Vidyamanya Tirtharu

Vaishaka Shudda Dashami-Ekadashi-Dwadashi

Sri 1008 Vidyaamaanya Theertharu

Bhandarakeri & Phalimaaru Mutt, Udupi

ब्रह्मचर्यहरिप्रीति सुविद्यावादशालिन: ।
इष्टदान् कष्टहलतर्न्न: विद्यामान्यान्मुनीन्नुम : ॥

श्रीमध्वसिद्धांत समर्थनैकदीक्षं सदैव प्रवचोsनुरक्तम् ।
विद्यातप:सिंधुमुदार विद्यामान्यं गुरूणां गुरुमानमामि ॥

ಬ್ರಹ್ಮಚರ್ಯಹರಿಪ್ರೀತಿ ಸುವಿದ್ಯಾವಾದಶಾಲಿನ: |
ಇಷ್ಟದಾನ್ ಕಷ್ಟಹರ್ತ್ರೇನ್ನಃ: ವಿದ್ಯಾಮಾನ್ಯಾನ್ಮುನೀನ್ನುಮ : ||

ಶ್ರೀಮಧ್ವಸಿದ್ಧಾಂತ ಸಮರ್ಥನೈಕದೀಕ್ಷಂ ಸದೈವ ಪ್ರವಚೋsನುರಕ್ತಮ್ |
ವಿದ್ಯಾತಪ:ಸಿಂಧುಮುದಾರ ವಿದ್ಯಾಮಾನ್ಯಂ ಗುರೂಣಾಂ ಗುರುಮಾನಮಾಮಿ ||

 

ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀ ಪಾದಂಗಳವರು
ಮಾತಾಪಿತರು : ಶ್ರೀ ಕುಪ್ಪಣ್ಣ ತಂತ್ರಿಗಳು ಮತ್ತು ಶ್ರೀಮತಿ ರಾಧಮ್ಮ
ಜನ್ಮ ಸ್ಥಳ  : ಎರ್ಮಾಳು (ಉಡುಪಿಯ ಬಳಿ)

ಜನ್ಮ ವರ್ಷ – 1913
ಜನ್ಮ ನಾಮ – ನಾರಾಯಣ
ಪ್ರಾಥಮಿಕ ವಿದ್ಯಾಬ್ಯಾಸ : ತಂದೆಗಳಿಂದ
ಉಪನಯನ –  5.1.1925 – 8ನೇ ವಯಸಿನಲ್ಲಿ

ಮಂತ್ರೋಪದೇಶ –  ಶತಾಯುಷಿ ಶ್ರೀ ಸುಧೀಂದ್ರ ತೀರ್ಥರು.
ಆಶ್ರಮ ಗುರುಗಳು : ಶ್ರೀ ವಿಬುಧಪ್ರಿಯ ತೀರ್ಥರು
ಹೆಚ್ಚಿನ ವಿದ್ಯಾಬ್ಯಾಸ
೧. ಆಶ್ರಮ ಗುರುಗಳಾದ ಶ್ರೀ ವಿಬುಧಪ್ರಿಯ ತೀರ್ಥರಿಂದ ಮೂರುವರ್ಷ ಕಾಲ
೨. ಶ್ರೀ ವಾಸುದೇವಚಾರ್ಯರಲ್ಲಿ – ದಶಪ್ರಕರಣಗಳು, ದಷೋಪನಿಷತ್ತು, ಮತ್ತು ತತ್ವಪ್ರಕಾಶಿಕಾ ಗ್ರಂಥಗಳ ಪಾಠ
೩. ಉತ್ತರಾಧಿಮಠದ ಶ್ರೀ ಸತ್ಯಧ್ಯಾನರಲ್ಲಿ – ಶ್ರೀಮನ್ನ್ಯಾಯಸುಧ, ತತ್ವಪ್ರಕಾಶಿಕಾ, ನ್ಯಾಯಮೃತ, ತರ್ಕತಾಂಡವ, ಗ್ರಂಥಗಳ ಪಾಠ.

ಗುರುಗಳಿಂದಲೇ ಪ್ರಶಸ್ತಿ : ವಿದ್ಯಾಬ್ಯಾಸವನ್ನು ಪೂರೈಸಿ ಹೊರಟ ಸಂದರ್ಭದಲ್ಲಿ ವಿದ್ಯಾಮಾನ್ಯರನ್ನು ಬಿಗಿದಪ್ಪಿ ಶ್ರೀ ಸತ್ಯಧ್ಯಾನ ತೀರ್ಥರು ಕೊಟ್ಟ ಹೊಗಳಿಕೆ ” ನೀವು ವಿದ್ಯಾಭಂಡಾರ ಆಗಿರುವಿರಿ”.

ಸುಧಾಮಂಗಳ : ಮೊದಲನೇ ಸುಧಾಮಂಗಳ ತಿರುಪತಿಯಲ್ಲಿ ಸತ್ಯಧ್ಯಾನರ ಸನ್ನಿದಾನದಲ್ಲಿ,

ಎರಡನೇಯದನ್ನು ಶ್ರೀರಂಗಂ ನಲ್ಲಿ ತಮ್ಮ ಚಾತುರ್ಮಾಸ್ಯ ಸಂದರ್ಭದಲ್ಲಿ

ಸನ್ಯಾಸ ಶಿಷ್ಯರು:
ಶ್ರೀ ಪೇಜಾವರ ಮಠದ ವಿಶ್ವೇಶ ತೀರ್ಥರು
ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು
ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೀಂದ್ರ ತೀರ್ಥರು
ಶ್ರೀ ಫಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥರು
ಶ್ರೀ ಭಂಡಾರುಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು

ಈ ಐದು ಜನ ಸನ್ಯಾಸಿ ಶಿಷ್ಯರಿಗೆ ಹಲವಾರು ಸನ್ಯಾಸಿ ಶಿಷ್ಯರು,

ಗೃಹಸ್ಥ ಶಿಷ್ಯರು  :

ಅ. ಕೊರ್ಲಹಳ್ಳಿ ರಾಘವೇಂದ್ರಾಚಾರ್ಯರು

ಆ. ಬನ್ನಂಜೆ ಗೋವಿಂದಾಚಾರ್ಯ

ಇ. ಪಿ.ಕೆ. ಹರಿದಾಸಾಚಾರ್ಯ

ಈ. ಬಿ. ವಾದಿರಾಜಾಚಾರ್ಯರು

ಉ. ಶ್ರೀ ಲಕ್ಷ್ಮೀ ನಾರಾಯಣ ಕೊಡಂಚ

ಇಂದಿಗೂ ಶ್ರೀ ವಿದ್ಯಮಾನ್ಯರ ಶಿಷ್ಯ – ಪ್ರಶಿಷ್ಯರ ಸಂತತಿ ಬೆಳೆಯುತ್ತಿದೆ.

ವಾಗ್ಯುದ್ದದಲ್ಲಿ ವಿಜಯ

೧. 1940 ನೇ ಇಸವಿಯಲ್ಲಿ ಶ್ರೀ ತಾತಸುಬ್ಬರಾಯ ಶಾಸ್ತ್ರಿಗಳ ಜೊತೆ ವಾದವನ್ನು ನಡೆಸಿ ವಿಜಯಪ್ರದರಾದರು

೨. ಕಾಂಚಿಪೂರದಲ್ಲಿ ಕುಂಭಕೋಣದ ಕಾಮಕೋಟಿ ಶಂಕರಾಚಾರ್ಯರ ಅದ್ಯಕ್ಷತೆಯಲ್ಲಿ ನಡೆದ ಅದ್ವೈತ ಸಭೆಯಲ್ಲಿ ಮಹಾಮಹೊಪಾದ್ಯಾಯ ಅನಂತ ಶಾಸ್ತ್ರಿ, ಶ್ರೀ ಸುಬ್ರಮಣ್ಯ ಶಾಸ್ತ್ರಿ ಮುಂತಾದವರ ಜೊತೆ ವಾಗ್ವಾದ – ಜಯ
೩. ಕಾಶಿಯಲ್ಲಿ 1958 ನೇ ಇಸವಿಯಲ್ಲಿ ಮಹಾಮೊಪಾದ್ಯಾಯ ಗಿರಿದರಶರ್ಮ ಚತುರ್ವೇದಿ ಇವರ ಅದ್ಯಕ್ಷತೆಯಲ್ಲಿ ನಡೆದ ಅದ್ವೈತ ಸಭೆಯಲ್ಲಿ ಶ್ರೀಪಾದರ ವೈಶಿಷ್ಟ್ಯ ಮೆಚ್ಚಿ ಗೌರವಾರ್ಪಣೆ.

೪. ಶ್ರೀ ಅನಂತಕೃಷ್ಣ ಶಾಸ್ತ್ರಿಗಳು ಬರೆದ “ಅದ್ವೈತ ಸುಧಾ” ಎಂಬ ಶ್ರೀಮನ್ನ್ಯಾಯ ಸುಧಾ ಖಂಡನಾರೂಪವಾಗಿ ” ಅದ್ವೈತ ತತ್ವಸುಧಾ ಸಮೀಕ್ಷಾ” ಎಂಬ ಗ್ರಂಥ ರಚನೆ

೫. ದಿಲ್ಲಿಯಲ್ಲಿ ದ್ವೈತಾದ್ವೈತ ಚರ್ಚೆಯ ಸಂದರ್ಭದಲ್ಲಿ ಶ್ರೀ ರಾಮಚಂದ್ರ ಶಾಸ್ತ್ರಿ ಪಂಗಡ ಮೊದಲಾದವರ ವಿರುದ್ದ ವಾಕ್ಯಾರ್ಥ ಮತ್ತು ವಿಜಯ

೬. ೧೯೮೯ರಲ್ಲಿ ಶ್ರೀ ವಿದ್ಯಾಮಾನ್ಯತೀರ್ಥರು ಅದ್ವೈತ ಮಠದ ಮೇಲೆ “ಅಚ್ಚೆದ್ಯ ಅಭೇದ್ಯ ಪ್ರಶ್ನೆಗಳು ಎಂಬ ಶೀರ್ಷಿಕೆಯಡಿ ಹತ್ತು ಪ್ರಶ್ನೆಗಳನ್ನೂ ಬರೆದರೂ. ಈ ಪ್ರಶ್ನೆಗಳಿಗೆ ಅದ್ವೈತಿಗಳು ಉತ್ತರಿಸಲು ಹೇಳಿ ತಾವೇ ಖುದ್ದಾಗಿ ಶೃಂಗೇರಿ ಹೊರಟರು. ಅಲ್ಲಿ ಅವರಿಂದ ಪ್ರಶ್ನೆಗಳಿಗೆ ಉತ್ತರಿಸಲಾಗಲಿಲ್ಲ.

೭. ದಿಲ್ಲಿಯಲ್ಲಿ ಅಷ್ಟಗ್ರಹಯೋಗದ ದುಷ್ಪರಿಣಾಮವಾಗಿ ಪರಿಹಾರಕ್ಕಾಗಿ ಶ್ರೀಪಾದರ ನೇತೃತ್ವದಲ್ಲಿ 12 ದಿನಗಳ “ವಿಶ್ವಕಲ್ಯಾಣ ಯಾಗ”. ಇದರಲ್ಲಿ 700 ಕ್ಕೂ ಹೆಚ್ಚು ಜನ ಋತ್ವಿಜರು ಭಾಗವಹಿಸಿದ್ದರು.

ಮೊದಲ ಬದರಿಯಾತ್ರೆ.
ಕಾಶಿಯಿಂದ ಹರಿದ್ವಾರಕ್ಕೆ ತೆರೆಳಿದ ಶ್ರೀಪಾದರು ಅಲ್ಲಿಂದ 150 ಮೈಲು ಕಾಲುನಡಿಗೆಯಿಂದ ಭಾಷ್ಯ ಪಾರಾಯಣ ಮಾಡುತ್ತಾ ಬದರಿ ತಲುಪಿದರು.
ಮಧ್ವ ಶಾಸ್ತ್ರ ಕಲಿಯುವ ವಿದ್ಯಾರ್ಥಿಗಳಿಗಾಗಿ ಅವರ ಸಾಧನೆಗೆ ಸಹಾಯಹಸ್ತ

೧. ವಿದ್ಯಾರ್ಥಿ ಪರೀಕ್ಷೆ – ಯಥೇಚ್ಚ ಸಂಭಾವನೆ, ಶಾಸ್ತ್ರ ಪಾಠ- ಪ್ರವಚನಗಳಲ್ಲಿ ನಿರತರಾಗಿರುವ ವಿದ್ಯಾರ್ಥಿಗಳಿಗೆ ಉತ್ತೇಜನ.
೨ ಚರ್ಚಾಘೋಷ್ಟಿಗಳು
೩. ಗ್ರಂಥಧಾನ, ಪಾಠಗಳ ವ್ಯವಸ್ತೆ
೪. ಗ್ರಂಥ ಪ್ರಕಾಶನ – ಶ್ರೀಪಾದರೆ ಸ್ವತಹ ಬರೆದಿರುವ “ದ್ವೈತಸ್ಯ ಅಪೂರ್ವತಾ”, ಗಾಯತ್ರಿ ಗಾಂಭೀರ್ಯ, ತತ್ವ ಸಂಖ್ಯಾನ

ತತ್ವ ವಿವೇಕ, ಉಪಾದಿಖಂಡನ, ಮಾಯವಾದ ಖಂಡನ , ಆದ್ಯಶಂಕರಾಚಾರ್ಯರಿಂದಲೇ ಅದ್ವೈತ  ಖಂಡನೆ

 

ಕನ್ನಡಾನುವಾದ ಪುಸ್ತಕಗಳು, ಶ್ರೀಮದಾಚಾರ್ಯರ ದಶಪ್ರಕರಣಗಳನ್ನೂ, ಶ್ರೀ ಜಯತೀರ್ಥರ ಟೀಕೆ ಹಾಗು ಅನೇಕ ವ್ಯಾಕ್ಯನಗಳೊಂದಿಗೆ ಲೇಖನ.

ಕಾಷ್ಠಮೌನ ವ್ರತ:
1961 ರಲ್ಲಿ ಬದರಿ ಕ್ಷೇತ್ರದಲ್ಲಿ ಶ್ರೀಗಳ ಜೊತೆಯಲ್ಲಿ ಮೂರು ಮಂದಿ ಮಾತ್ರ ಸಹಾಯಕರು. ಉಳಿದವರೆಲ್ಲ ಹರಿದ್ವಾರಕ್ಕೆ ಮರಳಿದರು. ಛತ್ರಒಂದರಲ್ಲಿ ಶ್ರೀಪಾದರ ವಾಸ. ಬೆಳಗಿನ ಜಾವ ನಾಲ್ಕು ಘಂಟೆಗೆ ಏಳುವುದು, ಬಾಹ್ಯ ಶೌಚಗಳನ್ನೂ ಪೂರಿಸುತ್ತಿದ್ದರು. ಭೋರ್ಗರೆವ ಅಲಕಾನಂದ ನದಿಯಲ್ಲಿ ಅವಗಾಹನ ಸ್ನಾನ. ಅನಂತರ ಗೀತಾಭಾಷ್ಯ, ಬ್ರಹ್ಮಸೂತ್ರ ಭಾಷ್ಯ ಪಾಠ, ಸಂಸ್ತಾನ ಪೂಜೆ, ಮದ್ಯಾಹ್ನ ಪುನಃ ಅಲಕನಂದದಲ್ಲಿ ಸ್ನಾನ ಹೀಗೆ ಹೆಚ್ಚುಸಮಯ ಬದರಿಯಾತ್ರೆಯಲ್ಲಿ ಕಾಲ ಕಳೆದರು.
ಮಾದ್ವ ಸಿದ್ದಾಂತಕ್ಕೆ ಬಹಳ ಕೊಡುಗೆಯನ್ನು ನೀಡಿದ ಮಹಾಮಹಿಮರು ಹೀಗೆ ವೈಶಾಖ ಶುದ್ದ ಏಕಾದಶಿ 14 – 05 – 2000 ರಂದು ಫಲಿಮಾರಿನಲ್ಲಿ ಶ್ರೀಗುರುಗಳು ಹರಿಪಾದವನ್ನು ಸೇರಿದರು.

(ಆಧಾರ – ಶ್ರೀ ಕೊರ್ಲಹಳ್ಳಿ ವೆಂಕಟೇಶಾಚಾರ್)

  1.  

  2. Vidyamanya Thirtharu – Click here

  3. “Vidyaamaanyara Anugraha” – Miracle

  4. “Vidyamanyaru – RAIN”

  5. “Vidyamanyaru-pavadagalu”

  6. “Vidyamanyaru-Shishyaru”

  7. “Vidyamanyaru – Ekadashi”

  1. vidyamanyara-vrundavana krishna-pooja-by-vidyamanyaru

Sumadhwa Seva © 2022