ಆಷಾಢ ಬಹುಳ ದ್ವಾದಶಿ

ಆಷಾಢ ಬಹುಳ ದ್ವಾದಶಿ 
ಮದುವೆಯಾದ ಮೊದಲನೇ ವರ್ಷದ ಆಷಾಢ ಮಾಸದಲ್ಲಿ ಅತ್ತೆಯ ಜೊತೆಯಲ್ಲಿ ಸೊಸೆಯಿರಬಾರದೆಂಬ ಸಂಪ್ರದಾಯವಿದೆ. ತವರುಮನೆಗೆ ಹೋಗಿರುವ ಸೊಸೆ ಅಲ್ಲೇ ದಿವಸೀಗೌರಿ ವ್ರತವನ್ನು ಆಚರಿಸಬೇಕು. ಮೊದಲ ವರ್ಷದ ಭೀಮನ ಅಮಾವಾಸ್ಯೆ ದಿನ ಗೌರೀಪೂಜೆ ಮಾಡುವ ಮೊದಲು ಆಷಾಢ ಬಹುಳ ದ್ವಾದಶಿ ಸಂಜೆ ಗೌರೀಪೂಜೆಯನ್ನು ಮಾಡಬೇಕು.
ಅಮಾವಾಸ್ಯೆಯಂದು ಮಂಗಳಗೌರಿ ಪೂಜೆಯನ್ನು ಪ್ರಾರಂಭ ಮಾಡುವುದು ತರವಲ್ಲ ಎಂದು ಹಿರಿಯರು ಆಷಾಢ ಬಹುಳ ದ್ವಾದಶಿಯಂದು ಪ್ರದೋಷ ಸಮಯದಲ್ಲಿ ಪೂಜೆಯನ್ನು ಮಾಡುವ ಸಂಪ್ರದಾಯ ಹಾಕಿದ್ದಾರೆ.  ದ್ವಾದಶಿಯಂದು ಮಂಗಳವಾರ ಇರಬೇಕೆಂಬ ನಿಯಮವಿಲ್ಲ. ಪ್ರದೋಷ ಕಾಲದಲ್ಲಿ ಶಿವ ಪಾರ್ವತಿಯ ವಿಶೇಷ ಸಾನ್ನಿಧ್ಯ ಹೊಂದಿರುತ್ತಾರೆ, ಆದ್ದರಿಂದ ಪ್ರದೋಷ ಕಾಲದಲ್ಲಿ ಮಾಡುವ ಸಂಪ್ರದಾಯವಿದೆ,
ಈದಿನ ಸೊಸೆ ತವರು ಮನೆಯಲ್ಲಿರುವುದರಿಂದ ಅತ್ತೆಯಾದವಳು ಬೀಗಿತ್ತಿಯ ಮನೆಗೇ ಬಂದು ಪೂಜೆಯನ್ನು ಮಾಡಿಸಬೇಕು. ಮಂಗಳಗೌರಿ ವ್ರತವನ್ನು ಕೂಡ ಆಷಾಢ ಬಹುಳ ದ್ವಾದಶಿ ಮಾಡಬೇಕು. ಜೊತೆಗೆ ದಿವಸೀಗೌರಿ ಪೂಜೆಯನ್ನೂ ಮಾಡಬೇಕು.
ವಿಧಾನ :. ಒಂದು ಪಾತ್ರೆಯಲ್ಲಿ ತೆಂಗಿನಕಾಯಿ, ಅಕ್ಕಿ, ಒಣಕೊಬ್ಬರಿ, ಬಟ್ಟಲಡಿಕೆ, ಇವುಗಳನ್ನು ತುಂಬಿ ಸೊಸೆಗೆ ನೀಡಬೇಕು. ಮರದ ಬಾಗಿನ ಕೊಡಬೇಕು. ಸೊಸೆಯ ಬೀಗಿತ್ತಿಗೂ ಸೀರೆಯನ್ನು ರವಿಕೆ ಸಹಿತ ನೀಡಬೇಕು.
ಆಷಾಢ ಬಹುಳ ದ್ವಾದಶಿ ಸಂಜೆ ಪೂಜೆ ಗೌರಿ ಪೂಜೆ ನಂತರ ಬ್ರಾಹ್ಮಣ ಮುತ್ತೈದೆಯರಿಗೆ ಭಕ್ಷ್ಯಸಹಿತ ಫಲಾಹಾರ ಮಾಡಿಸಬೇಕು. ನಂತರದಲ್ಲಿ ಮಂಗಳಗೌರಿಯ ಕಥೆಯನ್ನು ಹೇಳಬೇಕು / ಕೇಳಬೇಕು.
ಮುಂದೆ ಆಷಾಢ ಅಮಾವಾಸ್ಯೆ ದಿನ ಭೀಮನ ಅಮಾವಾಸ್ಯೆ ವ್ರತವನ್ನೂ ಮುಂದಿನ ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳಗೌರಿ ವ್ರತವನ್ನೂ ಮಾಡಬೇಕು.
Sumadhwa Seva © 2022