keerthane

1.
ಸಾಧನವೆಂಬೋದಿದೆ ಸಕಲ ಕಾಲದಲ್ಲಿ
ಆದರದಿಂದಲಿ ಕೇಳೋ ಎಲೊ ಜೀವವೇ
ಭೂದೇವ ದೇಹವಿನ್ನು ಬಾಹೋದೆ ದುರ್ಲಭ
ಮೇದಿನಿಯಲ್ಲಿ ಪುಟ್ಟಿಬಂದು ಪೂರ್ಣ-
ಭೋಧರ ಮತದಲ್ಲಿ ಪೊಂದುವದೆ ನಿರ್ಜ-
ರಾದಿಗಳಿಗೆ ಬಲು ದೂರ ಕಾಣೊ
ವೇದ ಭಾಗವತ ರಾಮಾಯಣ ಭಾರತ
ಓದುವ ಪುರಾಣ ಮಿಕ್ಕಾದದಲ್ಲಿ ಪಂಚ-
ಭೇದ ಮಾರ್ಗವೆ ತಿಳಿದು ಕಂಡ ಮತಿಗೊಡದೆ
ಸಾಧಿಸು ಹರಿಯ ಪಾದ ಧೃಡತರದಲ್ಲಿ
ಸಾಧನ ನೋಡಿದರು ಸುಲಭದೊಳುಂಟು ಅ
ಗಾಧವಿಲ್ಲವೋ ಕಾಣೊ ತಿಳಿದ ಮೇಲೆ
ಪೋದ ದಿನಗಳಲ್ಲಿ ಮಾಡಿದ ಕರ್ಮಪುಣ್ಯ
ವಾದದ್ದು ಎನ್ನು ನಿಶ್ಚಲ ಗುಣದಲ್ಲಿ
ಖೇದವ ಬಡದಿರು ವೈಕುಂಟನಗರಿಗೆ
ಹಾದಿಯಾಗುವದೊ ಇಲ್ಲೆಂದು ನೀನು
ಆದಿಯಲ್ಲಿ ಹರಿ ಮಾಡಿದ ಕ್ಲಿಪ್ತಿಗೆ
ಭಾದೆ ಬಾರದೆಂದು ಕಾಣೊ ಏನಾದರೂ
ನೀ ಧೈರ್ಯದಲ್ಲಿರು ಮಧ್ವದಾಸರು ನಿತ್ಯ-
ವಾದ ತಮಸ್ಸಿನಲ್ಲಿಗೆ ದೂರರೆಂದೂ
ಕ್ರೋಧರಹಿತ ನಮ್ಮ ವಿಜಯವಿಠಲರೇಯನ
ಪಾದವೇ ಕೇವಲ ನಂಬು ನಂಬು ಬಿಡದೆ ||

____________________

2. harirEva parO, harirEva guru: |

ಹರಿರೇವ ಪರೋ, ಹರಿರೇವ ಗುರು:
ಹರಿರೇವ ಜಗತ್ಪಿತೃ ಮಾತೃಗತಿ: | ಆಚಾರ್ಯ ಮಧ್ವ|

ಎಂಬುದನ್ನೇ ಶ್ರೀ ವಿಜಯದಾಸರು ಶ್ರೀಹರಿಯ ಗುಣಗಳನ್ನು ಸ್ತುತಿಸಿದ್ದಾರೆ

ಹರಿಯೇ ಜಗಕೆ ಕರ್ತಾ ಹರಿಯೆ ಜಗಕೆ ಭರ್ತಾ |
ಹರಿ ಸರ್ವಸಹಾ ವಿಜಯವಿಠಲನೇ ಶಕ್ತಾನೆನ್ನಿ |

ಹರಿ ಪರಂಜ್ಯೋತಿ ಹರಿ ಪರದೈವತಿ
ಹರಿ ಸರ್ವೋತ್ತಮ ಹರಿ ಪುರುಷೋತ್ತಮ
ಹರಿ ಪರಬೊಮ್ಮ ಹರಿ ಜ್ಞಾನಗಮ್ಯ
ಹರಿ ವಿಶ್ವಾಮೂರ್ತಿ ಹರಿ ಚಕ್ರವರ್ತಿ
ಹರಿ ಪರಂಧಾಮಾ ಹರಿ ಸಾಸಿರನಾಮಾ
ಹರಿ ಸಾರ್ವಭೌಮ ಹರಿ ಭಕ್ತರ ಪ್ರೇಮ
ಹರಿ ಪರಿಪೂರ್ಣ ಹರಿ ನಾನಾ ವರ್ಣ
ಹರಿ ಗುಣಗಣಾಂಬೋಧಿ ಹರಿ ಸರ್ವಸಿದ್ಧಿ
ಹರಿ ಸರ್ವದಾವೀರ್ಯ ಹರಿ ವಿಬುಧರವರ್ಯ
ಹರಿ ಪಾವನ ಕಾಯ ಹರಿ ಭುವನ ಮಾಯ
ಹರಿ ಪರಮಾತ್ಮ ಹರಿ ಉತ್ತಮೋತ್ತಮ
ಹರಿ ಪರತತ್ತ್ವ ಹರಿ ನಿರುತ ಸತ್ವಾ
ಹರಿ ನಿತ್ಯಾನಂದಾ ಹರಿ ಸಿರಿಗೋವಿಂದ
ಹರಿನಿತ್ಯತೃಪ್ತಾ ಹರಿ ಸಕಲವ್ಯಾಪ್ತ
ಹರಿ ವಿರಹಿತ ಜಾತ ಹರಿ ಜಗನ್ನಾಥ
ಹರಿ ಏಕಮೇವ ಹರಿ ಆಗವನದಾವಾ
ಹರಿ ನಿರ್ಭಯ ಶೂರ ಹರಿ ನಾನಾವತಾರ
ಹರಿ ಬಹುಲಾವಣ್ಯ ಹರಿ ಸದಾ ತಾರುಣ್ಯ
ಹರಿಯಿಲ್ಲದೆ ಮತ್ತೆ ಹರಿಯ ಬಲ್ಲವರುಂಟೆ
ಹರಿಯವತಾರ ಶ್ರೀವಿಜಯವಿಠಲರೇಯ
ಹರಿಯೆ ತ್ರಿಭುವನ ದೊರೆಯೆಂದವನೆ ಜ್ಞಾನಿ ||

—————–

೩.

ನಾನು ನೀನೆಂದು ಒಮ್ಮೆಗಾದರೂ
ನರ ಅನಂತ ಜನುಮದಲಿ ನುಡಿದನಾಗ
ಶ್ವಾನಸೂಕರ ದುರ್ಯೋನಿಯಲಿ ಪುಟ್ಟಿ
ಮಾನವಾಧಮನಾಗಿ ಕಟ್ಟಕಡೆಗೆ
ನಾನಾ ಸಂಕಟಪಟ್ಟು
ಹೀನ ಭೋಜನ ಮಾಡಿ
ತಾನಿಳಿವ ನಿತ್ಯ ನರಕದಲಿ
ಅನಂತ ಜನುಮದೊಳು
ಸೇವಕನೆಂದೆನೆ ತಾನೊಲಿದು
ಈವ ವಿಜಯವಿಠ್ಠಲ ಗತಿ !!
– ಶ್ರೀ ವಿಜಯದಾಸರು

ಅಹಂ ಬ್ರಹ್ಮಾಸ್ಮಿ ಅನ್ನದಿರು ಶ್ರೀಹರಿಯ ಸೇವಕನೆನ್ನು ಎಂಬುದನ್ನು ಇಲ್ಲಿ ಹೇಳಿದ್ದಾರೆ ಶ್ರೀ ವಿಜಯದಾಸರು.

 

 

Sumadhwa Seva © 2022