ಅಕ್ಷೋಭ್ಯತೀರ್ಥ ವಿಜಯಸ್ತಂಭ

 

ಅಕ್ಷೋಭ್ಯತೀರ್ಥ ವಿಜಯಸ್ತಂಭ, ಹಂಚಕಲ್ಲು, ಮುಳಬಾಗಿಲು

 

*ಮಾಧ್ವೇತರಸಾಹಿತ್ಯಗಳಲ್ಲಿ ಶ್ರೀಮದಕ್ಷೋಭ್ಯತೀರ್ಥರ ಬಗ್ಗೆ ಅತ್ಯಮೋಘ ದಾಖಲೆಗಳು*

೧) *ಅಸಿನಾ ತತ್ವಮಸಿನಾ ಪರಜೀವಪ್ರಭೇದಿನಾ।*
*ವಿದ್ಯಾರಣ್ಯಂ ಮಹಾರಣ್ಯಂ ಅಕ್ಷೋಭ್ಯಮುನಿರಚ್ಛಿನತ್।।*

✍🏻ವೇದಾಂತದೇಶಿಕರು

 

೨) ವಿದ್ಯಾನಗರ್ಯಾಂ ತತ್ಕಾಲೇ ಪ್ರೌಢ: ಸಾಮ್ರಾಡಭೂನೃಪ:
ತಸ್ಯಾಸ್ಥಾನೇ ವಿವಾದೋऽಭೂತ್ವಿದ್ಯಾರಣ್ಯಮುನೇರಪಿ।।

ಅಕ್ಷೋಭ್ಯಸ್ಯ ಮುನೇಶ್ಚೈವ ನ ದೃಷ್ಟೌ ಹಿ ಜಯಾಜಯೌ।
ತನ್ಮಧ್ಯಸ್ಥತಾಯಾಂ ತುವೃತೋ ವೇದಾಂತದೇಶಿಕ:।।

ತಾಭ್ಯಾಂ ಸ್ವಯಂ ಮಹಾಪ್ರಾಜ್ಞ ಅರ್ಥಕಾಮೇಷು ನಿಸ್ಪೃಹ:।
ಮತಾಂತರಸ್ಥೋ ನ ದ್ವೇಷ್ಟಾ ತತ್ವಂ ನಿಶ್ಚಿನುತೇ ಹಿ ಸ:।।

ರಾಜಾऽಪಿ ಪ್ರೌಢದೇವಾಖ್ಯ: ತಥೈವಾಂಗೀಚಕಾರ ಸ:।
ಪ್ರೌಢದೇವಸ್ತಥಾ ವಾದೀ ಪ್ರತಿವಾದೀ ಚ ತೇ ತ್ರಯ:।।
ಲಿಖಿತ್ವಾ ಪತ್ರಿಕಾಸ್ತಸ್ಮೈಪ್ರೇಷಾಯಾಮಾಸುರಂಜಸಾ।।

ತತ್ವಮಸ್ಯಾದಿವಾಕ್ಯಾನಾಂ ಅದ್ವೈತೇ ತತ್ವನಿಶ್ಚಯ:।
ಇತ್ಯರ್ಥಮಲಿಖತ್ತತ್ರ ವಿದ್ಯಾರಣ್ಯೋ ಯತೀಶ್ವರ:।।

ತತ್ವಮಸ್ಯಾದಿವಾಕ್ಯಾನಾಂ ಭೇದೇ ತತ್ವವಿನಿರ್ಣಯ:।
ಇತ್ಯರ್ಥಮಲಿಖತ್ತತ್ರ ಮುನಿರಕ್ಷೋಭ್ಯನಾಮಕ:।।

ಪ್ರೌಢದೇವಸ್ತಥಾ ರಾಜಾ ತಯೋರ್ಜಯಪರಾಜಯೌ।
ವೇದಾಂತಾರ್ಯ ಭವದ್ಭಿಸ್ತು ವಿಜ್ಞಾತವ್ಯೌ ಮಮೇತಿ ಚ।।

ಪತ್ರಿಕಾತ್ರಿತಯಂ ದೃಷ್ಟ್ವಾ ತ್ರಯಾಣಾಮೇಕಮುತ್ತರಂ।
ಶ್ಲೋಕಮೇಕಂ ವಿಲಿಖ್ಯಾಶು ಪ್ರೇಷಯಾಮಾಸ ತಾನ್ಪ್ರತಿ।।

 

*”ಅಸಿನಾ ತತ್ವಮಸಿನಾ ಪರಜೀವಪ್ರಭೇದಿನಾ।
ವಿದ್ಯಾರಣ್ಯಂ ಮಹಾರಣ್ಯಂ ಅಕ್ಷೋಭ್ಯಮುನಿರಚ್ಛಿನತ್।।”*

 

ಪ್ರೌಢದೇವಸ್ತು ತದ್ದೃಷ್ಟ್ವಾ…ದೇಶಿಕೋತ್ತಮಂ।
ಮೇನೇऽಕ್ಷೋಭ್ಯಮುನಿಂ ತತ್ರ ಜಯಿನಂ ಬೋಧಸತ್ತಮಂ।।

*ಮುನಿರಕ್ಷೋಭ್ಯನಾಮಾ ತು ತದ್ದೃಷ್ಟ್ವಾ ದೇಶಿಕೋತ್ತಮಂ।
ಮಹಾತ್ಮನಂ ತದಾ ಮೇನೇ ಸರ್ವಜ್ಞಂ ಸತ್ಯವಾದಿನಂ।।
(೪-೨೧-೨೯)

✍🏻ಇವು ವೇದಾಂತ ದೇಶಿಕರ ಮಕ್ಕಳಾದ ವರದಾಚಾರ್ಯರು ರಚಿಸಿದ ವೇದಾಂತಾಚಾರ್ಯಚರಿತಂ ಎಂಬ ಗ್ರಂಥದ ಶ್ಲೋಕಗಳು.

 

ಸಮಕಾಲೀನಸಾಹಿತ್ಯ ಹಾಗೂ ಮಾಧ್ವೇತರಸಾಹಿತ್ಯ ಎಂಬುದು ಇಲ್ಲಿ ಗಮನೀಯ.

 

 

೩) *ತತ್ತ್ವವಾದಿಯಾನ ಅಕ್ಷೋಭ್ಯಮುನಿಕ್ಕುಂ* ಮಾಯಾವಾದಿಯಾನ ವಿದ್ಯಾರಣ್ಯಮುನಿಕ್ಕುಂ ವೇದಾಂತತ್ತಿಲ್ ವಾದಂ ಪ್ರವೃತ್ತಮಾಹ। ಇವರೊಹಳೊಡೆಯ ಅಭಿಪ್ರಾಯತ್ತಿಯಂ ರಾಜಪತ್ರಿಕಾ ಮೂಲಮಾಹ। ವೇದಾಂತದೇಶಿಕರ ಸನ್ನಿಧಿಕ್ಕೆ ಅನುಧವೈ। ಯಾಥಾರ್ಥತ್ತೈ ಅರಿಂದುಹರಕ್ಕುವೇಣುಮನ್ನು ಅನುಪ್ಪಮೈಕ್ಕ ವೇದಾಂತದೇಶಿಕರ
*”ಅಸಿನಾ ತತ್ವಮಸಿನಾ ಪರಜೀವಪ್ರಭೇದಿನಾ।*
*ವಿದ್ಯಾರಣ್ಯಂ ಮಹಾರಣ್ಯಮಕ್ಷೋಭ್ಯಮುನಿರಚ್ಛಿನತ್।।”*
ಇತಿ ಪದ್ಯೇನ ದ್ಯೋತಯಾಮಾಸ।

✍🏻ಪರಕಾಲಮಠದ ಬ್ರಹ್ಮತಂತ್ರಸ್ವತಂತ್ರಜೀಯರ್ ಮಾಡಿದ ಗುರುಪರಂಪರಾಪ್ರಭಾವ ಎಂಬ ಗ್ರಂಥ. ಇವರು ವೇದಾಂತದೇಶಿಕರ ಸಮೀಪಕಾಲವರ್ತಿಗಳು ಹಾಗೂ ಅವರ ಶಿಷ್ಯಪರಂಪರೆಯವರು.

 

೪) *ಕದಾಚಿದಕ್ಷೋಭ್ಯಮುನೇಶ್ಚವಿದ್ಯಾರಣ್ಯಸ್ಯ ಜಾತಂ ಬಹುಲಂ ವಿವಾದಂ।

ವಿಲಿಖ್ಯ ಭೂಪೋ ವಿಬುಧಾಯ ಯಸ್ಮೈ ಸಂಪ್ರೇಷಯಾಮಾಸ ತಮಾಶ್ರಯೇऽಹಂ।।

ತತ್ತ್ವಮಸಿನಾऽಸಿನಾ ತಂ ವಿದ್ಯಾರಣ್ಯಂ ಮುನಿಸ್ತದಾऽಕ್ಷೋಭ್ಯ:।
ಅಚ್ಛಿನದಿತ್ಯವದದ್ಯಸ್ತಂ* ಸೇವೇ ತತ್ವನಿರ್ಣಯೇ ಚತುರಂ।।

✍🏻ದೊಡ್ಡಯ್ಯಾಚಾರ್ಯರು. ವೇದಾಂತದೇಶಿಕವೈಭವ ವಿಶಿಷ್ಟಾದ್ವೈತಗ್ರಂಥ.

 

೫) ಅಥ ಕದಾಚಿದ ಅಖಿಳಬುಧಜನರಂಜನಮಂಜುಳ ಮತಿವಿಲಸಿತನಿರ್ವಾಪಿತಗೀರ್ವಾಣಗುರುಸರ್ವಾಂಕುರಸ್ಯ ವಿವಿಧಗುಣಶೇವಧೇ: ವಿಜಯನಗರಪತೇರಾಸ್ಥಾನೇ ವಿದ್ಯಾರಣ್ಯೇನ ಸಮಂ *ಅಕ್ಷೋಭ್ಯಮುನೇರ್ಮಧ್ವಮತಾಧ್ವನ್ಯಮೂರ್ಧನ್ಯಸ್ಯ* ತತ್ವಮಸೀತಿ ವಾಕ್ಯೇ ತರಂಗಿತವದಾವದಾಮೋದ: ಪ್ರಾದುರಾಸೀತ್। ತದಾ ಸಮುದಿತಾ ಚಿಂತಾ ತಸ್ಯ ರಾಜಶಿರೋಮಣೇ:। ತತ್ವನಿರ್ಧಾರಣೇ ದಕ್ಷಸ್ತಟಸ್ಥ: ಕೋ ಭವೇದಿತಿ।
ಪ್ರಸಕ್ತೇ ಯುವಯೋರ್ವಾದೇ ಪ್ರಾಕ್ತನೋಕ್ತಿವಿದಾಂವರಂ।
ಮಾನ್ಯಂ ವೇಂಕಟನಾಥಾರ್ಯಂ
ಮಧ್ಯಸ್ಥಂ ಮನುತೇ ಮನ:।।
ಅಥ ಪತ್ರೇಷು ಲಿಖಿತಾಂ
ಅನಯೋರ್ಯುಕ್ತಿಸಂತತಿಂ।
ದರ್ಶಯಂತಿ ಸ್ಮ ಗುರವೇ
ರಾಜ್ಞಾ ಕೇಚನ ಚೋದಿತಾ:।।
ಸ ಚ ಕರ್ಮಬ್ರಹ್ಮಮೀಮಾಂಸಯೋ: ಮರ್ಮವೇದೀ ಕವಿಕಥಕಪಂಚಾನನಾಚಾರ್ಯೋ ಮಹತಾ ಮಹೀಭೃತಾ ಪ್ರೇರಿತೈರ್ಮನೀಷಿಭಿ: ಆಹೃತಂ *ಅಕ್ಷೋಭ್ಯಮುನೇ:* ವಿದ್ಯಾರಣ್ಯಸ್ಯ ಚ ವಚನನಿಚಯಂ ವಿಚಾರ್ಯ ಹಂತ ಕಶ್ಚನ ಕರಬದರಕಲ್ಪಮಪಿ ಜೀವಪರಯೋರ್ಭೇದಮಪಲಪತಿ ಪ್ರಲಪತಿ ಚ ವಿಯದಂಬುಜವಿಡಂಬನಧುರಂಧರಾಮಪಿ ತಯೋರಭೇದತಾತ್ವಿಕತಾಮಿತಿ ತರ್ಕಯನ್ ಜಯಾಪಜಯೌ ತತ್ಕ್ಷಣವಿರಚಿತೇನ
*”ಅಸಿನಾ ತತ್ವಮಸಿನಾ ಪರಜೀವಪ್ರಭೇದಿನಾ।*
*ವಿದ್ಯಾರಣ್ಯಂ ಮಹಾರಣ್ಯಮಕ್ಷೋಭ್ಯಮುನಿರಚ್ಛಿನತ್।।”*
ಇತಿ ಪದ್ಯೇನ ದ್ಯೋತಯಾಮಾಸ।

ವಾಣೀಮಾದಾಯ ತಾಂ ಸೂರೇ: ಕ್ಷೋಣೀಪರಿವೃಢಪ್ರಿಯಾ:।
ಶಿರಸಾ ಕ್ಲೃಪ್ತನತಯ: ತರಸಾ
ಸ್ವಾಂ ಪುರೀಂ ಯಯು:।।
ಅಥ ವಸುಧಾತಲಜದಾಚಾರ್ಯಸವಿಧಾತ್ ಆಯಾತೈ: ತೈ: ವಿನಿವೇದಿತಂ ಕರ್ಣೇಜಪಂ ಶ್ಲೋಕಮಾಕರ್ಣ್ಯ ಜೃಂಭಿತಹರ್ಷ: *ಸ್ತಂಭಿತವಿಪಕ್ಷಪಕ್ಷಂ ಅಕ್ಷೋಭ್ಯಮುನಿಂ ಮಧ್ಯೇಸಭಂ ಭೃಶಂ ಪ್ರಶಂಸ।‌*

✍🏻ಕವಿತಾರ್ಕಿಕಸಿಂಹ ವೇದಾಂತಾಚಾರ್ಯರು. ವೇದಾಂತದೇಶಿಕಾಚಾರ್ಯವಿಜಯಚಂಪೂ ವಿಶಿಷ್ಟಾದ್ವೈತಗ್ರಂಥ.

 

೬) ಅಯಂ ಚ (ವೇದಾಂತಾಚಾರ್ಯಾಪರನಾಮಾ ವೇಂಕಟನಾಥ:) ಶ್ರೀಮದ್ವಿದ್ಯಾರಣ್ಯಸಮಕಾಲೀನ:।          ಯತ: ಶ್ರೀಮದ್ವಿದ್ಯಾರಣ್ಯಮುನೀನಾಂ *ಮಧ್ವಸಂಪ್ರದಾಯಾನುವರ್ತಿಭಿ: ಅಕ್ಷೋಭ್ಯಮುನಿಭಿ:*.   ಸಾಕಂ ವಿವಾದೇ ಜಾಯಮಾನೇ ಏಭಿರ್ವೇದಾಂತಾಚಾರ್ಯೈರ್ಮಾಧ್ಯಸ್ಥ್ಯಂ ಸ್ವೀಕೃತಮಿತ್ಯೈತಿಹ್ಯಂ ಶ್ರೂಯತೇ।

✍🏻ವಾಸುದೇವ ಅಭ್ಯಂಕರಶಾಸ್ತ್ರಿಗಳು ರಚಿಸಿದ ಸರ್ವದರ್ಶನಸಂಗ್ರಹವ್ಯಾಖ್ಯಾನ ದರ್ಶನಾಂಕುರ.

 

 

೭) *At Mulbagal, near the Jayastambha on the Hanchukallu hills.*

ಮುಳಬಾಗಿಲನಲ್ಲಿರುವ ಅಕ್ಷೋಭ್ಯತೀರ್ಥರ ವಿಜಯಸ್ತಂಭದ ಕುರಿತು ಹೀಗೆ ಮಾಹಿತಿ ನೀಡಿದ ರೈಸ್ ಅವರು ಅದರ ಬಗ್ಗೆ ವರದಿಯನ್ನು ಹೀಗೆ ದಾಖಲಿಸುತ್ತಾರೆ:-

At Mulbagal an inscription in Grantha characters on a boulder was brought to notice which appears to record the fact of a refutation of Vidyaranya by *Akshobhyateertha* in some public disputation. But the inscription has been lately purposely destroyed so that only a few letters remain visible. The above account of it’s contents is given by persons who saw it before it was damaged and who made a copy of it.

✍🏻Mys. Archological Annual Report.
Dated 30-6-1896 by Mr.L.Rice C.I.E

“….ತಿ….ವರ್ಷ….ಪ್ಪಾದ….ನಾ….ದ….ತೇ। ….ತ್ತಾರ್ ವಿತ್ತತಾನ್ಮಾಂ।।”

Page 86 of E.C., vol. X, item no. 17 (English vol.) Identified by Mr. L. rise.
Director of Archaeology in Mysore.

ಹೀಗೆ ಮತತ್ರಯಗಳ ಗ್ರಂಥಗಳಲ್ಲಿ, ಮಠತ್ರಯಗಳ ಗ್ರಂಥಗಳಲ್ಲಿ, ಸರ್ಕಾರದ ದಾಖಲೆಗಳಲ್ಲಿ ಆಧ್ಯಾತ್ಮಿಕ ಗ್ರಂಥಗಳಲ್ಲಿ, ಸಂಸ್ಕೃತ-ಕನ್ನಡ-ತಮಿಳುಸಾಹಿತ್ಯಗಳಲ್ಲಿ ಹರಿದಾಸಸಾಹಿತ್ಯಗಳಲ್ಲಿ, ಶಿಲಾಶಾಸನದಲ್ಲಿ, ಪ್ರಾಚೀನ-ಅರ್ವಾಚೀನಗ್ರಂಥಗಳಲ್ಲಿ, ದೃಶ್ಯಚಿತ್ರಗಳಲ್ಲಿ ಬಹುಪ್ರಸಿದ್ಧವಾದ ಶ್ರೀಮದಕ್ಷೋಭ್ಯತೀರ್ಥರ ಮಹಿಮೆಯನ್ನು ಚಿಂತಿಸಿದರೆ ಅಚ್ಚರಿಯಾಗುತ್ತದೆ.

ಇಷ್ಟು ವ್ಯಾಪಕ ಪ್ರಸಿದ್ಧಿಯನ್ನು ಪಡೆದ ಈ ವಿಷಯವನ್ನು ಕೇವಲ ಕುಯುಕ್ತಿಗಳಿಂದ ಊಹಾಪೋಹಗಳಿಂದ ನಿರಾಕರಿಸುವ ಪ್ರಯತ್ನವನ್ನು ಕಂಡಾಗ ಮತ್ತಷ್ಟು ಅಚ್ಚರಿಯಾಗುತ್ತದೆ.
ಇದನ್ನು ಕಂಡಾಗ…
*ಪ್ರತ್ಯೇಕ್ಷೇಕ್ಷಾಕ್ಷಮ: ಪಕ್ಷಂ ಕಮೇವಾತ್ರಾಭಿವಿಕ್ಷತೇ।*
*ತಸ್ಮಾದಕ್ಷಮಪಕ್ಷತ್ವಾನ್ಮೋಕ್ಷಶಾಸ್ತ್ರೇऽಭ್ಯುಪೇಕ್ಷಿತ:।।*
ಎಂಬ ಶ್ರೀಮದಾಚಾರ್ಯರ ಮಾತು ನೆನಪಿಗೆ ಬರುತ್ತದೆ.

ಇಷ್ಟೆ ಅಲ್ಲದೆ ಇತ್ತಿಚೆಗೆ ಕೆಲವರು ಹೊಸ ಶೈವವಿದ್ಯಾರಣ್ಯರನ್ನು ಕಲ್ಪಿಸಿ ಅವರ ಜೊತೆಗೆ ವಾದ ನಡಿಯಿತು ಎಂದು ಹೇಳಿ ಅಪಹಾಸ್ಯಕ್ಕೀಡಾಗಿದ್ದಾರೆ. ತತ್ತ್ವಮಸಿ ವಾಕ್ಯಾರ್ಥಕ್ಕೂ ಶೈವರಿಗೂ ಎತ್ತಣ ಸಂಬಂಧ??

ಆದ್ದರಿಂದ ಇಂತಹ ಅಕ್ಷಮವಾದಗಳನ್ನುಪೇಕ್ಷಿಸಿ ಅಕ್ಷೋಭ್ಯತೀರ್ಥರ ಅಕ್ಷೋಭ್ಯವಾದ ಮಹಿಮೆಯನ್ನು ಯಾವುದೇ ಕ್ಷೋಭೆಯಿಲ್ಲದೆ ಚಿಂತಿಸೋಣ.

 

 

ಸಂಗ್ರಹ  ಲೇಖನ,:

ಶ್ರೀನಿವಾಸ ಕೊರ್ಲಹಳ್ಳಿ

Sumadhwa Seva © 2022