Naga-Garuda Panchami

Nagara Chouti –  Shravana Shukla Chaturthi

Garuda/Naga Panchami – Shravana Shukla panchami

On the Nagarachouti day, the pooja of  Nagantargata Sankarshanaroopi paramathma will be done. 

ಶ್ರಾವಣ ಶುದ್ಧ ಚತುರ್ಥಿಯಂದು ತಾಯಂದಿರು ಅಭ್ಯಂಜನ ಮಾಡಿ ನಾಗಪ್ಪನಿಗೆ ಹಾಲಿನ ಅಭಿಷೇಕ ಮಾಡುತ್ತಾರೆ.   ಈ ದಿನ ಉಪವಾಸವಿದ್ದು ಮಾರನೇ ದಿನ ಮತ್ತೆ ಕ್ಷೀರಾಭಿಷೇಕ ಮಾಡಿ ನಂತರ ಭೋಜನ ಮಾಡುತ್ತಾರೆ.    ಇಲ್ಲಿ ಕೆಲವರು ಉಪವಾಸವನ್ನೂ, ಕೆಲವರು ಉಪ್ಪು ಖಾರವಿಲ್ಲದ ಆಹಾರವನ್ನೂ, ಕೆಲವರು ಫಲಾಹಾರವನ್ನೂ ಮಾಡುವ ಸಂಪ್ರದಾಯ ಭೇದವಿದೆ.  ನಿಮ್ಮ ನಿಮ್ಮ ಸಂಪ್ರದಾಯ ಪಾಲಿಸಿ.    ಇಂದು ಸ್ತ್ರೀಯರು ನಾಗಪ್ಪನಿಗೆ ತನಿ ಎರೆದು  ಹಸಿಯಾದ ಕಡ್ಲೇಕಾಳು, ನುಚ್ಚಿನ ಉಂಡೆ ಮುಂತಾದವನ್ನು ನೈವೇದ್ಯ ಮಾಡುತ್ತಾರೆ.

 

ನಾಗರ ಪಂಚಮಿ ವಿಶೇಷತೆ ಏನು ?
ಸರ್ಪಗಳು ಒಮ್ಮೆ ಲೋಕಹಿಂಸಕವಾಗಿದ್ದಾಗ ಚತುರ್ಮುಖ ಬ್ರಹ್ಮ ದೇವರು ನೀವೆಲ್ಲ ಸಾಯಿರೆಂದು ಶಪಿಸಿದರು.  ಆಗ ಸರ್ಪಗಳೆಲ್ಲ ತಮ್ಮ ತಪ್ಪಿನ ಅರಿವಾಗಿ ಬ್ರಹ್ಮದೇವರಲ್ಲಿ ಕ್ಷಮೆಯಾಚಿಸಿದಾಗ ಬ್ರಹ್ಮನು ಅವುಗಳಿಗೆ ಸಂರಕ್ಷಿತರಾಗಿರೆಂದು ಅನುಗ್ರಹಿಸಲ್ಪಟ್ಟ ದಿನವೇ ನಾಗರಪಂಚಮಿ.
ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ತಕ್ಷಕನೆಂಬ  ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪ ಕುಲವನ್ನೇ ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಮನವೊಲಿಸಿ ಸರ್ಪಯಾಗ  ನಿಲ್ಲಿಸಿದನು.. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು.
ನಾಗರ ಚೌತಿಯಂದು ಸ್ತ್ರೀಯರು ಮಾತ್ರ ತನಿ ಎರೆದರೆ ನಾಗರ ಪಂಚಮಿ ಎಲ್ಲರೂ ತನಿ ಎರೆಯುತ್ತಾರೆ.  ಕರಿದ ಪದಾರ್ಥಗಳನ್ನು ಈ ದಿನ ಮಾಡುವಂತಿಲ್ಲ.
ಗರುಡ ಪಂಚಮಿ :. ಈ ದಿನ ಗರುಡ ದೇವರು ದೇವಲೋಕದಿಂದ ಅಮೃತವನ್ನು ತಂದು ಅದನ್ನು ಸರ್ಪಗಳಿಗೆ ಕೊಟ್ಟು ತನ್ನನ್ನೂ ಮತ್ತು ತನ್ನ ತಾಯಿಯಾದ ವಿನತೆಯನ್ನು ದಾಸ್ಯದಿಂದ ಮುಕ್ತಿ ಗೊಳಿಸಿದ ದಿನ.

Click for PDF File

अनंतं वासुकिं शेषं पद्मकंबलकौ तथा ।
तथा कार्कोटकं नागं भुजंगश्वतरौ तथा ॥

धृतराष्ट्रं शंखपालं कालीयं तक्षकं तथा ।
पिंगलं च महानागं सपत्नीकान् प्रपूजयेत् ॥

ಅನಂತಂ ವಾಸುಕಿಂ ಶೇಷಂ ಪದ್ಮಕಂಬಲಕೌ ತಥಾ |
ತಥಾ ಕಾರ್ಕೋಟಕಂ ನಾಗಂ ಭುಜಂಗಶ್ವತರೌ ತಥಾ ||

ಧೃತರಾಷ್ಟ್ರಂ ಶಂಖಪಾಲಂ ಕಾಲೀಯಂ ತಕ್ಷಕಂ ತಥಾ |
ಪಿಂಗಲಂ ಚ ಮಹಾನಾಗಂ ಸಪತ್ನೀಕಾನ್ ಪ್ರಪೂಜಯೇತ್ ||

 
ಪೂಜಾ ಸಂದರ್ಭದಲ್ಲಿ ಹಾಲು ತುಪ್ಪ ಎರೆಯುವಾಗ ಹೇಳಬೇಕಾದ ಶ್ಲೋಕ :
ಅನಂತಶಯನಂ ದೇವಂ ಸರ್ವಶೋಕವಿನಾಶನಂ !
ಲೋಕಾಧಾರಂ ವಾರುಣೀಶಂ ನಾಗೇಂದ್ರಂ ಸನ್ನಮಾಮ್ಯಹಂ !!
 
 ಅನಾದಿಕಾಲದಿಂದಲೂ ಸರ್ವೋತ್ತಮನಾದ  ಶ್ರೀ ಹರಿಗೆ ಶಯನನಾದ,  ದೇವಶ್ರೇಷ್ಟನಾದ,  ಸರ್ವಶೋಕವನ್ನೂ ನಿವಾರಿಸುವ ವಾರುಣೀಪತಿಯಾದ ಶೇಷದೇವರಿಗೆ ಭಕ್ತಿಯಿಂದ ನಮಿಸುವೆನು. 
 
ಬೆನ್ನು ತೊಳೆಯುವುದು – ನಾಗರಪಂಚಮಿ ದಿನದಂದು ಅಕ್ಕತಂಗಿಯರು ಅಣ್ಣತಮ್ಮಂದಿರ ಬೆನ್ನು ತೊಳೆಯುವುದು ಸಂಪ್ರದಾಯ.   ಹಿಂದೆ ಸರ್ಪಗಳು ವರ ನೀಡಿದ್ದವು.  ” ಈದಿನ ಸರ್ಪದಂತಿರುವ ಯಾವುದೇ ವಸ್ತುಗಳಿಗೆ ಹಾಲೆರೆದರೂ ನಾವು ಸಂತುಷ್ಟರಾಗುವೆವು” ಎಂದು.  ಅದರಂತೆ ಬೆಳಿಗ್ಗೆ ನಾಗಪ್ಪನಿಗೆ  ಅಭಿಷೇಕ ಮಾಡಿದ ಹಾಲನ್ನು ತೆಗೆದುಕೊಂಡು ಅಣ್ಣ ತಮ್ಮಂದಿರ ಸರ್ಪಾಕಾರದಲ್ಲಿರುವ ಬೆನ್ನಿನ ಹುರಿಗೆ ಹಚ್ಚಿ ತೊಳೆಯುವುದರಿಂದ , ಸರ್ಪಗಳು ಸಂತುಷ್ಟರಾಗಿ ಹಚ್ಚಿದವರಿಗೂ, ಹಚ್ಚಿಸಿಕೊಂಡವರಿಗೂ ಅನುಗ್ರಹ ಮಾಡುವುವು.  ಅದಕ್ಕೇ ಈ ಸಂಪ್ರದಾಯ.    ಹೀಗೆ ಸಹೋದರಿಯಿಂದ ಬೆನ್ನು ತೊಳೆಸಿಕೊಂಡ ಸಹೋದರ, ಸಹೋದರಿಗೆ ಉಡುಗೊರೆ / ಕಾಣಿಕೆ ನೀಡುವುದು ವಾಡಿಕೆ.
 
 
ಗರುಡ ಪಂಚಾಕ್ಷರ ಮಂತ್ರ

ಅಸ್ಯಶ್ರೀ ಗರುಡ ಮಂತ್ರಸ್ಯ ಕಾಶ್ಯಪ ಋಷಿ: ! ಪಂಕ್ತಿಶ್ಚಂಧ: ! ಶ್ರೀ ಗರುಡೋ ದೇವತಾ !
ನ್ಯಾಸ : ಓಂ ಕ್ಷಿಂ ಹೃದಯಾಯ ನಮಃ: ! ಓಂ ಪಂ ಶಿರಸೇ ಸ್ವಾಹಾ ! ಓಂ  ಶಿಖಾಯೈ ವೌಷಟ್! ಸ್ವಾಂ ಕವಚಾಯ ಹುಂ ! ಹಾಂ ಅಸ್ತ್ರಾಯ ಫಟ್!
ಧ್ಯಾನ :
ಗರುಡ: ಸರ್ವದಾ ಧ್ಯೇಯ ; ಸುಧಾಪೂರ್ಣಂ ಹಿರಣ್ಮಯಂ!
ದಧಾನ: ಕುಂಭಮಭಯಂ ಪೀತಶುಕ್ಲಾರುಣೋ ಹರಿ: !!
ಮಂತ್ರ :
ಓಂ ಕ್ಷಿಪ ಓಂ ಸ್ವಾಹಾ ಓಂ !!
***************************
ಶೇಷ ಷಡಕ್ಷರ ಮಂತ್ರ
ಅಸ್ಯ ಶ್ರೀ ಶೇಷ ಮಂತ್ರಸ್ಯ ಸನತ್ಕುಮಾರ ಋಷಿ; ! ಯಾಜುಷೀ ಗಾಯತ್ರೀ ಛಂದ: ! ಶ್ರೀ ಶೇಷೋ ದೇವತಾ !
ನ್ಯಾಸ :
ಓಂ ಶೇಂ ಹೃದಯಾಯ ನಮಃ ! ಓಂ ಶೇಂ ಶಿರಸೇ ಸ್ವಾಹಾ ! ಓಂ ಷಾಂ ಶಿಖಾಯೈ ವೌಷಟ್ ! ಓಂ ಯಂ ಕವಚಾಯ ಹುಂ !  ಓಂ ಪಂ ನೇತ್ರಾಭ್ಯಾಂ ವೌಷಟ್ ! ಮಂ ಅಸ್ತ್ರಾಯ ಫಟ್ !
ಧ್ಯಾನ ;
ದಧಾನೋ ಹಾಲು ಸೌನಂದೋ ಶ್ವೇತವರ್ಣಾ ಕೃತಾಂಜಲಿ !
ಸಹಸ್ರಮೂರ್ಧಾsದ್ವಿತೀಯ ಕರ್ಣ ಭೂಷ: ಪ್ರಿಯಾಯುತ: !
ವನಮಾಲೀ ನೀಲವಾಸಾ ಧ್ಯೇಯೋ ವಿಷ್ಣೋಸ್ತು ಪೃಷ್ಟತ: !!
ಮಂತ್ರ :
!! ಓಂ ಶೇಷಾಯ ನಮಃ: ಓಂ !!

Sumadhwa Seva © 2022