Teekarayara Aradhana

ಟೀಕಾಚಾರ್ಯರ ಪಾದ ಸೋಕಿದ

ಕೊನೆ ಧೂಳಿ ತಾಕಿದ ಮನುಜರಿಗೆ

ಕಾಕು ಬುದ್ದಿಗಳೆಲ್ಲ ಪರಿಹಾರವಾಗುವುದು

ಬೇಕಾದ ಪದವಿಯ ಕೊಡುವನು ಶ್ರೀಹರಿ

“ಟೀಕಾರಾಯರ ಆರಾಧನ”

ಶ್ರೀಗುರುಭ್ಯೋನಮ: ಹರಿ ಓಂ |

ಟೀಕಾರಾಯರ ಆರಾಧನ

ವಿವರ

ಇಂದು ಶಾಕಾಂಬರಿನಗರ ರಾಯರಮಠದಲ್ಲಿ ಶ್ರೀಟೀಕಾರಾಯರ ಆರಾಧನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  ಮಧ್ವ ಶಾಸ್ತ್ರ ಸಂಪನ್ನ ಪೂಜ್ಯ ಶ್ರೀ ದ್ವಾರಕಾನಾಥಾಚಾರ್ಯರು ಶ್ರೀ ಜಯತೀರ್ಥರ ಶ್ರೀಮನ್ಯಾಯಸುಧಾ ಗ್ರಂಥದ ಬಗ್ಯೆ ಉಪನ್ಯಾಸವನ್ನು ನೀಡಿದರು.  ಅವರು ಶ್ರೀಮನ್ಯಾಯಸುಧಾ ಗ್ರಂಥದ ಪ್ರಥಮ ಶ್ಲೋಕದ ಪ್ರಥಮ ಪದದ ಬಗ್ಯೆಯೇ ಸುಮಾರು  90 ನಿಮಿಷಗಳಷ್ಟು ತಮ್ಮ ವಾಗ್ವೈಖರಿಯಿಂದ ಅದ್ವೈತಾದಿಗ್ರಂಥಗಳನ್ನು ಖಂಡಿಸುತ್ತಾ ಮಧ್ವಶಾಸ್ತದ ವೈಶಿಷ್ಟ್ಯವನ್ನು ವಿವರಿಸಿದರು.

ನಂತರ ಶ್ರೀ ಶ್ರೀನಿವಾಸಾಚಾರ್ಯರ ಉಪನ್ಯಾಸ ನಂತರ ಭಜನಾ ಮಂಡಳಿಯಿಂದ ಟೀಕಾರಾಯರ ಬಗ್ಯೆ ದೇವರನಾಮಗಳೊಂದಿಗೆ ರಥೋತ್ಸವ, ಮಂಗಳಾರತಿ, ಅಲಂಕಾರಸೇವೆ, ಮತ್ತು ತೀರ್ಥಪ್ರಸಾದವನ್ನು ಏರ್ಪಡಿಸಲಾಗಿತ್ತು.

Updated: July 13, 2009 — 7:54 am
Sumadhwa Seva © 2022