Sri Satyasandha Tirtharu, Mahishi
ಜ್ಯೇಷ್ಠ ಶುದ್ಧ ದ್ವಿತೀಯ
1783 – 1794
ಶ್ರೀ ಸತ್ಯಸಂಧ ತೀರ್ಥರು
ವಿಷ್ಣೋ: ಪದಶ್ರಿದ್ಗೋವ್ರಾತೈ: ಸ್ವಾಂತಧ್ವಾಂತನಿವಾರಕ: |
ಶ್ರೀಸತ್ಯಸಂಧಸೂರ್ಯೋ ಯಂ ಭಾಸತಾಂ ನೋ ಹೃದಂಬರೇ ||
विष्णो: पदश्रिद्गोव्रातै: स्वांतध्वांतनिवारक: ।
श्रीसत्यसंधसूर्यो यं भासतां नो हृदंबरे ॥
విష్ణో: పదశ్రిద్గోవ్రాతై: స్వాంతధ్వాంతనివారక: |
శ్రీసత్యసంధసూర్యో యం భాసతాం నో హృదంబరే ||
விஷ்ணோ: பதஶ்ரித்கோவ்ராதை: ஸ்வாம்தத்வாம்தநிவாரக: |
ஶ்ரீஸத்யஸம்தஸூர்யோ யம் பாஸதாம் நோ ஹ்ருதம்பரே ||
വിഷ്ണോ: പദശ്രിദ്ഗോവ്രാതൈ: സ്വാംതധ്വാംതനിവാരക: |
ശ്രീസത്യസംധസൂര്യോ യം ഭാസതാം നോ ഹൃദംബരേ ||
ವೃಂದಾವನ – ಮಹಿಷಿ
(ರಾಮಚಂದ್ರ ದೇವರು ಆಗಮಿಸಿದ ಸ್ಥಳ. ಹನುಮಂತ ದೇವರು ಅಶ್ವತ್ಥ ವೃಕ್ಷವನ್ನು ಮತ್ತು ಅಶ್ವತ್ಥ ನಾರಾಯಣ ದೇವರನ್ನು ಪ್ರತಿಷ್ಠಾಪಿಸಿದ ಸ್ಥಳ)
ಕಾಲ – 1784 – 1794
*ಅಧ್ಶಯನ*– ರಾಮಾಚಾರ್ಯರ ಸಕಲ ಅಧ್ಯಯನ ಸವಣೂರಿನಲ್ಲಿ ಶ್ರೀ ಸತ್ಯಭೋಧತೀರ್ಥರಲ್ಲಿ ನಡೆಯಿತು.
ಗುರುಗಳಾದ ಶ್ರೀಸತ್ಯಭೋಧರಿಗೆ ಇವರು ಅಲ್ಪಾಯುಷಿಗಳು, ಎಂದು ತಿಳಿದು, ಅವರು ಚಿಕ್ಕ ಚಿಕ್ಕ ಬೆಳ್ಳಿ ಬಟ್ಟಲುಗಳಲ್ಲಿ ತುಪ್ಪವನ್ನು ತುಂಬಿ ( ಕೆಲವು ಕಡೆ ನೀರು, ಹಾಲು ಎಂದು ಹೇಳುತ್ತಾರೆ) ಅಭಿಮಂತ್ರಿಸಿ, ಶ್ರೀಸತ್ಯಸಂಧತೀರ್ಥರಿಗೆ ಕುಡಿಯಲು ತಿಳಿಸುತ್ತಾರೆ. ಅದರಂತೆ ಶ್ರೀಸತ್ಯಸಂಧತೀರ್ಥರು ಒಂದೊಂದಾಗಿ ಬಟ್ಟಲಿಂದ ಕುಡಿಯುತ್ತಾ, 10 ಬಟ್ಟಲಿನಿಂದ ಕುಡಿದು,11ನೇ ಬಟ್ಟಲು ಕುಡಿಯುವಾಗ ಕೈ ಜಾರಿ ಬೀಳುತ್ತದೆ. ಅದಕ್ಕೆ ಗುರುಗಳು ಇರಲಿ ಇರಲಿ ಎಂದು ಹೇಳಿ, ಹೀಗೆ ಒಂದೊಂದು ಬಟ್ಟಲಿನಿಂದ ಒಂದೊಂದು ವರ್ಷದಂತೆ ಇವರಿಗೆ ಹತ್ತು ವರ್ಷದ ಆಯುಷ್ಯವನ್ನು ನೀಡಿದ ವಿಚಾರವಿದೆ. ಹೀಗೆ ಶ್ರೀ ಸತ್ಯಭೋಧ ತೀರ್ಥರಿಂದ ಹತ್ತು ವರ್ಷದ ಆಯುರ್ದಾನ ಪಡೆದು, ಆನೇಕ ಮಹಿಮೆಗಳನ್ನು ತೋರಿದರು.
*ಪವಾಡಗಳು* : ಕಾಶಿಯಲ್ಲಿ ಗಂಗಾಪೂಜೆಯ ದಿನದಂದು ಬಂಗಾರದ ತಟ್ಟಯಲ್ಲಿ ಬಾಗಿನ ಅರ್ಪಿಸುತ್ತಿರುವಾಗ ಶ್ರೀಗಳವರ ಕೈಯಿಂದ ಸಾಕ್ಷಾತ್ ಭಾಗೀರತಿಯೇ ಸ್ವಯಂ ಬಂದು ಸ್ವೀಕರಿಸಿದಳಂತೆ.
ಒಮ್ಮೆ ಸಾಂಗಲಿಯಲ್ಲಿ ಇವರು ಶ್ರೀಸತ್ಯವ್ರತರ ವೃಂದಾವನ ಎದುರು ಶ್ರೀಮನ್ನಾಯಸುಧಾ ಅನುವಾದ ಮಾಡಿದಾಗ ಶಿಲಾಮಯ ವೃಂದಾವನ ಅಲುಗಾಡಿ ಆನಂದ ಸೂಚಿಸಿತು. ಇದನ್ನು ನೂರಾರು ಜನ ಸಾಕ್ಷಾತ್ ನೊಡಿದ್ದಾರೆ.. ಈ ಫಟನೆಯಧ್ನು ಶ್ರೀಸತ್ಯಧರ್ಮತೀರ್ಥರು, ಶ್ರೀಸತ್ಯಪರಾಕ್ರಮ ತೀರ್ಥರು ವರ್ಣಿಸಿದ್ದಾರೆ.
ಶ್ರೀ ಜಗನ್ನಾಥ ದಾಸರು ಇವರನ್ನು ” ವಂದಿಸುವೆ ಗುರು ಸತ್ಯಸಂಧ ಮುನಿಯ ” ಎಂದು ಅನೇಕ ಪದ್ಯಗಳಿಂದ ವರ್ಣಿಸಿರುವರು.
ವಿಷ್ಣೋ: ಪದಶ್ರಿದ್ಗೋವ್ರಾತೈ: ಸ್ವಾಂತಧ್ವಾಂತನಿವಾರಕ: |
ಶ್ರೀಸತ್ಯಸಂಧಸೊರ್ಯೋSಯಂ ಭಾಸತಾಂ ನೋ ಹೃದಂಬರೇ ||.
ಆರಾಧನೆ – ಜ್ಯೇಷ್ಠ ಶುದ್ಧ ದ್ವಿತೀಯ
ಪೂರ್ವಾಶ್ರಮ ನಾಮ – ಹಾವೇರಿ ರಾಮಚಂದ್ರ ರಾವ್