ಶಂಭೋ ಸ್ವಯಂಭೂ ಸಂಭವ

*ಶ್ರೀ ವಿಜಯದಾಸರ ಕೃತಿ*
*ಶಂಭೋ ಸ್ವಯಂಭೂ ಸಂಭವ*
ಗುರುಪ್ರಸಾದ್ ಮತ್ತು ಸಂಗಡಿಗರು*

*Click here*
*https://youtu.be/aG0gRtqCH1kಶಂಭೋ*

ಶಂಭೋ ಸ್ವಯಂಭು ಸಂಭವ-ನಂಬಿದೆ ಕಾಯೊ
ಜಂಭಾರಿಸುತ ಅಭವ
ಅಂಬರ ಪುರಹರ ಸಾಂಬ ತ್ರಿಯಂಬಕ
ಶಂಬಕಾರಿ ರಿಪುಗಂಭೀರ ಕರುಣಿ

ಭಸಿತ ಭೂಷಿತ ಶರೀರ-ಭಕ್ತರುದ್ಧಾರ
ವಿಷಕಂಠ ದುರಿತಹರ
ಪಶುಪತಿ ಫಣಿಹಾರ-ಪಾವನಕಾರ
ತ್ರಿಶೂಲ ಡಮರುಗಧರ
ನೊಸಲನಯನ ವಿಕಸಿತಾಂಬುಜ ಮುಖ
ಶಶಿಧರ ಮತ್ತರಕ್ಕಸ ಮದ ಮರ್ದನ
ಘಸಣೆಗೊಳಿಪ ತಾಮಸವ ಕಳೆದು ಮಾ-
ನಸದಲಿ ರಂಗನ ಬಿಸಜ ಪಾದವ ತೋರೊ ||1||

ರಜತ ಪರ್ವತ ನಿವಾಸ ನಿರ್ಮಲ ಭಾಸ
ಗಜವೈದ್ಯನಾಶ ಗಿರೀಶ
ಸುಜನರ ಮನೋವಿಲಾಸ ವ್ಯೋಮಕೇಶ
ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಕೆಡಸಿದೆ
ಅಜಗರ ಮಂದಿ ಗಜಮುಖ ಜನಕನೆ
ಗಜಗಮನ ಮುನಿ ತನುಜನ ಕಾಯ್ದನೆ
ವಜ್ರಮುನಿ ವಂದಿತ ಭಜಿಸುವೆ ನಿನ್ನ||2||

ಮಧರಾಪುರಿ ನಿಲಯ ಮೃತ್ಯುಂಜಯ
ಸದಮಲ ಸುಮನಗೇಯ
ಸದಾ ನಮಿಪರ ಹೃದಯದೊಳಗುಳ್ಳ ಭಯ-
ಸದೆಯುತ್ತ ಕೊಡು ಅಭಯ
ಸದಾಶಿವ ಜಾಹ್ನವಿ ಧರಕೃತ ಮಾರಾ
ನದೀತೀರದಿ ವಾಸವಾಗಿಪ್ಪ ಸೌಂದರ್ಯ
ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ
ಮಧುಪನೆನಿಪ ಪಂಚವದನ ಕೈಲಾಸ ||3||

 

Sumadhwa Seva © 2022