Gopala Dasaru

Gopaladasara punyadina – Pushya Krishna ashtami

 

ಭಾ ಎಂದು ವಲಿಸಲು ಭಕುತಿ ಪುಟ್ಟಿಸುವನು ಶ್ರೀಯರಸ ಪಾದದಲಿ
ಎಂದುಚ್ಚರಿಸಲು ಗಂಗಾಜನಕ ಭವತೋಯದಿಂ ತಡಿಗೊತ್ತುವ
ಣ್ಣ ಎಂದುಪಾಸನೆ ಮಾಡುವ ಸುಜನರ ಕಾಯಕ್ಲೇಶವ ಕಳೆದು |
             –  ಶ್ರೀ ವರದಗೋಪಾಲವಿಠಲದಾಸರು

Gopala Dasaru’s house

It is because of Sri Gopaladasaru’s anugraha only that Sri Srinivasacharya became Jagannatha Dasaru and that the great grantha “Harikathamrutasaara” could be written.  

ಆಗತಾದಿತ್ರಿಕಾಲಜ್ಞಂ ಆಗಮಾರ್ಥವಿಶಾರದಂ | ತ್ಯಾಗಭೋಗಸಮಾಯುಕ್ತಂ ಭಾಗಣ್ಣಾರ್ಯಗುರುಂ ಭಜೇ |

“Agataadi trikaalajnaM” –  Sri Gopaladasaru had the siddhi of Gayatri Mantra.   He was well versed in Bhootakaala, Vartamaana kaala, and bhavishyat kaala jnaana with his aparoksha jnaana.  His early life was mostly utilised for telling Bhavishya of the people.

“Agamaartha vishaaradaM” –  Sri Gopaladasaru was well versed in Veda, Upanishat, and shaastra prameya and vedokta mantra siddhi and with this only, he could save the life of Jagannathadasaru.

“tyaaga bhoga samaayuktam” –   He had donated the 40 years of iife to Jagannatha dasaru and he thought that this tyaaga itself is Haripooja.  He was thinking tyaaga and bhoga in the same style. 

“Bhaagannaarya guruM bhajE”  – Sri Gopaladasaru’s birth name is Bhaganna and he was the guru for many many shishyaas.

 

ಗೋಪಪ್ರಕರಸಂಕಾಶಂ ಗೋಪಾಲಾರ್ಚನ ತತ್ಪರಂ |

ಗೋದೇವ ವಂದ್ಯಪಾದಾಬ್ಜಂ ಗೋಪಾಲಾಖ್ಯ ಗುರುಂ ಭಜೇ |

ಭೂಪಾಲನತಪಾದಾಬ್ಜಂ ಪಾಪಾಲಿಪರಿಹಾರಿಣಂ |

ಗೋಪಾಲದಾಸಮೀಡೇಹಂ ಗೋಪಾಲಹರಿದರ್ಶನಂ |

 

आगतादित्रिकालज्ञं आगमार्थविशारदं ।

त्यागभोगसमायुक्तं भागण्णार्यगुरुं भजे ।

भूपालनतपादाब्जं पापालिपरिहारिणं ।

गोपालदासमीडेहं गोपालहरिदर्शनं ।

गोपप्रकरसंकाशं गोपालार्चन तत्परं ।

गोदेव वंद्यपादाब्जं गोपालाख्य गुरुं भजे ।

Agataaditrikaalajnam aagamaarthavishaaradam | tyaagabhOgasamaayuktam bhaagaNNaaryagurum bhajE| gOpaprakarasankaasham gOpaalaarchana tatparam | gOdEva vandyapaadaabjam gOpaalaaKya gurum bhajE | bhUpaalanatapaadaabjam paapaaliparihaariNam | gOpaaladaasamIDEham gOpaalaharidarshanam |

  • Place            –   Uttanoor
  • Janma Naama  –  Bhaaganna
  • Period            –   1722 to 1762 
  • (Born samvatsara Shubhakrut)
  • Place of Birth  –   Mosarukallu
  • (near Devadurga in Rayachur dist)
  • Parents         –      Murari Rayaru  & Venkamma
  • Brahmopadesha –  1727AD
  • Gotra            –      Haritsa Gotra
  • Brothers     –     Rangappa, Seenappa, Dasappa
  • Shishyaru  –  Helavanakatte Giriyamma, Dasappa (Guru Gopala Vittala)
  • Mantra siddi  – Gayatri mantra siddi
  • Amsha       –   Ganesha
  • Met Vijayadasaru – For the first time at Adavani in 1746AD near Mangarayana sannidhana
  • Kuladevate  –  Tirupati Venkatesha
  • His Childhood   –   Spent his childhood in poverty.  Spent time in telling fortune (Jyothishya)
  • Ankita         –    Initially “Venkatakrishna”
  •                  subsequently ” Gopala Vittala” (given by Vijayadasaru)
  • Ankita date      –  14.11.1746 AD
  • Gopaladasaru practiced Brahmacharya throughout his life
  • Donation of jeeva  – Donates 40 years of his life to Sri  Srinivasacharya (Sri Jagannatha dasaru)  as per instructions  of Sri  Vijayadasaru in 1754AD by chanting “Dhanvantari” mantra .  At that time, Sri Gopaladasaru was 33 years old.

  • Famous keerthane– “Rathavanerida raaghavendra”, “Kotta Bidaradali Eshtu Dina Jeevisali” ;“Vairagya maarga Kelu”, “Aava rogavo yenage”, “yenna bhinnapa kelo dhanvantri”,  “mooru namava dharisida”, “baarayya ba ba bhakutara priya”, hyaange maaDalayya hogutide Ayushya

  • He was able to tell the details of 3 past Janmas.
  • He had shown Sun in the midnight to his shishyas.
  • Performed Gayathri Japa for two years under a Vata Vriksha in Sankapur
  • Wrote more than 1000 Keerthanas and Suladis. 
  • Gopaladasaru saved Sri PAnganama Timmannayya (Sri Venugopala Vittaladasaru) from apamrutyu
  • Contemporaries –  Sri Upendra Tirtharu, Sri Vadeendra Tirtharu, Sri Vasudendra Tirtharu, Sri Vasudendra Tirtharu, Sri Varadendra Tirtharu, Sri Satyavijaya Tirtharu, Sri Satyapriya Tirtharu, Sri Satyabodha Tirtharu, Sri Jagannatha Tirtharu, Sri Vyasarajaru, Sri Vijayadasaru, Sri Jagannatha Dasaru, Sri Mohanadasaru, Helavanakatte Giriyamma, Panganaama Timmannayya,  Gadvaala king Soma bhoopaala, etc..
  • He wrote Daaridrya parihaara sulaadi for helping poor vaishnavaas
  • JAgannatha daasaru did the stotra of Gopaladasaru as “gopaaladaasaraaya ninnaya paada ….”
  • Gopaladasru was blessed by Sri Satyabodha Tirtharu
  • GOPALA DASARA KEERTANE – PART I – click

  • GOPALA DASARA KEERTANE – PART II – click

ಗೋಪಾಲದಾಸರಾಯ ನಿನ್ನಯ ಪಾದ
ನಾ ಪೊಂದಿದೆನೋ ನಿಶ್ಚಯ              | ಪ |
ಈ ಪೀಡಿಸುವ ತ್ರಯತಾಪಗಳೋಡಿಸಿ
ಕೈಪಿಡಿದೆನ್ನ ಕಾಪಾಡಿದ ಗುರುರಾಯ    | ಅ.ಪ |
ಘೋರವ್ಯಾಧಿಗಳ ನೋಡಿ ವಿಜಯರಾಯ
ಭೂರಿಕರುಣವ ಮಾಡಿ
ತೋರಿದವರೇ ಉದ್ಧಾರಕರೆಂದಂದಿ-
ನಾರಭ್ಯ ತವಪಾದ ಸೇರಿದೆ ಸಲಹೆಂದು
ಸೂರಿ ಜನಸಂಪ್ರಿಯ ಸುಗುಣೋ-
ದಾರ ದುರುಳನ ದೋಷನಿಚಯವ
ದೂರಗೈಸಿ ದಯಾಂಬುನಿಧೆ ನಿ-
ವಾರಿಸದೆ ಕರಪಿಡಿದಿ ಕರುಣದಿ         | ೧ |
ಅಪಮೃತ್ಯುವನು ತರಿದಿ ಎನ್ನೊಳಗಿದ್ದ
ಅಪರಾಧಗಳ ಮೆರೆದಿ
ಚಪಲಚಿತ್ತನೊಗೊಲಿದು ವಿಪುಲಮತಿಯನಿತ್ತು
ನಿಪುಣನೆಂದೆನಿಸಿದಿ ತಪಸಿಗಳಿಂದಲಿ
ಕೃಪಣವತ್ಸಲ ನಿನ್ನ ಕರುಣೆಗೆ
ಉಪಮೆಗಾಣೆನೊ ಬುಧರಿಂದ ಜಗದಾ-
ಧಿಪನ ಕಿಂಕರನೆನಿಸಿ ಮೆರೆಸುವ        | ೨ |
ಎನ್ನ ಪಾಲಿಸಿದಂದದಿ ಸಕಲಲಪ್ರ-
ಪನ್ನರ ಸಲಹೋ ಮೋದಿ
ಅನ್ಯರಿಗೀಪರಿ ಬಿನ್ನಪಗೈಯೆ ಜ-
ಗನ್ನಾಥವಿಠಲನ ಸನ್ನುತಿಸುವ ಧೀರ
ನಿನ್ನ ನಂಬಿದ ಜನರಿಗೆಲ್ಲಿಯ
ಬನ್ನವೋ ಭಕ್ತಾನುಕಂಪಿ ಶ-
ರಣ್ಯ ಬಂದೆನೋ ಈ ಸಮಯದಿ ಅ-
ಹರ್ನಿಶಿ ಧ್ಯಾನಿಸುವೆ ನಿನ್ನನು           | ೩ |
                    –   ಶ್ರೀ ಜಗನ್ನಾಥದಾಸರು

  • ಪುಷ್ಯ ಬಹುಳ ಅಷ್ಟಮಿ ಉತ್ತನೂರಿನ ಶ್ರೀ ಗೋಪಾಲದಾಸರ ಆರಾಧನ.  ಇವರು ಗಣಪತಿಯ ಅವತಾರ. ಇವರ ಕಾಲ 1722-1762.  ಮೊಸರಕಲ್ಲು ಎಂಬ ಗ್ರಾಮದಲ್ಲಿ ಜನಿಸಿದ ಗೋಪಾಲದಾಸರು, ತಮ್ಮ ಜೀವನಕ್ಕಾಗಿ ಬಹಳ ಬಡತನದಲ್ಲೇ ಕಾಲ ಕಳೆಯುತ್ತಿದ್ದರು.  ಜ್ಯೋತಿಷ್ಯವನ್ನು ಬಹಳ ಚೆನ್ನಾಗಿ ತಿಳಿದಿದ್ದ ಇವರ ಶಕ್ತಿ ಎಷ್ಟಿತ್ತೆಂದರೆ ಯಾರದೇ ಜ್ಯೋತಿಷ್ಯವನ್ನು ಅವರ ಹಿಂದಿನ ಮೂರು ಜನ್ಮದ ವೃತ್ತಾಂತವನ್ನು ಹೇಳುವಷ್ಟು ಸಾಮರ್ಥ್ಯವಿತ್ತು.

    ಶ್ರೀ ಶ್ರೀನಿವಾಸಾಚಾರ್ಯರಿಗೆ (ಜಗನ್ನಾಥದಾಸರಿಗೆ), ಅವರ ಜೀವಿತದ ೪೦ ವರ್ಷಗಳ ಆಯಸ್ಸನ್ನು ಶ್ರೀ ವಿಜಯರಾಯರ ಅಪ್ಪಣೆಯಂತೆ ದಾನವಾಗಿ ನೀಡಿದ ಮಹಾನುಭಾವರು ಶ್ರೀ ಗೋಪಾಲದಾಸರು.  ಒಮ್ಮೆ ಇವರು ತಮ್ಮ ಶಿಷ್ಯರಿಗೆ ಮಧ್ಯರಾತ್ರಿ ತಮ್ಮ ತಪೋಬಲಪ್ರಭಾವದಿಂದ ಸೂರ್ಯನನ್ನು ದರ್ಶನ ಮಾಡಿಸಿದ್ದರು.  ನೂರಾರು ಕೀರ್ತನೆಗಳನ್ನೂ, ಉಗಾಭೋಗಗಳು ಮತ್ತು ಸುಳಾದಿಗಳನ್ನೂ ರಚಿಸಿದ್ದಾರೆ.

    ಇವರ ಪ್ರಮುಖ ಕೀರ್ತನೆಗಳು – ರಥವಾನೇರಿದ ರಾಘವೇಂದ್ರ, ವೈರಾಗ್ಯ ಮಾರ್ಗ ಕೇಳು, ಆವ ರೋಗವೋ ಎನಗೆ ಧನ್ವಂತ್ರಿ, ಬಾರಯ್ಯ ಬಾ ಬಾ ಬಕುತರ ಪ್ರಿಯ, ಎನ್ನ ಭಿನ್ನಪ ಕೇಳೋ ಧನ್ವಂತ್ರಿ ದಯಮಾಡೊ, ಹ್ಯಾಂಗೆ ಮಾಡಲಯ್ಯ ಹೋಗುತಿದೆ ಆಯುಷ್ಯ, ಇತ್ಯಾದಿ ಕೀರ್ತನೆಗಳು.

    ಇವರು ಉತ್ತನೂರಿನಲ್ಲಿ ಪುಷ್ಯ ಬಹುಳ ಅಷ್ಟಮಿ ತಮ್ಮ ಕೊನೆಯುಸಿರೆಳೆದರು

*||ಲೇಸಾಗಿ ಭಜಿಸುವೆ ಗೋಪಾಲ ದಾಸರ||*

✍️ಒಮ್ಮೆ ಶ್ರೀ ಭಾಗಣ್ಣದಾಸರು ತಮ್ಮ ಸಹೋದರರಾದ ಶ್ರೀ ಶೀನಪ್ಪದಾಸರನ್ನು ಕರೆದು *”ಶೀನಪ್ಪಾ! ನೀನು ಕಂಚಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಇರುವ ಶ್ರೀ ವರದರಾಜ ಸ್ವಾಮಿಯ ಸೇವೆಯನ್ನು ಮಾಡಿ ಅವನ ಅನುಗ್ರಹವನ್ನು ಹೊಂದಿ ಬಾ”* ಎಂದು ಕಳುಹಿಸಿದರು. ತಕ್ಷಣ ಶೀನಪ್ಪದಾಸರು ಅಣ್ಣನ ಮಾತಿನಂತೆ ಕಂಚಿ ಕ್ಷೇತ್ರಕ್ಕೆ ಆಗಮಿಸಿ *ಶ್ರೀ ವರದರಾಜ ಸ್ವಾಮಿಯ ಸುಂದರ ಮೂರುತಿಯನ್ನು ನೋಡಿ ಬಹು ವಿಧವಾಗಿ ವರ್ಣನೆ ಮಾಡುತ್ತಾರೆ..*.

ತಕ್ಷಣವೇ ಒಂದು ಕೃತಿಯನ್ನು ರಚನೆ ಮಾಡಿ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡುತ್ತಾ ಇರುವಾಗ ಅಲ್ಲಿ ಇದ್ದ ಅರ್ಚಕರು ಶ್ರೀ ವರದರಾಜನಿಗೆ ಮಂಗಳಾರತಿ ಮಾಡಲು ಆರಂಭಿಸಿದರು.

*ಆಚಾರ್ಯರು ಅಚಾತುರ್ಯವಾಗಿ ಅಂದು ದೇವರ ದೀಪವನ್ನು ಸ್ವಾಮಿಯ ವಿಗ್ರಹ ಸಮೀಪ ಇಟ್ಟುಬಿಟ್ಟಿದ್ದರಿಂದ ದೇವದೇವನಿಗೆ ಉಡಿಸಿದ ವಸ್ತ್ರಕ್ಕೆ ದೀಪ ಸೋಕಿ ಬೆಂಕಿ ಹತ್ತಿಕೊಂಡಿತು..*

ಇದೇ ವೇಳೆಗೆ

*ವೇಣಿಸೋಮಾಪುರದಲ್ಲಿ ಶ್ರೀ ಗೋಪಾಲದಾಸರು ತಮ್ಮ ಸಹೋದರರ ಹಾಗು ಶಿಷ್ಯ ಜನರ ಜೊತೆಯಲ್ಲಿ ತುಂಗಭದ್ರಾ ನದಿಯಲ್ಲಿ ಮಿಂದು ಆಹ್ನೀಕಕ್ಕೆ ಕುಳಿತಿದ್ದರು.*.

*ಮುಸುಕು ಇಟ್ಟು ಜಪ ಮಾಡುತ್ತಾ ಇದ್ದ ಶ್ರೀ ಗೋಪಾಲ ದಾಸರು ತಕ್ಷಣ ಮುಸುಕು ತೆಗೆದು ಹಸನ್ಮುಖರಾಗಿ ತಮ್ಮ ಎರಡು ಕೈಗಳನ್ನು ಉಜ್ಜತೊಡಗಿದರು..*.

*ಒಂದೆರಡು ನಿಮಿಷಗಳ ನಂತರ ಮತ್ತೆ ಮುಸುಕು ಹೊದ್ದುಕೊಂಡು ಜಪ ಮಾಡಲು ಆರಂಭಿಸಿದರು..*

*ಇತ್ತ ಕಂಚಿಯಲ್ಲಿ ಶೀನಪ್ಪ ದಾಸರು ನೋಡುತ್ತಾರೆ..!!*. *ಅವರ ಎದುರುಗಡೆ ಶ್ರೀ ಗೋಪಾಲದಾಸರು ಬಂದು ನಿಂತು ಬೆಂಕಿ ಹತ್ತಿದ ವಸ್ತ್ರಕ್ಕೆ ತಮ್ಮ ಎರಡು ಕೈಗಳಿಂದ ಅದನ್ನು ಉಜ್ಜಿ ಆರಿಸಿದ್ದನ್ನು ಕಂಡರು..*.

*ಬಹಳ ಸಂತೋಷ ಮತ್ತು ಆಶ್ಚರ್ಯದಿಂದ ಅಣ್ಣಾ!!ಭಾಗಣ್ಣಾ!!ಅಂತ ಕರೆಯುವ ಒಳಗಡೆ ದಾಸರು ಮಾಯವಾಗಿದ್ದರು..*.

ನಂತರ ಅಲ್ಲಿ ಸೇವೆಯನ್ನು ಮುಗಿಸಿಕೊಂಡು ಉತ್ತನೂರಿಗೆ ಬಂದು ಉಳಿದ ಸಹೋದರರಿಗೆ ಭಾಗಣ್ಣ ಬಂದು ದೇವರ ವಸ್ತ್ರಕ್ಕೆ ಹತ್ತಿದ ಬೆಂಕಿ ಆರಿಸಿದ ಘಟನೆಯನ್ನು ಹೇಳುತ್ತಾರೆ.

ಇದನ್ನು ಎಲ್ಲವನ್ನೂ ನೋಡಿದ ಮತ್ತು ಕೇಳಿದ ಜನ ದಾಸರ ಬಳಿಗೆ ಬಂದು ಬಹು ಭಕ್ತಿಯಿಂದ ಅವರಿಗೆ ನಮಸ್ಕಾರ ಮಾಡುತ್ತಾರೆ.

*ತುಂಗಭದ್ರಾ ತಟದಲ್ಲಿ ಕುಳಿತ ಶ್ರೀ ಗೋಪಾಲ ದಾಸರಿಗೆ ಕಂಚಿಯಲ್ಲಿ ಶ್ರೀ ವರದರಾಜ ಸ್ವಾಮಿಯ ವಸ್ತ್ರ ದೀಪ ಸೋಕಿ ಉರಿಯತೊಡಗಿದಾಗ ಅಲ್ಲಿ ಹೋಗಿ ಅದನ್ನು ನಂದಿಸಿಬಂದದ್ದು..*

ಮತ್ತು *ಇನ್ನೊಂದು ರೂಪದಿಂದ ಅಲ್ಲಿ ಕುಳಿತು ಜಪ ತಪಗಳನ್ನು ಮಾಡುತ್ತಾ ಕುಳಿತುಇರುವುದು*  ಇವು ದಾಸರ ಸಿದ್ದಿಸಾಧನೆಯನ್ನು ತೋರಿಸುತ್ತದೆ.

 

ಇಂತಹ ಮಹಿಮೆಯನ್ನು *ಭಗವಂತನ ಅನುಗ್ರಹದಿಂದ ತೋರಿಸಿದ ಶ್ರೀ ಗೋಪಾಲದಾಸರನ್ನು ಅವರ ಸಹೋದರರು ಈ ರೀತಿಯಲ್ಲಿ ಸ್ತೋತ್ರ ಮಾಡುತ್ತಾರೆ..*.

 

*ವಸುಧಿಪತಿ ಕಂಚಿ ವರದ ರಾಜನ ವಸನ ದೀಪಕೆ ಸೋಂಕಲು*|

*ಮುಸುಕು ತೊರೆದು ತುಂಗ ನದಿಯಲು ನಸು ನಗುತಲದವರೆಸಲು*||

🙏ಶ್ರೀ ಕೃಷ್ಣಾರ್ಪಣಮಸ್ತು🙏

 

1 Comment

Add a Comment
  1. looking for lyrics of one song written by gopala dasaru , the beginning lines are sharanu hariye sharanu ragre sharanu hanuma bheema madhwa, durve nimma charanakamala …. namisuve……..
    please if your can get the complete lyrics send it thorough email.

    thanks

Leave a Reply

Your email address will not be published.

Sumadhwa Seva © 2022