ಯತಿ ಮಹಾಲಯ

ಯತಿ ಮಹಾಲಯ

 

*Yati Mahalaya ಯತಿಮಹಾಲಯ*

– — ಭಾದ್ರಪದ ಬಹುಳ ದ್ವಾದಶಿ

 

*ಯತಿ ಹಸ್ತೋದಕ * : Yati Hastodaka*

 

ಯತಿ ಹಸ್ತೇ ಜಲಂ ದದ್ಯಾತ್ ಭೈಕ್ಷ್ಯಂ ದದ್ಯಾತ್ಪುನರ್ಜಲಂ |

ತದನ್ನಂ ಮೇರುಣಾ ತುಲ್ಯಂ ತಜ್ಜಲಂ ಸಾಗರೋಪಮಂ |

ವಟೌ ತು ಸಮದತ್ತಂ ಸ್ಯಾತ್ ಗೃಹಸ್ತೇ ದ್ವಿಗುಣಂ ಭವೇತ್ |

ವಾನಪ್ರಸ್ತೇ ಶತಗುಣಂ ಯತೌ ದತ್ತಮನಂತಕಂ ||

 

ಯತಿರ್ಯತ್ರ ಗೃಹೇ ಭುಂಕ್ತೇ ತತ್ರ ಭುಂಕ್ತೇ ಹರಿ: ಸ್ವಯಂ|

ಹರಿರ್ಯತ್ರ ಗೃಹೇ ಭುಂಕ್ತೇ ತತ್ರ ಭುಂಕ್ತೇ ಜಗತ್ರಯಂ ||

 

ಯತಿಗಳ ಕೈಯಲ್ಲಿ ಜಲವನ್ನು ಹಾಕಿ ಭಿಕ್ಷೆಯನ್ನು ನೀಡಿ ಮತ್ತೆ ಜಲವನ್ನು ನೀಡಿದಾಗ, ಆ ಅನ್ನವು ಮೇರು ಪರ್ವತಕ್ಕೆ ಸಮನಾಗಿದ್ದು ಆ ನೀರು ಸಾಗರಕ್ಕೆ ಸಮವಾದ ಫಲ.

 

ಒಬ್ಬ ವಟುವಿಗೆ ಉಣಬಡಿಸುವುದರಿಂದ ಬರುವ ಫಲಕ್ಕಿಂತ ಒಬ್ಬ ಗೃಹಸ್ತನಿಗೆ ಇತ್ತರೆ ಹೆಚ್ಚು ಫಲ. ವಾನಪ್ರಸ್ಥನಿಗೆ ಅದರ ನೂರರಷ್ಟು ಫಲ. ಆದರೆ ಯತಿಗೆ ಭಿಕ್ಷೆಯನಿತ್ತರೆ ಫಲ ಅನಂತವಂತೆ. ||

 

ಒಬ್ಬ ಯತಿಗೆ ಅನ್ನವನಿತ್ತರೆ ಅಂದರೆ ಭಿಕ್ಷೆಯನಿತ್ತರೆ ಅಲ್ಲಿ ಶ್ರೀ ಹರಿಯೇ ಅವರಲ್ಲಿದ್ದು ಉಣ್ಣುವನಂತೆ |

ಯಾವ ಮನೆಯಲ್ಲಿ ಯತಿಯಲ್ಲಿದ್ದು ಹರಿಯುಂಡರೆ ಆ ಮನೆಯಲ್ಲಿ ಮೂರು ಲೋಕಗಳಿಗೂ ಉಣಬಡಿಸಿದಂತೆ|

 

ಪ್ರಶ್ನೆ: ಎಂದು ಯತಿ ಮಹಾಲಯ ಆಚರಿಸಬೇಕು?

ಉತ್ತರ: ಭಾದ್ರಪದ ಬಹುಳ ದ್ವಾದಶಿ ದಿನವನ್ನು ಯತಿ ಮಹಾಲಯ ಎನ್ನುತ್ತಾರೆ. ಈ ದಿನ ಎಲ್ಲಾ ವೃಂದಾವನಸ್ಥರಾದ ಯತಿಗಳಿಗೂ ಹಸ್ತೋದಕ ನೀಡಬೇಕು. ಈ ದಿನ ಯತಿಗಳಿಗೆ ಮಾತ್ರ ಸೀಮಿತ.

 

ಪ್ರಶ್ನೆ ; *ಯತಿಮ‌ಹಾಲಯ ದಿನದಂದು ಪಿತೃಗಳಿಗೆ ಪಕ್ಷ ಮಾಡಬಹುದಾ* ?

ಉತ್ತರ: ಈ ದಿನ ಯಾರಿಗೂ ಪಕ್ಷ ಮಾಡುವಂತಿಲ್ಲ. ಅದೇ ದಿನ ಕಾಲಶ್ರಾದ್ಧವಿದ್ದರೆ ಶ್ರಾದ್ಧವನ್ನು ಮಾಡಬಹುದು ಪಕ್ಷವನ್ನಲ್ಲ. ಆದರೆ ಪಕ್ಷ ಮಾಸದ ಎಲ್ಲಾ ದಿನಗಳಲ್ಲೂ ಪಕ್ಷ ಶ್ರಾದ್ಧ ಮಾಡುವವರು ಏಕಾದಶಿ ಬಿಟ್ಟು ಬೇರೆಲ್ಲಾ ದಿನವೂ ಮಾಡಬಹುದು.

 

ಪ್ರಶ್ನೆ : *ಯತಿಗಳಿಗೂ ಪಿಂಡ ಪ್ರದಾನ ಮಾಡಬೇಕೆ* ?

ಉತ್ತರ: ಇಲ್ಲ. ಯತಿಗಳಿಗೆ ಹಸ್ತೋದಕ (ಹಸ್ತ + ಉದಕ) ನೀಡಬೇಕು.

 

ಪ್ರಶ್ನೆ : *ಯತಿ ಮಹಾಲಯ ಏಕೆ ಮಾಡಬೇಕು* ?

ಉತ್ತರ: ಪದ್ಮನಾಭ ತೀರ್ಥರು, (ಆನೆಗೊಂದಿ), ಶ್ರೀ ನರಹರಿ ತೀರ್ಥರು (ಹಂಪಿ), ಶ್ರೀ ಮಾಧವ ತೀರ್ಥರು (ಮಣ್ಣೂರು), ಶ್ರೀ ಅಕ್ಷೋಭ್ಯತೀರ್ಥರು (ಮಳಖೇಡ) ಮುಂತಾದ ಆಚಾರ್ಯರ ನೇರ ಶಿಷ್ಯರು, ಶ್ರೀ ಜಯತೀರ್ಥರು (ಮಳಖೇಡ), ಮುಂತಾದ ಸಮಸ್ತ ಯತಿಗಳಿಗೂ ಹಸ್ತೋದಕ ನೀಡಬೇಕು. ಅವರವರ ಮಠದ ವೃಂದಾವನಸ್ಥ ಯತಿಗಳಿಗೂ ಹಸ್ತೋದಕ ನೀಡಬೇಕು. ಅಷ್ಟೇ ಅಲ್ಲದೆ ನಿಮ್ಮ ಪರಂಪರಾ ಮಠದವರಲ್ಲದಿದ್ದರೂ ಹಲವಾರು ಯತಿಗಳ ಉಪಕಾರವನ್ನು ಯಾರೂ ಮರೆಯಲು ಅಸಾಧ್ಯ. ಉದಾಹರಣೆಗೆ ಶ್ರೀಪಾದರಾಜರು (ಮುಳಬಾಗಿಲು), ಶ್ರೀ ಬ್ರಹ್ಮಣ್ಯತೀರ್ಥರು (ಅಬ್ಬೂರು), ಶ್ರೀ ವ್ಯಾಸರಾಯರು, (ಆನೆಗೊಂದಿ), ಶ್ರೀ ವಾದಿರಾಜರು (ಸೋಂದಾ), ಶ್ರೀ ವಿಜಯೀಂದ್ರ ತೀರ್ಥರು (ಕುಂಭಕೋಣಂ), ಶ್ರೀ ರಘೋತ್ತಮರು (ತಿರುಕೋಯಿಲೂರು), , ಶ್ರೀ ರಾಯರು (ಮಂತ್ರಾಲಯ). ಅದಲ್ಲದೆ ಶ್ರೀ ವಾದೀಂದ್ರರು (ಮಂತ್ರಾಲಯ) ಶ್ರೀ ಸತ್ಯಧರ್ಮರು (ಹೊಳೆಹೊನ್ನೂರು), ಶ್ರೀ ಸತ್ಯಧ್ಯಾನರು (ಪಂಡರಾಪುರ) , ಶ್ರೀ ವಿದ್ಯಾಮಾನ್ಯರು (ಪಲಿಮಾರು), ಶ್ರೀ ದೇವೇಂದ್ರತೀರ್ಥರು (ಮುಳಬಾಗಿಲು), ಶ್ರೀ ವಿಶ್ವೇಶತೀರ್ಥರು (ಬೆಂಗಳೂರು), ಅಥವಾ ಇನ್ಯಾರೇ ನಿಮ್ಮ ಮೇಲೆ ಪ್ರಭಾವ ಬೀರಿದ ಯತಿಗಳಿಗೂ ಹಸ್ತೋದಕ ನೀಡಬೇಕು.

 

ಪ್ರಶ್ನೆ : *ಯತಿ ಹಸ್ತೋದಕ ನೀಡುವವರು ತರ್ಪಣಾಧಿಕಾರಿ ಆಗಿರಬೇಕೆ* ?

ಉತ್ತರ : ಇಲ್ಲ. ದೇವರ ಪೂಜೆ ಮಾಡುವ ಎಲ್ಲರೂ ನೀಡಬೇಕು.

 

ಪ್ರಶ್ನೆ : *ಯತಿಗಳಿಗೆ ಏಕೆ ಹಸ್ತೋದಕ ನೀಡಬೇಕು* ?

ಉತ್ತರ: ಯತಿಗಳು ನಮ್ಮ ಸಮಾಜಕ್ಕೆ ನೀಡಿದ ಉಪದೇಶ, ಗ್ರಂಥಗಳು, ಟೀಕೆ, ಟಿಪ್ಪಣಿ, ವ್ಯಾಖ್ಯಾನಗಳು ಇವುಗಳ ಉಪಕಾರ ಸ್ಮರಣೆಗಾಗಿ *ಹಸ್ತೋದಕ* ನೀಡಬೇಕು.

 

ಪ್ರಶ್ನೆ: *ಹಸ್ತೋದಕವನ್ನು ಯಾವಾಗ ಕೊಡಬೇಕು* ?

ಉತ್ತರ: ಹರಿನೈವೇದ್ಯ ಮಾಡಿದ ಮೇಲೆ ರಮಾ ನೈವೇದ್ಯ ಮಾಡಿ, ನಂತರ ಮುಖ್ಯಪ್ರಾಣ ನೈವೇದ್ಯ ಮಾಡಿ, ಗರುಡ ಶೇಷರಿಗೆ ನೈವೇದ್ಯ ಆದ ಮೇಲೆ ವೈಶ್ವದೇಲ ನಂತರ ಹಸ್ತೋದಕ ನೀಡಬೇಕು.

 

ಪ್ರಶ್ನೆ : *ಮನೆಯಲ್ಲಿ ಹಸ್ತೋದಕ ಮಾಡಲಾಗದವರು ಏನು ಮಾಡಬಹುದು* ?

ಉತ್ತರ: ನಿಮ್ಮ ಸಮೀಪದ ರಾಯರ ಮಠಗಳಲ್ಲಿ ಹಸ್ತೋದಕಕ್ಕೆ ಕೊಡಬಹುದು.

 

Bhadrapada Bahula Dwadashi is meant for Yathigalu. On this day, hastodaka will be given to all the Yatigalu who have entered Vrundavana.

 

On this day, Paksha for other pitrugalu and forefathers not to be done. This day is exclusively reserved for Yathigalu.

 

The reason for performing the Shraddha for Sanyaasis and saints is that they have preserved and preached us the knowledge of sanatharma dharma We have to do yathi dwadashi Hastodaka to get ourselves free from Yati Runa, that is why it is called as “Yati Dwadashi”. These Yatigalu having prepared so many shastra granthaas, vyaakyaanaas, Teeka granthaas have helped us a lot in learning ancient granthaas. So, we have Runa to them – Yati Runa. That is why we have do Yati Mahalaya.

 

This shraaddha to be done by Yatiputraaas only. Who are Yatiputraas? Those who have grantha/shastra runa from the yatigalu are termed as “yati putraas”. Yati Shraadda does not mean that we need to give pinda pradhana to yatigalu.

hastodaka to yatigalu. That is why all Mathas will arrange for Alankara bhojana..

 

Those who are doing daily paksha shraddha can do it on Yathi Mahalaya Dwadashi also.

 

*ನರಹರಿ ಸುಮಧ್ವ Narahari Sumadhwa*

ಸುಮಧ್ವಸೇವಾ

 

Sumadhwa Seva © 2022