ಶ್ರೀ ಮದ್ವಿಷ್ಣುತತ್ವವಿನಿರ್ಣಯ :

ಶ್ರೀ ಗುರುಭ್ಯೋನಮ: | ಹರಿ: ಓಂ |   ಶ್ರೀಮದಾಚಾರ್ಯ ಗುರುಭ್ಯೋ ನಮ: |

ಶ್ರೀ ಮದ್ವಿಷ್ಣುತತ್ವವಿನಿರ್ಣಯ :

सदागमैकविज्ञेयं समतीत क्षराक्षरं ।
नारायणं सदावंद्ये निर्दोषाशेष सद्गुणं ।

ಸದಾಗಮೈಕವಿಜ್ಞೇಯಂ ಸಮತೀತ ಕ್ಷರಾಕ್ಷರಂ |
ನಾರಾಯಣಂ ಸದಾವಂದ್ಯೇ ನಿರ್ದೋಷಾಶೇಷ ಸದ್ಗುಣಂ |

ನಿರ್ದೋಷ – ದೋಷರಹಿತನು; ಅಶೇಷ – ಪರಿಪೂರ್ಣವಾದ; ಸತ್ ಗುಣಂ – ಸದ್ಗುಣಳಾದ (ಉತ್ಪತ್ತಿ, ನಾಶಾದಿಗಳಿಲ್ಲದ); ಗುಣಂ – ಗುಣಗಳುಳ್ಳ; ಸಮತೀತ ಚೆನ್ನಾಗಿ ಅತಿಕ್ರಮಿಸಲ್ಪಟ್ಟ; ಕ್ಷರಾಕ್ಷರಂ – ಬ್ರಹ್ಮರುದ್ರಾದಿ ಸಕಲಜೀವರೂ, ಅಕ್ಷರ – ಪ್ರಕೃತಿ ತತ್ವಾಭಿಮಾನಿ ಲಕ್ಷ್ಮೀದೇವಿ (ತಥಾ ಜಡಗಳೂ) ಅರ್ಥಾತ್ ಜೀವ ಜಡಾತ್ಮಕಗಳೆಲ್ಲರಿಂದ ಅತ್ಯಂತ ವಿಲಕ್ಷಣನಾದ, ಸತ್ -ನಿರ್ದುಷ್ಟವಾದ;  ಆಗಮೈಕವಿಜ್ಞೇಯಂ – ಋಗಾದಿ ಆಗಮಗಳಿಂದ ಮಾತ್ರ ವಿಜ್ಞೇಯಂ – ತಿಳಿಯಲಿಕ್ಕೆ ಯೋಗ್ಯನಾದ ನಾರಾಯಣಂ – ಲಕ್ಷ್ಮೀಪತಿಯಾದ ಶ್ರೀಮನ್ನಾರಾಯಣನನ್ನು ಅಹಂ – ನಾನು ಸದಾ – ಎಂದೆಂದಿಗೂ ವಂದೇ – ನಮಿಸುವೆನು.  

ಈ ಮಂಗಳಾಚರಣ ಶ್ಲೋಕದಿಂದ ಆಚಾರ್ಯ ಮಧ್ವರು ತಾವು ಏಕೆ ಪರಮಾತ್ಮನಿಗೆ ವಂದಿಸುವೆನೆಂದು ತಿಳಿಸಿರುವರು.  ನಾವು ಯಾರಾದರಿಗೂ ನಮಸ್ಕರಿಸುವವರಿದ್ದರೆ ನಮಗೆ ಅವರ ಸ್ವರೂಪ ಮತ್ತು ಲಕ್ಷಣ ನಿರ್ಧಾರವಾಗದೆ ನಮಸ್ಕಾರವು ಕೂಡುವುದಿಲ್ಲ.  ಪರಮಾತ್ಮನು ನಿರ್ದೋಷ ಎನ್ನುವ ಮೂಲಕ ಅವನು ಪಾರತಂತ್ರ್ಯಾದಿ ಸರ್ವದೋಷಾಭಾವ, ಮತ್ತು ಅಶೇಷ ಸದ್ಗುಣಂ ಎನ್ನುವುದರಿಂದ ಅವನಲ್ಲಿರುವ ಪರಿಪೂರ್‍ಣಾನಂದತ್ವ ಮೊದಲಾದ ಅಪರಿಮಿತ ಲಕ್ಷಣಗಳೂ ಸೂಚ್ಯವಾಗಿವೆ.  ಏಕೆಂದರೆ ತಾರ್ಕಿಕರು ದು:ಖಾದಿಗಳನ್ನು ಗುಣಗಳೆಂದು ಹೇಳಿರುವುದರಿಂದ, ಅದನ್ನು ನಿರಾಕರಿಸಲು ಆಚಾರ್ಯರು “ಸದ್ಗುಣ” ಪ್ರಯೋಗಿಸಿದ್ದಾರೆ.   “ಸಮತೀತ ಕ್ಷರಾಕ್ಷರಂ” ಎನ್ನುವ ಮೂಲಕ ಅಂದರೆ ಶರೀರ ನಾಶವಿರುವ ಬ್ರಹ್ಮ ರುದ್ರಾದಿಗಳಿಗೂ ಮತ್ತು ಅಕ್ಷರನಾಮಕಳಾದ (ಶರೀರನಾಶವಿರದ) ಲಕ್ಷ್ಮೀದೇವಿಗೂ ಅತೀತನೆಂದು ತಿಳಿಸಿದ್ದಾರೆ.   ಶ್ರೀಮನ್ನಾರಾಯಣನು ಇಂತಹವನೆಂದು ತಿಳಿಯಲು ನಮಗಿರುವ ಏಕೈಕ ಸಾಧನವೇ ಸದಾಗಮಗಳು.

विशेषणानि यानीह कथितानि सदुक्तिभि: ।
साधियिष्यामि तान्येव क्रमात्सज्जनसंविधे । २ ।

ವಿಶೇಷಣಾನಿ ಯಾನೀಹ ಕಥಿತಾನಿ ಸದುಕ್ತಿಭಿ: |
ಸಾಧಿಯಿಷ್ಯಾಮಿ ತಾನ್ಯೇವ ಕ್ರಮಾತ್ಸಜ್ಜನಸಂವಿಧೇ | ೨ |

ಈ ಗ್ರಂಥಕ್ಕೆ ಏನು ಪ್ರಯೋಜನ, ಅಧಿಕಾರಿ ಯಾರು, ವಿಷಯ ಯಾರು ಎಂಬುದನ್ನು ಪ್ರಶ್ನಿಸಿಕೊಂಡು ಆಚಾರ್ಯರು ಉತ್ತರಿಸುತ್ತಾರೆ –  ಶ್ರೀಮನ್ನಾರಾಯಣನೇ ಈ ಗ್ರಂಥಕ್ಕೆ ವಿಷಯನು;  ಶ್ರೀಮನ್ನಾರಾಯಣನ ಜ್ಞಾನವೇ ಮುಖ್ಯ ಪ್ರಯೋಜನ, ಅಧಿಕಾರಿಗಳು – ಯಾರು ಪರಮಾತ್ಮನ ಜ್ಞಾನವನ್ನೇ ಪ್ರಾರ್ಥಿಸುವರೋ ಅವರು.

ಇಹ – ಇಲ್ಲಿ; ಯಾನಿ ವಿಶೇಷಣಾನಿ – ಯಾವ ನಿರ್ದೋಷತ್ವ ಮತ್ತು ಅಶೇಷ ಸದ್ಗುಣತ್ವ ಮೊದಲಾದ ವಿಷೇಷಣಗಳು; ಕಥಿತಾನಿ -ಹೇಳಲ್ಪಟ್ಟಿವೆಯೋ ; ತಾನ್ಯೇವ – ಅವುಗಳನ್ನೇ ಸದುಕ್ತಿಭಿ: – ಸದಾಗಮಗಳಿಂದ ಅಂದರೆ ನಿರ್ದುಷ್ಟವಾದ್ಫ಼ ವೇದವಾಕ್ಯಗಳಿಂದ; ಕ್ರಮಾತ್ – ನಿರ್ದೇಶಕ್ರಮವಾಗಿ; ಸಜ್ಜನ – ಸಜ್ಜನರಿಗೆ ಸಂವಿದೇ – ಶ್ರೀಮನ್ನಾರಾಯಣನ ಜ್ಞಾನಕ್ಕೋಸ್ಕರ (ಅರ್ಥಾತ್ ಮೋಕ್ಷಸಾಧನೆಗೋಸ್ಕರ) ಸಾಧಯಿಷ್ಯಾಮಿ – ಸಾಧಿಸುವೆನು.

ऋगाद्या भारतं चैव पंचरात्रमथाखिलं ।
मूलरामायणं चैव पुराणं चैतदात्मकं ।
ये चानुरायिनस्त्वेषां तैर्नज्ञेयो जनार्दन: ।
ज्ञेय एतैस्सदा युक्तैर्भक्तिमद्भिस्सुनिष्ठितै: । ३ ।
ಋಗಾದ್ಯಾ ಭಾರತಂ ಚೈವ ಪಂಚರಾತ್ರಮಥಾಖಿಲಂ |
ಮೂಲರಾಮಾಯಣಂ ಚೈವ ಪುರಾಣಂ ಚೈತದಾತ್ಮಕಂ |
ಯೇ ಚಾನುರಾಯಿನಸ್ತ್ವೇಷಾಂ ತೈರ್ನಜ್ಞೇಯೋ ಜನಾರ್ದನ: |
ಜ್ಞೇಯ ಏತೈಸ್ಸದಾ ಯುಕ್ತೈರ್ಭಕ್ತಿಮದ್ಭಿಸ್ಸುನಿಷ್ಠಿತೈ: | ೩ |

 ಕ್ರಮಾತ್ ಎಂದು ಹೇಳಿ ಸದಾಗಮೈಕವಿಜ್ಞೇಯವನ್ನು ಪ್ರತಿಪಾದುತ್ತೇನೆಂದು ಪ್ರತಿಜ್ಞೆ ಮಾಡಿ ಸದುಕ್ತಿಗಳಿಂದ ಸಾಧಿಸುವೆನೆಂದು ಹೇಳಿರುವರು.  ಶ್ರೀಹರಿಯು ಸದಾಗಮಗಳಿಂದ ಮಾತ್ರ ವೇದ್ಯನೆಂದು ಹೇಳಿ, ಅದನ್ನು ಪ್ರತಿಪಾದಿಸುವ ಸದುಕ್ತಿಗಳು ಯಾವುದೆಂದು ಹೆಸರಿಸಿರುವರು.

ಋಗಾದ್ಯಾ – ಋಗ್ಯೆಜುಸಾಮಾಥರ್ವಣವೇದವೆಂಬ ವೇದ ಚತುಷ್ಟಯ; ಭಾರತಂ ಚ – ಶ್ರೀಮನ್ಮಹಾಭಾರತ; ಅಥೈವ – ಅದೇರೀತಿ; ಅಖಿಲಂ ಪಂಚರಾತ್ರಂ – ಎಲ್ಲಾ ಪಂಚರಾತ್ರಾಗಮವೂ; ಮೂಲರಾಮಾಯಣಂ ಚ – ಮೂಲರಾಮಾಯಣವೂ; ಏತದಾತ್ಮಕಂ – ಋಗಾದಿಗಳಿಗೆ ಅನುಕೂಲಕರವಾದ; ಪುರಾಣಂ ಚ – ಎಲ್ಲ ಪುರಾಣವೂ; ಏಷಾಂ – ಇವುಗಳಿಗೆ; ಅನುಯಾಯಿನ: ಏ ಚ – ಅನುಕೂಲಗ್ರಂಥಗಳಿವೆಯೋ; ತೇ ಸರ್ವೇ ಏವ ಚ – ಎಲ್ಲವುಗಳೂ; ಸದಾಗಮಾ: – ಸದಾಗಮಗಳು.  ತದನ್ಯೇ – ಅವುಗಳಿಗೆ ವಿರುದ್ಧವಾದ ಯೇ – ಯಾವ ಗ್ರಂಥಗಳು; ತೇ ಸರ್ವೇ – ಅವೆಲ್ಲವೂ; ದುರಾಗಮಾ ಏವ – ದುರಾಗಮಗಳಾಗಿವೆ.  ತೈ: ಆ ದುಷ್ಟ ಆಗಮಗಳಿಂದ; ಜನಾರ್ದನ: – ಶ್ರೀ ಹರಿಯು; ನೈವ ಜ್ಞೇಯ: ತಿಳಿಯಲಸಾಧ್ಯ.  ಏತೈರೈವ – ಈ ಸದಾಗಮಗಳಿಂದಲೇ; ಸದಾ – ಯಾವಾಗಲೂ;  ಯುಕ್ತೈ: ಕೂಡಿದ; ಭಕ್ತಿಮದ್ಭಿ: ಅತ್ಯಾದರವುಳ್ಳ, ಭಕ್ತಿಯುಳ್ಳ, ಸು- ಚೆನ್ನಾಗಿ ನಿಸ್ಥಿತೈ: ಅತ್ಯಂತವಾಗಿರುವ, ಅಧಿಕಾರಿಗಳಿಂದ ಜ್ಞೇಯಂ ತಿಳಿಯಲರ್ಹನು.

ಪರಮಾತ್ಮನನ್ನು ತಿಳಿಯಲು ವೈಶೇಷಿಕಾದಿಗಳಿಗೆ ಸಾಧ್ಯವಿಲ್ಲ ಏಕೆಂದರೆ ಅವರಿಗೆ ವೇದಗಳ ಅರ್ಥವನ್ನು ತಿಳಿಯಲು ಆಗ್ರಹವಿಲ್ಲ.  ಮೀಮಾಂಸಕರಿಗೆ ಕರ್ಮದಲ್ಲಿ ಮಾತ್ರ ಆಸಕ್ತಿ, ಅವರಿಗೆ ವೇದದಲ್ಲಿ ಆಸಕ್ತಿಯಿಲ್ಲದಿರುವುದರಿಂದ ಅವರಿಗೆ ತಿಳಿಯಲು ಸಾಧ್ಯವಿಲ್ಲ.  ಮಾಯಾವಾದಿಗಳು ಕೆಲವು ವೇದ ವಾಕ್ಯಗಳನ್ನು ಅಪ್ರಮಾಣಗಳೆಂದು ತಿಳಿದಿರುವುದರಿಂದ ಅವರಿಗೂ ತಿಳಿಯಲು ಸಾಧ್ಯವಿಲ್ಲ.

 

न च केवल तर्केण नाक्षजेन न केनचित् ।
केवलागम विज्ञेयो भक्तैरेव न चान्यथा । इति ब्रह्मांडे ।

ನ ಚ ಕೇವಲ ತರ್ಕೇಣ ನಾಕ್ಷಜೇನ ನ ಕೇನಚಿತ್ |
ಕೇವಲಾಗಮ ವಿಜ್ಞೇಯೋ ಭಕ್ತೈರೇವ ನ ಚಾನ್ಯಥಾ | ಇತಿ ಬ್ರಹ್ಮಾಂಡೇ |

ಕೇವಲ ತರ್ಕೇಣ – ಕೇವಲ ತರ್ಕೇಣ – ತರ್ಕದಿಂದ (ವೇದಾದಿಗಳ ಅನುಕೂಲ್ಯರಹಿತವಾದ); ನ ಚ – ತಿಳಿಯಲು ಅರ್ಹವಲ್ಲ.  ಅಕ್ಷಜೇನ – ಪ್ರತ್ಯಕ್ಷದಿಂದಲೂ; ನ – ಜ್ಞೇಯನಲ್ಲ; ಕೇನಚಿತ್ – ಸಾಧನಾನುಮಾನದಿಂದಲೂ (ಅರ್ಥಾಪತ್ತಿಗಳಿಂದಲೂ ಅಥವಾ ವೇದಾದಿ ಅರ್ಥವಿಚಾರದಲ್ಲಿ ಆಗ್ರಹಗಳಿಲ್ಲದಿರುವವರಿಂದ ) ನ – ಜ್ಞೇಯನಲ್ಲ; ಭಕ್ತೈರೇವ – ಭಕ್ತಿಯಿಂದಲೇ; ಕೇವಲಾಗಮವಿಜ್ಞೇಯ: ಕೇವಲ ದುರಾಮಗಳಲ್ಲದ, ಕೇವಲ ಅನುಮಾನಾದಿಗಳಲ್ಲದ; ಆಗಮ – ಸದಾಗಮಗಳಿಂದಲೇ ವಿಜ್ಞೇಯಂ – ತಿಳಿಯಲರ್ಹನು. ಅನ್ಯಥಾ – ಬೇರೆ ರೀತಿ ನ ಚ – ತಿಳಿಯಲರ್ಹನಲ್ಲ.  ಇತಿ – ಈರೀತಿ ಬ್ರಹ್ಮಾಂಡೆ -ಬ್ರಹ್ಮಾಂಡಪುರಾಣದಲ್ಲಿ ಹೇಳಿದೆ.

नावेदविन्मनुतेदं बृहंतं  सर्वानुभूमात्मानं सांपराये । इति तैत्तरीयश्रुति: ।
ನಾವೇದವಿನ್ಮನುತೇದಂ ಬೃಹಂತಂ ಸರ್ವಾನುಭೂಮಾತ್ಮಾನಂ ಸಾಂಪರಾಯೇ | ಇತಿ ತೈತ್ತರೀಯಶ್ರುತಿ: |

 

ಅವೇದವಿತ್ – ಸರ್ವ ಸದಾಗಮಗಳನ್ನು ತಿಳಿಯದಿದ್ದವರು; ಸಾಂಪರಾಯೇ- ಮೋಕ್ಷಕ್ಕೋಸ್ಕರ; ಇದಂ – ಈ; ಬೃಹಂತಂ – ಪೂರ್ಣವಾದ ಸರ್ವಾನುಭೂಂ – ಸರ್ವವನ್ನೂ ಅನುಭವಿಸತಕ್ಕ; ಆತ್ಮಾನಂ – ಪರಮಾತ್ಮನನ್ನು ನ ಮನುತೇ – ತಿಳಿಯುವುದಿಲ್ಲ.  ಇತಿ – ಈರೀತಿ ತೈತ್ತರೀಯಶ್ರುತಿ – ತೈತ್ತರೀಯ ಶ್ರುತಿಯು ವಕ್ತಿ – ಹೇಳುತ್ತದೆ.

नैषा तर्केण मतिरापनेया प्रोक्ताऽन्यैव सुज्ञानाय प्रेष्ठ । इति कठश्रुति: ।
ನೈಷಾ ತರ್ಕೇಣ ಮತಿರಾಪನೇಯಾ ಪ್ರೋಕ್ತಾಽನ್ಯೈವ ಸುಜ್ಞಾನಾಯ ಪ್ರೇಷ್ಠ | ಇತಿ ಕಠಶ್ರುತಿ: |

ಏಷಾ – ಪರಮಾತ್ಮ ವಿಷಯಕವಾದ; ಮತಿ: – ಬುದ್ಧಿಯು; ತರ್ಕೇಣ – ವೇದಾದ್ಯಾನುಕೂಲ್ಯ ರಹಿತವಾದ ಅನುಮಾನದಿಂದ; ಆನೇಯಾ – ಬರುವುದಕ್ಕೂ ಮತ್ತು ಅಪನೇಯಾ – ಹೋಗುವುದಕ್ಕೂ ನ – ಅಯೋಗ್ಯವು.  ಅನ್ಯೇನ – ಜೀವೇಶ್ವರರಿಗೆ ಭೇದಜ್ಞಾನವುಳ್ಳವನಿಂದ (ಅರ್ಥಾತ್ ಭಗವದ್ಭಕ್ತ್ಯಾದಿಗಳುಳ್ಳ ಆಚಾರ್ಯರಿಂದ); ಪ್ರೋಕ್ತಾ – ಚೆನ್ನಾಗಿ; ವೇದವ್ಯಾಖ್ಯಾನದಿಂದ ಹುಟ್ಟಲ್ಪದ್ದಾಗಿಯೇ, ಸುಜ್ಞಾನಾಯ – ಸುಜ್ಞಾನಕ್ಕಾಗಿ, ಭಗವತ್ ಸಾಕ್ಷಾತ್ಕಾರಕ್ಕಾಗಿ, ಭವತಿ – ಆಗುತ್ತದೆ (ಈರೀತಿ ಯಮಧರ್ಮರಾಜರು ನಚಿಕೇತರಿಗೆ ಕಠಶ್ರುತಿಯಲ್ಲಿ ಉಪದೇಶಿಸಿರುವರು).

नेंद्रियाणि नानुमानं वेदा हि एवैनं वेदयंति तस्मादाहुर्वेदा: ॥ इति पिप्पलाद श्रुति: ॥

ನೇಂದ್ರಿಯಾಣಿ ನಾನುಮಾನಂ ವೇದಾ ಹಿ ಏವೈನಂ ವೇದಯಂತಿ ತಸ್ಮಾದಾಹುರ್ವೇದಾ:||

|| ಇತಿ ಪಿಪ್ಪಲಾದ ಶ್ರುತಿ: ||

ಇಂದ್ರಿಯಾಣಿ – ಚಕ್ಷುರಾದೀಂದ್ರಿಯಾದಿಗಳು, ಏನಂ – ಪರಮಾತ್ಮನನ್ನು; ನ ವೇದಯಂತಿ – ತಿಳಿಸಿಕೊಡುವುದಿಲ್ಲ. ಅನುಮಾನಂ – ಅನುಮಾನವೂ; ನ – ತಿಳಿಸುವುದಿಲ್ಲ.  ಹಿ ವೇದಾ ಏವ – ಯಾವ ಕಾರಣದಿಂದ ಋಗಾದಿ ವೇದಗಳಂತೆ ಏನಂ – ಈ ಪರಮಾತ್ಮನನ್ನು ವೇದಯಂತಿ – ತಿಳಿಸುವವೋ; ತಸ್ಮಾತ್ – ಅವನ್ನು (ಸರ್ವೋತ್ತಮವಾದ ವಸ್ತುವನ್ನು ತಿಳಿಸಿಕೊಡುವುದರಿಂದಲೇ), ಏತಾನ್ – ಇವುಗಳನ್ನು ವೇದಾ ಇತಿ ಆಹು: – ವೇದವೆನ್ನುತ್ತಾರೆ.

ಪರಮತೀಯರು ಕೆಲವು ಶಂಕೆಗಳನ್ನು ವ್ಯಕ್ತಪಡಿಸಿದ್ದಾರೆ –  ಯಾವುದು ಅನೃತವೋ ಅದು ಅಪ್ರಮಾಣವು.

a. “ಪುತ್ರಕಾಮ: ಪುತ್ರೇಷ್ಟ್ಯಾಯಜೇತ” ಮಕ್ಕಳನ್ನು ಹೊಂದಲಿಚ್ಚಿಸುವರು ಪುತ್ರಕಾಮೇಷ್ಟಿಯಾಗವನ್ನು ಮಾಡಬೇಕು | ಈ ವೇದವಾಕ್ಯವು ಸುಳ್ಳಾಗುವುದು ಏಕೆಂದರೆ ಪುತ್ರಕಾಮೇಷ್ಟಿಯಾಗ ಮಾಡಿದ ಎಲ್ಲರಿಗೂ ಪುತ್ರೋತ್ಪತ್ತಿಯಾಗುವುದಿಲ್ಲ.
b.

|ನ ಚ ಏತೇಷಾಂ ವಚನಾನಾಂ ಏವ ಅಪ್ರಾಮಾಣ್ಯಂ |
न च एतेषां वचनानां एव अप्रामाण्यं ।

Leave a Reply

Your email address will not be published.

Sumadhwa Seva © 2022