Adhika Maasa

                                       Adhika Shravana maasa

 18.7.2023  to 16.08.2023

What is Adhika Masa? ಅಧಿಕ ಮಾಸ ಎಂದರೇನು?

ಸಾಮಾನ್ಯವಾಗಿ ಪ್ರತಿ ಚಾಂದ್ರಮಾಸದಲ್ಲೂ ಒಂದು  ಸಂಕ್ರಮಣ ಇದ್ದೇ ಇರುತ್ತದೆ. ಒಂದು  ಸಂಕ್ರಮಣವೂ ಸಹ ಸಂಭವಿಸದ ಚಾಂದ್ರಮಾಸವನ್ನು ಅಧಿಕಮಾಸ ಅಥವಾ ಮಲಮಾಸವೆನ್ನುತ್ತಾರೆ.

“ಅಧಿಕಸ್ಯಾಧಿಕಂ ಫಲಂ”.    ಸರಾಸರಿ 33 ತಿಂಗಳಿಗೊಮ್ಮೆ ಪ್ರಾಪ್ತವಾಗುವ ಅಧಿಕಮಾಸವು ಬಹಳ ಮಹತ್ವವಾದುದು, ಮತ್ತು ಸಾಧನೆಗೆ ಸಹಕಾರಿ.  ವಿಷ್ಣುಪಂಚಕಾದಿ ವರ್ಷಪೂರ್ತಿ ಮಾಡಬೇಕಾದ ವ್ರತಗಳನ್ನು ಮಾಡಲಾಗದವರು ಈ ಒಂದು ತಿಂಗಳಲ್ಲಿ ಆ ಐದು ಉಪವಾಸಗಳನ್ನು ಮಾಡಿದರೆ ಅದು “ಲಘುವಿಷ್ಣುಪಂಚಕ”ವೆಂದು ಕರೆಯಲ್ಪಡುತ್ತದೆ.

ಶ್ರೀ ಪುರುಷೋತ್ತಮರೂಪವು ಅಧಿಕಮಾಸದ ಅಧಿದೇವತೆ. ಅದರಿಂದಾಗಿಯೇ ಪುರುಷೋತ್ತಮ ಮಾಸವೆಂದೂ ಈ ಮಾಸವನ್ನು ಕರೆಯುತ್ತಾರೆ.

ಈ ಸಲದ ಅಧಿಕ ಮಾಸ ಬಂದಿರುವುದು ಶ್ರಾವಣ ಮಾಸದಲ್ಲಿ.  ಅಧಿಕ ಶ್ರಾವಣ ಮಾಸಕ್ಕೆ ನಿಯಾಮಕ ರೂಪ – ಆನಂದಾ ಪುರುಷೋತ್ತಮ.

ಪ್ರತಿಯೊಂದು ಅಪೂಪದಲ್ಲೂ ವಿಷ್ಣು, ಜಿಷ್ಣು ಮೊದಲಾದ ಭಗವದ್ರೂಪಗಳನ್ನು ಚಿಂತಿಸಿ 33 ಅಪೂಪಗಳನ್ನು ದಂಪತಿಸಹಿತ ಸದ್ಬ್ರಾಹ್ಮಣರಿಗೆ ಕಂಚಿನಪಾತ್ರೆಯಲ್ಲಿರಿಸಿ ದಾನ ಮಾಡುವುದು ಈ ವ್ರತದ ಮುಖ್ಯ ಅಂಶ.  ಪ್ರತಿನಿತ್ಯ ಮಾಸಪೂರ್ತಿ ಅಪೂಪ ದಾನವನ್ನು ಮಾಡತಕ್ಕದ್ದು.  ಅಥವಾ ಕನಿಷ್ಟ ಒಂದು ದಿನವಾದರೂ ಮಾಡತಕ್ಕದ್ದು. ಅಧಿಕಮಾಸದಲ್ಲಿ ದ್ವಾದಶಿ, ಹುಣ್ಣಿಮೆ ಅಥವಾ ಯಾವುದೇ ಶುಭ ದಿನಗಳಲ್ಲಿ ಬೆಲ್ಲ, ತುಪ್ಪ ಮಿಶ್ರಿತ ಮೂವತ್ತಮೂರು ಅಪೂಪಗಳನ್ನು ಕಂಚಿನ ಪಾತ್ರೆಯಲ್ಲಿರಿಸಿ ಸಾಧ್ಯವಾದರೆ ಸುವರ್ಣ ಸಹಿತ, ಯೋಗ್ಯ ಬ್ರಾಹ್ಮಣರಿಗೆ ದಾನವೀಯಬೇಕು.  ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲ ಸ್ವರ್ಗಲೋಕದಲ್ಲಿ ವಾಸಿಸುವ ಪುನ್ಯವು ಲಭಿಸುತ್ತದೆ.  ಮೂವತ್ತಮೂರು ದೇವತೆಗಳನ್ನುದ್ದೇಶಿಸಿ ಮಾಡುವ ಅಪೂಪದಾನವೌ ಪೃಥ್ವೀದಾನದ ಫಲವನ್ನು ನೀಡುತ್ತದೆ.

ಇತರ ಮಾಸಗಳಲ್ಲಿ ಮಾಡುವ ಧಾರಣ ಪಾರಣ, ವಿಷ್ಣುಪಂಚಕ, ಏಕಭುಕ್ತ, ಲಕ್ಷಪ್ರದಕ್ಷಿಣ,  ಲಕ್ಷ ನಮಸ್ಕಾರ, ಲಕ್ಷ ದೀಪ, ಇನ್ನಿತರ ವ್ರತಗಳನ್ನು ಅಧಿಕಮಾಸದಲ್ಲಿ ಮಾಡುವುದು ವಿಶೇಷ ಫಲ.

ಅಪೂಪದಾನ ಪ್ರತಿನಿತ್ಯ ಮಾಡತಕ್ಕದ್ದು.  ಅಥವಾ ಈ ಕೆಲವು ಶ್ರೇಷ್ಟದಿನಗಳಲ್ಲಿ ಒಂದು ದಿನ ಮಾಡಿದರೆ ಶ್ರೇಷ್ಟ ಅಥವಾ ಯಾವುದಾದರೂ ಒಂದು ದಿನ ಮಾಡತಕ್ಕದ್ದು. 

ಶ್ರೇಷ್ಟ ದಿನಗಳುಶುಕ್ಲ ಮತ್ತು ಕೃಷ್ಣ ದ್ವಾದಶಿ, ಪೌರ್ಣಿಮ, ಅಮಾವಾಸ್ಯೆ, ನವಮಿ, ಚತುರ್ದಶಿ, ವೈಧೃತಿ, ವ್ಯತೀಪಾತ ಯೋಗ, ಪುಷ್ಯಾರ್ಕ ಯೋಗ.

 

Adhikamasa” Nitya pataneeya stotra :

ಅಧಿಕ ಮಾಸದಲ್ಲಿ ನಿತ್ಯಪಠನೀಯ ಸ್ತೋತ್ರ :

ಅಧಿಕಮಾಸದಲ್ಲಿ ಈ ಕೆಳಗಿನ ಶ್ಲೋಕವನ್ನು ಪ್ರತಿನಿತ್ಯ  “ನಾಹಂ ಕರ್ತಾ ಹರಿ: ಕರ್ತಾ”  ಎಂದು ಅನುಸಂಧಾನ ಮಾಡಿ ಶ್ರೀ ರಾಧಾಪತಿ ಶ್ರೀಪುರುಷೋತ್ತಮನಲ್ಲಿ  ಜ್ಞಾನ, ಭಕ್ತಿ, ವೈರಾಗ್ಯವನ್ನು ಬೇಡಿ ಪಠಿಸಬೇಕು. ಅಧಿಕಮಾಸದಲ್ಲಿ ಪ್ರತಿನಿತ್ಯ 33 ಬಾರಿ ಈ ಸ್ತೋತ್ರವನ್ನು ಹೇಳತಕ್ಕದ್ದು.

 

ಗೋವರ್ಧನಧರಂ ವಂದೇ

ಗೋಪಾಲಂ ಗೋಪರೂಪಿಣಂ ! ಗೋಕುಲೋತ್ಸವಮೀಶಾನಂ

ಗೋವಿಂದಂ ಗೋಪಿಕಾಪ್ರಿಯ !!

 

ಅಧಿಕಮಾಸದಲ್ಲಿ ನಿಷಿದ್ಧ ಕಾರ್ಯಗಳು : ಕೆರೆ ಕಟ್ಟಿಸುವುದು, ಉಪನಯನ, ಸನ್ಯಾಸ ಸ್ವೀಕಾರ, ಜ್ಯೋತಿಷ್ಟೋಮಾದಿ ಕಾಮ್ಯಕರ್ಮಗಳು, ಮಗುವನ್ನು ಮೊದಲ ಬಾರಿಗೆ ಮನೆಯಿಂದ ಹೊರಗೆ ಕರೆದೊಯ್ಯುವುದು, ಪಟ್ಟಾಭಿಷೇಕ, ಚೌಲ, ಅನ್ನ ಪ್ರಾಶನ, ಗೃಹಾರಂಭ, ಗೃಹಪ್ರವೇಶ, ವಿವಾಹ, ನಾಮಕರಣ.

 

ಈ ಸಂಸ್ಕಾರಗಳು ಮಾಡಬಹುದು –

ಗರ್ಭಾದಾನ, ಸೀಮಂತ, ಜಾತಕರ್ಮ, ನಾಮಕರಣ, ನಿಷ್ಕ್ರಮಣ.

 

*ಅಧಿಕ ಮಾಸದಲ್ಲಿ ಶ್ರಾದ್ಧ ವಿಚಾರ* –

*ಯಾವುದೋ ಸಂವತ್ಸರದಲ್ಲಿ ಶ್ರಾವಣ ಮಾಸದಲ್ಲಿ ಮೃತರಾದವರ ಶ್ರಾದ್ಧ* :
ಅಧಿಕ ಮಾಸದಲ್ಲಿ ಪ್ರತಿ ಸಾಂವತ್ಸರಿಕ ಶ್ರಾದ್ಧವನ್ನು ಸಂಕಲ್ಪ ಶ್ರಾದ್ಧ ಆಯಾ ದಿನದಲ್ಲಿ ಮಾಡಿ ನಿಜ ಮಾಸದಲ್ಲಿ ಪಿಂಡಸಹಿತ ಶ್ರಾದ್ಧ ಮಾಡಬೇಕು.

ಆದರೆ, ಹಿಂದಿನ ಯಾವುದೋ ಅಧಿಕ ಶ್ರಾವಣ ಮಾಸದಲ್ಲೇ ಮೃತರಾದವರಿಗೆ ಅಧಿಕ ಶ್ರಾವಣ ಮಾಸದಲ್ಲಿ ಪಿಂಡಸಹಿತ ಶ್ರಾದ್ಧ ಮಾಡಿ ನಿಜ ಮಾಸದಲ್ಲಿ ಸಂಕಲ್ಪ ಸಹಿತ ಶ್ರಾದ್ಧ ಮಾಡತಕ್ಕದ್ದು. (ಉದಾಹರಣೆ – ಅಕಸ್ಮಾತ್ ಹಿಂದಿನ ಯಾವುದಾದರೂ ಅಧಿಕ ಶ್ರಾವಣ ಮಾಸದಲ್ಲಿ ಮೃತರಾದವರ ಶ್ರಾದ್ಧವನ್ನು ಈ ಸಲದ ಅಧಿಕ ಶ್ರಾವಣ ಮಾಸದಲ್ಲಿ ಪಿಂಡಪ್ರದಾನ ಪೂರ್ವಕ ಶ್ರಾದ್ಧ ಮಾಡತಕ್ಕದ್ದು.).

*ಹೋದ ವರ್ಷ ಶ್ರಾವಣ ಮಾಸದಲ್ಲಿ ಮೃತರಾದವರ ಶ್ರಾದ್ಧ ಯಾವಾಗ ಮಾಡಬೇಕು* ?

ಹಿಂದಿನ ವರ್ಷ ಮೃತರಾದವರಿಗೆ ಹನ್ನೆರಡು ತಿಂಗಳು ಈ ಅಧಿಕ ಮಾಸದಲ್ಲಿ ತುಂಬಿದರೆ ಅವರ ಊನಾಬ್ದಿಕ, ವಿಮೋಕ, ವರ್ಷಾಬ್ಧಿಕಗಳನ್ನು ಅಧಿಕ ಮಾಸದಲ್ಲೇ ಮಾಡತಕ್ಕದ್ದು. (ಉದಾಹರಣೆ – ಕಳೆದ ಸಂವತ್ಸರದ ಶ್ರಾವಣ ಮಾಸದಲ್ಲಿ ಮೃತರಾದವರಿಗೆ ಈ ಅವಧಿಯಲ್ಲಿ ಅಧಿಕ ಮಾಸದಲ್ಲಿ ಹನ್ನೆರಡು ತಿಂಗಳು ತುಂಬಿದವರು). ಆದರೆ ಪ್ರತಿ ಸಾಂವತ್ಸರಿಕ ಶ್ರಾದ್ಧವನ್ನು ನಿಜ ಶ್ರಾವಣ ಮಾಸದಲ್ಲಿ ಮಾಡತಕ್ಕದ್ದು.

ಸತ್ತ ವರ್ಷದಲ್ಲಿ ಮಾಡುವ ಪ್ರತಿತಿಂಗಳ ಶ್ರಾದ್ಧ ಅಥವಾ ತ್ರೈಪಕ್ಷಿಣಿ, ಅಥವಾ ಇನ್ನಿತರ ವರ್ಷದಲ್ಲಿ ಮಾಡತಕ್ಕ ಶ್ರಾದ್ಧವನ್ನು ಅಧಿಕ ಮಾಸದಲ್ಲೇ ಮಾಡತಕ್ಕದ್ದು. ಸರಿಯಾಗಿ ಹನ್ನೆರಡು ತಿಂಗಳು ಮಾತ್ರ ಮಾಡತಕ್ಕದ್ದು. ಮತ್ತು ನಿಜ ಮಾಸದಲ್ಲಿ ಸಾಂವತ್ಸರಿಕ ಶ್ರಾದ್ಧವನ್ನು ಮಾಡತಕ್ಕದ್ದು. ಉದಾಹರಣೆ – ಈ ವರ್ಷ ಶ್ರಾವಣದಲ್ಲಿ ಸತ್ತವರ ಪ್ರತಿ ತಿಂಗಳ ಶ್ರಾದ್ಧ, ಊನಾಬ್ಧಿಕ, ವಿಮೋಕ, ವರ್ಷಾಬ್ಧಿಕ ಇತ್ಯಾದಿಗಳನ್ನು ಮುಂದಿನ ವರ್ಷ ಆಷಾಢ ಮಾಸದಲ್ಲಿ ಮಾಡಬೇಕು ಮತ್ತು ಸಾಂವತ್ಸರಿಕ ಶ್ರಾದ್ಧವನ್ನು ಶ್ರಾವಣದಲ್ಲಿ ಮಾಡತಕ್ಕದ್ದು.

ಪುರುಷೋತ್ತಮರೂಪದ ಲಕ್ಷಣ :  

ಭಗವದ್ಗೀತೆಯಲ್ಲಿ ಚಿತ್ರಿಸಿರುವಂತೆ  ಕ್ಷರಾಕ್ಷರ ಪುರುಷೋತ್ತಮನಾದ ಶ್ರೀಹರಿ.

ಶ್ರೀಮದಾಚಾರ್ಯರ ತಂತ್ರಸಾರ ಸಂಗ್ರಹಾದಿ ಗ್ರಂಥದಲ್ಲಿ ಬಂದಿರುವಂತೆ ಪುರುಷೋತ್ತಮರೂಪವು –

ಮೇಲಿನ ಬಲಗೈಯಲ್ಲಿ ಪದ್ಮ ; ಕೆಳ ಬಲಗೈಯಲ್ಲಿ ಚಕ್ರ
ಮೇಲಿನ ಎಡಗೈಯಲ್ಲಿ ಶಂಖ; ಕೆಳಗಿನ ಎಡಗೈಯಲ್ಲಿ ಗದೆ ಎಂದು ಚಿಂತಿಸಬೇಕು.

ತ್ರಿವಿಕ್ರಮ ರೂಪವು –
ಕೆಳಗಿನ ಬಲಗೈಯಲ್ಲಿ ಶಂಖ ; ಎಡಗೈಯಲ್ಲಿ ಪದ್ಮ
ಮೇಲಿನ ಬಲಗೈಯಲ್ಲಿ ಚಕ್ರ ; ಎಡಗೈಯಲ್ಲಿ ಗದಾ

ಅಧಿಕಮಾಸ ದಾನ ಸಂಕಲ್ಪ –  ಆಚಮನ, ಪ್ರಾಣಾಯಾಮ , ದೇಶಕಾಲ ಉಚ್ಚಾರಣ, …..  ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಅಸ್ಮತ್ ಗುರುವಂತರ್ಗತ, ಶ್ರೀ ರಾಘವೇಂದ್ರತೀರ್ಥ ಗುರುವಂತರ್ಗತ, ತ್ರಯ: ತ್ರಿಂಶಕ್ ಕೋಟಿ ದೇವತಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಅಸ್ಮತ್ ಕುಲದೇವತಾಭಿನ್ನ ಶ್ರೀ ಆನಂದಾ ಪುರುಷೋತ್ತಮ ಪ್ರೇರಣಯಾ ಶ್ರೀ ಆನಂದಾ ಪುರುಷೋತ್ತಮ ಪ್ರೀತ್ಯರ್ಥಂ, ….. ಗೋತ್ರಸ್ಯ, …. ಶರ್ಮಣ: ಮಮ ಧರ್ಮ – ಅರ್ಥ – ಕಾಮ – ಮೋಕ್ಷ ಪ್ರಾರ್ತ್ಯರ್ಥಂ, ಜ್ಞಾನ, ಭಕ್ತಿ ವೈರಾಗ್ಯ ಸಿದ್ದ್ಯರ್ಥಂ ನಿಖಿಲಪಾಪಕ್ಷಯ ಶಮನ ಪೂರ್ವಕ ಪುತ್ರ, ಪೌತ್ರ, ಧನ, ಧಾನ್ಯ, ಕ್ಷೇಮ ಸಮೃದ್ಧಿ ಲೋಕದ್ವಯ ಸುಖಹೇತು, ಭೂದಾನ್ ಫಲಪ್ರಾಪ್ತೈ ಅಪೂಪ ಛಿದ್ರ ಸಮಸಂಖ್ಯ ವರ್ಷ ಸಹಸ್ರಾವಧಿ ಸ್ವರ್ಲೋಕನಿವಾಸಾದಿ ಫಲ ಸಿದ್ದ್ಯರ್ಥಂ ಅಧಿಕಮಾಸ ಪ್ರಯುಕ್ತ ತ್ರಯ ತ್ರಿಂಶತ್ ಅಪೂಪದಾನಮಹಂ ಕರಿಷ್ಯೇ |

 

ವಿಷ್ಣುರೂಪಿ ಸಹಸ್ರಾಂಶುಃ ಸರ್ವಪಾಪಪ್ರಣಾಶನಃ |
ಅಪೂಪಾನ್ನ ಪ್ರದಾನೇನ ಮಮ ಪಾಪಂ ವ್ಯಪೋಹತು ||
ನಾರಾಯಣ ಜಗದ್ಭೀಜ ಬಾಸ್ಕರ ಪ್ರತಿರೂಪಕ |
ವ್ರತೇನಾನೇನ ಪುತ್ರಾಂಶ್ಚ ಸಂಪದಂ ಚಾಪಿ ವರ್ಧಯ ||
ಯಸ್ಯ ಹಸ್ತೇ ಗದಾ ಚಕ್ರೋ ಗರುಡೋ ಯಸ್ಯ ವಾಹನ: |
ಶಂಖಃ ಕರತಲೇ ಯಸ್ಯ ಸ ಮೇ ವಿಷ್ಣುಃ ಪ್ರಸೀದತು ||
ಕಲಾಕಾಷ್ಠದಿ ರೂಪೇಣ ನೀಮೇಷಘಟಿಕಾದಿನಾ |
ಯೋ ವಂಚಯತಿ ಭೂತಾನಿ ತಸ್ಮೈ ಕಾಲಾತ್ಮನೇ ನಮಃ ||
ಕುರುಕ್ಷೇತ್ರಮಯೋ ದೇಶಃ ಕಾಲಃ ಪರ್ವ ದ್ವಿಜೋಹರಿಃ |
ಪೃಥಿವೀ ಸಮಮಿದಂ ದಾನಂ ಗೃಹಾಣ ಪುರುಷೋತ್ತಮ ||
ಮಲಾನಾಂ ಚ ವಿಶುದ್ಧ್ಯರ್ಥಂ ಪಾಪಪ್ರಶಮನಾಯಚ |
ಪುತ್ರಪೌತ್ರಾದಿವೃಧ್ಯರ್ಥಂ ತೇನ ದಾಸ್ಯಮಿ ಭಾಸ್ಕರ ||
ಇದಂ ಸೋಪಾಸ್ಕರಂ ತ್ರಯಸ್ರ್ತಿಂಶದಪೂಪದಾನಂ ಸದಕ್ಷಿಣಾಕಮ್ ಸತಾಂಬೂಲಮ್  ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಪುರುಷೋತ್ತಮ ಪ್ರೀತಿಂ ಕಾಮಯಮಾನ: ತುಭ್ಯಮಹಂ ಸಂಪ್ರದದೆ ನ ಮಮ ನ ಮಮ | ಅನ್ನ ಅಪೂಪದಾನೇನ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಪುರುಷೋತ್ತಮ ಪ್ರೀಯತಾಂ ಪ್ರೀತೋ ಭವತು ಶ್ರೀಕೃಷ್ಣಾರ್ಪಣಮಸ್ತು | ಎಂದು ಹೇಳಿ ದಾನ ನೀಡಿ ಕೃಷ್ಣಾರ್ಪಣ ಬಿಡಬೇಕು

ಅಪೂಪದಾನಕಾಲದಲ್ಲಿ ಚಿಂತಿಸಬೇಕಾದ ಭಗವದ್ರೂಪಗಳು :

ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಹರಿಂ ಕೃಷ್ಣಮಧೋಕ್ಷಜಂ |
ಕೇಶವಂ ಮಾಧವಂ ರಾಮಂ ಅಚ್ಯುತಂ ಪುರುಷೋತ್ತಮಂ |
ಗೋವಿಂದಂ ವಾಮನಂ ಶ್ರೀಶಂ ಶ್ರೀಕಂಠಂ ವಿಶ್ವಸಾಕ್ಷಿಣಂ |
ನಾರಾಯಣಂ ಮಧುರಿಪುಂ ಅನಿರುದ್ಧಂ ತ್ರಿವಿಕ್ರಮಂ |
ವಾಸುದೇವಂ ಜಗದ್ಯೋನಿಮನಂತಂ ಶೇಷಶಾಯಿನಂ |
ಸಂಕರ್ಷಣಂ ಚ ಪ್ರದ್ಯುಮ್ನಂ ದೈತ್ಯಾರಿ ವಿಶ್ವತೋಮುಖಂ |
ಜನಾರ್ದನಂ ಧರಾವಾಸಂ ದಾಮೋದರಮಘಾರ್ದನಂ |
ಶ್ರೀಪತಿಂ ಚ ತ್ರಯಸ್ತ್ರಿಂಶದುದ್ದಿಶ್ಯ ಪ್ರತಿನಾಮಭಿ: |
ಮಂತ್ರೈರೇತೈಶ್ಚ ಯೋ ದದ್ಯಾತ್ ತ್ರಯಸ್ತ್ರಿಂಶದಪೂಪಕಂ |
ಪ್ರಾಪ್ನೋತಿ ವಿಪುಲಾಂ ಲಕ್ಷ್ಮೀ ಪುತ್ರಪೌತ್ರಾದಿಸಂತತಿಂ |

 

ಅಧಿಕಮಾಸದಲ್ಲಿ ಚಿಂತಿಸಬೇಕಾದ 33 ದೇವತೆಗಳು :
ಅಷ್ಟವಸುಗಳು 8 ; ಏಕಾದಶ ರುದ್ರರು 11 ;
ದ್ವಾದಶಾದಿತ್ಯರು 12; ಪ್ರಜಾಪತಿ 1, ವಷಟ್ಕಾರ 1

ಅಷ್ಟವಸುಗಳು ಹಾಗೂ ಅವುಗಳ ಅಂತರ್ಯಾಮಿ ಭಗವದ್ರೂಪಗಳು*
*1) ದ್ರೋಣ (ವಿಷ್ಣು)*
*2) ಧ್ರುವ (ಜಿಷ್ಣು)*
*3) ದೋಷ (ಮಹಾವಿಷ್ಣು)*
*4) ಅರ್ಕ (ಹರಿ)*
*5) ಅಗ್ನಿ (ಕೃಷ್ಣ)*
*6) ದ್ಯು (ಅಧೋಕ್ಷಜ )*
*7) ಪ್ರಾಣ (ಕೇಶವ )*
*8) ವಿಭಾವಸು (ಮಾಧವ)*
 *ಏಕಾದಶರುದ್ರರು ಹಾಗೂ ಅವುಗಳ ಅಂತರ್ಯಾಮಿ ಭಗವದ್ರೂಪಗಳು.*
*9) ಭೀಮ (ರಾಮ)*
*10) ರೈವತ (ಅಚ್ಯುತ)*
*11) ಓಜ (ಪುರುಷೋತ್ತಮ)*
*12) ಅಜೈಕಪಾತ್ (ಗೋವಿಂದ)*
*13) ಮಹಾನ್ (ವಾಮನ)*
*14) ಬಹುರೂಪ (ಶ್ರೀಶ)*
*15) ಭವ (ಶ್ರೀಕಂಠ)*
*16) ವಾಮದೇವ (ವಿಶ್ವಸಾಕ್ಷೀ)*
*17) ಉಗ್ರ (ನಾರಾಯಣ*
*18) ವೃಷಾಕಪಿ (ಮಧುರಿಪು)*
*19) ಅಹಿರ್ಬುದ್ನಿ (ಅನಿರುದ್ಧ)*
ದ್ವಾದಶಾದಿತ್ಯರು ಹಾಗೂ ಅವುಗಳ ಅಂತರ್ಯಾಮಿ ರೂಪಗಳು .*
*20) ವಿವಾಸ್ವಾನ್ (ತ್ರಿವಿಕ್ರಮ)*
*21) ಅರ್ಯಮ (ವಾಸುದೇವ)*
*22) ಪೂಷಾ (ಜಗದ್ಯೋನಿ)*
*23) ತ್ವಷ್ಟೃ (ಅನಂತ)*
*24) ಸವಿತೃ (ಶೇಷಶಾಯಿ)*
*25) ಭಗ (ಸಂಕರ್ಷಣ)*
*26) ಧಾತೃ (ಪ್ರದ್ಯುಮ್ನ)*
*27) ಪರ್ಜನ್ಯ (ದೈತ್ಯಾರಿ)*
*28) ವರುಣ (ವಿಶ್ವತೋಮುಖ)*
*29) ಮಿತ್ರ (ಜನಾರ್ದನ)*
*30) ಶಕ್ರ (ಧರಾವಾಸ)*
*31) ಉರುಕ್ರಮ (ದಾಮೋದರ)*
*32) ಪ್ರಜಾಪತಿ (ಅಘಾರ್ಧನ)*
*33) ವಷಟ್ಕಾರ (ಶ್ರೀಪತಿ)*

 

ಅಧಿಕಮಾಸದಲ್ಲಿ ವಿಶೇಷ – ಭಾಗವತ ಶ್ರವಣ, ಭಾಗವತ ಪುಸ್ತಕದಾನ, ನಕ್ತಭೋಜನ, ಏಕಭುಕ್ತ, ಉಪೋಷಣ, ಮೌನವ್ರತ, ಅಧ:ಶಯನ, ಆಲವಣವ್ರತ, ನಖಾ-ಕೇಶ ವ್ರತ, ವಿಷ್ಣುಪಂಚಕ, ಧಾರಣಪಾರಣ,  ಅಯಾಚಿತ ವ್ರತ, ತಾಂಬೂಲ ದಾನ, ದೀಪದಾನ, ಅಪೂಪದಾನ, ಫಲದಾನ.

 

*ಅಧಿಕಮಾಸದಲ್ಲಿ ಯಥಾಶಕ್ತಿ ವ್ರತ*

ಇತರ ಮಾಸಗಳಲ್ಲಿ ಮಾಡುವ ಧಾರಣ ಪಾರಣ, ವಿಷ್ಣುಪಂಚಕ, ಏಕಭುಕ್ತ, ಲಕ್ಷಪ್ರದಕ್ಷಿಣ,  ಲಕ್ಷ ನಮಸ್ಕಾರ, ಲಕ್ಷ ದೀಪ, ಇನ್ನಿತರ ವ್ರತಗಳನ್ನು ಅಧಿಕಮಾಸದಲ್ಲಿ ಮಾಡುವುದು ವಿಶೇಷ ಫಲ

ಚಾತುರ್ಮಾಸ್ಯ ಪೂರ್ಣ ಮಾಡಲಾಗದವರು ಈ ಸಲದ ಅಧಿಕ ಮಾಸದಲ್ಲಿ ಸಂಕಲ್ಪ ಪೂರ್ವಕ ಮಾಡಿ ಪುಣ್ಯ ಪಡೆಯಬಹುದು.

ಅಂದರೆ ಈಗ ನಡೆಯುತ್ತಿರುವ ಶಾಖವ್ರತವನ್ನು ಅಧಿಕಮಾಸದಲ್ಲಿ ಮಾಡಿರಿ.

ವಿಷ್ಣು ಪಂಚಕ  –  ವಿಷ್ಣುಪಂಚಕ, ಉಪವಾಸ ಈ ತಿಂಗಳಲ್ಲಿ ಐದು ದಿನ ಅಂದರೆ ಎರಡು ಏಕಾದಶಿ, ಶ್ರವಣ ನಕ್ಷತ್ರ, ಹುಣ್ಣಿಮೆ ಮತ್ತು ಅಮಾವಾಸ್ಯೆ ಮಾಡಬಹುದು.  ಪಾರಣೆಯ ದಿನ ಬ್ರಾಹ್ಮಣ ಸುವಾಸಿನಿಯರಿಗೆ ಯಥಾಶಕ್ತಿ ದಕ್ಷಿಣೆ ಸಹಿತ ದಾನ

*ಧಾರಣಪಾರಣೆ* – ಹರಿಪ್ರೀತಿಗಾಗಿ  ಒಂದು ದಿವಸ ಉಪವಾಸ , ಒಂದು ದಿನ ಭೋಜನ ಈ ವ್ರತವನ್ನು ಆಚರಿಸಬಹುದು.  ಪಾರಣೆಯ ದಿನ ಬ್ರಾಹ್ಮಣ ಸುವಾಸಿನಿಯರಿಗೆ ಯಥಾಶಕ್ತಿ ದಕ್ಷಿಣೆ ಸಹಿತ ದಾನ

*ಏಕಭುಕ್ತ* – ಈ ವ್ರತದಂತೆ ಊಟಕ್ಕೆ ಆಪೋಶನ ತೆಗೆದುಕೊಳ್ಳುವ ಮುನ್ನ ಎಲ್ಲಾ ಪದಾರ್ಥಗಳನ್ನು ಬಡಿಸಿಕೊಂಡು ನಂತರ ಏನನ್ನೂ ಹಾಕಿಸಿಕೊಳ್ಳದೆ ಭುಂಜಿಸುವುದು.

*ಮೌನಭೋಜನ* – ಭೋಜನ ಕಾಲದಲ್ಲಿ ಯಾರೊಂದಿಗೂ ಮಾತನಾಡದೆ, ಟೀವಿ ನೋಡದೆ, ಹರಿನಾಮ ಸ್ಮರಣೆ ಮಾಡುತ ಭುಂಜಿಸುವುದು

*ನಕ್ತ ಭೋಜನ* – ರಾತ್ರಿಯವರೆಗೂ ಉಪವಾಸವಿದ್ದು ಇದ್ದು ರಾತ್ರಿ ಭುಂಜಿಸುವುದು.

ಯಾವುದೇ ವ್ರತ ಮಾಡಿದರೂ ಸಂಕಲ್ಪ ಮಾಡಿ ಮಾಡಬೇಕು

 

*ಅಧಿಕಮಾಸದ ಕಥೆ* :

ಅಧಿಕಮಾಸದ ಕಥೆಯನ್ನು ನಮಗೆ ಶ್ರವಣ ಮಾಡಿಸಿರಿ ಮತ್ತು ಈ ಮಾಸಕ್ಕೆ *ಪುರುಷೋತ್ತಮ ಮಾಸ* ಎಂದು ಏಕೆ ಕರೆಯುತ್ತಾರೆ, ಈ ಮಾಸದಲ್ಲಿ ಮಾಡುವ ದಾನಧರ್ಮಗಳಿಗೆ ಮಹತ್ವ ಏಕೆ, ಮುಂತಾಗಿ ಸೂತಪುರಾಣಿಕರನ್ನು ಋಷಿಗಳು ಎಲ್ಲವನ್ನು ಸವಿಸ್ತಾರವಾಗಿ ಹೇಳಿರಿ ಎಂದೂ ವಿನಂತಿಸಿಕೊಂಡಾಗ, ಸೂತರು ಹೇಳುತ್ತಾರೆ. ಹಿಂದೆ ಶ್ರೀ ಕೃಷ್ಣನು ಧರ್ಮರಾಜನಿಗೆ ಹೇಳಿದ ಕಥೆಯನ್ನೇ ಹೇಳುತ್ತೀನಿ ಕೇಳಿರಿ ಎಂದರು.

ಹಿಂದೆ ಒಮ್ಮೆ ಅಧಿಕಮಾಸವು ತಾನು ಎಲ್ಲ ಮಾಸಗಳಿಗಿಂತ ಕೀಳು ಎಂದು ಭಾವಿಸಿ ವೈಕುಂಠಲೋಕಕ್ಕೆ ಹೋಗಿ ಪಿತಾಂಬರಧಾರಿಯೂ, ಶಂಖ ಚಕ್ರ ಗದಾಪದ್ಮಗಳಿಂದ ಅಲಂಕೃತನಾದ ವೈಕುಂಠಪತಿಗೆ ನಮಸ್ಕರಿಸಿ ತನ್ನ ವ್ಯಥೆ ಹೇಳಿಕೊಂಡಿತು. “ಹೇ ದೇವ ದೇವೋತ್ತಮಾ ವರ್ಷದ ಹನ್ನೆರಡು ತಿಂಗಳುಗಳಲ್ಲಿ ಏನಾದರೊಂದು ಹಬ್ಬ, ವೃತ, ನಿಯಮಗಳು ಇದ್ದು ಪ್ರತಿಯೊಂದಕ್ಕೂ ವಿಶೇಷತೆ ಇದೆ. ನನ್ನ ಮಾಸದಲ್ಲಿ ಒಂದು ಸಂಕ್ರಮಣವು ಇಲ್ಲದೇ ಮಲ ಮಾಸ ಎಂದೂ ಕರೆಸಿಕೊಳ್ಳುತ್ತಿದ್ದೇನೆ. ದೇವಾ ನನ್ನ ಮೇಲೆ ಕರುಣೆ ತೋರು” ಎಂದು ಪ್ರಾರ್ಥನೆ ಮಾಡಿತು. ಅದಕ್ಕೆ ಸಂತೋಷಗೊಂಡ ವೈಕುಂಠಪತಿಯು, ಅಧಿಕಮಾಸದ ರೋದನಕ್ಕೆ ಹೇ ಅಧಿಕ ಮಾಸವೇ ಇದೂ ವೈಕುಂಠ ಲೋಕ. ಇಲ್ಲಿ ಎಲ್ಲರೂ ಸಂತೋಷದಿಂದ ಇರುವರು. ದುಃಖದ ನೆರಳೂ ಇಲ್ಲಿ ಇಲ್ಲ. ಶ್ರೀಹರಿಯು ಹೇಳಿದನು – “ಎಲೈ ಅಧಿಕ ಮಾಸವೇ ಇನ್ನೂ ಮೇಲಿಂದ ನೀನು ದುಃಖಿಸುವ ಕಾರಣ ಇಲ್ಲ. ನಿನ್ನ ಮಾಸದಲ್ಲಿ ಸ್ವತಃ ನಾನೇ ಪುರುಷೋತ್ತಮ ರೂಪದಿಂದ ಇರುವೆ. ಅದಲ್ಲದೇ ನಿನ್ನ ಮಾಸದಲ್ಲಿ ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರು ಅದಲ್ಲದೇ ಪ್ರಜಾಪತಿ ಮತ್ತು ವಷಟ್ಕಾರರು ನಿನ್ನ ಮಾಸಕ್ಕೆ ಅಭಿಮಾನಿಗಳಾಗಿ ಇರುತ್ತಾರೆ.
ನಿನ್ನ ಮಾಸದಲ್ಲಿ ಯಾವ ಮಾನವ ನಮ್ಮೆಲ್ಲರ ಪ್ರೀತಿಗಾಗಿ ದಾನ ಧರ್ಮ ನೇಮ ಆಚರಣೆ ಮಾಡುವನೋ ಅವನಿಗೇ ಉಳಿದ ದಿನಗಳಿಗಿಂತ ಅಧಿಕ ಪುಣ್ಯ ದೊರಕಲಿ. ಎಂದೂ ವೈಕುಂಠಪತಿಯು ಅಧಿಕಮಾಸಕ್ಕೆ ಸಾಂತ್ವನ ಮಾಡಿ ಆ ಮಾಸಕ್ಕೆ ಪುರುಷೋತ್ತಮ ಮಾಸ ಎಂದೂ ಹೆಸರು ಬರಲೆಂದು” ಹಾರೈಸಿ ಕಳಿಸಿದನು.

ಒಮ್ಮೆ ಜ್ಞಾನಿಯೂ ಜಿತೇಂದ್ರಿಯನೂ ಆದ ಕೌಶಿಕನೆಂಬ ಬ್ರಾಹ್ಮಣನೊಬ್ಬನಿದ್ದನು. ಅವನಿಗೆ ಮೈತ್ರೇಯನೆಂಬ ಕಾಮಾಂಧನಾದ ಸುತನಿದ್ದನು. ಒಮ್ಮೆ ಈ ಮೈತ್ರೇಯನು ಒಬ್ಬ ಬ್ರಾಹ್ಮಣನ ಕೊಂದು ಅವನ ಬಳಿಯಿದ್ದದ್ದೆಲ್ಲವನ್ನೂ ಅಪಹರಿಸಿದನು. ಅವನಿಗೆ ಮರಣಾನಂತರ ಬ್ರಹ್ಮಹತ್ಯಾ ದೋಷದಿಂದ ಯಮಲೋಕದಲ್ಲಿ ಘೋರ ನರಕವನ್ನು ಅನುಭವಿಸಿದನು. ಇದನ್ನು ತಿಳಿದ ಅವನ ತಂದೆ ಎಲ್ಲಾ ಶಾಸ್ತ್ರಘ್ನರ ಸಂಪರ್ಕಿಸಿ ಕೊನೆಗೆ ಅಧಿಕಮಾಸ ವ್ರತಾಚರಣೆ ಮಾಡಿ ಸಂಕಲ್ಪಪುರಸ್ಸರವಾಗಿ ಮೂವತ್ತಮೂರು ಅಪೂಪದಾನ ಯಥಾಶಕ್ತಿ ಮಾಡಿದನು. ಇದರಿಂದ ಅವನ ಮಗನಿಗೆ ನರಕ ಶಿಕ್ಷೆಯಿಂದ ವಿನಾಯಿತಿ ಪಡೆದ.
ಅರ್ಥಾತ್ ನಮ್ಮ ಪಾಪ ಪರಿಹಾರ ಮಾಡಿ ಒಳ್ಳೆಯ ಲೋಕ ಪ್ರಾಪ್ತವಾಗುತ್ತದೆ.

 

Adhika Masa is the thirteenth month in a Calender year followed by Lunar Calender,i.e., Chandramana reethya. It is not followed by those who are following Solar Calender, i.e., Sourmaana Reethya.

As per Chandramaana reethya, we have 354 days in a calendar year. But as per Souramana reethya, (Solar Calender) we have 365 days. So, there is a difference of 11 days between Sourmana reethya and Chandramana reethya. So, these extra days difference of 11 days will be added, once in 33 months (32 months, 16 days , and 4 ghalige to be precise) , so that there is extra 29 or 30 days in that particular year. This concept of adding one extra month after every 33 months is known as Adhika Masa.

In states like Karnataka, Andhrapradesh, Gujarat, Maharashtra, etc, the adhika maasa begins on Shudda padya and ends on Amavasya day (New moon day). In North India, Adhika Masa begins on  Bahula Padya, and ends on Hunnime (Full moon day). Whereas in states like Assam, Bengal, Kerala, Tamilnadu, there is no adhika maasa for them, as they are following solar calendar.

Adhika Maasa is applicable for Chandramana followers only.

The lunar calendar is completely synchronizes with the solar calendar in a period of 60 years.

Mathematically speaking a Chandramana Varsha (Lunar calendar = 29.5305 X 12 = 354.366 days) has 354 days, while a Soura Varsha (Solar calendar = 365.2587 days) has 365 days, the difference being 11 days per year.

  • For one year (12 months)        – 11 days
  • For second year (12 months) –  11 days
  • For 8 months ( 8 months)        – 7 ½ days
  • For 16 days & 4 galige            –   ½ days –
  • ——————————————————
  • Total 33 months                    –    30 days
  • ————————————————

“dvaatrimshadbhi: gatai: maasai: dinai: ShOdashabhistatha|

GaTikaanaaM chatuShkENa patatyadhikamaasaka: “ ||

द्वात्रिंशद्भि: गतै: मासै: दिनै: षोदशभिस्तथ।
घटिकानां चतुष्केण पतत्यधिकमासक: ।

ದ್ವಾತ್ರಿಂಶದ್ಭಿ: ಗತೈ: ಮಾಸೈ: ದಿನೈ: ಷೋದಶಭಿಸ್ತಥ|
ಘಟಿಕಾನಾಂ ಚತುಷ್ಕೇಣ ಪತತ್ಯಧಿಕಮಾಸಕ: |

Sankramana during Adhika Masa – During Adhika Masa, there will not be any sankramana. That is why it is said “asankraantamaasOdhimaasa:”.

Note : Normally Adhikamasa will be happening once in 33 months. Sometimes, it may happen in 29 months, 30 months, 31 months, and 35 months also due to the variations in Graha sanchara. That is why it is said in Mahabharatha that the Adhikamasa will be occurring twice in 5 years.

panchamE panchamE varshE dvaumaasaavadhimaasakau |
tEshaam kaalaatirEkENa grahaaNaamatichaarata: |

ಪಂಚಮೇ ಪಂಚಮೇ ವರ್ಷೇ ದ್ವೌಮಾಸಾವಧಿಮಾಸಕೌ |
ತೇಶಾಂ ಕಾಲಾತಿರೇಕೇಣ ಗ್ರಹಾಣಾಮತಿಚಾರತ: |

Further, Adhika maasa will happen when there are two Hunnime or two amaavaasye days during the two sankramanaas.
Purushottama maasa shrestatva – Sri Purushottama is the masa niyamaka for this adhika maasa. That is why it is called as “Purushottama Maasa”.

Other names for Adhika Masa –

“Mala Maasa”, – as Srihari will remove all our sins during this maasa. As this month will be without sankranti, there is no importance of Shubha kaarya like Marriage, Upanayana, Gruhapravesha, etc.

“malimlucha”, –  When there is no sun in a particular month it is termed as “Malimucha”.   There are dwadashadityaru, viz., AruNa, Surya, bhaanu, tapana, indra, ravi, gabhasti, Aryama, hiraNyarEtasa, divaakara, mitra, viShNu will be born in each twelve months. There will be no sun during the thirteenth month. Therefore the works of the Sun will be done by the suryamandala itself.

ಮಾಸೇಷು ದ್ವಾದಶಾದಿತ್ಯಾ: ತಪಂತೇ ಹಿ ಯಥಾಕ್ರಮಂ |
ನಪುಂಸಕೇಧಿಕೇ ಮಾಸಿ ಮಂಡಲಂ ತಪಸೇ ರವೆ ||

मासेषु द्वादशादित्या: तपंते हि यथाक्रमं ।
नपुंसकेधिके मासि मंडलं तपसे रवॆ ॥

maasEShu dvaadashaadityaa: tapaMtE hi yathaakramaM |

napuMsakEdhikE maasi maMDalaM tapasE rave ||

“purushottama maasa” – as Purushottama is the maasa niyamaka. Once Chaturmuka brahmadevaru kept the Saadhane done through Vedokta acharane in one side of a scale and sadhane done done during purushottama maasa. Then the scale weighed more in purushottama sadhane side itself, which clearly explains the importance of Adhika maasa

Duties during Adhika Maasa –

  1. Maasa snaana – Throughout the month, we have to get up early during arunodayakala itself and do the snaana in rivers, and thirthas or atleast in wells. (Even when we are doing the snaana in a Pipeline water supplied by watersupply board, we have to do the chintana of Ganga sankalpa and do it).
  2. Nakta Bhojana – We have to do the fasting till night and do the bhojana only in the night.
  3. Ayachita Vrata – We must not ask anybody anything. We have be yadruchchaalaaba santrupta.
  4. Dharana paarana – One day upavaasa (DharaNa), next day (PaaraNa) – with this 15 days upavasa and 15 days bhojana.
  5. Tambula Daana – During Adhikamasa, if we give tamboola daana to brahmana suvasiniyaru, our dourbhagya will be removed and we will get soubhagya.
  6. Deepa daana – During this month we have to light “Akanda deepa” in the devara mane. We must ensure that the deepa never goes off throughout the day-night.
  7. Apoopa daana – During this month, one has to give apoopadaana of 33 apoopa to brahmana daily. However, we can give more than 33 also, but not less than 33.   If it is not possible to give apoopa daana on all the days, one can give it on any particular day. It must be accompanied by same number of Tamboola (Villedele), and dakshine.   If we are doing on any single day – Shukla dwaadashi, pourNami, Krishna Dwadashi, amavasye, Krishna paksha astami, navami and chaturdashi is preferable. Apoopa must be made up of Rice, jiggery, ghee.   By giving the apoopa daana, we will get the punya equal to pruthvi daana.
  1. Phala daana – Actually apoopa daana is the Best. But we can give daana of Fruits, like mangoes, bananas, etc. Each fruits must have be alongwith 33 tambola villedele, 33 dakshine, etc.
  2. Kamyakarma nishiddha – During Adhka Maasa, Marriage, Upanayana, Gruhapravesha, choula, sanyasa sweekara, annaprashana, – must not be done as these are kaamyakarma. However Homa – Havana done with the intention of pleasing srihari, bhagavatpoojartham it can be done. If we have already started any kaamyakarma prior to adhika maasa, it can be continued, but new karmas not be started.
  3. Shraddhas – Samvatsarika shraddha if it is falling during a month of Adhika maasa, it has to be done in Nija maasa. Eg. Shraaddha falling during Vaishaka Maasa must be done in regular vaishaka maasa and not in Adhika Vaishaka Maasa.
  4. Shraaddhaas – monthly shraadhaas during Adhika Maasa – If one has died in a year and his monthly shraaddha to be done in Adhikamasa apart from regular monthly shraddha.
  5. Chaturmasya – If during Chaturmasya, Adhika maasa comes, then we have to observe Chaturmasya + Adhikamaasa.    If during Shaka vratha adhikamasa comes, Shaka Vratha must be done for two months.
  6. Mahalaya Maasa –   If during Bhadrapada Maasa adhika Maasa, comes, then Mahalaya Paksha to be done in both Adhika and nija Bhadrapada maasa.

33 devatas in apoopadaana

Sl No Devate antaryami roopa
Astavasugalu
1 DrONa VishNu
2. Dhruva Jishnu
3. Dosha MahavishNu
4. Arka Hari
5. Agni Krishna
6. Dyou Adhokshaja
7. PraaNa Keshava
8. Vibhavasu Madhava
Ekadasha Rudraru
9. Bheema Raama
10. Raivata Achyuta
11. Oja Purushottama
12 Ajaikapaat Govinda
13. Mahaan Vamana
14. Bahuroopa ShrIsha
15. Bhava ShrIkanTa
16. Vaamadeva Vishvasaakashi
17. Ugra NaarayaNa
18. VruShaakapi Madhuripu
Ahirbudhni Aniruddha
19. Dwadashadityaru
20. Vivaswaan Trivikrama
21. Aryamaa VaasudEva
22. Poosha JagadyOni
23. tvaShTru AnaMta
24. Savitru Sheshasaayi
25. Bhaga SankarshaNa
26. Dhaatru Pradyumna
27. Parjanya Daityaari
28. VaruNa VishvatOmukha
29. Mitra Janardhana
30. Shakra Dharaavaasa
31. Urukrama Daamodara
32. Prajapathi Agardhana
33. Vashatkara ShrIpati

 

 

Adhikamaasa katha –

Once Lakshmidevi asked Srihari as to how to perform the Adhika Maasa pooja and what are the daanaas to be during Adhikamasa.

Then Srihari told her that he himself is the God for the Adhika maasa with the name Purushottama. What ever punya kaarya lika snaana, japa, homaa will bring akshaya phala.   He also told that those who does not do any punya karya during Adhika Maasa will be getting daaridrya, putrashoka, etc

Those who could not do for the whole month can do it atleast on Krishna paksha Astami, navami, chaturdashi, Dwadashi, pournami, chaturdashi, etc.

Earlier there lived a brahmana by name Kaushika who was a jitendriya. He had a son by name maitreya who was addicted to drinking and was a kamaandha. One day Maitreya went to forest. He killed a brahmana in Sourashtra and snatched all the money with the Brahmin. Because he killed that brahmana, the whole City itself was burnt. As he got brahma hatya dosha, Maitreya was taken by Yamadootharu and was thrown in Krumeekunda. He was in the Hell for more than 10000 years.   After a long period, Kaushika, the father of Maitreya came to know about the same. Kaushika searched all the shruthi – shaastraas and found a remedy for brahmahatya parihara.

He did the Vratha named Adhikamasa Vratha and gave 33 apoopadaana and his son was saved from the Hell.

As such, Adhikamasa vratha, if done with proper anusandhana can remove brahma hatya dosha also

 

 

Leave a Reply

Your email address will not be published.

Sumadhwa Seva © 2022