|| ಮೊದಲು ನಾವು ಮಾಧ್ವರು | ನಂತರ ನಮ್ಮ ಮಠ || ಮಾಧ್ವರೆಲ್ಲರೂ ಒಂದಾಗಿರಿ | ಯಾವುದೇ ಮಠದ ಯತಿಗಳನ್ನು ನಿಂದಿಸಬೇಡಿ | ಎಲ್ಲ ಮಾಧ್ವ ಮಠಗಳು, ಎಲ್ಲ ಯತಿಗಳೂ ನಮ್ಮವರೆಂದು ಎಲ್ಲರನ್ನೂ ಗೌರವಿಸಿರಿ || ಯತಿ ನಿಂದಕರನ್ನು ಪ್ರೋತ್ಸಾಹಿಸಬೇಡಿ | ಎಲ್ಲ ಮಠಗಳಿಗೂ ಮೂಲ ನಮ್ಮ ಆಚಾರ್ಯ ಮಧ್ವರು ಮಾತ್ರ || | ಮಧ್ವರಾಯರ ಕರುಣೆ ಪಡೆಯದವ ಧರೆಯೊಳಗಿದ್ದರೇನು ಇಲ್ಲದಿದ್ದರೇನು ||

kaveri snaana “ಕಾವೇರಿ ಸ್ನಾನ”

October 18, 2010 6:00 amtoNovember 17, 2010 6:00 am

Kaveri Stotra in Kannadaclick

Kaveri Stotra in Sanskrit – click

(author of Kaveri Stotra – Sri Vidyavachaspathi Tirtharu)

ಶ್ರೀ ಕಾವೇರಿ ಗಂಗಾದಿ ನದಿ ದೇವಿಯರನ್ನು ಹೇಗೆ ನೋಡಬೇಕು?
ನಾವು ಕಾಣುವ  ಮಿಂದುವ ನೀರೇ ಕಾವೇರಿಯೋ, ಗಂಗೆಯೋ, ಯಮುನೆಯೋ ಅಥವಾ ಬೇರೆ ರೂಪವೂ ಇರುತ್ತದೋ  ಎಂದರೆ ೨ ರೂಪವೂ ಉಂಟು.  ಅದರಲ್ಲಿ ನೀರು ಜಡವಾದ ರೂಪ, ಅದಕ್ಕಿಂತ ಭಿನ್ನವಾದ ಮತ್ತೊಂದು ಚೇತನ ರೂಪ, ಇವೆರಡೂ ಪರಮಾದರಣೀಯವಾದವು.  ಅದರಲ್ಲೂ ತಾರತಮ್ಯವುಂಟು.

ಸಾಮಾನ್ಯವಾಗಿ ನಾವು ಕಾವೇರಿ ಇತ್ಯಾದಿ ಸ್ನಾನ ಮಾಡುವಾಗ ಗಂಗಾಸ್ನಾನ ಮಾಡಿದ ಫಲ ಬರುವುದೆಂದು ತಿಳಿದು ಸ್ನಾನ ಮಾಡುತ್ತೇವೆ.  ಆದರೆ ಈ ಕಾವೇರಿಯೇ ಗಂಗೆಯೇ?….    ನಾವು ಕಾಣುವ ಕಾವೇರಿಯಾಗಲೀ, ಯಮುನೆಯಾಗಲೀ, ಗೋದಾವರಿಯಾಗಲಿ, ತುಂಗೆಯಾಗಲೀ ಗಂಗೆಯಲ್ಲ.

ನಾವು ಅನುಸಂಧಾನ ಮಾಡಬೇಕಾದ ವಿಧಾನ -  ಈ ನೀರೇ ಗಂಗೆಯಲ್ಲ, ಅದರಲ್ಲಿ ಸಕಲ ತೀರ್ಥಾಭಿಮಾನಿ ದೇವತೆಗಳೂ ಇರುತ್ತಾರೆ. ಅವರ ಜೊತೆಗೆ ಅವರ ಪತಿಗಳೂ,  ಅವರ ಪತ್ನಿಯರೂ (ಗಂಡು ನದಿಗಳಾದರೆ), ಇದ್ದು, ಅವರೊಳಗೆ ಗಂಗಾ ನದಿಯ ಸಾನ್ನಿಧ್ಯವನ್ನು ಅನುಸಂಧಾನ ಮಾಡಿ, ಆ ಗಂಗಾದೇವಿಯ ಅಂತರ್ಗತನಾದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಕ್ಷೀರಾಬ್ಧಿಶಾಯಿ, ಶ್ರೀ ಲಕ್ಷ್ಮೀನಾರಾಯಣನಿಗೆ ನಮಸ್ಕರಿಸಿ, ಈ ಸ್ನಾನ ನಮಗಲ್ಲ, ನಮಗೊಳಗಿರುವ ಲಕ್ಷ್ಮೀರಮಣನಿಗೆ ಅಭಿಷೇಕ ಎಂದು ಅನುಸಂಧಾನ ಮಾಡಿ, ಶಂಖಮುದ್ರೆಯಿಂದ ನೀರನ್ನು ಪ್ರೋಕ್ಷಿಸಿಕೊಂಡು (ಶಂಖದಲ್ಲಿ ಲಕ್ಷ್ಮಿಯ ಸಾನ್ನಿಧ್ಯವಿರುವುದರಿಂದ – ಶಂಖಮುದ್ರೆಯಿಂದ ಪ್ರೋಕ್ಷಿಸಿಕೊಳ್ಳಬೇಕು. ಅಷ್ಠೇ ಅಲ್ಲ ಪರಮಾತ್ಮನಿಗೆ ಸ್ನಾನ ಮಾಡಿಸಲು ನಮಗೆ ಯೋಗ್ಯತೆ ಇಲ್ಲ, ಆದ್ದರಿಂದ ಅಲ್ಲಿ ಲಕ್ಶ್ಮಿಯನ್ನು ಅನುಸಂಧಾನ ಮಾಡಬೇಕು), ನಂತರ ಸ್ನಾನ ಮಾಡಬೇಕು.

ನದಿಯಲ್ಲಿ ಉಗುಳಬಾರದು, ನದಿಯಲ್ಲಿ ಮಲಮೂತ್ರ ವಿಸರ್ಜನ ಮಾಡಬಾರದು, ಬಟ್ಟೆ ಒಗೆಯಬಾರದು, ಸೋಪು ಹಾಕಿಕೊಳ್ಳಬಾರದು.  ಬೇರೆಯವರು ಮಾಡುತ್ತಾರಲ್ಲ ಅಂತ ಭಾವಿಸಬೇಡಿ – ಅವರಿಗೆ ಸ್ನಾನದ ಮಹತ್ವ ತಿಳಿದಿರುವುದಿಲ್ಲ, ಅವರು ಮಾಡುತ್ತಾರೆ, ನಾವು ಅವರನ್ನು ಅನುಸರಿಸಬಾರದು.  ಸಾಧ್ಯವಾದರೆ ಅವರಿಗೂ ತಿಳಿಹೇಳಬೇಕು.

ನದಿಗೆ ಕಾಲಿಡುವ ಮೊದಲು ನಮ್ಮ ಕೈಕಾಲು ಹೊರಗಡೆ ತೊಳೆದುಕೊಂಡು ಬಂದು ಶುಚಿರ್ಭೂತರಾಗಿ, ಒಮ್ಮೆ ನೀರನ್ನು ಕೈಯಿಂದ ತೆಗೆದುಕೊಂಡು ಪ್ರೋಕ್ಷಿಸಿಕೊಂಡು ನಂತರ ನದಿಯಲ್ಲಿ ನಾವು ಸ್ನಾನಕ್ಕೆ ಇಳಿಯಬೇಕು.

ನದಿಯಲ್ಲಿ ಸ್ನಾನ ಮಾಡುವಾಗ ಎಲ್ಲ ನದಿದೇವತೆಗಳನ್ನೂ ಸ್ಮರಿಸಬೇಕು.

ಗಂಗಾಸಿಂಧುಸರಸ್ವತೀಚ ಯಮುನಾ ಗೋದಾವರೀ ನರ್ಮದಾ |
ಕೃಷ್ಣಾಭೀಮರತೀ ಚ ಫಲ್ಘುಸರಯೋ ಶ್ರೀಗಂಡಕೀ ಗೋಮತೀ |
ಕಾವೇರೀ ಕಪಿಲಾಪ್ರಯಾಗವಿನುತಾ ನೇತ್ರಾವತೀತ್ಯಾದಯೋ |
ನದ್ಯ: ಶ್ರೀಹರಿಪಾದಪಂಕಜಭವಾ: ಕುರ್ವಂತು ನೋರ್ಮಂಗಲಂ ||

ನಂತರ ಒಮ್ಮೆ ನೀರಿನಲ್ಲಿ ಮುಳುಗಿ;

ಅಪವಿತ್ರ: ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |
ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಶುಚಿ: |
ಎಂಬ ಮಂತ್ರದಿಂದ ಪ್ರೋಕ್ಷಿಸಿಕೊಳ್ಳಬೇಕು.

ಸಾಧ್ಯವಾದರೆ ವಾದಿರಾಜ ಗುರುಸಾರ್ವಭೌಮರ
“ತೀರ್ಥಪ್ರಬಂಧ”ವನ್ನು ಒಮ್ಮೆ ಅಧ್ಯಯನ ಮಾಡಿ ಆ ತೀರ್ಥಕ್ಷೇತ್ರದ ಬಗ್ಯೆ ಮಾಹಿತಿಯನ್ನು ತಿಳಿದುಕೊಂಡು ಅವರು ಹೇಳಿದಂತೆ ಅನುಸಂಧಾನ ಮಾಡಬೇಕು.

ಕಾರ್ತೀಕ ಸ್ನಾನ ಸಂಕಲ್ಪ – ಶ್ರೀರಂಗಪಟ್ಟಣದಲ್ಲಿ

ಪ್ರಣಮಸ್ಯ…………………………..ಶ್ರೀ ವಿರೋಧೀನಾಮಸಂವತ್ಸರೇ, ದಕ್ಷಿಣಾಯಣೇ, ಶರದೃತು, ಕಾರ್ತೀಕಮಾಸೇ,………ಪಕ್ಷೇ……ತಿಥೌ, …….ವಾಸರೇ, ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೇರಣೆಯ,……….ಪ್ರೀತ್ಯರ್ಥಂ,ಸಕಲ ಗಂಗಾದಿತೀರ್ಥಾಭಿಮಾನಿ ಸನ್ನಿಧೌ, ಶ್ರೀರಂಗನಾಥ ಸನ್ನಿಧೌ, ಅಶ್ವತ್ಥ ಸನ್ನಿಧೌ, ಕಾರ್ತೀಕ ತುಲಾಮಾಸ ಪ್ರಯುಕ್ತ ಗಂಗಾಸ್ನಾನಮಹಂ ಕರಿಷ್ಯೇ.

ಕಾರ್ತೀಕ ಸ್ನಾನ ಮಂತ್ರ

ಕಾರ್ತೀಕೇಹಂ ಕರಿಷ್ಯಾಮಿ ಪ್ರಾತಸ್ನಾನಂ ಜನಾರ್ಧನ |
ಪ್ರೀತ್ಯರ್ಥಂ ತವ ದೇವೇಶ ದಾಮೋದರ ಮಯಾ ಸಹ ||
ಧ್ಯಾತ್ವಾಹಂ ತ್ವಾಂ ಚ ದೇವೇಶ ಜಲೇಸ್ಮಿನ್ ಸ್ನಾತುಮುದ್ಯತ |
ತವ ಪ್ರಸಾದಾತ್ ಪಾಪಂ ಮೇ ದಾಮೋದರ ವಿನಶ್ಯತು |

ಅರ್ಘ್ಯಮಂತ್ರ
ನಮ: ಕಮಲನಾಭಾಯ ನಮಸ್ತೇ ಜಲಶಾಯಿನೇ |
ನಮಸ್ತೇಸ್ತು ಹೃಷೀಕೇಶ ಗೃಹಾಣಾರ್ಘ್ಯಂ ನಮೋಸ್ತುತೇ |
ವ್ರತಿನ: ಕಾರ್ತಿಕೇ ಮಾಸಿ ಸ್ನಾತಸ್ಯ ವಿಧಿವನ್ಮಮ |
ಗೃಹಾಣಾರ್ಘ್ಯಂ ಮಯಾದತ್ತಂ ದನುಜೇಂದ್ರನಿಷೂದನ |
ನಿತ್ಯನೈಮಿತ್ತಿಕೇ ಕೃಷ್ಣ ಕಾರ್ತಿಕೇ ಪಾಪನಾಶನೇ |
ಗೃಹಾಣಾರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ ||

ಕಾವೇರಿ ನದಿ ಸ್ತೋತ್ರ -
“ಓಮ್ ಕಾವೇರ್‍ಯೈ ನಮ:”   “ಓಮ್ ಅಗಸ್ತ್ಯ ಪತ್ನ್ಯೈ ನಮ:”   “ಓಮ್ ಸರ್ವಪಾವನ್ಯೈ ನಮ:”  “ಓಮ್ ಮಹಾ ಪುಣ್ಯಾಯೈ ನಮ:”
“ಓಮ್ ಸ್ನಾನ ಮಾತ್ರೇಣ ಸರ್ವ ಪಾಪ ಪ್ರಸಮನ್ಯೈ ನಮ:”   “ಓಮ್ ಮೋಕ್ಷದಾತ್ರ್ಯೈ ನಮ:”

Comments are closed.