖಳದರ್ಪಭಂಜನ – ರಾವಣಾದಿಗಳ ಖಳರ ಸೊಕ್ಕನ್ನು ಮುರಿದಿದ್ದರಿಂದ.

ಚಕ್ರಧರಾಂಕಿತ – ಚಕ್ರಶಂಖಗಳಿಂದ ಭೂಷಿತ ಎಂದು ಹೇಳುವುದರ ಮೂಲಕ ಗಣೇಶನ ಚಿಹ್ನೆ ಊರ್ಧ್ವಪುಂಡ್ರ ಚಕ್ರಶಂಖಗಳು ಎಂದು ನಿರೂಪಿಸಿರುವರು
ಮೂಷಿಕಾವವಹನ – ಶ್ರೇಷ್ಟವಾದ ಇಲಿಯನ್ನು ವಾಹನವಾಗುಳ್ಳವನು
ರಕ್ತವಾಸದ್ವಯ ವಿಭೂಷಣ – ಕೆಂಪುವಸ್ತ್ರ ಉಟ್ಟು, ಕೆಂಪು ವಸ್ತ್ರವನ್ನು ಉತ್ತರೀಯವಾಗಿ ಉಳ್ಳವ
ತಾರಕಾಂತಕನನುಜ – ತಾರಕಾಸುರನ ಸಂಹರಿಸಿದ ಷಣ್ಮುಖನ ಅನುಜ

ಏಕವಿಂಶತಿ ಮೋದಕಪ್ರಿಯ – ೨೧ ಮೋದಕ ಪ್ರಿಯ
ಪಿನಾಕಿ ಭಾರ್ಯಾತನುಜ – ಪಿನಾಕಿಯಾದ ರುದ್ರದೇವರ ಭಾರ್ಯೆಯಾದ ಪಾರ್ವತೀಸುತ

ಪಂಚವಕ್ತ್ರನ ತನಯ – ಐದು ಮುಖಗಳುಳ್ಳ ರುದ್ರದೇವರ ಪುತ್ರ
ವಿಘ್ನೇಶ – ಭಕ್ತರ ವಿಘ್ನಗಳ ಪರಿಹರಿಸುವ
ಚಾರ್ವಾಂಗ – ಮನೋಹರವಾದ ಅಂಗವುಳ್ಳವನೆ

ಉಡುದಾರದಂತೆ ಸೊಂಟಕ್ಕೆ ಗಣಪತಿಯು ಸುತ್ತಿಕೊಂಡ ಸರ್ಪದ ಹೆಸರುವಿಕಚ

 ಪ್ರಶ್ನೆ :  ಗಣಪತಿಯು ತಾರತಮ್ಯದಲ್ಲಿ ೧೮ನೇಯವನು. ರುದ್ರದೇವರು ೫ನೇ ಕಕ್ಷ್ಯ. ವಿವಿಂದ್ಯ ಮೊದಲಾದ ರುದ್ರದೇವರ ವರದಿಂದ ಉದ್ಧಟರಾದ ರಾಕ್ಷಸರನ್ನು ಚಾರುದೇಷ್ಣನಿಗೆ ಕೊಲ್ಲಲು ಹೇಗೆ ಸಾಧ್ಯವಾಯಿತು?
– ಶ್ರೀಹರಿಯು ಚಾರುದೇಷ್ಣನಲ್ಲಿ ವಿಶ್ವಂಭರ ನಾಮಕ ರೂಪದಿಂದ  ಅವನಲ್ಲಿದ್ದು, ವಾಯುದೇವರ ವಿಶೇಷ ಆವೇಶ ಚಾರುದೇಷ್ಣನಲ್ಲಿರುವುದರಿಂದ, ವಿವಿಂದ್ಯ ಮೊದಲಾದ ರಾಕ್ಷಸರ ಸಂಹಾರ ಕಾರ್ಯ ಸಾಧ್ಯವಾಯಿತು.

 ಪ್ರಶ್ನೆ : ಗಣಪತಿಯ ಕೈಯಲ್ಲಿ ಧರಿಸಿದ ಅಂಕುಶದ ಹೆಸರೇನು ? –

   —  ಸ್ವರ್ಪಿತ

ಪ್ರಶ್ನೆ – ಗಣಪತಿಯನ್ನು ಕರ್ಮಸಾಕ್ಷಿಗ ಎಂದೇಕೆ ಪ್ರಯೋಗ ಮಾಡಿದ್ದಾರೆ ?
– ಗಣಪತಿಯು ಭೂತಾಕಾಶದ ಅಭಿಮಾನಿ. ಭೂತಾಕಾಶವು ಎಲ್ಲ ಕಡೆಗೂ ವ್ಯಾಪ್ತವಾಗಿದೆ. ಅದರಂತೆ ಗಣಪತಿಯೂ ಎಲ್ಲ ಕಡೆ ವ್ಯಾಪ್ತನು. ಆದ್ದರಿಂದ ಎಲ್ಲರೂ ಮಾಡುವ ಸಮಸ್ತ ಕರ್ಮಗಳಿಗೆ ಭೂತಾಕಾಶ ಅಭಿಮಾನಿ ಗಣಪತಿಯು ಸಾಕ್ಷೀಭೂತನಾಗಿರುವನು

ಪ್ರಶ್ನೆ – ಗಣಪತಿಯು ಶ್ರೀಹರಿಯ ಯಾವ ಪ್ರದೇಶದಲ್ಲಿ ಆಶ್ರಯವನ್ನು ಹೊಂದಿರುವನು ?
ಉತ್ತರ – ಗಣಪತಿಯು ಶ್ರೀಹರಿಯ ನಾಭೀ ಪ್ರದೇಶದಲ್ಲಿ ಆಶ್ರಯ ಹೊಂದಿರುವನು.

ಪ್ರಶ್ನೆ – ಸರ್ವೋತ್ತಮನಾದ ಶ್ರೀರಾಮಚಂದ್ರನು ಸೇತುಬಂಧನದ ಆರಂಭದಲ್ಲಿ ಗಣಪತಿಯ ಪೂಜೆಯ ಮಾಡಿದುದರ ಉದ್ದೇಶವೇನು ?
ಉತ್ತರ – ಪರಿವಾರ ದೇವತೆಗಳೆಲ್ಲರೂ ತನ್ನ ಅಧೀನರು, ದೇವತೆಗಳಿಗೆ ವಿಶೇಷ ಸಾಧನೆ ಮಾಡಿಸಲು, ತಾನೇ ಅವರಲ್ಲಿದ್ದು, ಫಲ ಕೊಡುವವನು ಎಂಬುದಾಗಿ ತಿಳಿಸಲು, ಲೋಕ ಶಿಕ್ಷನಾರ್ಥವಾಗಿ, ಪರಿವಾರ ದೇವತೆಗಳಲ್ಲಿ ಒಬ್ಬರಾದ ಗಣಪತಿಯ ಅಂತರ್ಯಾಮಿಯಾದ ತನ್ನನ್ನೇ ಶ್ರೀರಾಮಚಂದ್ರನು ಪೂಜಿಸಿದನು. ಇಲ್ಲಿ ಗಣಪತಿಯು ಶ್ರೇಷ್ಟ ಎಂದಲ್ಲ. ಬೇರೆಲ್ಲರೂ ಗಣಪನನ್ನು ಮೊದಲು ಪೂಜಿಸಲಿ ಎಂದು ಲೋಕಶಿಕ್ಷಣಕ್ಕಾಗಿ ಮಾಡಿದನು.

ಪ್ರಶ್ನೆ – ದುರ್ಯೋಧನಾದಿ ದೈತ್ಯರು, ಗಣಪತಿಯನ್ನು ಯುದ್ಧಾರಂಭದಲ್ಲಿ ಪೂಜಿಸದಿದ್ದುದರ ಪರಿಣಾಮವೇನಾಯಿತು?
ಉತ್ತರ – ಗಣಪತಿಯನ್ನು ಆರಂಭದಲ್ಲಿ ಪೂಜಿಸದಿದ್ದ ದುರ್ಯೋಧನಾದಿಗಳು ವಾಯ್ವಂಶರಾದ ಭೀಮಸೇನ ದೇವರಿಂದ ಗದಾ ಹತರಾದರು.

ಪ್ರಶ್ನೆ – ಅರೆಕ್ಷಣವೂ ಬಿಡದೆ ಬೆಂಗಾವಲಾಗಿರಲು, ಗಣಪತಿಯನ್ನು ಏನೆಂದು ಪ್ರಾರ್ಥಿಸಬೇಕು ?
ಉತ್ತರ – ಸತ್ಕರ್ಮಗಳನ್ನು ಮಾಡುವಾಗ್ಗೆ, ವಿಘ್ನಗಳು ಹಲವು. ಅವುಗಳನ್ನು ಪರಿಹರಿಸಿ, ಭಗವನ್ನಾಮ ಧ್ಯಾನಿಸಲು, ಪೂಜಿಸಲು, ನಮಗೆ ಬೆಂಗಾವಲಾಗಿರಲು ಗಣಪತಿಯನ್ನು ಪ್ರಾರ್ಥಿಸಬೇಕು.

ಶುಕ್ರಶಿಷ್ಯರ ಸಂಹರಿಪುದಕೆ                                          ಶಕ್ರ ನಿನ್ನುನು  ಪೂಜಿಸಿದನು ಉ-
ರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ        ಚಕ್ರವರ್ತಿಪ ಧರ್ಮರಾಜನು |                ಚಕ್ರಪಾಣಿಯ  ನುಡಿಗೆ ಭಜಿಸಿದ                        ವಕ್ರತುಂಡನೆ ನಿನ್ನೊಳೆಂತುಂಟೊ ಈಶನುಗ್ರಹವು |

ಶುಕ್ರಾಚಾರ್ಯರ ಶಿಷ್ಯರಾದ ದೈತ್ಯರನ್ನು ಸಂಹರಿಸಲು ಶಕ್ರನು ನಿನ್ನನು ಪೂಜಿಸಿ ದೇವೇಂದ್ರನು ಗೆದ್ದನು. ಶ್ರೀ ರಾಮಚಂದ್ರನು ಸೇತುಬಂಧನಾರಂಭದಲ್ಲಿ ಲೋಕಶಿಕ್ಷಣಾರ್ಥವಾಗಿ ನಿನ್ನನ್ನು ಪೂಜಿಸಿದನು. ಚಕ್ರವರ್ತಿ ಧರ್ಮರಾಜನು ನಿನ್ನನ್ನು ಪೂಜಿಸಿ ಕುರುಕ್ಷೇತ್ರದಿ ವಿಜಯಿಯಾದನು. ವಕ್ರತುಂಡನಾದ ಗಣಪನಲ್ಲಿ ಶ್ರೀಹರಿಯ ಅನುಗ್ರಹವು ಬಹಳವಾಗಿದೆ.

ಸಂಕಷ್ಟ ಚತುರ್ಥಿಯು ವೈಷ್ಣವರಿಗಲ್ಲ

ಶಂಕರಾತ್ಮಜ ದೈತ್ಯರಿಗತಿಭ-
ಯಂಕರಗತಿಗಳೀಯಲೋಸುಗ
ಸಂಕಟಚತುರ್ಥಿಗನೆನಿಸಿ ಅಹಿತಾರ್ಥಗಳ ಕೊಟ್ಟು |
ಮಂಕುಗಳ ಮೋಹಿಸುವೆ ಚಕ್ರದ-
ರಾಂಕಿತನೆ ದಿನದಿನದಿ ತ್ವತ್ಪದ-
ಪಂಕಜಗಳಿಗೆ ಬಿನ್ನಯಿಸುವೆನು ಪಾಲಿಪುದು ಎಮ್ಮ |
|ಹರಿಕಥಾಮೃತಸಾರ ವಿಘ್ನೇಶಸಂಧಿ ೯ |

ದೈತ್ಯರಿಗೆ ಅವರ ಯೋಗ್ಯತಾನುಸಾರ ಅನರ್ಥಗತಿಯನ್ನು ನೀಡಲು,  ಪ್ರತಿ ಕೃಷ್ಣಪಕ್ಷದ ಚತುರ್ಥಿದಿವಸ, ತನ್ನ ಪೂಜೆ ಮಾಡಿಸಿ, ಅವರ ಕಿಂಚಿದಿಷ್ಟಾರ್ಥ ನೆರವೇರಿಸಿ, ಮೋದಿಸುವೆ.

  •  ಇಲ್ಲಿ ಸಂಕಟಚತುರ್ಥಿ/ಸಂಕಷ್ಟ ಚತುರ್ಥಿ ವ್ರತವು ಯಾವುದೇ ಶೃತಿ, ಸ್ಮೃತಿಗಳಲ್ಲಿ ಹೇಳಿರತಕ್ಕ ವ್ರತವಲ್ಲ, ಆದ್ದರಿಂದ ವೈಷ್ಣವರಿಗೆ ನಿಷಿದ್ಧವಾದ ವ್ರತ. ಅದರಿಂದ ಆರಾಧಿತನಾಗುವ ಗಣೇಶ ಕೊನೆಯಲ್ಲಿ ಅಹಿತಾರ್ಥವನ್ನು ನೀಡುವನೇ ಹೊರತು ಹಿತವನ್ನಲ್ಲ ಎಂದು ವಿವರಿಸಿರುವರು.

 

*ಹರಿದಾಸರು ಕಂಡ ವಿಘ್ನೇಶ್ವರ*

ದಾಸಶ್ರೇಷ್ಟರುಗಳು ಗಣಪತಿಯ ದೇವರನಾಮಗಳನ್ನು ರಚಿಸಿ ಅವನನ್ನು ಹಲವಾರು ರೀತಿಯಲ್ಲಿ ವರ್ಣಿಸಿದ್ದಾರೆ.  ಅವುಗಳಲ್ಲಿ ಕೆಲವು ಆಯ್ದ ಪದಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ;

 

*ಹರಿದಾಸರು ಕಂಡ ವಿಘ್ನೇಶ್ವರ*

 

ದಾಸಶ್ರೇಷ್ಟರುಗಳು ಗಣಪತಿಯ ದೇವರನಾಮಗಳನ್ನು ರಚಿಸಿ ಅವನನ್ನು ಹಲವಾರು ರೀತಿಯಲ್ಲಿ ವರ್ಣಿಸಿದ್ದಾರೆ. ಅವುಗಳಲ್ಲಿ ಕೆಲವು ಆಯ್ದ ಪದಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ ;

 

ಅಂಬಾತನಯ;

ಆದಿಪೂಜಿತ;

ಅಂಬರಾದ್ವಯಭೂಷ;

ಅಂಬರಾಧೀಶ್ವರ;

ಅರವಿಂದನಯನ;

ಇಭೇಂದ್ರಮುಖ;

ಇಂದುಮೌಳಿಜ;

ಏಕದಂತ;

ಏಕವಿಂಶತಿಪತ್ರಪೂಜಿತ ;                    ಕಮ್ಮಗೋಲನವೈರಿಸುತ;

ಗಣನಾಥ ;

ಗಜಮುಖ ;

ಗಜಾನನ;

ಗೌರೀಪುತ್ರ;

ಚಾರುದೇಷ್ಣಾಹ್ವಯ;

ಪಾರ್ವತೀತನಯ ;

ಪಾಶಾಂಕುಶಧರ;

ಮಹಾಕಾಯ;

ಮಹೇಶಸಂಭವ;

ಮೂಷಿಕ ವಾಹನ ;

ಮೂಷಿಕಾಸನ ;

ಮೂಷಕರೂಢಾ;

ಮೂರುಕಣ್ಣನ ಸುತ;

ದರ್ಪಭಂಜನ

ದಶನಮೋದಕ;

ನಾಸಿಕಾಧರ;

ಬೆನಕ ;

ಹೇರಂಬ ;

ಶಂಕರತನಯ;

ಶಂಭುನಂದನ;

ಶಂಬರಾರಿಪುತ್ರ;

ತಾರಕಾಂತಕನನುಜ;

ಚಾಮೀರಕರವರ್ಣ;

ಯೂಥಪವದನ ;

ರಕ್ತವಸ್ರ್ತಧರ ;

ರಕ್ತಾಂಬರಧರ;

ರಕ್ತವಾಸದ್ವಯಭೂಷಣ;

ಲಂಬಕರ್ಣ;

ಲಂಬೋದರ

ವ್ಯಾಸಕರುಣಾಪಾತ್ರ;

ವಕ್ರತುಂಡ;

ಶೂರ್ಪಕರ್ಣ ;

ಶಂಕರತನಯ;

ಷಣ್ಮುಖನನುಜ ;

ಸಿದ್ಧಿವಿನಾಯಕ ;

ಸ್ವರ್ಪಿತಾಂಕುಶಪಾಶಕರ;

ಸಿದ್ಧಿ ಬುದ್ಧಿ ಪ್ರಿಯ;

ಸರ್ಪವರಕಟಿಸೂತ್ರ;

ವಿಘ್ನನಾಶನ ;

ವೈಕೃತಗಾತ್ರ;

 

 

ಸಂಗ್ರಹ : ನರಹರಿ ಸುಮಧ್ವ

ಪ್ರಶ್ನೆ :  ಪಾರ್ವತೀ ದೇವಿ‌‌ಯು ತನ್ನ ದೇಹದ ಮಣ್ಣಿನಿಂದ ಗಣಪತಿಯನ್ನ ಸೃಷ್ಟಿಸಿದಳೇ. ಅವಳ ದೇಹದಲ್ಲಿ ಅಷ್ಟೊಂದು ಮಣ್ಣಿತ್ತೇ?  ರುದ್ರದೇವರಿಗೆ ಅದು ತಿಳಿದಿರಲಿಲ್ಲವೇ?

ತಾಮಸ ಪುರಾಣವಾದ ಸ್ಕಾಂದ ಪುರಾಣದಲ್ಲಿ ಈ ಉಲ್ಲೇಖವಿದೆ. ಆದರೆ ಅದು‌ ಅಸುರ ಜನ ಮೋಹನಾರ್ಥವಾದ ಕಥೆ. ಹಿಂದೆ ದಕ್ಷಪ್ರಜಾಪತಿಯ ಮಗಳು ಸತೀದೇವಿಯಾಗಿದ್ದಾಗ ಅಗ್ನಿಯನ್ನು ಸೃಷ್ಟಿ ಮಾಡಿ ಅಗ್ನಿ ಪ್ರವೇಶಿಸಿದ್ಧಳು.  ಅದೇ ರೀತಿ ಈಗಲೂ ಸೃಷ್ಟಿಸಿದ್ದಾಳೆಂದು ತಿಳಿಯಬೇಕು.

ಉತ್ತಮ ಮಕ್ಕಳನ್ನು ಪಡೆಯಲು   ಪಾರ್ವತಿ ಪರಮೇಶ್ವರರನ್ನು ಸೇವಿಸಿ ಪಡೆಯಬೇಕು.  ಜಗನ್ನಾಥದಾಸರು ಹರಿಕಥಾಮೃತಸಾರದಲ್ಲಿ  “ಪಿನಾಕಿ ಭಾರ್ಯಾತನುಜ ಮೃದ್ಭವ” ಎಂದಿದ್ದಾರೆ.

 

 ಬ್ರಹ್ಮವೈವರ್ಥ ಪುರಾಣ ರೀತ್ಯಾ ಗಣಪತಿಯು ಜನನ ವೃತ್ತಾಂತ : –

ಪಾರ್ವತಿ ತನಗೆ ಮಕ್ಕಳ ಪಡೆಯಲು ಶ್ರೀಹರಿಯ ಕುರಿತು ತಪಗೈದಳು.  ಒಮ್ಮೆ ಶಿವಪಾರ್ವತಿಯರು ಏಕಾಂತದಲ್ಲಿರಲು, ಕೆಲವು ಋಷಿಗಳು ಆಗಮಿಸಿದರು.  ಪಾರ್ವತಿ ಬಂದು ಋಷಿಗಳಿಗೆ ಆತಿಥ್ಯ ಭಿಕ್ಷೆ ನೀಡಲು ಹೋದಾಗ ಶಿವನ ವೀರ್ಯ ನೆಲದ ಮೇಲೆ ಬಿದ್ದಾಗ ಜನಿಸಿದ ಮಗುವೇ ಗಣಪತಿ.

ಗಣಪತಿಗೆ ಆನೆಮುಖ ಬಂದಿದ್ದು .  ಇಲ್ಲಿಯೂ ಎರಡು ಪುರಾಣದಲ್ಲೂ ವ್ಯತ್ಯಾಸವಿದೆ.

ಸ್ಕಾಂದ ಪುರಾಣ ರೀತ್ಯಾ – ಪಾರ್ವತಿ ಸ್ನಾನಕ್ಕೆ ಹೋಗುವ ಮುನ್ನ ಗಣಪತಿಯನ್ನು ಬಾಗಿಲಲ್ಲಿ ನಿಲ್ಲಿಸಿ ಹೋಗಿರುತ್ತಾರೆ.  ಶಿವ ಬಂದಾಗ ಗಣಪತಿ ತಡೆಯುತ್ತಾನೆ. ಕೋಪಗೊಂಡ ಶಿವನು ಅವನ ತಲೆ ಕಡಿಯಲು, ಪಾರ್ವತಿ ಸ್ನಾನಗೃಹದಿಂದ ಬಂದು ನಡೆದುದನ್ನು ಅರಿತು, ಶಿವನಿಗೆ ಮಗನನ್ನು ಉಳಿಸಲು ಕೋರಲು, ಶಿವನು ತನ್ನ ಮಗನಿಗಾಗಿ ಪರಿತಪಿಸಿದ. ತನ್ನ ಮೃತ್ಯುವಿಗೆ “ಯಾರು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿಹರೋ  ಅವರು ತಲೆಯ ತನ್ನಿರಿ” ಎನ್ನಲು ಉತ್ತರ ದಿಕ್ಕಿಗೆ ಮಲಗಿದ್ದ ಆನೆಯ ತಲೆಯನ್ನು ತರಲು ಶಿವನು ಅದನ್ನು ಗಣಪತಿಗೆ ಜೋಡಿಸಿ ಜೀವತುಂಬಿದನು.

ಮೂಷಿಕವಾಹನ ಗಣಪ –
ಕ್ರೌಂಚನೆಂಬ ಗಂಧರ್ವನಿರುತ್ತಾನೆ. ಅವನು ಒಳ್ಳೆಯ ಹಾಡುಗಾರನಾಗಿರುತ್ತಾನೆ. ಒಂದು ದಿನ ದೇವೇಂದ್ರನ ಸಭೆಯಲ್ಲಿ ತನಗರಿವಿಲ್ಲದೆ ವಾಮದೇವ ಮುನಿಯ ಹೆಬ್ಬರಳನ್ನು ತುಳಿದು, ಅವನಿಂದ ಶಪಿತನಾಗೆ “ಇಲಿ”ಯಾಗಿ ಹುಟ್ಟಿರುತ್ತಾನೆ. ಆದರೆ ಅವನು ಬೆಟ್ಟದಷ್ಟು ದೊಡ್ಡ ಗಾತ್ರವಾಗಿರುತ್ತಾನೆ. ಅವನು ಶಿವನಿಂದ ಅವಧ್ಯತ್ವ ವರವನ್ನು ಪಡೆದಿರುತ್ತಾನೆ. ಆದರೆ ಶಿವ ವರದಿಂದ ಉನ್ಮತ್ತನಾದ ಅವನು ತನ್ನ ಶಕ್ತಿಯಿಂದ ಎಲ್ಲರನ್ನೂ ಹಿಂಸಿಸುತ್ತಿರುತ್ತಾನೆ. ಶಿವನು ಅವನನ್ನು ನಿಗ್ರಹಿಸಲು ಗಣಪನನ್ನು ಕಳಿಸುತ್ತಾನೆ. ಗಣೇಶ ಅವನನ್ನೇ ನಿಗ್ರಹಿಸಿ ತನ್ನ ವಾಹನವನ್ನಾಗಿ ಮಾಡಿಕೊಳ್ಳುತ್ತಾನೆ.

Acharya Madhwa in his Maandookopanishat Bhashya has written –  Sri Ganesha is the aradhaka of Vishwa Taijasa roopa.  Both are Jaagrat and Svapnavaste niyamaka roopa.  – i.e., Vishvambara roopa.  It has 19 heads.  The Central face is Gajamukha, whereas the other 18 faces are human and other faces.  Ganesha was doing the chintana of “Vishvambara roopa” of Srihari.  As such, he got the Gajamukha.

1.  Who is Ganesha or Vinayaka or Ganapathi?  

–     Ganesha is the son of Parvathi – Parameshwara. Vinayaka is the abhimani devata for akaasa (space or sky) – bhootakaasha. He has Mooshika as his vaahana, he has modaka in his hands,   We have to worship Ganapathi as the Srihari’s parivara devate.  We must never worship him as supreme.

 

2.       What is the kakshya of Vinayaka?

Ganapathi is in the 18th Kakshya alongwith Vishwaksena, Sheshashatastaru, Kubera, and Ashwini Devategalu.  Ganapathi was born as “Charudeshna”, the son of Krishna-Rukmini.

 

3.       It is said that Parvathi got Ganapathi  out of her body’s mud.  Is it without the knowledge of Rudra?

 

As per Skanda Purana (Tamasa purana) Parvathi got son out of her body’s mud.  But we must not take the story as it is.  It gives a wrong picture on Parvathi.  When Parvathi created Ganesha out of her body’s mud, does it mean that she had lot of mud in her body, how that much of mud can come to her.  When she was born as “Sati”, the daughter of Daksha prajapathi, she had created fire (agni) out of her body and entered fire.  She only took out some portion of Pruthvi amsha out of her body.

 

Parvathi she herself cannot create a son.  She cannot by herself can give birth to a child.  A Woman without the support and anugraha of a Purusha, cannot produce a child and such things are not found anywhere.    We must understand that Parvathi created Vinayaka only out of the grace, anugraha, and support of her husband Rudra, but not of her own power.   Sri Jagannathadasaru says “ಪಿನಾಕಿ ಭಾರ್ಯಾತನುಜ ಮೃದ್ಭವ” (pinaki bhaaryatanuja mrudbhava”.

 

As per Brahma Vaivartha Purana (Rajasa purana)the birth of Ganesha is different – It goes on like this. :-

Parvathi wanted to have a child and did the penance to Srihari, who blessed her with her desire.

Once Shiva – Parvathi were together (in ekaantha) and Shiva was about to discharge his Veerya in her.  By that time some sages came and sought Bhiksha.  Parvathi left Shiva in the middle and went to arrange for the Bhiksha of the sages.  In the meantime, the Veerya in Shiva which should have been deposited in Parvathi fell on the ground, and a handsome boy was born.  That boy was none other than Ganapathi.    So, Ganapathi was born with the anugraha of Shiva only.

Note –  Here both the puranaas are written by Sri Vedavyasaru only,  one is a tamasa purana and the other a rajasa purana.    The Skanda purana on Ganapathi seems to be mohaka purana.

 

4.       How Vinayaka got the head of the elephant?

Here also two versions –

As per Skanda Purana – which is a famous story – Parvathi went to take bath and installed Ganapathi as the security.  Shiva came with thirsty and was about to enter the house, whom Ganapathi stopped.  Shiva out of anger, removed the head of Ganapathi.  When Parvathi came out she saw the dead son and begged Shiva to give life to him.   Shiva in turn, then realised that Ganapathi was his son only, and ordered his servants to bring the head of anyone who is lying with the head towards North Direction.    The servants saw no one sleeping with head towards North and found an elephant sleeping so.  They cut off the head of that elephant and gave it to Shiva, who placed on the body of Ganapathi and brought back to life.

As per Brahma Vaivartha Puranait is a different story –  Ganapathy was very handsome.   Once Parvathi arranged for janmotsava of Ganapathi.  All gods, Rushees, Munees wanted to have his darshana.   Soorya was very much interested in seeing Ganapathi.  He didn’t bring Shani, as he knew that his drushti may harm the child.     But somehow Shani also came to Kailasa.  Shiva warned Parvathi to keep  Ganapathi, safe from the eyes of Shani.  But Parvathi ignored Shiva’s words.    Everybody came to Kailasa to have his darshana and were praising the Gananayaka.  Parvathi was very much happy at her son.  After all gods came, Shanaischara, who had come to Kailasa was hesitating to see Ganapathy and was sitting out.  Parvathi realizing this asked Shani to come and have the darshana of Ganapathy.  Shani told that he had a curse from his wife that if he sees anybody directly his head would be cut off.   (Once Shani was doing Dhyana.  At that time his wife, daughter of Chitraratha, came in front of him, but Shani who was in dhyana did not see her at all.  So she cursed him that whoever he sees directly would get his head cut off).

Parvathi compels Shani to see Ganapathy, which he agreed and sees him.  As soon as he saw him directly, Ganapathy’s head was cut. Parvathi now repented for having forced Shani to see his son and she was crying.  As such Ganapathy lost his head.

Parvathi prayed Srihari who immediately rushed there.  Srihari went and removed the head of an elephant which was sleeping head faced towards North.

5 .       Why Srihari brought the head of the elephant and placed it on Ganapathy –

As per Brahma Vaivartha Purana –

Once Doorvasa sage gave the nirmalya of Srihari to Indra, the god of Heaven.  Indra in turn put it on the head of the elephant, which threw and touched with its legs.  As such, having neglected Nirmalya of Srihari Indra got so many problems and he had to loose his power also.  Ultimately after Samudra Mathana, after getting Amrutha, Devendra got back his power.  Here, that elephant which touched the nirmalya of Srihari with its legs got the sin.  As such, it had to be punished.  Srihari removed the head of that elephant and placed it on Ganapathy.   Further, that elephant was lucky to have the sparsha of Harinivedita nirmalya and as such, its head could become the head of Ganapathy.

6.       Naming ceremony of Ganapathy – Parvathi requested Srihari to name the child – So, Srihari himself gave 8 names –

  • Vignesha – as he is the pariharaka of obstacles.
  • Ganesha – as he is the head of Ganaas,
  • Heramba – as he fought with Shiva
  • Gajanana – as he has the face of elephant (Gajakarna)
  • Lambodara – as he has long udara
  • Shoorpakarna – as he has broad ears
  • Vinayaka –  as he is always immersed in the dhyana of Srihari
  • Ekadanta – as he has one tusk

7.       Why Ganapathy lost of his “danta” and became “Ekadanta” –

As per Skanda purana – Once Ganapathy was sitting on his vehicle, the rat and moving.  Suddenly one snake passed and the rat on seeing the snake,  got fear and shaked, Vinayaka who was sitting on the rat fell.  Chandra who saw this laughed at Ganesha.  Ganapathy got angry at Chandra,  he removed one of his danta and threw at him.

As per Brahma Vaivartha purana –

Jamadagni, the father of Parashurama, was killed by Karthaveeryarjuna.  Parashurama got angry and wanted to kill him.  At this time, the gods and rushees told that Karthaveeryarjuna is blessed with the boon and as such, he has to obtain vidya from Shiva to enable him to kill Karthaveeryarjuna.  Parashurama, the incarnation of Srihari, loka reethya went to Shiva for learning Shastra vidya (weapon vidya) with Shiva. ( Here we must noteShiva did the samarpana of shastra vidya to Parashurama).  After killing Karthaveeryarjuna, Parashurama again returned and wanted to do the samarpana of the killing of Karthaveeryarjuna to his guru (loka reethya).    Ganapathy who was standing in front of Kailasa stopped Parashurama telling that his parents are in Ekantha.  Parashurama insisted to go inside.  Ganapathy told that him if he wants to go inside, he has to fight with him and go inside.  Parashurama pretended angry and took his weapon and was about to throw at Ganapathy.  Now, Ganapathy realizing his mistake repented and begged to remove one of his tooth (danta) as a punishment for having prevented him from entering.  Parashurama removed that Danta (tooth) of Ganapathy .  As such, Ganapathy is having only one danta – Ekadanta. 

8.       What is the importance of Bhadrapada Shudda Chaturthi ? 

ಭಾದ್ರಪದ ಶುದ್ಧ ಚತುರ್ಥಿ ದಿನ ಗಣಪತಿಗೆ ಮರುಜನ್ಮ ಬಂದ ದಿನ ಅಂದರೆ ಗಣಪತಿಗೆ ಆನೆಯ ತಲೆಯ ಜೋಡಿಸಿದ ದಿನವೆಂದು ಹೇಳುತ್ತಾರೆ.  ಶಿವ ಗಣಪನಿಗೆ ಅನುಗ್ರಹಿಸುತ್ತಾನೆ – ಯಾರು ಯಾವುದೇ ಪೂಜೆಯಾಗಲಿ, ಕೆಲಸವಾಗಲಿ, ವಿವಾಹವಾಗಲಿ, ಶುಭಕಾರ್ಯಗಳಾಗಲಿ ಮಾಡುವ ಮುಂಚೆ ವಿಘ್ನೇಶ್ವರನನ್ನು ಪೂಜಿಸಿದರೆ, ಅವರ ಕಾರ್ಯಗಳಲ್ಲಿ ಯಾವುದೇ ವಿಘ್ನಗಳು ಬರುವುದಿಲ್ಲ ಎಂದು ವರವನ್ನು ಕೊಟ್ಟಿದ್ದಾನೆ.

It is the day on which Ganapathy had his rebirth – i.e., the day on which he got the elephant’s head.  Further, Shiva blessed him that before starting any new work, agriculture, wedding, or any function, one must do the pooja of Vigneshwara so that there will not be any obstacles in completion of that work and that it would be completed confortably.  ಗಣೇಶನಿಗೆ ಬೆಲ್ಲದ ಭಕ್ಷ್ಯಗಳು, ಕಬ್ಬು, ಗರಿಕೆ, ಕೆಂಪುಬಣ್ಣದ ಹೂವುಗಳು, ರಕ್ತವಸ್ತ್ರ, ಇವು ಪ್ರಿಯ.  ಗಣೇಶನಿಗೆ ತುಳಸಿಯ ಶಾಪವಿರುವುದರಿಂದ, ತುಳಸಿಯಿಂದ ಅರ್ಚಿಸಬಾರದು.

9.       Why we must not see Chandra on Bhadrapada Shudda Chaturthi – 

ಒಮ್ಮೆ ಗಣಪನು ತನ್ನ ವಾಹನವಾದ ಮೂಷಿಕನ ಮೇಲೆ ಕುಳಿತು ಹೋಗುತ್ತಿದ್ದಾಗ, ಒಂದು ಹಾವು ಇಲಿಯ ಹತ್ತಿರ ಹಾದು ಹೋಯಿತು.  ಇಲಿ ಆ ಹಾವನ್ನು ನೋಡಿ ಹೆದರಿ ಅಲ್ಲಾಡಿದಾಗ ಗಣಪತಿಯು ಕೆಳಗೆ ಬಿದ್ದನು. ಗಣಪತಿಯ  ಕೈಲಿದ್ದ ಲಾಡು ಕೆಳಗೆ ಬಿದ್ದಿತು ಮತ್ತು ಸಮೀಪದಲ್ಲಿದ್ದ ಸರ್ಪವನ್ನು ಗಣೇಶನು ತನ್ನ ಸೊಂಟಕ್ಕೆ ಸುತ್ತಿಕೊಂಡನು.  ಇದನ್ನು ನೋಡಿದ ಚಂದ್ರನು ಜೋರಾಗಿ ನಗಲು, ಗಣೇಶನು ಚಂದ್ರನಿಗೆ ಶಪಿಸಿದನು “ಯಾರೂ ನಿನ್ನನ್ನು ನೋಡದಿರಲಿ” ಎಂದು.   ಆಗ ಪಶ್ಚಾತಾಪಗೊಂಡ ಚಂದ್ರನು ಗಣೇಶನ ಬಳಿ ಕ್ಷಮೆ ಯಾಚಿಸಲು, ತನ್ನ ಶಾಪವನ್ನು ಸಂಕುಚಿತಗೊಳಿಸಿದ ಗಣಪನು “ನನ್ನ ದಿನವಾದ ಭಾದ್ರಪದ ಶುದ್ಧ ಚತುರ್ಥಿಯಂದು ಯಾರೂ ನಿನ್ನನ್ನು ನೋಡದಿರಲಿ, ನೋಡಿದರೆ ಅವರಿಗೆ ವೃಥಾ ಅಪವಾದ ಬರಲಿ” ಎಂದು.     ಇಂತಹ ಶಾಪವನ್ನು ಶ್ರೀಕೃಷ್ಣ ಪರಮಾತ್ಮನೂ ಸ್ವೀಕರಿಸಿ ಗಣಪನನ್ನು ಅನುಗ್ರಹಿಸಿದ್ದಾನೆ.   

As already informed once Ganapathy was sitting on his chariot rat (mooshika Vahana Ganapathy) after eating heavy food on Bhadrapada Shudda Chaturthi.  The rat saw a snake passing nearby and the rat become unconscious on seeing the snake and fell down.  Ganesha sitting on the rat fell down on the ground.  The sweet balls which Ganesha had in his hand fell on the ground and Ganesha took it and put them again in his belly.  Ganesha took the snake which was moving and tied to his belly as a belt.  Seeing the mischievous actions of Ganesha, Chandra laughed in the sky.  Ganesha felt it as disrespect to him by Chandra, and cursed him that “no one shall see Chandra in future”.  With this Chandra repented and came down and did the prarthana to Ganesha for pardon.

Note – Chandra is in the 12th Kakshya whereas Ganapathi is in the 18th Kakshya.  How can he accept the curse by Ganapathi?  –  Chandra on being hit by Ganesha, understood and saw that it is not mere Ganesha, but actually paramathma, the Vishwambara roopa of Srihari and sought apology from paramathma present in Ganesha. 

Then Ganesha was convinced and reduced the curse that Chandra should decrease day by day in Krishna paksha.  Further, let no one shall see Chandra on Bhadrapada Shudda Chaturthi day and that who ever see Chandra shall have “mistake or misunderstanding and shall have some blame”. 

ಸ್ಯಮಂತಕೋಪಾಖ್ಯಾನ – 

ನೈಮಿಷಾರಣ್ಯದಲ್ಲಿ ಒಮ್ಮೆ ಸೂತಪುರಾಣಿಕರನ್ನು ಶೌನಕಾದಿಗಳು ಗಣಪತಿಯ ಕಥೆಯನ್ನು ಹೇಳಿದಾಗ, ಅವರು ಹೇಳಿದರು – ಪೂರ್ವದಲ್ಲಿ ಶ್ರೀಕೃಷ್ಣ ಪರಮಾತ್ಮನೇ ತನಗೆ ಬಂದ ಅಪವಾದವನ್ನು ಪರಿಹರಿಸಿಕೊಳ್ಳಲು ಈ ವ್ರತವನ್ನು ಮಾಡಿದನೆಂದರು.  ಆಗ ಶೌನಕರು ಪ್ರಶ್ನಿಸುತ್ತಾರೆ – ಜಗನ್ನಿಯಾಮಕನಾದ ಶ್ರೀಕೃಷ್ಣನಿಗೆ ಅಪವಾದವೇ? ಅದು ಹೇಗೆ ಸಾಧ್ಯ? ಅದನ್ನು ವಿವರಿಸಿ ಹೇಳಲು ಬಯಸಿದಾಗ ಸೂತರು ಹೇಳುತ್ತಾರೆ –

ಭಾದ್ರಪದ ಚತುರ್ಥಿಯಂದು ಶ್ರೀ ಕೃಷ್ನನು ಚಂದ್ರದರ್ಶನವನ್ನು ಮಾಡಿದ್ದರಿಂದ ಸ್ಯಮಂತಕ ಮಣಿಗಳ್ಳನೆಂಬ ಅಪಖ್ಯಾತಿಗೆ ಗುರಿಯಾದನು.  ಇಲ್ಲಿ ಗಮನಿಸಬೇಕಾದ ವಿಷಯ.  ಪರಮಾತ್ಮನಿಗೆ ನಮ್ಮಂತೆ ಯಾವ ದೋಷವೂ ಇಲ್ಲ, ಅಪವಾದವೂ ಇಲ್ಲ.  ಆದರೆ ಲೋಕದ ನಿಯಮದಂತೆ ತಾನು ಭೂಲೋಕದಲ್ಲಿ ಅವತರಿಸಿರುವುದರಿಂದ ಸಾಮಾನ್ಯ ಜನರಂತೆ ಅಸುರಜನ ಮೋಹನಾರ್ಥ ಅಪವಾದ ಹೊತ್ತನು.

ಒಮ್ಮೆ ಬ್ರಹ್ಮದೇವರು ಗಣಪತಿಗೆ ಅಣಿಮಾದಿ ಅಷ್ಟಸಿದ್ಧಿಗಳನ್ನೂ ಅನುಗ್ರಹಿಸಿದರು.  ಹೀಗೆ ಅನುಗ್ರಹೀತನಾದ ಗಣಪತಿಯು ಸತ್ಯಲೋಕದಿಂದ ಚಂದ್ರಲೋಕಕ್ಕೆ ಬರುತ್ತಿರುವಾಗ ಎಡವಿ ಬಿದ್ದನು.  ಇದನ್ನು ನೋಡಿದ ಚಂದ್ರನು ಅಪಹಾಸ್ಯ ಮಾಡುತ್ತಾ ನಕ್ಕನು.  ಈ ಸಂದರ್ಭದಲ್ಲಿ ಚಂದ್ರನಿಗೆ ತಾನೇ ಅತಿ ಸುಂದರನೆಂಬ ಅಹಂಕಾರವೂ ಕಾರಣವಾಗಿತ್ತು.  ಈ ಅಪಹಾಸ್ಯವನ್ನು ನೋಡಿದ ಗಣಪತಿಯು ಕುಪಿತನಾಗಿ  ಚಂದ್ರನಿಗೆ ಶಾಪವಿತ್ತನು “ನೀನು ಅತ್ಯಂತ ಸುಂದರನೆಂಬ ಅಹಂಕಾರದಿಂದ ನನಗೆ ಅಪಹಾಸ್ಯ ಮಾಡಿರುವೆ.  ಇಂದಿನಿಂದ ನಿನ್ನನ್ನು ಜನರು ನೋಡುವುದೇ ಬೇಡ, ಅಕಸ್ಮಾತ್ ನೋಡಿದರೆ ಅವರಿಗೆ ಸುಳ್ಳು ಅಪವಾದ ಬರಲಿ” ಎಂದು.  ಆಗ ತನ್ನ ತಪ್ಪಿಗೆ ಪಶ್ಚಾತಾಪಗೊಂಡ ಚಂದ್ರನು ಗಣಪತಿಯನ್ನು ಸ್ತುತಿಸಿದನು –

ಪ್ರಸೀದ ದೇವೇಶ ಜಗನ್ನಿವಾಸ
ಗಣೇಶ ಲಂಬೋದರ ವಕ್ರತುಂಡ |
ವಿರಿಂಚಿ ನಾರಾಯಣ ಪೂಜ್ಯಮಾನ
ಕ್ಷಮಸ್ವ ಮೇ ಗರ್ವಕೃತಂ ಚ ಹಾಸ್ಯಂ |
ಆಗ ಸಂತುಷ್ಟನಾದ ಗಣಪತಿಯು ತನ್ನ ಶಾಪವನ್ನು ಸಂಕುಚಿತಗೊಳಿಸಿದನು – “ಯಾರು ಚಂದ್ರನನ್ನು ಗಣಪತಿಯ ದಿನವಾದ ಭಾದ್ರಪದ ಶುದ್ಧ ಚತುರ್ಥಿಯಂದು ನೋಡುತ್ತಾರೋ ಅವರಿಗೆ ಮಿಥ್ಯಾಪವಾದ ಬರಲಿ. ಬೇರೆ ದಿನ ನೋಡಲಡ್ಡಿಯಿಲ್ಲ”.

ಅಥವಾ ಭಾದ್ರಪದ ಶುದ್ಧ ದ್ವಿತೀಯದಂದು ಬಿದಿಗೆ ಚಂದ್ರನನ್ನು ನೋಡಿದರೂ ಕೂಡ ಆ ಅಪವಾದದಿಂದ ಮುಕ್ತಿಯಿದೆ.

ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರನನ್ನು ನೋಡಿದರೆ ಅಪವಾದ ತಪ್ಪದು.  ಆದ್ದರಿಂದ ಅಕಸ್ಮಾತ್ ಚಂದ್ರನನ್ನು ನೋಡಿದರೆ, ಅದರ ಪರಿಹಾರಾರ್ಥವಾಗಿ ಈ ಶ್ಲೋಕವನ್ನು ಪಠಿಸಿದರೆ , ಅಪವಾದದಿಂದ ಪರಿಹಾರವಾಗುವುದೆಂದು ವರವಿದೆ.

ಪರಮಾತ್ಮನ ಭಕ್ತನಾದ ಸತ್ರಾಜಿತನು ಒಮ್ಮೆ ಸೂರ್ಯಮಂಡಲಾಂತರ್ಗತನಾದ ಸೂರ್ಯನಾರಾಯಣನನ್ನು ತಪಿಸಿ, ಅವನಿಂದ ಸ್ಯಮಂತಕಮಣಿಯನ್ನು ಪಡೆದನು.  ಸೂರ್ಯನು ಆ ಮಣಿಯನ್ನು ಸತ್ರಾಜಿತನಿಗೆ ಕರುಣಿಸುವಾಗ ಅಶುಚಿಯಲ್ಲಿ ಇದನ್ನು ಧರಿಸಿದರೆ ಅದು ಒಲಿಯದೆಂದು ಹೇಳಿದ್ದನು. ಸತ್ರಾಜಿತನು ವಿಷ್ಣುಭಕ್ತನಾಗಿದ್ದರೂ ಕೂಡ ಲೋಭತನವನ್ನು ಬಿಟ್ಟಿರಲಿಲ್ಲ. ಅವನ ಲೋಭತನವನ್ನು ಹೋಗಲಾಡಿಸಲೆಂದೇ ಶ್ರೀ ಕೃಷ್ನನು ತನಗೆ ಆ ಸ್ಯಮಂತಕ ಮಣಿ ಬೇಕೆಂದು ಸತ್ರಾಜಿತನಲ್ಲಿ ಕೇಳಿದಾಗ, ಅವನು ಅದನ್ನು ಕೊಡದೆ ತನ್ನ ಸಹೋದರನಾದ ಪ್ರಸೇನನಿಗೆ ನೀಡಿದ್ದನು.  ಪ್ರಸೇನನಾದರೋ ತಾನು ಭೇಟೆಯಾಡಲು ಹೋದಾಗ ಅಶುಚಿಯಾಗಿದ್ದಾಗ ಅದನ್ನು ಧರಿಸಿದ್ದನು.  ಆಗ ಒಂದು ಸಿಂಹವು ಪ್ರಸೇನನನ್ನು ಕೊಂದು ಸ್ಯಮಂತಕಮಣಿಯನ್ನು ಕಚ್ಚಿಕೊಂಡು ಹೋಗುತ್ತಿತ್ತು. ದಾರಿಯಲ್ಲಿ ಜಾಂಬವಂತನೆಂಬ ಕರಡಿಯು ಆ ಸಿಂಹವನ್ನು ಕೊಂದು ಮಣಿಯನ್ನು ತನ್ನ ಗುಹೆಯಲ್ಲಿ ಮಗಳ ಉಯ್ಯಾಲೆಯಲ್ಲಿ ಕಟ್ಟಿದನು.

ಅಷ್ಟರಲ್ಲಿ ಸತ್ರಾಜಿತನಾದರೋ ತನ್ನ ತಮ್ಮನು ವಾಪಸ್ಸು ಬರದಿರುವುದನ್ನು ನೋಡಿ, ಹಿಂದೆ ಕೃಷ್ಣನು ಸ್ಯಮಂತಕ ಮಣಿಯನ್ನು ಹಿಂದೆ ಕೇಳಿದ್ದುದರಿಂದ ಅವನೇ ಈಗ ತನ್ನ ತಮ್ಮನನ್ನು ಕೊಂದು ಅಪಹರಿಸಿದ್ದಾನೆಂದೆ ಎಲ್ಲಾ ಕಡೆ ಪ್ರಚಾರ ಮಾಡಿದನು.  ಕೃಷ್ಣನಾದರೋ ಒಮ್ಮೆ ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರದರ್ಶನ ಮಾಡಿದ್ದನು.  ಸರ್ವದೋಷ ದೂರನಾದ, ಸಕಲರಿಗೂ ನಿಯಾಮಕನಾದ ಪರಮಾತ್ಮನಿಗೆ ಅಪವಾದವೇ? ಇಲ್ಲ.  ತಾನೇ ಗಣಪತಿಯ ಮಾತನ್ನು ಸತ್ಯವಾಗಿಸಲು, ಜಗನ್ನಾಟಕ ಸೂತ್ರದಾರಿಯಾದ ತಾನೇ ಲೋಕ ಶಿಕ್ಷನಾರ್ಥ ಅಪವಾದವನ್ನು ಸ್ವೀಕರಿಸಿದನು.  ಮತ್ತು ಅದರ ಪರಿಹಾರಕ್ಕಾಗಿ ಸ್ಯಮಂತಕವನ್ನು ಹುಡುಕಿಕೊಂಡು ಹೊರಟನು.  ಕಾಡಿನಲ್ಲಿ ಸಿಂಹದಿಂದ ಹತನಾದ ಪ್ರಸೇನನನ್ನೂ,  ಕರಡಿಯಿಂದ ಹತವಾದ ಸಿಂಹವನ್ನೂ ನೋಡಿ, ಕರಡಿಯ ಹೆಜ್ಜೆ ಗುರುತು ಹಿಡಿದು ಗುಹೆಯೊಳಗೆ ಪ್ರವೇಶಿಸಿದನು.  ಗುಹೆಯಲ್ಲಿ ಜಾಂಬವಂತನ ಮಗಳಾದ ಜಾಂಬವತಿಯು ಆ ತೊಟ್ಟಿಲಲ್ಲಿದ್ದ ಮಗುವಿಗೆ ಹೇಳುತ್ತಿದ್ದಳು –

ಸಿಂಹ: ಪ್ರಸೇನಮವಧೀತ್,
ಸಿಂಹೋ ಜಾಂಬವತಾ: ಹತ: |
ಸುಕುಮಾರಕ ಮಾ ರೋದೀ:
ತವ ಹ್ಯೇಷ: ಸ್ಯಮಂತಕ: ||

ಅರ್ಥ – ಸಿಂಹವು ಪ್ರಸೇನನನ್ನು ಕೊಂದಿತು, ಸಿಂಹವನ್ನು ಜಾಂಬವಂತನೆಂಬ ಕರಡಿಯು ಸಂಹರಿಸಿತು.  ಹೇ ಸುಕುಮಾರ ಅಳಬೇಡ, ಈ ಸ್ಯಮಂಟಕಮಣಿಯು ನಿನಗಾಗಿ ಜಾಂಬವಂತನಿಂದ ತರಲ್ಪಟ್ಟಿದೆ ಎಂದು ಹಾಡುತ್ತಿದ್ದಳು.   ಗುಹಾ ಪ್ರವೇಶಿಸಿದ ಕೃಷ್ಣನನ್ನು ನೋಡಿದ ಜಾಂಬವತಿಯು ಜೋರಾಗಿ ಕಿರುಚಿದಳು.  ಆಗ ಅಲ್ಲಿಗೆ ಬಂದ ಜಾಂಬವಂತನು ಕೃಷ್ನನೊಂದಿಗೆ ೨೮ ದಿನಗಳ ಕಾಲ ಯುದ್ಧಮಾಡಿದನು.  (ತಾನೇ ಹಿಂದೆ ರಾಮಾವತಾರ ಕಾಲದಲ್ಲಿ ಶ್ರೀರಾಮನೊಂದಿಗೆ ಪ್ರಾರ್ಥಿಸಿ ಯುದ್ಧಭಿಕ್ಷೆಯನ್ನು ನೀಡಬೇಕೆಂದು ಕೇಳಿದ್ದನು.  ಅದನ್ನು ಶ್ರೀಹರಿಯು ಕೃಷ್ಣಾವತಾರ ಕಾಲದಲ್ಲಿ ಅನುಗ್ರಹಿಸುವೆ ಎಂದಿದ್ದನು).  ಕೃಷ್ಣನೊಂದಿಗೆ ಅಷ್ಟು ದೀರ್ಘಕಾಲ ಯುದ್ಧ ಮಾಡಿ ಸೋತು ನಿಷ್ಚೇತಿತನಾದಾಗ ತನ್ನನ್ನು ಸೋಲಿಸಲು ಯಾರಿಗೂ ಸಾಮರ್ಥ್ಯವಿಲ್ಲದಿರುವಾಗ, ಬಹುಶ: ಇವನು ರಾಮಚಂದ್ರನೋ ಎಂಬ ಅನುಮಾನ ಬಂದು, ರಾಮಸ್ಮರಣೆ ಮಾಡಲು, ಆಗ ಶ್ರೀಕೃಷ್ಣನಲ್ಲಿಯೇ ರಾಮಚಂದ್ರನನ್ನು ಕಂಡು, ತನ್ನ ತಪ್ಪಿನ ಅರಿವಾಗಿ ಪ್ರಾಯಶ್ಚಿತ್ತಕ್ಕಾಗಿ ತನ್ನ ಮಗಳಾದ ಜಾಂಬವತೀದೇವಿಯನ್ನು ಮತ್ತು ಸ್ಯಮಂತಕಮಣಿಯನ್ನೂ ಕೊಟ್ಟು ಕಳಿಸಿದನು.

ಶ್ರೀಕೃಷ್ಣನು ಹಿಂತಿರುಗಿ, ನಂತರ ಯಾದವರ ಸಭೆಯಲ್ಲಿ ಸತ್ರಾಜಿತನಿಗೆ ನಡೆದ ಸಕಲ ವೃತ್ತಾಂತವನ್ನೂ ತಿಳಿಸಿ, ಸ್ಯಮಂತಕಮಣಿಯನ್ನೂ ಹಿಂತಿರುಗಿಸಿದನು.  ವೃಥಾ ಅಪವಾದವನ್ನು ಶ್ರೀಕೃಷ್ಣನ ಮೇಲೆ ಮಾಡಿದ್ದರಿಂದ ನೊಂದು, ತನ್ನ ಪಾಪವನ್ನು ಕಳೆಯುವ ಸಲುವಾಗಿ ತನ್ನ ಪುತ್ರಿಯಾದ, ಸಾಕ್ಷಾತ್ ಭೂದೇವಿಯ ಅವತಾರಳಾದ ಸತ್ಯಭಾಮೆಯನ್ನು ಕೊಟ್ಟು ಮದುವೆ ಮಾಡಿದನು.

10.   Worshipping of Ganapathy as Sarvottama is wrong –

Vinayaka is the son of Rudra.  For those who have tamasa gunas, Vinayaka in order to make them to a fierceful states, makes them to do Sankashti Vratha, and gives sukha, which is the reason for hell later.    Some people are performing Sankashti Vratha on every Krishna Paksha Chaturthi day.  Ganesha blesses them fully or partially and then pushes them to hell.  Because those who perform such vratas are basically tamasic souls.  Because – They pray that Ganapathy is Sarvottama.  They prey that Ganapathi is the Creater, protector and destroyer, etc.    As such, Madhwas are not supposed to do Sankashti Vratha.

11.   gaNaanaam pati: = dEvagaNaanaam pati: = hari: =    Actually the word “Ganapathy” means Srihari only.  All Vedaas, all shabdhaas, vaakyaas, whether pourusheya or apouresheya, all speak, sing only the glorious of Srihari only.

ಗಣಾನಾಂ ಪತಿ: – ದೇವಗಣಾನಾಂ ಪತಿ; = ಹರಿ:. — ಗಣಪತಿ ಶಬ್ದವು ಮುಖ್ಯವಾಗಿ ಶ್ರೀ ಹರಿಯನ್ನು ಹೇಳುತ್ತದೆ. ಎಲ್ಲಾ ಶಬ್ದಗಳೂ, ವೇದಗಳೂ, ವಾಕ್ಯಗಳೂ ಮುಖ್ಯವಾಗಿ ಹರಿಯನ್ನೂ ನಂತರ ಬೇರೆ ದೇವತೆಗಳನ್ನು ಉದ್ದೇಶಿಸಿ ಹೇಳುತ್ತದೆ.

12.   Worshipping of Ganapathy by greater gods :

  • In order to kill daithyaas, Devendra did pooja of Ganapathi
  • While constructing the bridge to Lanka, Sri Ramachandra did the pooja of Ganapathi.
  • Yudhistira did the pooja of Ganapathi as per the orders of Krishna.
  • Shiva himself did the pooja of Ganapathy before starting war with Tripurasura.
  • Krishna also did the pooja of Ganapathy

Here all the gods mentioned are superior to Ganapathi in Kakshya.  All of them did the pooja only loka reethya and to bless Ganapathy.   Ramachandra did the pooja to Ganapathi being the pooja of himself his own Vishwambararoopa which was in Ganapathi.  Dharmaraja did pooja of Ganapathi to respect the boons granted by Shiva to Vinayaka and to mislead the wicked souls also.

13.   Vinayaka getting the face of an elephant as per Acharya Madhwa as found in Maandookopanishat Upanishad Bhashya –

Vinayaka getting the face of an elephant is actually based on shruti.  He is very great devotee of Sri Hari, in the roopa of “Vishwambaramurthy”, who controls the waking state and “taijasa” named paramathma who controls the dream state of jeevas.

Bhagavan, the Vaishnara is denoted by the sacred pranava “Omkara”. And is the instigator and controller of Mahalakshmi.  He has four swaroopaas.  In each jeeva, Paramathma resides in four roopaas.  In the waking state, he resides in the right eye.  He has 7 limbs, which means 4 hands, 1 tusk, and 2 legs.   He has 19 faces   The middle one is that of an elephant’s face.  On both sides of that face, there are 9 faces.

Vinayaka was always meditating on this centre face of Vaishnara which is that of an elephant and so by the sruti, he has the face of an elephant.    –  vinayakastu vishwasya dhyaanaat Et gajavaktrataam |

14.   Ganapathi writing Mahabharatha as dictated by Vedavyasa devaru –

Ganapathi is the recipient of mercy from Lord Sri Vedavyasa.  The story goes on that Sri Vedavyasa ordered to Sri Ganapathy to write Mahabharatha to the speed of his dictation.

Original Mahabharata consist of 60 lakhs granthas (Grantha means 32 letters)  Sri Vedavyasa kept 30 lakhs granthas aside, not available to anyone, but only made available to Chaturmukha brahma, Vayu.  Of the remaining 30 lakhs – was split into four portions –

a. 30 lakhs granthas were given to Narada Maharshi to teach the Devataas.

b. In that again another half of that, i.e., 15 lakhs Grantha were taken and given to the sages Asitha, and Devalaru, for teaching Pitru Devategalu.

c. Shukacharya was given 14 lakh granthas for teaching to Gandharvas

d. Final one lakh granthas were made available to Janamejaya Raja by Sri Vaisampayanaru.  Only this final one lakh grantha is now available to us.  This one lakh Grantha (approx 8800 shlokas) is said to be written by Ganapathi and not the entire Mahabharatha.

15. Ravana incident Shiva had given Raavana for Shiva pooja, his athmalinga,  and instructed Ravana that the atmalinga should not be placed on the ground as it would establish itself where placed on earth.On the way, as the Sandhyavandana time arrived,  Ravana  asked Ganesha (in the disguise of a Brahmin boy),  to look after the Athmalinga, (Shiva Idol)  and went for Sandhyavandhana.  (Pl note  – even Ravana, a Daithya was doing Sandhya vandana without fail.  But we are ignoring sandhyavandana for our entertainment) Ganesha told him he could not carry the idol for long time.  Raavana told he will come early.  Ganesha having known of the Athmalinga, he kept it on the ground itself, resulting in Gokarneshwara Athmalinga.

ಗಣೇಶ ಮತ್ತು ರಾವಣ – ಗೋಕರ್ಣ 

ಶಿವ ತನ್ನ ಭಕ್ತನಾದ ರಾವಣನಿಗೆ ತನ್ನ ಆತ್ಮಲಿಂಗವನ್ನೇ ಪೂಜೆಗೆ ಕೊಟ್ಟಿರುತ್ತಾನೆ.  ಅವನಿಗೆ ಯಾವುದೇ ಕಾರಣಕ್ಕೂ ಆತ್ಮಲಿಂಗವನ್ನು ನೆಲದ ಮೇಲೆ ಇಡಬಾರದೆಂದು ಹೇಳಿರುತ್ತಾನೆ.   ರಾವಣ ಸಂಧ್ಯಾವಂದನೆಯನ್ನು ಎಂದೂ ಕಾಲಕ್ಕೆ ತಪ್ಪದೆ ಮಾಡುತ್ತಿದ್ದನು,   ಅವನು ಹೋಗುವಾಗ ದಾರಿಯಲ್ಲಿ ಸಂಧ್ಯಾವಂದನೆಯ ಸಮಯ ಒದಗಲು, ಅಲ್ಲೇ ಇದ್ದ ಬ್ರಾಹ್ಮಣವೇಶದಾರಿ ಗಣಪನಿಗೆ ಶಿವನ ಆತ್ಮಲಿಂಗವನ್ನು ಕೊಟ್ಟು ತಾನು ಸಂಧ್ಯಾವಂದನೆ ಮುಗಿಸಿಕೊಂಡು ಬರುವವರೆಗೂ ನೋಡಿಕೊಂಡಿರಲು ಹೇಳಿ ಹೋಗುತ್ತಾನೆ,  ಗಣೇಶ ಹೇಳುತ್ತಾನೆ, ನನಗೆ ಜಾಸ್ತಿ ಹೊತ್ತು ವಿಗ್ರಹವನ್ನು ಕೈಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ, ಬೇಗ ಬಾ ಎಂದಿರುತ್ತಾನೆ.  ಗಣೇಶ ರಾವಣ ಹೋದ ಸ್ವಲ್ಪ ಹೊತ್ತಿನಲ್ಲೇ ರಾವಣನನ್ನು ಮೂರು ಸಾರಿ ಕೂಗಿ, ಆ ವಿಗ್ರಹವನ್ನು ನೆಲದ ಮೇಲೆ ಇಡುತ್ತಾನೆ, ರಾವಣ ಬರುವತನಕ ಕಾಯುವುದಿಲ್ಲ.   ಆ ಜಾಗದಲ್ಲೇ ಆ ಆತ್ಮಲಿಂಗವು ಹೂಳಲ್ಪಟ್ಟು ಗೋಕರ್ಣೇಶ್ವರ ಆತ್ಮಲಿಂಗವೆಂದು ಪ್ರಖ್ಯಾತವಾಯಿತು.

16.  Worshipping of Ganapathi in streets –  Worshipping of Ganesha is a devata kaarya.  Now a days, it has become a trend to worship Ganapathi everywhere on the streets.   We are following westernised culture in many issues, but atleast in worshipping Gods, let us follow Hindu culture.   The people collect money from friends, and in many cases they goes to all houses to collect fund for Ganesha pooja,  pools the money and installs Ganapathi.  The idol is worshipped with various flowers, and other decorative items.  The people enjoys by dancing, singing arranging Orchestra, and tries to get the blessings of Ganapathi.   In many cases, the people are drinking alcohal and dancing.   How can Vinayaka bless them.      Instead he may curse them.   In earlier days, the pooja of Ganapathi was done with devaranamas, sankeerthanas, archanaas with devotion.  Now it is being done with irrelevant and irritating dance tunes,  how can Ganesha be pleased?  Atleast we, Madhwas should not involve in such an act.  We must avoid participating in such dances on Ganesha festival.  During the period, we can hold Harikatha, upanyaasa, bhajan, yakshagaana, pouranika dramaas,  classical dance,  etc., and uphold our Hindu Tradition.

17. Worshipping of Ganapathi of different shapes –  Ganapathi has a definite shape.  Now a days, the people are creating idols of Ganapathi with innovative ideas.  They are creating Ganapathi in the form of Veerappan, in the form of Narendra Modi, in the form of Saibaba, in the form of Ayyappa, etc……   This is definitely against the culture and Ganapathi will never be please and he will curse instead of blessing.      Ganapathi has to be worshipped in his kakshya only shastra reethya,  but if one is worshipping him in the form of Modi, Ayyappa or Saibaba or others, we are degrading him, which would result in Navavidha dwesha.  There are some section of people who worship him as Sarvottama, which is also against the principle.  He must be worshipped as the Ganapathyantargata Parvathipathi Shivantargatha Bharathiramana Mukyapraanaantargata Vishwambara MurthiyE namaha only.

 

೧೮  ಶ್ರೀ ಜಗನ್ನಾಥದಾಸರ ತತ್ವಸುವ್ವಾಲಿಯಲ್ಲಿ ಸ್ತುತಿಸಲ್ಪಟ್ಟ ಗಣಪತಿ –

ಅಂಬಿಕಾತನಯ ಭೂತಾಂಬರಾಧಿಪ ಸುರಕದಂಭಸಂಪೂಜ್ಯ ನಿರವದ್ಯ |

ನಿರವದ್ಯ ನಿನ್ನ ಪಾದಾಂಬುಜಗಳೆಮ್ಮ ಸಲಹಲಿ

ಭೂತಾಕಾಶದ ಅಭಿಮಾನಿಯೂ, ದೇವಸಮೂಹದಿಂದ ಭಕ್ತಿಯಿಂದ ಪೂಜಿಸಲ್ಪಡತಕ್ಕವನೂ, ನಿರವದ್ಯನೂ ಆದ, ಅಂಬಿಕಾತನಯನೇ ನಿನ್ನ ಪಾದಾಂಬುಜಗಳು ನಮ್ಮನ್ನು ಸಲಹಲಿ.

ಗಜವಕ್ತ್ರ ಷಣ್ಮುಖಾನುಜ ಶಬ್ದಗುಣಗ್ರಹಕ ಭುಜಗಕತಿಸೂತ್ರ ಸುಚರಿತ್ರ |

ಸುಚರಿತ್ರ ತ್ವತ್ಪದಾಂಬುಜಗಳಿಗೆ ಎರಗಿ ಬಿನ್ನೈಪೆ |

ಷಣ್ಮುಖಾನುಜನಾದ, ಶಬ್ದವೇ ಗುಣವಾಗುಳ್ಳ ಆಕಾಶವನ್ನು ಅಧೀನದಲ್ಲಿಟ್ಟುಕೊಂಡಿರುವ ಅಂದರೆ ಆಕಾಶಾಭಿಮಾನಿಯಾದ,  ಸರ್ಪವನ್ನು ಸೊಂಟದಲ್ಲಿ ಬಿಗಿದುಕೊಂಡಿರುವ, ಸುಚರಿತ್ರನಾದ, ಹೇ ಗಜಮುಖನೇ ನಿನ್ನ ಪಾದಪದ್ಮಾಳಿಗೆರಗಿ, ಭಿನ್ನೈಪಿಸುವೆನು

 

ವಿತ್ತಪತಿಮಿತ್ರಸುತ ಭೃತ್ಯಾನುಭೃತ್ಯನ ವಿಪತ್ತುಪಡಿಸುವ ಅಜ್ಞಾನ |

ಅಜ್ಞಾನ ಬಿಡಿಸಿ ಮಮ ಚಿತ್ತಮಂದಿರದಿ ನೆಲೆಗೊಳ್ಳೋ |

ವಿತ್ತಪತಿಯಾದ ಕುಬೇರನ ಮಿತ್ರನಾದ ರುದ್ರದೇವನ ಮಗನಾದ ಗಜಮುಖನೇ, ಭೃತ್ಯಾನುಭೃತ್ಯನಾದ ನನ್ನನ್ನು ವಿಪತ್ತಿಗೆ ಗುರಿ ಮಾಡುವ ಅಜ್ಞಾನವನ್ನು ಪರಿಹರಿಸಿ, ನನ್ನ ಮನವೆಂಬ ಮಂದಿರದಲ್ಲಿ ಸ್ಥಿರವಾಗಿ ವಾಸಿಸು

 

ಕಕುಭೀಶ ನಿನ್ನ ಸೇವಕನ ಬಿನ್ನಪವ ಚಿತ್ತಕೆ ತಂದು ಹರಿಯ ನೆನೆವಂತೆ |

ನೆನೆವಂತೆ ಕರುಣಿಸೋ ಅಕುತಿಲಾತ್ಮಕನೆ ಅನುಗಾಲ |

ಹೇ ಕಕುಭೀಶನೇ (ದಿಗಂತವ್ಯಾಪ್ತವಾದ ಭೂತಾಕಾಶದ ಒಡೆಯನೆ), ನಿನ್ನನ್ನು ಸೇವಿಸುವ ನನ್ನ ಪ್ರಾರ್ಥನೆಯನ್ನು, ಪ್ರಸನ್ನನಾಗಿ, ಭಕ್ತರನ್ನು ಎಂದೆಂದೂ ಕರುಣಿಸು

1 Comment

  1. regarding ganapathy writing 8800 slokas in mahabharatha, where did you took this? actually mahabharatha is bigger than ramayana right

Comments are closed.

Sumadhwa Seva © 2022