Varamahalaxmi

SHRAVANA SHUDDA Shukravara prior to Hunnime 

ಪದ್ಮಪ್ರಿಯೆ ಪದ್ಮಿನಿ ಪದ್ಮಹಸ್ತೇ ಪದ್ಮಾಲಯೆ ಪದ್ಮದಲಾಯತಾಕ್ಷೆ |
ವಿಶ್ವಪ್ರಿಯೆ ವಿಷ್ಣುಮನೋsನುಕೂಲೆ
ತ್ವತ್ಪಾದ ಪದ್ಮಂ ಮಹಿಸನ್ನಿದಸ್ತ್ವಂ |

Click here:

DEVARANAMAGALU ON MAHALAXMI DEVI

 

Click here:

Pooja Vidhana

Click for sankshipta pooja vidhana.   (For detailed pooja vidhana please follow book by Chaturvedi Vedavyasachar or Bemmatti Venkatechar)

 

I have given herewith the brief Pooja vidhana of Varamahalakshmi.   Please also find attached various devaranamagalu on lakshmi deviyaru.

 

Please note –  While doing the pooja of Sri mahalakshmi some have the habit of doing pooja of only Lakshmi devi.   But please note Srimahakshmi will not come at all, if you invite her alone  for the pooja.  You have to invite and do the pooja of Mahalakshmi alongwith Srihari.  Then only she will bless instead if you only invite Lakshmi, she may curse you.

Doing the chintana of Lakshmi without her husband will result in sin.

 

 

ಮಹಾಲಕ್ಷ್ಮಿಯು ಶ್ರೀಮನ್ನಾರಾಯಣನ ಪ್ರತಿಯೊಂದು ಅವತಾರದಲ್ಲೂ ತಾನೂ ಅವತರಿಸಿ ಪರಮಾತ್ಮನ ಸೇವೆ ಮಾಡಿದ್ದಾಳೆ. ಪರಮಾತ್ಮನ ಋಷಭಾವತಾರದಲ್ಲಿ ಜಯಂತಿ ಎಂಬ ಹೆಸರಿನಿಂದಲೂ, ಮುಂದೆ ಭಾರ್ಗವಿಯಾಗಿ ಭೃಗು ಋಷಿ ಮತ್ತು ಖ್ಯಾತಿ ದಂಪತಿಗಳಲ್ಲೂ, ಸಮುದ್ರತನಯೆಯಾಗಿ ಸಮುದ್ರಮಥನ ಕಾಲದಲ್ಲಿ ಅವತರಿಸಿದ್ದಾಳೆ.

 

ಹಾಗೆಯೇ ಪರಮಾತ್ಮನ ದಶಾವತಾರಗಳಲ್ಲಿ ಮತ್ಸ್ಯಾವತಾರದಲ್ಲಿ ವೇದಾ , ಕೂರ್ಮಾವತಾರದಲ್ಲಿ ವೇದಾವತಿ, ವರಾಹಾವತಾರದಲ್ಲಿ ಧರಿಣಿ/ಧಾತ್ರಿ, ನರಸಿಂಹಾವತಾರದಲ್ಲಿ ನೇರವಾಗಿ ಲಕ್ಷ್ಮೀಯಾಗಿ ಬಂದಳು, ವಾಮನಾವತಾರದಲ್ಲಿ ಸುಖಾ, ಪರಶುರಾಮಾವತಾರದಲ್ಲಿ ಹರಿಣಿಯಾಗಿ,

ರಾಮಾವತಾರದಲ್ಲಿ ಸೀತೆಯಾಗಿ, ಕೃಷ್ಣಾವತಾರದಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆಯಾಗಿ, ಬುದ್ಧಾವತಾರದಲ್ಲಿ ರೇವತಿ ಮತ್ತು ಕಲ್ಕಿ ಅವತಾರದಲ್ಲಿ ಪ್ರಭಾ ಎಂಬ ಹೆಸರಿನಿಂದ ಲಕ್ಷ್ಮೀದೇವಿ ಶ್ರೀಹರಿಯ ಸೇವೆ ಮಾಡಿದ್ದಾಳೆ

 

*ವರಮಹಾಲಕ್ಷ್ಮಿ ಹಬ್ಬ ಆಚರಣೆ ಎಂದು* ?

ಬೇರೆ ವ್ರತಗಳಂತೆ ಈ ಹಬ್ಬಕ್ಕೆ ಯಾವುದೇ ನಿರ್ದಿಷ್ಟ ತಿಥಿಯಿಲ್ಲ. ಶ್ರಾವಣ ಶುಕ್ಲ ಪಕ್ಷದ ಹುಣ್ಣಿಮೆಯ ಸಮೀಪದ ಶುಕ್ರವಾರ. ಅಂದರೆ ಸಾಮಾನ್ಯವಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರ ಅಥವಾ ಮೂರನೇ ಶುಕ್ರವಾರ ಈ ವ್ರತವನ್ನು ಆಚರಿಸುವ ಸಂಪ್ರದಾಯ.

 

ವರಮಹಾಲಕ್ಷ್ಮಿ ಪೂಜೆಗೆ ಬೇಕಾದ ಸಾಮಗ್ರಿಗಳು: ಅರಿಶಿನ, ಕುಂಕುಮ, ಮಂತ್ರಾಕ್ಷತೆ, ಕಳಶ, ಕಳಶಕ್ಕೆ ವಸ್ತ್ರ, ವಿಳ್ಳೆದೆಲೆ ಅಡಿಕೆ, ಪುಷ್ಪಗಳು, ದವನ, ಮರುಗ ಮೊದಲಾದ ಪತ್ರಗಳು, ದೋರ , ಮುಖವಾಡ, ಕಿವಿಯೋಲೆ, ಮೂಗುತಿ, ಕಾಲುಂಗುರ, ಬಳೆ, ಗೆಜ್ಜೆ ವಸ್ತ್ರ, ಮೊರದ ಬಾಗಿನ, ಕಾಡಿಗೆ, ಮಂಗಳಾರತಿ ಬತ್ತಿ , ಕರ್ಪೂರ, ತೆಂಗಿನಕಾಯಿ, ಹಣ್ಣುಗಳು, ಯಥಾಶಕ್ತಿ ದಕ್ಷಿಣೆ, ಉಪಾಯನದಾನಕ್ಕೆ ಬೇಕಾದ ಪದಾರ್ಥಗಳು, ಪಂಚಾಮೃತಕ್ಕೆ ಬೇಕಾದ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಇತ್ಯಾದಿ.

 

ಅಭ್ಯಂಜನ ಮಾಡಿಕೊಂಡು ತುಳಸಿ ಪೂಜೆ ಮಾಡಿ, ಗುರುಮಂತ್ರ ಪಠಿಸಿ, ಹೊಸ ವಸ್ತ್ರವ ಧರಿಸಿ, ಪತಿಯೊಂದಿಗೂ, ಇಷ್ಟಭಾಂಧವರೊಂದಿಗೂ ವರಮಹಾಲಕ್ಷ್ಮಿ ಹಬ್ಬ ಆಚರಿಸಬೇಕು.

ಅಷ್ಟಲಕ್ಷ್ಮಿ ಆರಾಧನೆ ಮಾಡಬೇಕು – ಮಹಾಲಕ್ಷ್ಮಿಯ ಅಷ್ಟಲಕ್ಷ್ಮಿ ರೂಪಗಳು – ಆದಿಲಕ್ಷ್ಮೀ , ಧನಲಕ್ಷ್ಮಿ, ಧಾನ್ಯಲಕ್ಷ್ಮೀ, ಧೈರ್ಯ ಲಕ್ಷ್ಮಿ, ಗಜಲಕ್ಷ್ಮಿ, ಸಂತಾನ ಲಕ್ಷ್ಮಿ, ವಿಜಯಲಕ್ಷ್ಮಿ, ಮತ್ತು ವಿದ್ಯಾಲಕ್ಷ್ಮಿ.

 

ಪೂಜೆ ಮಾಡುವ ಸ್ಥಳವನ್ನು ಸೆಗಣಿ ಹಾಕಿ ಸಾರಿಸಿ, ರಂಗೋಲಿ ಹಾಕಿ, ಮಾವಿನ ಸೊಪ್ಪು, ತಳಿರು ತೋರಣಗಳಿಂದ ಅಲಂಕೃತಗೊಳಿಸಿ, ಅಷ್ಟದಳ ಪದ್ಮವ ಬರೆದು, ಅದರ ಮೇಲೆ ಲಕ್ಷ್ಮಿಯನ್ನು ಕೂಡಿಸಬೇಕು.

 

ಮೊದಲು ಆಚಮನ, ನಂತರ ಅಂದಿನ ಸಂಕಲ್ಪವನ್ನು ಹೇಳಿಕೊಳ್ಳಬೇಕು –  ದೇವಕಾಲಾದಿ ಹೇಳಿಕೊಂಡು, ಕ್ಷೇಮ ಸ್ಥೈರ್ಯ, ವಿಜಯ ವೀರ್ಯ ಆಯುರಾರೋಗ್ಯ ಅಭಿವೃದ್ಧ್ಯರ್ಥಂ, ಚತುರ್ವಿಧ ಪುರುಷಾರ್ಥ ಸಿದ್ಧ್ಯರ್ಥಂ, ಪುತ್ರಪೌತ್ರಾಭಿವೃದ್ಧ್ಯರ್ಥಂ, ಸಮಸ್ತ ದುರಿತೋಪಕ್ಷಯಾರ್ಥಂ, ಜ್ಞಾನ ಭಕ್ತಿ ವೈರಾಗ್ಯ ಸಿದ್ದ್ಯರ್ಥಂ, ಅಖಂಡ ಸೌಭಾಗ್ಯ ಪ್ರಾಪ್ಯರ್ಥಂ, ಅಸ್ಮತ್ ಪತ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನಾರಾಯಣ ಪ್ರೀತ್ಯರ್ಥಂ ಎಂದು ಹೇಳಿ ಪರಮಾತ್ಮನ ಎಡತೊಡೆಯ ಮೇಲೆ ಲಕ್ಷ್ಮೀ ಕುಳಿತಿದ್ದಾಳೆಂದು ಅನುಸಂಧಾನ ಮಾಡಿ ಪೂಜೆಯನ್ನೂ ಮಾಡಬೇಕು.

 

ಪತ್ನಿಯು ದೀಪವನ್ನು ಹಚ್ಚಿ, ಪತಿಯು ಘಂಟಾನಾದ ಮಾಡಿ,  ಮಂಟಪದಲ್ಲಿ ಬಾಳೆ ಎಲೆಯ ಮೇಲೆ ಬೆಳ್ಳಿಯ / ತಾಮ್ರದ ಹರಿವಾಣವಿಟ್ಟು, ಅದರ ಮೇಲೆ ಅಕ್ಕಿಯನ್ನು ಹರಡಿ, ಕಲಶ ಕೂಡಿಸಿ, ಲಕ್ಷ್ಮೀದೇವಿಯನ್ನು ದೇವರನಾಮಗಳಿಂದ ಆಹ್ವಾನಿಸಬೇಕು.

 

ಮೊದಲು ವಿಘ್ನೇಶ್ವರನ ವಿಗ್ರಹವಾಗಲೀ ಒಂದು ಅಡಿಕೆಯಲ್ಲಾಗಲೀ , ಅಥವಾ ಅರಿಶಿನ ಗಣಪತಿಯನ್ನಾಗಲೀ ಷೋಡಚೋಪಚಾರದಿಂದ ಪೂಜಿಸಿ, ಯಾವುದೇ ವಿಘ್ನ ಬರದಂತೆ ಕೋರಬೇಕು.

 

ಪತಿಯು ಕಲಶ ಪ್ರತಿಷ್ಠಾಪನೆ ಮಾಡಿ ಅವಾಹನೆಯನ್ನು ಮಾಡಿ ಸನ್ನಿಧಾನ ತರಬೇಕು. ದೇವರಿಗೆ ಹೊಸ ಆಭರಣಗಳಿಂದ ಅಲಂಕರಿಸಬೇಕು, ಇಲ್ಲದಿದ್ದರೆ ತಾವು ಧಾರಣೆ ಮಾಡಿದ ಒಡವೆಗಳನ್ನು ಹಾಲಿನಲ್ಲಾಗಲೀ, ಅರಿಶಿನದ ನೀರಿನಲ್ಲಾಗಲೀ ನೆನೆಸಿ ತೊಳೆದು ದೇವರಿಗೆ ಸಮರ್ಪಿಸಿ ನಂತರ ಲಕ್ಷ್ಮಿಗೆ ಸಮರ್ಪಿಸಬೇಕು. ಲಕ್ಷ್ಮೀ ದೇವಿಗೆ ತಾವರೆ ಹೂವು, ಮಲ್ಲಿಗೆ ಹೂವು, ಗುಲಾಬಿ ಹೂವು ಮುಂತಾದ ಸುವಾಸಿತ ಪುಷ್ಪಗಳಿಂದ ಅಲಂಕರಿಸಬೇಕು. ಪರಿಮಳ ರಹಿತ ಪುಷ್ಪ ಉಪಯೋಗಿಸಬಾರದು.

 

.

 

 

 

 

*ಹೆಜ್ಜೆಯ ಮೇಲೆ ಹೆಜ್ಜೆಯನ್ನಿಕ್ಕುತ್ತಾ ಬಾರಮ್ಮ* – *ಲಕ್ಷ್ಮೀ ಬಾರಮ್ಮ*

ಪುರಂದರದಾಸರು ತಮ್ಮ ಲಕ್ಷ್ಮೀ ದೇವಿಯ ಕುರಿತಾದ ದೇವರನಾಮ
ಭಾಗ್ಯದ ಲಕ್ಷ್ಮಿ ಬಾರಮ್ಮ ಕೃತಿಯಲ್ಲಿ

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ |
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ |
ಎಂದಿದ್ದಾರೆ. ಇಲ್ಲಿ ಒಂದು ಪ್ರಶ್ನೆ ಬರುತ್ತದೆ. “ಹೆಜ್ಜೆಯ ಮೇಲೆ ಹೆಜ್ಜೆಯನು ಇಟ್ಟರೆ” ಮುಂದೆ ಹೋಗುವುದು ಹೇಗೆ ?. ಲಕ್ಷ್ಮೀದೇವಿ ತನ್ನ ಹೆಜ್ಜೆಯ ಮೇಲೆ ಹೆಜ್ಜೆಯ ಇಡುವುದಿಲ್ಲ. ಬದಲಾಗಿ ಪರಮಾತ್ಮನ ಅನುಸರಿಸಿ ಅವನು ಹೆಜ್ಜೆಯನು ಇಟ್ಟ ಕಡೆ ತನ್ನ ಹೆಜ್ಜೆಯನ್ನು ಇಟ್ಟು ಬರುತ್ತಾಳೆ. ಅರ್ಥಾತ್ ತಾನು ಬರಬೇಕಾದರೆ ಪರಮಾತ್ಮನ ಅನುಸರಿಸಿಯೇ ಬರುತ್ತಾಳೆ.

ನಾವು ಲಕ್ಷ್ಮೀದೇವಿಯ ಪೂಜಿಸುವಾಗ ಅವಳೊಬ್ಬಳ ಪೂಜಿಸದೆ ಪರಮಾತ್ಮನ ಸಹಿತವಾಗಿ ಪೂಜಿಸಬೇಕು. ಅವಳೊಬ್ಬಳನ್ನೇ ಪೂಜಿಸಬಾರದು.

*ವರಮಹಾಲಕ್ಷ್ಮಿ ಹಬ್ಬ ಆಚರಣೆ ಎಂದು*?
ಶ್ರಾವಣ ಶುಕ್ಲ ಪಕ್ಷದ ಹುಣ್ಣಿಮೆಯ ಸಮೀಪದ ಶುಕ್ರವಾರ. ಅಂದರೆ ಸಾಮಾನ್ಯವಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರ ಅಥವಾ ಮೂರನೇ ಶುಕ್ರವಾರ.

*ಬ್ರಹ್ಮವೈವರ್ತ  ಪುರಾಣ ರೀತ್ಯ* –
ಲಕ್ಷ್ಮೀ ದೇವಿ ಹೇಳುತ್ತಾಳೆ – ಯಾರು ಗುರುಗಳನ್ನು, ತಂದೆತಾಯಿಯನ್ನು, ಗೌರವದಿಂದ ಪೂಜಿಸುವುದಿಲ್ಲವೋ , ಪಿತೃದೇವತೆಗಳ ಅನುಗ್ರಹ ಪಡೆದಿಲ್ಲವೋ ಅವರ ಮನೆಗೆ ನಾನು ಬರುವುದಿಲ್ಲ” –
ಸುಳ್ಳು ಹೇಳುವವರು, ಸುಳ್ಳು ಸಾಕ್ಷಿ ಹೇಳುವವರು, ಸತ್ಕಾರ್ಯ ದೀಕ್ಷೆ ಇರುವುದಿಲ್ಲವೋ, ಕನ್ಯೆಯನ್ನೂ, ಅನ್ನವನ್ನೂ, ವೇದವನ್ನೂ ಮಾರಾಟ ಮಾಡಿ ಹಣ ಸಂಪಾದಿಸುವರ ಮನೆಯಲ್ಲಿ ಲಕ್ಷ್ಮೀ ಬರುವುದಿಲ್ಲ.

ಮೂತ್ರ ವಿಸರ್ಜನೆ, ಮಲ ವಿಸರ್ಜನೆ ನಂತರ ಕೈಕಾಲು ತೊಳೆದುಕೊಳ್ಳದವರು, ವಿವಾಹ ಮತ್ತು ಧರ್ಮಕಾರ್ಯಗಳನ್ನು ನಿಲ್ಲಿಸುವವರು, ಅಲ್ಲಿಯೂ ಲಕ್ಷ್ಮೀ ನಿಲ್ಲುವುದಿಲ್ಲ.

ಲಕ್ಷ್ಮೀದೇವಿಯು ಶ್ರೀಮನ್ನಾರಾಯಣನ ಅವತಾರ ಕಾಲದಲ್ಲಿ ತಾನೂ ಅವತಾರ ಮಾಡುತ್ತಾಳೆ.

ಲಕ್ಷ್ಮೀ ದೇವಿಯು ಸಮುದ್ರರಾಜನ ಪುತ್ರಿಯಾಗಿ ದೇವದಾನವರ ಸಮುದ್ರಮಥನ ಕಾಲದಲ್ಲಿ ಆವಿರ್ಭವಿಸಿದಳು ಮತ್ತು ಶ್ರೀಹರಿಯನ್ನು ವಿವಾಹವಾದಳು.

ಶ್ರೀಹರಿ ರಾಮಚಂದ್ರನಾದಾಗ ಜನಕರಾಜನ ಕುವರಿಯಾಗಿ ಸೀತಾಮಾತೆಯಾದವಳು, ಕೃಷ್ಣಾವತಾರ ಕಾಲದಲ್ಲಿ ತನ್ನ ಶ್ರೀ ಭೂ ರೂಪದಿಂದ ರುಕ್ಮಿಣಿ ಸತ್ಯಭಾಮಳಾಗಿಯೂ, ಕೃಷ್ಣ ಪರಮಾತ್ಮನ ಮುಂದುವರಿದ ರೂಪವಾದ ಶ್ರೀನಿವಾಸನಾದಾಗ ಪದ್ಮಾವತಿಯಾಗಿಯೂ, ವರಾಹನಾದಾಗ ಭೂದೇವಿಯಾಗಿಯೂ, ಪೃಥು ಮಹಾರಾಜನಾದಾಗ ಜಯಂತಿ ಎಂಬ ಹೆಸರಿನಿಂದಲೂ ಅವತರಿಸಿದ್ದಳು.

ಲಕ್ಷ್ಮೀದೇವಿಯ ವಿವಿಧ ನಾಮಾವಳಿಗಳು – ಪದ್ಮಜಾ, ವಾರಿಜಾ, ವೆಂಕಟರಮಣಿ, ಅರವಿಂದನಯನೆ, ಕ್ಷೀರವಾರಿಧಿ ಕನ್ನಿಕೆ, ಅಂಭ್ರಣಿ, ವೇದವತಿ, ಮಾಯಾ, ಜಯಾ, ಕೃತಿ, ಶಾಂತಿ, ದೇವಿ, ಜಯಂತಿ, ರಮಾ, ಇಂದಿರೆ, ಸೋಮಸೋದರಿ, ಭಾರ್ಗವಿ, ಹೀಗೆ ಇನ್ನೂ ಹಲವಾರು ನಾಮಗಳಿವೆ.

ವರಮಹಾಲಕ್ಷ್ಮಿಯು ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯ ನೀಡಲಿ

 ವರಮಹಾಲಕ್ಷ್ಮಿ ಕಥೆ :

 

ಹಿಂದೆ ವಿದರ್ಭದೇಶದ ರಾಜಧಾನಿ ಕುಂಡಿನಿ ನಗರದಲ್ಲಿ ಸದಾಚಾರ ಸಂಪನ್ನಳಾದ, ಪತಿ ಶುಶ್ರೂಷೆಯಲ್ಲೇ ನಿರತಳಾದ, ಚಾರುಮತಿ ಎಂಬ ಸ್ತ್ರೀ ಇದ್ದಳು. ಇವಳ ಸದಾಚಾರ ಸಂಪನ್ನತೆಗೆ ಮೆಚ್ಚಿ ಕರುಣಾಳುವಾದ ಮಹಾಲಕ್ಷ್ಮಿಯು, ಒಂದು ದಿನ ಚಾರುಮತಿಯ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಬಂದು ಹೇಳಿದಳು- ‘ಎಲೌ ಪತಿವ್ರತೆಯಾದ ಚಾರುಮತಿಯೆ ! ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವ ಪುಣ್ಯಾನುಸಾರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು. ಈಗ ನಾನು ಹೇಳುವ ವಿಷಯವನ್ನು ಗ್ರಹಿಸಿಕೊಂಡು ನೀನು ಆಚರಿಸಿದರೆ ಅದರಿಂದ ನಿನಗೆ ಮಹಾಪ್ರಯೋಜನ ಉಂಟಾಗುವುದು. ನಿನ್ನ ದಾರಿದ್ರ್ಯವು ನಾಶವಾಗಿ ನಿನಗೆ ಅಷ್ಟೈಶ್ವರ್ಯವು ಪ್ರಾಪ್ತಿಯಾಗುವುದು. ಆದ ಕಾರಣ ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಾಗಿ ನನ್ನ ಪೂಜೆಯನ್ನು ಮಾಡಿದರೆ ನಾನು ಅವರಿಗೆ ಸಕಲ ಭೋಗಭಾಗ್ಯಗಳನ್ನು ಕೊಡುವೆನು. ಇಹಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುವರೊ ಅವರೇ ಧನ್ಯರು .  ಅವರೇ ಪುಣ್ಯಶಾಲಿಗಳು,   .  ಸ್ತೋತ್ರಾರ್ಹರು, ಯಾರು ನನ್ನ ಕಟಾಕ್ಷಕ್ಕೆ ಬಾಹಿರರಾಗಿರುವರೊ ಅವರ ಬಾಳು ವ್ಯರ್ಥವೇ ಸರಿ. ಆದ ಕಾರಣ ನೀನು ಈ ವ್ರತವನ್ನು ಮಾಡಿ ಧನ್ಯಳಾಗು”. ಹೀಗೆ ನಿದ್ರೆಯಲ್ಲಿ ಉಪದೇಶಿಸಿ ಮಹಾಲಕ್ಷ್ಮಿಯು ಕಣ್ಮರೆಯಾದಳು.

 

ಆಗ ಚಾರುಮತಿಯು ಭ್ರಾಂತಳಾಗಿ ನಿದ್ರೆಯಿಂದೆದ್ದು ನಡೆದ ಸಂಗತಿಯನ್ನೆಲ್ಲ ತನ್ನವರಿಗೆ ಹೇಳಿ ಅವರೊಡನೆ ಆನಂದಿಸುತ್ತ ಕೆಲವು ದಿವಸಗಳನ್ನು ಕಳೆಯಲು ಶ್ರಾವಣಮಾಸದ ಎರಡನೆಯ ಶುಕ್ರವಾರ ಬಂದಿತು. ಆ ದಿನ ಭಕ್ತಿವಂತರಾಗಿ ಶ್ರದ್ಧೆಯಿಂದ ಕಲ್ಪೋಕ್ತಪ್ರಕಾರವಾಗಿ ಬಹು ಜನ ಭಕ್ತರು ವರಮಹಾಲಕ್ಷ್ಮಿಯನ್ನು ಪೂಜಿಸಿ ಸಂತೋಷದಿಂದ ಕೋರಿಕೆಗಳನ್ನು ಕೈಗೂಡಿಸಿಕೊಂಡು ಸುಖದಿಂದ ಬಾಳುತ್ತಿದ್ದರು.

 

ಇತ್ತ ದರಿದ್ರಳಾದ ಚಾರುಮತಿಯು ನಿಯಮದಿಂದ ಈ ವ್ರತವನ್ನು ಮಾಡಿ ವರಲಕ್ಷ್ಮಿಯ ಕಟಾಕ್ಷದಿಂದ ಅಷ್ಟೈಶ್ವರ್ಯವನ್ನೂ ಪಡೆದಳು. ಪುತ್ರಪೌತ್ರಾದಿಗಳಿಂದ ಕೂಡಿ, ಸುಖವನ್ನು ಅನುಭವಿಸುತ್ತ ಬಡವರಿಗೆ ಅನ್ನದಾನ ಮಾಡಿ, ಬಂಧುವರ್ಗದವರನ್ನು ಪ್ರೀತಿಯಿಂದ ಕಾಪಾಡುತ್ತ ಇಹಲೋಕದಲ್ಲಿ ಅನಂತವಾದ ಅಪಾರಸೌಖ್ಯ ಅನುಭವಿಸಿ, ಪರಲೋಕದಲ್ಲಿ ಶ್ರೇಷ್ಠವಾದ ಪತಿಸಾಯುಜ್ಯವನ್ನು ಪಡೆದಳು. ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರು.

 

– ಪರಮೇಶ್ವರ ಕಥೆಯನ್ನು ಹೇಳಿ ಮುಗಿಸಲು, ಪಾರ್ವತಿಯು, ‘ಎಲೈ ದೇವದೇವನೆ ! ನನ್ನಲ್ಲಿ ನಿನಗೆ ದಯೆಯುಂಟಾದರೆ ಈ ವಿಧಾನವನ್ನು ವಿವರವಾಗಿ ಹೇಳಬೇಕು” ಎಂದು ಕೇಳಿಕೊಂಡಳು. ಆಗ ಪರಮೇಶ್ವರನು ಪೂಜಾ ವಿಧಾನಗಳನ್ನು ಹೀಗೆ ವಿವರಿಸಿದನು-

 

‘ ದೇವಿಯೆ ! ಕೇವಲ ಪುಣ್ಯಪ್ರದವಾದ ಶ್ರಾವಣಮಾಸದ ಹುಣ್ಣಿಮೆ ಪೂರ್ವದ ಶುಕ್ರವಾರದ ದಿನ ಭಕ್ತಿಯುಳ್ಳ ಸ್ತ್ರೀಯರಾಗಲಿ, ಪುರುಷರಾಗಲಿ ಅಭ್ಯಂಜನವನ್ನು ಮಾಡಿಕೊಂಡು ಮಂಗಳಸ್ನಾನಾನಂತರ ಶುಭವಸ್ತ್ರಗಳನ್ನು ಧರಿಸಿ, ರಂಗವಲ್ಯಾದಿಗಳಿಂದ ಅಲಂಕೃತವಾದ ಶುದ್ಧ ಪ್ರದೇಶದಲ್ಲಿ ಮನೋಹರವಾದ ಮಂಟಪವನ್ನು ನಿರ್ಮಿಸಿ, . ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲಶವನ್ನು ಇಟ್ಟು ಪ್ರಾಣಪ್ರತಿಷ್ಠಾಪನ ಪೂರ್ವಕ ವರಮಹಾಲಕ್ಷ್ಮಿಯನ್ನು ಪೂಜಿಸಬೇಕು. ಷೋಡಶೋಪಚಾರ ಪೂಜೆಯಿಂದ ದೇವಿಯನ್ನು ತೃಪ್ತಿಪಡಿಸಿ, ಯೋಗ್ಯನಾದ ಬ್ರಾಹ್ಮಣನಿಗೆ ಉಪಾಯನ ದಾನವನ್ನು ಕೊಡಬೇಕು. ಅನಂತರ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ, ಭೂರಿದಕ್ಷಿಣೆಗಳನ್ನು ಕೊಟ್ಟು ಈ ಕಥೆಯನ್ನು ಕೇಳಬೇಕು”.

 

ಸೂತಪುರಾಣಿಕನು ಶೌನಕಾದಿ ಋಷಿಗಳಿಗೆ ಇಷ್ಟೆಲ್ಲಾ ಹೇಳಿದಾಗ, ಋಷಿಗಳು ಸಂತೋಷ ಭರಿತರಾದರು. ಇಂಥ ವರ ಮಹಾಲಕ್ಷ್ಮಿ ವ್ರತವನ್ನು ಯಾರು ಮಾಡುವರೊ, ಈ ಕಥೆಯನ್ನು ಯಾರು ಕೇಳುವರೊ ಅವರಿಗೆ ದಾರಿದ್ರ್ಯ ದುಃಖಾದಿಗಳು ನಾಶವಾಗಿ ಪುತ್ರಪೌತ್ರಾದಿ ಸಂಪತ್ತಿಯಿಂದ ಸಕಲ ಭಾಗ್ಯಗಳೂ ಕೈಗೂಡುತ್ತವೆ.

Leave a Reply

Your email address will not be published.

Sumadhwa Seva © 2022