AKSHAYA TRITEEYA

 Akshaya Triteeya is the Yugadi Day for Tretaayuga

(Kartheeka Shukla Navami – Kruthayuga Yugadi,
Maagha Amaavasye – Dwapara yuga Yugaadi
Bhadrapada Krishna Trayodashi – Kaliyuga Yugadi
Chaitra Shukla paadya –  Starting Day of Srushti)
 

Akshaya Triteeya –  Akshaya indicates “it does not have kshaya”.   Meaning the punya got from yajna, yaajana daana will be hundreds times when compared to the punya performed.

ಅಕ್ಷಯ ತೃತೀಯ ಮಹತ್ವ :-. 

1. ಈ ದಿನವು ತ್ರೇತಾ ಯುಗದ ಆರಂಭವನ್ನು ಸೂಚಿಸುತ್ತದೆ.

2. ಪಾಂಡವರು ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದದ್ದು,

3. ಪರಶುರಾಮನ ಅವತಾರವಾದ ದಿನ

4. ಕುಚೇಲನು ಕೃಷ್ಣನ ಮನೆಗೆ ಸಹಾಯ ಯಾಚಿಸಲು ಹೋಗಿ, ಕೃಷ್ಣನಿಂದ ಪಾದಪೂಜೆ ಪಡೆದು ಅವನಿಂದ ಅನುಗ್ರಹಿತನಾದನು.

5. ವೇದವ್ಯಾಸರು ಇದೇ ದಿನ ಮಹಾಭಾರತ ಗ್ರಂಥ ಆರಂಭಿಸಿದ್ದು.

6. ಪರಮಾತ್ಮ ತನ್ನ ದೇಹದ  ಗಂಧದಿಂದ ಮಂಡೋದರಿಯನ್ನು ಸೃಷ್ಟಿಸಿದ್ದು ಇದೇ ದಿನ.

7. ಇದೇ ದಿನ ದೇವೇಂದ್ರ ತಾನು ಕಳೆದುಕೊಂಡಿದ್ದ ಪದವಿಯನ್ನು  ಬೃಹಸ್ಪತ್ಯಾಚಾರ್ಯರ ನಿರ್ದೇಶನದಂತೆ ಜಪ ತಪ ಯಜ್ಞ ಮಾಡಿ ವಾಪಸ್ ಪಡೆದನು.

ಅಕ್ಷಯ ತೃತೀಯ ಕರ್ತವ್ಯಗಳು :

೧. ಸೂರ್ಯೋದಯ ಮುನ್ನ ಏಳಬೇಕು.
೨. ಸಂಕಲ್ಪ ಸಹಿತ ಸ್ನಾನ
೩. ಆಹ್ನೀಕ, ಪೂಜೆ, ಜಪ, ಪಾರಾಯಣ
೪. ತರ್ಪಣಾಧಿಕಾರಿಗಳು ತರ್ಪಣ ನೀಡಬೇಕು.
೫. ಯಥಾಶಕ್ತಿ ದಾನಧರ್ಮ
೬. ಗಂಧ ಸಮರ್ಪಣೆ ದೇವರಿಗೆ

ಅಕ್ಷಯ ತೃತೀಯ ದಿನದಂದು ಗಂಧಲೇಪನ ವೈಶಿಷ್ಟ್ಯ :

ಇದೇ ದಿನ ಭಗವಂತನು ತನ್ನ ದೇಹದ ಸುಗಂಧದಿಂದ ಮಂಡೋದರಿಯ ಸೃಷ್ಟಿ ಮಾಡಿದ್ದರಿಂದ ದೇವರಿಗೆ ಗಂಧ ಸಮರ್ಪಣೆ ಮಾಡುವ ಸಂಪ್ರದಾಯ ಇದೆ.

 

ಅಕ್ಷಯ ತೃತೀಯ ಬಗ್ಗೆ ನಮ್ಮ ಪುರಾಣಗಳಲ್ಲಿ ಒಂದಾದ ನಾರದ ಪುರಾಣದಲ್ಲಿ ಉಲ್ಲೇಖವಿದೆ . “ಅಕ್ಷಯ” ಎನ್ನುವುದು ಕ್ಷಯವಾಗದೆ ಇರುವುದು ಎಂದರ್ಥ. ಅಕ್ಷಯ ಅಂದರೆ ಕ್ಷಯರಹಿತ.

ವೈಶಾಖ ಶುದ್ಧ ತೃತೀಯ ದಿನದಂದು ಅಕ್ಷಯ ತೃತೀಯ ಆಚರಣೆ  ಮಾಡಲಾಗುತ್ತದೆ.   ಬಹಳ ಜನರಿಗೆ ಅಕ್ಷಯ ತೃತೀಯ ಬಗ್ಗೆ ತಪ್ಪು ತಿಳುವಳಿಕೆ ಇದೆ.  ಅಂದು ಬಂಗಾರ ತೆಗೆದುಕೊಳ್ಳಲೇ ಬೇಕು ಅದು ಇಮ್ಮಡಿ ಆಗುತ್ತದೆ ಎಂದು ಪ್ರಚೋದಿಸಿದ್ದಾರೆ  ಕೆಲವು ಬಂಗಾರದ ಅಂಗಡಿಗಳು ಮತ್ತು ಜ್ಯೋತಿಷಿಗಳು.  ಟೀವೀ ಛಾನೆಲ್ ಮೂಲಕ ಬಂಗಾರ ತೆಗೆದುಕೊಂಡರೆ ವೃದ್ಧಿಯಾಗುತ್ತದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ.  ಯಾವ ಪುರಾಣದಲ್ಲೂ ಬಂಗಾರ ಇಮ್ಮಡಿಯಾಗುವ ಪ್ರಸ್ತಾಪ ಇಲ್ಲ.    ಜನಗಳು ಇದಕ್ಕೋಸ್ಕರ ಸಾಲ ಮಾಡಿ ಬಂಗಾರ ಕೊಳ್ಳುತ್ತಿದ್ದಾರೆ.    ಹೌದು.  ಸಾಲ ಇಮ್ಮಡಿಯಾಗುತ್ತದೆ.  ಬಂಗಾರ ಅಲ್ಲ.  ಬಂಗಾರ ಎಂದು ಕೊಂಡರೂ ಅದರ ಬೆಲೆ ಇದ್ದೇ ಇರುತ್ತದೆ.

ಅಕ್ಷಯ ಎನ್ನುವುದು ಕ್ಷಯವಾಗದೆ ಅಂದರೆ ಮುಗಿಯದೇ ಇರುವುದು ಎಂದರ್ಥ ಅಂದು ರೋಹಿಣಿ ನಕ್ಷತ್ರವು ಇದ್ದರೆ ಅಂದು ಮೂರುವರೆ ಘಳಿಗೆ ಮುಹೂರ್ತದಲ್ಲಿ ಬರುವ ತಿಥಿ ಅಕ್ಷಯ ತೃತೀಯ.

ಅಕ್ಷಯ ತೃತಿಯದ ಮುಹೂರ್ತದ ಮಹತ್ವ ?

ಗೃಹ ಪ್ರವೇಶ , ಮದುವೆ, ಹೊಸ ವ್ಯವಹಾರ, ದಾನ ಧರ್ಮ ಗಳನ್ನು ಮಾಡಲು ಅಕ್ಷಯ ತೃತೀಯ ಅತ್ಯುತ್ತಮ ದಿನ.

ಈ ದಿನವು ತ್ರೇತಾ ಯುಗದ ಆರಂಭವನ್ನು ಸೂಚಿಸುತ್ತದೆ.

ಪಾಂಡವರು ಈ ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದದ್ದು

“ಅಕ್ಷಯ” ಎನ್ನುವುದು ಕ್ಷಯವಾಗದೆ ಅಂದರೆ ಮುಗಿಯದೇ ಇರುವುದು ಎಂದರ್ಥ.

ಇದೊಂದು ಸ್ವಯಂಸಿದ್ಧ ಮೂರೂವರೆ ಮುಹೂರ್ತಗಳಲ್ಲಿ ಇದೂ ಒಂದು. ಈ ದಿನ ಮುಹೂರ್ತ ಇಡುವಾಗ ನಕ್ಷತ್ರ, ವಾರ, ತಿಥಿ, ಮುಂತಾದವನ್ನು ನೋಡುವ ಅವಶ್ಯಕತೆ ಇಲ್ಲ.

 

This is one “swayam sidda” auspious day.  There are 3 1/2 muhoorthas termed as “Swayamsidda”.  Vijayadashami, Yugaadi, and Akshayatruteeya and on balipadyami half muhoortha.  On these days, dinashuddi, Vaarashuddi, Nakshatra, karanaadi shuddi need not be enquired.  We can perform Upanayana,  Aksharaabhyaasa, devara prathiste,  Borewell digging, annaprashana etc. without looking for Panchanga.   Akshaya Triteeya day,  tarpana adhikarigalu should give Tarpana as it is  yugadhi day.

  • On Akshaya Triteeya Day snaana, japa, homa, svaadhyaaya, pitru tarpana, daana all will give Akshaya phala.
  • It is on this day that Sri Vedavyasa devaru began his composition of Sri Mahabharatha.
  • It is on this day that Paandavaas received Akshaya Paathra from Sri Krishna paramathma
  • This is the Day on which Paramathma made the srusti of Mandodari  (One among the Pancha pathivratheyaru) with the Gandha
  • It is on this day that Sudama (Kuchela) visited Srikrishna carrying Avalakki with the intention of asking help .  But could not ask anything with Sri Krishna.
  • The significance of the three and half auspicious days is that there is no need to look for auspicious time. Each second on the day is highly auspicious. The day is chosen for marriages, house warming, opening of new business
  • As per traditional Hindu astrology, the Sun (Surya) and Moon (Chandra) are astrologically believed to be at their most exalted position on the day.

Gold purchase on Akshaya Triteeya –  Now a days, there is a trend in the market that on “Akshaya Tirteeya” day, the people are running after jewel shops for purchase of various ornaments.  They have a belief that whatever bought on this day will make their wealth richer.    But it is not so.  There is no such saying anywhere in any purana as to the increase of the wealth.       Our Shaastraas say that on this day, one has to do yajna, yaajana, daana and pratigraha, which makes their punya akshaya.     As such, please do not go after purchase of gold, instead one has to make daana or do some saatvika krama.

Gandha Lepana –

ಈ ದಿನ ಎಲ್ಲಾ ದೇವಸ್ಥಾನಗಳಲ್ಲೂ, ಮಠಗಳಲ್ಲೂ, ದೇವರಿಗೆ, ಮುಖ್ಯಪ್ರಾಣ ದೇವರಿಗೆ ಗಂಧಲೇಪನ ಸೇವಾ ನಡೆಯಲಿದೆ

Updated: May 2, 2022 — 1:48 pm
Sumadhwa Seva © 2022