Vishnu panchaka

ವಿಷ್ಣುಪಂಚಕ  Vishnu panchaka

ವಿಷ್ಣುಪಂಚಕ ವ್ರತವು ಶ್ರೀಹರಿಯ ಪ್ರೀತಿಗಾಗಿ ಮಾಡತಕ್ಕಂತಹ ವ್ರತವು.  ಇದನ್ನು ಮಾಡುವುದು ವಿಷ್ಣುಪ್ರೇರಣಯ,  ವಿಷ್ಣು ಪ್ರೀತ್ಯರ್ಥಂ.    ಈ ವ್ರತದ ನಿಯಮದ ಪ್ರಕಾದ ಪ್ರತಿತಿಂಗಳೂ ಐದು ಉಪವಾಸವನ್ನು ಮಾಡಬೇಕಾಗುತ್ತದೆ.  ಅವುಗಳೆಂದರೆ ಪ್ರತಿತಿಂಗಳ ಎರಡು ಏಕಾದಶಿ, ಹುಣ್ಣಿಮೆ, ಅಮಾವಾಸ್ಯೆ ಮತ್ತು ಶ್ರವಣ ನಕ್ಷತ್ರದ ದಿನ ಉಪವಾಸವನ್ನು ಶ್ರೀಹರಿ ಪ್ರೀತಿಗಾಗಿ ಮಾಡಬೇಕು.  ಒಟ್ಟು ವರ್ಷದಲ್ಲಿ 60 ಉಪವಾಸಗಳನ್ನು ಮಾಡಬೇಕಾಗುತ್ತದೆ.

 

ವಿಷ್ಣುಪಂಚಕ ಆರಂಭಿಸಲು ಸೂಕ್ತ ಸಮಯ : 

ವಿಷ್ಣು ಪಂಚಕ ಉಪವಾಸ ಆರಂಭಿಸುವ ಹಿಂದಿನ ದಿನ ಪುಣ್ಯಾಹವಾಚನ ಮಾಡಿಕೊಂಡು ಆರಂಭಿಸಬೇಕು.
ಅ. ಭಾದ್ರಪದ ಶುದ್ಧ ಏಕಾದಶಿ ಅಂದು ಶ್ರವಣ ನಕ್ಷತ್ರವಾಗಿದ್ದಲ್ಲಿ
ಆ. ಮಾರ್ಗಶಿರ ಶುದ್ಧ ಪಂಚಮಿ ಶ್ರವಣ ನಕ್ಷತ್ರವಾಗಿದ್ದಲ್ಲಿ
ಇ.  ಮಾರ್ಗಶಿರ ಶುದ್ಧ ಏಕಾದಶಿ (ಶ್ರವಣ ನಕ್ಷತ್ರವಿರಲಿ ಅಥವಾ ಇಲ್ಲದಿರಲಿ)
ಆದರೆ, ನಾವು ಆರಂಭಿಸುವ ವಿಷ್ಣುಪಂಚಕದ ಮಾಸದಲ್ಲಿ ಎರಡು ಏಕಾದಶಿ, ಹುಣ್ಣಿಮೆ, ಅಮಾವಾಸ್ಯೆ ಮತ್ತು ಶ್ರವಣ ನಕ್ಷತ್ರದ ದಿನ ಉಪವಾಸಕ್ಕೆ ಅನುವಾಗಿರಬೇಕು.  ಕೆಲವು ತಿಂಗಳಲ್ಲಿ ಕೆಲವು ದಿನ ವಿಷ್ಣುಪಂಚಕದ ಉಪವಾಸವಿರುವುದಿಲ್ಲ.  ಆದರೆ ನಾವು ಆರಂಭಿಸುವ ತಿಂಗಳು ಐದು ಉಪವಾಸವಿರಲೇಬೇಕು. ಯಾವುದೇ ಉಪವಾಸ ಲೋಪವಾಗಿರಕೂಡದು.

ವಿಷ್ಣು ಪಂಚಕ ವ್ರತ ಫಲ  – ಬ್ರಹ್ಮಹತ್ಯಾ ದೋಷ ಪರಿಹಾರ, ಸುರಾಪಾನ ಪರಿಹಾರ, ಪರಸ್ತ್ರೀಗಮನ ಪರಿಹಾರ, ಗೋಹತ್ಯಾ, ಸ್ತ್ರೀ, ಬಾಲ ಹತ್ಯಾ, ಸುವರ್ಣ ಚೌರ್ಯ ಪಾಪ ಪರಿಹಾರ.  

ವಿಷ್ಣುಪಂಚಕ ನಿಯಮಗಳು :  
ವಿಷ್ಣು ಪಂಚಕ ಉಪವಾಸ ಆರಂಭಿಸುವ ಹಿಂದಿನ ದಿನ ಪುಣ್ಯಾಹವಾಚನ ಮಾಡಿಕೊಂಡು ಆರಂಭಿಸಬೇಕು.

ಅಂದು ವಿಷ್ಣುಪಂಚಕದ ಸಂಕಲ್ಪ ಮಾಡಬೇಕು ; ವ್ರತ ಮಾಡತಕ್ಕವನು ದೈನಂದಿನ ಪೂಜೆ, ಆಹ್ನೀಕ, ನೈವೇದ್ಯ, ವೈಶ್ವದೇವ, ಹಸ್ತೋದಕ, ಮುಂತಾದವನ್ನು ಮಾಡಿ,  ಹಿರಿಯರಿಗೆ ಕೊಟ್ಟು, ತಾನೂ ಎಂದಿನಂತೆ ಮೂರು ಬಾರಿ ಸ್ವೀಕರಿಸಬೇಕು.   ಎಂದಿನಂತೆ ಅಂಗಾರ ಅಕ್ಷತೆಯನ್ನು ಹಚ್ಚಬೇಕು,   ಉಪವಾಸದ ಮಾರನೇದಿನ  ಅಂದರೆ ಪಾರಣೆಯ ದಿನ ಬ್ರಾಹ್ಮಣ – ಮುತ್ತೈದೆಯರಿಗೆ,  ಭೋಜನ ಮಾಡಿಸಿ ತಾನೂ ಭುಂಜಿಸುವುದು ಅತಿಶಯ ಫಲದಾಯಕ)    ವ್ರತದ ಆರಂಭದಲ್ಲಾಗಲೀ. ಮಧ್ಯದಲ್ಲಾಗಲೀ, ಅಂತ್ಯದಲ್ಲಾಗಲೀ, ಉದ್ಯಾಪನೆಯನ್ನು ಅನುಕೂಲವಿದ್ದ ದಿನ ಮಾಡಬೇಕು.  ಉದ್ಯಾಪನೆಯ ಹಿಂದಿನ ದಿನ ಉಪವಾಸದ ದಿನವಾಗಿರಬೇಕು.    ಉದ್ಯಾಪನೆಯ ದಿನದಂದು 5,12, ಅಥವಾ 60 ಬ್ರಾಹ್ಮಣ ದಂಪತಿಗಳಿಗೆ ಸಂತರ್ಪಣೆಯನ್ನು ಯಥಾಶಕ್ತಿ  ನಡೆಸಬಹುದು.  ಅಕಸ್ಮಾತ್ ಹುಣ್ಣಿಮೆ, ಅಮಾವಾಸ್ಯೆ, ಶ್ರವಣ ನಕ್ಷತ್ರ ಉಪವಾಸದ ದಿನ ತಂದೆ ಅಥವಾ ತಾಯಿಯ ಶ್ರಾದ್ಧವು ಬಂದಲ್ಲಿ, ಅಂದು ಶ್ರಾಧ್ಧ , ಬ್ರಾಹ್ಮಣ ಭೋಜನ ಮುಗಿಸಿ, ತಾನೂ ಭೋಜನ ಮಾಡತಕ್ಕದ್ದು.  ಇಂದು ಉಪವಾಸ ವಿಘ್ನವಾಗುವ ದೋಷವಿರುವುದಿಲ್ಲ.   ದಶಮಿಯಂದು, ಸಾಧನದ್ವಾದಶಿಯಂದು ಮತ್ತು ಶಿವರಾತ್ರಿಯ ದಿನ ಶ್ರವಣ ನಕ್ಷತ್ರವಿದ್ದಲ್ಲಿ ಅಂದು ಉಪವಾಸ ಮಾಡಕೂಡದು.    ಹುಣ್ಣಿಮೆಯಂದೇ ಅಥವಾ ಏಕಾದಶಿಯಂದೇ ಶ್ರವಣವು ಬರುವುದೇ ಮೊದಲಾದ ಕ್ರಮದಿಂದ ಉಪವಾಸವು ತಪ್ಪಿಹೋದಲ್ಲಿ, ಯಾವುದೇ ದೋಷವಿಲ್ಲ.  ಆದರೆ ಶ್ರಮದಿಂದಲೋ ಅಥವಾ ರೋಗಾದಿ ನಿಮಿತ್ತದಿಂದಲೋ ಉಪವಾಸ ತಪ್ಪಿದರೆ,  ವಿಷ್ಣುಪಂಚಕ ವರ್ಷ ಕಳೆದ ಮುಂದಿನ ತಿಂಗಳು ಆಯಾ ದಿನದಲ್ಲಿ ಉಪವಾಸ ಮಾಡಿ ಪೂರ್ತಿಗೊಳಿಸತಕ್ಕದ್ದು.    ವಿಷ್ಣುಪಂಚಕ ವರ್ಷವೆಂದರೆ :  ಈ ವರ್ಷ ಭಾದ್ರಪದ ಮಾಸದಲ್ಲಿ ಆರಂಭಿಸಿದರೆ ಮುಂದಿನ ವರ್ಷದ ಶ್ರಾವಣ ಅಮಾವಾಸ್ಯೆಯ ತನಕ ಆಚರಿಸಬೇಕು.   ಅಥವಾ ಈ ವರ್ಷ ಮಾರ್ಗಶಿರ ಮಾಸದಲ್ಲಿ ಆರಂಭಿಸಿದರೆ ಮುಂದಿನ ಕಾರ್ತೀಕ ಮಾಸದ ತನಕ ಆಚರಿಸಬೇಕು.  

ವಿಷ್ಣುಪಂಚಕವ್ರತಂ ಸಂಕಲ್ಪ –

ಆಚಮನ, ಪ್ರಣವಸ್ಯ……….. .ಸಂವತ್ಸರೇ…… ಋತೌ………… ಮಾಸೇ………… ಪಕ್ಷೇ……. ತಿಥೌ…… ವಾಸರೇ…… ಯೋಗೇ….. ಕರಣೇ…. ವಾಸರೇ…… ರಾಘವೇಂದ್ರತೀರ್ಥ ಗುರುವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಅಸ್ಮದ್ ಕುಲದೇವತಾಭಿನ್ನ ಶ್ರೀ ಲಕ್ಷ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಸಕಲ ದೇಹಸಂಬಂದಿತ ದೋಷ ಪರಿಹಾರಾರ್ಥಂ, ಮಾನಸಿಕ ಸಂಬಂಧಿತ ದೋಷಪರಿಹಾರಾರ್ಥಂ, ದೇಹ ತಥಾ ಮನಶುದ್ಯರ್ಥಂ ಸಂವತ್ಸರಪೂರ್ತ ವಿಷ್ಣುಪಂಚಕವ್ರತಂ ಕರಿಷ್ಯೇ.

ವಿಷ್ಣುಪಂಚಕ ಕಾಲದಲ್ಲಿ ನಿಯಮವನ್ನು ಪಾಲಿಸುವವನು ಈ ಕೆಲವು ಕೃಷ್ಣ ಸಂಬಂಧಿ ಕರ್ತವ್ಯಗಳನ್ನೂ ಮಾಡಿದರೆ ಶ್ರೇಷ್ಟ.  ಕೃಷ್ಣಾನದಿ ಸ್ನಾನ, ಕೃಷ್ಣದೇವರ ದರ್ಶನ, ಕೃಷ್ಣ ವಿಗ್ರಹ ದಾನ.  ಈ ಕಾರ್ಯಗಳನ್ನು ಆ ಒಂದು ವರ್ಷದಲ್ಲಿ ಎಂದಾದರೂ ಮಾಡಬಹುದು.

 

ಅರ್ಘ್ಯ ಪ್ರಧಾನ (ಬೇರೆ ಬೇರೆ ದಿನಗಳಂದು ಬೇರೆ ಬೇರೆ ಅರ್ಘ್ಯಗಳು) ಈರೀತಿ ಇದೆ :

ಏಕಾದಶಿ ದಿನ ಅರ್ಘ್ಯ ಕೊಡುವಂತಿಲ್ಲ.   ಆದರೆ ದ್ವಾದಶಿ ದಿನ ಕೊಡತಕ್ಕದ್ದು.

ಶುದ್ಧ ದ್ವಾದಶಿ ದಿನ – ಕೇಶವಾಯ ನಮ:……ಕೇಶವಂ ತರ್ಪಯಾಮಿ; ……….. ದಾಮೋದರಾಯ (12 ನಾಮ ತರ್ಪಣ) – ದಾಮೋದರಂ ತರ್ಪಯಾಮಿ .
ಬಹುಳ ದ್ವಾದಶಿ ದಿನ  – ಸಂಕರ್ಷಣಾಯ ನಮ:… ಶ್ರೀಕೃಷ್ಣಾಯ ನಮ (12 ನಾಮ ತರ್ಪಣ) – ಶ್ರೀಕೃಷ್ಣಂ ತರ್ಪಯಾಮಿ |

ಪೌರ್ಣಮಿ ದಿನ – ೧) ವಿಧವೇ ನಮ: ವಿಧುಂ ತರ್ಪಯಾಮಿ ; ೨) ಶಶಿನೇ ನಮ: ಶಶಿಂ ತರ್ಪಯಾಮಿ., ೩) ಶಶಾಂಕಾಯ ನಮ: ಶಶಾಂಕಂ ತರ್ಪಯಾಮಿ. ೪) ಚಂದ್ರಾಯ ನಮ:ಚಂದ್ರಂ ತರ್ಪಯಾಮಿ;  ೫) ಸೋಮಾಯ ನಮ: ಸೋಮಂ ತರ್ಪಯಾಮಿ;   ೬) ಉಡುಪಾಯ ನಮ: ಉಡುಪಂ ತರ್ಪಯಾಮಿ;  ೭) ಅಮೃತಾಯ ನಮ: ಅಮೃತಂ ತರ್ಪಯಾಮಿ;  ೮) ಮನೋಹರಾಯ ನಮ: ಮನೋಹರಂ ತರ್ಪಯಾಮಿ;  ೯) ಪಾವನಾಯ  ನಮ: ಪಾವನಂ ತರ್ಪಯಾಮಿ ;  ೧೦) ಹಿಮಕೃತೇ  ನಮ: ಹಿಮಕೃತಂ ತರ್ಪಯಾಮಿ;  ೧೧) ನಿಶಾಕೃತೇ ನಮ: ನಿಶಾಕೃತಂ ತರ್ಪಯಾಮಿ;  ೧೨) ದೀಪ್ಯಮಾನಾಯ ನಮ: ದೀಪ್ಯಮಾನಂ ತರ್ಪಯಾಮಿ 

ಅಮಾವಾಸ್ಯಾ ದಿನ – ೧) ಮಹೀಧರಾಯ  ನಮ: ಮಹೀಧರಂ ತರ್ಪಯಾಮಿ;  ೨) ಜಗನ್ನಾಥಾಯ  ನಮ: ಜಗನ್ನಾಥಂ ತರ್ಪಯಾಮಿ;  ೩) ದೇವೇಂದ್ರಾಯ ನಮ: ದೇವೇಂದ್ರಂ ತರ್ಪಯಾಮಿ; ೪) ದೇವಕೀಸುತಾಯ ನಮ: ದೇವಕೀಸುತಂ ತರ್ಪಯಾಮಿ; ೫) ಚತುರ್ಭುಜಾಯ ನಮ: ಚತುರ್ಭುಜಂ ತರ್ಪಯಾಮಿ;  ೬) ಗದಾಪಾಣಯೇ ನಮ: ಗದಾಪಾಣಿಂ ತರ್ಪಯಾಮಿ;  ೭) ಸುರಮೀಡಾಯ ನಮ: ಸುರಮೀಡಂ ತರ್ಪಯಾಮಿ ; ೮) ಸುಲೋಚನಾಯ ನಮ: ಸುಲೋಚನಂ ತರ್ಪಯಾಮಿ; ೯) ಚಾರ್ವಾಂಗಾಯ ನಮ:  ಚಾರ್ವಾಂಗಂ ತರ್ಪಯಾಮಿ; ೧೦) ಚಕ್ರಪಾಣಯೇ ನಮ: ಚಕ್ರಪಾಣಿಂ ತರ್ಪಯಾಮಿ;  ೧೧) ಸುರಮಿತ್ರಾಯ  ನಮ: ಸುರಮಿತ್ರಂ ತರ್ಪಯಾಮಿ;  ೧೨) ಅಸುರಾಂತಕಾಯ ನಮ: ಅಸುರಾಂತಕಂ ತರ್ಪಯಾಮಿ.

ಶ್ರವಣ ನಕ್ಷತ್ರ ದಿನ – ೧. ಪುರುಷೋತ್ತಮಾಯ ನಮ: ಪುರುಷೋತ್ತಮಂ ತರ್ಪಯಾಮಿ; ೨ ಶಾಂಘಧನ್ವಿನೇ ನಮ: ಶಾಂಘಧನ್ವಿಂ ತರ್ಪಯಾಮಿ ; ೩. ಗರುಡಧ್ವಜಾಯ ನಮ:  ಗರುಡಧ್ವಜಂ ತರ್ಪಯಾಮಿ ೪. ಅನಂತಾಯ ನಮ: ಅನಂತಂ ತರ್ಪಯಾಮಿ;  ೫. ಗೋವರ್ಧನಾಯ ನಮ: ಗೋವರ್ಧನಂ ತರ್ಪಯಾಮಿ; ೬. ಪುಂಡರೀಕಾಕ್ಷಾಯ ನಮ:  ಪುಂಡರೀಕಾಕ್ಷಂ ತರ್ಪಯಾಮಿ; ೭. ನಿತ್ಯಾಯ  ನಮ: ನಿತ್ಯಂ ತರ್ಪಯಾಮಿ; ೮. ವೇದಗರ್ಭಾಯ  ನಮ: ವೇದಗರ್ಭಂ ತರ್ಪಯಾಮಿ; ೯. ಯಜ್ಞಪುರುಷಾಯ ನಮ: ಯಜ್ಞಪುರುಷಂ ತರ್ಪಯಾಮಿ; ೧೦. ಸುಬ್ರಹ್ಮಣ್ಯಾಯ ನಮ: ಸುಬ್ರಹ್ಮಣ್ಯಂ ತರ್ಪಯಾಮಿ; ೧೧. ಜಯಾಯ ನಮ: ಜಯಂ ತರ್ಪಯಾಮಿ;  ೧೨. ಶೌರಯೇ ನಮ: ಶೌರಿಂ ತರ್ಪಯಾಮಿ

What is Vishnu panchaka ?
It is the vratha done for pleasing Vishnu – Vishnu preranaya, vishnu preetyartam.  Every month we have to do fasting for five days. i.e., on Shravana Nakshatra day, Shudda Ekadashi, Bahula Ekadashi, Hunnime and Amavasye. – Number of Upavaasas – Every month there will be five (5) upavaasaas – total in a year 60 upavaasaa.

 

When to start Vratha ?-
  • Bhadrapada shukla Ekadashi if it is Shravana Nakshatra   or
  • Margasheersha shukla Ekadashi  – with or without Shravana Nakshatra   or
  • Margasheersha Shukla panchami if it is Shravana Nakshatra.
The vratha to be started in the above period only if there are five upavasaas are there in that month.

 

Vishnu Panchaka Vratha Phala :
brahma hathya dOsha, suraapaana, parastree gamana, gOhatye, stree, baala hatye, suvarNa chourya, etc   paapaas will go.

 

Vishnu panchaka rules :
First he shall do the punyahavaachana on the first day of his fasting
    • Do the sankalpa of Vishnu panchaka ; The Vratasta must do daily pooja, ahneeka, Naivedya, Hastodaka, Vaishwadeva, as usual and must have Tirtha; After all the above, he has to apply angara akshate except on Ekadashi. ;  He must arrange for the bhojana of Brahmana + Suvasiniyaru on the fasting day ;  The next day after upavasa, the Vratasta must arrange for Bhojana for “dampathi” and after their bhojana, he shall have the bhojana ;  He must do the udyapana during the beginning, or in the middle or at the end.  The previous day of Udyapana shall be a fasting day ;  On the udyapana day, he shall arrange for the brahmana suvisaasini bhojana of atleast 5 dampatees  ;  
    • During the Vishnu panchaka period he shall have  : –  i) Krishna snaana (Krishna river snaana),     ii) Krishna darshana (darshana of Udupi Krishna or Dwaraka Krishna or some other praacheena Krishna temple),   iii) give daana of Krishna idol (yathaashakthi).

 

विष्णुपंचकव्रतं संकल्प –
आचमन, प्रणवस्य………… संवत्सरे…… ऋतौ………… मासे………… पक्षे……. तिथौ…… वासरे…… योगे….. करणे…. वासरे…… राघवेंद्रतीर्थ गुरुवंतर्गत भारतीरमण मुख्यप्राणांतर्गत अस्मद् कुलदेवताभिन्न श्री
विष्णु प्रेरणय विष्णु प्रीत्यर्थं  सकल देहसंबंदित दोषपरिहारार्थं, मानसिक संबंधित दोषपरिहारार्थं, देह तथा मनशुद्यर्थं संवत्सरपूर्त विष्णुपंचकव्रतं करिष्ये.

On Upavaasa day, the Vratasta must give tarpana with keshavaadi dwadasha naama to bhagavantha.  The tarpana is as follows :

अर्घ्य प्रधान (on different days is as follows):

 

शुद्ध द्वादशि दिन – केशवाय नम:…… दामोदराय (१२ नाम तर्पण) – इदमर्घ्यं समर्पयामि
बहुळ द्वादशि दिन  – संकर्षणाय नम:… श्रीकृष्णाय नम (१२ नाम तर्पण) – इदमर्घ्यं समर्पयामि ।

(On Ekadashi he shall not give the arghya.  But it shall be given on dwadashi day)

पौर्णमि दिन – १) विधवे नम: इदमर्घ्यं समर्पयामि; २) शशिने नम: इदमर्घ्यं समर्पयामि, ३) शशांकाय नम: इदमर्घ्यं समर्पयामि  ४) चंद्राय नम: इदमर्घ्यं समर्पयामि ५) सोमाय नम: इदमर्घ्यं समर्पयामि ६) उडुपाय नम: इदमर्घ्यं समर्पयामि  ७) अमृताय नम: इदमर्घ्यं समर्पयामि ८) मनोहराय नम: इदमर्घ्यं समर्पयामि  ९) पावनाय नम: इदमर्घ्यं समर्पयामि  १०) हिमकृते  नम: इदमर्घ्यं समर्पयामि ११) निशाकृते  नम: इदमर्घ्यं समर्पयामि १२) दीप्यमानाय नम: इदमर्घ्यं समर्पयामि

अमावास्या दिन – १) महीधराय  नम: इदमर्घ्यं समर्पयामि २) जगन्नाथाय  नम: इदमर्घ्यं समर्पयामि ३) देवेंद्राय नम: इदमर्घ्यं समर्पयामि ४) देवकीसुताय नम: इदमर्घ्यं समर्पयामि ५) चतुर्भुजाय नम: इदमर्घ्यं समर्पयामि ६) गदापाणये नम: इदमर्घ्यं समर्पयामि ७) सुरमीडाय नम: इदमर्घ्यं समर्पयामि ८) सुलोचनाय नम: इदमर्घ्यं समर्पयामि  ९) चार्वंगाय नम: इदमर्घ्यं समर्पयामि १०) चक्रपाणये  नम: इदमर्घ्यं समर्पयामि ११) सुरमित्राय  नम: इदमर्घ्यं समर्पयामि १२) असुरांतकाय नम: इदमर्घ्यं समर्पयामि

श्रवण नक्षत्र दिन – १. पुरुशोत्तमाय नम: इदमर्घ्यं समर्पयामि २. शांघधन्विने नम: इदमर्घ्यं समर्पयामि; ३. गरुडद्वजाय  नम: इदमर्घ्यं समर्पयामि ४. अनंताय नम: इदमर्घ्यं समर्पयामि  ५. गोवर्धनास्य नम: इदमर्घ्यं समर्पयामि ६. पुंडरीकाक्षाय नम: इदमर्घ्यं समर्पयामि ७. नित्याय नम: इदमर्घ्यं समर्पयामि  ८. वेदगर्भाय नम: इदमर्घ्यं समर्पयामि  ९. यज्ञपुरुषाय  नम: इदमर्घ्यं समर्पयामि १०. सुब्रह्मण्याय  नम: इदमर्घ्यं समर्पयामि  ११. जयाय : नम: इदमर्घ्यं समर्पयामि १२. शौरये  नम: इदमर्घ्यं समर्पयामि

Days on which shravana upavaasa not there –
shravana Dwadashi Galige 59-08 paLa  – no upavaasa
or
shravana 59-33 paLa – no upavaasa
or
previous day dwadashi & shravana nakshatra, next day also dwadashi – shravana nakshatra  – no upavaasa.
or
Shivarathri day, on which Shravana nakshatra will be there, no upavaasa to be observed
 

 

Leave a Reply

Your email address will not be published.

Sumadhwa Seva © 2022