Sri Kambalur Ramachandra Tirtharu

 

 

 

Sri Kambaluru Ramachandra Tirtharu 

 

*ಕಂಬಾಲೂರು* – ಕಂಬಾಲು ಎಂಬುದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೋಮಲಕುಂಟಾ ತಾಲೂಕಿನ ಒಂದು ಗ್ರಾಮ.

वंदारुकल्पतरवे वादिकैरवभानवे ।
श्रीरामचंद्रगुरवे नम: कारुण्यसिंधवे ।

ವಂದಾರುಕಲ್ಪತರವೇ ವಾದಿಕೈರವಭಾನವೇ |
ಶ್ರೀರಾಮಚಂದ್ರಗುರವೇ ನಮ: ಕಾರುಣ್ಯಸಿಂಧವೇ |

వందారుకల్పతరవే వాదికైరవభానవే |
శ్రీరామచంద్రగురవే నమ: కారుణ్యసింధవే |
vaMdaarukalpataravE vaadikairavabhaanavE
shrIraamachaMdraguravE nama: kaaruNyasiMdhavE |

Click for PDF File of KAMBALURU RAMACHANDRA TIRTHARU

Period – 1575 to 1632 AD
Peeta Period – 1612 to 1632
Father – Sri Kuppacharya
Family – Pennathur family
5th in succession after Sri Vyasarajaru
Parampare – Vyasaraja Mutt
Vrundavana @ Rayavellore in Arcot District of TN
Mruttika Vrundavana @ Tirumakoodalu
Aradhana – Margashira Shudda Triteeya
Ashrama Gurugalu – Sri Sripati Tirtharu
Ashrama Shishyaru – Sri Lakshmi Vallabha Tirtharu
His Shishyaas – VaaTivaala (Vanivala) Narasimhacharya,  Sri Ratnagarbha Odeyaru

 

He is regarded as the “Sampradaya Pravarthakaru” of Sri Vyasaraja Mutt.  He was a great scholar and a debater.  He belongs to Kambaluru family (Sri Vibudendra Tirtharu also belong to the same family).  His poorvikaas are from Coimbatore District in KavileeppaaLayaM village in SatyamangalaM Taluk.

 

  1. ಶ್ರೀ ವ್ಯಾಸರಾಜ ಮಠ ಪರಂಪರೆಯಲ್ಲಿ *ಸಂಪ್ರದಾಯ ಪ್ರವರ್ತಕರು* ಎಂದೇ ಪ್ರಸಿದ್ಧರಾದ ಶ್ರೀ ಕಂಬಾಲೂರು ರಾಮಚಂದ್ರ ತೀರ್ಥರು ಶ್ರೀ ವ್ಯಾಸರಾಜರ ನಂತರ ಐದನೇಯವರಾಗಿ ವಿದ್ಯಾ ಸಿಂಹಾಸನವನ್ನೇರಿದರು. 1612ರಿಂದ 1632ವರೆಗೆ ಇಪ್ಪತ್ತು ವರ್ಷಗಳ ಕಾಲ ಪೀಠಾಧಿಪತಿಯಾಗಿದ್ದರು.  ಇವರ ಆಶ್ರಮ ಗುರುಗಳು ಶ್ರೀಪತಿತೀರ್ಥರು.  ಇವರ ವಿದ್ಯಾಭ್ಯಾಸ ಶ್ರೀ ವಿಜಯೀಂದ್ರತೀರ್ಥರಲ್ಲಿ ಆಯಿತು.*ಸಂಪ್ರದಾಯ ಪ್ರವರ್ತಕರು* – ಶ್ರೀ ವ್ಯಾಸರಾಜ ಮಠಕ್ಕೆ ಏಕಾದಶಿ ನಿರ್ಣಯ ಮತ್ತು ಶ್ರವಣ ದ್ವಾದಶಿ ನಿರ್ಣಯ ಮೊದಲಾದವುಗಳಿಗೆ ಸಂಬಂಧಿಸಿದಂತೆ ಅವರ ನಿರ್ಣಯದಂತೇ ನಡೆಯುತ್ತದೆ

    *ಇವರ ಕೆಲವು ಕೃತಿಗಳು* –
    ೧. ಶ್ರೀಮನ್ಯಾಯಸುಧಾಕ್ಕೆ ಟಿಪ್ಪಣಿ,
    ೨. ಋಗ್ಭಾಷ್ಯ ಟೀಕಾಗೆ ಟಿಪ್ಪಣಿ,
    ೩. ಐತರೇಯ ಭಾಷ್ಯ ಟೀಕಾ,
    ೪. ತತ್ವವಿವೇಕ ಟಿಪ್ಪಣಿ.
    ೫. ತತ್ವಪ್ರಕಾಶಿಕಾ ನಿವೃತ್ತಿ
    ೬. ಏಕಾದಶಿ ನಿರ್ಣಯ
    ೭. ತಾತ್ಪರ್ಯ ಚಂದ್ರಿಕಾ ಟಿಪ್ಪಣಿ
    ೮. ವಿಷ್ಣು ಸಂಹಿತಾ ವ್ಯಾಖ್ಯಾನ

    ಇವರು ತಮ್ಮ ಸಮಯವನ್ನು ಮಧ್ವಶಾಸ್ತ್ರ ಪಾಠಕ್ಕೇ ಮೀಸಲಾಗಿರಿಸಿದ್ದರು. ತಮ್ಮ ನ್ಯಾಯಸುಧಾ ಟಿಪ್ಪಣಿಯಲ್ಲಿ ಪರಮಾತ್ಮನ ದೋಷದೂರತ್ವವನ್ನು ಮೊದಲು ಹೇಳಿ ನಂತರ ಗುಣಪೂರ್ಣತ್ವ ಪ್ರತಿಪಾದನೆ ಮಾಡಿದ್ದಾರೆ.

    ಒಮ್ಮೆ ಇವರು ವೇಲೂರಿನಲ್ಲಿ ಚಾತುರ್ಮಾಸ್ಯಕ್ಕೆ ಕೂತಾಗ ಪೆನತ್ತೂರು ಎಂಬ ಗ್ರಾಮದ ದೊಡ್ಡ ಬ್ರಾಹ್ಮಣ ಗುಂಪೇ ಇವರ ಪಾಂಡಿತ್ಯಕ್ಕೆ ಮಾರು ಹೋಗಿ, ತಪ್ತಮುದ್ರಾಧಾರಣೆ ಮಾಡಿಸಿಕೊಂಡು ಮಧ್ವಮತಾನುಯಾಯಿಯಾದರು.

    ಒಮ್ಮೆ ಇವರೊಂದಿಗೆ ವಾದ ಮಾಡಿ ಸೋತ ಕೆಲವರು ಇವರನ್ನು ಕೊಲ್ಲಲೆಂದು ಹವಣಿಸಿ ಇವರು ಬರುವ ಮಾರ್ಗದಲ್ಲೇ ಹೊಂಚುಹಾಕಿ ಕಾದಿದ್ದು ಇವರ ಮೇಲೆ ದೊಡ್ಡ ಬಂಡೆಗಲ್ಲನ್ನು ಬೀಳುವಂತೆ ಮಾಡಿದರು. ಇದನ್ನು ದೈವಕೃಪೆಯಿಂದ ತಿಳಿದ ಸ್ವಾಮಿಗಳು *ಅಂತರಾಳೇ ತಿಷ್ಠ* ಎಂದರಂತೆ.  ಆ ಕಲ್ಲು ಅಲ್ಲೇ ನಿಂತಿತಂತೆ.
    ನಂತರ ತಮ್ಮ ವೃಂದಾವನಸ್ಥರಾದ ಮೇಲೆ ಅದೇ ಕಲ್ಲನ್ನು ತಮ್ಮ ವೃಂದಾವನದ ಮೇಲೆ ಇರಿಸಲು ಹೇಳಿದರು.  ಈಗಲೂ ಆ ಕಲ್ಲು ಅವರ ವೃಂದಾವನದ ಮೇಲಿದೆ.  ಆ ಶಿಲೆಯ ಮೇಲೆ ಮುಖ್ಯಪ್ರಾಣದೇವರ ಪ್ರತೀಕವನ್ನು ಮಾಡಿಸಿದ್ದಾರೆ.  ಇವರ ವೃಂದಾವನ ಸ್ಥಳ ಪಾಲಾರ್ ನದಿ ತೀರದಲ್ಲಿ ರಾಯವೇಲೂರಿನಲ್ಲಿ ತಮ್ಮ ಗುರುಗಳಾದ ಶ್ರೀಪತಿತೀರ್ಥರ ಬಳಿಯಿದೆ.

    ಇವರು ಕನ್ನಡ, ತೆಲುಗು, ತಮಿಳು ಮತ್ತು ಸಂಸ್ಕೃತ ಎಲ್ಲದರಲ್ಲೂ ಪರಿಣಿತರಾಗಿದ್ದರು.

    ಇವರು ಶ್ರೀಮುಷ್ಣದಲ್ಲಿ ಲಕ್ಷ್ಮೀ ನರಸಿಂಹ ದೇವರನ್ನು ಪ್ರತಿಷ್ಠಾಪಿಸಿದ್ದಾರೆ.

    ಕಡತ್ತೂರು ಜಿಲ್ಲಾ ಪನರುಟಿ ತಾಲೂಕಿನ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ದೇವರನ್ನು ಪ್ರತಿಷ್ಠಾಪಿಸಿದ್ದಾರೆ

    ವೆಲ್ಲೂರಿನಲ್ಲಿ  ಮೂಲ ಮತ್ತು ಮೃತ್ತಿಕಾ ವೃಂದಾವನ ಎಲ್ಲಾ ಸೇರಿ ಒಂಭತ್ತು ಅಂದರೆ ನವವೃಂದಾವನಗಳಿವೆ.   ಅವುಗಳು :
    1. ರಾಘವೇಂದ್ರ ತೀರ್ಥರ ಮೃತ್ತಿಕಾ ವೃಂದಾವನ,                                                     2. ಶ್ರೀ ಶ್ರೀಪತಿತೀರ್ಥರ ಮೂಲ ವೃಂದಾವನ,                                                         3. ಶ್ರೀ ಕಂಬಾಲೂರು ರಾಮಚಂದ್ರ ತೀರ್ಥರ ಮೂಲ ವೃಂದಾವನ,                         4. ಶ್ರೀ ವಿದ್ಯಾಪತಿ ತೀರ್ಥರು (ಉ.ಮಠ),                                                                 5. ಶ್ರೀ ಸತ್ಯಾಧಿರಾಜರು (ಉ.ಮಠ), ಮತ್ತು ಬಿಡಿ ಸನ್ಮಾಸಿಗಳಾದ                               6. ಶ್ರೀ ಕೇಶವ ಒಡೆಯರು ;
    7. ಶ್ರೀ ಗೋವಿಂದ ಮಾಧವ ಒಡೆಯರು ;                                                                 8.  ಶ್ರೀ ಭೂ ವರಾಹ ಒಡೆಯರು;
    9. ಶ್ರೀ ರಘುನಾಥ ಒಡೆಯರು.

    ಜೊತೆಗೆ ಶ್ರೀ ವ್ಯಾಸರಾಯರಿಂದ ಪ್ರತಿಷ್ಠಿತ ಮುಖ್ಯಪ್ರಾಣ ದೇವರ ವಿಗ್ರಹ ಇದೆ .

Education – Sri Kambaluru Ramachandra Tirtharu, in his Srimannyaaya Sudha Tippani,  has quoted that he has studied under Sri Vijayeendraru
पदवाक्यप्रमाणज्ञान् सौशील्याद्युपशोभितान् ।
विजयीन्द्रयतीन्द्राख्यान् सेवे विद्यागुरून्मम ॥

 

Mass conversion to Madhwa Philosophy –  When he was sitting for Chaturmasya in Pennaatturu near Veluru, he had given Madhwa Deekshe to many Kannada speaking Brahmins and converted them to Madhwa philosophy.  Still many such families are still living in Coimbatore District with the surname Pennatturu.
His works –
  1. Srimannyaayasudha VyaaKyaa
  2. Sri Jayatirtha’s Rugbhashya Teeka Vyaakyaa
  3. AitarEya Bhaashya Teeka
  4. TatvavivEka Teeka Tippani
  5. Tatvaprakashika VivruttiEk
  6. Ekadashi NirnayaVi
  7. Vishnu samhita vyakyana
  8. Tatparya Chandrika Tippani

Stopping of Big Rock – Raya Vellore –

During his stay once in Rayavellore, some miscreants unable to sustain the growth of Madhwa Shastra and his Vak Chaturya, tried to kill him by throwing a big stone on him, when he was travelling.  He realized that a big stone is being thrown, so he said “antaraale tista”.  Immediately that rock stood there without falling on anybody.  Such was his tapashakthi.  The Rock which was stopped by swamiji is still can be seen above his Vrundavana. 

 

Contemporaries –   , Sri Vidyadeesha Tirtharu (1619-1631), Sri Vedanidhi Tirtharu (1631-1635), Sri Sudheendra Tirtharu (1595-1623), Raghavendra Tirtharu (1623-1671)

 

“Madhwa Vijaya Nagara”

The area where his vrundavana is located is termed as “Madhwa Vijaya Nagara”, Vellore.  Apart from Sri Kambalur Ramachandra Tirtharu, there are 8 more vrundavanas located in that place. 
They are : 
  1. Sri Vidyapathy Tirtharu.. ……..Sri Uttaradi Mutt
  2. Sri Sathyadiraja Tirtharu.. ……Sri Uttaradi Mutt
  3. Sri Sripati Tirtharu, Sri Vyasaraja Mutt
  4. Sri Kambaluru Ramachandra Tirtharu, Sri Vyasaraja Mutt
  5. Sri Raghavendra Swamigalu, Mruttika Vrundavana
  6. Sri Kesava Odeyaru..Bidi Sanyasi, Shishyaru of Satyadiraja Tirtharu
  7. Sri Govinda Madhava Odeyaru…..    –  do  –
  8. Sri Bhoovaraga Odeyaru….. ……..   –  do  –
  9. Sri Raghunatha Odeyaru,…..             – do  –

Leave a Reply

Your email address will not be published.

Sumadhwa Seva © 2022