ವಿಜಯರಾಯರ ಪಾದ

ಶ್ರೀ ವಿಜಯದಾಸರ ಕುರಿತು ಅವರ ಸಾಕು ಮಗ ಮೋಹನದಾಸರು ರಚಿಸಿದ ಕೃತಿ :

ವಿಜಯ ರಾಯರ ಪಾದ ನಿಜವಾಗಿ ನಂಬಲು
ಅಜನ ಪಿತ ತಾನೇ ಒಲಿವ ||ಪ||

“ವಿ” ಎಂದು ನುಡಿಯಲು ವಿಷ್ಣು ದಾಸನಾಗುವನು
“ಜ” ಎನಲು ಜನನ ಹಾನಿ
“ಯ” ಎಂದು ಕೊಂಡಾಡೆ ಯಮ ಭಟರು ಓಡುವರು
“ರಾಯ” ಎಂದೆನಲು ಹರಿ ಕಾವ ವರವೀವ ||೧||

ಇವರ ಸ್ಮರಣೆಯು ಸ್ನಾನ ಇವರ ಸ್ಮರಣೆಯು ಧ್ಯಾನ
ಇವರ ಸ್ಮರಣೆಯು ಅಮೃತ ಪಾನ
ಇವರ ಸ್ಮರಣೆಯ ಮಾಡೆ ಯುವತಿಗ್‍ಅಕ್ಷಯವಿತ್ತ
ತ್ರಿವಿಕ್ರಮನೆ ಮುಂದೆ ನಿಲುವಾ ಕುಣಿವಾ ||೨||

ವಾರಾಣಾಸಿ ಯಾತ್ರೆ ಮೂರು ಬಾರಿ ಮಾಡಿ
ಮಾರಪಿತನೊಲುಮೆಯನು ಪಡೆದುಮೂರವತಾರದ ಮಧ್ವಮುನಿ ರಾಯರ
ಚಾರುಚರಣವನು ಧರಿಪ ಈ ಮುನಿಪ ||೩||

ಪುರಂದರ ದಾಸರ ಪರಮಾನುಗ್ರಹ ಪಾತ್ರ
ಗುರು ವಿಜಯರಾಯನೀತ
ಸಿರಿವಿಜಯವಿಠಲನ ಶ್ರೀನಿವಾಸಾಚಾರ್ಯರು
ಹರಿಯಾಜ್ಞೆಯಿಂದ ಕೊಟ್ಟರೊ ದಿಟ್ಟರು ||೪||

ದಾನಧರ್ಮದಿ ಮಹಾ ಔದಾರ್ಯ ಗುಣಶೌರ್ಯ
ಶ್ರೀನಿವಾಸನ ಪ್ರೇಮ ಕುವರ
ಮಾನವಿ ಸೀಮೆ ಚಿಕಲಪರವಿವಾಸ
ಮೋಹನ್ನವಿಠ್ಠಲನ್ನ ನಿಜದಾಸ ಉಲ್ಲಾಸ ||೫||

Sumadhwa Seva © 2022