matamaha shraddha

 

ಮಾತಾಮಹ ಶ್ರಾದ್ಧ

Mathamaha shradda to be done on Ashwayuja Masa Shukla paksha padya.    On this day, shraddha of matamaha to be done by Douhitra.

ಮಾತಾಮಹ ಶ್ರಾದ್ಧ ಆಶ್ವಯುಜ ಮಾಸ ಶುಕ್ಲ ಪಕ್ಷ ಪ್ರತಿಪತ್ ದಿನದಂದು ಆಚರಿಸಲಾಗುತ್ತದೆ.  ಈ ದಿನ ಮಾತಾಮಹ ಅಂದರೆ ತಾಯಿಯ ತಂದೆಯ ಶ್ರಾದ್ಧವನ್ನು ಮಾಡಬೇಕು. ಮಾಡುವವನು ದೌಹಿತ್ರ

 

1. Who is mathamaha?                         ಮಾತಾಮಹ ಅಂದರೆ ಯಾರು?
Mathamaha means father of  mother – Grand father ಮಾತಾಮಹ ಅಂದರೆ ತಾಯಿಯ ತಂದೆ – ತಾತ
 
2. Who is Dhouhithra? ದೌಹಿತ್ರ ಅಂದರೆ ಯಾರು?
Grandson – daughter’s son – ಮೊಮ್ಮಗ – ಮಗಳ ಮಗ
 
3. When to do the maataamaha shraaddha?
When the grand father (mother’s father) is dead.  It is to be done on Ashwayuja shukla pratipat day. Maataamaha Shraaddha to be done even if mother’s brother (sodara maava) is living.

ಮಾತಾಮಹ ಶ್ರಾದ್ಧವನ್ನು ತಾಯಿಯ ತಂದೆಯು ಮೃತನಾಗಿದ್ದರೆ ದೌಹಿತ್ರನು (ಮಗಳ ಮಗನು) ಮಾಡತಕ್ಕದ್ದು.  ಈ ಶ್ರಾದ್ಧವನ್ನು ತಾಯಿಯ ಸೋದರರು (ಅಂದರೆ ಸೋದರ ಮಾವಂದಿರು) ಬದುಕಿದ್ದರೂ ದೌಹಿತ್ರನು ಮಾಡತಕ್ಕದ್ದು.  ಇದನ್ನು ಆಶ್ವಯುಜ ಮಾಸ ಶುಕ್ಲ ಪ್ರತಿಪತ್ತಿನಂದು ಮಾಡತಕ್ಕದ್ದು.

jaataamaatrOpi douhitrO jIvtyapi cha maatulE |
kuryaanmaataamaha shraaddhaM pratipadyaashvinE tithE ||

जातामात्रोपि दौहित्रो जीव्त्यपि च मातुले ।
कुर्यान्मातामह श्राद्धं प्रतिपद्याश्विने तिथे ॥

ಜಾತಾಮಾತ್ರೋಪಿ ದೌಹಿತ್ರೋ ಜೀವ್ತ್ಯಪಿ ಚ ಮಾತುಲೇ |
ಕುರ್ಯಾನ್ಮಾತಾಮಹ ಶ್ರಾದ್ಧಂ ಪ್ರತಿಪದ್ಯಾಶ್ವಿನೇ ತಿಥೇ ||

4. Who has to do maatamaha shraddha?

ಮಾತಾಮಹಶ್ರಾದ್ಧವನ್ನು ಯಾರು ಮಾಡಬೇಕು?

Only the dowhithra can do mathamaha Shraddha, provided he has jeevanpitru i.e., – only if he has living father.  ದೌಹಿತ್ರನು ಮಾಡತಕ್ಕದ್ದು ಮತ್ತು ಆ ದೌಹಿತ್ರನು ಜೀವನ್ ಪಿತೃವಾಗಿರಬೇಕು. ಅಂದರೆ ಅವನಿಗೆ ತಂದೆ ಇರಬೇಕು, ತಾಯಿಯ ತಂದೆ ಇರಬಾರದು

5. When one has Jeevanpitru, whether he can do mathamaha shraddha?

Yes.  This shraaddha to be done by only those who have jeevan pitru.  If he has no father, he is not eligible to do mathamaha shraddha.  ಆ ದೌಹಿತ್ರನಿಗೆ ತಂದೆ ಇಲ್ಲದಿದ್ದರೆ ಅವನಿಗೆ ಮಾಡುವ ಹಕ್ಕು ಇರುವುದಿಲ್ಲ

6. Whether “Pinda” to be given on this day?

No – As he has jeevan pitru, he is not eligible to give pinda.  As such, it has to be done without pinda.

Jeevan pitru does not have eligibility for Pinda, Mundana, pretakarma.   (However, if he has no mother, and father is living, then he can give pinda only to his mother on her shraddha day, and not to others).
ಜೀವನ್ ಪಿತೃವಿದ್ದಾಗೆ ಪಿಂಡವನ್ನು ಹಾಕಲು ಬರುವುದಿಲ್ಲ.  ಆದ್ದರಿಂದ ಪಿಂಡರಹಿತವಾಗಿಯೇ ಮಾತಾಮಹ ಶ್ರಾದ್ಧವನ್ನು ಮಾಡತಕ್ಕದ್ದು.  ಜೀವನ್ ಪಿತೃವಿಗೆ ಪಿಂಡ, ಮುಂಡನ, ಪ್ರೇತಕರ್ಮ ಇವುಗಳಲ್ಲಿ ಅಧಿಕಾರವಿರುವುದಿಲ್ಲ

7. Then how to do the shraddha on this day? ಹಾಗಾದರೆ ಮಾತಾಮಹ ಶ್ರಾದ್ಧವನ್ನು ಹೇಗೆ ಮಾಡಬೇಕು?
– He has to do sankalpa shraddha.  ಸಂಕಲ್ಪ ಶ್ರಾದ್ಧ ಮಾಡಬೇಕು.
 
8.  Why one has to do Maataamaha shraaddha? ಮಾತಾಮಹ ಶ್ರಾದ್ಧವನ್ನು ಏಕೆ ಮಾಡಬೇಕು?
This shraddha is done as a RuNa parihaara for the janmadaatru of his mother.
ತನಗೆ ಕಾರಣರಾದ ತಾಯಿ ಜನ್ಮದಾತೃಗಳಾದ ಮಾತಾಮಹರ ಋಣ ಪರಿಹಾರಕ್ಕಾಗಿ ಮಾಡುವ ಶ್ರಾದ್ದವಿದು
 
9.  If it is for  a Grandson who has Jeevath Pitru, then how he can change his Janivara to left side? or just put the Janivara to the left thumb (just like in  Brahma Yagna?)
Yes.  He must do the sankalpa,   He has to hold the Janivaara with apasavya (but holding with the left hand thumb finger as he is jeevanpitru)  ಸಂಕಲ್ಪ ಶ್ರಾದ್ಧವನ್ನು ಮಾಡಬೇಕು.  ಸಂಕಲ್ಪವನ್ನು ಮಾಡುವಾಗ ಜೀವನ್ಪಿತೃವು  ತನ್ನ ಜನಿವಾರವನ್ನು ಎಡಗೈ ಹೆಬ್ಬಟ್ಟಿಗೆ ಹಾಕಿಕೊಂಡು ಮಾಡಬೇಕು.
 
10. What about the other rituals on Maatamaha shraaddha –
He has to do sankalpa shraaddha –   He must observe fasting till Brahmana bhojana.  He must arrange for brahmana bhojana.  He has to give him yathaashakthi daana. Then he must take bhojana.  Only one time bhojana.  In the night he can take tiffin.
ಸಂಕಲ್ಪ ಶ್ರಾದ್ಧವನ್ನು ಮಾಡಬೇಕು. ಸಂಕಲ್ಪ ಶ್ರಾದ್ಧದ ನಂತರ ಬ್ರಾಹ್ಮಣರಿಗೆ ಭೋಜನವನ್ನು ಏರ್ಪಾಟು ಮಾಡಿ, ತಾನೂ ಭುಂಜಿಸಬೇಕು.  ಅಲ್ಲಿಯವರೆಗೂ ಉಪವಾಸವಿರಬೇಕು.  ರಾತ್ರಿ ಫಲಹಾರವನ್ನು ಸ್ವೀಕರಿಸಬಹುದು.
 
ನರಹರಿ ಸುಮಧ್ವ 

Leave a Reply

Your email address will not be published.

Sumadhwa Seva © 2022