↑ Return to Sarvamoola

Tatvodyota

ಶ್ರೀ ಗುರುಭ್ಯೋ ನಮ: | ಹರಿ: ಓಂ | ಶ್ರೀಮದಾಚಾರ್ಯ ಭಗವದ್ಪಾದಾಚಾರ್ಯ ಗುರುಭ್ಯೋ ನಮ: |

ತತ್ವೋದ್ಯೋತ ಪ್ರಕರಣಂ  “Tatvodyotham”

ತತ್ವಸ್ಯ ಉದ್ಯೋತ: ಅಸ್ಮಾದ್ಭತಿ –  ” ಪರಮಪುರುಷ ತತ್ತ್ವೋದ್ಯೋತಸ್ಯ ಸಿದ್ಧಯೇ”  – ತತ್ವದ ಅಂದರೆ ಪರಮಪುರುಷಾರ್ಥ ತತ್ವದ ಯಥಾರ್ಥ ಜ್ಞಾನವು ಈ ಗ್ರಂಥದಿಂದ ಉಂಟಾಗುತ್ತದೆ.  ಅಥವಾ   ತತ್ವಂ  ಉಧ್ಯೋತ್ಯತೇ ಅನೇನೇತಿ ತತ್ವೋದ್ಯೋತಂ  – ಅಂದರೆ ಈ ಗ್ರಂಥದಿಂದ ಶ್ರೀ ಹರಿಯು ಚೆನ್ನಾಗಿ ತಿಳಿಸಲ್ಪಡುತ್ತಾನೆ.

This grantha “Tatvodyotha” is referred as “vaada” grantha and it is a PrakaraNa grantha.  Sri Teekaarayaru in the end of his Teeka has mentioned that this is a grantha written by Acharya Madhwa after defeated one pandit by name” Pundareekavana” and he was dumb after seeing the Acharya Madhwa’s greatness in his theory.  In front of him, Acharya Madhwa presented the Dwaitha view.  The grantha is nothing but the sangraha of the Dwaitha vaada.  The main intention of this grantha is yathartha jnaana of Acharya Madhwa.  “udyotha” means Kirana or rays of sun.  These are the rays of Acharya Madhwa named sun.

ಶ್ರೀಮಜ್ಜಯತೀರ್ಥ ಪೂಜ್ಯ ಚರಣ ಪ್ರಣೀತ ಟೀಕಯಾ ಸಹಿತ

विश्वोत्पत्तिस्थिति द्वंसकारणं रमणं श्रिय: |अभिवंद्य यथाबोधं तत्वोद्योतं विवृण्महे । मंगळाचरण (श्री जयतीर्थरु)
ವಿಶ್ವೋತ್ಪತ್ತಿಸ್ಥಿತಿ ದ್ವಂಸಕಾರಣಂ ರಮಣಂ ಶ್ರಿಯ: | ಅಭಿವಂದ್ಯ ಯಥಾಬೋಧಂ ತತ್ವೋದ್ಯೋತಂ ವಿವೃಣ್ಮಹೇ |
 ಮಂಗಳಾಚರಣ (ಶ್ರೀ ಜಯತೀರ್ಥರು)

ವಿಶ್ವದ ಉತ್ಪತ್ತಿ ಸ್ಥಿತಿ ಮತ್ತು ಧ್ವಂಸಕ್ಕೆ ಮುಖ್ಯ ಕಾರಣನಾದ ಲಕ್ಷ್ಮೀಪತಿಯಾದ ಶ್ರೀಮನ್ನಾರಾಯಣನನ್ನು ಚೆನ್ನಾಗಿ ಸ್ತುತಿಸಿ, ನಮಸ್ಕರಿಸಿ ಯಥಾಬೋಧಂ ಶಿಷ್ಯರ ಶಕ್ತ್ಯನುಸಾರ  ತತ್ವೋದ್ಯೋತವನ್ನು ವಿವರಿಸುತ್ತೇವೆ.

Sri Jayatirtharu in his Mangalacharana for his Teeka on Tatvodyota prays Lakshmipathi SrimannaaraayaNa, who is the reason for the world’s utpatti, sthiti, and laya.  He says that he is doing the Teeka shaktyanusaara and as per what the capacity of the readers, shishyaas.

ಜಯತೀರ್ಥ ಟೀಕಾ –   ಇಹ ಅವಿದ್ಯಾ ತಿಮಿರ ನಿರಂತರೇ ಸಂಸಾರ ಕಾಂತಾರೇ ಪರಿಖಿನ್ನಾನಾಂ ಅಲ್ಪ ಅಸ್ಥಿರ ಸುಖ ಖದ್ಯೋತಿಕಾಸು ಧ್ಯೋತಮಾನಾಸ್ವಪಿ ಮನ: ಪ್ರಸಾದಮ್ ಅನಾಸಾದಯತಾಮ್ ಅಧಿಕಾರಿಣಾಂ ಅನಂತ ಅನಂದನಿದಾನಸ್ಯ ಪರಮ ಪುರುಷ ತತ್ವೋಧ್ಯೋತಸ್ಯ ಸಿದ್ಧಯೇ ಸಮೀಹಮಾನೋ ಭಗವಾನ್ ಆಚಾರ್ಯ ಸೂರ್ಯ: ಸ್ವಯಂ ಅಂತಾರಾಯ ವಿಧುರೋಽಪಿ ನಿರಂತರಾಯ ಪ್ರಾರಿಪ್ಸಿತ ಪರಿಸಮಾಸ್ಯಾದೇರಂಗಂ ಇಷ್ಟದೇವತಾಭಿಪೂಜನಂ ಶಿಷ್ಯಾನ್ ಗ್ರಾಹಯಿತುಂ ಪ್ರಕರಣಾದೌ ನಿಬಧ್ನಾತಿ –

ಈ ಮುಕ್ತಾಮುಕ್ತ ವರ್ಗದಲ್ಲಿ ಅವಿದ್ಯೆಯಿಂದ ಕತ್ತೆಲಿಯಿಂದ ತುಂಬಿರುವ ವಿವಿಧ ಸಾಂಸಾರಿಕ ದು:ಖದರ್ಶನದ ಕಾಡಿನಲ್ಲಿ ಅತ್ಯಂತ ಖೇದವಾಗಿರತಕ್ಕಂತಹ ಖದ್ಯೋತಿಕಾ – ಚಿಕ್ಕ ಮಿಂಚಿನ ಹುಳುವಿನಂತೆ ಅತ್ಯಂತ ಅಲ್ಪ ಅಸ್ಥಿರವಾದ ಬೆಳಕಿನಿಂದ ಮನಸ್ಸಿಗೆ ಸಂತೋಷವನ್ನು ಪಡೆಯದೆ, ಅಧಿಕಾರಿಗಳಿಗೆ (ಅನರ್ಹರಿಗಲ್ಲ), ಪರಮ ಪುರುಷನಾದ ಪರಮಾತ್ಮನ ಆನಂತವಾದ ಆನಂದವನ್ನು ನೀಡಬಲ್ಲ ತತ್ವವೆಂಬ ಬೆಳಕಿನ ಸಿದ್ಧಿಗಾಗಿ, ಬೆಳಕನ್ನು ಬೀರುತ್ತಿರುವ ಭಗವಾನ್ ಆಚಾರ್ಯ ಮಧ್ವರೆಂಬ ಭಗವಾನ್ ಆಚಾರ್ಯ ಮಧ್ವರು ಸ್ವತ: ವಿಘ್ನಗಳಿಲ್ಲದಿದ್ದರೂ, ಶಿಷ್ಯರ ವಿಘ್ನ ಪರಿಹಾರಕ್ಕಾಗಿ ಇಷ್ಟದೇವತೆಗಳ ಪೂಜೆಗಾಗಿ ಶಿಷ್ಯರಿಗೆ ತಿಳಿಸಲು ಪ್ರಾರಂಭಿಸಿರುವ ಗ್ರಂಥದ ಮಂಗಳಾಚರಣೆಯನ್ನು ಪ್ರಕರಣದ ಆರಂಭದಲ್ಲಿ ಶಿಷ್ಯರನ್ನು ಉದ್ದೇಶಿಸಿ ಹೇಳಿದ್ದಾರೆ.

ಆರಂಭಣೀಯತ್ವ –  ಯಾವುದೇ ಗ್ರಂಥಕ್ಕೆ ವಿಷಯ, ಪ್ರಯೋಜನ, ಅಧಿಕಾರಿಗಳು ಮತ್ತು ಸಂಬಂಧವೆಂಬ ಚತುಷ್ಟಯ ಇದ್ದರೇ ಮಾತ್ರ ಅದು ಆರಂಭಣೀಯವಾಗುತ್ತದೆ.  ಹಾಗಾದರೆ ಈ ಗ್ರಂಥಕ್ಕೆ ಆರಂಭಣೀಯತ್ವವಿದೆಯಾ? ಅದನ್ನು ಪರಿಶೀಲಿಸಿದಾಗ ತಿಳಿಯುತ್ತದೆ.    ಈ ಗ್ರಂತದಲ್ಲಿ  ವಿಷಯ – ಪರಮ ಪುರುಷ ತತ್ವೋದ್ಯೋತ ;  ಪ್ರಯೋಜನ – ಮೋಕ್ಷ;  ಅಧಿಕಾರಿಗಳು – ಮುಮುಕ್ಷುಗಳು;  ಸಂಬಂಧ – ಪ್ರತಿಪಾದಕ ಪ್ರತಿಪಾದ್ಯ ಸಂಬಂದ.  ಆದ್ದರಿಂದ ಅನುಬಂಧ ಚತುಷ್ಠಯವಿರುವುದರಿಂದ ಇದು ಆರಂಭಣೀಯವೇ ಆಗಿದೆ.

ಮೂಲ ಶ್ಲೋಕ – 

ಸರ್ವತ್ರಾಖಿಲಸಚ್ಛಕ್ತಿ: ಸ್ವತಂತ್ರೋಽಶೇಷದರ್ಶನ: | ನಿತ್ಯಾತಾದೃಶಚಿಚ್ಚೀತ್ಯಯಂತೇಷ್ಟೋ ನೋ ರಮಾಪತಿ: |

 ಸರ್ವತ್ರ ಅಖಿಲ ಸತ್ ಶಕ್ತಿ: ಸ್ವತಂತ್ರ: ಅಶೇಷ ದರ್ಶನ: ನಿತ್ಯ: ಅತಾದೃಶ ಚಿತ್ ಚೇತ್ಯ ಯಂತ: ನ: ರಮಾಪತಿ: |

ರಮಾಪತಿ: = ರಮಾಪತಿಯಾದ ಶ್ರೀಮನ್ನಾರಾಯಣನು; ಸರ್ವತ್ರ – ಎಲ್ಲಾ ವಿಷಯಗಳಲ್ಲೂ; ಅಖಿಲ – ಪೂರ್ಣವಾದ; ಸಚ್ಛಕ್ತಿ = ಸತ್ ಶಕ್ತಿ: = ಯಾವುದೇ ದೋಷರಹಿತನಾದ ಅಡೆತಡೆಗಳಿಲ್ಲದ ಸಾಮರ್ಥ್ಯವುಳ್ಳವನು ; ಸ್ವತಂತ್ರ: – ಸ್ವತಂತ್ರನು.  ಅಶೇಷ ದರ್ಶನಂ – ಸರ್ವವನ್ನೂ ಪ್ರತ್ಯಕ್ಷೀಕರಿಸಿದವನು, ನಿತ್ಯ – ಯಾವಾಗಲೂ, ಅತಾದೃಶ – ಪೂರ್ಣಶಕ್ತಿ, ಸ್ವಾತಂತ್ರ್ಯವೂ, ಸಾರ್ವಜ್ಞ್ಯತ್ವವೂ ಇರುವ, ಚಿತ್ – ರಮಾಬ್ರಹ್ಮಾದಿ ಸಕಲ ಚೇತನವರ್ಗವೂ; ಚೇತ್ಯ – ಸಕಲ ಜಡಪ್ರಕೃತಿ ಮೊದಲಾದವುಗಳನ್ನೂ ಯಂತಾ – ಪ್ರೇರಿಸಿವವನು.  ಅಂತಹ ಶ್ರೀಹರಿಯು ನ: ನಮಗೆ ಇಷ್ಟ: -ಪ್ರಿಯನು.

Sri Ramapathi Srimannaarayana is svatantra, followed by sat shakthi, and it is in all subjects, everywhere.  He is the one and only Svatantra.   He is the preraka for Ramaa brahmaadi sakala chetana, jada prakruti.  He is my “ishta” (favourite) god.

ಟೀಕ – ದೇವತಾ ಸ್ತುತಿಮಾತ್ರ ಪರತ್ವಾದಸ್ಯ ಶ್ಲೋಕಸ್ಯ ‘ಕ್ರಿಯಾಭಿಸಂಬಂಧಾಭಾವೋ ನ ದೋಪಾಯ |  ಕಿಂ ತು ರಮಾಪತಿ: ಸರ್ವತ ಅಖಿಲ ಸಚ್ಛಕ್ತಿರಿತ್ಯಾದಿ ರೂಪೈವ ಯೋಜನಾ |   ಯದ್ಯಪ್ಯತ್ರ ನ ವಿಶೇಷಣಾನಾಂ ಪರಸ್ಪರಸಂಗತ್ಯಪೇಕ್ಷಾ | ವಿಶೇಷ್ಯ ಪ್ರಶಂಸಾಮಾತ್ರ ಪರತ್ವೇನ ನಿರಾಕಾಂಕ್ಷತ್ವಾತ್ | ತಥಾಪಿ ಏತೇರೈವ ಸ್ತವನೇ ಕಿಮಪಿ ಪ್ರಯೋಜನಂ ಅಭಿಧೀಯತೇ | ಅತ ಏವ ಚ ನ ವಾಕ್ಯಭೇದದೋಷ: | ತತ್ರ ವಿಧ್ಯೋಪದೇಶಾವಸರೇ ಸಕಲ ವಾಗ್ಮನಸ ದೇವತಯಾ ರಮಯಾ ಯುತಸ್ಯೈವ ಹರೇ: ಸ್ತುತಿರುಚಿತಾ | ಅತೋ ರಮಾಪತಿರಿತಿ ವಿಶೇಷ್ಯಂ ನಿರದಿಕ್ಷತ್ |

ಆಚಾರ್ಯರು ತಮ್ಮ ಮಂಗಳಾಚರಣದಲ್ಲಿ ಪರಮಾತ್ಮನು ನಮಗೆ ‘ಇಷ್ಟ‘ವೆಂದು ಮಾತ್ರ ತಿಳಿಸಿದ್ದಾರೆ.   ಸಾಮಾನ್ಯವಾಗಿ ಮಂಗಳಾಚರಣ ಶ್ಲೋಕದಲ್ಲಿ ಕ್ರಿಯಾಪದವಿರಬೇಕು ಮತ್ತು ದೇವತಾ ಗುರುಗಳಿಗೆ  ವಂದನೆಯಿರಬೇಕು.  ಆದರೆ ಇಲ್ಲಿ ಇಷ್ಟವೆಂದು ಮಾತ್ರ ಹೇಳಿರುವುದರಿಂದ, ವಂದನೆಯಿಲ್ಲವೆಂದು ಆಕ್ಷೇಪಿಸಿದರೆ, ಅದಕ್ಕೆ ಶ್ರೀ ಜಯತೀರ್ಥರು ಉತ್ತರಿಸುತ್ತಾರೆ – ಈ ಶ್ಲೋಕದಲ್ಲಿ ದೇವತಾಸ್ತುತಿ ಮಾತ್ರ ಉದ್ದೇಶವಿರುವುದರಿಂದ ಕ್ರಿಯಾ ಸಂಬಂಧ (ಕ್ರಿಯಾಪದ ಪ್ರಯೋಗ) ಇಲ್ಲದಿರುವುದು ದೋಷವೇ ಅಲ್ಲ.   ಆದ್ದರಿಂದ ಇಲ್ಲಿ ವಾಕ್ಯದೋಷವೂ ಬರುವುದಿಲ್ಲ ಇಲ್ಲಿ ಪರಮಾತ್ಮನಿಗೆ ವಿಶೇಷಣ ನೀಡಿದಾಗ ಪರಸ್ಪರ ಸಂಗತಿ ಅಪೇಕ್ಷ್ಯ ಬೇಕಾಗಿಲ್ಲ.  ವಿಶೇಷ್ಯ ಪ್ರಶಂಸಾಮಾತ್ರಪರತ್ವದಿಂದ ನಿರಾಂಕ್ಷತೆ. ವಿದ್ಯೆಯನ್ನು ಉಪದೇಶ ಮಾಡುವ ಸಂದರ್ಭದಲ್ಲಿ ಸಕಲ ಮಾತು ಮತ್ತು ಮನಸ್ಸು ಸರಿಯಿಲ್ಲದಿದರೆ ವಿದ್ಯೆ ಬರುವುದಿಲ್ಲ. ರಮಾದೇವಿಯೇ ವಾಜ್ಞ್ಮನಸ್ಸುಗಳಿಗೆ ಅಭಿಮಾನಿಯಾದ ರಮಾದೇವಿಯನ್ನು ಸ್ಮರಿಸಿದ್ದಾರೆ, ಅದೇರೀತೀ ರಮಾಪತಿಯಾದ ಶ್ರೀಹರಿಯನ್ನು ಸ್ತುತಿಸಿದ್ದಾರೆ.  

आगमस्य ईश्वरे प्रामाण्य समर्थनं – ಆಗಮಸ್ಯ ಈಶ್ವರೇ ಪ್ರಾಮಾಣ್ಯ ಸಮರ್ಥನಂ

ಟೀಕಾ – ನನು ಈಶ್ವರ ಏವ ಕಿಂ ಪ್ರಮಾಣಂ | ಆಗಮಂ ತಾವದ್ ಬ್ರೂಮ 😐 ಶ್ರೂಯತೇ ಹಿ “ದ್ಯಾವಾಭೂಮೀ ಜನಯನ್ ದೇವ ಏಕ: ಇತ್ಯಾದಿ | ಕೇವಲ ಸಿದ್ದಾರ್ಥ ಬೋಧಕಸ್ಯ ಪ್ರವೃತ್ಯಾಧ್ಯನಂಗತಯಾ ವೈಯರ್ಥ್ಯಸಂಗಾದಾಗಮಸ್ಯೇಶ್ವರೇ ನ ಪ್ರಾಮಾಣ್ಯಮಿತಿ ಚೇತ್ ತತ್ರಾಽಹ – ಇಷ್ಟ ಇತಿ || ಯದ್ದಿ ಯಸ್ಯೇಷ್ಟಂ ತತ್ತಂ ಪ್ರತಿ ಬೋಧನೀಯಂ ನಾನ್ಯತ್ | ತಥಾ ಸತ್ಯನುಪಾದೇಯತಾ ಪ್ರಸಂಗಾತ್ | ಇಷ್ಠಶ್ಚ ರಮಾಪತಿರಿತಿ ಯುಕ್ತಮೇವ ತದ್ಬೋಧನಂ | ನ ಚ ಪ್ರವೃತ್ಯಾದ್ಯನುಪಪತ್ತಿ ದೋಷ: | ಇಷ್ಟಾನುಭವಸ್ಯೈವ ಪುರುಷಾರ್ಥತ್ವೇನ ತತ: ಪ್ರಯೋಜನ ಅನಪೇಕ್ಷಣಾತ್ | ನ ಹಿ ಸುಖಾನುಭವಸ್ಯ ಪ್ರಯೋಜನಂ ಅನ್ವಿಷ್ಯತೇ | ತಸ್ಯೈವ ಸ್ವರಸಸುಂದರತ್ವಾತ್ | ಸ್ವಾಶ್ರಿತೇ ಸುಖೇ ದು:ಖನಿವೃತ್ತೌ ವಾ ಲೋಕಾನಾಂ ಇಷ್ಟ ವ್ಯವಹಾರ: | ನ ಚ ಅನಯೋ: ಅನ್ಯತರೋ ರಮಾಪತಿಸ್ತತ್ ಕಥಂ ಅಸಾವಿಷ್ಟ ಇತ್ಯತ ಆಹ – ನ: || ಅಸ್ಮಾಕಮಿತಿ | ಯಥಾ ಖಲು ಕೇಷಾಂಚ್ಚಿತ್ ಇಷ್ಟ ಸಾಧನತಾಂ ಅನಾಸಾದಯಂತೋಽಪಿ ಭಾವಾ: ಪರೇಷಾಂ ತಥಾಭೂತಾ ದೃಶ್ಯಂತೇ ತಥಾ ಲೌಕಿಕಾನಾಂ ಇಷ್ಟತಾಂ ಬಜಯನ್ನಪಿ ಭಗವಾನ್ ಉತ್ತಮಾಧಿಕಾರಿಣಾಂ ಇಷ್ಟೋ ಭವತೀತಿ ಕಿಮನುಪಪನ್ನಂ | ಸಂತಿ ಖಲು ತೇಽಪಿ ಪುರುಷಾ: ಯೇಷಾಂ ಅಪವರ್ಗೋಽಪಿ ಪರಮ ಪುರುಷಾವಬೋಧನಾರ್ಥಂ ಏವ ಅರ್ಥನೀಯ: ಯತೋಕ್ತಂ –
………… ಏಕಾಂತಾನಾಂ ನ ಕಸ್ಯಚಿತ್ | ಅರ್ಥೇ ನಾರಾಯಣೋ ದೇವ: ಸರ್ವಮನ್ಯತ್ತದರ್ಥಕಂ || ಇತಿ ||
ಇತರಾನ್ ಪ್ರತ್ಯಪೀಷ್ವಸ್ಯೇಷ್ಟ ಸಾದನತ್ವಾನ್ನ ತತ್ಪರತ್ವಮ್ ಆಗಮಸ್ಯಾನುಪಪನ್ನಂ | ಇಷ್ಟವದಿಷ್ಟಸಾಧನಸ್ಯಾಪಿ ಬುಭುತ್ಸಿತತ್ವಾತ್ |
“ಅನುಮಾನಸ್ಯೇಶ್ವರೇ ಪ್ರಾಮಾಣ್ಯಸಮರ್ಥನಂ”  “अनुमानस्येश्वरे प्रामाण्यसमर्थनं”ಟೀಕಾ – ಅನುಮಾನಮಪಿ ರಮಾಪತಿಂ ಗಮಯತೀತ್ಯಾಶಯವಾನ್ ಆಹ – ನಿತ್ಯಾತಾದೃಶಚ್ಚಿಚ್ಚೇತ್ಯಯಂತೇತಿ | ಅತ್ರ ತದಿತಿಸರ್ವತ್ರಾಖಿಲಸಚ್ಛಕ್ತಿ: ಸ್ವತಂತ್ರೋಽಶೇಷದರ್ಶನ: ಇತ್ಯುಕ್ತಂ ಪರಾಮೃಶ್ಯತೇ | ಚಿಚ್ಛೇತನಂ ರಮಾಬ್ರಹ್ಮಾದಿ |ಚೇತ್ಯಂ ದೃಶ್ಯಂ ಜಡಂ ಪ್ರಕೃತ್ಯಾದಿ | ನನು ಚೇತ್ಯತಾ ಚಿತೋಽಪ್ಯಸ್ತಿ | ಯದ್ವಕ್ಷ್ಯತಿ ಆತ್ಮನೋಽಪಿ ದೃಶ್ಯತ್ವಾದಿತಿ | ತತ್ಕಥಮುಚ್ಯತೇ ಚೇತ್ಯ ದೃಶ್ಯಂ ಜಡಮಿತಿ | ಸತ್ಯಂ | ಚಿತ: ಪೃಥಗಭಿಧಾನಾತ್ ಸಮಾನೋಽಪಿ ಚೇತ್ಯಶಬ್ದೋ ಜಡವಿಷಯೋಽವಗಮ್ಯತೇ | ಚೇತ್ಯಗ್ರಹಣಾತ್ ಏವ ಉಭಯಲಾಭೇ ಸತಿ ಕಿಂ ಚಿದ್ ಗ್ರಹಣೇತಿ ಚೇತ್ಸತ್ಯಂ | ಕುರುಪಾಂಡವನ್ಯಾಯೇನಾಸಾಧಾರಣ ಧರ್ಮೇಣ ವ್ಯವಹಾರೋಪಪತ್ತಿ: | ನಿತ್ಯಮತಾದೃಸೇ ಅಪರ್ಯಾಪ್ತಶಕ್ತಿನೀ ಅಸ್ವತಂತ್ರೇ ಅಸರ್ವಜ್ಞೇ ಚಿಚ್ಛೇತ್ಯೇ ಯಂತೇತಿ ವಿಗ್ರಹ: |
 “ಅನುಮಾನಸ್ಯೇಶ್ವರೇ ಪ್ರಾಮಾಣ್ಯಸಮರ್ಥನಂ”
ಟೀಕಾ – ಅನುಮಾನಮಪಿ ರಮಾಪತಿಂ ಗಮಯತೀತ್ಯಾಶಯವಾನ್ ಆಹ – ನಿತ್ಯಾತಾದೃಶಚ್ಚಿಚ್ಚೇತ್ಯಯಂತೇತಿ | ಅತ್ರ ತದಿತಿಸರ್ವತ್ರಾಖಿಲಸಚ್ಛಕ್ತಿ: ಸ್ವತಂತ್ರೋಽಶೇಷದರ್ಶನ: ಇತ್ಯುಕ್ತಂ ಪರಾಮೃಶ್ಯತೇ | ಚಿಚ್ಛೇತನಂ ರಮಾಬ್ರಹ್ಮಾದಿ |ಚೇತ್ಯಂ ದೃಶ್ಯಂ ಜಡಂ ಪ್ರಕೃತ್ಯಾದಿ | ನನು ಚೇತ್ಯತಾ ಚಿತೋಽಪ್ಯಸ್ತಿ | ಯದ್ವಕ್ಷ್ಯತಿ ಆತ್ಮನೋಽಪಿ ದೃಶ್ಯತ್ವಾದಿತಿ | ತತ್ಕಥಮುಚ್ಯತೇ ಚೇತ್ಯ ದೃಶ್ಯಂ ಜಡಮಿತಿ | ಸತ್ಯಂ | ಚಿತ: ಪೃಥಗಭಿಧಾನಾತ್ ಸಮಾನೋಽಪಿ ಚೇತ್ಯಶಬ್ದೋ ಜಡವಿಷಯೋಽವಗಮ್ಯತೇ | ಚೇತ್ಯಗ್ರಹಣಾತ್ ಏವ ಉಭಯಲಾಭೇ ಸತಿ ಕಿಂ ಚಿದ್ ಗ್ರಹಣೇತಿ ಚೇತ್ಸತ್ಯಂ | ಕುರುಪಾಂಡವನ್ಯಾಯೇನಾಸಾಧಾರಣ ಧರ್ಮೇಣ ವ್ಯವಹಾರೋಪಪತ್ತಿ: | ನಿತ್ಯಮತಾದೃಸೇ ಅಪರ್ಯಾಪ್ತಶಕ್ತಿನೀ ಅಸ್ವತಂತ್ರೇ ಅಸರ್ವಜ್ಞೇ ಚಿಚ್ಛೇತ್ಯೇ ಯಂತೇತಿ ವಿಗ್ರಹ: |
ಟೀಕಾ – ಇದಮುಕ್ತಂ ಭವತಿ | ಚಿಚ್ಛೇತ್ಯೇ “ಖಲ್ವಪರ್ಯಾಪ್ತಶಕ್ತ್ಯಾದಿಮತ್ತಯಾ ಪ್ರತ್ಯಕ್ಷಾದಿಸಿದ್ದೇ | ಅನ್ಯಥಾ ನಿತ್ಯಸುಖಾದಿಪ್ರಸಂಗಾತ್ | ಯಚ್ಚೇವಂ ವಿಧಂ ತತ್ಕೇನಾಪಿ ನಿಯತಮೇವ ಪ್ರವರ್ತಮಾನಂ ಉಪಲಬ್ದಂ | ಯಥಾ ರಥಾದಿ | ತದೇತಾಭ್ಯಾಂ ಅಪಿ ಯೇನ ಕೇನಚಿತ್ ನಿಯತಾಭ್ಯಾಂ ಭವಿತವ್ಯಂ | ಯಚ್ಚೈತನ್ನಿಯಂತಾ ಸ ಭಗವಾನ್ ರಮಾಪತಿರಿತಿ | ನಿತ್ಯೇತ್ಯತಾದೃಷತ್ವಸ್ಯ ನಿಯಂತ್ರುತಾಯಾಶ್ಚ ಸ್ವರೂಪ ಸಂಕೀರ್ಥನಂ | ಚಿತ ಏವ ಪಕ್ಷೀಕಾರೇ ಪ್ರಕೃತಿ ನಿಯತತಯಾ ಸಾಂಖ್ಯಾನಾಂ, ಕರ್ಮಾಧೀನತಯಾ ಚ ಮೀಮಾಂಸಕಾನಾಂ ಸಿದ್ಧಾಸಾಧನಂ ಸ್ಯಾತ್ | ತತ್ಪರಿಹಾರಾಯ ಚೇತ್ಯಸ್ಯಾಪಿ ಪರಾಯತ್ತತಯಾ ಚಿನ್ನಿಯತತಾಸಂಭವಪ್ರದರ್ಶನಾಯ ಪಕ್ಷೀಕರಣಂ | ಚೇತ್ಯಮಾತ್ರಪಕ್ಷೀಕಾರೇ ಚ ಲೋಕ ದೃಷ್ಟ್ಯಾ, ಪಾಶುಪತಾದಿ ಸ್ಮೃತಿರೀತ್ಯಾ ಚ ಚಿನ್ನಿಯತತಯಾ ಸಿದ್ಧಸಾಧನಂ ಸ್ಯಾತ್ | ತನ್ನಿರಾಸಾಯ ಚಿತೋಽಪಿ ಪಕ್ಷೀಕಾರ: | ನ ಚ ಚಿಚ್ಚೇತ್ಯೇ ಏವಾಂಧಪಂಗುನ್ಯಾಯೇನ ಅನ್ಯೋನ್ಯ ನಿಯತೇ ಭವಿಶ್ಯತ: ಕಿಮೀಶ್ವರೇಣೇತಿ ವಾಚ್ಯಂ | ಸ್ವತ: ಶಕ್ತಿಮಾತ್ರಶೂನ್ಯಯೋ ಇತರೇತರಾಶ್ರಯೇಣ ಇತರೇತರ ಪ್ರತ್ಯಾಸತ್ತೇರೇವಾಯೋಗಾತ್
ಟೀಕ – ಪ್ರಯೋಜನಂ ಅನನುಸಂಧದಯಂ ನ ನಿಯಚ್ಛೇತ್ | ತದನುಸಂಧಾನೇ ಚ ಅಪೂರ್ಣ: ಸ್ಯಾದಿತಿ ತರ್ಕ ಪರಾಹತಿ ಪರಿಹಾರಾಯ ನಿಯಮನ ಶೀಲತ್ವಾತ್ ಪ್ರಯೋಜನಾನುಸಂಧಾನಾಭಾವೇಽಪಿ ತದುಪಪನ್ನಮಿತಿ ಜ್ಞಾಪಯಿತುಂ ಯಂತೇತಿ ತಾಚ್ಛೀಲಿಕ ನೃನ್ನಂತಪ್ರಯೋಗ: | ತಥಾ ಚ ಶ್ರುತಿ: ‘ದೇವಸ್ಯೈಷ ಸ್ವಭಾವೋಽಯಂ’ ಇತಿ |
ಟೀಕ – ನ ಚ ರುದ್ರಾದೀನಾಮಿವ ರಮಾಪತೇರಪಿ ಕಥಂ ಚಿಚ್ಚೇತ್ಯಯಂತೃತೋಪಪತ್ತಿರಿತಿ ವಾಚ್ಯಂ |ಯತೋಽಸಾವಪರ್ಯಾಪ್ತ ಶಕ್ತಿತತ್ವಾದೀನಾಂ ಹೇತೂನಾಂ ಪಕ್ಷಧರ್ಮತಾಬಲೇನ ಸಿದ್ಧಯಣ್ ಪೂರ್ಣಶಕ್ತ್ಯಾದಿ ರೂಪೇಣೈವ ಸಿದ್ಧ ಇತ್ಯಾಶಯವಾನ್ ಆಹ – ಸರ್ವತ್ರಾಖಿಲಸಚ್ಛಕ್ತಿ: ಸ್ವತಂತ್ರೋಽಶೇಷದರ್ಶನ ಇತಿ || ಸರ್ವತ್ರ – ಸಕಲ ಚಿಚ್ಚೇತ್ಯ ನಿಯಮನ ವಿಷಯೇ, ಅಖಿಲಾ = ಪರ್ಯಾಪ್ತಾ, ಸತೀ – ಪ್ರತಿಬಂಧಾದಿ ದೋಷರಹಿತಾ, ಶಕ್ತಿರ್ಯಸ್ಯಾಸೌ ತಥೋಕ್ತ: | ಸ್ವತಂತ್ರ: – ಸ್ವೇಚ್ಛಾಧೀನಪ್ರವೃತ್ತಿ: | ಅಶೇಷ ವಿಷಯತ್ವಾದಶೇಷಂ ದರ್ಶನಂ ಯಸ್ಯಾಸಾವಶೇಷ ದರ್ಶನ ಇತಿ |
(ಮುಕ್ತ ಚೇತನೇ ಭೇದಾಕ್ಷೇಪಸ್ತತ್ಸಾಧಕಾನುಮಾನ ಪ್ರಯೋಗಶ್ಚ) (मुक्त चेतने भेदाक्षेपस्तत्साधकानुमान प्रयोगश्च)
ಟೀಕ – ಅತ್ರಾಽಹು: – ಭವತು ಚೇತ್ಯಂ ಪರಮೇಶ್ವರನಿಯತಂ | ಚೇತನಶ್ಚ ಸಂಸಾರೀ | ಮುಕ್ತಸ್ತು ನ ಚ ಕೇನಾಪಿ ನಿಯತ: | ನಿಯಮ್ಯನಿಯಾಮಕಭಾವಸ್ಯ ಭೇದವ್ಯಾಪ್ತತ್ವಾತ್ | ನ ಚ ಮುಕ್ತಸ್ಯ ಕುತೋಽಪಿ ಭೇದೋಽಸ್ತಿ | ಪ್ರಮಾಣಾಭಾವಾತ್ | ವ್ಯಾಪಕಾಭಾವೇ ಚ ವ್ಯಾಪ್ಯ ನಿವ್ರುತ್ತಿರವಸ್ಯಂಭಾವಿನೀತಿ | ತತ್ರಾಽಹ —
ಅದ್ವೈತವಾದ – ಅಚೇತನಗಳಿಗೂ ಸಂಸಾರಿ  ಚೇತನರಿಗೂ ಶ್ರೀಹರಿಯೇ ಪ್ರೇರಕನಾಗಿರಲಿ, ಆದರೆ ಮುಕ್ತ ಚೇತನರಿಗೆ ಶ್ರೀಹರಿಯು ಪ್ರೇರಕನಲ್ಲ.  ಭೇದವಿದ್ದರೆ ನಿಯಮ್ಯ ನಿಯಾಮಕ ಭಾವವು ಕೂಡುತ್ತದೆ.  ಮುಕ್ತರಿಗೆ ಶ್ರೀಹರಿಯಿಂದ ಭೇದವೇ ಇಲ್ಲ. ಏಕೆಂದರೆ ಭೇದವನ್ನು ಭೋದಿಸತಕ್ಕ ಪ್ರಮಾಣವೇ ಇಲ್ಲ.  ಆದ್ದರಿಂದ ಶ್ರೀಹರಿಯು ಸರ್ವ ಪ್ರೇರಕನೆಂಬುವುದು ಸರ್ವಥಾ ಸಾಧ್ಯವಲ್ಲ.  ಅದಕ್ಕೆ ಆಚಾರ್ಯರು ಹೇಳುತ್ತಾರೆ

ಮೂಲ – ವಿಮತೋ ಭಿನ್ನ: ಮುಕ್ತತ್ವಾತ್ | ಯದಿತ್ಥಂ ತತ್ತಥಾ | ಯಥಾ ಸಂಪ್ರತಿಪನ್ನ: | 

ವಿಮತ: ಭಿನ್ನನೋ ಅಥವಾ ಅಭಿನ್ನನೋ ಎಂಬ ಸಂಶಯನಾದವನು ಅಂದರೆ ಸಂಸಾರದಿಂದ ಮುಕ್ತನಾದವನು,  ಭಿನ್ನ: ಭೇದವುಳ್ಳವನು,  ಮುಕ್ತತ್ವಾತ್ ಮುಕ್ತನಾದುದರಿಂದ   ಯತ್ ಇತ್ಥಂ – ಯಾವುದು ಹೇತುವುಳ್ಳದ್ದೋ   ತತ್ತಥಾ –  ಅದೇ ರೀತಿ  ಯಥಾ ಸಂಪ್ರತಿಪನ್ನ :  ನಿಶ್ಚಿತನಾದಂತ
ಟೀಕಾ – ನನು ಗ್ರಂತೋ ಹಿ ವಾದಪ್ರಕ್ರಿಯಯಾ ಪ್ರವೃರ್ತತೇ | ಶಿಷ್ಯಾನುಕಂಪಯಾ ಪ್ರವರ್ತನಾತ್| ವಾದೇ ಚ – ‘ಪೃಷ್ಠೇನಾಽಗಮ ಏವಾಽದೌ ವಕ್ತವ್ಯ: ಸಾಧ್ಯ ಸಿದ್ಧಯೇ” ಇತ್ಯಂಗೀಕಾರ: | ತತ್ಕಥಂ ಅನುಮಾನಂ ಉಚ್ಯತೇ | ಸತ್ಯಂ, ಆಗಮೋಽಪ್ಯತ್ರಾರ್ಥೇ ಅಭಿಧಾಸ್ಯತೇ | ಅನುಮಾನಂ ತು ತದರ್ಥಾವಧಾರಣಾರ್ಥಂ ಉಪೋದ್ಗಾತ ಪ್ರಕ್ರಿಯಯೋಪನ್ಯಸ್ತಂ ಇತ್ಯದೋಷ: | (ಅನುಮಾನೇ ವಿಮತ ಸಂಪ್ರತಿಪನ್ನ ಪದ ಪ್ರಯೋಗ ಪ್ರಯೋಜನಂ) 
ಟೀಕಾ – ಅತ್ರ ವಿಮತ ಇತಿ ಸಂಸಾರಾನ್ ಮುಕ್ತೋ ವಿವಕ್ಷ್ಯತೇ | ತಸ್ಯಾ ಆತ್ಮೇತ್ಯೇವ ಗ್ರಹಣೇ ಸಿದ್ದಾರ್ಥಾ ಪ್ರತಿಜ್ಞಾ ಸ್ಯಾತ್ | ಅದ್ವೈತವಾದಿನಾಽಪಿ ಸಂಸಾರಿಣೋ ಭಿನ್ನತ್ವೇನ ಅಭ್ಯುಪಗತತ್ವಾತ್ | ಭೇದಸ್ಯ ಚ ಪಾರಮಾರ್ಥಿಕತ್ವಾನ್ ಔಪಾಧಿಕತ್ವಾಭ್ಯಾಂ ವಿಶೇಷಿತತ್ವಾತ್ | ಮುಕ್ತ ಇತ್ಯೇವ ತರ್ಹಿ ಉಚ್ಯತಾಂ | ನಿಗಡ ಮುಕ್ತೇನ ಸಿದ್ದಾರ್ಥತಾ ಸ್ಯಾದಿತಿ ಚೇತ್ | ತರ್ಹಿ ಸಂಸಾರಾನ್ ಮುಕ್ತ ಇತಿ ವಕ್ತವ್ಯಂ | ತಥಾ ಕೃತೇ ಗೌರವಂ ಸ್ಯಾದಿತಿ ಚೇತ್, ನ | ವಿಮತೇ ಅನೇಕ ವಿಧತ್ವೇನ ಧರ್ಮಿ ವಿಶೇಷಾನಿಶ್ಚಯೇ ಸಾಧ್ಯ ವಿಶೇಷೋಪಾದಾನಾದಿನಾ ತನ್ನಿಶ್ಚಯಾನುಸರಣೇಽಪಿ ಗೌರವ ಸಾಮ್ಯಾತ್ | ತಥಾಪಿ ವಿನಿಗಮನಂ ಕುತ ಇತಿ ಚೇತ್ | ಅರ್ಥಪ್ರತಿಪತ್ತಿಗೌರವಾಚ್ಛಬ್ದ ಗೌರವಸ್ಯ ಜ್ಯಾಯಸ್ತ್ವಾತ್ | ಸತ್ಯಂ | ತಥಾಪಿ ಅಪ್ರಸಿದ್ಧ ವಿಶೇಷ್ಯತ್ವ ಅಪ್ರಸಿದ್ಧ ವಿಶೇಷಣತ್ವ ಪ್ರಸಿದ್ದಾರ್ಥತ್ವ ಪ್ರಮಾಣ ಬಾಧಾನಾಂ ಪ್ರತಿಜ್ಞಾ ದೋಷಾಣಾಂ ಉದ್ಧಾರೋಽಪ್ಯನೇನ ಸಂಕ್ಷೇಪತ: ಕೃತ: ಸ್ಯಾದಿತ್ಯೇವಂ ಅರ್ಥಂ ವಿಮತ ಗ್ರಹಣಂ | ತಥಾ ಹಿ, ಯದಿ ವಿಶೇಷ್ಯೋ ಮುಕ್ತಾತ್ಮಾಽಪ್ರಸಿದ್ಧ: ಸ್ಯಾತ್ತದಾ ಕಿಂ ಆಶ್ರಯಾ ವಿಮತಿ: ಸ್ಯಾತ್ | ಯದಿ ಚ ವಿಶೇಷಣಂ ಭೇದೋಽಪ್ರಸಿದ್ಧೋ ಭವೇತ್ತದಾ ಕಿಮುಲ್ಲೇಖಿನೀ ವಿಮತಿರ್ಭವೇತ್ | ಯದಿ ವಾ ಭೇದೋ ಮುಕ್ತಾತ್ಮನಿ ಸಿದ್ಧೋ ಬಾಧಿತೋ ವಾ ಭವೇತ್ ತದಾಪಿ ಅನ್ಯತರಪಕ್ಷ ನಿಶ್ಚಯಾತ್ ನ ವಿಮತಿ: ಸ್ಯಾತ್ | ಅಸ್ತಿ ಚ ಇಯಂ | ತತೋ ನ ಅಪ್ರಸಿದ್ಧ ವಿಶೇಷ್ಯತ್ವಾದೀತಿ | ಏತೇನ ಉದಾಹರಣೇಽಪಿ ಸಂಪ್ರತಿಪನ್ನಗ್ರಹಣಸ್ಯ ಸಾಧ್ಯ ಸಾಧನ ವೈಕಲ್ಯಾತ್ ಉದ್ಧಾರ: ಪ್ರಯೋಜನಂ ವ್ಯಾಖ್ಯಾತಂ| ಅನ್ಯಥಾ ಯಥಾ ನಿಗಡಮುಕ್ತ ಇತ್ಯವಕ್ಷ್ಯತ್ |
 (ಪೂರ್ವೋಕ್ತಾನುಮಾನೇ ಭಿನ್ನ ಇತಿ ಸಾಮಾನ್ಯತ: ಸಾಧ್ಯ ನಿರ್ದೇಶಾಭಿಪ್ರಾಯ:)
ಟೀಕಾ – ನನು ಅತ್ರ ಭೇದ: ಕಿಂ ಪರಮಾತ್ಮ ಪ್ರತಿಯೋಗಿಕ: ಸಾಧ್ಯ: ಉತ ಜೀವ ಪ್ರತಿಯೋಗಿಕ: ಅಥ ವಾ ಜಡ ಪ್ರತಿಯೋಗಿಕ: ಆಹೋಸ್ವಿತ್ಸಕಲಪ್ರತಿಯೋಗಿಕ: | ನಾಽಧ್ಯ: | ಪರಮಾತ್ಮನಿ ಹೇತೋರನೈಕಾಂತ್ಯಾತ್ | ಸಂಸಾರ ಅಭಾವ ಲಕ್ಷಣ ಮುಕ್ತತ್ವಸ್ಯ ತತ್ರ ಸತ್ತ್ವಾತ್ | ದ್ವಿತೀಯೇಽಪಿ ಸಕಲಜೀವಪ್ರತಿಯೋಗಿಕ: ಸ್ವಯತಿರಿಕ್ತ ಜೀವಪ್ರತಿಯೋಗಿಕೋ ವಾ | ನ ಪ್ರತಮ: | ಮುಕ್ತಸ್ಯಾಪಿ ಜೀವತ್ವೇನಾಂಸೇ ಬಾಧಾತ್ | ನ ದ್ವಿತೀಯ: | ಮುಕ್ತಸ್ಯ ತದ್ಭೇದಸಿದ್ದಯಾ ವಿನಾ ತೇಷಾಮೇತತ್ ವ್ಯತಿರಿಕ್ತತ್ವಾ ಅಸಿದ್ದಯಾ ಅಪ್ರಸಿದ್ದ ವಿಶೇಷಣತ್ವಾತ್ | ಸಿದ್ದೌ ಚ ಸಿದ್ಧಸಾದನತ್ವಾತ್ | ಜೀವ ಭೇದ ಸಾಧನಸ್ಯ ಪ್ರಕೃತಾನುಪಯೋಗಿತ್ವೇನ ಅರ್ಥಾಂತರತ್ವಾಶ್ಚ | ಏತೇನ ಸಂಸಾರಿಭ್ಯೋ ಭೇದ: ಸಾಧ್ಯತ ಇತ್ಯಪಿ ಪರಾಸ್ತಂ | ಅತ ಏವ ನ ತೃತೀಯ: | ನಾಪಿ ಚತುರ್ಥ: | ಪೂರ್ವವದಂಶೇ ಬಾಧಾತ್ | ಅಪ್ರಸಿದ್ಧ ವಿಶೇಷಣತ್ವಾಚ್ಛ |
ಟೀಕಾ – ಮೈವಂ | ಅವಿವಕ್ಷಿತ ಪ್ರತಿಯೋಗಿ ವಿಶೇಷ ಭೇದಸ್ಯ ಸಾಧ್ಯತ್ವಾತ್ | ನ ಚ ಏವಂ ಅರ್ಥಾಂತರತಾ | ಮುಕ್ತಸ್ಯ ಭೇದ ಮಾತ್ರಾನ್ ಅಂಗೀಕಾರೇಣಽ ಅಕ್ಷಿಪಂತಂ ಪ್ರತಿ ತತ್ಸಾಧನಸ್ಯ ಸಂಗತತ್ವಾತ್ | ಈಶ್ವರಾದ್ಭೇದಸ್ತು ಆಗಮಾದಿನಾ ಸಾಧಮಿಷ್ಯತೇ | ಅಥವಾ ಪ್ರಾಗವಸ್ಥಾಯಾಂ ಯೇನ ಭೇದೇನ ವಿಶಿಷ್ಟ: ತೇನೈವ ಮೋಕ್ಷೇಽಪೀತ್ಯಯಮತ್ರಾರ್ಥೌ ವಿವಕ್ಷಿತ ಇತಿ ನ ಕಶ್ಚಿತ್ ದೋಷ: |
 (ಪೂರ್ವೋಕ್ತಾನುಮಾನೇ ಪರಮಾತ್ಮನ: ಪಕ್ಷತ್ವೇ ಅನುಪಪತ್ತಿ ನಿರಾಸ:)
ಟೀಕ – ನನು ಚ ಅತ್ರ ಪರಮಾತ್ಮಾ ಪಕ್ಷ: ಸಪಕ್ಷೋ ವಿಪಕ್ಷೋ ವಾ | ನಾಽದ್ಯ: | ಪರೇಣ ಮುಕ್ತಪರಮಾತ್ಮ ಭೇದಸ್ಯಾ ಅಂಗೀಕೃತತ್ವೇನ ದ್ವಯೋ: ಪಕ್ಷೀಕರಣ ಅಸಂಭವಾತ್ | ಅಂಗೀಕೃತತ್ವೇ ಚ ಅನುಮಾನ ವೈಯರ್ಥ್ಯಾತ್ | ನ ದ್ವಿತೀಯ: | ತತ್ರ ಪರಸ್ಯ ಸಾಧ್ಯಾಸಮ್ಮತೇ: | ನ ತೃತೀಯ: | ಭೇದಾಭಾವಸ್ಯ ವಾದಿನಾ ಕ್ವಾಪಿ ಅನಭ್ಯುಪಗತತ್ವಾತ್ | ಮೈವಂ | ಪಕ್ಷತ್ವೇಽಪಿ ಪರಮಾತ್ಮನ: ಮುಕ್ತ ಪರಮಾತ್ಮನೌ ಭಿನ್ನಾವಿತ್ಯಪಕ್ಷೀಕರಣಾತ್ | ಅತ ಏವ ಚ ವಿಮತೋ ಭಿನ್ನ ಇತಿ ವಿಮತಿ ವಿಷಯೋ ಯಾವಾನಿತಿ ಸಾಮಾನ್ಯೇನ ಉಕ್ತಂ |
(ಪೂರ್ವೋಕಾನುಮಾನೇ ಹೇತು ಪರಿಷ್ಕಾರ:)
ಟೀಕನನು ಮುಕ್ತತ್ವಂ ಸಂಸಾರ ಪ್ರಧ್ವಂಸೋ ವಾ ತತ್ಸಂಸರ್ಗಾಭಾವೋ ವಾ | ನಾಽಧ್ಯ: | ಪರಮಾತ್ಮನ್ಯಸಿದ್ದೇ:| ನಿಗಡಮುಕ್ತಾದಿ ದೃಷ್ಟಾಂತಸ್ಯ ಸಾಧನವೈಕಲ್ಯಾಪತ್ತೇಶ್ಚ | ಅತ ಏವ ನ ದ್ವಿತೀಯೋಽಪೀತಿ | ಮೈವಂ | ‘ಅವಿವಕ್ಷಿತ ವಿಶೇಷ ಬಂಧ ಸಂಸರ್ಗಾಭಾವಸ್ಯ ಹೇತುತ್ವಾತ್ | ನನು ಚ ಅತ್ರ ಬಂಧ ಅಭಾವಾಧಿಕರಣತ್ವಂ ಹೇತು: | ಅಭಾವಾಧಿಕರಣತ್ವ ಮಾತ್ರೇಣಾಲಂ | ಕೇವಲ ಅನ್ಯಯಿತ್ವೇನ ವಿಶೇಷಣ ವ್ಯಾವರ್ತ್ಯ ಅಭಾವಾತ್ | ಅಪಿ ಚ ಅಧಿಕರಣತ್ವಮಾತ್ರೇಣಾಲಂ | ಕಿಮಭಾವಗ್ರಹಣೇನ | ಕಿಂ ಚ ಅಧಿಕರಣಂ ಕಾರಕವಿಶೇಷ: | ಕಾರಕತ್ವಮಾತ್ರೇಣಾಲಂ ಕಿಂ ವಿಶೇಷಗ್ರಹಣೇನ | ಏವಂ ಕಾರಕಂ ಕಾರಣವಿಶೇಷ: | ಕಾರಣತ್ವಮಾತ್ರೇಣಾಲಂ | ತತ್ಕಿಂ ವಿಶೇಷೇಣೇತಿ | ಮೈವಂ | ತಥಾ ಸತಿ ಪ್ರಮೇಯತ್ವಾದೀನಾಮಪಿ ಕೇವಲ ಅನ್ವಯಿತ್ವ ಭಂಗ ಪ್ರಸಂಗಾತ್ | ಪ್ರಮಾ ವಿಷಯತ್ವಂ ಪ್ರಮೇಯತ್ವಂ | ತತ್ರ ವಿಷಯತ್ವ ಮಾತ್ರೇಣ ಅಲಂ | ಕಿಂ ಪ್ರಮಾ ಗ್ರಹೇಣೇನ ಇತ್ಯಾಸ್ತ್ರತ್ರಾಪಿ ಸುವಚತ್ವಾತ್ | ಯದಿ ಹೇತು ವ್ಯವಚ್ಛೇದಕತ್ವೇನ ಪೃಥಗುಪಾದೀಯತೇ ತದೇವ ವಿಶೇಷಣಂ ಪ್ರಯೋಜನಾಂತರಂ ಅಪೇಕ್ಷ್ಯತೇ| ನ ಪುನ: ತನ್ಮಾತ್ರಾಂತರ್ಗತಂ ಇತಿ ಚೇತ್ | ಸಮಂ ಪ್ರಕೃತೇಽಪಿ |
(ಪ್ರಕಾರಾಂತರೇಣ ಹೇತು ಸಾಧ್ಯ ಪರಿಷ್ಕಾರ:)
ಟೀಕ – ಅಥವಾ ಸಂಸಾರ ಸಂಸರ್ಗ ಅಭಾವೋ ಮುಕ್ತತ್ವಂ ತಥಾತ್ವೇ ಘಟೋ ದೃಷ್ಟಾಂತ: | ಪರಮಾತ್ಮ ಪ್ರತಿಯೋಗಿಕೋ ವಾ ಭೇದೋ ಅತ್ರ ಸಾಧ್ಯ: | ಬಂಧ ಪ್ರಧ್ವಂಸಾಧಿ ಕರಣತ್ವಂ ಚ ಮುಕ್ತತ್ವಮಿತಿ ನ ಪರಮಾತ್ಮನಿ ವ್ಯಭಿಚಾರ: |
(ವಿಮತೋ ಭಿನ್ನ ಇತ್ಯತ್ರ ಭೇದೇ ಪಾರಮಾರ್ಥಿಕತ್ವಾದಿ ಪ್ರಶ್ನಾಯೋಗಸಮರ್ಥನಂ)
ಟೀಕ – ಸ್ಯಾದೇತತ್ | ಕಿಂ ಅನಿರ್ವಚನೀಯೋ ಭೇದ: ಸಾಧ್ಯತೇ | ಕಿಂ ವಾ ಪಾರಮಾರ್ಥಿಕ: | ನಾಽಧ್ಯ: | ಅಪಸಿದ್ಧಾಂತಾತ್ | ನ ದ್ವಿತೀಯ: | ಪರಂ ಪ್ರತಿ ದೃಷ್ಟಾಂತಸ್ಯ ಸಾಧ್ಯ ವೈಕಲ್ಯಾದಿತ್ಯತ ಆಹ –
ಪರರು ಮಾಡಬಹುದಾದ ಆಕ್ಷೇಪ – ಈ ಅನುಮಾನದಲ್ಲಿ ಅನಿರ್ವಚನೀಯ (ವ್ಯಾವಹಾರಿಕ) ಭೇದವನ್ನು ಸಾಧಿಸುತ್ತೀರೋ ಅಥವಾ ಪಾರಮಾರ್ಥಿಕ ಭೇದವನ್ನೋ?  ದ್ವೈತಿಗಳಿಗೆ ಅನಿರ್ವಚನೀಯ ಭೇದವು ಅಪಸಿದ್ಧಾಂತ ಬರುವುದರಿಂದ ಒಪ್ಪಲಾಗದು.  ಪಾರಮಾರ್ಥಿಕ ಭೇದವನ್ನು ದೃಷ್ಟಾಂತದಲ್ಲಿ (ನಿಗಡ ಮುಕ್ತನಲ್ಲ – ಬಂಧನದಿಂದ ಮುಕ್ತಿ) ಅದ್ವೈತಿಗಳು ಅಂಗೀಕರಿಸದೇ ಇರುವುದರಿಂದ ಮತ್ತು ಅಸಾಧ್ಯವಾದ್ದರಿಂದ ಸಾಧ್ಯವೈಕಲ್ಯ ದೋಷವಾಗುವುದು.  ಆದ್ದರಿಂದ ದ್ವೈತಿಗಳು ಅನಿರ್ವಚನೀಯ ಅಥವಾ ಪಾರಮಾರ್ಥಕ ಭೇದವನ್ನು ಸಾಧಿಸಲಿಕ್ಕೆ ಆಗುವುದಿಲ್ಲ ಎಂಬ ಅದ್ವೈತಿಗಳ ಶಂಕೆಗೆ ಆಚಾರ್ಯರು ಪರಿಹಾರ ನೀಡುತ್ತಾರೆ–
ಮೂಲ  – ನ ಚ ಭೇದೇ ವಿಕಲ್ಪೋ ಯುಜ್ಯತೇ ||
ಭೇದೇ – ಭೇದ ವಿಷಯದಲ್ಲಿ, ವಿಕಲ್ಪಶ್ಚ – ಅನಿರ್ವಚನೀಯವೋ ಪಾರಮಾರ್ಥಿಕವೋ ಎಂಬ ಸಂಶಯವೇ ನ ಯುಜ್ಯತೇ – ಕೂಡುವುದಿಲ್ಲ
ಟೀಕಾ – ಚ ಶಬ್ದ ಏವಾರ್ಥೇ ವಿಕಲ್ಪ ಇತ್ಯನೇನ ಸಂಬಧ್ಯತೇ | ಸಮುಚ್ಚಯೇ ವಾ | ಏತದಾಶಂಕಾ ನಿರಾಸ ಸಮುಚ್ಚಿತಸ್ಯೈವ ಅನುಮಾನಸ್ಯ ಸಾಧಕತ್ವಾತ್ | ಏಕತ್ರ ಧರ್ಮಿಣಿ ವಿರುದ್ಧ ಅನೇಕ ಕಾರಕಲ್ಪನಂ ವಿಕಲ್ಪ: | ಸಂಶಯ ಇತಿ ಯಾವತ್ | ತನ್ಮೂಲ: ಪ್ರಶ್ನೋಽತ್ರ ವಿಕಲ್ಪಪದೇನ ಲಕ್ಷ್ಯತೇ | ಹೇತು ಸೂಚನಂ ಲಾಕ್ಷಣಿಕ ಪದ ಪ್ರಯೋಗೇ ಪ್ರಯೋಜನಂ |
ಇಲ್ಲಿ “ನ ಚ ಭೇದೇ” ಪ್ರಯೋಗದಲ್ಲಿದ್ದ “ಚ” ಶಬ್ದವು ಸಮುಚ್ಛಯಾರ್ಥವನ್ನೂ ತೋರಿಸುತ್ತದೆ.  “ಚ” ಶಬ್ದವು ಅವಧಾರಣಾರ್ಥದಲ್ಲಿಯೂ ಇರುತ್ತದೆ.
ಟೀಕ – ಇದಮುಕ್ತಂ ಭವತಿ | ಆಸ್ತಾಮಿದಂ ದೂರೇ ದೂಷಣ ಅಭಿಧಾನಂ | ಪ್ರಶ್ನ ಏವ ತಾವದಯಂ ನ ಯುಜ್ಯತೇ | ಸಂದೇಹ ಮೂಲತ್ವಾತ್ ಪ್ರಶ್ನಸ್ಯ | ನ ಖಲು ಕಶ್ಚಿನ್ನಿಶ್ಚಿತಂ ಪೃಚ್ಛತಿ | ನಾಪ್ಯತ್ಯಂತಾವಿದಿತಂ | ನ ಚ ವಿಮತೋ ಭಿನ್ನ ಇತ್ಯುಕ್ತೇ ವಿನಾ ಪ್ರಶ್ನೇನಾಪಸಿದ್ಧಾಂತಾದಿ ಉದ್ಭಾವನಾ ಅವಸರೇಽಸ್ತಿ |
ಒಟ್ಟು ಅಭಿಪ್ರಾಯ ಹೀಗೆದೆ.  ನಮ್ಮನ್ನು ದೂಷಣ ಮಾಡುವುದಕ್ಕೆ ಮೊದಲು ಅದ್ವೈತಿಗಳ ಈ ಪ್ರಶ್ನೆಯೇ ಸರಿಯಲ್ಲ.  ಸಂದೇಹದ ಮೂಲದ ಬಗ್ಯೆ ಪ್ರಶ್ನೆ ಮಾಡಬಾರದು.  ಸಂಪೂರ್ಣ ನಿಶ್ಚಿತವಾಗಿದ್ದರೂ ಪ್ರಶ್ನಿಸುವುದಿಲ್ಲ.  ಏನೂ ಗೊತ್ತಿಲ್ಲದಿದ್ದರೂ ಪ್ರಶ್ನಿಸುವುದಿಲ್ಲ.  ಅಪಸಿದ್ಧಾಂತ ಇತ್ಯಾದಿ ಹೇಳಲು ಪ್ರಯತ್ನಿಸಿದ್ದರೆ, “ವಿಮತೋ ಭಿನ್ನ” ಹೀಗೆಂದರೆ ಸಾಧ್ಯವನ್ನು ವಿಕಲ್ಪಿಸದೆ ಅಪಸಿದ್ಧಂತಾದಿ ದೋಷಗಳನ್ನು ಆರೋಪ ಮಾಡಬಾರದು.  ವಿಕಲ್ಪವೇ ಕೂಡದಾಗ ವಿಕಲ್ಪವನ್ನು ಹಿಡಿದು ದೋಷ ಹೇಳುವುದು ಸರಿಯಲ್ಲ.
(ಪ್ರಶ್ನಸ್ಯ ಸಂಶಯ ಮೂಲಕತ್ವ ಸಮರ್ಥನಂ)
ಟೀಕ – ನನು ವಿನಾಽಪಿ ಸಂದೇಹಾತ್ ಪ್ರಶ್ನೋ ಭವತಿ | ಯಥಾ ದೇವದತ್ತ ಕಿಯಂತ: ತನಯ ತವ ಇತಿ| ಮೈವಂ | ತತ್ರಾಪಿ ಪುತ್ರತ್ವ ಸಾಮಾನ್ಯಸ್ಯ ಸಂಖ್ಯಾ ವಿಶೇಷ ಸಮಾನಾಧಿಕರಣತಯಾ ಅನುಭೂತತ್ವೇನ ತತ್ಪ್ರತಿಭಾಸೇ ಸತಿ ಸಂಸ್ಕಾರೋದ್ಬೋಧಾತ್ ಸಂಖ್ಯಾವಿಶೇಷ ಸ್ಮ್ರುತೌ ತತ್ರಾಂಯತಂ ಜಿಜ್ಞಾಸಾಯಾಂ ನಿಶ್ಚಾಯಕ ಪ್ರಮಾಣಾಭಾವೇನ ಸಂಶಯೋದಯಸ್ಯ ನ್ಯಾಯಪ್ರಾಪ್ತತ್ವೇನ ತನ್ಮೂಲತ್ವಾತ್ | ಕೇವಲಂ ಸಂಖ್ಯಾಪ್ರಭೇದಾನಾಂ ಬಾಹುಲ್ಯಾದ್ ಗೌರವಭಯೇನ ಏಕೋ ದ್ವೌ ವ ಇತ್ಯಾದಿ ವಿಶೇಷ ನಿರ್ದೇಶೇನ ವಿನಾ ಕಿಯಂತ ಇತಿ ಸಾಮಾನ್ಯೇನ ಪ್ರಶ್ನ: ಕ್ರಿಯತೇ |
ಅದ್ವೈತಿಗಳ ಅನುಮಾನ – ಸಂದೇಹ ಅವಶ್ಯಕತೆಯಿಲ್ಲ. ಸಂದೇಹವಿಲ್ಲದಿದ್ದರೂ ಪ್ರಶ್ನೆ ಬರುತ್ತದೆ.  ಹೇಗೆಂದರೆ ದೇವದತ್ತ ನಿನಗೆ ಎಷ್ಟು ಮಕ್ಕಳಿದ್ದಾರೆ?  ಹೀಗೆಂದು ಪ್ರಶ್ನಿಸಿದರೆ ಉತ್ತರ – ಹಾಗಲ್ಲ. ಇಲ್ಲಿಯೂ ಕೂಡ ದೇವದತ್ತನಿಗೆ ಮಕ್ಕಳಿರುವುದು ಗೊತ್ತಿರುವುದರಿಂದ ಸಂಖ್ಯೆಯ ಬಗ್ಯೆ ಸಂದೇಹವಿರುವುದು ಸಹಜ.  ವಿಶೇಷ ಸಂಖ್ಯೆಯನ್ನು ತಿಳಿಯಲು ಉದ್ಯುಕ್ತನಾಗಿ, ಇಬ್ಬರೋ ಮೂವರೋ ಇತ್ಯಾದಿ ತಿಳಿಯಲು, ಸಂಸ್ಕಾರ ಪ್ರಚೋದಿತವಾಗಿರುವುದರಿಂದ, ಯಾವುದೇ ವಿಧವಾದ ಪ್ರಮಾಣ ಭಾವದಿಂದ ಸಂಶಯ ಬರುವುದು ಸಹಜ.  ಕೇವಲ ಸಂಖ್ಯಾ ಪ್ರಭೇದದಿಂದ ಒಬ್ಬರೋ, ಇಬ್ಬರೋ ಹೀಗೆ ವಿಶೇಷ ನಿರ್ದೇಶಕ್ಕಾಗಿ ಎಷ್ಟು ಎಂದು ಸಾಮಾನ್ಯವಾಗಿ ಪ್ರಶ್ನೆ ಮಾಡಬಹುದು.
ಟೀಕ – ಅಥಾತ್ರ ಗಿರಿದರ್ಯಾ ಕಿಮಪ್ಯದ್ರಾಕ್ಷಮಿತ್ಯುಕ್ತೇ ಕಿಂ ಲಕ್ಷಣಕಂ ತದಿತಿ ಪೃಚ್ಛತಿ | ತದಾ ಕಥಂ ಸಂದೇಹ ಹೇತುಕತ್ವಾತ್ | ವಿಶೇಷ ಸ್ಮರಣೋಪಾಯಾಭಾವದಿತಿ ಚೇನ್ನ | ತತ್ರಾಪಿ ವಸ್ತುತ್ವೇನ ಲಕ್ಷಣ ಸದ್ಭಾವಂ ಅನುಮಾಯ ತತಸ್ತದ್ವಿಶೇಷಸ್ಮೃತೌ ತತ್ಕಿಂ ಅನುಭೂತೇಷ್ವನ್ಯತಮಂ ಅನ್ಯದ್ವೇತಿ ಸಂದೇಹಾದೇವ ಪ್ರಶ್ನಾತ್ |
ಪ್ರಶ್ನೆ – ಬೆಟ್ಟದ ಗುಹೆಯೊಳಗೆ ಏನನ್ನೋ ಕಂಡೆನು ಎಂದು ಹೇಳಿದಾಗ ಬೇರೊಬ್ಬರು ಕೇಳುತ್ತಾರೆ “ಅದು ಹೇಗಿತ್ತು”?  ಆಗ ಅಲ್ಲಿ ಸಂದೇಹ ಎಲ್ಲಿದೆ?  ದೂರದಲ್ಲಿರುವುದರಿಂದ ಸಂದೇಹವಿಲ್ಲ, ವಿಶೇಷ ಸ್ಮರಣೆಗೆ ಕಾರಣವೇ ಇಲ್ಲದಿರುವುದರಿಂದ ಹೇಗೆ ಪ್ರಶ್ನಿಸಿದನೆಂದರೆ, ಉತ್ತರ – ಅಲ್ಲೂ ಕೂಡ ವಸ್ತುವೆಂದ ಮೇಲೆ ಲಕ್ಷಣವಿರಬೇಕು, ಲಕ್ಷಣ ಹೇಳಿಲ್ಲವೆಂದ ಮೇಲೆ ತಮಗೆ ಗೊತ್ತಿರುವುದು ಯಾವುದಾದರೂ ಒಂದು ಇರಬಹುದು ಎಂಬ ಸಂದೇಹದಿಂದ ಪ್ರಶ್ನಿಸುತ್ತಾರೆ.  ಆದ್ದರಿಂದ ಪ್ರಶ್ನೆಯು ಸಂದೇಹದ ಮೂಲಕವೇ ಬರುತ್ತದೆ.  ಕುತೂಹಲವೂ ಕೂಡ ಸಂದೇಹದ ಒಂದು ಪ್ರಭೇದವೇ.
(ಜ್ಞಾನಿಕೃತ ಪ್ರಶ್ನಸ್ಯ ಸಂಶಯಮೂಲಕತ್ವಾಭಾವೇಽಪಿ ಪ್ರಕೃತಸಂಶಯಸ್ಯ ತನ್ನೈಯತ್ಯ ಸಮರ್ಥನಂ)
ಟೀಕ – ಅಸ್ತು ವಾ ಅನ್ಯತ್ರ ಪ್ರಶ್ನೋ ಯಥಾ ತಥಾ | ಅನೇಕ ಕೋಟ್ಯವಲಂಬೀ ಪ್ರಕೃತಸ್ತಾವತ್ ಸಂದೇಹಮೂಲ ಏವಾಂಗೀಕಾರ್ಯ: |
ಇದೋ ಅಥವಾ ಅದೋ ಎಂಬ ಸಂಶಯ ಅಂದರೆ ಪಾರಮಾರ್ಥಿಕವೋ ಅಥವಾ ಅನಿರ್ವಚನೀಯವೋ ಎಂಬ ಸಂದೇಹವನ್ನು ಅಂಗೀಕಾರ ಮಾಡಲೇಬೇಕಾಗುತ್ತದೆ.
(ಭೇದೇ ಪಾರಮಾರ್ಥಿಕತ್ವಾದಿ ಕೋಟಿಕ ಸಂಶಯಾಯೋಗ ಸಮರ್ಥನಂ)
ಟೀಕಾ – ಅಸ್ತು ಸಂದೇಹಮೂಲತ್ವಂ ಪ್ರಶ್ನಸ್ಯ | ತಥಾಪಿ ಕುತೋ ನ ಯುಜ್ಯತ ಇತ್ಯತ್ರಾಪಿ ನ ಚ ಭೇದೇ ವಿಕಲ್ಪೋ ಯುಜ್ಯತೇ ಇತ್ಯವೋತ್ತರಂ | ಪ್ರಶ್ನೋ ಹಿ ಸಂದೇಹಹೇತುಕ ಇತ್ಯುಕ್ತಂ | ನ ಚ ಭೇದೇ ಭೇದವಿಷಯೇ ‘ಕಿಮಯಮನಿರ್ವಚನೀಯೋಽಥ ವಾ ಪಾರಮಾರ್ಥಿಕ:’ ‘ಇತ್ಯೇವರೂಪೋ ವಿಕಲ್ಪ: ಸಂದೇಹೋ ಯುಜ್ಯತೇ | ನ ಚ ಕಾರಣಾಭಾವೇ ಕಾರ್ಯಮುತ್ಪತ್ತುಮರ್ಹತಿ | ಅತಿಪ್ರಸಂಗಾತ್|
ಪರರ ಶಂಕ – ಪ್ರಶ್ನೆಗೆ ಸಂದೇಹವೇ ಮೂಲವಾಗಿರಲಿ.  ಆದರೂ ಕೂಡ ಭೇದದ ವಿಷಯದಲ್ಲಿ ಏಕೆ ಕೂಡುವುದಿಲ್ಲವೆಂದು ಪ್ರಶ್ನಿಸಿದರೆ, ಆಗಲೂ ಇದೇ ಉತ್ತರವೇ “ಭೇದದಲ್ಲಿ ವಿಕಲ್ಪ ಕೂಡುವುದಿಲ್ಲ.  ಭೇದ ವಿಷಯದಲ್ಲಿ ಅನಿರ್ವಚನೀಯವೋ ಪಾರಮಾರ್ಥಿಕವೋ ಎಂಬ ಸಂಶಯವು ಕೂಡುವುದಿಲ್ಲ.  ಸಂಶಯರೂಪವಾದ ಕಾರಣವಿಲ್ಲವಾದರೆ ಪ್ರಶ್ನೆ ರೂಪವಾದ ಕಾರ್ಯವೂ ಹುಟ್ಟಲಾರವು.  ಕಾರಣವಿಲ್ಲದಿದ್ದರೂ ಕಾರ್ಯವು ಹುಟ್ಟುವುದಾದರೆ ಅದು ಅತಿಪ್ರಸಂಗವಾಗುತ್ತದೆ ಹೇಗೆ ಹಾಲಿಲ್ಲದೆ ಮೊಸರಾಗುವುದಿಲ್ಲವೋ ಹಾಗೆ.
ಟೀಕಾ – ಅಥೈವಂ ವಿಧೋ ಭೇದೇ ಸಂದೇಹ: ಕುತೋ ನ ಯುಜ್ಯತ ಇತ್ಯತ್ರಾಪಿ ನ ಚ ಭೇದೇ ವಿಕಲ್ಪೋ ಯುಜ್ಯತೇ ಇತ್ಯೇವೋತ್ತರಂ | ಸಂಶಯೋ ಹಿ ಸ್ಥಾಣುಪುರುಷಾಧ್ಯನೇಕ ವಿಶೇಷ ಸಂಭಂಧಿತಯಾ ಅನುಭೂಯೇನ ಊರ್ಧ್ವನಾದಿಸಾಧಾರಣ ಧರ್ಮೇಣಾ ಆಲಿಂಗಿತಸ್ಯ ಪುರೋರ್ವುತ್ತಿವರಸ್ತುನೋ ಅವಭಾಸೇ ಸಂಸ್ಕಾರೋದ್ಗೋಧದ್ವಾರೇಣ ಪ್ರಾಗನುಭೂಯಸ್ಥಾಣ್ವಾದಿ ವಿಶೇಷ ವಿಷಯಸ್ಮ್ರುತೌ ಪ್ರಯೋಜನಾನುಸಂಧಾನೇ ವಿಶೇಷ ಜಿಜ್ಞಾಸಾಯಾಂ ಅನ್ಯತರಾ ನಿಶ್ಚಾಯಕ ಪ್ರಮಾಣಂ ಅನುಸರತೋಽಪಿ ತದಲಾಭೇ ಸತಿ ‘ಕಿಮಯಂ ಸ್ಥಾಣುಸ್ಸಯಾತ್ ಪುರುಷೋ ವ’ ಇತಿ ಜಾಯತೇ | ನ ಚ ಭೇದೇಽನಿರ್ವಚನೀಯ: ಪಾರಮಾರ್ಥಿಕ ಇತಿ ವಿಕಲ್ಪ: ಪ್ರಭೇದೋ ಯುಜ್ಯತೇ | ಯೇನ ವಿಮತೋ ಭಿನ್ನ ಇತ್ಯುಕ್ತ್ಯಾ ಭೇದ್ಫ಼ಪ್ರತೀತಾವನಿರ್ವಚನೀಯಾದಿಸ್ಮೃತಿ: ಸ್ಯಾತ್ |
ಹೀಗೇ ಭೇದದ ವಿಷಯದಲ್ಲಿ ಸಂದೇಹವು ಹೇಗೆ ಕೂಡುವುದಿಲ್ಲ, ಇಲ್ಲಿಯೂ ಕೂಡ ಭೇದ ವಿಷಯದಲ್ಲಿ ವಿಕಲ್ಪವು (ಪಾರಮಾರ್ಥಿಕವೋ ಅನಿವರ್ಚನೀಯವೋ) ಕೂಡುವುದಿಲ್ಲ.  ಸಂಶಯವಾದರೋ ಸ್ಥಾಣುಪುರುಷಾದಿ ಅನೇಕ ವಿಷೇಷ ಸಂಬಂಧಿತವಾದ ಅನುಭವಿತ ಊರ್ಧ್ವತ್ವಾದಿ ಸಾಧಾರಣ ಧರ್ಮದಿಂದ ಕೂಡಿರುವ, ಎದುರಿಗಿರುವ ವಸ್ತುವನ್ನು ಕಂಡಾಗ, ಸಂಸ್ಕಾರವು ಹುಟ್ಟಿ, ಹಿಂದೆ ಅನುಭವಿಸಲ್ಪಟ್ಟ ಸ್ಥಾಣ್ವಾದಿ (ಸ್ಥಾಣು-ಪುರುಷ) ವಿಶೇಷ ವಿಷಯವನ್ನು ಸ್ಮರಿಸಿ, ಪ್ರಯೋಜನವನ್ನು ಅನುಸಂಧಾನ ಮಾಡಿ, ವಿಶೇಷ ಜಿಜ್ಞಾಸದಿಂದ, ಬೇರೆ ನಿಶ್ಚಾಯಕ ಪ್ರಮಾಣವನ್ನು ಅನುಸರಿಸಿ, ಅದು ಸಿಗದಿದ್ದಾಗ, “ಇದೇನು ಸ್ಥಾಣುವಾ (ಕೊಂಬೆ ಮೊದಲಾದವುಗಳಿಂದ), ಅಥವಾ ಪುರುಷನೋ (ಹಸ್ತಪಾದಾದಿಗಳನ್ನು ಲಕ್ಷಿಸಿ), ಎಂದು ತಿಳಿಯುತ್ತದೆ.  ಭೇದ ವಿಷಯದಲ್ಲಾದರೂ ಅನಿರ್ವಚನೀಯ ಅಥವಾ ಪಾರಮಾರ್ಥಿಕವೆಂಬ ವಿಕಲ್ಪದಿಂದ ಪ್ರಭೇದಗಳು ಕೂಡುವುದೇ ಇಲ್ಲ.    ಹೀಗೆ ‘ವಿಮತೋ ಭಿನ್ನ:’ ಎಂಬುವುದರಿಂದ ಭೇದ ಪ್ರತೀತಿಯಾಗುವಾಗ ಪ್ರಭೇದವೇ ಇಲ್ಲದಿರುವುದರಿಂದ ಸಂಶಯ ಕೂಡುವುದಿಲ್ಲ.  ಆದ್ದರಿಂದ ಈ ಪ್ರಶ್ನೆಯೇ (ಪಾರಮಾರ್ಥಿಕವೋ ಅನಿರ್ವಚನೀಯವೋ)ಕೂಡುವುದಿಲ್ಲ.
(ಭೇದೇ ಸರ್ವತ್ರ ಚ ಅನಿರ್ವಚನೀಯತ್ವಾದಿ ಪ್ರಭೇದಾಭಾವೇನ ಪೂರ್ವೋಕ್ತ ಸಂಶಯಾಯೋಗ ಸಮರ್ಥನಂ)
ಟೀಕಾ – ಅಥ ಕಥಂ ಅನಿರ್ವಚನೀಯತ್ವ ಪಾರಮಾರ್ಥಿಕತ್ವ ಪ್ರಭೇದೋ ಭೇದೇ ನ ಯುಜ್ಯತ ಇತ್ಯತ ಆಹ –
ಹೀಗೆ ಭೇದದ ವಿಷಯದಲ್ಲಿ ಅನಿರ್ವಚನೀಯತ್ವ ಪಾರಮಾರ್ಥಿಕತ್ವ ಪ್ರಭೇದ್ಫ಼ವು ಏಕೆ ಕೂಡುವುದಿಲ್ಲ ಎಂಬ ಶಂಕೆಯನ್ನು ಪರಿಹರಿಸುತ್ತಾರೆ –

ಮೂಲ  – ಅನಿರ್ವಚನೀಯಸ್ಯ ಸರ್ವತ್ರ ಅಪ್ರಸಿದ್ಧ್ವಾತ್ ಏವ |

ಅನಿರ್ವಚನೀಯಸ್ಯೈವ – ಅನಿರ್ವಚನೀಯ ಭೇದಕ್ಕೇನೆ, ಸರ್ವತ್ರ – ಎಲ್ಲಾ ಕಡೆಯಲ್ಲಿಯೂ, ಅಪ್ರಸಿದ್ಧತ್ವಾತ್ – ಪ್ರಸಿದ್ಧಿಯಿಲ್ಲದಿರುವುದರಿಂದ

ಟೀಕಾ – ಅನಿರ್ವಚನೀಯಸ್ಯ ಭೇದಸ್ಯೇತಿ ಶೇಷ: | ಏವಕಾರೋಽನಿರ್ವಚನೀಯಸ್ಯೇತ್ಯನೇನ ಸಂಬಧ್ಯತೇ | ಉಪಲಕ್ಷಣಂ ಚೈತತ್ | ಪಾರಮಾರ್ಥಿಕೋಽಪಿ ಭೇದೋ ನ ಪರಸ್ಯ ಸಿದ್ಧ ಇತ್ಯಪಿ ದೃಷ್ಟವ್ಯಂ | ನನು ನಾಯಮಸ್ತಿ ನಿಯಮ: ಯತ್ಸಂದೇಹ ವಿಷಯಜಾತೀಯಮೇವಾ ಆರೋಪ್ಯಮಾಣ ಕೋಟಿ ಸಂಬಂಧಿತಯಾ ಪ್ರತಿಪತ್ತವ್ಯಮಿತಿ | ಆರೋಪ್ಯಮಾಣ ಕೋಟಿ ಪ್ರತಿಪತ್ತಿಮಾತ್ರೇಣಾಪಿ ಸಂದೇಹ ದರ್ಶನಾದಿತಿ ಚೇತ್ ಸತ್ಯಂ | ತಥಾಪಿ ನ ಅಯಂ ಸಂದೇಹೋ ಯುಜ್ಯತೇ | ಆರೋಪ್ಯಮಾಣ ಅನಿರ್ವಚನೀಯಸ್ಯ ಕುತ್ರಾಪಿ ಅಪ್ರತೀತತತ್ವಾತ್ | ಏತದಪಿ ಅಯುಕ್ತಂ ಅನಿರ್ವಚನೀಯಸ್ಯ ಸರ್ವತ್ರ ಅಪ್ರಸಿದ್ಧತ್ವಾದೇವೇತಿ |
ಅನಿರ್ವಚನೀಯ ಭೇದ ಎಂದು ಸೇರಿಸಿಕೊಳ್ಳಬೇಕು (ಶೇಷ).  ಇಲ್ಲಿ ‘ಏವ’ಕಾರವು ಅನಿರ್ವಚನೀಯದ ಸಂಬಂಧಿಯಾಗಿದೆ.  ಪಾರಮಾರ್ಥಿಕವೂ ಕೂಡ ಭೇದದಲ್ಲಿ ಪಾರಮಾರ್ಥಿಕ ಭೇದವಾದರೆ ಅದ್ವೈತಿಗಳು ಒಪ್ಪುವುದಿಲ್ಲ, ಅವರಿಗೆ ಅಸಿದ್ಧವೇ ಆಗಿದೆ.  ಯಾವುದು ಸಂದೇಹಕ್ಕೆ ವಿಷಯವಾಗಿದೆಯೋ, ಆರೋಪ್ಯಮಾಣವಾದ ಅನಿರ್ವಚನೀಯತ್ವವೆಂಬ ಕೋಟಿಯು ಪ್ರಸಿದ್ಧವಲ್ಲ.  ಆದ್ದರಿಂದ ಅಲ್ಲೂ ಸಂದೇಹವು ಕೂಡುವುದಿಲ್ಲ.  ಆರೋಪ್ಯಮಾಣ ಅನಿರ್ವಚನೀಯ ಎಲ್ಲಿಯೂ ಸಿದ್ಧವಾಗಲ್ಲ.  ಆದ್ದರಿಂದ ಅನಿರ್ವಚನೀಯತ್ವವು ಎಲ್ಲಿಯೂ ಅಪ್ರಸಿದ್ಧವಾಗಿದೆ.
(ಪೂರ್ವೋಕ್ತ ಪ್ರಶ್ನಾಯೋಗೇ ದೃಷ್ಟಾಂತ ಕಥನಂ) (ಹಿಂದೆ ಹೇಳಿದ್ದಕ್ಕೆ ದೃಷ್ಟಾಂತವನ್ನು ಹೇಳುತ್ತಾರೆ) ಅತ್ರ ದೃಷ್ಟಾಂತಂ ಆಹ –
ಮೂಲ – ಶಶ ವಿಷಾಣಂ ಗೋವಿಷಾಣಂ ವ ಉಚ್ಯತ ಇತಿವತ್ |
ಮೊಲದ ಕೋಡು ಹೇಳಲ್ಪಡುತ್ತದೆಯೋ, ಗೋವಿನ ಕೋಡು ಹೇಳಲ್ಪಡುತ್ತದೆಯೋ
ಟೀಕಾ – ಯಥಾ ಕೇನಾಪಿ ‘ತತ್ರ ವಿಷಾಣಮಸ್ತಿ’ ಇತ್ಯುಕ್ತೇ ಕಿಂ ಭವತಾ ವಿಷಾಣಪದೇನ ಶಶವಿಷಾಣಂ ಉಚ್ಯತೇ ಕಿಂ ವಾ ಗೋವಿಷಾಣಾಂ ಇತಿ ನ ಯುಜ್ಯತೇ ಪ್ರಶ್ನ: | ಶಶವಿಷಾಣಸ್ಯೈವ ಅಪ್ರಸಿದ್ದತ್ವೇನ ವಿಷಾಣತ್ವಸ್ಯ ತತ್ಸಂಬಂಧಿತಯಾ ಅನುಪಲಬ್ಧಸ್ಯ ವಿಷಾಣಪದಾತ್ ಪ್ರತಿಭಾಸೇ ಸತ್ಯಪಿ ತದ್ ಅನುಸ್ಮರಣ ಹೇತುತ್ವಾನುಪಪತ್ತ್ಯಾ ಜಿಜ್ಞಾಸೋದಯಾಭಾವೇನೈವಂ ವಿಧ ಸಂಶಯಾ ಆಯೋಗಾತ್ | ತಥಾ ಪ್ರಕೃತೇಽಪಿ |
ಹೇಗೆ ಯಾರೋ “ಅಲ್ಲಿ ವಿಷಾಣವಿದೆ” ಎಂದರೆ, ನೀವು ವಿಷಾಣ ಪದದಿಂದ ಮೊಲದ ಕೊಂಬನ್ನು ಹೇಳುತ್ತಿರೋ ಅಥವಾ ಗೋವಿನ ಕೋಡನ್ನೋ? ಎಂಬ ಪ್ರಶ್ನೆಯೇ ಕೂಡುವುದಿಲ್ಲ.  ಏಕೆಂದರೆ ಮೊಲದ ಕೂಡೇ ದುರ್ಲಭ.  ಶಶವಿಷಾಣ ಅಪ್ರಸಿದ್ಧವಾಗಿರುವುದರಿಂದ ವಿಷಾಣ ಪದದಿಂದ ವಿಷಾಣತ್ವವು ಪ್ರತೀತವಾದರೂ, ಸ್ಮೃತಿಯನ್ನು ಹುಟ್ಟಿಸತಕ್ಕ ಸಂಸ್ಕಾರವಿಲ್ಲದಿರುವುದರಿಂದ ತಿಳಿಯುವ ಬಯಕೆ ಹುಟ್ಟಲಾರದು.  ಆದ್ದರಿಂದ ಸಂಶಯವೂ ಕೂಡಲಾರದು.  ಹೀಗೆಯೇ ಪ್ರಕೃತದಲ್ಲಿ ಅನಿರ್ವಚನೀಯತ್ವವೇ ಅಪ್ರಸಿದ್ಧವಾದ್ದರಿಂದ ಅನಿರ್ವಚನೀಯವೋ ಪಾರಮಾರ್ಥಿಕವೋ ಎಂಬ ಸಂಶಯವೇ ಹುಟ್ಟಲಾರದು. | 
(ಪೂರ್ವೋಕ್ತ ಪ್ರಶ್ನ ಸಂಶಯಾಯೋಗೇ ಅನುಮಾನ ಪ್ರಮಾಣ ಕಥನಂ)
ಟೀಕಾ – ಇದಮುಕ್ತಂ ಭವತಿ | ವಿಮತ: ಪ್ರಶ್ನೋ ನ ಯುಜ್ಯತೇ | ಅಸಂದಿಗ್ಧವಿಷಯತ್ವಾತ್ | ಶಶವಿಷಾಣಂ ಗೋವಿಷಾಣಂ ವ ಉಚ್ಯತ ಇತಿ ಪ್ರಶ್ನವತ್ | ವಿಮತ: ಸಂಶಯೋ ನ ಯುಜ್ಯತೇ | ಅನುಪಲಬ್ಧ ಆರೋಪ್ಯಮಾಣ ಕೋಟಿತ್ವಾತ್ | ಉಕ್ತ ಸಂಶವದಿತಿ |
ವಿಮತ ಪ್ರಶ್ನೆ ಅಂದರೆ ವಿವಾದಕ್ಕೆ ವಿಷಯವಾದ ಪ್ರಶ್ನೆಯು ಕೂಡುವುದಿಲ್ಲ.  ಸಂಶಯಗ್ರಸ್ತವಾದ ವಿಷಯತ್ವವಿಲ್ಲದಿರುವುದರಿಂದ ಮೊಲದ ಕೊಂಬೋ ಅಥವಾ ಗೋವಿನ ಕೊಂಬೋ ಎಂಬಂತೆ.  ಏಕೆಂದರೆ ಶಶಶೃಂಗವು ಎಲ್ಲೆಲ್ಲಿಯೂ ಇಲ್ಲ.  ಎರಡೂ ಪದಾರ್ಥಗಳು ಎಲ್ಲಾದರೂ ಪ್ರಸಿದ್ಧಗಳಾಗಿದ್ದರೆ ಸಂಶಯವು ಕೂಡಬಹುದು.  ಗೋವಿನ ಕೊಂಬು ಎಂಬ ವಸ್ತುವಿದ್ದರೂ ಮೊಲಕ್ಕೆ ಕೊಂಬೇ ಇರುವುದಿಲ್ಲವಾದ್ದರಿಂದ, ಗೋಶೃಂಗವೋ ಶಶಶೃಂಗವೋ ಎಂಬ ಪ್ರಶ್ನೆಯೇ ಅಸಂಗತ.  ಅದೇ ರೀತಿ ಪಾರಮಾರ್ಥಿಕತ್ವಕ್ಕೆ ಪ್ರಸಿದ್ದಿಯಿದ್ದರೂ ಅನಿರ್ವಚನೀಯತ್ವಕ್ಕೆ ಎಲ್ಲಿಯೂ ಪ್ರಸಿದ್ಧತೆ ಇಲ್ಲದಿರುವುದರಿಂದ ಆ ಪ್ರಶ್ನೆಯೂ ಹೊಂದುವುದಿಲ್ಲ.  ಎಲ್ಲಿಯೂ ಅಪ್ರಸಿದ್ಧವಾದ ಆರೋಪಿತ ಕೋಟಿಯಿದ್ದುದರಿಂದ ಹಿಂದಿನ ಸಂಶಯದಂತೆ ಕೂಡುವುದಿಲ್ಲ. 
 (ಪೂರ್ವೋಕ್ತಮಾನೇ ಸಾಧ್ಯಪರಿಷ್ಕಾರ:)
ಟೀಕ – ನನು ಪ್ರಶ್ನ: ಸಂಶಯೋ ವಾ ನ ಯುಜ್ಯತ ಇತಿ ಕೋಽರ್ಥ: |ಯದಿ ನ ಉತ್ಪನ್ನ ಇತಿ ತದಾ ಪ್ರತ್ಯಕ್ಷಬಾಧ: | ಅಥ ಉತ್ಪನ್ನ: ಅಪಿ ಕಾರಣಶೂನ್ಯ ಇತಿ | ತದಾ ಅನುಮಾನ ಬಾಧ: | ಕಾರ್ಯತ್ವಾದೇವ ಕಾರಣಾನುಮಾನಾತ್ | ಅಠ ಅತತ್ಕಾರಣೋತ್ಪನ್ನ ಇತಿ | ತದಾ ವ್ಯಾಘಾತ: | ತದುತ್ಪಾದಕಸ್ಯೈವ ತತ್ಕಾರಣತ್ವಾತ್ | ಮೈವಂ | ಶಶವಿಷಾಣಾದಿ ಪ್ರಶ್ನಾದಿ ಅನುಪಪತ್ತೇ: ಅಪಿ ಏವಂ ಪ್ರತ್ಯಾಖ್ಯಾನ ಪ್ರಸಂಗಾತ್ | ಕಾರಣಾದಿ ವಿಮರ್ಶವತ: ನ ಶಶವಿಷಾಣಾದಿ ಪ್ರಶ್ನಾದಿ ಅನುಪಪತ್ತೇ ಇತ್ಯೇವಂ ಪ್ರತ್ಯಾಖ್ಯಾನ ಪ್ರಸಂಗಾತ್ | ಕಾರಣಾದಿ ವಿಮರ್ಶವತೋ ನ ಶಶ ವಿಷಾಣಾದಿ, ಪ್ರಶ್ನಾದಿ ಉತ್ಪತ್ತುಂ ಅರ್ಹತೀ ಇತ್ ತತ್ರರ್ಥ ಇತಿ ಚೇತ್ | ತರ್ಹಿ ಅತ್ರಾಪಿ ಕಾರಣ ವಿಪರ್ಯಾಸಾದ್ ಉತ್ಪಧ್ಯತಾಂ ನಾಮ | ನ ಪುನ: ಪ್ರೇಕ್ಷಾವತಾಂ ಉತ್ಪಧ್ಯತ ಇತಿ ಪ್ರತಿಜ್ಞಾರ್ಥೋಪಪತ್ತೇ: | ಜ್ಞಾನಜನ್ಯೇಷು ಕಾರ್ಯೇಷು ಕಾರಣ ವಿಪರ್ಯಾಸಾದಪಿ ಭಯಾದಾವಿವ ಜನ್ಮೋಪಪತ್ತೇರಿತಿ |
ಶಂಕೆ –  ಪ್ರಶ್ನೆಯಾಗಲೀ ಸಂಶಯವಾಗಲೀ ಕೂಡುವುದಿಲ್ಲವೆಂದರೆ ಏನು ಅರ್ಥ? ಉತ್ಪತ್ತಿಯೇ ಇಲ್ಲವೆಂದರೆ ಪ್ರತ್ಯಕ್ಷ ಬಾಧವಾಗಲಿದೆ.  ಉತ್ಪತ್ತಿ ಇದ್ದರೂ ಕಾರಣವಿಲ್ಲದೆ ಉತ್ಪತ್ತಿ ಎಂದರೆ ಕಾರ್ಯತ್ವವಿರುವುದರಿಂದಲೇ ಕಾರಣಾನುಮಾನವಾಗಿ ಅನುಮಾನ ಭಾದವಾಗಲಿದೆ.  ಸಂಶಯಕ್ಕೆ ಯಾವುದು ಕಾರಣವೋ ಅದನ್ನು ಬಿಟ್ಟು ಬೇರೆಯಿಂದ ಉತ್ಪತ್ತಿಯೆಂದರೆ ವ್ಯಾಘಾತ ದೋಷವಾಗಲಿದೆ.  ಈರೀತಿ ಸಂಶಯ ಪ್ರಶ್ನೆಗಳು ಕೂಡುವುದಿಲ್ಲವೆಂದೆ ದ್ವೈತಿಗಳು ಹೇಳಲಾಗುವುದಿಲ್ಲ ಎಂದು ಅದ್ವೈತಿಗಳು ಶಂಕಿಸಬಾರದು.
ಉತ್ತರಶಶವಿಷಾಣಾದಿ ಪ್ರಶ್ನೆ ಕೂಡುವುದಿಲ್ಲ ಎಂಬುವುದಕ್ಕೂ ಇದೇ ರೀತಿ ಪ್ರತ್ಯಕ್ಷಭಾದ ಪ್ರಸಂಗವಾಗಲಿದೆ.  ಮೊಲದ ಕೊಂಬು (ಶಶವಿಷಾಣ)  ಅಪ್ರಸಿದ್ಧ ಆಗಿರುವುದರಿಂದ ಪ್ರಶ್ನೆಯೇ ಉತ್ಪತ್ತಿಯಾಗುವುದಿಲ್ಲ ಎಂದು ಅರ್ಥ.   ಹಾಗಾದರೆ ಮೊಲದ ಕೋಡು ಅಪ್ರಸಿದ್ಧವಾಗಿರುವುದರಿಂದ ಕಾರಣಾದಿಗಳನ್ನು ವಿಚಾರ ಮಾಡಿದವರಿಗೆ ‘ಶಶಶೃಂಗವೋ ಗೋಶೃಂಗವೋಎಂಬೀ ಪ್ರಶ್ನೇಯೇ ಹುಟ್ಟಲಾರದು’ ಎಂದರ್ಥ.   ಆದ್ದರಿಂದ ಇಲ್ಲಿಯೂ ಕೂಡ ಕಾರಣ ವಿಪರ್ಯಾಸದಿಂದ ಅನಿರ್ವಚನೀಯವು ಉಂಟೆಂದು ಭ್ರಮೆಯುಳ್ಳವನಿಗೆ ;ವಿಮತೋ ಭಿನ್ನ:’ ಎನ್ನಲ್ಲಿದ ಭೇದವೂ ಅನಿರ್ವಚನೀಯವೋ ಪಾರಮಾರ್ಥಿಕವೋ ಎಂಬ ಸಂಶಯ ಹುಟ್ಟಲಿ, ಇದು ವಿಚಾರವಂತರಿಗೆ ಮಾತ್ರವಲ್ಲದೆ, ಪ್ರತಿಜ್ಞಾರ್ಥವೂ ಉಪಪನ್ನವಾಗುವುದು.   ಹೀಗೆ ಈ ಪ್ರಶ್ನೆಯು ಯಥಾರ್ಥ ಜ್ಞಾನ ಮೂಲಕವಲ್ಲ, ಭ್ರಾಂತಿ ಮೂಲಕವೇ ಆಗಿರುತ್ತದೆ.  ಭ್ರಾಂತಿ ಮೂಲಕಗಳಾದ ವಿಕಲ್ಪ ದೋಷಗಳು ನಮ್ಮ ಅನುಮಾನವನ್ನು ಹಾಳುಮಾಡಲಾರವು.  (ಅನಿರ್ವಚನೀಯೇ ಪ್ರಮಾಣ ಅಭಾವೋಕ್ತಿ:) (ಅನಿರ್ವಚನೀಯಕ್ಕೆ ಪ್ರಮಾಣ ಅಭಾವ ವಿಷಯ)
ಕಥಂ ಅನಿರ್ವಚನೀಯಸ್ಯ ಸರ್ವತ್ರ ಅಪ್ರಸಿದ್ಧತ್ವಾಂ ಇತ್ಯತ ಆಹ ಹೇಗೆ ಅನಿರ್ವಚನೀಯವು ಸರ್ವತ್ರ ಅಪ್ರಸಿದ್ದವೆಂದರೆ ಆಚಾರ್ಯರು ಹೇಳುತ್ತಾರೆ –

ಮೂಲ – ನ ಚ ಅನಿರ್ವಚನೀಯೇ ಕಿಂಚಿನ್ಮಾನಂ |

ಚ = ಯಸ್ಮಾತ್ = ಯಾವ ಕಾರಣದಿಂದ ಅನಿರ್ವಚನೀಯೇ – ಅನಿರ್ವಚನೀಯ ವಿಷಯದಲ್ಲಿ, ಕಿಂಚಿನ್ ಮಾನಂ – ಯಾವುದೊಂದು ಪ್ರಮಾಣವೂ – ಇಲ್ಲ. 
ಅಂದರೆ ಅನಿರ್ವಚನೀಯವು ಪ್ರಸಿದ್ಧವೇ ಅಲ್ಲ.
ಟೀಕಾ – ಚ ಶಬ್ದೋ ಯಸ್ಮಾದಿತ್ಯರ್ಥೇ | (ಪ್ರಮಾಣಾಭಾವೇ ಅನಿರ್ವಚನೀಯಜ್ಞಾನ ಸಾಮಾನ್ಯ ಅಭಾವ ಸಮರ್ಥನಂ) ನನು ಪ್ರಮಿತಿ: ಪ್ರಮಾಣಂ ಅಪೇಕ್ಷತೇ ನ ಪ್ರಸಿದ್ಧಿಮಾತ್ರಂ | ನ ಚ ಸಂಶಯಸ್ಯ ಪ್ರಮಿತಿ ಸಾಪೇಕ್ಷತಾ | ಪ್ರತೀತಿ ಮಾತ್ರ್‍ಏಣಾಪಿ ಸ್ಮರಣೋಪಪತ್ಯಾ ಸಂಶಯೋಪಪತ್ತೇ: | ಯಥಾ ಖಲು ವಿಪ್ರಲಂಭಕ ವಾಕ್ಯಾತ್ ಶಶವಿಷಾಣ ಸದ್ಭಾವಂ ಮನ್ಯಮಾನಸ್ಯ ವಿಷಾಣಂ ಇತ್ಯುಕ್ತೇ ಭವತಿ ಸಂದೇಹ: | ಅತೋ ಅನಿರ್ವಚನೀಯ ಪ್ರಸಿದ್ದಿ ಅಭಾವ ಉಪಪಾದನಾಯ ತತ್ಕಾರಣಾಭಾವೇ ವಕ್ತವ್ಯೇ ಕಥಂ ಪಮಿತಿ ಕಾರಣಾಭಾವಾಭಿಧಾನಮಿತಿ | ಸತ್ಯಂ | ಪ್ರತೀತಿರೇವ ಸಂದೇಹೋಪಯೋಗಿನೀತಿ ವಸ್ತುಗತಿ: | ತಥಾಪಿ ಪ್ರಮಾಣವಿಷಯತಯೋಪಕ್ಷಿಪ್ತೇ ಭೇದೇ ಅನಿರ್ವಚನೀಯೋ ವೇತ್ಯಾದಿ ಸಂದಿಹಾನೇನ ಪ್ರತಿವಾದಿನಾ ಆತ್ಮನ: ಅನಿರ್ವಚನೀಯಾದಿ ವಿಷಯಾ ಪ್ರಮಿತಿರೇವ ಸಂದೇಹ ಕಾರಣತಯಾ ವಕ್ತವ್ಯಾ | ತತ್ಪ್ರತೀತೇ: ಅಪ್ರಮಾತ್ವಂಗೀಕಾರೇ ಸ್ವಯಮೇವ ವಿಲೀನಂ ಸಂಶಯೇನ | ಅತ: ಪ್ರಮಾಣಾಭಾವೇನ ಪ್ರಮಾಭಾವೇ ಸಾಧಿತೇ ಅಪ್ರಮಾಯಾಶ್ಚ ಸ್ವಯಮೇವ ಅನಂಗೀಕಾರೇ ಪ್ರತೀತ್ಯಭಾವ ಏವ ಸಾಧಿತ: ಭವತೀತಿ ನ ಕಶ್ಚಿದ್ದೋಷ: |
ಪರರ ಶಂಕೆಪ್ರಮಿತಿ ಅಂದರೆ ಯಥಾರ್ಥ ಜ್ಞಾನಕ್ಕೆ ಮಾತ್ರ ಪ್ರಮಾಣ ಅಪೇಕ್ಷೆ ಇರುತ್ತದೆ, ಪ್ರಸಿದ್ದಿ ಮಾತ್ರಕ್ಕೆ ಪ್ರಮಾಣ ಅಪೇಕ್ಷಿಯಿಲ್ಲ.  ಸಂಶಯಕ್ಕೆ ಪ್ರಮಿತಿ ಅಪೇಕ್ಷೆಯಿರುವುದಿಲ್ಲ.  ಕಾರಣ ಪ್ರಮಾಣವಿಲ್ಲದಿರುವುದರಿಂದ ಪ್ರತೀತಿಯಿಲ್ಲವೆಂದು ಸಾಧಿಸತಕ್ಕದ್ದಲ್ಲ.  ಪ್ರಮಾಣರಹಿತವಾಗಿದ್ದಾಗ್ಯೂ ಪ್ರತೀತಿ ಕೂಡಬಹುದು.  ವಿಪ್ರಲಂಬಕನ ವಾಕ್ಯದಿಂದ ಶಶವಿಷಾಣವುಂಟೆಂದು ನಂಬಿದವನಿಗೆ, “ಕೋಡು (ವಿಷಾಣ) ಇದೆ” ಎನ್ನಲು ಶಶಶೃಂಗವೋ ಗೋಶೃಂಗವೋ ಎಂಬ ಸಂಶಯವು ಹುಟ್ಟುತ್ತದೆ.  ಕಾರಣ ಅನಿರ್ವಚನೀಯವು ಪ್ರಸಿದ್ಧವಲ್ಲವೆಂದು ಉಪಪಾದಿಸಲಿಕ್ಕೆ ಪ್ರಸಿದ್ಧಿಗೆ ಕಾರಣವಿಲ್ಲವೆಂದು ಹೇಳಬೇಕಾಗಿದ್ದಿತು.  ಅದನ್ನು ಬಿಟ್ಟು ಪ್ರಮಿತಿಗೆ ಕಾರಣವಿಲ್ಲವೆಂದು ಹೇಗೆ ಹೇಳಿರುವುದು ಅಸಂಗತವು ಎಂದು ಶಂಕಿಸಿದರೆ, ಉತ್ತರ ಸಂಶಯಕ್ಕೆ ಉಪಯುಕ್ತವಾದುದು ಪ್ರತೀತಿಯೆನ್ನುವುದು ನಿಜವೇ.  ಆದರೂ ‘ವಿಮತೋ ಭಿನ್ನ:” ಎಂಬಲ್ಲಿ ಭೇದವನ್ನು ಪ್ರಮಾಣ ವಿಷಯವಾಗಿ ಪ್ರತಿಜ್ಞೆ ಮಾಡಿರುವುದರಿಂದ ಪ್ರತಿವಾದಿಗಳಾದ ಅದ್ವೈತಿಗಳಿಗೆ ಸಂಶಯ ಕಾರಣವಾದುದು ಅನಿವಚನೀಯಾದಿ ವಿಷಯಕ ಪ್ರಮಿತಿಯೆಂದೇ ಹೇಳಬೇಕು.  ಅನಿರ್ವಚನೀಯಾದಿ ವಿಷಯಕ ಪ್ರತೀತಿಯು ಆಯತಾರ್ಥವೆಂದು ಅಂಗೀಕರಿಸಿದರೆ ಅನಿರ್ವಚನೀಯವೆಂಬರ್ಥವೇ ಇಲ್ಲದಿರುವುದರಿಂಅ ಸಂಶಯವೇ ಕೂಡಲಾರದು.  ಪ್ರಮಾಣ ಭಾದವಿರುವುದರಿಂದ ಅನಿರ್ವಚನೀಯಕ್ಕೆ ಪ್ರಮಿತಿಯಿಲ್ಲವೆಂದು ಸಾಧಿಸಿದರೆ ಭ್ರಮೆಯನ್ನು ಅಂಗೀಕರಿಸದಿರುವುದರಿಂದ ಪ್ರತೀತಿಯೆಲ್ಲವೆಂದೇ ಸಾಧಿಸಿದಂತೆ ಆಗುವುದು.  ಯಾವುದೇ ದೋಷವಿಲ್ಲವು.  
(ಅನಿರ್ವಚನೀಯಸ್ಯ ಪ್ರತ್ಯಕ್ಷ ಸಿದ್ಧತ್ವ ಶಂಕಾ, ಮಿತ್ಯಾ ಶಬ್ದ ವಾಚ್ಯತ್ವ ಶಂಕಾ ಚ)
ಟೀಕಾ – ಕಥಂ ಅನಿರ್ವಚನೀಯಾರ್ಥೇ ಪ್ರಮಾಣಾಭಾವ: | ಯಾವತಾ ಪ್ರತ್ಯಕ್ಷಂ ಶುಕ್ತಿ ರಜತಾದೇ: ಅನಿರ್ವಚನೀಯತಾಂ ಆವೇದಯದಸ್ತಿ | ಬಾಧಕ ಜ್ಞಾನಸಮನಂತರಂ ಮಿಥ್ಯೈವ ರಜತಂ ಪ್ರತ್ಯಭಾದಿತ್ಯನುವಾದಾತ್ | ಯಾವದುಕ್ತಂ ಭವತ್ಯನಿರ್ವಚನೀಯಮಿತಿ ತಾವದುಕ್ತಂ ಮಿಥ್ಯೇತಿ | ನ ಚ ಅಪ್ರತೀತಮಾಪ್ತೇನಾನೂಧ್ಯತೇ | ನ ಚ ಬಾಧಕ ಪ್ರತ್ಯಯೋ ಭ್ರಾಂತಿ: | ನಾಪಿ ಲಿಂಗಾದಿ ಜನ್ಯ ಇತಿ |
ಶಂಕೆ – ಹೇಗೆ ಅನಿರ್ವಚನೀಯಾರ್ಥದಲ್ಲಿ ಪ್ರಮಾಣ ಅಭಾವವಿದೆ? ಏಕೆಂದರೆ ಶುಕ್ತಿ ರಜತ, ರಜ್ಜು ಸರ್ಪ, ಇತ್ಯಾದಿಗಳು ಅನಿರ್ವಚನೀಯಗಳೆಂದು ಪ್ರತ್ಯಕ್ಷ ಪ್ರಮಾಣವೇ ತಿಳಿಸುತ್ತದೆ.  ಭಾದಕ ಜ್ಞಾನ ಹುಟ್ಟಿದ ನಂತರ ಮಿಥ್ಯವಾದ ರಜತವೇ ನನಗೆ ಹಿಂದೆ ತೋರಿತು ಎಂದನುವಾದ ಮಾಡುವುದರಿಂದ ಪ್ರತ್ಯಕ್ಷವಿದೆಯೆಂದು ಸಿದ್ಧವಾಯಿತು.  ಅಪ್ರತೀತವಾದುದನ್ನು ಆಪ್ತನು ಒಪ್ಪುವುದಿಲ್ಲ. ರೀತ್ಯಂತರದಿಂದ ತಿಳಿದುದನ್ನು ಚೆನ್ನಾಗಿ ತಿಳಿಯುವುದೇ ಬಾಧಕ ಪ್ರತ್ಯಯವಾದ್ದರಿಂದ ಅದನ್ನು ಭ್ರಾಂತಿಯೆಂದು ಹೇಳಕೂಡದು.   ಹೇತ್ವಾದಿಗಳ ಅನುಸಂಧಾನವಿಲ್ಲದಿದ್ದರೂ ಬಾಧಕ ಪ್ರತ್ಯಯವು ಹುಟ್ಟುವುದರಿಂದ ಲಿಂಗಾದಿಗಳಿಂದ ಹುಟ್ಟಿದ್ದಲ್ಲ.  (ಇವೆಲ್ಲವೂ ಪರರ ಶಂಕೆ)
(ಪೂರ್ವೋಕ್ತ ಶಂಕಾದ್ವಯನಿರಾಸ:)  (ಹಿಂದೆ ಹೇಳಿದ ಶಂಕಾ ನಿರಾಸ)
ಅತ್ರೇದಂ ವಕ್ತವ್ಯಂ | ಕಿಂ ಮಿಥ್ಯಾಶಬ್ದೋಽನಿರ್ವಚನೀಯಸ್ಯ ವಾಚಕ ಇತಿ ಕೃತ್ವಾ ಭ್ರಾಂತಿ ಉತ್ಥಿತಸ್ಯ ತತ್ಪ್ರಯೋಗ ದರ್ಶನಾದ್ ಅನಿರ್ವಚನೀಯವಿಷಯ: ಪ್ರತ್ಯಯೋ ಅನುಮೀಯತೇ | ಉತ ಅವಾಚಕೇನಾಪಿ ತೇನ ಭ್ರಾಂತ್ಯುತ್ಥಿತೋ ಅನಿರ್ವಚನೀಯಂ ವ್ಯವಹರತೀತಿ ಕೃತ್ವಾ | ಆದ್ಯಂ ನಿರಾಕರೋತಿ –
ಈಗ ಇದನ್ನು ಹೇಳುತ್ತೇವೆ –  ಮಿಥ್ಯಾ ಶಬ್ದವು ಅನಿರ್ವಚನೀಯದ ರೂಪಾರ್ಥವನ್ನು ಮುಖ್ಯವೃತ್ತಿಯಿಂದ ಹೇಳುತ್ತದೆ ಎಂದು ಇಟ್ಟುಕೊಂಡು ಶುಕ್ತಿ ರಜತ ಜ್ಞಾನವು ಭ್ರಮೆಯಿಂದ ನಿಶ್ಚಯವಿದ್ದವನು ಅನಿರ್ವಚನೀಯ ವಿಷಯಕ ಪ್ರತ್ಯಕ್ಷವನ್ನು ಒಪ್ಪುತ್ತೀರೋ ಅಥವಾ ಭ್ರಮೆಯಿಂದ ನಿಶ್ಚಯವುಳ್ಳವನು ಅನಿರ್ವಚನೀಯವನ್ನು ವ್ಯವಹರಿಸುತ್ತಾನೆ ಎಂದು ಇಟ್ಟುಕೊಂಡು ಅನಿರ್ವಚನೀಯವನ್ನು ವ್ಯವಹರಿಸುತ್ತಾರೋ? ಹೀಗೆ ವಿಕಲ್ಪ ಮಾಡಿ ಮೊದಲನೆಯದನ್ನು ನಿರಾಕರಣ ಮಾಡುತ್ತಾರೆ –
ಮೂಲ – ಮಿಥ್ಯಾ ಶಬ್ದೋ ಅನಿರ್ವಚನೀಯಂ ವದತೀ ಇತ್ಯತ್ರ ಚ |
ನ ಕಿಂಚಿನ್ಮಾನಂ ಇತ್ಯಸ್ಯಾ ಅನುಕರ್ಷಣಾರ್ಥಶ್ಚ ಚಕಾರ: |
ಮಿಥ್ಯಾಶಬ್ದ: ಮಿಥ್ಯೆ ಎಂಬ ಶಬ್ದವು. ಅನಿರ್ವಚನೀಯಂ – ಅನಿರ್ವಚನೀಯವೆಂಬ ಅರ್ಥವನ್ನು ವದತಿ – ಹೇಳುತ್ತದೆ ಇತ್ಯತ್ರ ಚ – ಈ ವಿಷಯದಲ್ಲಿಯೂ ನ ಕಿಂಚಿನ್ಮಾನಂ – ಯಾವುದೇ ಪ್ರಮಾಣವಿಲ್ಲ
(ಮಿಥ್ಯಾ ಶಬ್ದಸ್ಯ ಅಸದ್ವಾಚಿತ್ವ ಸಮರ್ಥನಂ) ನನು ವ್ಯಾಕರಣಾಭಿಧಾನಾದಿ ಪ್ರಮಾಣಾಭಾವಾತ್ ವಾದಿಸಮಯ ಮಾತ್ರಸ್ಯ ಅತಿಪ್ರಸಂಗೇನ ಅನಿಶ್ಚಾಯಕತ್ವಾತ್ ಅನಿರ್ವಚನೀಯಸ್ಯ ಯದಿ ನ ಮಿಥ್ಯಾ ಶಬ್ದೋ ವಾಚಕಸ್ತರ್ಹಿ ತದ್ವಾಚ್ಯಂ ವಾಚ್ಯಂ | ಸತ್ಯಂ | ಅಸದಿತಿ ಬ್ರೂಮ: | ಏವಂ ತರ್ಹಿ ನಿರರ್ಥಕಂ ಇತಿ ಪ್ರಾಪ್ರಂ | ನ ಹಿ ಅಸದಸ್ತೀತಿ ಸಂಭವತಿ | ವ್ಯಾಘಾತಾತ್ | ನಿರರ್ಥಕತ್ವೇ ಚ ಪದತ್ವ ವ್ಯಾಘಾತ ಇತಿ ಚೇತ್ ಮೈವಂ | ಅತ್ಯಂತಾಭಾವ ಪ್ರತಿಯೋಗಿತ್ವ ಲಕ್ಷಣಸ್ಯ ಅಸತ್ವಸ್ಯ ವಿಧ್ಯಮಾನತ್ವಾತ್ | ನ ಹಿ ಮಿಥ್ಯೇತ್ಯಸ್ಯ ಶಶವಿಷಾಣಾದಿಕಂ ಅರ್ಥ: | ತಥಾ ಸತಿ ಶಶವಿಷಾಣಂ ಮಿಥ್ಯೇತಿ ನ ಸ್ಯಾತ್ | ಕಿನ್ನಾಂಅ ತನ್ನಾಸ್ತೀತಿ | ತಥಾ ಚ ಮಿಥ್ಯೈವ ರಜತಮಿತ್ಯಸ್ಯ ನಾಸ್ತಿ ರಜತಂ ರಜತಾತ್ಯಂತಾಭಾವೇ ಅಸ್ತೀತ್ಯರ್ಥ: | ಸ್ವಯಮಸತ: ಕಥಂ ಪ್ರತಿಯೋಗಿತ್ವಮಿತಿ ಚೇತ್ | ಕಿಮಿಹ ಕಥಂ | ನ ಹಿ ಪ್ರತಿಯೋಗಿತ್ವಂ ರೂಪಾದಿವತ್ ಧರ್ಮಿಸತ್ತಾಸಾಪೇಕ್ಷಂ | ಅಭಾವಜ್ಞಾನೋಪಯೋಗಿ ಜ್ಞಾನವಿಷಯತಾಂ ಅತ್ರಸ್ಯ ಪ್ರತಿಯೋಗಿತ್ವಾತ್ | ಅಸತ: ಅಪಿ ಪ್ರತೀತಿಂ ಉಪಪಾದಯಿಷ್ಯಾಮ:
ಶಂಕೆ – ವ್ಯಾಕರಣಾದಿ (ವ್ಯಾಕರಣ, ಉಪಮಾನ, ಕೋಶ, ಆಪ್ತವಾಕ್ಯ, ವ್ಯವಹಾರ, ಶಿಷ್ಟವಾಕ್ಯ, ವಿವರಣ, ಸಿದ್ಧಪದ ಸಾನಿದ್ಧ್ಯ,) ಇವುಗಳಿಂದ ಪ್ರಮಾಣ ಭಾದ ಇರುವುದರಿಂದ (ಯಾವುದೇ ಪ್ರಮಾಣವಿಲ್ಲದಿರುವುದರಿಂದ) ವಾದಿಗಳು ಅತಿಪ್ರಸಂಗದಿಂದ ನಿಶ್ಚಯಿಸಿ, ಅನಿರ್ವಚನೀಯ ಅರ್ಥವನ್ನು ಮಿಥ್ಯಾ ಶಬ್ದವು ಹೇಳುವುದಿಲ್ಲವಾದರೆ, ಅದು ಯಾವ ಅರ್ಥವನ್ನು ಹೇಳುತ್ತದೆ? ಎಂದು ಆಕ್ಷೇಪಿಸಿದರೆ ದ್ವೈತಿಗಳು ಅಸದ್ ರೂಪವಾದ ಅರ್ಥವನ್ನು ಪ್ರತಿಪಾದಿಸುತ್ತವೇ ಎಂದು ಉತ್ತರಿಸಿದರು.  ಆಗ ಪರರು ಹೇಳುತ್ತಾರೆ – ಹಾಗಾದರೆ ‘ಮಿಥ್ಯಾ’ ಶಬ್ದಕ್ಕೆ ಅಸತ್ ಅಂದರೆ ಅರ್ಥ ನಿರ್ಥಕವೆಂದೇ ಆಯಿತು.   ಅಸತ್ – ಇಲ್ಲದಿರುವುದೆಂದು ಅಂಗೀಕರಿಸಿ ಪುನ: ಅಸ್ತಿ – ಮತ್ತೆ ಇದೆ ಎಂದರೆ ತನ್ನ ಮಾತುಗಳಿಗೇ ಪರಸ್ಪರ ವಿರುದ್ಧಗಳಾಗುವುದರಿಂದ “ಅಸತ್ ಅಸ್ತಿ” ಎಂಬ ಪ್ರತೀತಿ ಕೂಡುವುದಿಲ್ಲ.   ನಿರರ್ಥಕತ್ವದಲ್ಲಿ ಪದವೇ ವ್ಯಾಘಾತವಾಗುವುದು ಅಂದಾಗ ಉತ್ತರ – ಅತ್ಯಂತಾಭಾವ ಪ್ರತಿಯೋಗಿತ್ವ ರೂಪವಾದ ಅಸತ್ವವಿದೆ.   ‘ಮಿಥ್ಯಾ’ ಶಬ್ದಕ್ಕೆ ಶಶವಿಷಾಣವೆಂದರ್ಥ ಎಂದು ಹೇಳಲು ಅಸಾಧ್ಯ.  ಹಾಗೆಂದರೆ ‘ಶಶವಿಷಾಣಂ ಮಿಥ್ಯಾ’ ಎಂಬ ಪ್ರಯೋಗವೇ ಕೂಡುವುದಿಲ್ಲ.  ಅಂದರೆ ಶಶವಿಷಾಣ ಇಲ್ಲವೆಂದರ್ಥ.  ಅದೇರೀತಿ ಮಿಥ್ಯೈವ ರಜತಂ ಎಂಬುವುದಕ್ಕೆ ರಜತವಿಲ್ಲವೇ ಇಲ್ಲ ಎಂದರ್ಥ.   ಅಂದರೆ  ಯಾವುದರ ಅತ್ಯಂತಾಭಾವವನ್ನು ಹೇಳುತ್ತೇವೋ ಅದು ಪ್ರತಿಯೋಗಿಯು.    ಸ್ವಯಂ ಅಸತ್ ಆದುದರಲ್ಲಿ ಪ್ರತಿಯೋಗಿತ್ವ ರೂಪ ಧರ್ಮ ಹೇಗೆ ಬರುವುದು? ಎಂದು ಶಂಕಿಸಿದರೆ, ರೂಪಾದಿ ಗುಣಗಳು ಧರ್ಮಿಗಳು ಇಲ್ಲದೆ ಇರಲಾರವು.  ಪ್ರತಿಯೋಗಿತ್ವವು ಅದನ್ನು ಮಾಡುವ ಮೊದಲು ಪ್ರಾಗಭಾವ ಪ್ರತಿಯೋಗಿತ್ವವಿದೆ (ಉದಾ – ಒಂದು ಕುರ್ಚಿಯನ್ನು ಮಾಡುವ ಮೊದಲು ಕುರ್ಜಿಗೆ ಪ್ರಾಗಭಾವವಿತ್ತು).  ಅಭಾವ ಜ್ಞಾನಕ್ಕೆ ಕಾರಣವಾದ ಜ್ಞಾನ ವಿಷಯತ್ವ ವಿಶೇಷಕ್ಕೇನೆ ಪ್ರತಿಯೋಗಿತ್ವವೆಂದು ಹೇಳಬೇಕು.  ಪ್ರತಿಯೋಗಿತ್ವವು ಧರ್ಮಸತ್ವವನ್ನು ಅಪೇಕ್ಷಿಸಲಾರದು ಎಂದುತ್ತರಿಸಿದರು.
(ಶ್ರುತಿ ಪುರಾಣಾದಿ ಗತ ಅನಿರ್ವಚ್ಯಾದಿ ಶಬ್ದಾನಾಂ ಅನಿರ್ವಾಚ್ಯಬೋಧಕತ್ವಾಭಾವಸ್ಯ ಸ್ಮೃತ್ಯಾ ಸಮರ್ಥನಂ)
ಟೀಕಾ – ನನು ಶ್ರುತಿ ಪುರಾಣಾದಿಷು ಪ್ರಪಂಚಸ್ಯಾ ಅನಿರ್ವಚನೀಯತ್ವಂ ಉಚ್ಯತೇ | ಅಚಿಂತ್ಯತ್ವಂ ಅತರ್ವ್ಯಕ್ತಂ ಅಜ್ಞೇಯತ್ವಂಚ | ನ ಚ ತತ್ರ ಚಿಂತಾದಿ ವಿಷಯತ್ವಂ ಏವಾರ್ಥ: | ತಥಾ ಸತಿ ಪ್ರಮಾಣಾನಾಂ ನಿರ್ವಿಷಯತ್ವ ಅಪತ್ತೇ: | ಅತಸ್ಸದಾದಿ ಪ್ರಕಾರೈ: ಅಚಿಂತ್ಯತ್ವಾದ್ಯೇವ ತದರ್ಥ: | ಕಿಂ ಚ ಪ್ರಪಂಚೋ ಅನೃತೋ ಅಸನ್ನ ಸತ್ಯ ಇತ್ಯಪಿ ಸಂತಿ ವಾಕ್ಯಾನಿ | ನ ಚ ಅಸತ್ವಮೇವ ತದರ್ಥ: | ತಥಾತ್ವೇ ಪ್ರತೀತಿ ವಿರೋಧಾತ್ | ಅತಸ್ತ ಅನ್ಯನಿರ್ವಚನೀಯ ವಚನಾನಿ | ತತ್ಕಥಂ ಅನಿರ್ವಚನೀಯಂ ನಾಽಗಮೀ ವಕ್ತೀತಿ ದ್ವಿತೀಯ ಪಕ್ಷ ನಿರಾಸಾಯ ತದ್ವಚನಾರ್ಥಂ ಸೋಪಪತ್ತಿಕಯಾ ಸ್ಮೃತ್ಯೈವ ದರ್ಶಯತಿ –
ಶಂಕ – ಶೃತಿ ಪುರಣಾದಿಗಳಲ್ಲಿ ಜಗತ್ತು ಅನಿರ್ವಚನೀಯವೆಂದೂ, ಅಚಿಂತ್ಯವೆಂದೂ, ಅತರ್ಕ್ಯವೆಂದೂ, ಅಜ್ಞೇಯವೆಂದೂ ಹೇಳಲ್ಪಡುತ್ತದೆ.  ಆ ವಾಕ್ಯಗಳಿಗೆ ವಿಚಾರಾದಿಗಳಿಗೆ ಅವಿಷಯವಾದುದು ಎಂದು ಅರ್ಥವನ್ನು ಹೇಳಲಾಗದು.  ಹಾಗೆ ಹೇಳಿದರೆ ಪ್ರಮಾಣಗಳು ನಿರ್ವಿಷಯಕಗಳಾಗಬೇಕಾಗುವುದು.  ಆದ್ದರಿಂದ ಆ ವಾಕ್ಯಗಳಿಗೆ ಜಗತ್ತು, ಸತ್ವ, ಅಸತ್ವ ಮೊದಲಾದ ಪ್ರಕಾರಗಳಿಂದ ವಿಚಾರಾದಿಗಳಿಗೆ ಅವಿಷಯವಾಗಿದೆ ಎಂದೇ ಅರ್ಥೈಸಬೇಕು.  ಮತ್ತು ಜಗತ್ತು ಅನೃತವು (ಯಥಾರ್ಥವಲ್ಲದಿರುವುದು), ಅಸತ್ತು (ಸತ್ ಅಲ್ಲದಿರುವುದು), ಅಸತ್ಯವು,  ಹೀಗೂ ವಾಕ್ಯಗಳಿವೆ.  ಅಸತ್ವವೇ ಆ ವಾಕ್ಯಗಳಿಗೆ ಅರ್ಥವೆನ್ನಲಾಗದು.  ಏಕೆಂದರೆ ಅಸತ್ತು (ಮೊಲದ ಕೋಂಬಿನಂತೆ ಸರ್ವಥಾ ಇಲ್ಲದ್ದು) ಆಗಿದ್ದರೆ ತೋರದೇ ಹೋಗಬೇಕಿದ್ದಿತು.  ಆದ್ದರಿಂದ ಆ ವಾಕ್ಯಗಳು ಪ್ರಪಂಚವು ಅನಿರ್ವಚನೀಯವೆಂದೇ ಪ್ರತಿಪಾದಿಸುತ್ತವೆ.  ಆದ್ದರಿಂದ ಹೇಗೆ ‘ಅನಿರ್ವಚನೀಯಂನಾಗಮೋ ವಕ್ತಿ’ ಹೇಳುತ್ತೀರಿ.    ಈ ಶಂಕೆಯನ್ನು ಸ್ಮೃತಿಯಿಂದಲೇ ಪ್ರತಿಪಾದಿಸುತ್ತಾರೆ – 

ಮೂಲ – ಅದ್ಭುತತ್ವಾತ್ ಅನಿರ್ವಾಚ್ಯಂ ಬ್ರಹ್ಮ ಚಿಚ್ಚೇತ್ಯಮೇವ ಚ |

ಬ್ರಹ್ಮ – ಪರಬ್ರಹ್ಮನು, ಚಿತ್ – ಚೇತನ ಸಮೂಹವು, ಚೇತ್ಯಂ ಚ – ದೃಶ್ಯವಾದ ಜಡವೂ ಕೂಡ ಅದ್ಭುತತ್ವಾದೇವ – ಅತ್ಯಾಶ್ಚರ್ಯವಾದ್ದರಿಂದಲೇ ಅನಿರ್ವಾಚ್ಯಂ – ಅನಿರ್ವಾಚ್ಯವೆನ್ನಿಸಿಕೊಳ್ಳುತ್ತದೆ.

ಟೀಕಾ – ಅದ್ಭುತತ್ವಾತ್ ಆಚರ್ಯತ್ವಾದೇವ ಚೇತ್ಯಂ ಅನಿರ್ವಾಚ್ಯಂ ಉಚ್ಯತೇ | ನ ತು ಸದಾದಿ ಪ್ರಕಾರೈ ನಿರ್ವಕ್ತುಂ ಅಶಕ್ಯತ್ವಾತ್ | ಕುತ: | ನ ಕೇವಲಂ ಚೇತ್ಯಂ ಅನಿರ್ವಾಚ್ಯಂ ಉಚ್ಯತೇ | ಕಿಂ ತು, ಬ್ರಹ್ಮ ತದಿತರ ಚೇತನಶ್ಚ | ನ ಚ ಬ್ರಹ್ಮಾದೇ ಅನಿರ್ವಾಚ್ಯತಾ ಅಂಗೀಕಾರಾರ್ಹಾ | ಅತಸ್ತತ್ರ ಯಥಾ ಅದ್ಭುತತ್ವಾದೇವ ಸಾ ವ್ಯಾಖ್ಯೇಯಾ ತಥಾ ಚೇತ್ಯಸ್ಯಾಪಿ | ಪ್ರಕರಣಾತ್ | ಪರರ ಶಂಕೆ – ಸತ್ವ , ಅಸತ್ವ, ಮೊದಲಾದ ಪ್ರಕಾರಗಳಿಂದ ನಿರ್ವಚನ ಮಾಡಲಿಕ್ಕೆ ಅಶಕ್ಯವಾದ್ದರಿಂದ ಅನಿರ್ವಾಚ್ಯವೆಂದಲ್ಲ.  ಅಪಸಿದ್ಧಾಂತ ಬರುವುದರಿಂದ ಬ್ರಹ್ಮಾದಿಗಳಿಗೆ ಅನಿರ್ವಾಚ್ಯತ್ವನ್ನು ಹೇಳಕೂಡದು.  ಆದ್ದರಿಂದ ಬ್ರಹ್ಮಾದಿಗಳಿಗೆ ಅನಿರ್ವಾಚ್ಯತ್ವ ಪ್ರತಿಪಾದಕವಾದ ಶ್ರುತಿಗೆ ಅತ್ಯಾಶ್ಚರ್ಯನಾದುದರಿಂದಲೇ ಅನಿರ್ವಾಚ್ಯನೆಂದು ಹೇಗೆ ಅರ್ಥಮಾಡಬೇಕೋ, ಹಾಗೇ ಚೇತ್ಯವೂ (ಜಡವೂ),ಈ ಪ್ರಕರಣದಲ್ಲಿಯೇ ಇರುವುದರಿಂದ ಇದೇ ರೀತಿ ಅಂದರೆ ಅತ್ಯಾಶ್ಚರ್ಯವಾದ ಪ್ರಯುಕ್ತವೇ ಅನಿರ್ವಾಚ್ಯವೆಂದು ಈ ಶ್ರುತಿ ಪುರಾಣಾದಿಗಳಲ್ಲಿ ಹೇಳಿದೆ ಎಂದೇ ಅರ್ಥೈಸಬೇಕು.
ಮೂಲ – ಅಚಿಂತ್ಯಂ ತತ ಏವೈತತ್…….     ………. ಅತರ್ಕ್ಯಾಜ್ಞೇಯಮೇವ ಚ |
       ಏತತ್ – ಈ ಬ್ರಹ್ಮನು, ಚೇತನವೂ, ಜಡವೂ ಕೂಡ ತತೈವ – ಅತ್ಯಾಶ್ಚರ್ಯವಾದ ಪ್ರಯುಕ್ತವೇ, ಅಚಿಂತ್ಯಂ – ಅಚಿಂತ್ಯವೆನ್ನಿಸುತ್ತದೆ.  ತತೈವ – ಅತ್ಯಾಶ್ಚರ್ಯವಾಗಿರುವದರಿಂದಲೇ, ಅತರ್ಕ್ಯಾಜ್ಞೇಯಂ ಚ – ಅತರ್ಕ್ಯವೆಂದೂ, ಅಜ್ಞೇಯವೆಂದೂ, ಹೇಳಲ್ಪಡುತ್ತದೆ.
ಟೀಕಾ –  ಏತತ್ = ಬ್ರಹ್ಮ ಚಿಚ್ಚೇತ್ಯ ಚ | ತತ: ಅದ್ಭುತತ್ವಾದೇವ | ಅಚಿಂತ್ಯಾಂ ಉಚ್ಯತೇ | ನ ತು ಸದಾದಿ ಪ್ರಕಾರೈ ಮನೋವೃತ್ಯ ವಿಷಯತ್ವಾತ್ |
ಟೀಕಾ – ತತ : ಇತಿ ವರ್ತತೇ | ತೇನ ಏವಕಾರಸ್ಯ ಸಂಬಂಧ: | ಅತರ್ಕ್ಯಂ ಚ ತದಜ್ಞೇಯಂ ಚ ಅತರ್ಕ್ಯಾಜ್ಞೇಯಂ ತತ: ಅದ್ಭುತತ್ವಾದೇವ | ನ ತು ಸದಾದಿ ಪ್ರಕಾರೈ ಅನುಮಾತುಂ ಪ್ರತ್ಯಕ್ಷೇಣ ವಾ ಜ್ಞಾನುಂ ಅಶಕ್ಯತ್ವಾತ್ | ಮನೋವೃತ್ತೇ: ಪ್ರತ್ಯಕ್ಷತ್ವೇಽಪಿ ಬಾಹ್ಯಾಂತರತ್ವ ಭೇದೇನ ಪೃಥಗುಪದಾನಂ |
ಅದ್ವೈತಿಗಳ ಶಂಕ – ಸತ್ವ ಅಸತ್ವ ಮೊದಲಾದ ಪ್ರಕಾರಗಳಿಂದ ಮನೋವೃತ್ತಿಗೆ ವಿಷಯವಾಗದಿರುವುದರಿಂದ ಅಚಿಂತ್ಯವೆಂದೂ, ಸತ್ವಾದಿ ಪ್ರಕಾರಗಳಿಂದ ಅನುಮೇಯಿಸಲಿಕ್ಕೆ ಅಶಕ್ಯವಾದುದರಿಂದಲೂ ಅತರ್ಕ್ಯವೆಂದೂ, ಸತ್ವಾದಿ ಪ್ರಕಾರಗಳಿಂದ ಪ್ರತ್ಯಕ್ಷದಿಂದ ತಿಳಿಯಲು ಅಶಕ್ಯವಾದುದರಿಂದ ಅಜ್ಞೇಯವೆಂದೂ ಹೇಳುವರು.  ಇದಕ್ಕೆ ಉತ್ತರ – ಶ್ರುತಿ, ಸ್ಮ್ರುತಿ ವಿರುದ್ಧವಾಗಿರುವುದರಿಂದ ಹಾಗೆ ಹೇಳಲಾಗದು.  ‘ಅಜ್ಞೇಯಂ” ಎಂಬುವುದರಿಂದಲೇ ‘ ಅಚಿಂತ್ಯ’ ಎನ್ನುವುದೂ, ಸಿಗುವುದರಿಂದ ಪ್ರತ್ಯೇಕವಾಗಿ ಏತಕ್ಕೆ ಪ್ರಯೋಗಿಸಿರುವರೆಂದರೆ ಮನೋ ವೃತ್ತಿಯು ಪ್ರತ್ಯಕ್ಷವಾಗಿದ್ದಾಗ್ಯೂ ಅಂತರಿಂದ್ರಿಯದಿಂದ ಹುಟ್ಟಿದ್ದು ಎಂಬುವ ಭೇದವಿದ್ದುದರಿಂದ ಬೇರೆ ಬೇರೆಯಾಗಿಯೇ ಪ್ರಯೋಗಿಸಿರುವರು. 
(ಬ್ರಹ್ಮಾತಿರಿಕ್ತ ಪ್ರಪಂಚಾನೃತತ್ವಾದಿ ಪ್ರತಿಪಾದಕ ಶ್ರುತಿವಚನಾನಾಂ ಸ್ಮೃತ್ಯಾ ಅರ್ಥ ನಿರೂಪಣಂ)
ಟೀಕಾ – ಅಸತ್ವೇವಂ ಯತ್ರ ಬ್ರಹ್ಮಣಾ ಸಹ ಅನಿರ್ವಾಚ್ಯತ್ವಾದಿ ಪ್ರಪಂಚಸ್ಯೋಚ್ಯತೇ | ಯತ್ರ ತು ಬ್ರಹ್ಮೈರ್ವರ್ತಮನ್ಯದನೃತಮಿತ್ಯಾಧ್ಯುಕ್ತಿ: ತತ್ರ ಕಥಮಿತ್ಯತ ಆಹ – ಬ್ರಹ್ಮನಿಗೂ ಪ್ರಪಂಚಕ್ಕೂ ಅನಿರ್ವಾಚ್ಯತ್ವಾದಿಗಳನ್ನು ಹೇಳುವ ವಾಕ್ಯಕ್ಕೆ ಹೀಗೆಯೇ ಅರ್ಥವಿರಲಿ.  ಎಲ್ಲಿ ಬ್ರಹ್ಮನೇ ಸತ್ಯನು, ಬ್ರಹ್ಮನಿಂದ ಬೇರೆಯಾಗಿದ್ದುದೆಲ್ಲ ಅಸತ್ಯವೆಂದು ಹೇಳಿದೆಯೋ, ಅಂತಹ ವಾಕ್ಯಕ್ಕೆ ಏನು ಅರ್ಥವನ್ನು ಹೇಳುವಿರಿ, ಎಂಬ ಪರರ ಅಶಂಕೆಗೆ ಪರಿಹಾರವನ್ನು ಹೇಳುತ್ತಾರೆ –
ಮೂಲ –  ಋ ಗತಾವಿತಿ ಧಾತೋಸ್ತು ಪೂರ್ವಾವಗತವತ್ಸದಾ |         ಸ್ತಿತೇ ಬ್ರಹ್ಮರ್ತಮಿತ್ಯುಕ್ತಂ ಅನೃತಂ ಪರಿಣಾಮತ: |         ಪ್ರಕೃತಿಪ್ರಾಕೃತಂ ಪ್ರೋಕ್ತಂ……………………. | 
– ಋ ಎಂಬ ಧಾತುವು ಗತೌ – ಜ್ಞಾನವೆಂಬುವ ಅರ್ಥದಲ್ಲಿರುತ್ತದೆ.  ಇತಿ – ಹೀಗೆ ಧಾತೋಸ್ತು – ಧಾತುವನ್ನು ವ್ಯಾಖ್ಯಾನಿಸುವುದರಿಂದ, ಪೂರ್ವಾವಗತವತ್ – ಅನಾದಿ ಕಾಲವನ್ನಾರಂಭಿಸಿ ತಿಳಿಯಲ್ಪಟ್ಟವನಂತೆ, ಸದಾ – ಎಂದೆಂದಿಗೂ, ಸ್ಥಿತೇ: ಇರುವುದರಿಂದ, ಬ್ರಹ್ಮ – ಪರಬ್ರಹ್ಮನು, ಋತಂ ಇತಿ – ಋತವೆಂದು ಉಕ್ತಂ – ಹೇಳಲ್ಪಟ್ಟಿದ್ದಾನೆ.  ಪ್ರಕೃತಿ – ಜಡಪ್ರಕೃತಿ, ಪ್ರಾಕೃತಂ – ತತ್ಸಂಬಂಧಿಯಾದುದು, ತತ್ಪರಿಣಾಮವಾದ ಮಹದಾದಿ ತತ್ವವು, ಪರಿಣಾಮತ: ಬದಲಾವಣೆಯಾಗುವುದರಿಂದ ಅನೃತಂ ಇತಿ – ಅನೃತವೆಂದು ಉಕ್ತಂ ಹೇಳಲ್ಪಟ್ಟಿದೆ.
ಗತ್ಯರ್ಥಕವಾದ ಧಾತುವಿಗೆ ಜ್ಞಾನವೆಂಬ ಅರ್ಥವಿದೆ. ‘ಕ್ತ’ ಪ್ರತ್ಯಯವು ಅತೀತಾರ್ಥಕ್ಯವು.  ಕಳೆದು ಹೋದ ಕಾಲಕ್ಕೆ ಅವಧಿಯನ್ನು ಹೇಳುವುದರಿಂದ ಅನಾದಿಯೆಂಬ ಅರ್ಥವು ಸಿಗಲಿದೆ.  ಹಾಗಿದ್ದರೂ ‘ಋತಂ’ ಎಂದರೆ ಅನಾದಿಕಾಲದಿಂದ ತಿಳಿಯಲ್ಪಟ್ಟದ್ದು.  ಪರಿಣಾಮವು ಪ್ರಕೃತ್ಯಾದಿಗಳಿಗೆ (ಜಗತ್ತಿಗೆ) ಇರುವುದರಿಂದ ‘ಋತಾ”, ಬ್ರಹ್ಮನಿಗೆ ಪರಿಣಾಮಗಳಿಲ್ಲದಿರುವುದರಿಂದ “ಅನೃತಾ” ಎನ್ನುತ್ತಾರೆ.  ‘ಅನೃತೇನ ಹಿ ಪ್ರತ್ಯೂಢಾ:’ “ತದೇವರ್ತಂ’ ಎಂಬ ಶೃತಿಗಳಲ್ಲಿ ಬ್ರಹ್ಮನಿಗೆ ಪರಿಣಾಮವಿಲ್ಲದಿರುವುದರಿಂದ ಋತವೆಂದೂ ಉಕ್ತವಾಗಿದೆ.  (ಸತ್ತಾದುದರಿಂದಲೂ ‘ಋತಂ’, ಅಸತ್ತಾದುದರಿಂದ ‘ಅನೃತ’ವೆಂದು ಕರೆಸಿಕೊಳ್ಳುತದೆ ಎನ್ನಬಾರದು)

to be contd….

Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

070-410 exam JN0-102 exam 70-411 exam C_TADM51_731 exam C4090-958 exam 70-483 exam EX300 exam 070-461 exam MB2-702 exam MB7-702 exam 220-802 exam 400-101 exam 646-206 exam 700-501 exam 70-480 exam C4040-108 exam MB2-701 exam 070-411 exam 100-101 exam 640-554 exam 700-505 exam 70-457 exam 70-460 exam C2150-197 exam EX0-001 exam 070-243 exam 70-466 exam C_THR12_66 exam C4040-225 exam 1Z0-061 exam 70-347 exam C4090-452 exam VCP-550 exam 070-177 exam 070-412 exam 70-417 exam 70-463 exam 70-488 exam C_HANATEC131 exam C2090-303 exam C2090-614 exam 70-331 exam MB5-705 exam 070-247 exam 070-347 exam 070-463 exam 300-206 exam 70-243 exam 74-325 exam C2020-622 exam C2030-283 braindumps C2090-540 braindumps C2180-278 braindumps HP0-J73 braindumps ICBB braindumps 070-246 braindumps 070-341 braindumps 070-417 braindumps 070-457 braindumps 070-458 braindumps 1Z0-481 braindumps 1Z0-599 braindumps 300-207 braindumps 70-246 braindumps 70-414 braindumps A00-240 braindumps C_TAW12_731 braindumps C4030-670 braindumps C4040-224 braindumps C4090-450 braindumps C4120-783 braindumps EX200 braindumps MB2-700 braindumps MB3-700 braindumps MB6-869 braindumps OG0-093 braindumps VCP-510 braindumps VCP550 braindumps 070-178 braindumps 070-331 braindumps 070-467 braindumps 070-667 braindumps 070-684 braindumps 070-687 braindumps 1Z0-051 braindumps 1Z0-060 braindumps 1Z0-478 braindumps 1Z0-485 braindumps 1Z0-897 braindumps 200-120 braindumps 220-801 braindumps 500-201 braindumps 70-346 braindumps 70-412 test 70-458 test 70-486 test 820-421 test 820-422 test C2170-008 test C2180-275 test C2180-276 test C4040-123 test JN0-343 test M70-201 test M70-301 test NS0-504 test 70-410 test PW0-204 test 3001 test 050-720 test 070-480 test 070-487 test 1Z0-062 test 1Z0-597 test 1Z0-899 test 250-310 test 350-018 test 400-051 test 70-178 test 70-331 test 70-413 test 70-465 test 70-467 test 70-484 test 70-485 test 74-338 test 74-344 test 810-420 test 98-367 test C_HANASUP_1 test C_TSCM52_66 test C2010-571 test C2040-988 test C4040-226 test C4120-782 test CISSP test CPCM test M70-101 test MB6-700 test MB7-701 test VCAD510 test 3605 test 7303 test 000-563 test 070-337 test 070-414 test 070-459 test 070-460 test 400-101 test 70-410 test 050-SEPROAUTH-02 test 200-120 test MB2-703 test 070-462 test 70-462 test 70-461 test 070-410 test JN0-102 test 70-411 test C_TADM51_731 test C4090-958 test 70-483 test EX300 test 070-461 test MB2-702 test MB7-702 test 220-802 test 400-101 test 646-206 test