ಸುಮಧ್ವವಿಜಯ

*ಸುಮಧ್ವವಿಜಯ ಕ್ವಿಜ್

1. *ಸುಮಧ್ವ ವಿಜಯ* ಮಂಗಳಾಚರಣ ಶ್ಲೋಕದಲ್ಲಿ ಯಾರನ್ನು ಸ್ತುತಿಸಿದ್ದಾರೆ?

ಅ. ನಾರಾಯಣ.  ಆ. ಕೃಷ್ಣ.   ಇ ವಾಯು

2. ಎರಡನೇ ಶ್ಲೋಕದಲ್ಲಿ ಯಾರನ್ನು ವಂದಿಸಿದ್ದಾರೆ.

ಅ. ಇಬ್ಬರು ಕೃಷ್ಣರು.  ಆ. ಇಂದ್ರ. ಇ  ವಾಯು

3. ಆಚಾರ್ಯ ಮಧ್ವರನ್ನು ಏನನ್ನು ಕೊಡಿರೆಂದಿದ್ದಾರೆ?

ಅ. ವೈರಾಗ್ಯ.  ಆ ಜ್ಞಾನ.    ಇ.  ಭಕ್ತಿ

4. ಸುಮಧ್ವವಿಜಯದ ಕರ್ತೃ ಯಾರು?

ಅ. ನಾರಾಯಣ ಪಂಡಿತರು. ಈ. ಕೇಶವ ಪಂಡಿತರು

ಇ  ತ್ರಿವಿಕ್ರಮ ಪಂಡಿತರು

5. ಸುಮಧ್ವವಿಜಯದ ಕರ್ತೃಗಳ ಗುರುಗಳು ಯಾರು?

ಅ. ತ್ರಿವಿಕ್ರಮ ಪಂಡಿತರು  ಆ. ಮಧ್ವಾಚಾರ್ಯರು  ಇ. ವೇದವ್ಯಾಸರು

6. ಗ್ರಂಥಕರ್ತೃಗಳು ಈ ಗ್ರಂಥದ ಉದ್ದೇಶವೇನೆಂದಿದ್ದಾರೆ?

ಅ. ಮನಶುದ್ಧಿಗೆ.  ಆ. ಮಧ್ವರ ಪ್ರೀತಿ.  ಇ. ಅಭ್ಯಾಸ

7.  ಹನುಮಂತ ದೇವರ ಅವತಾರದಲ್ಲಿ ಅವರ ತಂದೆ ಯಾರು ?

ಅ. ಕೇಸರಿ.    ಆ. ರಾಮ.   ಇ. ಶಿವ

8.  ಹನುಮಂತ ಶಬ್ದಾರ್ಥವೇನು?

ಅ. ಕೋತಿ.    ಆ.  ಹಾರಾಡುವವ.  ಇ. ಜ್ಞಾನ

9.  ಹನುಮಂತನಿಂದ ಮುಷ್ಠಿ ಪ್ರಹಾರ ಯಾರಿಗಾಯಿತು?

ಅ.  ವಾಲಿ   ಆ. ರಾವಣ.   ಇ. ಅಕ್ಷಯಕುಮಾರ

10.  ಲಂಕೆಯ ಯುದ್ಧದಲ್ಲಿ ಅಧ್ವರ್ಯು ಯಾರು?

ಅ. ಹನುಮಾನ್.  ಆ. ಸುಗ್ರೀವ.     ಇ. ರಾಮ

11. ರಾಮಚಂದ್ರನ ಪೂಜೆಗೆ ತರುವ ಪುಷ್ಪಕ್ಕಿಂತ ಸಂಜೀವನ ಪರ್ವತ ತರುವುದು ಸುಲಭವೆಂದಿನಿಸಿದ್ದೇಕೆ?

ಅ. ಪುಷ್ಪದ ವಾಸನೆ ಆಘ್ರಾಣ , ಮೈಗೆ ಸೋಕಿಸದೆ ತರುವುದು ಕಠಿಣ

ಆ. ಪರ್ವತ ಬಹಳ ದೂರವಿತ್ತು.     ಇ.  ಹೂವು ಬಾಡಿರುತ್ತಿತ್ತು

12.  ಸಂಜೀವನ ಪರ್ವತದ ಎತ್ತರವೆಷ್ಟು?

ಅ.1007 ಯೋಜನೆ.  ಆ. 100 ಯೋಜನೆ.  ಇ. 58 ಯೋಜನ

13. ಹನುಮಂತನು ಸಂಜೀವನ ಪರ್ವತವನ್ನು ಮತ್ತೆ ಇಟ್ಟ ಪರಿ ಹೇಗಿತ್ತು?

ಅ. ಅಲ್ಲಿಗೇ ಹೋಗಿ ಇಟ್ಟು ಬಂದರು

ಆ. ನಿಂತ ಸ್ಥಳದಿಂದಲೇ ಅದನ್ನು ಅಲ್ಲಿಗೇ ಎಸೆದರು

ಇ. ಬೇರೆ ಮಂಗಗಳ ಸಹಾಯದಿಂದ ಅದನ್ನು ಅಲ್ಲಿ ಕಳುಹಿಸಿದ.

14.ರಾಮನು ರಾವಣನ ಸಂಹಾರ ನಂತರ ಹನುಮನಿಗೆ ಕೊಟ್ಟಿದ್ದೇನು      ಅ.  ಮೋಕ್ಷ.   ಆ. ಸಾಯುಜ್ಯ. ಇ. ಸಹಭೋಗ

15. ಹನುಮಂತನು ರಾಮನಲ್ಲಿ ಏನನ್ನು ಅಪೇಕ್ಷಿಸಿದನು ?

ಅ. ವಿರಕ್ತಿ.  ಆ.  ಭಕ್ತಿ.   ಇ.  ಮದುವೆ

16. ಶ್ರೀ ರಾಮನು ಮೂಲರೂಪಕ್ಕೆ ಹೋದ ಮೇಲೆ ಹನುಮಂತ ಎಲ್ಲಿಗೆ ಹೋದನು?

ಆ.  ಕಿಂಪುರುಷ ಖಂಡದಲ್ಲಿರುವನು.    ಆ.  ರಾಮನೊಂದಿಗೆ ಹೊರಟನು.       ಇ.   ಬದರೀಕಾಶ್ರಮದಲ್ಲಿರುವನು

17.  ಕುಂತಿ ಭೀಮನಿಗೆ ಜನ್ಮ ನೀಡಿದ್ದು ಹೇಗೆ?

ಅ. ವಾಯುದೇವರ ಸ್ಪರ್ಶದಿಂದ.  ಆ. ವಾಯುವಿನ ಮೈಥುನದಿಂದ

ಇ. ವಾಯುವಿನ ತಾಪದಿಂದ

18.  ಭೀಮಸೇನನ ಜನುಮ ನಂತರ ಕುಂತಿಯ ಕೈಜಾರಿದ ಕೂಸು ಬಿದ್ದ ಪರ್ವತವಾವುದು?

ಅ. ಶತಶೃಂಗ.  ಆ. ಮೈನಾಕ.  ಇ. ಹಿಮಾಲಯ

ಉತ್ತರ ;

19.  ಭೀಮನಿಗೆ ದುರ್ಯೋಧನನಿಂದ ಈ ಕೆಳಗಿನ ಯಾವ ಕಾರ್ಯವಾಗಿಲ್ಲ.

ಅ.  ಪ್ರಮಾಣಕೋಟಿ ಮಡುವಿನಲ್ಲಿ ತಳ್ಳಿದ್ದು

ಆ. ಭೀಮನಿಗೆ ಹಸ್ತಿನಾಪುರದ ಅಧಿಕಾರ.

ಇ.  ಭೀಮನಿಗೆ ವಿಷಪ್ರಾಶನ.

ಉತ್ತರ :

20. ಭೀಮಸೇನನು ತನ್ನ ಎಲ್ಲಾ ಕಾರ್ಯವನ್ನು ಯಾರಿಗೆ ಸಮರ್ಪಿಸಿದನು?

ಅ. ವೇದವ್ಯಾಸರು.  ಆ. ಕೃಷ್ಣ.   ಇ. ಧರ್ಮರಾಜ

ಉತ್ತರ :

೨೧. ಧರ್ಮಜನು ಯಾಗ ಮಾಡುವಾಗ ಕೃಷ್ಣನೊಂದಿಗೆ ಹೊರಟ ಭೀಮನು ಜರಾಸಂಧನ ಕೊಂದನು. ಆ ಯಾಗ ಯಾವುದು?
ಅ.ಪುತ್ರಕಾಮೇಷ್ಟಿ ಯಾಗ; ಆ.ರಾಜಸೂಯ ಯಾಗ;
ಇ. ಪವಮಾನ ಹೋಮ.

ಉತ್ತರ :

೨೨. ಭೀಮಸೇನನ ಉದರದಲ್ಲಿರುವ ಅಗ್ನಿ ಯಾವುದು? –
ಅ. ನೇತ್ರಾಜ್ಞಿ ; ಆ. ವೃಕಾಜ್ಞಿ,.   ಇ. ಭೀಮಾಜ್ಞಿ
ಉತ್ತರ –

೨೩. ಸೌಗಂಧಿಕಾ ಪುಷ್ಯ ಹರಣ ಸಮಯದಲ್ಲಿ ಭೀಮನು ಯಾರನ್ನು ಕೊಂದನು?
ಅ. ಜರಾಸಂಧ
ಆ. ಮಣಿಮಂತ
ಇ. ಕೀಚಕ
ಉತ್ತರ –

೨೪. ಅದ್ವೈತ ಮತವನ್ನು ಯಾವುದಕ್ಕೆ ಹೋಲಿಸಿದ್ದಾರೆ?
ಅ. ಪಾಷಂಡ ಮತ
ಆ. ಪ್ರಚ್ಛನ್ನಬೌದ್ದ
ಇ. ಪ್ರಚ್ಛನ್ನ ಶೈವ
ಉತ್ತರ –

೨೫. ಸಂಕರ ಯಾರ ಅವತಾರ ಎಂದಿದ್ದಾರೆ?
ಅ. ವಾಯು. ಆ. ಶಿವ.   ಇ.ಮಣಿಮಾನ್
ಉತ್ತರ –

೨೬. ಯಾರನ್ನು ತ್ರಿಯುಗಹೂತಿ ಎನ್ನುತ್ತಾರೆ?
ಅ. ಶಿವ. ಆ. ಬ್ರಹ್ಮ. ಇ. ವಿಷ್ಣು
ಉತ್ತರ –

೨೭. ಶ್ರೀಹರಿ, ಬ್ರಹ್ಹ, ರುದ್ರರಲ್ಲಿ ಯಾರಿಗೆ ಅವತಾರವೇ ಇಲ್ಲ?
ಅ. ಶಿವ. ಆ. ಬ್ರಹ್ಮ. ಇ. ವಿಷ್ಣು
ಉತ್ತರ –

೨೮. ಉಡುಪಿಯಲ್ಲಿ ಸರ್ವಜ್ಞರ ಅವತಾರವಾಗಲಿದೆ ಎಂದು ಯಾವ ದೇವರು ಒಬ್ಬನಲ್ಲಿ ಆವಿಷ್ಟನಾಗಿ ಹೇಳಿದನು?
ಅ. ಅನಂತಾಸನ. ಆ. ವಾಯು.    ಇ.  ಶಿವ
ಉತ್ತರ –

೨೯. ಮಧ್ಯಗೇಹಭಟ್ಟರ ಮೂಲಸ್ಥಳ ಯಾವುದು?
ಅ. ಕಾರ್ಕಳ ಆ. ಉಡುಪಿ. ಇ. ಶಿವಳ್ಳಿ
ಉತ್ತರ –

೩೦. ಶಿವಳ್ಳಿಯನ್ನು ಬಿಟ್ಟು ಮಧ್ಯಗೇಹಭಟ್ಟರು ಸೇರಿದ ಸ್ಥಳ ಯಾವುದು?
ಅ. ಉಡುಪಿ. ಆ. ಪಾಜಕ. ಇ. ಕುಕ್ಕೆ

ಉತ್ತರ –

31. ಮಧ್ಯಗೇಹಭಟ್ಟರು ಪ್ರವಚನ ಮಾಡುತ್ತಿದ್ದು ಎಲ್ಲಿ?
ಅ. ರಜತಪೀಠಪುರ. ಆ. ಪಾಜಕ
ಇ. ಹೆಬ್ಬಲಸು

ಉತ್ತರ :

32. ಮಧ್ಯಗೇಳಭಟ್ಟ ದಂಪತಿಗಳನ್ನು ಸುಮಧ್ವವಿಜಯದಲ್ಲಿ ಯಾವ ದಂಪತಿಗಳಿಗೆ ಹೋಲಿಸಿದ್ದಾರೆ ?
ಅ. ರತಿಮನ್ಮಥ ಆ. ಶಿವಪಾರ್ವತಿ
ಇ. ಅದಿತಿ ಕಶ್ಯಪರು

ಉತ್ತರ :

33. ವಾಯುದೇವರ ಮಧ್ಯಗೇಹಭಟ್ಟ ದಂಪತಿಗಳ ಗರ್ಭದಲ್ಲಿ ಪ್ರವೇಶಕ್ಕಿಂತ ಮುಂಚೆ ಆ ಗರ್ಭದಲ್ಲಿದ್ದವರಾರು ?
ಅ. ಕುಬೇರ. ಆ. ವಾಯು. ಇ. ಮಣಿಭದ್ರ

ಉತ್ತರ :

34. ಆಚಾರ್ಯ ಮಧ್ವರ ಜನ್ಮನಾಮವೇನು?
ಅ. ದಶಪ್ರಮತಿ. ಆ. ವಾಸುದೇವ
ಇ. ಪೂರ್ಣಪ್ರಜ್ಞ

ಉತ್ತರ :

35. ವಾಸುದೇವನನ್ನು ಅವರ ತಂದೆತಾಯಿ ಯಾರಿಗೆ ಸಮರ್ಪಿಸಿದರು?
ಅ. ನಾರಾಯಣ. ಆ. ಉಡುಪಿ ಕೃಷ್ಣ
ಇ. ಅನಂತೇಶ್ವರ

36. ವಾಸುದೇವ ಅಳುತ್ತಿದ್ದಾಗ ಅವನ ಅಕ್ಕ ಏನನ್ನು ತಿನ್ನಿಸಿದಳು ?
ಅ. ಕಡಲೆ. ಆ. ಹುರಳೀ. ಇ ಬೆಲ್ಲ

ಉತ್ತರ :

37. ವಾಸುದೇವ ಯಾವ ಪ್ರಾಣಿಯನ್ನು ಹಿಂಬಾಲಿಸಿಕೊಂಡು ಹೋದ?

ಅ.  ಕುದುರೆ.    ಆ.  ಎತ್ತು.      ಇ. ಹಸು

ಉತ್ತರ :

38. ವಾಸುದೇವನು ತನ್ನ ತಂದೆಯ ಸಾಲ ತೀರಿಸಲು ಏನನ್ನು ಕೊಟ್ಟನು?

ಅ. ಹಲಸಿನ ಬೀಜ.  ಆ. ಕಡಲೇ ಬೀಜ  ಇ. ಹುಣಿಸೇಬೀಜ

39. ವಾಸುದೇವ ದುರ್ಗಾದೇವಿಯನ್ನು ಪೂಜಿಸಿದ್ದು ಎಲ್ಲಿ?

ಅ.  ಚಾಮುಂಡಿಬೆಟ್ಟ. ಆ. ಕಲ್ಲೂರು. ಇ. ವಿಮಾನಗಿರಿ

40. ವಾಸುದೇವ ಅಕ್ಷರಾಭ್ಯಾಸ ಮಾಡಿದ್ದು ಎಲ್ಲಿ?

ಅ. ಪಾಜಕ. ಆ. ಅನಂತಾಸನ   ಇ. ವಿಮಾನಗಿರಿ

41. ಮಧ್ಯಗೇಹಭಟ್ಟರು ವಾಸುದೇವನಿಗೆ ಎಲ್ಲಿ ಪಾಠ ಹೇಳುತ್ತಿದ್ದರು?

ಅ. ಸಾರ್ವಜನಿಕ ವೇದಿಕೆ.  ಆ. ನಿರ್ಜನ ಪ್ರದೇಶ ಇ. ದುರ್ಗಾ ಬೆಟ್ಟ

42. ವಾಸುದೇವನು ತನ್ನ ಮೂರನೇ ವಯಸ್ಸಿನಲ್ಲಿ ಒಬ್ಬ ಪುರಾಣಿಕರು ಪ್ರವಚನ ವೇದವ್ಯಾಸರ ಅಭೀಪ್ರಾಯದಂತಿಲ್ಲ ಎಂದಿದ್ದು ಎಲ್ಲಿ?
ಅ. ಬದರಿ. ಆ. ಕಾಶೀ. ಇ.ಗೃತವಲ್ಲಿ. ಈ ಪಾಜಕ
43.  ವಾಸುದೇವನು ಪುರಾಣ ಹೇಳುತ್ತಿದ್ದ ಮಧ್ಯಗೇಹಭಟ್ಟರಿಂದ ಯಾವ ಶಬ್ದದ ಅರ್ಥ ಕೇಳಿದನು
ಅ. ಲಲಿತಾ. ಆ. ಲಿಕುಚ.  ಇ. ಕಚುಟ
44. ಲಿಕುಚ ಶಬ್ದದ ಅರ್ಥವೇನು?
ಅ. ಕದಲಿಸು.    ಆ.  ಮೂಡಿಸು. ಇ. ಹೆಬ್ಬಲಸು
45. ವಾಸುದೇವನ ಉಪನಯನ ಎಷ್ಟನೇ ವಯಸ್ಸಿಗಾಯಿತು?

ಅ. ನಾಲ್ಕು. ಆ.ಐದು. ಇ. ಏಳು. ಈ.ಎಂಟು

46. ವಾಸುದೇವನ ಕೊಲ್ಲಲು ಹಾವಿನ ವೇಷದಿ ಬಂದವರಾರು?
ಅ. ದುರ್ಯೋಧನ. ಆ. ಕೀಚಕ. ಇ. ಮಣೀಮಾನ್
47. ವಾಸುದೇವ ಎಲ್ಲಾ ರೀತಿಯ ಆಟಪಾಠ ಎಲ್ಲದರಲ್ಲೂ ಗೆಲ್ಲುತ್ತಿದ್ದದನ್ನು ನೋಡಿ ಅವನ ಬಗ್ಗೆ ಜನರು ಯಾರೆಂದು ಮಾತನಾಡಿದರು?
ಅ. ಕೃಷ್ಣ ಆ.ರಾಮ. ಇ.ಭೀಮ  ಈ ಪರಶುರಾಮ
48. ವಾಸುದೇವನನ್ನು ಯಾರ ಗುರುಕುಲಕ್ಕೆ ಸೇರಿಸಿದರು?
ಅ. ಭೀಮಭಟ್ಟ. ಆ. ತೋಟಂತಿಲ್ಲಾಯ ಇ. ವೇದವ್ಯಾಸ
49. ಮಗುವನ್ನು ಪಡೆಯಲು ಮಧ್ಯಗೇಹಭಟ್ಟ ದಂಪತಿಗಳು ಯಾವ ವ್ರತ ಮಾಡಿದರು?
ಅ. ವಾನಪ್ರಸ್ಥ. ಆ.  ದಧಿವ್ರತ. ಇ. ಪಯೋವ್ರತ
50.  ವಾಸುದೇವನು ಗುರುಗಳ ಪುತ್ರನ ತಲೆನೋವು ವಾಸಿ ಮಾಡಿದರು.  ಆ ಗುರುಪುತ್ರನ ಹೆಸರೇನು?
ಅ. ವಸುದಾನ. ಆ. ವಾಸುದೇವ. ಇ. ಇಂದ್ರದೇವ
51. ವಾಸುದೇವನು ಗುರುದಕ್ಷಿಣೆಯನ್ನು ಯಾವರೀತಿ ಕೊಟ್ಟನು?
ಅ. ಗೀತಾ ಭಾಷ್ಯ.  ಆ. ಭಗವದ್ಗೀತೆ ಪಾಠ
ಇ. ಐತರೇಯೋಪನಿಷತ್ ಈ. ಮಹಾಭಾರತ ತಾತ್ಪರ್ಯ ನಿರ್ಣಯ
52. ಆಚಾರ್ಯ ಮಧ್ವರು ಹೆಚ್ಚಾಗಿ ಯಾವ ಉಪನಿಷತ್ ಉಲ್ಲೇಖಿಸಿದ್ದಾರೆ?
ಅ. ತಲವಕಾರ.  ಆ. ಛಾಂದೋಗ್ಯ  ಇ. ಐತರೇಯ
Updated: February 2, 2020 — 1:17 pm

Leave a Reply

Your email address will not be published.

Sumadhwa Seva © 2022