Jalapoorana Trayodashi ನೀರು ತುಂಬುವ ಹಬ್ಬ

  1. ನೀರು ತುಂಬುವ ಹಬ್ಬ / ಜಲಪೂರ್ಣ ತ್ರಯೋದಶಿ

JalapoorNa trayodashi – Click for Sri Satyatma Tirtha’s sandesha (given during 2012 chaturmasya).

What is Jalapoorana Trayodashi ?

ಜಲಪೂರಣ ತ್ರಯೋದಶಿ

ಆಶ್ವೀಜ ಶುದ್ಧ ತ್ರಯೋದಶಿಯಂದು ನೀರು ತುಂಬುವ ಹಬ್ಬದ ಆಚರಣೆ ಮಾಡಲಾಗುತ್ತದೆ.

ಅಂದು ಸಂಜೆ ಹೊತ್ತು ನೀರು ತುಂಬಿಸುವ ಪಾತ್ರೆ ಮತ್ತು ನೀರು ಕಾಯಿಸುವ ಹಂಡೆಗಳನ್ನು ತೊಳೆದು ಅವನ್ನು ಅಲಂಕರಿಸಬೇಕು.   ಅನಂತರ ಸಮೀಪದ ಬಾವಿ, ಕೆರೆ, ನದಿಯಿಂದ ನೀರು ತಂದು ತುಂಬಿಸಿ, ಗಂಗೆ ಪೂಜೆ ಮಾಡಬೇಕು.  ಅಥವಾ ಕನಿಷ್ಠ ಮನೆಯಲ್ಲಿ ಬರುವ ನಲ್ಲಿ ನೀರನ್ನು ಶುದ್ಧವಾಗಿ ಹಿಡಿದು,  ದೇವರ ಮುಂದೆ ಮಂಡಲವನ್ನು ಹಾಕಿ (ನೀರಿನಲ್ಲಿ), ರಂಗೋಲಿಯನ್ನು ಬರೆದು, ಅದನ್ನು ಅಲಂಕರಿಸಿ,  ಗಂಗೆಯನ್ನು ಒಂದು ನೀರು ಕಾಯಿಸುವ ಪಾತ್ರೆಯಲ್ಲಿ ಇಟ್ಟು ದೇವರಿಗೆ ಸಮರ್ಪಿಸಬೇಕು.  ಆ ಪಾತ್ರೆಯನ್ನು ಪುಷ್ಪಾದಿಗಳಿಂದ ಅಲಂಕಾರ ಮಾಡಿ,  ದೇವರ ಮುಂದೆ ಮತ್ತು  ತುಳಸೀ ಗಿಡದ ಮುಂದೆ ದೀಪವನ್ನು ಹಚ್ಚಿ,  ಆಚಮನ ಮಾಡಿ, ಸಂಕಲ್ಪ ಪುರಸ್ಸರವಾಗಿ, ದ್ವಾದಶ ನಾಮಗಳಿಂದ ಗಂಗೆಯನ್ನು ಪೂಜಿಸಿ, ಸಕಲ ತೀರ್ಥಾಭಿಮಾನಿ ದೇವತೆಗಳನ್ನು ಸ್ಮರಿಸಿ, ನೈವೇದ್ಯವನ್ನು ಮಾಡಿ, ನೀರಾಜನವನ್ನು ಸಮರ್ಪಿಸಿ, ಗಂಗೆಯನ್ನು ಪೂಜಿಸಬೇಕು,   ಇಲ್ಲಿ ನೀರೇ ಗಂಗೆಯಲ್ಲ.  ಅದರಲ್ಲಿ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳು ಸನ್ನಿಹಿತರಾಗಿರುತ್ತಾರೆ ಎಂದು ಭಾವಿಸಬೇಕು.

 

ಸಂಕಲ್ಪ –  ಆಚಮನ, ಕೇಶವಾದಿ …..

 

ಆಚಮನ ಮಾಡಿದ ನೀರನ್ನು ಆಚಮನಕ್ಕೆ ಮಾತ್ರ ಉಪಯೋಗಿಸಿ. ಬೇರೆ ಎಲ್ಲ ಪೂಜೆಗೂ ಬೇರೆ ನೀರನ್ನು ಉಪಯೋಗಿಸಿ.

ಬಾವಿಯಿಂದ ತಂದ‌ ನೀರಾಗಲಿ ಅಥವಾ ಯಾವುದೇ ನೀರಾಗಲಿ ಅದನ್ನು ಶೋಧಿಸಿ ಪೂಜೆಗೆ ಬಳಸಿ.

ಓಂ ಪ್ರಣವಸ್ಯ ಪರಬ್ರಹ್ಮ ಋಷಿ, ತ್ರಿವಿಕ್ರಮ ದೇವತಾ ಪ್ರಾಣಾಯಾಮೇ ವಿನಿಯೋಗ : |

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಶ್ವೇತವರಾಹ ಕಲ್ಪೇ ವ್ಯೆವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೆ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರ ಮಾನೇನ _ ಸಂವತ್ಸರೇ ದಕ್ಷಿಣಾಯನೇ ಶರದೃತೌ ಆಶ್ವಯುಜ ಮಾಸೇ ಕೃಷ್ಣ ಪಕ್ಷೇ ತ್ರಯೋದಶ್ಯಾ ತಿಥೌ_ವಾಸರೇ ಶುಭನಕ್ಷತ್ರೇ ಶುಭಯೋಗೆ ಶುಭಕರಣೆ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ, ಜಲಪೂರ್ಣ ತ್ರಯೋದಶಿ ನಿಮಿತ್ತ ಶ್ರೀ ಕುಲದೇವತಾ, ಇಷ್ಟದೇವತಾ ಪ್ರೀತ್ಯರ್ಥಂ | ಯಥಾಶಕ್ತಿ, ಯಥಾ ಜ್ಞಾನ ಪೂರ್ವಕ, ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||

 

ಪ್ರಸೀದ ಭಗವನ್ ಆಗಚ್ಛಾಗಚ್ಛ ಭಗವಂತಂ ಗಂಗಾಜನಕಂ ತ್ರಿವಿಕ್ರಮಂ ಅಸ್ಮಿನ್ ಕಲಶೇ ಆವಾಹಯಾಮಿ.

 

ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ |
ನರ್ಮದೇ ಸಿಂದು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು  |

ಭಾಗೀರಥೀಂ ಆವಾಹಯಾಮಿ.

ಓಂ ಇಮಂ ಮೇ ಗಂಗೇ ಯಮುನೇ ಸರಸ್ವತಿ ಶುತುದ್ರಿಸ್ತೋಮಂ ಸಚತಾ ಪರುಷ್ಣ್ಯಾ !

ಅಸಿಕ್ನ್ಯಾ ಮರುದ್ವ್ರದೇ ವಿತಸ್ತಯಾssರ್ಜೀಕಿಯಾ

ಶೃಣುಹ್ಯಾ ಸುಷೋಮಯಾ || (ಹೀಗೆ ಅಭಿಮಂತ್ರಿಸಿ)

 

ಓಂ ಭೂ: ಭಾಗೀರಥೀಂ ಆವಾಹಯಾಮಿ

ಓಂ ಭುವ: ಭಾಗೀರಥೀಂ ಆವಾಹಯಾಮಿ

ಓಂ ಸ್ವ: ಭಾಗೀರಥೀಂ ಆವಾಹಯಾಮಿ

ಗಂಗಾಯೈ ನಮ: | ಗಂಗಾಂ ಅಸ್ಮಿನ್ ಕಲಶೇ ಆವಾಹಯಾಮಿ

 

ಗಂಗಾ ಸಹಿತ ವರುಣಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ರಮಾ ತ್ರಿವಿಕ್ರಮಾಯ ಧ್ಯಾಯಾಮಿ  ಧ್ಯಾನಂ ಸಮರ್ಪಯಾಮಿ. !!

 

ಚಿಂತನೆ – ಈ ಜಲವೇ ಗಂಗೆಯಲ್ಲ.  ಈ ಜಲದೊಳಗೆ ಸಕಲ ತೀರ್ಥಾಭಿಮಾನಿ ದೇವತೆಗಳೊಂದಿಗೆ ಗಂಗೆ ಇದ್ದಾಳೆ. ಆ ಗಂಗೆಯು ಸಕಲ ದೇವತೆಗಳಿಂದ ಸ್ತುತ್ಯನಾದ ಶ್ರೀ ರಮಾ ತ್ರಿವಿಕ್ರಮರ ಪೂಜಿಸುತ್ತಿದ್ದಾಳೆ.  ಅಂತ ಅನುಸಂಧಾನ ಮಾಡಿಕೊಳ್ಳಬೇಕು.

 

ಅರ್ಘ್ಯ ಸಮರ್ಪಯಾಮಿ |                                                        ಪಾದ್ಯಂ ಸಮರ್ಪಯಾಮಿ !

ಆಚಮನಂ ಸಮರ್ಪಯಾಮಿ !

(ಅರ್ಘ್ಯ ಪಾತ್ರೆಯಲ್ಲಿ ನೀರು ಪ್ರತಿ ಮಂತ್ರಕ್ಕೂ ಬಿಡುವುದು)

ಪುನರಾಚಮನಂ ಸಮರ್ಪಯಾಮಿ !

ಪಂಚಾಮೃತ ಸ್ನಾನಂ ಸಮರ್ಪಯಾಮಿ !

(ಹಾಲು, ತುಪ್ಪ, ಸಕ್ಕರೆ, ಜೇನುತುಪ್ಪ, ಮೊಸರು)

ಸ್ನಾನಂ ಸಮರ್ಪಯಾಮಿ !

(ತಿಳಿ ನೀರು )

 

ವಸ್ತ್ರಂ ಸಮರ್ಪಯಾಮಿ ! ನಾನಾ ವಿಧ ಆಭರಣಾನಿ ಸಮರ್ಪಯಾಮಿ !  ಹರಿದ್ರಾ ಕುಂಕುಮ ಗಂಧಾನಿ ಸಮರ್ಪಯಾಮಿ ! ನಾನಾ ವಿಧ ಪರಿಮಳ ಪುಷ್ಪಾಣಿ ಸಮರ್ಪಯಾಮಿ !

 

ಅರ್ಘ್ಯ, ಪಾದ್ಯ,  ಆಚಮಾನೀಯಾದಿ ಸರ್ವೋಪಚಾರ ಪೂಜಾಂ ಸಮರ್ಪಯಾಮಿ |

ದ್ವಾದಶನಾಮ ಪೂಜ  –      ನಂದಿನೈ ನಮ: | ನಲಿನ್ಯೈ ನಮ: | ಸೀತಾಯೈ ನಮ: | ಮಾಲತ್ಯೈ ನಮ: | ಮಲಾಪಹಾಯೈ ನಮ: | ವಿಷ್ಣುಪಾದಾಬ್ಜಸಂಭೂತಾಯೈ ನಮ: | ಗಂಗಾಯೈ ನಮ: | ತ್ರಿಪಥಗಾಮಿನ್ಯೈ ನಮ: | ಭಾಗೀರಥ್ಯೈ ನಮ:|ಭೋಗವತ್ಯೈ ನಮ: | ಜಾಹ್ನವ್ಯೈ ನಮ: | ತ್ರಿದಶೇಶ್ವರ್ಯೈರ್ನಮ: |

ಧೂಪಂ, ದೀಪಂ, ಗೂಡಾಪೂಪ ನೈವೇದ್ಯಂ ಸಮರ್ಪಯಾಮಿ |

ನೀರಾಜನಂ ಸಮರ್ಪಯಾಮಿ |

ಮಂಗಳಾರತಿ ಮಾಡಬೇಕು

ಮಂತ್ರಪುಷ್ಪಂ ಸಮರ್ಪಯಾಮಿ !

ಅನೇನ ತ್ರಿವಿಕ್ರಮ ಪೂಜನೇನ ತಥಾ ಗಂಗಾ ಪೂಜನೇನ ಮಧ್ವಾಂತರ್ಗತ ಗಂಗಾಜನಕ ತ್ರಿವಿಕ್ರಮಾತ್ಮಕ ಶ್ರೀ ಗೋಪಾಲಕೃಷ್ಣ ಪ್ರೀಯತಾಂ ಶ್ರೀ ಕೃಷ್ಣಾರ್ಪಣಮಸ್ತು !!

This is popularly called as Neeru tumbuva habba or water filling festival.    What is this? ನೀರು  ‘Neeru’ means water (jala)  and the tradition of physical cleaning and refilling the container.   This cleaning is done to remove all dirt, evil and  inauspicious things before the entry of Lakshmidevi during Diwali day. 

This is done on Ashwayuja Krishna trayOdashi.  This is popularly called as ನೀರು ತುಂಬುವ ಹಬ್ಬ  (neeru tumbuva habba).  On Ashwayuja Krishna trayodashi, we have to do the gangaa pooja.  We have to clean the haMDe (ಹಂಡೆ).  Ofcourse, now a days, we are rarely seeing haMde, those who are not having haMde, they have to clean their geyser, boiler, etc., We have to fill the hande, geyser, boiler with fresh water, and shall decorate with rangavalli, do the avaahana of gangaadi tirthaas – remember the rivers by chanting

Achamana, saMkalpa………..   kalasha pUja …..

gaMgE cha yamunE chaiva gOdaavarI saraswati |

narmadE siMdu kaavEri jalEsmin sannidhiM kuru | 

gaMgaayai nama: | gaMgaaM asmin kalashE Avaahayaami, arGyapaadyaa AchamaanIyaadi sarvOpachaara pUjaam samarpayaami |

dvaadashanaama pUja  –  naMdinai nama: | nalinyai nama: | sItaayai nama: | maalatyai nama: | malaapahaayai nama: | viShNupaadaabhasaMbhUtaayai nama: | gaMgaayai nama: | tripathagaaminyai nama: | bhaagIrathyai nama: |bhOgavatyai nama: jaahnavyai nama: | tradashEshvaryairnama: |

dhUpaM, dIpaM, gUDaapUpa naivEdyaM samarpayaami | nIraajanaM samarpayaami | naivEdyaM samarpayaami.

After naivEdya samarpaNa, pour the kalasha water to the haMde, boiler, etc.  Next day morning use the water for bath.

ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ |
ನರ್ಮದೇ ಸಿಂದು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು |

######################

ಯಮದೀಪದಾನ :
ಆಶ್ವಯುಜ ಬಹುಳ ತ್ರಯೋದಶಿಯಂದು ಯಮದೀಪದಾನ ಮಾಡತಕ್ಕದ್ದು.
ಈ ದಿನ ಸಾಯಂಕಾಲ ದೀಪವನ್ನು ದಕ್ಷಿಣದಿಕ್ಕಿಗೆ ಮುಖಮಾಡಿ ಮಣ್ಣಿನ ಹಣತೆಯಲ್ಲಿ ಹಚ್ಚಬೇಕು. ಈ ದೀಪ ಮಾರನೇ ದಿನ ಅರುಣೋದಯ ಕಾಲದತನಕ ಉರಿಯುವಂತೆ ಹಚ್ಚಬೇಕು.  ಮನೆಯ ಎತ್ತರದ ಭಾಗದಲ್ಲಿ ಇದನ್ನು ಹಚ್ಚುವುದರಿಂದ ಇದನ್ನು ಆಕಾಶದೀಪ ಎನ್ನುತ್ತಾರೆ.

ಅಕಾಶದೀಪ ಮತ್ತು ಯಮದೀಪದಾನ ಮಾಡುವ ಉದ್ದೇಶ :
ಅ, ಗಗನಮಾರ್ಗದಲ್ಲಿ ಸಂಚರಿಸುವ ಪಿತೃದೇವತೆಗಳಿಗೆ ದಾರಿ ತೀರಿಸುವುದು.
ಆ. ಪಿತೃದೇವತೆಗಳ ತೃಪ್ತಿ
ಇ. ದೀಪ ಬೆಳಗುವುದರಿಂದ ನಮ್ಮ ಸಂಸ್ಕೃತಿಯ ಪ್ರೋತ್ಸಾಹ.

ಈ. ಯಮಧರ್ಮರಾಜನ ಪ್ರೀತಿಗಾಗಿ ಮಾಡುವ ದೀಪದಾನ.   ಯಮರಾಜನ ಕಾರ್ಯವು ಪ್ರಾಣಹರಣ ಮಾಡುವುದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಆಗುವುದಿಲ್ಲ. ಆದರೆ ಅಕಾಲ ಮೃತ್ಯುವು ಯಾರಿಗೂ ಬರಬಾರದೆಂದು  ಯಮಧರ್ಮನಿಗೆ ಕಣಕದಿಂದ ತಯಾರಿಸಿದ ಎಣ್ಣೆಯ ದೀಪವನ್ನು (ಹದಿಮೂರು ದೀಪಗಳನ್ನು) ತಯಾರಿಸಿ ಸಂಜೆಯ ಹೊತ್ತಿನಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿಡಬೇಕು.

ಇತರ ಯಾವುದೇ ದಿನದಂದು ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ.  ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಕು. ಆನಂತರ ಈ ಮಂತ್ರದಿಂದ ಪ್ರಾರ್ಥನೆಯನ್ನು ಮಾಡಬೇಕು.

ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾಸಹ |
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ | 
ಹಸ್ತದಲ್ಲಿ ಪಾಶ ದಂಡಗಳನ್ನು ಹಿಡಿದ ಸೂರ್ಯಪುತ್ರ ಯಮ ಧರ್ಮರಾಜನು ಶ್ಯಾಮಲಾದೇವಿಯೊಂದಿಗೆ, ತ್ರಯೋದಶಿಯ ದೀಪದಾನದಿಂದ ಸಂತುಷ್ಟನಾಗಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಬೇಕು.

 

Leave a Reply

Your email address will not be published.

Sumadhwa Seva © 2022