ಹನುಮದ್ವ್ರತ Hanumadvratha

*ಹನುಮದ್ವ್ರತ Hanumadvratha*

नमस्ते नमस्ते महावायुसूनो । नमस्ते नमस्ते भविष्यद् विधाता ।

नमस्ते नमस्ते महाभीष्टदाता । नमस्ते नमस्तेऽनिशं रामभक्त ।

             \

buddhirbalam yashOdhairyam nirbhayatvam arOgatA 
ajADyam vAkpaTutvancha hanUmat smaraNam BhavEt |
ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾ|
ಅಜಾಡ್ಯಂ ವಾಕ್ಪಟುತ್ವಂಚ ಹನೂಮತ್ ಸ್ಮರಣಂ ಭವೇತ್ |
बुद्धिर्बलं यशोधैर्यं निर्भयत्वं अरोगता ।
अजाड्यं वाक्पटुत्वंच हनूमत् स्मरणं भवेत् ।

Hanumad Vratha Day – Margashira Shudda Trayodashi

################

 

*ಹನುಮದ್ವ್ರತ*

ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾ |

ಅಜಾಡ್ಯಂ ವಾಕ್ಪಟುತ್ವಂಚ ಹನೂಮತ್ ಸ್ಮರಣಂ ಭವೇತ್ |

ಹನುಮಂತ ದೇವರ ಸ್ಮರಣೆಯಿಂದ ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯತ್ವ, ಆರೋಗ್ಯ, ವಾಕ್‌ಪಟುತ್ವ, ಇವೆಲ್ಲವೂ ತಾವಾಗಿಯೇ ಒಲಿದು ಬರುತ್ತವೆ.    ರಾಮಾಯಣದ ಸುಂದರಕಾಂಡ ಮತ್ತು ಯುದ್ಧಕಾಂಡಗಳಲ್ಲಿ ಹನುಮಂತನ ಚಾಕಚಕ್ಯತೆ, ಬಲ, ಧೈರ್ಯ ಎಲ್ಲವೂ ಕಾಣಬರುತ್ತದೆ. ಅವರ ವಾಕ್ಪಟುತ್ವವನ್ನು ಶ್ರೀ ರಾಮಚಂದ್ರನೇ ಹೊಗಳಿದ್ದಾನೆ.

 

ಮನೋಜವಂ ಮಾರುತತುಲ್ಯವೇಗಂ                ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ।                  ವಾತಾತ್ಮಜಂ ವಾನರಯೂತಮುಖ್ಯಂ            ಶ್ರೀರಾಮದೂತಂ ಶರಣಂ ಪ್ರಪದ್ಯೇ ।

ಮನಸ್ಸಿನ ವೇಗಕ್ಕಿಂತ ವೇಗವಾದ, ವಾಯುವಿನ ವೇಗಕ್ಕೆ ಸೋಮವಾರ, ಇಂದ್ರಿಯ ನಿಗ್ರಹವುಳ್ಳ, ಬುದ್ಧಿವಂತರಲ್ಲಿ ವರಿಷ್ಠನಾದ,  ವಾಯುಪುತ್ರನಾದ,  ವಾನರಸೇನೆಗೇ ಮುಖ್ಯವಾದ , ಶ್ರೀರಾಮದೂತನಾದ ಹನುಮಂತನನ್ನು ಶರಣು ಹೋಗುತ್ತೇನೆ.

 

ಹನುಮದ್ವ್ರತವನ್ನು ಮಾರ್ಗಶಿರ ಶುದ್ಧ ತ್ರಯೋದಶಿಯಂದು ಆಚರಿಸಲಾಗುತ್ತದೆ. ಆದರೆ ಕೆಲವರು ತಿಳುವಳಿಕೆಯಿಲ್ಲದೆ ಈ ದಿನವನ್ನು ಹನುಮ ಜಯಂತಿ ಎಂದು ಕರೆಯುತ್ತಾರೆ. ಇದು ತಪ್ಪು. ಹನುಮ ಜಯಂತಿ ಆಚರಣೆ ಚೈತ್ರ ಶುದ್ಧ ಹುಣ್ಣಿಮೆ ಯಂದು ಹನುಮಂತ ಅವತರಿಸಿದ ದಿನವಾದರೆ ಮಾರ್ಗಶಿರ ಶುದ್ದ ತ್ರಯೋದಶಿಯಂದು ಹನುಮದ್ ವ್ರತವನ್ನು ಬ್ರಹ್ಮದೇವರ ಆದೇಶದಂತೆ ದೇವತೆಗಳೂ ಆಚರಿಸಿ, ಪ್ರಖ್ಯಾತಗೊಳಿಸಿದ್ದಾರೆ ..

 

“ಹನುಮದ್ವ್ರತ” ಕಥೆಯನ್ನು ಭವಿಷ್ಯೋತ್ತರ ಪುರಾಣದಲ್ಲಿ ವಿವರಿಸಿದ್ದಾರೆ.

ಒಮ್ಮೆ ಪಾಂಡವರು ಕೌರವರ ದುರಾಸೆ ಮತ್ತು ವಂಚನೆಯಿಂದ ಹನ್ನೆರಡು ವರ್ಷಗಳ ವನವಾಸ ನಿಮಿತ್ತ, ದ್ವೈತವನದಲ್ಲಿದ್ದಾಗ ಅಲ್ಲಿಗೆ ವೇದವ್ಯಾಸರು ಬಂದರು. ಬಂದ ದೇವಶ್ರೇಷ್ಠನನ್ನು ಧರ್ಮರಾಜನು ಶೋಡಷೋಪಚಾರದಿಂದ ಪೂಜಿಸಿದನು. ಪಾಂಡವರ ಯೋಗಕ್ಷೇಮ ವಿಚಾರಿಸಿದ ವೇದವ್ಯಾಸರು ಅವರಿಗೆ ಹಲವು ಉತ್ತಮ ಉಪದೇಶ ನೀಡಿ ಹೇಳುತ್ತಾರೆ – ನಿಮಗೆ ಒಂದು ವಿಶಿಷ್ಟ ವ್ರತವನ್ನು ಹೇಳುತ್ತೇನೆ. ಅದು *ಹನುಮದ್ವ್ರತ* ಎಂಬ ಬಹಳ ಶ್ರೇಷ್ಠವೂ ಫಲದಾಯಕವೂ ಆದ ವ್ರತವೊಂದಿದೆ ಅದರ ಆಚರಣೆಯಿಂದ ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗಿ ನಷ್ಟವಾದ ರಾಜ್ಯ ಪುನರ್ ಪ್ರಾಪ್ತಿಯಾಗುತ್ತದೆ ಎಂದರು. ಆಗ ಧರ್ಮರಾಜನು ಕೇಳುತ್ತಾನೆ – ಆ ವ್ರತವಾವುದು ? ಅದರ ಆಚರಣೆ ಹೇಗೆ ? ಯಾರು ದೇವತೆ? ಹಿಂದೆ ಯಾರು ಯಾರು ಈ ವ್ರತವನ್ನು ಮಾಡಿ ಉದ್ಧಾರವಾಗಿದ್ದಾರೆ ಎಂದನು. ಆಗ ವೇದವ್ಯಾಸರು ಹೇಳುತ್ತಾರೆ – ಈ ವ್ರತದ ಹೆಸರು – ಹನುಮದ್ವ್ರತ – ಇದನ್ನು ಮಾರ್ಗಶಿರ ಶುದ್ಧ ತ್ರಯೋದಶಿ ದಿನ ಆಚರಿಸತಕ್ಕದ್ದು. ಇದರ ದೇವತೆ ವಾಯುವಿನ ಅವತಾರವಾದ ಹನುಮಂತ ದೇವರು. ‌ಭಕ್ತಿ ಶ್ರದ್ಧೆಯಿಂದ ಹನುಮಂತ ದೇವರನ್ನು ಉಪಾಸನೆ ಮಾಡಬೇಕು, ಹಿಂದೆ ಈ ವ್ರತವನ್ನು ಶ್ರೀ ರಾಮಚಂದ್ರನೇ ಮಾಡಿ ತನ್ನ ಭಕ್ತನ ಅನುಗ್ರಹಿಸಿದ್ದ ಎಂದರು.

 

ಒಮ್ಮೆ ಹನುಮಂತ ದೇವರು ಸೂರ್ಯನಿಗೆ ರಾಹುಗ್ರಹಣವಾದ ಸಂದರ್ಭದಲ್ಲಿ ಮೇಲೆ ಹಾರಿದಾಗ, ಸ್ವರ್ಗಾಧಿಪತಿಯು ಸೂರ್ಯನನ್ನು ಹನುಮಂತ ಹಿಡಿಯಬಹುದೆಂದು ಭಾವಿಸಿ, ವಜ್ರಾಯುಧ ಪ್ರಹಾರ ಮಾಡಿದಾಗ, ಹನುಮಂತ ಲೋಕರೀತ್ಯ ಪೆಟ್ಟಾದವನಂತೆ ಕೆಳಗೆ ಬಿದ್ದನು. ಆಗ ವಾಯುದೇವರು ಹನುಮಂತನನ್ನು ಕರೆದುಕೊಂಡು ಒಂದು ಗುಹೆಗೆ ಪ್ರವೇಶಿಸಿದರು. ಆಗ ಪ್ರಪಂಚವೆಲ್ಲ ಉಸಿರಾಟದ ತೊಂದರೆಗೊಳಗಾಯಿತು. ಎಲ್ಲಾ ದೇವತೆಗಳು ಬ್ರಹ್ಮದೇವರನ್ನು ಪ್ರಾರ್ಥಿಸಲು, ಬ್ರಹ್ಮದೇವರು ವಾಯುವಿನ ಬಳಿಗೆ ಬಂದು ನಿನ್ನ ಮಗನಿಗೆ ಯಾವ ಆಯುಧದಿಂದಲೂ ಏನೂ ಆಗುವುದಿಲ್ಲ, ಅವನು ಚಿರಂಜೀವಿಯಾಗುತ್ತಾನೆ, ಮತ್ತು ಮಾರ್ಗಶಿರ ಶುದ್ದ ತ್ರಯೋದಶಿ ದಿನದಂದು *ಹನುಮದ್ ವ್ರತ* ವನ್ನು ಆಚರಿಸಿದವರಿಗೆ ಸಕಲ ಅಭೀಷ್ಟವೂ ಲಭ್ಯವಾಗುವುದು ಎಂದು ವರವನ್ನು ಕೊಟ್ಟಿರುತ್ತಾರೆ.

 

*ಪಾಂಡವರಿಗೆ ವನವಾಸವಾಗಲು ಹನುಮಂತನ ಅವಕೃಪೆ ಕಾರಣ* :

ಹಿಂದೆ ಒಮ್ಮೆ ದ್ರೌಪದಿಯು ಕೃಷ್ಣ ಪರಮಾತ್ಮನ ಅನುಜ್ಜೆಯಂತೆ ಹನುಮದ್ವ್ರತವನ್ನು ಆಚರಿಸಿದ್ದಳು. ವ್ರತವನ್ನಾಚರಿಸಿದ ನಂತರ ತನ್ನ ಕೈಗೆ ದೋರವನ್ನು ಧರಿಸಿದ್ದಳು. ಈ ದೋರವನ್ನು ಗಮನಿಸಿದ ಅರ್ಜುನನು (ಕಲಿಯ ಆವೇಶದಿಂದ) , ನಾನು ಆ ಹನುಮಂತನನ್ನು ನನ್ನ ರಥದ ದ್ವಜಕ್ಕೆ ಕಟ್ಟಿರುವೆ. “ಅವನೊಬ್ಬ ಸಾಮಾನ್ಯ ಮಂಗ ” ಎಂದು ಹೇಳಿ ಆ ದೋರವನ್ನು ಬಿಸಾಡಲು ಹೇಳಿದನು. ಹನುಮಂತ ದೇವರನ್ನು ನೆನೆದರೇ ಬುದ್ಧಿ, ಬಲ, ಯಶಸ್ಸು, ಧೈರ್ಯ, ಎಲ್ಲವೂ ಪ್ರಾಪ್ತವಾಗುತ್ತದೆಂದಾಗ, ಅರ್ಜುನ ಕಲಿ ಪ್ರಭಾವಕ್ಕೊಳಗಾಗಿಯೇ ಅದನ್ನು ಬಿಸಾಡಲು ಹೇಳಿದನು. ಇದೇ ಕಾರಣದಿಂದ ಪಾಂಡವರು ವನವಾಸಕ್ಕೆ ದ್ಯೂತ ನಿಮಿತ್ತ ಹೋಗಬೇಕಾಯಿತು, ಎಂದು ವೇದವ್ಯಾಸರು ಹೇಳಿದಾಗ ದ್ರೌಪದಿಯೂ ಕೂಡ ಆ ಘಟನೆಯನ್ನು ನೆನಪಿಸಿದಳು.

*ಈ ವ್ರತವನ್ನು ಹಿಂದೆ ಯಾರು ಮಾಡಿರುತ್ತಾರೆ* ?

ಹಿಂದೆ ಶ್ರೀ ರಾಮಚಂದ್ರನು, ಹನುಮಂತನಿಗೆ ಅನುಗ್ರಹಿಸಲು, ಹನುಮನ ಪ್ರಾರ್ಥನೆಯಂತೆ ಮಾಡಿದನು. ದ್ರೌಪದಾದೇವಿ ಮಾಡಿದ್ದಳು. ಸುಗ್ರೀವ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಮಾಡಿದ್ದನು. ವಿಭೀಷಣನು ಈ ವ್ರತವನ್ನು ಮಾಡಿ ಲಂಕಾಧಿಪನಾದನು.

 

*ವ್ರತದ ಕ್ರಮ*

ಹನುಮಂತದೇವನನ್ನು ಹದಿಮೂರು ಗ್ರಂಥಿಗಳುಳ್ಳ ಹಳದಿ ವರ್ಣದ ದಾರದಲ್ಲಿ *ಓಂ ನಮೋ ವಾಯುನಂದನಾಯ ಓಂ* ಎಂದು ಆವಾಹಿಸಬೇಕು. ಹನುಮಂತನ ಅಂತರ್ಯಾಮಿಯಾದ ಶ್ರೀರಾಮಚಂದ್ರನನ್ನು ಷೋಡಶೋಪಚಾರಗಳಿಂದ ಅರ್ಚಿಸಿ ನಂತರ ನೈವೇದ್ಯಾದಿಗಳಿಂದ ಪೂಜಿಸಿ ವಾಯನದಾನವನ್ನು ಮಾಡಬೇಕು. ಗೋಧೂಮ (ಗೋಧಿ) ಧಾನ್ಯವನ್ನು ವಾಯನದಲ್ಲಿ ಕೊಡಬೇಕು. ಈ ದಿನ ಹನುಮಂತ ದೇವರನ್ನು ಪೂಜಿಸಿ, ಹದಿಮೂರು ಘಂಟುಗಳುಳ್ಳ ಹನುಮದೋರವನ್ನು ಕಟ್ಟಿಕೊಳ್ಳಬೇಕು

. ಈ ವ್ರತವನ್ನು ಹದಿಮೂರು ವರ್ಷಗಳ ಕಾಲ ಮಾಡಿ ನಂತರ ಉದ್ಯಾಪನೆಯನ್ನು ಮಾಡಬೇಕು. ಈ ವ್ರತವನ್ನು ಮಾರ್ಗಶಿರಮಾಸ ಶುಕ್ಲ ತ್ರಯೋದಶಿಯಂದು ರೋಹಿಣೀ ನಕ್ಷತ್ರವಿರುವಾಗ ಆಚರಿಸಬೇಕು. ಈ ವ್ರತಾಚರಣೆಯನ್ನು ಪೂರ್ವವಿದ್ಧವಾದ (ದ್ವಾದಶಿಯುಕ್ತ) ತ್ರಯೋದಶಿಯಲ್ಲಿ ಮಾಡುವುದು ಪ್ರಶಸ್ತವಲ್ಲ.

 

*ಪಂಪಾ ಪೂಜೆ*

ಹನುಮಂತದೇವರು ಋಷ್ಯಮೂಕಪರ್ವತದಲ್ಲಿ ವಾಸವಾಗಿದ್ದರು. ಋಷ್ಯಮೂಕ ಪರ್ವತದ ಪಂಪಾಪತಿಯಾದ ವಿರೂಪಾಕ್ಷನು ವಾಸವಾಗಿರುವ ಜಾಗೃತ ಸ್ಥಳವಾಗಿದೆ. ಪಂಪಾದೇವಿಯು ತನ್ನ ನಾಮೋಚ್ಛಾರಣ ಮಾತ್ರದಿಂದಲೇ ಪಾಪಗಳನ್ನು ತಿರುವು ಮುರುವು ಮಾಡುವವಳು. ಹನುಮನ ಪೂಜೆಯನ್ನು ಮಾಡುವ ಪೂಜಕನು ಮೊದಲು ಪಂಪಾಸ್ಮರಣೆಯಿಂದ ಪಾಪಗಳನ್ನು ದೂರೀಕರಿಸಿ ನಂತರ ಚಿತ್ತಶುದ್ಧನಾಗಿ ಹನುಮನ ಪೂಜೆಯನ್ನು ಮಾಡಲೆಂದೇ ಪಂಪಾದೇವಿಯ ಪೂಜೆಯನ್ನು ವಿಧಿಸಲಾಗಿದೆ. ಹೀಗೆ ಆವಾಹಿತಳಾದ ಪಂಪಾದೇವಿಯನ್ನು ಷೋಡಶೋಪಚಾರಗಳಿಂದ ಅರ್ಚಿಸಬೇಕು.

 

*ಹನುಮದ್ವ್ರತ ಆಚರಣ ಫಲ* : ಈ ವ್ರತವು ಶೀಘ್ರ ಫಲದಾಯಕ ಮತ್ತು ಮಂಗಳಾಕರ. ಹನುಮದ್ವ್ರತ ಕಥೆಯನ್ನು ಆಲಿಸುವುದರಿಂದ ಇಷ್ಟಾರ್ಥ ಪ್ರಾಪ್ತಿ. ಈ ವ್ರತಾಚರಣೆಯಿಂದ ಬ್ರಾಹ್ಮಣನು ವೇದ ವೇದಾಂತ ಪ್ರಾವೀಣ್ಯತೆ, ಕ್ಷತ್ರಿಯನು ರಾಜ್ಯಲಾಭ, ವೈಶ್ಯರು ಧನ, ಶೂದ್ರರು ಉತ್ತಮ ಬೆಳೆ ಪಡೆಯುವರು. ಪುತ್ರಾರ್ತಿಯು ಪುತ್ರರನ್ನೂ, ಮೋಕ್ಷಾಪೇಕ್ಷಿಯು ಸಾಧನ ಮಾರ್ಗವನ್ನು, ಪಡೆಯುವನು.

ವೇದವ್ಯಾಸರ ಸಲಹೆಯಂತೆ ಪಾಂಡವರೂ ಈ ವ್ರತವನ್ನಾಚರಿಸಿದರು.

 

 

=============================

. ‌‌‌‌

*ದೋರ ಬಂಧನ ಮಂತ್ರ*

ಹನೂಮನ್ ದೋರರೂಪೇಣ ಸಂಸ್ಥಿತೋ ಮೈ ಸರ್ವದಾ |
ಸರ್ವಾಪದ್ಭ್ಯೋ ರಕ್ಷ ರಕ್ಷ ಪ್ರಸೀದ ಕಪಿಪುಂಗವ |

*ಹನುಮದ್ ಅರ್ಘ್ಯಮಂತ್ರ* –

ನಮಸ್ತೇ ವಾಯುಪುತ್ರಾಯ ಧ್ವಂಸಿತಾಮರವೈರಿಣೇ |
ಸುಜನಾಂಬುಧಿಚಂದ್ರಾಯ ಭವಿಷ್ಯತ್ ಬ್ರಹ್ಮಣೇ ನಮ: |
ಶ್ರೀ ಹನುಮತೇ ನಮ: ಇದಮರ್ಘ್ಯಂ ಸಮರ್ಪಯಾಮಿ |

 

*ಹನುಮದ್ವ್ರತಂ*

ಶ್ರೀಗುರುಭ್ಯೋ ನಮ: | ಹರಿ: ಓಂ |   ಆಚಮನ, ಪ್ರಾಣಾನಾಯಮ್ಯ | ದೇಶಕಾಲೌ ಸಂಕೀರ್ತ್ಯ, ಶುಭೇ ಶೋಭನೇ ಮುಹೂರ್ತೇ…… ಸಂವತ್ಸರೇ ಹೇಮಂತಋತೌ ಮಾರ್ಗಶಿರ ಮಾಸೇ ಶುಕ್ಲಪಕ್ಷೇ ತ್ರಯೋದಶ್ಯಾಂ, …. ವಾಸರೇ, …. ಶುಭ ನಕ್ಷತ್ರೆ, ……ಯೋಗೇ, …… ಕರಣೇ…. ಶ್ರೀಮದ್ಧನುಮದಂತರ್ಗತ ಶ್ರೀ ಸೀತಾ ರಾಮಚಂದ್ರ ಪ್ರೇರಣಯ ಹನುಮದಂತರ್ಗತ ಶ್ರೀ ಸೀತಾರಮಚಂದ್ರ ಪ್ರೀತ್ಯರ್ಥ್ಯಂ ಹನುಮದ್ವ್ರತಂ ಕರಿಷ್ಯೇ || ತದಂಗತ್ವೇನ ಪಂಪಾಪೂಜಾಂ ಕರಿಷ್ಯೇ |

ಗಣಪತಿ ಪೂಜೆ , ಕಲಶ ಪೂಜೇ, ಪಂಪಾ ಪೂಜೆ ಮಾಡಬೇಕು.

ಪಂಪಾಪೂಜೆಯಲ್ಲಿ ಆವಾಹನ, ಆಸನಂ, ಅರ್ಘ್ಯಂ, ಪಾದ್ಯಂ, ಆಚಮನ, ಪಂಚಾಮ್ರುತ, ಸ್ನಾನ, ವಸ್ತ್ರಂ, ಗಂಧಂ, ಹರಿದ್ರಾ ಕುಂಕುಮ ಸೌಭಾಗ್ಯಂ, ಪುಷ್ಪಂ, ಸಮರ್ಪಣ ಮಾಡಿ ಅಂಗಪೂಜ, ಧೂಪ, ದೀಪ, ನೈವೇದ್ಯ, ತಾಂಬೂಲ, ಎಲ್ಲವನ್ನು ಪಂಪಾ ಕಲಶಕ್ಕೆ ಮಾಡಬೇಕು.

*ನಂತರ ಹನುಮತ್ಪೂಜ* :

ಮತ್ತೆ ಆಚಮನ, ಪ್ರಾಣಾನಾಯಮ್ಯ, ದೇಶಕಾಲೌ ಸಂಕೀರ್ತ್ಯ, ಶ್ರೀ ಹನುಮದ್ಭೀಮ ಮಧ್ವಾಂತರ್ಗತ ಶ್ರೀ ಸೀತಾಪತಿ ರಾಮಚಂದ್ರ ಪ್ರೇರಣಯ ಶ್ರೀ ಸೀತಾಪತಿ ರಾಮಚಂದ್ರ ಪ್ರೀತ್ಯರ್ಥಂ ಜ್ಜಾನ ಭಕ್ತಿ ವೈರಾಗ್ಯ ಸಿದ್ಧ್ಯರ್ಥಂ ಹನುಮತ್ಪೂಜಾಂ ಕರಿಷ್ಯೇ.

ಕುಂಕುಮೋದಕ ಸಮ್ಮರ್ದಿತ ನೂತನವಸ್ತ್ರಂ ಪಂಪಕಲಶೋಪರಿ ಸಂಸ್ಥಾಪ್ಯ, ತದುಪರಿ ಹರಿದ್ರಾಸವರ್ಣಕಂ ತ್ರಯೋದಶ ಗ್ರಂಥಿಯುಕ್ತಂ ಹನುಮದ್ಧೋರಕದ್ವಯಂ ನ್ಯಸೇತ್ | ತತ್ರೈವ ಪೂಜಂ ಕರ್ತವ್ಯಾ |
(ಕುಂಕುಮದಲ್ಲಿ ಅದ್ದಿದ ಹೊಸವಸ್ತ್ರವನ್ನು ಪಂಪಾಕಲಶದ ಮೇಲಿಟ್ಟು, ಅದರ ಮೇಲೆ ಅರಿಶಿನ ಬಣ್ಣದ ಹದಿಮೂರು ಗ್ರಂಥಿಗಳುಳ್ಳ ದಾರವನ್ನು ಇಟ್ಟು ಪೂಜಿಸಬೇಕು)

ಪೀಠ ಪೂಜೆ, ಪ್ರಾಣ ಪ್ರತಿಷ್ಟೆ, ತತ್ವನ್ಯಾಸ, ಮಾತೃಕಾನ್ಯಾಸ, ಎಲ್ಲವನ್ನೂ ಮಾಡಬೇಕು.

*ನಂತರ ಧ್ಯಾನಂ* :
ಆಂಜನೇಯಂ ವಾಯುಸೂನುಂ ರಾಮಕಾರ್ಯ ಧುರಂಧರಂ |
ಲಂಘಿತಾಬ್ದಿಂ ರಾಕ್ಷಸಾರಿಂ ತಂ ಧ್ಯಾಯಮ್ಯತ್ರ ಸಾದರಂ |
ಹನುಮತೇ ನಮ: | ಧ್ಯಾನಂ ಸಮರ್ಪಯಾಮಿ |

ನಂತರ ಕ್ರಮವಾಗಿ, ಆವಾಹನಂ, ಆಸನಂ, ಪಾದ್ಯಂ, ಅರ್ಘ್ಯಂ, ಆಚಮನಂ, ಮಧುಪರ್ಕಂ, ಅಭ್ಯಂಗಂ, ಪಂಚಾಮೃತಂ, ಸ್ನಾನಂ, ವಸ್ತ್ರಂ, ಉತ್ತರೀಯಂ, ಉಪವೀತಂ, ಗಂಧಂ, ಅಕ್ಷತಾನ್, ಆಭರಣಂ, ಪುಷ್ಪಂ,

ಇವುಗಳೆಲ್ಲವನ್ನೂ ಸಮರ್ಪಣೆ ಮಾಡಬೇಕು.

ಹನುಮದ್ವ್ರತದಂದು ಹದಿಮೂರು ಗ್ರಂಥಿಗಳುಳ್ಳ ದೋರ ಸ್ಥಾಪನೆ ಮಾಡಬೇಕು.
*ಗ್ರಂಥಿಪೂಜ* :

ವಾರನರಕ್ಷಕಾಯ ನಮ: ಪ್ರಥಮಗ್ರಂಥಿಂ ಪೂಜಯಾಮಿ
ರಾಕ್ಷಸಂಹಾರಕಾಯ ನಮ: ದ್ವಿತೀಯ ಗ್ರಂಥಿಂ ಪೂಜಯಾಮಿ
ತೀರ್ಣಸಿಂಧವೇ ನಮ: ತೃತೀಯ ಗ್ರಂಥಿಂ ಪೂಜಯಾಮಿ
ಸೀತಾಶೋಕಹಾರಿಣೇ ನಮ: ಚತುರ್ಥ ಗ್ರಂಥಿಂ ಪೂಜಯಾಮಿ
ರಾಮ ದೂತಾಯ ನಮ: ಪಂಚಮ ಗ್ರಂಥಿಂ ಪೂಜಯಾಮಿ
ಸತತ ಬ್ರಹ್ಮಚಾರಿಣೇ ನಮ: ಷಷ್ಟ ಗ್ರಂಥಿಂ ಪೂಜಯಾಮಿ
ರಾವಣಗರ್ವಾರ್ಪಹರ್ತೇ ನಮ: ಸಪ್ತಮ ಗ್ರಂಥಿಂ ಪೂಜಯಾಮಿ.
ಭವಿಷ್ಯದ್ ಬ್ರಹ್ಮಣೇ ನಮ: ಅಷ್ಟಮ ಗ್ರಂಥಿಂ ಪೂಜಯಾಮಿ
ಅವಿದ್ಯಾ ಸಂಹರ್ತೇ ನಮ: ನವಮ ಗ್ರಂಥಿಂ ಪೂಜಯಾಮಿ
ಭಕ್ತಾಭೀಷ್ಟಪ್ರದಾಯಕಾಯ ನಮ: ದಶಮ ಗ್ರಂಥಿಂ ಪೂಜಯಾಮಿ
ಸಕಲದೇವತಾಸ್ತುತ್ಯಾಯ ನಮ: ಏಕಾದಶ ಗ್ರಂಥಿಂ ಪೂಜಯಾಮಿ
ಜೀವೋತ್ತಮಾಯ ನಮ: ದ್ವಾದಶ ಗ್ರಂಥಿಂ ಪೂಜಯಾಮಿ
ವಾಯುಪುತ್ರಾಯ ನಮ: ತ್ರಯೋದಶ ಗ್ರಂಥಿಂ ಪೂಜಯಾಮಿ

*ಅಂಗಪೂಜಾ* :
ವಾತಾತ್ಮಜಾಯ ನಮ: ಪಾದೌ ಪೂಜಯಾಮಿ
ಅಂಜನಾನಂದನಾಯ ನಮ: ಜಂಘೇ ಪೂಜಯಾಮಿ
ಗಂಧಮಾದನಧಾರಿಣೇ ನಮ: ಕಟಿಂ ಪೂಜಯಾಮಿ
ಸೀತಾಶೋಕವಿನಾಶಕಾಯ ನಮ: ಮಧ್ಯಂ ಪೂಜಯಾಮಿ
ಕಪೀಶ್ವರಾಯ ನಮ: ನಾಭಿಂ ಪೂಜಯಾಮಿ
ಜಗದ್ಧಾತ್ರೇ ನಮ: ಉದರಂ ಪೂಜಯಾಮಿ
ವಿಶಾಲವಕ್ಷಸೇ ನಮ: ಹೃದಯಂ ಪೂಜಯಾಮಿ
ಸುಗ್ರೀವಪ್ರಿಯಾಯ ನಮ: ಕಂಟಂ ಪೂಜಯಾಮಿ
ದಶಾನನಗರ್ವಭಂಜನಾಯ ನಮ: ವಕ್ತ್ರಂ ಪೂಜಯಾಮಿ
ಪಿಂಗಾಕ್ಷಾಯ ನಮ: ನೇತ್ರೇ ಪೂಜಯಾಮಿ
ಸಕಲಾಗಮಸಂಸ್ತು ತಾಯ ನಮ: ಸರ್ವಾಂಗಂ ಪೂಜಯಾಮಿ |

*ಪತ್ರ ಪೂಜಾ*
ವಾತಾತ್ಮಜಾಯ ನಮ: ಪಲಾಶ ಪತ್ರಂ ಸಮರ್ಪಯಾಮಿ
ಅಂಜನಾನಂದನಾಯ ನಮ: ಔದುಂಬರ ಪತ್ರಂ ಸಮರ್ಪಯಾಮಿ
ಸಿಂಧುಲಂಘನಕರ್ತ್ರೇ ನಮ: ಅಶ್ವತ್ಥ ಪತ್ರಂ ಸಮರ್ಪಯಾಮಿ
ಉತ್ಕೃಷ್ಟವಿಕ್ರಮಾಯ ನಮ: ಭೃಂಗರಾಜ ಪತ್ರಂ ಸಮರ್ಪಯಾಮಿ
ಗಂಧಮಾದನಧಾರಿಣೇ ನಮ: ಜಟಾಧರ ಪತ್ರಂ ಸಮರ್ಪಯಾಮಿ
ಸೀತಾಶೋಕವಿನಾಶಕಾಯ ನಮ: ಅಶೋಕಪತ್ರಂ ಸಮರ್ಪಯಾಮಿ
ಕಪೀಶ್ವರಾಯ ನಮ: ಕಪಿತ್ಥಪತ್ರಂ ಪತ್ರಂ ಸಮರ್ಪಯಾಮಿ
ಜಗದ್ಧಾತ್ರೇ ನಮ: ವಟಪತ್ರಂ ಪತ್ರಂ ಸಮರ್ಪಯಾಮಿ
ವಿಶಾಲವಕ್ಷಸೇ ನಮ: ಆಮ್ರ ಪತ್ರಂ ಸಮರ್ಪಯಾಮಿ
ಸುಗ್ರೀವಪ್ರಿಯಾಯ ನಮ: ನಾಗವಲ್ಲೀಪತ್ರಂ ಸಮರ್ಪಯಾಮಿ
ದಶಾನನಗರ್ವಭಂಜನಾಯ ನಮ: ಅಪಾಮಾರ್ಗ ಪತ್ರಂ ಸಮರ್ಪಯಾಮಿ
ಪಿಂಗಾಕ್ಷಾಯ ನಮ: ಕರವೀರಪತ್ರಂ ಪತ್ರಂ ಸಮರ್ಪಯಾಮಿ
ಸಕಲಾಗಮಸಂಸ್ತು ತಾಯ ನಮ: ಪುನ್ನಾಗಪತ್ರಂ ಸಮರ್ಪಯಾಮಿ |

*ಪುಷ್ಪ ಪೂಜಾ*
ವಾನರರಕ್ಷಕಾಯ ನಮ: ಪದ್ಮಪುಷ್ಪಂ ಸಮರ್ಪಯಾಮಿ
ರಾಕ್ಷಸಸಂಹಾರಕಾಯ ನಮ: ಜಾತೀ ಪುಷ್ಪಂ ಸಮರ್ಪಯಾಮಿ
ತೀರ್ಣಸಿಂಧವೇ ನಮ: ಕಲ್ಹಾರ ಪುಷ್ಪಂ ಸಮರ್ಪಯಾಮಿ
ರಾಮದೂತಾಯ ನಮ: ಬಕುಲ ಪುಷ್ಪಂ ಸಮರ್ಪಯಾಮಿ
ಕವಲೀಕೃತಸೂರ್ಯಮಂಡಲಾಯ ನಮ: ಶತ ಪುಷ್ಪಂ ಸಮರ್ಪಯಾಮಿ
ಚಿರಕಾಲ ಜೀವಿತಾಯ ನಮ: ಪುನ್ನಾಗ ಪುಷ್ಪಂ ಸಮರ್ಪಯಾಮಿ
ಸತತ ಬ್ರಹ್ಮಚಾರಿಣೆ ನಮ: ಕರವೀರ ಪುಷ್ಪಂ ಸಮರ್ಪಯಾಮಿ
ರಾವಣಗರ್ವಾಪಹರ್ತ್ರೇ ನಮ: ದತ್ತೂರ ಪುಷ್ಪಂ ಸಮರ್ಪಯಾಮಿ
ಭವಿಷ್ಯದ್ ಬ್ರಹ್ಮಣೇ ನಮ: ಕುಂದ ಪುಷ್ಪಂ ಸಮರ್ಪಯಾಮಿ
ಅವಿದ್ಯಾ ಸಂಹರ್ತ್ರೇ ನಮ: ಮಲ್ಲಿಕಾಪುಷ್ಪಂ ಸಮರ್ಪಯಾಮಿ
ಭಕ್ತಾಭೀಷ್ಟಪ್ರದಾಯಕಾಯ ನಮ: ಮುನಿಪುಷ್ಪಂ ಸಮರ್ಪಯಾಮಿ
ಸಕಲದೇವತಾಸ್ತುತ್ಯಾಯ ನಮ: ಕರ್ಣಿಕಾರಪುಷ್ಪಂ ಸಮರ್ಪಯಾಮಿ

*ಧೂಪಂ* :
ವನಸ್ಪತ್ಯುದ್ಭವೋ ದಿವ್ಯೋ ಗಂದಾಡ್ಯೋ ಗಂದಮುತ್ತಮಂ |
ಆಘ್ರೇಯ ಸರ್ವದೇವಾನಾಂ ಧೂಪೋಽಯಂ ಪ್ರತಿಗೃಹ್ಯತಾಂ |
ಓಂ ಹನುಮತೇ ನಮ: ಧೂಪಮಾಘ್ರಾಪಯಾಮಿ

*ಏಕಾರತಿ*
ಅಜ್ಜಾನತಿಮಿರಚ್ಚೇದಿನ್ ಪ್ರಕಾಶಿತ ದಿಗಂತರ
ದೀಪಂ ಗೃಹಾಣ ದೇವೇಶ ವಾಯುಪುತ್ರ ನಮೋಸ್ತುತೇ |
ಹನುಮತೇ ನಮ: ಏಕಾರ್ತಿಕ್ಯ ದೀಪಂ ದರ್ಶಯಾಮಿ

*ನೈವೇದ್ಯಂ*
ನಾನಾಭಕ್ಷವಿಚಿತ್ರಾನ್ನಂ ಗೋಘ್ರುತಾಕ್ಷಂ ಸುಪಾಯಸಂ | ನಾನಾಶಾಕಸಮಾಯುಕ್ತಂ ನೈವೇದ್ಯಂ ಪ್ರತಿಗೃಹ್ಯತಾಂ | ಹನುಮದಂತರ್ಗತ ಸೀತಾಪತೇ ಶ್ರೀ ರಾಮಚಂದ್ರಾಯ ನಮ: |
ನೈವೇದ್ಯಂ ಸಮರ್ಪಯಾಮಿ | ಹಸ್ತಪ್ರಕ್ಷಾಲನಂ ಸಮರ್ಪಯಾಮಿ | ಮುಖಪ್ರಕ್ಷಲಾನಂ ಸಮರ್ಪಯಾಮಿ | ಕರೋದ್ವರ್ತನಾರ್ಥೇ ಚಂದನಂ ಸಮರ್ಪಯಾಮಿ |

ತಾಂಬೂಲಂ ಸಮರ್ಪಯಾಮಿ
ಸುವರ್ಣದಕ್ಷಿಣಾಂ ಸಮರ್ಪಯಾಮಿ
ನೀರಾಜನಂ ಸಮರ್ಪಯಾಮಿ

ಅಥ ಹನುಮನ್ನೂತನ ದೋರ ಗ್ರಹಣ ಮಂತ್ರ
(ದಾರ ಕಟ್ಟಿಕೊಳ್ಳುವುದು)

ಹನುಮನ್ ದೋರರೂಪೇಣ ಸಂಸ್ಥಿತೋ ಮಯಿ ಸರ್ವದಾ
ಸರ್ವಾಪದ್ಭ್ಯೋ ರಕ್ಷರಕ್ಷ ಪ್ರಸೀದ ಕಪಿಪುಂಗವ|
ನೂತನಂ ದೋರಮಾವಾಹ್ಯ ಯಥಾ ಶಕ್ತ್ಯಾಭಿಪೂಜ್ಯ ಚ |
ಯತೋಽಹಂ ಧೃತವಾನಸ್ಮಿ ಜೀರ್ಣದೋರಮಮುಂ ತ್ಯಜೇ |

ನಂತರ ವಾಯನದಾನ

ನಂತರ ಪ್ರಾರ್ಥನ:

ಬಳಿತ್ಥಾದಿ ತ್ರಯಿವೇದ್ಯ ತ್ರಿರೂಪಾಯ ಮಹಾತ್ಮನೇ |
ಭಕ್ತಾಭೀಷ್ಠಪ್ರದಾಯಾಸ್ತು ನಮಸ್ತೇ ಭಾರತೀಪತೇ |

 

ನಮಸ್ತೇ ಪ್ರಾಣೇಶ ಪ್ರಣತ ವಿಭವಾಯಾವನಿಮಗಾಹ
ನಮಃ ಸ್ವಾಮಿನ್ ರಾಮಪ್ರಿಯತಮ ಹನೂಮಾನ್ ಗುರುಗುಣ |
ನಮಸ್ತುಭ್ಯಂ ಭೀಮ ಪ್ರಬಲತಮ ಕೃಷ್ಣೇಷ್ಟ ಭಗವನ್
ನಮ: ಶ್ರೀಮನ್ ಮಧ್ವ ಪ್ರದಿಶ ಸುದೃಶಮ್ ನೊ ಜಯ ಜಯ |

हनुमानञ्जनसूनुर्वायुपुत्रो महाबलः ।
रामेष्टः फाल्गुनसखः पिङ्गाक्षोऽमितविक्रमः ॥१॥
उदधिक्रमणश्चैव सीताशोकविनाशनः ।
लक्ष्मणप्राणदाताश्च दशग्रीवस्य दर्पहा ॥२॥

ಹನೂಮಾನ್ ಅಂಜನಾಸೂನು: ವಾಯುಪುತ್ರೋ ಮಹಾಬಲ: |
ರಾಮೇಷ್ಟ: ಫಲ್ಗುನ ಸಖ: ಪಿಂಗಾಕ್ಷೋಽಮಿತವಿಕ್ರಮ:
ಉದಧಿಕ್ರಮಣಶ್ಚೈವ ಸೀತಾಶೋಕವಿನಾಶನ: |
ಲಕ್ಷ್ಮಣ ಪ್ರಾಣದಾತಾಶ್ಚ ದಶಗ್ರೀವಸ್ಯ ದರ್ಪಹ: |

hanUmaan aMjanaasUnu: vaayuputrO mahaabala: |
raamEShTa: Palguna sakha: piMgaakShO&mitavikrama: |
udadhikramaNashchaiva sItaashOkavinaashana: |
lakShmaNa praaNadaataashcha dashagrIvasya darpaha: |

   ||  shrI hanumad vrataM saMpUrNaM  ||
          || ಶ್ರೀ ಹನುಮದ್ ವ್ರತಂ ಸಂಪೂರ್ಣಂ ||

The story of Hanumad vratha can be found in Vedavyasa praNIta bhaviShyOttarapuraNa.

This is the Vratha which was told by sakshaat Sri Vedavyasadevaru to Dharmaraja.    Once, Sri Vedavyasaru came to Dwaithavana, during Pandavaas vanavaasa period.  Dharmaraja welcomed Vedavyasa devaru and performed all the poojaa to the Bhagavan.  Sri Vedavyasaru told Dharmaraja that he will now tell the vratha which can fetch back their kingdom. 

Dharmaraja questioned.  What is the name of the vratha?, What are the details?. Who is the devate?,  What is the method/rules of the vratha?  Who had done it before?

After being posed many questions by  Dharmaraja, Vedavyasaru told “The vratha is called as Hanumad Vratha.  By chanting the name of the vratha itself it can remove all the obstacles.  

Why Pandavas had to go to forest?

Sri Vedavyasaru narrated/reminded the story of Draupadi/Arjuna to Pandavaas –

Draupadi had performed this Vratha under the guidance of Sri krishna Paramathma.   Draupadi did the Vratha and was wearing  in her hands  “Dora” (“ದೋರ”) which contained 13 knots – yellow colour thread.  Seeing “dOra” (“ದೋರ”) in her hands Arjuna, with Kalyavesha, told her ”I have tied your monkey (Hanuman) to my chariot’s flag.  He is after all a monkey.  Throw the dOra”.  (“ದೋರ”).  The remembrance of Hanuman itself, we get Buddhi, balam, Yashassu, Dhairya, which,  Arjuna neglected him because of his Kalyavesha.  It is because of this reason that the Pandavaas had to struggle a lot, they had to stay in the forest for 13 years by neglecting the 13 knotted dOra.  Then Draupadi also confirmed the incident of Arjuna neglecting the Hanumad dOra.

Vedavyasaru explained the circumstances which made the importance of Hanumad Vratha-

Hanumantha got the blow from the vajraayudha of Indradevaru, when he tried to catch Raahu affected sun (eclipse).   Though the sun’s heat burnt his face, Hanumantha was obstinate and continued to fly towards, the sun.  Indra, the swargadipathi thought, that the sun may be caught by Hanumantha. So he hit at Hanumantha with his terrible weapon Vajrayudha. Hanumantha fell down and was hurt. His left cheek became swollen.

Some versions says that Hanumantha thought that Sun was a fruit, as he was hungry, he flew to catch it.  (Note – Hanumantha does not have ajnaana.  He can’t think that Sun is a fruit.   He is a sarvajna whether he is in moola roopa or in his avataara roopa).  Hanumantha pretended to have lost his balance and acted as if he is unconscious.  (Indra devaru is very much low when compared to Vayudevaru in Kakshya.  Indra is subject to Kalyavesha, but never in case of  Vayudevaru).  Vayudevaru picked Hanumantha and went inside a cave.

Vayudevaru was angry and he did not come out of the cave and the entire world suffered as no one in the world was able to breath. All the devategalu, approached Brahmadeva, who in turn went to Vayudeva and assured him and that no weapon can kill this boy and that his son Hanumantha will be Chiranjeevi, and he will perform Raamakaarya.  Further Brahmadeva also gave anugraha, that those who perform ‘Hanumad Vratha’ in Abhijin Muhurtha, on Margashira Shudda Trayodashi will succeed in all their endeavours.  This vrata is observed for good health and prosperity.

Who has done it in the past? –

  • Sri Ramachandra himself did the vratha (even though he need not have done any vratha), he did it with the prarthane of Hanuman to make it popular.
  • Draupadi Devi has done this vratha
  • Sugreeva has done and got his istaartha siddhi.
  • By doing this Vibheeshana got Lanka Samrajyadhipatya.

Pooja of Hanuman to be done with Yellow colour items – Yellow flowers, arishina, Yellow vastra, etc

=============

Pooja Vidhana –

We have to chant “Om namO vaayu nandanaaya Om” and do the avaahana of Sri Hanumanta Devaru.   We have to give upayana daana of wheat.  We have to do the pooja of Hanumantaryami Sri Ramachandra with Shodachopachara, archane and naivedya, and vayana daana.  During Margashira Maasa, vibhutiroopa of Srihari is there.

Hanumatpooja- Achamana, Prananayamya,… shubatithou ,…….. nakshatre,  yoge, …… karane… Sri hanumadh antargata Seetapati Sri Ramachandra Preranaya Sri hanumadantargata Seetapati Sri Ramachandra preetyartham Jnaana Bhakti Vairaagyadi siddyartham hanumadvrataanga hanumatpOjaaM kariShyE |  We have to wet vastra in Kumkuma water and place that vastra on Pampa kalasha.  Then we have to do the pooja of Turmeric (arishina) for the doora with 13 granthees.  Then Avahana, Shodashopachara pooja to be done.

Hanuman dora bhandana (“ದೋರ ಬಂಧನ”) mantra

हनूमन् दोररूपेण संस्थितो मै सर्वदा ।
सर्वापद्भ्यो रक्ष रक्ष प्रसीद कपिपुंगव
ಹನೂಮನ್ ದೋರರೂಪೇಣ ಸಂಸ್ಥಿತೋ ಮೈ ಸರ್ವದಾ |
ಸರ್ವಾಪದ್ಭ್ಯೋ ರಕ್ಷ ರಕ್ಷ ಪ್ರಸೀದ ಕಪಿಪುಂಗವ |
hanUman dOrarUpENa saMsthitO mai sarvadaa |
sarvaapadbhyO rakSha rakSha prasIda kapipuMgava |

———————————————————-

hanumad arGyamantra-

namastE vaayuputraaya dhvamsitaamaravairiNE | sujanaambudhichandraaya bhaviShyat brahmaNE nama: |
shrI hanumatE nama: idamarGyam samarpayaami |

हनुमद् अर्घ्यमंत्र

नमस्ते वायुपुत्राय ध्वंसितामरवैरिणे । सुजनांबुधिचंद्राय भविष्यत् ब्रह्मणे नम: । श्री हनुमते नम: इदमर्घ्यं समर्पयामि

————————————-

praarthane – baLitthaadi trayivEdya trirUpaaya mahaatmanE | bhaktaabhIShThapradaayaastu namastE bhaaratIpatE |

बळित्थादि त्रयिवेद्य त्रिरूपाय महात्मने ।
भक्ताभीष्ठप्रदायास्तु नमस्ते भारतीपते
ಬಳಿತ್ಥಾದಿ ತ್ರಯಿವೇದ್ಯ ತ್ರಿರೂಪಾಯ ಮಹಾತ್ಮನೇ |
ಭಕ್ತಾಭೀಷ್ಠಪ್ರದಾಯಾಸ್ತು ನಮಸ್ತೇ ಭಾರತೀಪತೇ |

Hanumad Vratha AcharaNa phala –

  • One who hears the story of Hanumadvratha with devotion will get all desires fulfilled.
  • By performing this vratha, Brahmin will get shastra praaveeNya in Veda Vedaanta; Kshatriyas will get raajya laabha, Vaishyaas will get wealth; shoodra will get good crop.
  • Those who are having diseases will be free from the diseases.
  • Putrapekshi will get good santhaana. Mokshapekshi will get saadhana maarga for moksha.  (MBTN Adhyaaya 1, shloka 78) ವಿಷ್ಣುರ್ಹಿ ದಾತಾ ಮೋಕ್ಷಸ್ಯ ವಾಯುಶ್ಚ ತದನುಜ್ಞಯಾ, विष्णुर्हि दाता मोक्षस्य वायुश्च तदनुज्ञया).
  • This vratha is shIgra phaladaayaka. Gives the result early.
  • || satyaM satyaM puna: satyaM vratamEtat sumaMgalaM || – This vratha is mangalakara.  This is True.

Clarification on Hanumad Vratha/Jayanthi :

Margashira shudda trayodashi is Hanumad Vratha day.  Not Hanumad Jayanthi.      We are seeing many banners by many Hanuman temples that Hanumad Jayanthi will be celebrated.   This is not correct.  This is not jayanthi day.  This is Hanumad Vratha day, which is different from Hanumad Jayanthi.    Hanumad Jayanthi falls on Chaitra Shuddha Hunnime. 

Hanumad Vratha represents the day on which with the Brahma’s wishes, the day to be recognised the worshipping Hanuman with 13 dora vratha. Sri Ramachandra himself did the Vratha for the first time to give importance to Hanuman, Sugreeva, Vibheeshana also did in Tretayuga, followed by Draupadi as per the directions of Sri Krishna, and many have done it in the past.  Hanumad Vratha is observed on Margashira Shukla Trayodashi

Hanumad Jayanthi represents the day on which Hanumantha was born.  Hanumad Jayanthi is observed on Chaitra Hunnime

Many people  call this day as Hanuma Jayanthi.  Because they are not aware of the importance of this day.  As such, this clarification.

Leave a Reply

Your email address will not be published.

Sumadhwa Seva © 2022