uttaana dwaadashi ಉತ್ಥಾನ ದ್ವಾದಶಿ

utthaana dwaadashi

ಉತ್ಥಾನ ದ್ವಾದಶಿ

ಉತ್ಥಾನ ದ್ವಾದಶಿ

ಆಷಾಢದಲ್ಲಿ ಶಯನೀ ಏಕಾದಶಿಯಂದು ಲೋಕ ವಿಡಂಬನೆಗಾಗಿ ಶಯನಿಸಿರುವ ಶ್ರೀ ವಿಷ್ಣುವು ಕಾರ್ತೀಕ ಶುದ್ಧ ದ್ವಾದಶಿಯಂದು – ಪ್ರಭೋಧಿನಿಯಂದು ಏಳುವುದರಿಂದ ಇದನ್ನು ಉತ್ಥಾನ ದ್ವಾದಶಿ ಎಂದು ಕರೆಯುತ್ತಾರೆ.  ತುಲಸೀ ಸಹಿತ ಧಾತ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥವಾಗಿ ಈ ವ್ರತವನ್ನು ಮಾಡುವುದು  ರೂಢಿಯಲ್ಲಿದೆ.
ಈ ದಿನ ಪ್ರಭೋದೋತ್ಸವ ಮತ್ತು ತುಳಸಿ ವಿವಾಹವನ್ನು ಆಚರಿಸುತ್ತಾರೆ.

ಉತ್ಥಾನ ದ್ವಾದಶಿ ಪೂಜ ಆಚರಣೆ :

ಅನುಕೂಲವಿದ್ದರೆ ಧಾತ್ರಿ ವೃಕ್ಷದ ಮುಂದೆ ತುಳಸಿ ಸಸಿಯನ್ನಿಟ್ಟು ಪೂಜಿಸಬೇಕು. ಇಲ್ಲದಿದ್ದರೆ ತುಳಸೀ ವೃಂದಾವನದ ಹತ್ತಿರ / ಧಾತ್ರೀ ವೃಕ್ಷದ ಕೊಂಬೆಯನ್ನಿಟ್ಟು ಅದರ ಮುಂದ ಶ್ರಿಕೃಷ್ಣನ ಪ್ರತಿಮೆ ಮತ್ತು /ಅಥವಾ ಸಾಲಿಗ್ರಾಮಗಳನ್ನಿಟ್ಟು ಪೂಜೆ ಮಾಡತಕ್ಕದ್ದು. ತುಳಸಿ ಕಟ್ಟೆಗೆ ಬಣ್ಣವನ್ನು ಹಚ್ಚಿ, ರಂಗೋಲಿ ಹಾಕಿ, ಅಲಂಕಾರ ಮಾಡಬೇಕು.
ದೇವರ ಪೂಜೆಯ ನಂತರ ತುಳಸೀ ಪೂಜೆಯನ್ನು ಮಾಡಬೇಕು. ನೈವೇದ್ಯ ಮಾಡುವಾಗ ದೇವರಿಗೆ ನೈವೇದ್ಯ ಮಾಡಿ, ಮಹಾಲಕ್ಷ್ಮಿಗೆ ನೈವೇದ್ಯ ಮಾಡಿ, ಪ್ರಾಣದೇವರಿಗೆ ನೈವೇದ್ಯ ಮಾಡಿ ನಂತರ ತುಳಸಿಗೆ ನೈವೇದ್ಯ ಮಾಡಬೇಕು. ಯಥಾಶಕ್ತಿ ಭಕ್ಷ್ಯ, ಭೋಜ್ಯ ತಯಾರಿಸಿ ಸಮರ್ಪಿಸಬೇಕು.
ಧಾತ್ರಿ ಕಾಯಿಯಲ್ಲಿ (ನೆಲ್ಲಿಕಾಯಿಗಳಲ್ಲಿ)- ಐದು, ಏಳು, ಒಂಭತ್ತು ನೆಲ್ಲಿಕಾಯಿಗೆ ತುಪ್ಪದ ದೀಪ ಹಚ್ಚಿ ಆರತಿ ಬೆಳಿಗ್ಯೆ ಮತ್ತು ಸಂಜೆ ಮಾಡತಕ್ಕದ್ದು.

 

Who is Tulasi?  –   “ತುಳಸಿ” – {Ocimum tenuiflorum} 

 

ಸುಧೆಗಡಲ ಮಥಿಸುವ ಸಮಯದಿ ವೈದ್ಯನಾಗಿ
ಪದುಮನಾಭನು ತಾನು ಉದ್ಭವಿಸಿ ಬರಲಂದು
ಉದುರಿದವು ಕಣ್ಣಿಂದ ಉದವುತ್ಸಹದಿಂದಲದೆ
ತುಳಸಿನಾಮವಾಗೆ |
ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು
ಒದಗಿ ಸುಜನರು ತಮ್ಮ ಸದನದಿ ನಿತ್ಯ ಸ
ತ್ಪದವಿದೆ ಸಿದ್ದವೆಂದು ಮುದದಿಂ ತಿಳಿದು
ವೃಂದಾವನವ ರಚಿಸಿದರೈಯ್ಯಾ |

 

ಹಿಂದೆ ಅಮೃತಪ್ರಾಪ್ತಿಗಾಗಿ ದೇವದಾನವರು ಕ್ಷೀರಸಮುದ್ರದಲಿ ಮಂದರಪರ್ವತವನ್ನು ಕಡುಗೋಲಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ, ಮಾಡಿಕೊಂಡು ಶ್ರೀಹರಿಯ ಅದ್ಭುತ ಮಹಿಮೆಯ ಸಹಾಯದಿಂದ ಸಮುದ್ರಮಥನ ಮಾಡಿದರು. ಆಗ ಅಮೃತಕಲಶವನ್ನು ಹಿಡಿದುಕೊಂಡು ಶ್ರೀಹರಿಯು ವೈದ್ಯರೂಪನಾಗಿ ಸಮುದ್ರಮಧ್ಯದಿಂದ ಧನ್ವಂತರೀರೂಪದಿಂದ ಅವತರಿಸಿದನು. ಆ ದಿನ ಕಾರ್ತಿಕ ಹುಣ್ಣಿಮೆಯಾಗಿತ್ತು. ತಕ್ಷಣ ಅವನ ಕಣ್ಣಿಂದ ಆನಂದಾಶ್ರುವಿನ ಹನಿಗಳು ಅಮೃತಕಲಶದಲ್ಲಿ, ಬೀಳಲು ತುಳಸಿಯ ಜನನವಾಯ್ತು.  

 

ತುಲಸಿ ನಮಸ್ಕಾರ – तुलसि नमस्कार –
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಾಯಣ ಮನ:ಪ್ರಿಯೇ |
तुलसि श्रीसखि शुभे पापहारिणि पुण्यदे ।
 नमस्ते नारदनुते नारायण मन:प्रिये ।

 

तुलसी मृत्तिकाधारण मंत्र – ತುಲಸೀ ಮೃತ್ತಿಕಾಧಾರಣ ಮಂತ್ರ –
 ललाटे यस्य दृश्यते तुलसीमूलमृत्तिका ।
 यमस्तं नेक्षितुं शक्त: दूता भयंकरा: ।
ಲಲಾಟೇ ಯಸ್ಯ ದೃಶ್ಯತೇ ತುಲಸೀಮೂಲಮೃತ್ತಿಕಾ |
ಯಮಸ್ತಂ ನೇಕ್ಷಿತುಂ ಶಕ್ತ: ದೂತಾ ಭಯಂಕರಾ: |

ತುಲಸೀಮಾಲಾಧಾರಣ ಮಂತ್ರ – तुलसीमालाधारण मंत्र –
ತುಲಸೀಕಾಷ್ಟಸಂಭೂ:ತೇ ಮಾಲೇ ಕೃಷ್ಣಜನಪ್ರಿಯೇ |
ಬಿಭರ್ಮಿ ತ್ವಾಮಹಂ ಕಂಠೇ ಕುರು ಮಾಂ ಕೃಷ್ಣವಲ್ಲಭಂ |
तुलसीकाष्टसंभू:ते माले कृष्णजनप्रिये ।
बिभर्मि त्वामहं कंठे कुरु मां कृष्णवल्लभं ।

 

तुलसि अर्घ्यमंत्र: ತುಲಸಿ ಅರ್ಘ್ಯಮಂತ್ರ:
श्रिय: प्रिये श्रीयावासे नित्यं श्रीधरवल्लभे ।
भक्त्यादत्तं मयार्घ्यं हि तुलसि प्रतिगृह्यतां ।
ಶ್ರಿಯ: ಪ್ರಿಯೇ ಶ್ರೀಯಾವಾಸೇ ನಿತ್ಯಂ ಶ್ರೀಧರವಲ್ಲಭೇ |
ಭಕ್ತ್ಯಾದತ್ತಂ ಮಯಾರ್ಘ್ಯಂ ಹಿ ತುಲಸಿ ಪ್ರತಿಗೃಹ್ಯತಾಂ |

 

ತುಲಸ್ಯಾಹರಣ ಮಂತ್ರ  तुलस्याहरण मंत्र
ತುಲಸ್ಯಮೃತಜನ್ಮಾಸಿ ಸದಾ ತ್ವಂ ಕೇಶವಪ್ರಿಯೇ |
ಕೇಶವಾರ್ಥೇ ಚಿನೋಮಿ ತ್ವಾಂ ಕ್ಷಮಸ್ವ ಹರಿವಲ್ಲಭೇ |
तुलस्यमृतजन्मासि सदा त्वं केशवप्रिये ।
केशवार्थे चिनोमि त्वां क्षमस्व हरिवल्लभे ।

 

नवविध तुलसी पूजा ನವವಿಧ ತುಲಸೀ ಪೂಜಾ
दृष्ट्वा स्पृष्ट्वा स्मृत्वा ध्यात्वा नामत: स्तुता ।
रूपिता सेचिता नित्यं पूजिता तुलसी शुभा ।
ದೃಷ್ಟ್ವಾ ಸ್ಪೃಷ್ಟ್ವಾ ಸ್ಮೃತ್ವಾ ಧ್ಯಾತ್ವಾ ನಾಮತ: ಸ್ತುತಾ |
ರೂಪಿತಾ ಸೇಚಿತಾ ನಿತ್ಯಂ ಪೂಜಿತಾ ತುಲಸೀ ಶುಭಾ |

 

ತುಲಸೀಪ್ರದಕ್ಷಿಣೆ ಮಾಡುವಾಗ ಹೇಳಬೇಕಾದ ಮಂತ್ರ –
ತುಲಸೀಲಾನನಂ ಯತ್ರ ಯತ್ರ ಪದ್ಮವನಾನಿ ಚ |
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿ: |
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾ: ಸರಿತಸ್ತಥಾ |
ವಾಸುದೇವಾದಯೋ ದೇವಾ ವಸಂತಿ ತುಲಸೀವನೇ |
ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಂ |

 

ತುಳಸಿಯ ಮಹಾಮಹಿಮೆ 
 • ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟ್ವಾ ವಪು: ಪಾವನೀ
  ರೋಗಾಣಾಂ ಅಭಿವಂದಿತಾ ನಿರಸನೀ ಸಿಕ್ತಾಂತಕತ್ರಾಸಿನೀ |
  ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾ
  ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮ: ||
 • ತುಳಸಿಗೆ ನಮಸ್ಕರಿಸಬೇಕು – ಆ ತುಳಸಿಯು ಏನೇನು ಮಾಡತಕ್ಕಂತವಳು ಎಂಬುದನ್ನು ಈ ಶ್ಲೋಕ ಹೇಳುತ್ತದೆ –
 • ತನ್ನ ದರ್ಶನಮಾತ್ರದಿಂದ ಸಕಲಪಾಪಗಳ ಹಿಂಡನ್ನೇ ಪರಿಹರಿಸುತ್ತದೆ.
 • ತನ್ನ ಸ್ಪರ್ಶನದಿಂದ ಇಡೀ ದೇಹವನ್ನೇ ಪಾವನಗೊಳಿಸುತ್ತದೆ
 • ವಂದನೆ ಮಾತ್ರದಿಂದ ಸಕಲರೋಗಗಳನ್ನೂ ಗುಣಪದಿಸುತ್ತದೆ
 • ಪ್ರೋಕ್ಷಣದಿಂದ ಯಮನ ಭಯವನ್ನು ಪರಿಹರಿಸುತ್ತದೆ
 • ಮನೆಯಲ್ಲಿ ಬೆಳೆಸುವುದರಿಂದ ಭಗವಂತನಾದ ಶ್ರೀ ಕೃಷ್ಣನಲ್ಲಿ ಭಕ್ತಿಯನ್ನು ಕರುಣಿಸುತ್ತದೆ
 • ತುಳಸಿಯನ್ನು ಪರಮಾತ್ಮನ ಪಾದಕಮಲದಲ್ಲಿ ಸಮರ್ಪಣದಿಂದ ಮುಕ್ತಿ ಫಲವನ್ನು ನೀಡುತ್ತದೆ
In Chaturmasya Ashada Shukla Ekadashi Srihari pretends to go on sleeping and in Bhadrapa Shukla he will change the direction of his sleeping.  In Karteeka Shukla Dwadashi Srihari will get up, that day is called as Uttana Dwadashi.  On this Dwidalavratha and Chaturmasya Vrata samapthi must be done with the mantra :
Uthwana Dwadashi also signifies the beginning of Ksheera sagar mathan (churning of the milky Ocean).
Tulasi was born during Amruta Mathana.  She is mostly liked by Srihari.  We are plucking Tulasi for the pooja of Srihari.
ಇದಂ ವ್ರತಂ ಮಯಾದೇವ ಕೃತಂ ಪ್ರೀತ್ಯೈ ತವ ಪ್ರಭೋ |
ನ್ಯೂನಂ ಸಂಪೂರ್ಣತಾಂ ಯಾತು ತ್ವತ್ಪ್ರಸಾದಾತ್ ಜನಾರ್ಧನ||
इदं व्रतं मयादेव कृतं प्रीत्यै तव प्रभो ।
न्यूनं संपूर्णतां यातु त्वत्प्रसादात् जनार्धन॥
This dwadashi is also called as Prabhodini Dwadashi. – a day said to be the waking in of Srihari and the samapthi of Chaturmaasya also.

AshaaDhadalli shayanI EkaadashiyaMdu lOka viDaMbanegaagi shayanisiruva shrI viShNuvu kaartIka shuddha dwaadashiyaMdu – prabhOdhiniyaMdu ELuvudariMda idannu utthaana dwaadashi eMdu kareyuttaare.

I dina prabhOdOtsava mattu tuLasi vivaahavannu Acharisuttaare.

 

 

Link for Tulasi vivaaha Click    Tulasi vivaaha      

click :

http://www.sumadhwaseva.com/wp-content/uploads/2010/11/Tulasi-Kalyanam-Kannada.pdf 

For Sanskrit version Click :
http://www.sumadhwaseva.com/wp-content/uploads/2010/11/Tulasi-Vivaha-Sanskrit.pdf   

 

Updated: November 1, 2021 — 6:46 pm

Leave a Reply

Your email address will not be published.

Sumadhwa Seva © 2022