ಮಣ್ಣೆತ್ತಿನ ಅಮಾವಾಸ್ಯೆ

ಮಣ್ಣೆತ್ತಿನ ಅಮಾವಾಸ್ಯೆ

(ಮೃತ್ತಿಕಾ ವೃಷಭ ಪೂಜೆ)

|ಮೃಣ್ಮಯ ವೃಷಭ ಪೂಜಾವಿಧಿಃ (ಮೃತ್ತಿಕಾ ವೃಷಭ ಪೂಜಾ) |

ಮಣ್ಣೆತ್ತಿನ ಅಮಾವಾಸ್ಯೆ (ಜ್ಯೇಷ್ಠಮಾಸ ಕೃಷ್ಣಪಕ್ಷ ಅಮಾವಾಸ್ಯೆ)

ನಮ್ಮ ಭಾರತ ವೈವಿಧ್ಯತೆಯ ದೇಶ. ನಮ್ಮಲ್ಲಿರುವ ಸಂಪ್ರದಾಯ, ಹಬ್ಬ, ಆಚರಣೆಗಳಿಗೆ ಬಹಳ ಮಹತ್ವವಿದೆ. ಅದೇ ರೀತಿ ರೈತ ವರ್ಗಕ್ಕೇ ಹಲವಾರು ಹಬ್ಬಗಳಿವೆ. ರೈತರ ಉಸಿರೇ ಮಣ್ಣು ಮತ್ತು ಜಾನುವಾರುಗಳು, ಮಣ್ಣೆತ್ತಿನ ಅಮಾವಾಸ್ಯೆ ಸಾಮಾನ್ಯ ಜನರಿಗೆ ವಿಶೇಷ ಇಲ್ಲದಿದ್ದರೂ ರೈತನಿಗೆ ಅತ್ಯಂತ ಮೆಚ್ಚಿನ ಹಬ್ಬ.

 

ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣಿನಿಂದ ಮಾಡಿದ ಎತ್ತುಗಳಿಗೆ (ವೃಷಭ) ಅಲಂಕರಿಸಿ ಹಬ್ಬವನ್ನು ಆಚರಿಸಲಾಗುವುದು.

ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣಿನ ಎತ್ತಿನ ಪ್ರತಿಮೆಗಳಿಗೆ ಸಿಂಗರಿಸಿ ಪೂಜೆ ಮಾಡಲಾಗುವುದು.

ಮುಂಗಾರು ಮಳೆ ಸಾಮಾನ್ಯವಾಗಿ ಗ್ರೀಷ್ಮ ಋತುವಿನ ಅಂತ್ಯಭಾಗ ಮತ್ತು ವರ್ಷ ಋತುವಿನ ಆರಂಭವಾಗ, ಅಂದರೆ ಜೂನ್ ವೇಳೆಗೆ, ಪ್ರಾರಂಭವಾದಾಗ ಕೃಷಿ ಚಟುವಟಿಕೆಗಳು ಕೂಡ ಚುರುಕಾಗುತ್ತದೆ.
ಪುನರ್ವಸು ಮಳೆ ಪ್ರಾರಂಭವಾಗುವ ಹೊತ್ತಿಗೆ ಬಿತ್ತನೆ ಆಗಿ, ನಾಟಿ ಕೂಡ ಮುಗಿದಿರುತ್ತದೆ, ಈ ಸಂಭ್ರಮವನ್ನು ಆಚರಿಸಲು ರೈತರು ಮಣ್ಣೆತ್ತಿನ ಅಮವಾಸ್ಯೆ ಆಚರಿಸುತ್ತಾರೆ.

ಈ ದಿನ ರೈತರು ಹೊಲಕ್ಕೆ ಹೋಗಿ, ಹೊಲದ ಮಣ್ಣು ತಂದು ಆ ಮಣ್ಣಿನಿಂದ ಜೋಡಿ ಎತ್ತುಗಳನ್ನು ತಯಾರಿಸುತ್ತಾರೆ. ನಂತರ ಅವುಗಳಿಗೆ ಬಣ್ಣ ಹಚ್ಚಿ ಸಿಂಗಾರ ಮಾಡಿ ಪೂಜಿಸಲಾಗುವುದು. ನಂತರ ಎತ್ತುಗಳಿಗೆ ಹೋಳಿಗೆ, ಸಿಹಿ ಕಡಬು ಇಟ್ಟು ಸಮರ್ಪಿಸಲಾಗುತ್ತದೆ. ನಂತರ ತಮ್ಮ ಜಮೀನಿನಲ್ಲಿ ಆ ಎತ್ತುಗಳನ್ನು ಇಟ್ಟು ಭೂತಾಯಿ ಹಾಗೂ ಎತ್ತುಗಳು ತಮ್ಮ ಬೆಳೆಯನ್ನು ರಕ್ಷಣೆ ಮಾಡಿ ಎಂದು ಬೇಡಿಕೊಳ್ಳುವುದು ವಾಡಿಕೆ. ಜೊತೆಗೆ ಮಣ್ಣಿನ ಆರಾಧನೆಯನ್ನು ಕೂಡ ಮಾಡಲಾಗುವುದು. ಮಣ್ಣಿನಿಂದ ಮಾಡಿದ ಗಣಪತಿ, ನಾಗಪ್ಪನ ನಾವು ಗಣೇಶ ಚತುರ್ಥಿ ಮತ್ತು ನಾಗರಚೌತಿ ದಿನ ಪೂಜಿಸುವಂತೆ ರೈತ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ ಆಚರಿಸುತ್ತಾನೆ.

 

ಭೂಮಿಯಲ್ಲಿ ಹುಟ್ಟುವುದಾದರೆ ಭೂಮಿಯಲ್ಲಿ ಬೀಜ ಬಿತ್ತಲು, ಬಿತ್ತಿದ ಫಸಲು ಬಂದ ಮೇಲೆ ಧಾನ್ಯ ರೂಪದಿಂದ ನಾವು ಪಡೆಯಲು ಈ ವೃಷಭಗಳ ಸೇವೆ ಅತ್ಯಂತ ಅವಶ್ಯವಾಗಿದೆ. ವೃಷಭವು ಶಿವನ(ರುದ್ರದೇವರ) ವಾಹನವಾದ್ದರಿಂದ ಶಿವನು ನಂದೀಶನೆಂದೇ ಪ್ರಸಿದ್ಧನಾಗಿದ್ದಾನೆ. ಹೀಗೆ ಮಾನವನು ವೃಷಭಗಳಿಗೆ ಅತ್ಯಂತ ಕೃತಜ್ಞನಾಗಿದ್ದಾನೆ. ಪಂಚಭೂತಗಳಿಂತ ನಿರ್ಮಿತವಾದ ಈ ದೇಹವು ಪಂಚಭೂತಗಳಲ್ಲಿ ಒಂದಾದ ಭೂಮಿಯ ಅಂಶದಿಂದ ಕೂಡಿದೆ.

ಭೂದೇವಿಯ ಪೂಜೆಯೂ ಮಣ್ಣೆತ್ತಿನ ಪೂಜೆಯಲ್ಲಿ ಅಡಗಿದೆ. ಈ ದಿವಸ ವಿಶೇಷ ಅಡುಗೆಯನ್ನು ಮಾಡಿ ಹರಿವಾಯುಗಳಿಗೆ ನಿವೇದಿಸಿ,ವೃಷಭಗಳಿಗೆ ನೈವೇದ್ಯ ಸಲ್ಲಿಸಿ ಭೋಜನ ಮಾಡುವುದು ರೂಢಿಯಲ್ಲಿ ಬಂದಿದೆ.

ಪೂಜಾ ವಿಧಾನ:

******************

ಆಚಮನ, ಪ್ರಾಣಾಯಾಮ, ದೇಶಕಾಲವನ್ನು ಹೇಳಿ..

ಜ್ಯೇಷ್ಠ ಮಾಸ ಕೃಷ್ಣ ಪಕ್ಷೇ ಅಮಾವಾಸ್ಯಾಂ ಶುಭ ತಿಥೌ, ….. ನಕ್ಷತ್ರ, …… ಯೋಗ, ……..ಕರಣೇ, ಮಮ ಸಪರಿವಾರಸ್ಯ ಕ್ಷೇಮ  ಸ್ಥೈರ್ಯ ವೀರ್ಯ ವಿಜಯ ಅಭಯ ಆಯುರಾರೋಗ್ಯ ಐಶ್ವರ್ಯಾದಿ ಅಭಿವೃದ್ಧಿಪೂರ್ವಕಂ ಸಮಸ್ತ ಮಂಗಲಾವಾಪ್ತ್ಯರ್ಥಂ ಜ್ಯೇಷ್ಠ ಅಮಾವಾಸ್ಯಾಯಾಂ ಪ್ರತಿವಾರ್ಷಿಕಂ ಕುಲಾಚಾರತ್ವೇನ ವಿಹಿತಂ ಸಸ್ಯಾಭಿವೃದ್ಧ್ಯರ್ಥಂ ಈತಿಬಾಧಾ ವಿನಾಶ, ಸುವೃಷ್ಟ್ಯಾದಿ ಪ್ರಾಪ್ತ್ಯಾ ಧನಧಾನ್ಯ ಸಮೃದ್ಧ್ಯರ್ಥಂ ಶ್ರೀಉಮಾಪತಿ ರುದ್ರಾಂತರ್ಗತ  ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಜಯಾಪತಿ ಸಂಕರ್ಷಣಾಭಿನ್ನ ಶ್ರೀಲಕ್ಷ್ಮೀನರಸಿಂಹ ಪ್ರೇರಣಯಾ ಶ್ರೀಲಕ್ಷ್ಮೀನರಸಿಂಹ ಪ್ರಿತ್ಯರ್ಥಂ ಮೃಣ್ಮಯ ವೃಷಭ ಪೂಜನಂ ಕರಿಷ್ಯೇ || ( ಮಂತ್ರಾಕ್ಷತೆ ನೀರು ಅರ್ಘ್ಯ ಪಾತ್ರೆಯಲ್ಲಿ  ಬಿಡಬೇಕು).

ನಂತರ ಕಲಶಪೂಜಾದಿಗಳನ್ನು ಮಾಡಿಕೊಂಡು ಮಣ್ಣೆತ್ತುಗಳಲ್ಲಿ ಜಯಾಪತಿ ಸಂಕರ್ಷಣನ ಸಂಕ್ಷಿಪ್ತ ಪ್ರಾಣಪ್ರತಿಷ್ಠೆ ಮಾಡಿ ಪುರುಷಸೂಕ್ತದಿಂದ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.

ಧ್ಯಾನ ಶ್ಲೋಕ:

************

ಧರ್ಮಸ್ತ್ವಂ ವೃಷರೂಪೇಣ ಜಗದಾನಂದಕಾರಕ |

ಅಷ್ಟಮೂರ್ತೇರಧಿಷ್ಠಾನಂ ಅತಃ ಪಾಹಿ ಸನಾತನ ||

(ವೇದೋಕ್ತ ಪೂಜೆ ಮಾಡುವುದಾದರೆ ಈ ಕೆಳಗಿನ ಮಂತ್ರದಿಂದ ಪೂಜೆ ಮಾಡಬೇಕು)

ಋಷಭಮೇತ್ಯಸ್ಯ ಮಂತ್ರಸ್ಯ ಭೀಮಸೇನ ಋಷಿಃ,ವಿರಾಜಪುತ್ರೋ ಋಷಭ ಋಷಿಃ, ಶಕ್ವರೀ ಛಂದಃ, ವಾಚಸ್ಪತಿರ್ದೇವತಾ, ಋಷಭನಾಮಕ ವಿಷ್ಣ್ವಾವಾಹನೆ ವಿನಿಯೋಗಃ ||

ಓಂ || ಋಷಭಂ ಮಾ ಸಮಾನಾನಾಂ ಸಪತ್ನಾನಾಂ ವಿಷಾ ಸಹಿಂ |

ಹಂತಾರಂ ಶತೃಣಾಂ ಕೃಧಿ ವಿರಾಜಂ ಗೋಪತಿಂ ಗವಾಂ ||

|| ನಾಹಂ ಕರ್ತಾ ಹರಿಃ ಕರ್ತಾ ||

|| ಶ್ರೀ ಕೃಷ್ಣಾರ್ಪಣಮಸ್ತು ||

 

(ಪೂಜಾ ವಿಧಾನ : ವ್ರತಮುಕ್ತಾವಲಿಯಿಂದ ಆಯ್ದದ್ದು)

Sumadhwa Seva © 2022