Saraswathi pooja

ಸರಸ್ವತಿ ಪೂಜೆ/ ವೇದವ್ಯಾಸ ಪೂಜೆ 

Vedavyasa Temple @ Badri Yadavarya Kararchita Vedavyasaru
  Vedavyasa Temple @ Badri                                   
               Yadavaarya karaarchita Vedavyasaru
ಜಯತಿ ಪರಾಶರಸೂನು: ಸತ್ಯವತೀ ಹೃದಯನಂದನೋ ವ್ಯಾಸ: |
ಯಸ್ಯ ಪ್ರಸಾದಾದ್ವಕ್ಷ್ಯಾಮಿ ನಾರಾಯಣಕಥಾಮಿಮಾಂ | (ಹರಿವಂಶ)
ಜಯತ್ಯಜೋಽಖಂಡಗುಣೋರುಮಂಡಲ:
ಸದೋದಿತೋ ಜ್ಞಾನಮರೀಚಿಮಾಲೀ |
ಸ್ವಭಕ್ತಹಾರ್ದೋಚ್ಚತಮೋನಿಹಂತಾ-
ವ್ಯಾಸಾವತಾರೋ ಹರಿರಾತ್ಮಭಾಸ್ಕರ: (ಮ.ಭಾ.ತಾ.ನಿ)

saraswathi

ವಾಗ್ವಾಣೀ ಭಾರತೀ ಬ್ರಾಹ್ಮೀ ಭಾಷಾ ಗೀ: ಶಾರದಾ ಸ್ವರಾ |
ಸರಸ್ವತೀ ಕಾಮಧೇನುರ್ವೇದಗರ್ಭಾಽಕ್ಷತ್ಮಿಕಾ | ೧ |
ದ್ವಾದಶೈತಾನಿ ನಾಮಾನಿ ಸರಸ್ವತ್ಯಾಸ್ತ್ರಿಸಂಧಿಷು |
ಜಪನ್ ಸರ್ವಜ್ಞತಾಂ ಮೇಧಾಂ ವಾಕ್ಪಟುತ್ವಂ ಲಭೇದ್ಧ್ರುವಂ |
ಷಣ್ಮಾಸಾನ್ನಿ:ಸ್ಪೃಹೋ ಲಬ್ದ್ವಾ ಲಭೇಜ್ಞಾನಂ ವಿಮುಕ್ತಿದಂ |
(ಸರಸ್ವತೀ ದ್ವಾದಶನಾಮ ಸ್ತೋತ್ರಂ)

click for Devaranamagalu on Saraswathi

Please click the link for Vedavyasa/Saraswathi  pooja Vidhana (in Kannada)

Click for  Pooja Vidhana in Telugu/Tamil lipi

Click for Pooja Vidhana in Sanskrit Lipi

 

Saraswathi Pooja/Vedavyasa pooja  :

The pooja of Saravaswathi during Navarathri is also called as “Sri Vedavyasa pooja”, “Sri Saraswathi pooja”, “Pustaka pooja”.  As we are doing the pooja of granthas, for which the mukya pratipaadya roopa is Sri Vedavyasa devaru, we have to worship Vedavyasaru.

Ashwayuja Shudda Saptami-Astami when Moola Nakshatra is there.

20.10.2023 ಮೂಲ ನಕ್ಷತ್ರ – ಸರಸ್ವತಿ ಆವಾಹನೆ

21.10.2023 ಸರಸ್ವತಿ ಪೂಜೆ

22.10.2023 ಸರಸ್ವತಿ ಪೂಜೆ

23.10.2024 ಶ್ರವಣ ನಕ್ಷತ್ರ – ಸರಸ್ವತಿ ವಿಸರ್ಜನೆ

 

ಸರಸ್ವತಿ ಆವಾಹನೆಯನ್ನು ಮೂಲಾ ನಕ್ಷತ್ರದಲ್ಲಿ (ಸಾಮಾನ್ಯವಾಗಿ ಸಪ್ತಮಿ ದಿನ) ಮಾಡಿ, ಮುಂದಿನ ಪೂರ್ವಾಷಾಡ ಮತ್ತು ಉತ್ತರಾಷಾಢ ನಕ್ಷತ್ರ ದಿನಗಳಲ್ಲಿ ಪೂಜೆ ಮಾಡಿ, ಶ್ರವಣ ನಕ್ಷತ್ರ ದಿನ (ಸಾಮಾನ್ಯವಾಗಿ ದಶಮಿ ದಿನ) ವಿಸರ್ಜನೆ ಮಾಡತಕ್ಕದ್ದು

 

This time Saraswathi Avahana to be done on 02.10.2022 – in moola nakshatra

POOJA and naivedya to be done on 21.10.23 and 22.10.23 – Poorvashada Nakshatra, Uttarashada Nakshatra  and visarjana to be done when Shravana Nakshatra is there.

23.10.2022 – Visarjane

Saraswathi Visarjane to be done when Shravana Nakshatra is there, it will be usually on Dashami/Ekadashi. –

During these days anadhyayana –  No new paata (adhyayana)  to be done-

However, we can do the chintana on these days .

 

Which are the anadhyayana days?

ಅಮಾವಾಸ್ಯಾಪ್ಯಷ್ಟಮಿ ಚ ಪ್ರತಿಪಚ್ಚ ಚತುರ್ದಶಿ |
ಪೌರ್ಣಮಾಸಿ ಪ್ರಕೀರ್ತ್ಯೇತೇ ಯೇನಧ್ಯಾಯಾ: ಯಥಾತಥಂ |

अमावास्याप्यष्टमि च प्रतिपच्च चतुर्दशि ।
पौर्णमासि प्रकीर्त्येते येनध्याया: यथातथं ।

i.e., Amavasya, Ashtami, Pratipat, Chaturdashi, Pournami.  During these period we must not study new paata, however we can do the chintana manthana of granthas. 

While doing Sri Vedavyasa pooja, Saraswathi pooja, we have to do the following steps :

ಸರಸ್ವತಿ ಪೂಜೆ

ಚತುರವದನನ ರಾಣಿ ಅತಿರೋ
ಹಿತ ವಿಮಲ ವಿಜ್ಞಾನಿ ನಿಗಮ
ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ |
ನತಿಸಿ ಬೇಡುವೆ ಜನನಿ ಲಕ್ಷ್ಮೀ
ಪತಿಯ ಗುಣಗಳ ತುತಿಪುದಕೆ ಸ
ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ
ಹರಿಕಥಾಮೃತಸಾರ || ಮಂಗಳಾಚರಣ ಸಂಧಿ ೫ ||

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿರ್ಭವತು ಮೇ ಸದಾ !

ಸರಸ್ವತಿಯ ವೀಣೆಯ ಹೆಸರು “ಕಚ್ಛಪಿ”

ಇವಳು ಕೂಡ ಬ್ರಹ್ಮ ವಾಯುಗಳಂತೆ 32 ಗುಣಪೂರ್ಣೆ.
ಬ್ರಹ್ಮ ದೇವರಿಗಿಂತ ೧೦೦ ಗುಣ ಕಡಿಮೆ.

ವಾಗ್ವಾಣೀ ಭಾರತೀ ಬ್ರಾಹ್ಮೀ
ಭಾಷಾ ಗೀ: ಶಾರದಾ ಸ್ವರಾ |
ಸರಸ್ವತೀ ಕಾಮಧೇನುರ್ವೇದಗರ್ಭಾಽಕ್ಷತ್ಮಿಕಾ | ೧ |
ದ್ವಾದಶೈತಾನಿ ನಾಮಾನಿ ಸರಸ್ವತ್ಯಾಸ್ತ್ರಿಸಂಧಿಷು |
ಜಪನ್ ಸರ್ವಜ್ಞತಾಂ ಮೇಧಾಂ
ವಾಕ್ಪಟುತ್ವಂ ಲಭೇದ್ಧ್ರುವಂ |
ಷಣ್ಮಾಸಾನ್ನಿ:ಸ್ಪೃಹೋ ಲಬ್ದ್ವಾ
ಲಭೇಜ್ಞಾನಂ ವಿಮುಕ್ತಿದಂ |
(ಸರಸ್ವತೀ ದ್ವಾದಶನಾಮ ಸ್ತೋತ್ರಂ)

ಸರಸ್ವತಿ ದೇವಿಯನ್ನು ಪೂಜಿಸುವ ಉದ್ದೇಶ – ಸರಸ್ವತಿಯು ವಿದ್ಯಾಭಿಮಾನಿ ದೇವತೆ. ಇಂದು ಪುಸ್ತಕವನ್ನು ಗ್ರಂಥಗಳನ್ನು ಇಟ್ಟು ಪೂಜಿಸುತ್ತಾರೆ. ಗ್ರಂಥಗಳನ್ನು ಪೂಜಿಸುವಾಗ ಆ ಪುಸ್ತಕದಲ್ಲಿ ಸರಸ್ವತಿ ದೇವಿಯ ಸನ್ನಿಧಿಯನ್ನು ಸ್ಮರಿಸಬೇಕು.

 

ಪ್ರಾತಃ: ಸ್ಮರಣೀಯ ಶ್ರೀ ದೇವೇಂದ್ರತೀರ್ಥರು ವೇದವ್ಯಾಸ ಚಿಂತನೆ ಹೇಳುತ್ತಿದ್ದ ಕ್ರಮ :  “ನಾವು ಪೂಜಿಸುವ ಗ್ರಂಥಗಳೇ ವೇದವ್ಯಾಸರಲ್ಲ.  ಆ ಗ್ರಂಥದಲ್ಲಿ ಚತುರ್ಕಪರ್ದ ಮತ್ತು ಅಂಭೃಣೀ (ಇಬ್ಬರೂ ವೇದವ್ಯಾಸರ ಪತ್ನಿಯರು) ಸಹಿತರಾದ ವೇದವ್ಯಾಸ ದೇವರು ಇರುತ್ತಾರೆ.  ಅವರು ಬ್ರಹ್ಮ ವಾಯು ಗರುಡ ಶೇಷರುದ್ರಾದಿ ದೇವತೆಗಳು ಮತ್ತು ಅವರವರ ಪತ್ನಿಯರಿಂದ, ಇಂದ್ರಾದಿ ಸಮಸ್ತ ದೇವತೆಗಳಿಂದ ಸೇವಿತರಾಗಿ ಯೋಗಾಸನದಲ್ಲಿ ಕುಳಿತಿರುತ್ತಾರೆ “.

 

ಈ ದಿನ ಜ್ಞಾನರೂಪಿ ಹಯಗ್ರೀವ, ಪರಮಾತ್ಮನ ದಶಾವತಾರ, ಸರಸ್ವತಿ ಭಾರತೀದೇವಿಯರು, ಬ್ರಹ್ಮ ವಾಯುಗಳೂ, ಸರ್ವಮೂಲ ದಯಪಾಲಿಸಿ ತತ್ವವಾದವನಿತ್ತ ಆಚಾರ್ಯ ಮಧ್ವರು , ಪದ್ಮನಾಭಾದಿ ಸಮಸ್ತ ಯತಿಗಳನ್ನೂ, ದಾಸ ಚತುಷ್ಟಯರನ್ನೂ ಸ್ಮರಿಸಬೇಕು.

 

ನಾವು ಕೋರಬೇಕಾದ್ದು : ಜ್ಞಾನ ಭಕ್ತಿ ವೈರಾಗ್ಯ

 

ನಾವು ಇಡಬೇಕಾದ ಗ್ರಂಥಗಳು : ಮಹಾಭಾರತ, ರಾಮಾಯಣ ಭಾಗವತ, ಬ್ರಹ್ಮಸೂತ್ರ, ಆಚಾರ್ಯ ಮಧ್ವಕೃತ ಸರ್ವಮೂಲ, ಟೀಕಾಚಾರ್ಯರ ಟೀಕಾಗ್ರಂಥಗಳು, ಟಿಪ್ಪಣಿಗಳು, ವ್ಯಾಖ್ಯಾನಗಳು,ಹರಿಕಥಾಮೃತಸಾರ,  ದಾಸವರೇಣ್ಯರ ಕೃತಿಗಳು, ಇವುಗಳನ್ನು ಜೋಡಿಸಿ, ರಂಗವಲ್ಲಿ ಹಾಕಿ, ತಳಿರು ತೋರಣ ಕಟ್ಟಿ, ಅಲಂಕರಿಸಬೇಕು.

 

ವೇದವ್ಯಾಸ ಪೂಜೆ ದಿನ ಮಾಡಬೇಕಾದ ಪರಮಾತ್ಮನ ವಿವಿಧ ರೂಪಗಳ ಪೂಜೆ –
*ಹಯಗ್ರೀವ* – ಈ ರೂಪದಿಂದ ಶಾಸ್ತ್ರಗಳು ಹೊರಬಂದಿದ್ದು
*ಪರಶುರಾಮ* – ಇದು ಅಗ್ನ್ಯಂತರ್ಗತನಾದ ಪರಮಾತ್ಮನ ರೂಪ
*ಕಪಿಲರೂಪ* – ಈ ರೂಪದಿಂದಲೇ ವೈದಿಕ ಸಾಂಖ್ಯಶಾಸ್ತ್ರ ಬಂದಿದ್ದು
*ದತ್ತಾತ್ರೇಯ* – ಇದು ಜ್ಞಾನ ಕಾರ್ಯ ರೂಪ
*ಐತರೇಯ ರೂಪ* – ಐತರೇಯೋಪನಿಷತ್ ನೀಡಿದ ರೂಪ
*ಹಂಸರೂಪ* – ಈ ರೂಪದಿಂದಲೇ ಯತಿ ಪರಂಪರೆಯ ಪ್ರವರ್ತನೆ ಮಾಡಿದ್ದು
*ಧನ್ವಂತರಿ ರೂಪ* – ಸಮುದ್ರಮಥನ ಕಾಲದಲ್ಲಿ ಅಮೃತವನ್ನು ನೀಡಿದ ರೂಪ
*ರಾಮರೂಪ* – ಪರಮಾತ್ಮನ ವಾಸುದೇವ ರೂಪದಿಂದ ಬಂದಿದ್ದು
*ಕೃಷ್ಣ ರೂಪ* – ಭಗವದ್ಗೀತೆ ನೀಡಿದ ರೂಪ ಮತ್ತು ಕಲಿಯುಗಕ್ಕೆ ಅತಿ ಸಮೀಪದ ಅವತಾರ ರೂಪ
*ವೇದವ್ಯಾಸ ರೂಪ* – ವೇದವಿಭಾಗ ಮಾಡಿದ ರೂಪ, ಅಷ್ಟಾದಶ ಪುರಾಣಗಳ ನೀಡಿದ ರೂಪ

 

 

 

pratasmaraneeya Sri Devendra Tirtharu (Vrundavana @ Mulabagilu) was telling as to how to do chintana of Vedavyasa devaru : – The granthas what we are doing the pooja itself is not Vedavyasa Devaru. In the granthas, there is the Sannidhana of Chaturkaparda and Ambruni (wives of Vedavyasaru) and Vedavyasa Devaru, which contains the Vishwakarma nirmita idol of paramathma. He would be humbly worshipped by Brahma, vayu, ,Saraswathi, Bharathi, Garuda, Shesha, Rudra, – Sauparni, Varuni, Parvati .
and Indraadi samasta devataas.

Sri Vedavyasa Devaru would be giving the Jnaana to all the devate and the entire world. We should also do chintana of Hayagreeva, dashaavatara roopi Bhagavan, Saraswathi-,, Acharya Madhwa etc.

We must also do the smarana of samasta gurugalu starting from Padmanabha Tirtharu, Narahari Tirtharu, Madhava Tirtharu, Akshobhya Tirtharu, Jayatirtharu, Sreepadarajaru, Vyasarajaru, Vijayeendraru, Rayaru, etc and daasa chatustaya.

We must request them to offer Jnaana, bhakthi, vairagya and enable our mind to stay in Vishnu Sarvottama and vayu jeevottama pratipaadane.

 

We have to place all the Bhagavaan Vedavyasakruta sachaastra books like Mahabharata,  Ramayana, Bhagavatha, Brahmasootra, etc.,   Bhagavan Acharya praneeta Sarvamoola granthas, Teekakrutapaada kruta Teekaas, Sri Vadirajakruta yuktimallika, Rukmineesha Vijaya, etc., Sri Vyasaraja kruta Chandrikaadi granthas,  Sri Raghavendra Tirtha kruta Parimalaadi granthaas, and other Tippanis of other tippanikaars, Sri Purandaradaasa kruta devaranamaas, Sri Jagannatha daasa kruta Harikathamrutasaara, and other devaranama books, etc. in a platform suitably placed in order (yathaashakthi).    They should be decorated with Mango leaves, bale kandu, and other suvaasita flowers.  If possible, the sarvamoola granthaas, shall be kept in a reshme vastra.   We have to perform the vedavyasa pooja.
Initially sankalpa to be done…..  Peetapooja,     We have to perform the dhyaana of various Sri hari roopas as mentioned herebelow :
 1. Hayagreeva roopa dhyaana. as this is the roopa which gave us all the shaastras.
 2. Parashurama Devaru – as he is the agnyantargata bhagavadroopa
 3. Sri Kapilaroopa – As it is the roopa through which we got the Vaidika saannkya Shaastra.
 4. Dattraatreya roopa dhyaana – As this is also jnaana kaarya roopa
 5. Aithareya roopa dhyaana – As this is the roopa which gave us the Aitareya shruti
 6. Hamsa roopa dhyaana – As this is the yati parampare pravartaka roopa
 7. Dhanvantari roopa dhyaana – As it is the roopa which gave as Amrutha during Samudra mathana.    Further, this is the Ayurvedha pravarthaka roopa.
 8. Sri Rama dhyaana – As this is the pradurbhava roopa of vasudeva roopa .
 9. Sri Krishna dhyaana – This is the Vaduseva roopa which gave us Bhagavad Geetha.  Further, he is the roopa, which is nearest to Kaliyuga.
 10. Sri Nrusimha roopa dhyaana –  This is the roopa which  removes all the hurdles of adhyaatmika saadhana
 11. Sri Vedavyaasa dhyaana  –  This is the roopa which gave us the division of Vedaas; which gave us Sarvotrukrushta Mahabhaarata, brahma meemaamsa, Bhagavatha.    It is said that there is nothing which Bhagavaan Vedavyasaru has left.
 12. Sri Narayana dhyaana – This is said to be the moola roopa for all the roopaas.  There is no bedha between any roopa of Sri hari.
In this way the different bhagavat  roopas to be worshipped first.  Then praana pratishta to be done.
We have to the Mahalakshmi dhyaana, (Sat guna abhimaani)  Bhoodevi dhyaana (Rajo guna abhimaani roopa) , Durgadhyaana  (Tamo guna abhimaani roopa).
We have to the dhyaana of Chaturmukha brahma, Mukya praana, saraswathi, Bharathi, Garuda, Sesha, Rudra, Gauri,  Vinayaka dhyaana
(If we can’t chant all the shlokaas for different roopaas, atleast we have to the smarana of these roopas)
Next Anga pooja, naama pooja, avarana pooja,  doopa, deepa, naivedya to be done, Mangala neeraajana to be done.
Detailed pooja system is available in the pdf.

Updated: October 17, 2023 — 9:04 pm

Leave a Reply

Your email address will not be published.

Sumadhwa Seva © 2022