Vyasarajaru

“Sri Vyasarajara Granthagalu“-click

 

ವ್ಯಾಸರಾಯರ ಬಗ್ಗೆ ಪ್ರಶ್ನೋತ್ತರಗಳು :

 

೧. ವ್ಯಾಸರಾಯರು ಶ್ರೀಪಾದರಾಜರ ಬಗ್ಗೆ ಮಾಡಿರುವ ಸ್ತೋತ್ರ ಯಾವುದು?
– ಶ್ರೀಪಾದರಾಜ ಪಂಚರತ್ನ ಮಾಲಿಕಾ ಸ್ತೋತ್ರ

೨. ವ್ಯಾಸರಾಯರು ಬಸವಾಭಟ್ಟರ ವಿರುದ್ದ ಗೆದ್ದಾಗ ಪಡೆದದ್ದೇನು?
– ಸ್ಫಟಿಕಲಿಂಗ

೩. ವ್ಯಾಸರಾಯರ ಪ್ರತಿಷ್ಠಿತ ಯಂತ್ರೋದ್ಧಾರಕ ಪ್ರಾಣದೇವರು ಎಲ್ಲಿದೆ?
-. ಹಂಪಿ

೪. ವ್ಯಾಸರಾಯರ ಮೂಲರೂಪ ಯಾವುದು?
– ಶಂಖುಕರ್ಣ

೫. ವ್ಯಾಸರಾಯರ ಆರಾಧನೆ ಎಂದು?
-. ಫಾಲ್ಗುಣ ಬಹುಳ ಚತುರ್ಥಿ

೬. ವ್ಯಾಸರಾಯರ ಮುಖ್ಯಪ್ರಾಣ ವೈಶಿಷ್ಟ್ಯ ಏನು?
-. ಬಾಲದಲ್ಲಿ ಘಂಟೆ

೭. ಆಚಾರ್ಯರ ಯಾವ ಸ್ತೋತ್ರದಲ್ಲಿ ಸರ್ವಮೂಲಗ್ರಂಥಗಳನ್ನು ವ್ಯಾಸರಾಯರು ಸಂಗ್ರಹಿಸಿದ್ದಾರೆ?
–. ಗ್ರಂಥಮಾಲಿಕಾ ಸ್ತೋತ್ರ

೮. ಶ್ರೀ ವ್ಯಾಸರಾಯರ ಜನ್ಮನಾಮವೇನು?
– ಯತಿರಾಜ
೯. ಶ್ರೀ ವ್ಯಾಸರಾಯರ ಆಶ್ರಮ ಗುರುಗಳು ಯಾರು?
– ಶ್ರೀ ಬ್ರಹ್ಮಣ್ಯತೀರ್ಥರು
೧೦. ಶ್ರೀ ವ್ಯಾಸರಾಯರ ಅಂಕಿತವೇನು?
– ಸಿರಿ ಕೃಷ್ಣ. ಅಥವಾ  ಶ್ರೀಕೃಷ್ಣ
೧೧. ಶ್ರೀ ವ್ಯಾಸರಾಯರ ವೃಂದಾವನ ಎಲ್ಲಿದೆ?
– ಆನೆಗೊಂದಿ
೧೨. ಶ್ರೀ ವ್ಯಾಸರಾಯರು ಕೃಷ್ಣ ದೇವರಾಯರ _____ ಯೋಗ ಪರಿಹಾರ ಮಾಡಿದರು?
– ಕುಹುಯೋಗ
೧೩. ವ್ಯಾಸರಾಯರ ವಿದ್ಯಾಗುರುಗಳಾರು?
– ಶ್ರೀ ಶ್ರೀಪಾದರಾಜರು
೧೪. ಶ್ರೀ ವ್ಯಾಸರಾಯರ ಜನ್ಮಸ್ಥಳ ಯಾವುದು?
– ಬನ್ನೂರು
೧೫. ವ್ಯಾಸರಾಯರ ವೃಂದಾವನ ಸ್ಥಳಕ್ಕೆ ಏನೆಂದು ಕರೆಯುತ್ತಾರೆ?
– ನವವೃಂದಾವನ
೧೬. ಶ್ರೀ ವ್ಯಾಸರಾಯರು ಎಷ್ಟು ವರ್ಷ ತಿರುಪತಿಯಲ್ಲಿ ಪೂಜಿಸಿದರು?
– ೧೨ ವರ್ಷಗಳು
೧೭. ವ್ಯಾಸಯೋಗಿ ಚರಿತೆ ಬರೆದವರಾರು?
– ಸೋಮನಾಥಕವಿ
೧೮. ವ್ಯಾಸರಾಯರು ಎಷ್ಟು ಪ್ರಾಣದೇವರ ಪ್ರತಿಷ್ಠೆ ಮಾಡಿದರು?
– ೭೩೨
ವ್ಯಾಸರಾಯರು ಹೆಚ್ಚು ಪ್ರಾಣಪ್ರತಿಷ್ಟೆ ಎಲ್ಲಿ ಮಾಡಿದರು?
– ಪೆನುಗೊಂಡ
೧೯. ಚಂದ್ರಿಕಾಮಂಟಪ ಎಲ್ಲಿದೆ?
– ಶ್ರೀರಂಗ

೨೦. ವ್ಯಾಸರಾಯರ ಜನ್ಮದಿನವೇನು ?
– ವೈಶಾಖ ಶುದ್ಧ ಸಪ್ತಮಿ ಭಾನುವಾರ (ಅಧಿಕಮಾಸದಲ್ಲಿ)

Sumadhwa Seva © 2022