ಒಗಟಿನ ಪ್ರಶ್ನೋತ್ತರ

ಒಗಟಿನ ಪ್ರಶ್ನೋತ್ತರ

ಪ್ರಶ್ನೆಗಳು :

೧. ಆತಿಥ್ಯ ಸ್ವೀಕರಿಸಿ ದಾಕ್ಷಿಣ್ಯಕೆ ಸಾರಥಿಯಾದವನ ; ಅಳಿಯನ ; ತಂದೆಯ; ಹಿರಿ ಮಡದಿಯ; ಹಿರಿ ಮಗನ ಆಶ್ರಯವಿತ್ತವನ ತಾಯಿಯ; ಸಹೋದರನ; ಸಂಹರಿಸಿದವನ ಮಾತೆ ಯಾರು ?

ಉತ್ತರ ;

ಆತಿಥ್ಯ  ಸ್ವೀಕರಿಸಿ ದಾಕ್ಷಿಣ್ಯಕೆ ಸಾರಥಿಯಾದವನ = ಶಲ್ಯನ ಅಳಿಯನ = ನಕುಲನ ತಂದೆಯ = ಪಾಂಡುವಿನ

ಹಿರಿ ಮಡದಿಯ =ಕುಂತಿಯ ಹಿರಿ ಮಗನ= ಕರ್ಣನ

ಆಶ್ರಯವಿತ್ತವನ = ದುರ್ಯೋಧನನ ; ತಾಯಿಯ = ಗಾಂಧಾರಿಯ ಸಹೋದರನಾದ = ಶಕುನಿಯ

ಸಂಹರಿಸಿದವನಸಹದೇವನ ಮಾತೆ –  ಮಾದ್ರಿ

*ಉತ್ತರ – ಮಾದ್ರಿ*

************

೨. ಪ್ರಶ್ನೆ ;

ಗಂಡನ ರಥವ ಓಡಿಸಿ ರಕ್ಷಿಸಿದವಳ ತಂದೆಯ ಅಳಿಯನ
ಹಿರಿಮಗನ ಪತ್ನಿಯ ತಂದೆಯ ಸಹೋದರನ ಅಳಿಯನ
ಅಪ್ಪನ ಕಿರಿಪತ್ನಿಯ ಸೂಸೆ ಯಾರು ?

ಉತ್ತರ :
ದಶರಥನ ಯುದ್ಧದಲ್ಲಿ ಅವನಿಗೆ ಸಹಾಯಮಾಡಿ ರಥವನ್ನು ಓಡಿಸಿದ್ದ

ಕೈಕೇಯಿಯ;  ತಂದೆ – ಅಶ್ವಪತಿಯ ಅಳಿಯ – ದಶರಥನ ;
ಹಿರಿಮಗ – ರಾಮನ ; ಪತ್ನಿ – ಸೀತೆಯ ತಂದೆ – ಸೀರಧ್ವಜ
ಅವನ ಸಹೋದರ – ಕುಶಧ್ವಜ ಅವನ ಅಳಿಯ – ಭರತನ
ಅವನ ತಂದೆ – ದಶರಥನ ಕಿರಿಪತ್ನಿ – ಕೈಕೇಯಿಯ

ಸೊಸೆ – ಮಾಂಡವಿ.

*ಉತ್ತರ – ಮಾಂಡವಿ*

#####################

೩. ಪ್ರಶ್ನೆ

ಕಾಲಿಗೆ ಅಭಿಮಾನಿ ದೇವತೆಯ ರೂಪದ ವಾಯಸಕ್ಕೆ ಶಿಕ್ಷಿಸಿದವನ
ಪತ್ನಿಯ ಮೈದುನನ ಮಾವನ ಸಹೋದರನ ಮಗಳ ಮಾವನ
ಮೊಮ್ಮಕ್ಕಳಿಗೆ ಆಶ್ರಯ ನೀಡಿದವರು ಯಾರು ?

ಉತ್ತರ -.

ಕಾಲಿಗೆ ಅಭಿಮಾನಿ ದೇವತೆ – ಜಯಂತ.

ಇವನು ವಾಯಸ ರೂಪದಲ್ಲಿದ್ದ (ಕಾಗೆ) ಅವನ ತಪ್ಪಿಗಾಗಿ
ವಾಯಸಕ್ಕ (ಕಾಗೆಗೆ) ಒಂದು ಕಣ್ಣು ತೆಗೆದ – ರಾಮ.

ಅವನ ಪತ್ನಿ – ಸೀತಾ   ಅವಳ  ಮೈದುನ – ಲಕ್ಷ್ಮಣ
ಅವನ ಮಾವ – ಕುಶಧ್ವಜ;  ಅವನ ಮಡದಿ – ಶೃತಕೀರ್ತಿ
ಅವಳ ಮಾವ – ದಶರಥ ಅವನ ಮೊಮ್ಮಕ್ಕಳು – ಲವಕುಶ
ಅವರಿಗೆ ಆಶ್ರಯ ನೀಡಿದವರು – ವಾಲ್ಮೀಕಿ

*ಉತ್ತರ – ವಾಲ್ಮೀಕಿ*

#################

4. ಪ್ರಶ್ನೆ ;

ರಥದ ಚಕ್ರ ಹಿಡಿದು ಹೋರಾಡಿದವನ ಮಗನ ತಾಯಿಯ ತಂದೆಯ ಬಂಧಿಸಿದ್ದವನಿಂದ ಬಿಡಿಸಿದವನ ತಮ್ಮನ ಮಗ ಯಾರು ?

ಉತ್ತರ :
ರಥದ ಚಕ್ರ ಹಿಡಿದು ಹೋರಾಡಿದ್ದು ನಿರಾಯುಧನಾಗಿದ್ದ – ಅಭಿಮನ್ಯು;
ಅವನ ಮಗ – ಪರೀಕ್ಷಿತ ;. ಅವನ ತಾಯಿ – ಉತ್ತರೆ ;
ಅವಳು ತಂದೆ – ವಿರಾಟರಾಜ ;.
ಅವನನ್ನು ಬಂಧಿಸಿದ್ದು – ಸುಶರ್ಮ ದುರ್ಯೋಧನನಿಗಾಗಿ ;
ಅವನಿಂದ ಬಿಡಿಸಿದ್ದು – ಭೀಮ; ಅವನ ತಮ್ಮ – ಅರ್ಜುನ
ಅವನ ಮಗ – *ಅಭಿಮನ್ಯು*

ಉತ್ತರ – ಅಭಿಮನ್ಯು

±+++++++++

 

Quiz 10
ಪಾರ್ಥಸಾರಥಿಯ ಸೋದರಮಾವನ ಹೆಂಡತಿಯ ತಂದೆಯ ಕೊಂದವನ ಅಗ್ರಜನ ದೊಡ್ಡಪ್ಪನ ಮಡದಿಯ ಸಹೋದರನ ಕೊಂದವನಾರು ?
 ಉತ್ತರ :
ಪಾರ್ಥಸಾರಥಿಯ – ಕೃಷ್ಣನ ಸೋದರಮಾವನ – ಕಂಸನ
ಹೆಂಡತಿಯ – ಆಸ್ತಿಪಾಸ್ತಿಯ ತಂದೆಯ – ಜರಾಸಂಧನ
ಕೊಂದವನ – ಭೀಮನ ಅಗ್ರಜನ  – ಧರ್ಮರಾಜನ
ದೊಡ್ಡಪ್ಪನ – ಧೃತರಾಷ್ಟ್ರನ ಮಡದಿಯ – ಗಾಂಧಾರಿಯ
ಸೋದರ – ಶಕುನಿಯ ಕೊಂದವ – ಸಹದೇವ
***************************
ಪ್ರಶ್ನೆ 11
ಸೂತಪುತ್ರನ ಸಾರಥಿಯ ಸೋದರಳಿಯನ ದೊಡ್ಡಮ್ಮನ
ಸಹೋದರನ ಪತ್ನಿಯ ಸಹೋದರನ I ಕೊಂದವನ ಸಹೋದರಿಯ
ಮಗನ ತಂದೆಯ ತಾಯಿಯ ವಿವಾಹಪೂರ್ವ ಜನಿಸಿದ ಮಗನಾರು?
ಉತ್ತರ –
ಸೂತಪುತ್ರನ  – ಕರ್ಣನ ಸಾರಥಿಯ – ಶಲ್ಯನ
ಸೋದರಳಿಯನ – ನಕುಲಸಹದೇವರ
ದೊಡ್ಡಮ್ಮನ – ಕುಂತಿಯ
ಸಹೋದರನ – ವಸುದೇವನ ಪತ್ನಿಯ – ದೇವಕಿಯ
ಸಹೋದರನ – ಕಂಸನ ಕೊಂದವನ – ಕೃಷ್ಣನ
ಸಹೋದರಿಯ – ಸುಭದ್ರೆಯ ಮಗನ – ಅಭಿಮನ್ಯುವಿನ
ತಂದೆಯ – ಅರ್ಜುನನ ತಾಯಿಯ – ಕುಂತಿಯ
ವಿವಾಹಪೂರ್ವ ಜನಿಸಿದ ಮಗ
ಸೂರ್ಯಾನುಗ್ರಹದಿಂದ ಜನಿಸಿದ ಕರ್ಣ
—————————–+–
ಪ್ರಶ್ನೆ 12
ಅಂಧಕನನುಜನ ಮಡದಿಯ ವಾರಗಿತ್ತಿಯ ಅಳಿಯನ
ಕೊಂದವನ  ಅಗ್ರಜನ ಮಾತೆಯ ಅಳಿಯನ
ಮಡದಿಯ ಅಗ್ರಜನ  ಅಳಿಯನಾರು ?
ಉತ್ತರ :
ಅಂಧಕನ –  ಧೃತರಾಷ್ಟ್ರನ
ಅನುಜನ – ಪಾಂಡುವಿನ
ಮಡದಿಯ – ಕುಂತಿಯ
ವಾರಗಿತ್ತಿಯ – ಗಾಂಧಾರಿಯ
 ಅಳಿಯನ –  ಜಯದ್ರತನ
ಕೊಂದವನ – ಅರ್ಜುನನ
ಅಗ್ರಜನ – ಧರ್ಮರಾಜನ
ಮಾತೆಯ – ಕುಂತಿಯ
ಅಳಿಯನ – ಕೃಷ್ಣನ
ಮಡದಿಯ – ರುಕ್ಮಿಣಿಯ
ಅಗ್ರಜನ – ರುಕ್ಮನ
ಅಳಿಯ – ಪ್ರದ್ಯುಮ್ನ
&&&&&&&&&&&&&&&&&&&&
ಪ್ರಶ್ನೆ 13
ನಳಿನಸಹೋದರನ ಪತ್ನಿಯ ನೆರಳ ಮಗನ ಮಲಸಹೋದರನ ತಾಯಿಯ ಅವಳಿ ಮಕ್ಕಳ ಪಿತನ ಪತ್ನಿಯ ಮಾವನ ಪಿತನ ಪಿತನಾರು ?
ಉತ್ತರ :
ನಳಿನಸಹೋದರನ – ಸೂರ್ಯನ
ಪತ್ನಿಯ – ಸಂಜ್ಞಾದೇವಿಯ
ನೆರಳ – ಛಾಯಾದೇವಿಯ
ಮಗನ – ಶನಿಯ
ಮಲಸಹೋದರನ – ಯಮನ
ತಾಯಿಯ – ಸಂಜ್ಞಾದೇವಿಯ
ಅವಳಿ ಮಕ್ಕಳ – ಅಶ್ವಿನಿ ದೇವತೆಗಳ
ಪಿತನ – ಸೂರ್ಯನ
ಪತ್ನಿಯ – ಕುದುರೆರೂಪದ ಸಂಜ್ಞಾದೇವಿಯ
ಮಾವನ – ಕಶ್ಯಪರ
ಪಿತನ – ಮರೀಚಿ
ಪಿತನಾರು – ಬ್ರಹ್ಮ
@@@@@@@@@@@@@
ಪ್ರಶ್ನೆ 14
ಕಪಿದ್ವಜನ ಸಾರಥಿಯ ಸೋದರಳಿಯನ ಭಾವಮೈದುನನ
ಪಿತನ ಮಡದಿಯ ಸಹೋದರನ
ಚೆಂಡಾಡಿದವನ ಅಗ್ರಜನ ದೊಡ್ಡಪ್ಪನ ಕಿರಿಸಹೋದರನ  ಆತಿಥ್ಯ ಸ್ವೀಕರಿಸಿದವನ ಶಂಖ ಯಾವುದು ?
ಕಪಿದ್ವಜನ  – ಅರ್ಜುನನ
ಸಾರಥಿಯ – ಶ್ರೀ ಕೃಷ್ಣನ
ಸೋದರಳಿಯನ – ಅಭಿಮನ್ಯುವಿನ
ಭಾವಮೈದುನನ – ಉತ್ತರ ಕುಮಾರನ
ಪಿತನ – ವಿರಾಟರಾಜನ
ಮಡದಿಯ – ಸುದೇಷ್ಣೆಯ
ಸಹೋದರನ – ಕೀಚಕನ
ಚೆಂಡಾಡಿದವನ – ಭೀಮಸೇನನ
ಅಗ್ರಜನ – ಧರ್ಮರಾಜನ
ದೊಡ್ಡಪ್ಪನ – ಧೃತರಾಷ್ಟ್ರನ
ಕಿರಿಸಹೋದರನ – ವಿದುರನ
ಆತಿಥ್ಯ ಸ್ವೀಕರಿಸಿದವನ – ಶ್ರೀ ಕೃಷ್ಣನ
ಶಂಖ ಯಾವುದು ? – ಪಾಂಚಜನ್ಯ
*ಉತ್ತರ – ಪಾಂಚಜನ್ಯ*
########################
 ಪ್ರಶ್ನೆ 15
ಮೇಷವಾಹನನ  ( ಅಗ್ನಿಯ)
ದ್ವಾಪರಯುಗದ ಅವತಾರದ ;
ಅವನ ಭಾವನ
ಮಡದಿಯ ಅತ್ತೆಯ
ಭಾವನ ಮಗನ ಭಾವನ
ಕೊಂದವನ ಭಾವಮೈದುನನ
ಭಾವಮೈದುನನ ಕೊಂದವನ
ಭಾವನಾರು ?
(Note :
ಭಾವ – ತಂಗಿಯ/ಅಕ್ಕನ ಗಂಡ ;.  ಅಥವಾ ಗಂಡನ ಅಣ್ಣ
ಭಾವ ಮೈದುನ – ಹೆಂಡತಿಯ ಅಣ್ಣ)
 ಉತ್ತರ ಪ್ರಶ್ನೆ ೧೫.
ಮೇಷವಾಹನನ –  ಅಗ್ನಿಯ ದ್ವಾಪರಯುಗದ ಅವತಾರದ – ದೃಷ್ಟದ್ಯುಮ್ನನ ;
ಭಾವನ – ಅರ್ಜುನನ
ಮಡದಿಯ – ದ್ರೌಪದಿಯ
ಅತ್ತೆಯ – ಕುಂತಿಯ
ಭಾವನ – ಧೃತರಾಷ್ಟ್ರನ
ಮಗನ – ದುರ್ಯೋಧನನ
ಭಾವನ – ಜಯದ್ರತನ
ಕೊಂದವನ – ಅರ್ಜುನನ
ಭಾವಮೈದುನನ – ಕೃಷ್ಣನ
ಭಾವಮೈದುನನ – ರುಕ್ಮಿಯ
 ಕೊಂದವನ – ಬಲರಾಮನ
ಭಾವನಾರು – ಅರ್ಜುನ
*ಉತ್ತರ – ಅರ್ಜುನ*
₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

 

 

ಪ್ರಶ್ನೆ 16. ಅವನು ಇವನು
 
ಅವನು ಗ್ರಂಥರಚಕನ ಮಗ !
ಇವನು ಮಹಾ ಗುರುವಿನ ಮಗ !
ಅವನು ಗೃಹಸ್ಥ ಇವನು ಬ್ರಹ್ಮಚಾರಿ !
ಅವನು ಶಾಸ್ತ್ರ ಅಧ್ಯಯನ ಮಾಡಿದ !
ಇವನು ಶಸ್ತ್ರ ಅಧ್ಯಯನ ಮಾಡಿದ !
ಅವನು ಭಾಗವತ ಉಪದೇಶಿಸಿದ
ಇವನು ಉಪಪಾಂಡವರ ಕೊಂದವ!
 
*ಅವನ ಇವನ ಕಕ್ಷ್ಯ. ಯಾವುದು* ?
ಉತ್ತರ :.
ಅವನು ವೇದವ್ಯಾಸರ ಮಗ – ಶುಕಾಚಾರ್ಯ
ಇವನು ದ್ರೋಣಾಚಾರ್ಯರ ಮಗ
ಶುಕ ಗೃಹಸ್ಥ (ಶುಕರ ಪತ್ನಿ ಪಿವಾರಿ)
ಅಶ್ವತ್ಥಾಮ ಬ್ರಹ್ಮಚಾರಿ
ಶುಕರು ವೇದವ್ಯಾಸರಲ್ಲಿ ಶಾಸ್ತ್ರ ಅಧ್ಯಯನ ಮಾಡಿದರು
ಅಶ್ವತ್ಥಾಮರು ದ್ರೋಣರಲ್ಲಿ ಶಸ್ತ್ರ ಕಲಿತರು
ಶುಕರು ಪರೀಕ್ಷಿತಗೆ ಭಾಗವತ ಉಪದೇಶಿಸಿದರು
ಅಶ್ವತ್ಥಾಮರು ಉಪಪಾಂಡವರ ಕೊಂದರು
ಇಬ್ಬರೂ ಶಿವನ ಅವತಾರ
ಪ್ರಶ್ನೆ 17
 
ನಖದಿಂದ ಸಂಹರಿಸಲ್ಪಟ್ಟವನ ಸಹೋದರನ ಸಂಹರಿಸಿದವನ
ಮಗನ ಸಂಹರಿಸಿದವನ ಭಾವನ ತಾತನ ಮಾತೆಯ ಪತಿಯ ಮಗನ ಗುರುವಿನ ಉದರದಲ್ಲಿದ್ದ ದೈತ್ಯನ ಕೊಂದವನಿಂದ 
ಸಂಹರಿಸಲ್ಪಟ್ಟವನನ್ನು ಪಾತಾಳ ಲೋಕದಲ್ಲಿ ಎಡಗಾಲಿಂದ ಒದ್ದವನಿಂದ ಸಂರಕ್ಷಿಸಲ್ಪಟ್ಟ ದೈತ್ಯನ ದೇವದಾನವ  ಯುದ್ಧದಿ ಪರ್ವತವನೆತ್ತಿದವನು ಹಿಂದೆ ಹಯಗ್ರೀವಾಸುರನ ಕೊಂದು ಮುಂದೆ ಹಯವನೇರಿದನು .  ಯಾರು?
 
ಉತ್ತರ :
ನಖದಿಂದ ಸಂಹರಿಸಲ್ಪಟ್ಟವನ – *ಹಿರಣ್ಯ ಕಶ್ಯಪುವಿನ*
ಸಹೋದರನ – *ಹಿರಣ್ಯಾಕ್ಷನ* ;ಸಂ – *ವರಾಹನ* –
ಮಗನ – *ನರಕಾಸುರನ* ;ಸಂಹರಿಸಿದವನ – *ಶ್ರೀಕೃಷ್ಣನ*
ಭಾವನ – *ಅರ್ಜುನನ* ; ತಾತನ – *ವೇದವ್ಯಾಸರ*
ಮಾತೆಯ – *ಸತ್ಯವತಿಯ* ; ಪತಿಯ – *ಶಂತನುವಿನ*
ಮಗನ –  *ಭೀಷ್ಮನ* ಗುರುವಿನ; – *ಪರಶುರಾಮನ*
ಉದರದೊಳಿದ್ದ ದೈತ್ಯನ – *ಅತುಳನ*
ಕೊಂದವನಿಂದ – *ರಾಮನಿಂದ* ; ಕೊಲ್ಲಲ್ಪಟ್ಟವನನ್ನ -*ರಾವಣನನ್ನು*
ಪಾತಾಳಲೋಕದಿ ಎಡಗಾಲಿನಿಂದ ಒದ್ದವನಿಂದ – *ವಾಮನಾವತಾರ*
ಸಂರಕ್ಷಿಸಲ್ಪಟ್ಟ ದೈತ್ಯನ – *ಬಲಿಚಕ್ರವರ್ತಿ*
ದಾನವ ಯುದ್ಧದಿ ಪರ್ವತವನ್ನೆತ್ತಿದವನ -ಕೂರ್ಮರೂಪಿಯ;
ಹಿಂದೆ ಹಯಗಗ್ರೀವ ಅಸುರನ ಕೊಂದು – *ಮತ್ಸ್ಯಾವತಾರ* ,
ಮುಂದೆ ಹಯವನೇರಿ – *ಕಲ್ಕ್ಯಾವತಾರ*
ತ್ರಿಪುರ ಸ್ತ್ರೀಯರ ವೃತವ ಕೆಡಿಸಿದವಗೆ
– *ಬುದ್ಧಾವತಾರಿಗೆ* ನಮೋ ನಮೋ.
ಈ ಒಗಟಿನಲ್ಲಿ ದಶಾವತಾರ ಚಿಂತನೆ ಆಗುತ್ತದೆ.
 ದಶಾವತಾರ ಎತ್ತಿದ ಶ್ರೀಮನ್ಮಹಾವಿಷ್ಣುವಿಗೆ ನಮಃ: !!
##############################
ಪ್ರಶ್ನೆ 18
 
ಧೂಳಿನಿಂದ ಮಗನ ಮಾಡಿದವಳ
ಪತಿಯ ಶಿರದಲ್ಲಿಹನ ಮಗನ ಮಗನ 
ಮೊಮ್ಮಗ ಯಾರು ?
 
 ಉತ್ತರ :
ಧೂಳಿನಿಂದ ಮಗನ.. *ಗಣಪತಿಯ* ಮಾಡಿದವಳ.. *ಪಾರ್ವತಿಯ*.. ಪತಿಯ.. *ರುದ್ರದೇವರ*  ಶಿರದಲ್ಲಿಹನ.. *ಚಂದ್ರನ*
ಮಗನ *ಬುಧನ*
ಮಗನ *ಪುರೂರವನ*.. 
ಮೊಮ್ಮಗ – *ನಹುಷ*
 
(ಪುರೂರವನ ಮಗ. *ಆಯು*
ಅವನ ಮಗ – *ನಹುಷ)
 
##########################
ಒಗಟಿನ ಪ್ರಶ್ನೆ 19
ಕಮಲಜನ ನಾಸಿಕಾಗ್ರದಿ ಬಂದಿಹನ ಮಡದಿಯ ಕೊಂಡೊಯ್ದವನ ಪಿತನ ಸುರಪತ್ನಿಯಲಿ ಬಂದಿಹನ ಬೆಳೆದ ಪಾದ ಸ್ಪರ್ಶದಿಂದ ಬಂದವಳ ಶಿರದಲಿ ಧರಿಸಿಹನ ವಾಹನ ಯಾವುದು ?
ಉತ್ತರ:
ಕಮಲಜ- *ಕಮಲದಲ್ಲಿ ಜನಿಸಿದ ಬ್ರಹ್ಮ*
ನಾಸಿಕಾಗ್ರದಿ ಬಂದಿಹನ :-
*ಬ್ರಹ್ಮನ ಮೂಗಿನ ತುದಿಯಲ್ಲಿ ಅವತಾರ ಮಾಡಿದ ವರಾಹ ದೇವರು*
ಮಡದಿಯ :- *ಭೂದೇವಿ* ಯ
ಕೊಂಡೊಯ್ದವನ:- *ಹಿರಣ್ಯಾಕ್ಷನ*
 ಪಿತನ – *ಕಶ್ಯಪರ*
 ಸುರಪತ್ನಿಯಲಿ:- *ಅದಿತಿಯಲಿ*
ಬಂದಿಹನ – *ವಾಮನ* ನಾಗಿ ಬಂದಿಹನ
ಬೆಳೆದ ಪಾದ – *ತ್ರಿವಿಕ್ರಮನ ಪಾದ*
ಸ್ಪರ್ಶದಿಂದ ಬಂದವಳ – *ಗಂಗೆಯ*
ಶಿರದಲಿ ಧರಿಸಿಹನ – *ಶಿವನ*
ವಾಹನ ಯಾವುದು? – *ವೃಷಭ* (ನಂದಿ)
@@@@@@@@@@@@@@@@@@@
ಪ್ರಶ್ನೆ 20
 
ಧರ್ಮಜನಿಗೆ ಅಕ್ಷಯಪಾತ್ರೆ ನೀಡಿದವನ ಪುತ್ರನ ಜನ್ಮದಾತೆಯ ಸಹೋದರನ ಮಗನ ಉಪನಯನ ಮಾಡಿಸಿದವನ ಮಗನ ದೃಷ್ಟಿಸಿ ಕೊಂದವರಾರು ?
ಉತ್ತರ
ಧರ್ಮಜನಿಗೆ ಅಕ್ಷಯಪಾತ್ರೆ ನೀಡಿದವನ : *ಸೂರ್ಯನ*
ಪುತ್ರನ : *ಕರ್ಣ*
ಜನ್ಮದಾತೆಯ : *ಕುಂತಿ*
ಸಹೋದರನ : *ವಸುದೇವ*
ಮಗನ : *ಬಲರಾಮ*
 ಉಪನಯನ ಮಾಡಿಸಿದವನ :
*ಗರ್ಗ್ಯಾಚಾರ್ಯರು*
ಮಗನ : *ಕಾಲಯವನ*
 ದೃಷ್ಟಿಸಿ ಕೊಂದವರಾರು
– *ಮುಚುಕುಂದ*
ಮುಚುಕುಂದ ಮಹಾರಾಜ ದೇವ-ದಾನವ ಯುದ್ದದಲ್ಲಿ ದೇವತೆಗಳಿಗೆ ಸಹಾಯ ಮಾಡಿರುತ್ತಾನೆ.  ಆ ದೇವತೆಗಳು ಇವನಿಗೆ ನಿದ್ರಾ ವಾರ ಕೊಟ್ಟಿರುತ್ತಾರೆ ಮತ್ತು ಯಾರನ್ನು ಅವನ ನಿದ್ರೆಯಿಂದ ನಿದ್ರೆಯಿಂದ ಎದ್ದಾಗ ದರ್ಶಿಸುತ್ತಾನೋ ಅವರು ಸುಟ್ಟು ಭಸ್ಮಲಾಗಲಿ ಎಂಬ ವರವಿರುತ್ತೆ.
ಆ ದುಷ್ಟ ಕಾಲಯವನ ಕೃಷ್ಣನ ಕೊಲ್ಲಲು ಉದ್ಯುಕ್ತನಾದಾಗ ಕೃಷ್ಣ ಹೆದರಿದವನಂತೆ ಓಡಿ ಓಡಿ ಹೋಗಿ ಒಂದು ಗುಹೆಗೆ ಹೋಗಿ ಸೇರುತ್ತಾನೆ.  ಪರಮಾತ್ಮನ ಇಚ್ಛೆ ಮುಚುಕುಂದನ ಬಹುದೀರ್ಘ ನಿದ್ರೆಯಿಂದ ಎಬ್ಬಿಸಬೇಕು ಮತ್ತು ಕಾಲಯವನನ ಸಂಹಾರ.  ಕೃಷ್ಣ ತಾನು ಹೊದ್ದಿದ್ದ ವಸ್ತ್ರವನ್ನು ಮಲಗಿದ್ದ ಮುಚುಕುಂದನ ಮೇಲೆ ಹೊದಿಸುತ್ತಾನೆ.    ಕೃಷ್ಣನ ಅಟ್ಟಿಸಿಕೊಂಡು ಬಂದ ಕಾಲಯವನ ಕೃಷ್ಣನೇ ಮಲಗಿರಬಹುದೆಂದು ಅವನ ಒದೆಯುತ್ತಾನೆ.  ತಕ್ಷಣ ಎದ್ದು ಮುಚುಕುಂದನಿಗೆ ಕಂಡದ್ದು ಕಾಲಯವನ.  ಕೂಡಲೇ ಅವನು ಭಸ್ಮವಾಗುತ್ತಾನೆ.    ಈರೀತಿ ದುಷ್ಟ ಕಾಲಯವನನ ಸಂಹಾರ ಮತ್ತು ಮುಚುಕುಂದನ ನಿದ್ರಾವಸ್ಥೆಯಿಂದ ಎಬ್ಬಿಸಿ ಅವನಿಗೆ ತನ್ನ ದರ್ಶನ ನೀಡಿ ಅನುಗ್ರಹಿಸುತ್ತಾನೆ.
*ಮುಚುಕುಂದ ವರದಿ ಗೋವಿಂದಾಯ ನಮಃ:*
&&&&&&&&&&&&&&&&&&&&&&&&&&&
ಒಗಟಿನ ಕ್ವಿಜ್ 21
ಸಿರಿಯು ಕುಲಸತಿ ಸುತನು ಕಮಲಜ
ಹಿರಿಯ ಸೊಸೆ ಶಾರದೆ ಸಹೋದರಿ
ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು
ನಿರುತ ಮಾಯೆಯು ದಾಸಿ ನಿಜಮಂ-
ದಿರವಜಾಂಡವು ಜಂಗಮಸ್ಥಾ-
ವರ ಕುಟುಂಬಿಗ ನೀನು ರಕ್ಷಿಸು ನಮ್ಮನನವರತ |
*ಉತ್ತರ* : ಪರಮಾತ್ಮನ ಸಂಸಾರ
ಸಿರಿಯು – ಲಕ್ಷ್ಮೀದೇವಿ
ಕುಲಸತಿ – ಧರ್ಮಪತ್ನಿ;
ಕಮಲಜ – ಕಮಲಸಂಭವನಾದ ಬ್ರಹ್ಮನು ಪುತ್ರನು;
ಹಿರಿಯ ಸೊಸೆ – ಸೊಸೆ ಸರಸ್ವತಿಯು;
ಸಹೋದರಿ ಗಿರಿಜೆ – ಕೃಷ್ಣನ ತಂಗಿಯಾಗಿ ಅವತರಿಸಿದ ದುರ್ಗೆ ಮಹಾಲಕ್ಷ್ಮಿಯಾದರೂ, ಅವಳ ವಿಶೇಷ ಸನ್ನಿಧಾನ ಪಾರ್ವತಿ ದುರ್ಗೆಯಲ್ಲಿದೆ.  ಆದ್ದರಿಂದ ಗಿರಿಜೆ ಸಹೋದರಿ.  ಅಲ್ಲದೆ ಕೃಷ್ನನ ತಂಗಿ ಸುಭದ್ರೆಯಲ್ಲೂ ಗಿರಿಜೆಯ ಆವೇಶ.  ಆದ್ದರಿಂದ ಗಿರಿಜೆ ಸಹೋದರಿ.
ಮೈದುನ ಶಂಕರ – ದುರ್ಗೆಯ ಪತಿ ಶಂಕರನಾದ್ದರಿಂದ ಮೈದುನ.  ಅಲ್ಲದೆ ಅರ್ಜುನ ಸುಭದ್ರೆಯ ಗಂಡ.  ಅರ್ಜುನ ಇಂದ್ರನ ಅವತಾರ.  ಬ್ರಹ್ಮಾಂಡ ಪುರಾಣದಂತೆ ಗರುಡ, ಶೇಷ, ರುದ್ರ ಮತ್ತು ಇಂದ್ರರು ವಾಯು-ಭಾರತೀದೇವಿಯರ ಪುತ್ರರು.  ಆದ್ದರಿಂದ ಶಿವನು ಇಂದ್ರನ ಸಹೋದರ.  ಆದ್ದರಿಂದ ಶಿವನೂ ಮೈದುನ.
ಸುರರು–ಇತರ ದೇವತೆಗಳುಕಿಂಕರರು.
ಮಾಯೆಯು ನಿರುತ ದಾಸಿ – ಮಾಯಾಶಕ್ತಿಯು ನಿನ್ನ ದಾಸಿ.
ಮಂದಿರವಜಾಂಡವು – ಬ್ರಹ್ಮಾಂಡವೇ
                                   ನಿನ್ನ ಗೃಹ
ಜಂಗಮಸ್ಥಾವರ –
ಜಡ ಚೇತನಗಳನ್ನು ಕೂಡಿದ
ಕುಟುಂಬಿಗ ನೀನು – ಕುಟುಂಬವರ್ಗವನ್ನು ಹೊಂದಿರುವ ಶ್ರೀಹರಿ
ಆಧಾರ : ಕನಕದಾಸರ ಹರಿಭಕ್ತಿಸಾರ
ಅನುವಾದ – ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯ
&&&&&&&&&&&&&&&&&&&&&&&&&&&&.
ಒಗಟಿನ ಪ್ರಶ್ನೆ 22
ಅತಿಹಿರಿಯನೆಂಬ ಗೌರವ ಹೊಂದಿದವನ ; ಪಿತನ ;
ಮಡದಿಯ ಮಹರ್ಷಿಪುತ್ರನ ;
ಅಂಧ ಪುತ್ರನ ; ಸಹೋದರನ ಮಧ್ಯಮಪುತ್ರನ ;
ಬಾಣದಿಂದ ಹತನಾದವನ ;
ನೆನಪಿನಲ್ಲಿ ಮಾಘ ಶುದ್ಧ ಅಷ್ಟಮಿ ಏನು ಮಾಡುತ್ತಾರೆ?
ಉತ್ತರ – ಒಗಟಿನ ಪ್ರಶ್ನೆ 22
ಅತಿಹಿರಿಯನೆಂಬ ಗೌರವ ಹೊಂದಿದವನ  ಭೀಷ್ಮನ;
ಪಿತನ – ಶಂತನುವಿನ ; ಮಡದಿಯ – ಸತ್ಯವತಿಯ ಮಹರ್ಷಿಪುತ್ರನ ; ವೇದವ್ಯಾಸರ
ಅಂಧ ಪುತ್ರನ – ಧೃತರಾಷ್ಟ್ರನ,    ಸಹೋದರನ –  ಪಾಂಡುವಿನ;  ಮಧ್ಯಮಪುತ್ರನ – ಅರ್ಜುನನ
ಬಾಣದಿಂದ ಹತನಾದವನ ; ಭೀಷ್ಮನ
ನೆನಪಿನಲ್ಲಿ ಮಾಘ ಶುದ್ಧ ಅಷ್ಟಮಿ ಭೀಷ್ಮಾಷ್ಟಮಿ  ಮಾಡುತ್ತಾರೆ
@@@@@@@@@@@@@@@
*ಒಗಟಿನ Quiz 23*
ಪ್ರಶ್ನೆ :
ಜಿಂಕೆವಾಹನನ ; ಮಡದಿಯ ಅವತಾರದಿ ; ಸಹೋದರನ ; ಪಿತನ ;
ಅಳಿಯನ ; ಭೀಗರ ; ಮೊಮ್ಮಗನ ; ಸಂರಕ್ಷಿಸಿದವನ ; ಸಹೋದರಿಯ ; ಅತ್ತೆ ಯಾರು ?
ಉತ್ತರ :
ಜಿಂಕೆವಾಹನನ –  ವಾಯುದೇವರ
ಮಡದಿಯ ಅವತಾರದಿ –
ಭಾರತಿದೇವಿ  – ದ್ರೌಪದಿಯ
ಸಹೋದರ – ದೃಷ್ಟದೃಮ್ಯನ
ಪಿತನ – ದೃಪದನ
ಅಳಿಯ -ಅರ್ಜುನನ
ಭೀಗರು – ವಿರಾಟನ
ಮೊಮ್ಮಗ – ಪರಿಕ್ಷಿತನ
ಸಂರಕ್ಷಿಸಿದವನ – ಕೃಷ್ಣ
ಸಹೋದರಿ – ಸುಭದ್ರಳ
ಅತ್ತೆ – ಕುಂತಿ
&&&&&&&&&&&&&&&&&&&&&&-&
 ಪ್ರಶ್ನೆ 24
ಒಗಟಿನ ಪ್ರಶ್ನೆ 24*
ಕರ್ಣನಂತೆ ಹುಟ್ಟಿದ್ದು ಕ್ಷತ್ರಿಯ ;
ಜನ್ಮನಾಮ ಶತ್ರುಜ್ಞ ;
ಜನ್ಮತಂದೆ ದೇವಶ್ರವಸ್
ಸಾಕು ತಂದೆ ಹಿರಣ್ಯಧನು
ಬೆಳೆದಿದ್ದು ವ್ಯಾಧನಾಗಿ ;
ಕಲಿತಿದ್ದು ಸ್ವಯಂ ಗುರುವಿಲ್ಲದೆ
ಜರಾಸಂಧನ ಸೈನ್ಯಾಧಿಕಾರಿಯಾಗಿದ್ದ
ತನ್ನ ಜನ್ಮಬಂಧುವಿನಿಂದ ಹತನಾದ.
ಯಾರವನು ?
ಉತ್ತರ : ಏಕಲವ್ಯ –
 ಏಕಲವ್ಯ ವಸುದೇವನ ಸಹೋದರ ದೇವಶ್ರವಸ್ಸಿನ ಪುತ್ರನಾಗಿ ಜನಿಸಿದರೂ ತಂದೆ ತಾಯಿಯಿಂದ ಬೇರ್ಪಟ್ಟು ಹಿರಣ್ಯಧನು ಎಂಬ ವ್ಯಾಧನಿಂದ ಸಾಕಲ್ಪಟ್ಟು ವಿದ್ಯೆ ಕಲಿಯಲು ದ್ರೋಣರಿಂದ ನಿರಾಕೃತನಾಗಿ ದ್ರೋಣರನ್ನೇ ತನ್ನ ಗುರುವೆಂದು ಭಾವಿಸಿ ಪ್ರಾವೀಣ್ಯತೆ ಹೊಂದಿ, ಜರಾಸಂಧನ ಸೈನ್ಯಾಧಿಕಾರಿಯಾಗಿದ್ದು, ಯಾದವರ ಮೇಲೆ ಆಕ್ರಮಣಕ್ಕೆ ಹೋಗಿ ತನ್ನ ಜನ್ಮಬಂಧು – ದೊಡ್ಡಪ್ಪ ವಾಸುದೇವ ಪುತ್ರ ಕೃಷ್ಣನಿಂದ ಹತನಾದ
&&&&&&&&&&&&&&&&&&&&&&&&
ಪ್ರಶ್ನೆ :  25
 
ಮಡಕೆಯಲ್ಲಿ ಸಂರಕ್ಷಿಸಲ್ಪಟ್ಟ ಅವನು ತನ್ನ ಕಮಂಡಲದಲ್ಲೇ ನದಿಯ ಹಿಡಿದಿಟ್ಟು ನಂತರ ಇಂದ್ರಪದವಿ ಅಪೇಕ್ಷೆ ಉಳ್ಳವನಿಂದ ಕಾಲಿನಿಂದ ಒದೆಸಿಕೊಂಡವ ಯಾರು ? ಒದ್ದವ ಯಾರು ?
ಕಮಂಡಲದಲ್ಲಿ ಬಂಧಿಯಾದ ನದಿ ಯಾವುದು?
ಆ ನದಿಯ ತಂದೆ ಯಾರು?
 
ಉತ್ತರ :
ಮಡಕೆಯಲ್ಲಿ ಸಂರಕ್ಷಿಸಲ್ಪಟ್ಟ ಅವನು
– ಅಗಸ್ತ್ಯರು
ಕಮಂಡಲದಲ್ಲಿ ನದಿಯ ಹಿಡಿದಿಟ್ಟು – ಕಾವೇರಿಯ
ಇಂದ್ರಪದವಿ ಅಪೇಕ್ಷಿತ – ನಹುಷನಿಂದ
ಕಾಲಿನಿಂದ ಒದೆಸಿಕೊಂಡವ – ಅಗಸ್ತ್ಯರು
ಆ ನದಿಯ ತಂದೆ – ಕವೇರ

 

ಒಗಟಿನ ಪ್ರಶ್ನೆ 41
ಭೂದೇವಿಯ ಒಯ್ದವನ ಕೊಂದವನ ಮಡದಿಯ ದ್ವಾಪರಯುಗ ಸುತನ ಕೊಂದವನ ಪತ್ನಿಯ ನಾದಿನಿಯ ಪತಿಯ ಪಿತನ ಪಿತನಾರು?
ಉತ್ತರ :
ಭೂದೇವಿಯ ಒಯ್ದವನ – *ಹಿರಣ್ಯಾಕ್ಷನ*
ಕೊಂದವನ – *ವರಾಹದೇವರ*
ಮಡದಿಯ – *ಭೂದೇವಿಯ*
ದ್ವಾಪರಯುಗ ಸುತನ – *ನರಕಾಸುರನ*
 ಕೊಂದವನ – *ಕೃಷ್ಣನ*
ಪತ್ನಿಯ – *ರುಕ್ಮಿಣಿಯ*
ನಾದಿನಿಯ – *ಸುಭದ್ರೆಯ*
ಪತಿಯ – *ಅರ್ಜುನನ*
ಪಿತನ – *ಪಾಂಡುರಾಜನ*
ಪಿತನಾರು? – *ವೇದವ್ಯಾಸರು*
***************”” “” “
ಒಗಟಿನ ಪ್ರಶ್ನೆ 42-
ಸುಳ್ಳು ಹೇಳದವನ ಮಾತು ನಂಬಿ ನಾರಾಯಣಾಸ್ತ್ರ ಪ್ರಯೋಗಿಸಿದರೂ ಹೆದರದವನಿಗಾಗಿ ವಾರುಣಾಸ್ತ್ರ ಪ್ರಯೋಗಿಸಿದವನ ಗುರುವಿನ ಪುತ್ರನ ಸೋದರಮಾವ ಯಾರು?
*ಉತ್ತರ*:
ಸುಳ್ಳು ಹೇಳದವನ – *ಧರ್ಮರಾಜರ* ಮಾತು ನಂಬಿ – *ಅಶ್ವತ್ಥಾಮ ಹೆಸರಿನ ಆನೆ ಸತ್ತ ವಿಷಯ ಮಗ ಸತ್ತನೆಂದು ನಂಬಿದಾಗ*
ನಾರಾಯಣಾಸ್ತ್ರಕ್ಕೂ  – *ಅಶ್ವತ್ಥಾಮ ಪ್ರಯೋಗಿಸಿದ ನಾರಾಯಣಾಸ್ತ್ರಕ್ಕೂ*
ಹೆದರದ *ಭೀಮಸೇನದೇವರಿಗಾಗಿ*
ವಾರುಣಾಸ್ತ್ರ – *ಅದರ ಪ್ರಖರತೆ ತಡೆಯಲು ಪ್ರಯೋಗಮಾಡಿದ*- ಅರ್ಜುನರ ಗುರುಗಳ – *ದ್ರೋಣಾಚಾರ್ಯರ*
ಪುತ್ರರ – *ಅಶ್ವತ್ಥಾಮಚಾರ್ಯರ*
ಅವರ ಸೋದರ ಮಾವ – *ಕೃಪಾಚಾರ್ಯರು*
[ **********
 
*ಒಗಟಿನ ಪ್ರಶ್ನೆ 43*:
ಇಬ್ಬರು ತಾಯಿಯರ ಅರ್ಧರ್ಧ ದೇಹ ಸಂಧಿಸಿದವಳನ್ನು ಗದೆಯ ಎಸೆದು ಕೊಂದವನ, ಕೊಂದವನ, ಅನುಜನ ಯಾದವ ಮಡದಿಯ, ಕಿರಿ ಅಣ್ಣನ ಹಿರಿ ಮಡದಿಯ ಸಹೋದರನ ಅಳಿಯನ ತಂದೆ ಯಾರು?
 
*ಉತ್ತರ* :  
ಇಬ್ಬರು ತಾಯಿಯರಿಂದ – *ಬೃಹದ್ರತನ ಅವಳಿ ಜವಳಿ ಮಡದಿಯರಿಂದ*
ಅರ್ಧರ್ಧ ದೇಹ – *ಮಗುವಿನ ದೇಹ*
ಸಂಧಿಸಿದವಳ- *ಜರಾ ಎಂಬ ರಾಕ್ಷಸಿ*
ಕೊಂದವನ – *ಜರಾಸಂಧನ*
ಕೊಂದವನ – *ಭೀಮಸೇನನ*
ಅನುಜನ – *ಅರ್ಜುನನ*
ಯಾದವ ಮಡದಿಯ – *ಸುಭದ್ರೆಯ*
ಕಿರಿ ಅಣ್ಣನ – *ಕೃಷ್ಣನ*
ಹಿರಿಮಡದಿಯ – *ರುಕ್ಮಿಣಿಯ*
ಸಹೋದರನ – *ರುಕ್ಮಿಯ*
ಅಳಿಯನ – *ಪ್ರದ್ಯುಮ್ನನ*
ತಂದೆ ಯಾರು? – *ಕೃಷ್ಣ*
 
 
ಬೃಹದ್ರಥ ಮಹಾರಾಜನ ಇಬ್ಬರು ರಾಣಿಯರು (ಅವಳಿ ಸಹೋದರಿ) ಮಕ್ಕಳಿಲ್ಲದಿದ್ದರಿಂದ ಚಂದ್ರಕೌಶಿಕನೆಂಬ ಋಷಿಯಿಂದ ಮಂತ್ರಿಸಲ್ಪಟ್ಪ ಹಣ್ಣನ್ನು ಇಬ್ಬರಿಗೂ ಸಮಪಾಲು ಮಾಡಿದ್ದರಿಂದ ಇಬ್ಬರಿಗೂ ಅರ್ಧರ್ಧ ದೇಹವುಳ್ಳ ಮಗುವು ಜನಿಸಲು ಆ ಮಗುವನ್ನು ಬಿಸಾಡಿರಲು *ಜರಾ* ಎಂಬ ರಾಕ್ಷಸಿಯಿಂದ ಜೋಡಿಸಲ್ಪಟ್ಟಿದ್ದರಿಂದ *ಜರಾಸಂಧ* ಅಂತ ಅವನ ಹೆಸರು.
*****************
ಒಗಟಿನ ಪ್ರಶ್ನೆ 44*
ಭೂದೇವಿಯಪಹರಿಸಿದವನ.
ಅಗ್ರಜನ
ಪಿತನ
ಪುತ್ರನಿಂದ
ಪಾತಾಳಕ್ಕೆ ತಳ್ಳಲ್ಪಟ್ಟವನ
ಗುರುವಿನ
ಪಿತನ
ಮಡದಿಯ ಗರ್ಭಚ್ಯುತಿಯಾಗಿ
ಜನಿಸಿದವನಾರು?
ಉತ್ತರ
ಭೂದೇವಿಯಪಹರಿಸಿದವನ  – ಹಿರಣ್ಯಾಕ್ಷನ
ಅಗ್ರಜನ.         –   ಹಿರಣ್ಯಕಶಿಪುವಿನ
ಪಿತನ              –     ಕಶ್ಯಪರ
ಪುತ್ರನಿಂದ.      –     ವಾಮನನಿಂದ
ಪಾತಾಳಕ್ಕೆ ತಳ್ಳಲ್ಪಟ್ಟವನ – ಬಲಿಚಕ್ರವರ್ತಿಯ
ಗುರುವಿನ              – ಶುಕ್ರಾಚಾರ್ಯರ
ಪಿತನ.                   – ಭೃಗುವಿನ
ಮಡದಿಯ.           – ಪುಲೋಮಳ
 ಗರ್ಭಚ್ಯುತಿಯಾಗಿ
ಜನಿಸಿದವನಾರು?      – ಚ್ಯವನ ಋಷಿ
**”” “” “**********

*ಒಗಟಿನ ಪ್ರಶ್ನೆ 45*

13 ಮಡದಿಯರ ಹೊಂದಿದವನ ; ಪಿತನ ; ಬೀಗರ ;
27 ಮಕ್ಕಳ ವಿವಾಹವಾದವನಿಗೆ ; ಶಪಿಸಿದವನ ;
ತಾಯಿಯ ; ಪಿತನಾರು ?

Answer for *ಒಗಟಿನ ಪ್ರಶ್ನೆ 45*

13 ಮಡದಿಯರ ಹೊಂದಿದವನ ; ಕಶ್ಯಪನ
ಪಿತನ ; ಮರೀಚಿ ಮುನಿಯ
ಬೀಗರ ; ದಕ್ಷಪ್ರಜಾಪತಿಯ
27 ಮಕ್ಕಳ ವಿವಾಹವಾದವನಿಗೆ ; ಚಂದ್ರನ
ಶಪಿಸಿದವನ ; ಗಣಪತಿಯ
ತಾಯಿಯ ; ಪಾರ್ವತಿ ಯ
ಪಿತನಾರು ? ಪರ್ವತರಾಜ ಹಿಮವಂತ

 

########

 

 

*ಒಗಟಿನ ಪ್ರಶ್ನೆ 46*

ಅಷ್ಟಮ ಗರ್ಭಸಂಜಾತನಿಂದ ; ಪುಷ್ಪ ಯಾಚಿಸಿದ ಭಾರ್ಯೆಯ ;
ಪಿತನ ; ಸಹೋದರನ : ಕೊಂದವನ ; ಕೊಂದವನ ; ಪುತ್ರಿಯ ; ಪುತ್ರನ ; ಮಡದಿಯ ; ಪಿತನ ; ಪಿತನ ಅಳಿಯನಾರು ?.

 

*ಉತ್ತರ Answer for *ಒಗಟಿನ ಪ್ರಶ್ನೆ 46*

ಅಷ್ಟಮ ಗರ್ಭಸಂಜಾತನಿಂದ – *ಕೃಷ್ಣನಿಂದ*
ಪುಷ್ಪ ಯಾಚಿಸಿದ ಭಾರ್ಯೆ – *ಸತ್ಯಭಾಮೆಯ*
ಪಿತನ – *ಸತ್ರಾಜಿತನ*
ಸಹೋದರನ – *ಪ್ರಸೇನನ*
ಕೊಂದವನ – *ಸಿಂಹವ*
ಕೊಂದವನ – *ಜಾಂಬುವಂತನ*
ಪುತ್ರಿಯ – *ಜಾಂಬುವತಿಯ*
ಪುತ್ರನ – *ಸಾಂಬನ*
ಮಡದಿಯ – *ಲಕ್ಷಣಾಳ*
ಪಿತನ – *ದುರ್ಯೋಧನನ*
ಪಿತನ – *ಧೃತರಾಷ್ಟ್ರನ*
ಅಳಿಯ – *ಜಯದ್ರತ*
???

 

 

@@@@@@@@@@@@@@@@

 

*ಒಗಟಿನ ಪ್ರಶ್ನೆ 47*

ವಕ್ರಳಿತ್ತ ಗಂಧ ಸ್ವೀಕರಿಸಿದವನ; ಪುತ್ರನ ಸಾರಥಿಯಾಗಿ
ಹೊಂದಿದವನ ; ಪತ್ನಿಯ ಮಗನ ಕೊಂದವನ;
ಸಾರಥಿಯ ಸಹೋದರಿಯ ಪುತ್ರನ; ಪಿತನ ; ಪಿತನಾರು ?

*ಉತ್ತರ – ಒಗಟಿನ ಪ್ರಶ್ನೆ 47*

ವಕ್ರೆಯಿತ್ತ – *ತ್ರಿವಕ್ರೆ (ಕುಬ್ಜೆ) ಯಿತ್ತ* ಗಂಧ ಸ್ವೀಕರಿಸಿದವನ – *ಕೃಷ್ಣನ*
ಪುತ್ರನನ್ನು. – *ವಿಶೋಕನನ್ನು*
(ಕೃಷ್ಣ ಕುಬ್ಜೆಯ ಮಗ ವಿಶೋಕ)
ಸಾರಥಿಯಾಗಿ ಹೊಂದಿದವನ ; *ಭೀಮಸೇನ ದೇವರ*
ಪತ್ನಿಯ – *ಹಿಡಿಂಬೆಯ*
ಮಗನ – *ಘಟೋತ್ಕಚನ* ಕೊಂದವನ – *ಕರ್ಣನ*
ಸಾರಥಿಯ – *ಶಲ್ಯನ*
ಸಹೋದರಿಯ – *ಮಾದ್ರಿಯ*
ಪುತ್ರನ – *ನಕುಲ/ಸಹದೇವನ*
ಪಿತನ – *ಪಾಂಡುವಿನ*
ಪಿತನಾರು ? *ವೇದವ್ಯಾಸ ದೇವರು*

@@@@@@@@@@

 

ಒಗಟಿನ ಪ್ರಶ್ನೆ 48*

ಶ್ರೀನಿವಾಸ ಕಲ್ಯಾಣ ಜನಕರಾಜನಿಗೆ ಹೇಳಿದವರ ; ಮಾತೆಯ ; ಪತಿಯ ; ಶಾಪಕ್ಕೊಳಗಾದವನ ; ಪತ್ನಿಯ ಮೋಹಿಸಿದವನಿಗೆ ; ಶಪಿಸಿದವನ ಪಿತನ ; ಪಿತನ ; ಪಿತನ ; ಪಿತನ ; ವಾಹನ ಯಾರು?

ಉತ್ತರ – ಒಗಟಿನ ಪ್ರಶ್ನೆ 48*

ಶ್ರೀನಿವಾಸ ಕಲ್ಯಾಣ ಜನಕರಾಜನಿಗೆ ಹೇಳಿದವರ – ಶತಾನಂದರ
ಮಾತೆಯ. – ಅಹಲ್ಯೆಯ; ಪತಿಯ. – ಗೌತಮರ
ಶಾಪಕ್ಕೊಳಗಾದವನ – ಇಂದ್ರನ : ಪತ್ನಿಯ – ಶಚೀ ದೇವಿಯ
ಮೋಹಿಸಿದವನಿಗೆ – ನಹುಷನಿಗೆ ; ಶಪಿಸಿದವರ – ಅಗಸ್ತ್ಯರ
ಪಿತನ – ಮಿತ್ರಾವರುಣರ ; ಪಿತನ – ಕಶ್ಯಪರ
ಪಿತನ – ಮರೀಚಿಯ ; ಪಿತನ – ಬ್ರಹ್ಮನ :ವಾಹನ ಯಾರು? ಹಂಸ

***************************

*ಒಗಟಿನ ಪ್ರಶ್ನೆ 49*

ಸಹೋದರಿಯ ; ಪತಿಯ ; ಅಜಾಗ್ರತೆಯಿಂದ ಕೊಂದವನ ;
ಪತ್ನಿಯ ; ಅತ್ತೆಯ ; ಮಾವನ ; ಹಿರಿಯ ಮಗನ ; ಮಕ್ಕಳು ;
ಯಾರ ಶಾಪದಿಂದ ಮರವಾದರು?

*: ಉತ್ತರ Answer for ಒಗಟಿನ ಪ್ರಶ್ನೆ 49*

ಸಹೋದರಿಯ *ಶೂರ್ಪನಖಿಯ*
ಪತಿಯ – *ವಿದ್ವಜ್ಜಿಹ್ವನ*
ಅಜಾಗ್ರತೆಯಿಂದ ಕೊಂದವನ – *ರಾವಣನ*
ಪತ್ನಿಯ – *ಮಂಡೋದರಿಯ*
ಅತ್ತೆಯ – *ಕೈಕಸಿಯ*
ಮಾವನ – *ಪುಲಸ್ತ್ಯನ*
ಹಿರಿಯ ಮಗನ – *ಕುಬೇರನ*
ಮಕ್ಕಳು – *ನಲಕೂಬರಮಣಿಗ್ರೀವ*
ಯಾರ ಶಾಪದಿಂದ –
*ನಾರದರ ಶಾಪದಿಂದ* ಮರವಾಗಿದ್ದರು.

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

ಒಗಟಿನ ಪ್ರಶ್ನೆ 50.
ಅಸೂಯೆ ರಹಿತಳ ; ಪತಿಯ ಮಾವನ  ಮಡದಿಯ ;
ಉಪದೇಶಿಸಿದ ಮಗನ ;. ಹೆಸರಿನಲ್ಲಿರುವ ಸುಳಾದಿ ಯಾವುದು?

Answer for *ಒಗಟಿನ ಪ್ರಶ್ನೆ 50*

ಅಸೂಯೆ ರಹಿತಳ – *ಅನಸೂಯಳ*
ಪತಿಯ – *ಅತ್ರಿಯ*
ಮಾವನ – *ಕರ್ದಮನ*
ಮಡದಿಯ – *ದೇವಹೂತಿಯ*
ಉಪದೇಶಿಸಿದ ಮಗನ – *ಕಪಿಲನ*
ಹೆಸರಿನಲ್ಲಿರುವ ಸುಳಾದಿ ಯಾವುದು?
*ಕಪಿಲ ಸುಳಾದಿ*

**************************************

*ಒಗಟಿನ ಪ್ರಶ್ನೆ 51*

ಘೋರ ತಪಗೈಯುತ್ತಿದ್ದ ಋಷಿಯ ; ತಪಭಂಗಕ್ಕೆ ಬಂದವಳ ;
ಬಸಿರಲಿ ಜನಿಸಿದವಳ ; ಪತಿಯ ; ಪುತ್ರನು
ಯಾವ ರಾಜ್ಯದ ರಾಜ ?

ಉತ್ತರ Answer for *ಒಗಟಿನ ಪ್ರಶ್ನೆ 51*

ಘೋರ ತಪಗೈಯುತ್ತಿದ್ದ ಋಷಿಯ – *ವಿಶ್ವಾಮಿತ್ರನ*
ತಪಭಂಗಕ್ಕೆ ಬಂದವಳ – *ಮೇನಕೆಯ*
ಬಸಿರಲಿ ಜನಿಸಿದವಳ – *ಶಕುಂತಲೆಯ*
ಪತಿಯ – *ದುಶ್ಯಂತನ* ; ಪುತ್ರನು – *ಭರತನು*
ಯಾವ ರಾಜ್ಯದ ರಾಜ – *ಹಸ್ತಿನಾಪುರ*

@@@@@@@@@@@@@#

 

############################

*ಒಗಟಿನ ಪ್ರಶ್ನೆ 52*

ರಾಘವೇಂದ್ರ ತೀರ್ಥರ ಗೋತ್ರ ಪ್ರವರ್ತಕ ಋಷಿಯ ; ಪುತ್ರನ ; ಅವಳೀ ಮಕ್ಕಳ ಕುರುವಂಶದ ದೊರೆ ಸಾಕಿದ;
ಆ ಅವಳಿಯಲ್ಲಿ ಹೆಣ್ಣು ಮಗವ ಭಾರದ್ವಾಜರ ಪುತ್ರನ ಮಡದಿಯಾಗಿ ಅವಳ ಪುತ್ರನಿಂದ ಬ್ರಹ್ಮಾಸ್ತ್ರ ಪ್ರಯೋಗಿಸಲು ; ಗರ್ಭದಲ್ಲೇ ರಕ್ಷಿತ ಮಗುವಿನ ತಾಯಿ ಯಾರು?

 

*Answer for ಒಗಟಿನ ಪ್ರಶ್ನೆ 52*

ರಾಘವೇಂದ್ರ ತೀರ್ಥರ ಗೋತ್ರ ಪ್ರವರ್ತಕ ಋಷಿಯ –
*ಗೌತಮ ಋಷಿಗಳ*
ಪುತ್ರನ – *ಶರದ್ವಾನ್* ಅವನ
ಅವಳೀ ಮಕ್ಕಳ – *ಕೃಪಾ ಮತ್ತು ಕೃಪಿಯನ್ನು*
ಕುರುವಂಶದ ದೊರೆ ಸಾಕಿದ – *ಶಂತನು ಸಾಕಿದ*
ಆ ಅವಳಿಯಲ್ಲಿ  ಹೆಣ್ಣು ಮಗುವ – *ಕೃಪಿಯನ್ನು*
ಭಾರದ್ವಾಜರ ಪುತ್ರನ – *ದ್ರೋಣಾಚಾರ್ಯರ*
ಮಡದಿಯಾಗಿ ಅವಳ ಪುತ್ರನಿಂದ – *ಅಶ್ವತ್ಥಾಮನಿಂದ*
ಬ್ರಹ್ಮಾಸ್ತ್ರ ಪ್ರಯೋಗಿಸಲು ಗರ್ಭದಲ್ಲೇ ರಕ್ಷಿತ ಮಗುವಿನ – *ಪರೀಕ್ಷಿತ*
ಕೃಷ್ಣ ಪರಮಾತ್ಮನಿಂದ ರಕ್ಷಿತಾ ಮಗು ತಾಯಿ ಯಾರು? – *ಉತ್ತರೆ*

 

#########################

*ಒಗಟಿನ ಪ್ರಶ್ನೆ 53*
??
ದೇವಲ ಋಷಿಯ ಛೇಡಿಸಿದವರು ಕರಿನಕ್ರನಾಗೆಂದು ಶಪಿಸಲ್ಪಟ್ಟು; ಮುಂದೆ; ದೇವಪೂಜೆ ಗೈಯುತ್ತಿದ್ದವನ ನೋಡಲು ಬಂದ ಕುಂಭ‌ಸಂಭವನಿಂದ ಶಪಿತನಾಗಿ ; ಕರಿಯ ಕಾಲನ್ನೆಳೆದ ನಕ್ರನ ಕಡಿಯಲು ಮಡದಿಗೆ ಪೇಳದೆ ದುಡುದುಡು ಬಂದವನಾರು ?
Answer for ಒಗಟಿನ ಪ್ರಶ್ನೆ 53
ದೇವಲ ಋಷಿಯ ಛೇಡಿಸಿದವರು –
*ಹಾಹಾ ಹೂಹೂ ಗಂಧರ್ವರು*
ಕರಿನಕ್ರನಾಗೆಂದು ಶಪಿಸಲ್ಪಟ್ಟು ;
*ಆನೆ ಮೊಸಳೆಯರಾಗೆಂದು* ಶಪಿಸಲ್ಪಟ್ಟು ಮುಂದೆ;
ದೇವಪೂಜೆ ಗೈಯುತ್ತಿದ್ದವನ  – *ಇಂದ್ರದ್ಯುಮ್ನನ* ಅರಮನೆಗೆ ಬಂದ ಕುಂಭ‌ಸಂಭವನಿಂದ – *ಅಗಸ್ತ್ಯನಿಂದ*  ಶಪಿತನಾಗಿ ;
ಕರಿಯ –  *ಗಜೇಂದ್ರನ*
ಕಾಲನ್ನೆಳೆದವನ – *ನಕ್ರನ* (ಮೊಸಳೆಯ)  ಕಡಿಯಲು
ಮಡದಿಗೆ  – *ಮಹಾಲಕ್ಷ್ಮಿಗೆ*
ಪೇಳದೆ ದುಡುದುಡು ಬಂದವನು –
?? *ಶ್ರೀಮನ್ನಾರಾಯಣ* ??
@@@@@@@@@@@@@@
ಒಗಟಿನ ಪ್ರಶ್ನೆ 54.
ಯಾದವರಲ್ಲಿ ಉಳಿದ ಏಕೈಕನೂ, ಪರಮಾತ್ಮನ ದ್ವಾಪರ ಅವತಾರ ಆಪ್ತನೂ, ಬಾಲ್ಯದಿಂದಲೂ ಪರಮಾತ್ಮನ ನಿತ್ಯ ಪೂಜಕನೂ,  ಪರಮಾತ್ಮನಿಂದ ಉಪದೇಶ ಪಡೆದವ ಯಾರು? ಅವನು ಪಡೆದ ಉಪದೇಶ ಏನೆಂದು ಪ್ರಸಿದ್ಧಿ?
Answer for *ಒಗಟಿನ ಪ್ರಶ್ನೆ 54*
*ಉದ್ಧವ* ಮತ್ತು *ಉದ್ಧವಗೀತ*
ಉದ್ದವ ತನ್ನ ಚಿಕ್ಕ ವಯಸ್ಸಿನಿಂದಲೂ ಕೃಷ್ಣ ಭಕ್ತ.  ಅವನ  ತಾಯಿ ಮಗನನ್ನು ಮಧ್ಯಾಹ್ನ ಭೋಜನಕ್ಕೆ ಕರೆದರೆ ಇನ್ನೂ ದೇವರ ಪೂಜೆ ಮುಗಿದಿಲ್ಲ ತಾಳಮ್ಮ ಎನ್ನುತ್ತಿದ್ದ ಐದು ವರ್ಷದ ಉದ್ಧವ.  ಅಂತಹ ಉದ್ಧವನೂ ಕೃಷ್ಣನ ಸಂಬಂಧಿ ಮತ್ತು ಯಾದವ.   ದೂರ್ವಾಸ ಋಷಿಗಳ ಶಾಪ ನಿಜ ಮಾಡಲು ಮತ್ತು ತನ್ನ ಅವತಾರ ಸಮಾಪ್ತಿಗೆ ಸನ್ನದ್ದನಾದ ಕೃಷ್ಣ ಉದ್ಧವನ ಕರೆದು ನೀನು ದ್ವಾರಕೆಯಲ್ಲಿರಬೇಡ ತೀರ್ಥಯಾತ್ರೆಗೆ ಹೋಗಿ ಮುಂದೆ ಸಜ್ಜನರಿಗೆ ನನ್ನ ಉಪದೇಶ ತಿಳಿಸು ಎಂದು  ಅರ್ಜುನನಿಗೆ ಉಪದೇಶಿಸಿದಂತೇ ಹಲವು ಧರ್ಮೋಪದೇಶ ನೀಡಿದನು.  ಅದೇ *ಉದ್ಧವಗೀತ* ಈ ರೀತಿ ಎಲ್ಲಾ ಯಾದವರೂ ಪರಸ್ಪರ ಬಡಿದಾಡಿ ಸತ್ತರೂ, ಯಾದವ ಮಾತ್ರ ಸಾಯಲಿಲ್ಲ.
??ಉದ್ಧವ ವರದಾಯ ನಮಃ: ??
$$$$$$$$$$$$$$$$$$$$$$_
ಒಗಟಿನ ಪ್ರಶ್ನೆ 55*
ಯಾದವ ಚಕ್ರವರ್ತಿಯ ; ಮಗಳ ; ದತ್ತುಪಡೆದವನ ;ಅರಮನೆಗೆ ಬಂದಿದ್ದ ಮುನಿಯ; ಸೇವಿಸಿದ್ದವಳ ;  ಹಿರಿ ಪುತ್ರನಿಗೆ ; ರಾಜ್ಯವಿತ್ತು ಅಭಿಷೇಚಿಸಿದವನ ;ಮಾತೆಯ ; ಸಹೋದರನ ರಾಜ್ಯ ಯಾವುದು ?
ಉತ್ತರ Answer for *ಒಗಟಿನ ಪ್ರಶ್ನೆ 55*
ಯಾದವ ಚಕ್ರವರ್ತಿಯ – *ಶೂರಸೇನನ* ಮಗಳ – *ಪೃಥೆಯ*
ದತ್ತುಪಡೆದವನ – *ಕುಂತಿಭೋಜನ*
ಅರಮನೆಗೆ ಬಂದಿದ್ದ ಮುನಿಯ – – *ದುರ್ವಾಸರ*
ಸೇವಿಸಿದ್ದವಳ – *ಕುಂತಿಯ* ಹಿರಿ ಪುತ್ರನಿಗೆ – *ಕರ್ಣನ*
ರಾಜವಿತ್ತು ಅಭಿಷೇಚಿಸಿದವನ  – *ದುರ್ಯೋಧನನ*
ಮಾತೆಯ – *ಗಾಂಧಾರಿಯ* ಸಹೋದರನ – *ಶಕುನಿಯ*
ರಾಜ್ಯ – *ಗಾಂಧಾರ*
######################
*ಒಗಟಿನ ಪ್ರಶ್ನೆ 56*
ಆಕಾಶಾಭಿಮಾನಿಯ ಶಿರಕಡಿದವನಿಂದ ವರಪಡೆದ ದಶಮುಖನ ತೊಟ್ಟಿಲಿನಲ್ಲಿ ಕಟ್ಟಿದವನ ಸಹೋದರನ ಆಜ್ಞೆಗೆ ಏನೆನ್ನುತ್ತಾರೆ?

ಉತ್ತರ Answer

ಆಕಾಶಾಭಿಮಾನಿಯ – *ಗಣಪತಿಯ* ಶಿರ ಕಡಿದವನಿಂದ — *ಶಿವನಿಂದ* ವರಪಡೆದ ದಶಮುಖನ- *ರಾವಣನ*

ತೊಟ್ಟಿಲಿನಲ್ಲಿ ಕಟ್ಟಿದವನ- *ವಾಲಿಯ* ಸಹೋದರನ – *ಸುಗ್ರೀವನ*
ಆಜ್ಞೆಗೆ ಏನೆನ್ನುತ್ತಾರೆ?– *ಸುಗ್ರೀವಾಜ್ಞೆ*

ಸುಗ್ರೀವ ವರದಾಯ ನಮಃ
———————————.

 

ಒಗಟಿನ ಪ್ರಶ್ನೆ 57*

ಯಮಳರ ಮಾತೆಯ ಅಗ್ರಜನ ರಥಿಕನ ಮಾತೆಗೆ ಪುತ್ರನ ಅನುಗ್ರಹಿಸಿದವನ ಮಡದಿಯ ನೆರಳ ಪುತ್ರನ ವಾಹನ ಯಾವುದು ?

Answer

ಯಮಳರ – *ನಕುಲ, ಸಹದೇವರ* ಮಾತೆಯ – *ಮಾದ್ರಿಯ*,
ಅಗ್ರಜನ – *ಶಲ್ಯನ*,  ರಥಿಕನ – *ಕರ್ಣನ* ಮಾತೆಗೆ – *ಕುಂತಿಗೆ*,
ಪುತ್ರನ = *ಕರ್ಣನ* ಅನುಗ್ರಹಿಸಿದವನ – *ಸೂರ್ಯನ*, ಮಡದಿಯ – *ಸಂಜ್ಞಾ ದೇವಿಯ* ನೆರಳ – *ಛಾಯಾ*   ಪುತ್ರನ- *ಶನಿಯ*,
ವಾಹನ – *ಕಾಗೆ*

+++++++++++++++++++++++++++++++++

;ಒಗಟಿನ ಪ್ರಶ್ನೆ 58*

ಪಂಕಜೋದ್ಭವನ ಸುತನ ಸುತನ ಸತಿಯ ಪಯೋವ್ರತ ಫಲನ ;
ಪಾದಾಂಗುಷ್ಟದಿ ಬಂದಿಹರ ; ಶಿರದಿ ಪೊತ್ತಿಹನ ; ವರಪರೀಕ್ಷಕನ ; ವಟುರೂಪದಿ ; ದಹಿಸಿದವಗೆ ನಮೋನಮಃ;

 

Answer for *ಒಗಟಿನ ಪ್ರಶ್ನೆ 58*

ಪಂಕಜೋದ್ಭವನ – *ಬ್ರಹ್ಮದೇವರ*;  ಸುತನ – *ಮರೀಚಿ ಮಷರ್ಷಿಯ*  ಸುತನ- *ಕಶ್ಯಪ ಋಷಿಯ* ಸತಿಯ – *ಅದಿತಿಯ*
ಪಯೋವ್ರತ ಫಲನ – *ವಾಮನನ*
(ಪಯೋವ್ರತ ಮಾಡಿ ಪಡೆದ ಮಗ)
ಪಾದಾಂಗುಷ್ಟದಿ ಬಂದಿಹರ – *ತ್ರಿವಿಕ್ರಮ ರೂಪದ ಅಂಗುಷ್ಟದ ಸ್ಪರ್ಶದಿಂದ ಬಂದ ಗಂಗೆಯ*  ಶಿರದಿಪೊತ್ತಿಹನ – *ಈಶ್ವರನ* ವರಪರೀಕ್ಷಕನ – *ವೃಕಾಸುರನ*
(ವೃಕಾಸುರ ತನಗೆ ಶಿವ ನೀಡಿದ ವಾರ ಪರೀಕ್ಷೆ ಮಾಡಲು ಶಿವನ ತಲೆಯ ಮೇಲೇ ಪರೀಕ್ಷಿಸಲು ಹೊರಟ ಅದಕ್ಕೆ ಭಸ್ಮಾಸುರ ಎನ್ನುವುದು)
ವಟುರೂಪದಿ – *ಬ್ರಹ್ಮಚಾರಿ ರೂಪದಿ*
ದಹಿಸಿದವಗೆ – *ಭಸ್ಮಮಾಡಿದ ಶ್ರೀಹರಿಗೆ* ನಮೋನಮಃ;
(ಭಾಗವತ ರೀತ್ಯಾ)

(ಕೆಲವು ಪುರಾಣಗಳಲ್ಲಿ, ದಾಸರ ಕೀರ್ತನೆಗಳಲ್ಲಿ ವಟುವಿನ ರೂಪದ ಬದಲು ಮೋಹಿನೀ ರೂಪವೆಂದಿದ್ದಾರೆ. ಎರಡೂ ಸರಿ. ಇದನ್ನು ಕಲ್ಪಭೇದದಿಂದ ಹೇಳಬೇಕಾಗುತ್ತದೆ)

+++++++++++++++++++++++++++++++

 

*ಒಗಟಿನ ಪ್ರಶ್ನೆ 59*

ಸೋಮಶೇಖರ ಭಾರ್ಯೆಗೆ ಪೇಳಿದ ಮಂತ್ರಪ್ರತಿಪಾದಕನ
ಪಿತನ ಪಿತನ ಪಿತನ ಪಿತನ ಪೂರ್ವವೃತ್ತಾಂತವನ್ನು ಹೇಳಿ
ಸರಿಪಡಿಸಿದವರು ಯಾರು ?

 

*Answer for* *ಒಗಟಿನ ಪ್ರಶ್ನೆ 59*

ಸೋಮಶೇಖರ – ಶಿವ;  ಭಾರ್ಯೆಗೆ – ಪಾರ್ವತಿಗೆ ;
ಪೇಳಿದ ಮಂತ್ರಪ್ರತಿಪಾದಕನ – ರಾಮನ
ಪಿತನ – ದಶರಥನ  ; ಪಿತನ – ಅಜನ
ಪಿತನ – ರಘುವಿನ ;ಪಿತನ- ದಿಲೀಪನ
ಪೂರ್ವವೃತ್ತಾಂತವನ್ನು ಹೇಳಿ
ಸರಿಪಡಿಸಿದವರು – ವಸಿಷ್ಠರು

(ಹಿಂದೆ ದೇವತೆಗಳ ಪರವಾಗಿ ಯುದ್ಧ ಮಾಡುವಾಗ ದಿಲೀಪ ಕಾಮಧೇನು ಹಸುವಿಗೆ ಗೌರವ ತೋರದಿದ್ದುದುರಿಂದ ಅವನಿಗೆ ಮಕ್ಕಳಾಗಿಲ್ಲ ಎಂದು ವಸಿಷ್ಠರು ನೆನಪಿಸಿದಾಗ, ದಿಲೀಪನು ಕಾಮಧೇನುವಿನ ಮಗಳಾದ ನಂದಿನಿಯನ್ನು 21ದಿನ ಸೇವಿಸಿ, ಪುತ್ರ ಪ್ರಾಪ್ತಿಯಾಗುತ್ತದೆ.)

&&&&&&&&&&&&&&&&&&&&&&&&&&&&

 

ಒಗಟಿನ ಪ್ರಶ್ನೆ 60*

ಜರೆಯ ಸುತಗಂಜಿದನಂತೆ; ದ್ವಾರಾವತಿ ನಿರ್ಮಿಸಿಪನಂತೆ
ಮಲಗಿಪನೆಬ್ಬಿಸಿದನಂತೆ ; ವಸ್ತ್ರನೆಳೆಪನಂತೆ, ನೀಡಿಪನಂತೆ
ವದನದಿ ವಿಶ್ವ ತೋರಿಪನಂತೆ;
ಅತ್ತೆ ಮಗಗೆ ವಿಶ್ವ ರೂಪಿಸಿಪನಂತೆ
ಪಿತಾಮಹಗಾಗಿ ಅಸ್ತ್ರ ಪಿಡಿದನಂತೆ
ನರಹರಿವಿಠಲನ ಮೆಚ್ಚು ದೈವವಂತೆ !

 

ಜರೆಯ ಸುತ – *ಜರಾಸಂಧನಿಗೆ* ಅಂಜಿದಂತೆ ತೋರಿದ – *ಶ್ರೀ ಕೃಷ್ಣ* ದ್ವಾರಾವತಿ ನಿರ್ಮಿಸಿಪನಂತೆ – *ದ್ವಾರಕಾ ಪಟ್ಟಣ* ನಿರ್ಮಿಸಿದನು ;

ಮಲಗಿಪನ ಎಬ್ಬಿಸಿದನಂತೆ – *ಮಲಗಿದ್ದ ಮುಚುಕುಂದನ*

ಕಾಲಯವನ ಮೂಲಕ ಎಬ್ಬಿಸಿದ ;
ವಸ್ತ್ರನೆಳೆಪನಂತೆ – *ಗೋಪಿಯರ ವಸ್ತ್ರವನೆಳೆಪ ಶ್ರೀ ಕೃಷ್ಣ* ;  ವಸ್ತ್ರವ ನೀಡಿಪನಂತೆ – *ದ್ರೌಪದಿಗೆ ವಸ್ತ್ರ ನೀಡಿದನು*
ವದನದಿ ವಿಶ್ವ ತೋರಿಪನಂತೆ – *ತಾಯಿ ಯಶೋದೆಗೆ ಬಾಯಿಯಲ್ಲಿ ಜಗವ ತೋರಿಸಿದ ಶ್ರೀ ಕೃಷ್ಣ*
ಅತ್ತೆ ಮಗಗೆ ವಿಶ್ವ ರೂಪಿಸಿಪನಂತೆ
– *ಅರ್ಜುನನಿಗೆ ವಿಶ್ವ ರೂಪವ ತೋರಿಸಿದ ಶ್ರೀ ಕೃಷ್ಣ*
ಪಿತಾಮಹಗಾಗಿ ಅಸ್ತ್ರ ಪಿಡಿದನಂತೆ – *ಪಿತಾಮಹ ಭೀಷ್ಮನ ಮಾತನ್ನು ನಿಜ ಮಾಡಲು ಕುರುಕ್ಷೇತ್ರದಲ್ಲಿ ಶಸ್ತ್ರವ ಹಿಡದ ಶ್ರೀ ಕೃಷ್ಣ*
ನರಹರಿವಿಠಲನ ಮೆಚ್ಚಿನ ದೇವರು  *ಶ್ರೀ ಕೃಷ್ಣಾಯ ನಮ:*
+++++++++++++++++++

ಒಗಟಿನ ಪ್ರಶ್ನೆ 61*

ಪಿತನ ವಿವಾಹ ಮಾಡಿದವನು ; ಪಿತಗೆ ಆಯಸ್ಸು ನೀಡಿದವನು
ಪಿತಗಾಗಿ ಮಾತೆಯ ಕಡಿದವನು; ಪಿತನ ತಲೆ ಕಡಿದವನು;
ಪಿತನ ಬಾವಮೈದುನನ ಕೊಂದವನು;
ಪಿತನ ಹೊತ್ತೊಯ್ದವನಿಂದ ಬಿಡಿಸಿದ;
ಪಿತನ ವರ ಸತ್ಯಮಾಡಲು ವನಸೇರಿದ

ಇವರು ಯಾರ್ಯಾರು ತಿಳಿಸಿ.

*ಉತ್ತರ* :

ಪಿತನ ವಿವಾಹ ಮಾಡಿದವನು – *ಭೀಷ್ಮರು*
ಪಿತಗೆ ಆಯಸ್ಸು ನೀಡಿದವನು
– *ಪುರು ತನ್ನ ಆಯಸ್ಸು ತಂದೆ ಯಯಾತಿಗೆ ನೀಡಿದನು*
ಪಿತಗಾಗಿ ಮಾತೆಯ ಕಡಿದವನು
– *ತನ್ನ ತಾಯಿ ರೇಣುಕಳ ಶಿರ ಕಡಿದ ಪರಶುರಾಮ*
ಪಿತನ ತಲೆ ಕಡಿದವನು
– *ಬ್ರಹ್ಮನ ತಲೆ ಕಡಿದ ಶಿವ*
ಪಿತನ ಭಾವಮೈದುನನ ಕೊಂದವ
– *ಕಂಸನ ಕೊಂದ ಕೃಷ್ಣ*
ಪಿತನ ಹೊತ್ತೊಯ್ಯುವನಿಂದ ಬಿಡಿಸಿದ
– *ಅಕಾಲ ಸ್ನಾನಕ್ಕೆ ಹೋದ ವಸುದೇವನ ಹೊತ್ತೊಯ್ದ ವರುಣದೇವನಿಂದ ಬಿಡಿಸಿದ ಕೃಷ್ಣ*
ಪಿತನ ವರ ಸತ್ಯ ಮಾಡಲು ವನ ಸೇರಿದ – *ದಶರಥ ಕೈಕೇಯಿಗೆ ನೀಡಿದ ವರ ನಿಮಿತ್ತ ರಾಮ ಕಾಡಿಗೆ ಹೋದ*

————-

*ಒಗಟಿನ ಪ್ರಶ್ನೆ 62*

ಗಂಡನನುಸರಿಸಿ ಅಂಧತ್ವ ಸ್ವೀಕರಿಸಿದವಳ ; ಹೆಮ್ಮಗನ ಮಾತುಳನ ; ಕೊಂದವನ ಮಾತುಳನ ರಥಿಕನ ಕೊಂದವನ ಮಾತುಳನ ಮಗನ ಮಾತುಳನ ಮಡದಿಯ ಪಿತನ ಕೊಂದವನಾರು ?

 

*ಉತ್ತರ :

ಗಂಡನ – ಧೃತರಾಷ್ಟ್ರನ;

ಅನುಸರಿಸಿ ಅಂಧತ್ವ ಸ್ವೀಕರಿಸಿದವಳ – ಗಾಂಧಾರಿಯ

ಹೆಮ್ಮಗನ – ದುಯೊ೯ಧನನ ಮಾತುಳನ – ಶಕುನಿಯ

ಕೊಂದವನ – ಸಹದೇವನ ಮಾತುಳನ – ಶಲ್ಯ ರಾಜನ

ರಥಿಕನ ಕೊಂದವನ – ಅರ್ಜುನನ  ಮಾತುಳನ – ವಸುದೇವನ

ಮಗನ – ಕೃಷ್ಣನ ಮಾತುಳನ – ಕಂಸನ

ಮಡದಿಯ – ಅಸ್ತಿ ಮತ್ತು ಪಾಸ್ತಿಯ

ಪಿತನ – ಜರಾಸಂಧನ ಕೊಂದವನಾರು – ಭೀಮಸೇನದೇವರು

@@@@@@@@@@@

 

*ಒಗಟಿನ ಪ್ರಶ್ನೆ 63*

ಶ್ರೇಷ್ಠ ವೀರನಿಂದ  ; ಇನ್ನೊಬ್ಬರಿಗಾಗಿ  ಅಪಹೃತಳಾದವಳನ್ನು ಅವಳು ವರಿಸಿದವನಿಂದ ತಿರಸ್ಕರಸಲ್ಪಡಲು ಅಪಹರಿಸಿದವನೂ ವಿವಾಹವಾಗೆನೆನಲು ಶಫಥಗೈದು ಅಗ್ನಿಗೆ ಆಹುತಿಯಾಗಿ
ಮರುಜನ್ಮದಿ ಪುರುಷನಂತೆ ಶೌರ್ಯದಿ ಮೆರೆದವಳ ಪಿತನ ವೈರಿಯ
ಶಿಷ್ಯನಿಂದ ಹೆಡೆಮುರಿ ಕಟ್ಟಿ ಎಳೆದೊಯ್ದುವನ ಸ್ವಯಂವರದಲ್ಲಿ ವರಿಸಿದವಳಾರು ?

ಉತ್ತರ :

ಶ್ರೇಷ್ಠ ವೀರನಿಂದ — ಭೀಷ್ಮನಿಂದ ; ಇನ್ನೊಬ್ಬರಿಗಾಗಿ — ವಿಚಿತ್ರ ವೀರ್ಯನಿಗಾಗಿ ಅಪಹೃತಳಾದವಳನ್ನು — *ಅಂಬಾ*

ಅವಳು ವರಿಸಿದವನಿಂದ — *ಸಾಲ್ವರಾಜನಿಂದ *

ತಿರಸ್ಕರಸಲ್ಪಡಲು ; ಅಪಹರಿಸಿದವನೂ *ಭೀಷ್ಮನೂ* ವಿವಾಹ- ವಾಗೆನೆನಲು ಶಫಥಗೈದು ಅಗ್ನಿಗೆ ಆಹುತಿಯಾಗಿ ;ಮರು ಜನ್ಮದಿ ಪುರುಷನಂತೆ ಶೌರ್ಯದಿ ಮೆರೆದವಳ —*ಶಿಖಂಡಿ*

ಪಿತನ — *ದ್ರುಪದನ* ವೈರಿಯ — *ದ್ರೋಣಾಚಾರ್ಯನ*
ಶಿಷ್ಯನಿಂದ ಹೆಡೆಮುರಿ ಕಟ್ಟಿ ಎಳೆದೊಯ್ದುವನ — *ಅರ್ಜುನನ* ಸ್ವಯಂವರದಲ್ಲಿ ವರಿಸಿದವಳಾರು ? —ದ್ರೌಪದಿ

@@@@@@@@@
ಪ್ರಶ್ನೆ 64
ವಸ್ತ್ರ ಸೆಳೆದವನ ಅಗ್ರಜನ ತೊಡೆ ಮುರಿದವನ ಅನುಜನಿಂದ ನೃತ್ಯ ಕಲಿತವಳ ಪಿತನಿಂದ ದಾಳದಿಂದ ಪೆಟ್ಟುತಿಂದವನ ಪಿತನಿಗೆ ಶಪಿಸಿದವ ಯಾರು ?
ಉತ್ತರ –

ವಸ್ತ್ರ ಸೆಳೆದವನ *ದುಶ್ಯಾಸನನ*
ಅಗ್ರಜನ *ದುರ್ಯೋಧನನ*
ತೊಡೆ ಮುರಿದವನ *ಭೀಮಸೇನನ*
ಅನುಜನಿಂದ *ಅರ್ಜುನನಿಂದ*
ನೃತ್ಯ ಕಲಿತವಳ *ಉತ್ತರೆಯ*
ಪಿತನಿಂದ *ವಿರತರಾಜನಿಂದ*
ಪೆಟ್ಟುತಿಂದವನ *ಧರ್ಮರಾಜನ*
ಪಿತನಿಗೆ *ಪಾಂಡುರಾಜನಿಗೆ*
ಶಪಿಸಿದವರು *ಕಿಂಡಮ ಋಷಿಗಳು*

ಕಿಂಡಮ ಋಷಿಗಳು – ಇವರು ಕಾಡಿನಲ್ಲಿ ವಾಸವಾಗಿದ್ದರು. ಒಮ್ಮೆ ತಮ್ಮ ಇವರು ಪತಿ ಪತ್ನಿಯರು ಜಿಂಕೆ ವೇಷ ಧರಿಸಿ ಜತೆ ಸರಸ ಸಲ್ಲಾಪದಲ್ಲಿ ಇದ್ದಾಗ ಜಿಂಕೆಯೆಂದು ತಿಳಿದು ಪಾಂಡು ಮಹಾರಾಜ ಬಾಣ ಹೂಡಲು, ಆ ಕಿಂಡಮ ಋಷಿ ದು:ಖದಿಂದ ಪಾಂಡುವಿಗೆ ಶಪಿಸುತ್ತಾನೆ. ” ನೀನು ಹೆಂಡತಿಯ ಕೂಡಿದರೆ ನಿನಗೂ ಸಾವು ಬರಲಿ” ಎಂದು.

ಅದರಂತೆ ಒಮ್ಮೆ ಪಾಂಡು ತನ್ನ ಪತ್ನಿ ಮಾದ್ರಿಯ ಸೇರಲು ಪ್ರಯತ್ನಿಸಿದಾಗ ಸತ್ತನು.

,###############################

ಪ್ರಶ್ನೆ 65

ಕಬ್ಬಿಣ ತಿಂದು ತಪಗೈದವನ ; ಪುತ್ರನು ;
ಅಷ್ಟಮಗರ್ಭದಿ ಜನಿಸಿದವನ ; ಅಟ್ಟಿಸಿಕೊಂಡು ಹೋದಾಗ, ಎಚ್ಚರಗೊಂಡು ದಹಿಸಿದವನ ; ಆಗ್ರಜನ ;ಪಿತನ ; ಗರ್ಭ ಧರಿಸಿದವರು ಯಾರು?

ಉತ್ತರ :

ಕಬ್ಬಿಣ ತಿಂದು ತಪಗೈದವನ – *ಗಾರ್ಗ್ಯನ* ;
ಪುತ್ರನು – *ಕಾಲಯವನನು*;
ಅಷ್ಟಮಗರ್ಭದಿ ಜನಿಸಿದವನ – *ಕೃಷ್ಣನ*;
ಅಟ್ಟಿಸಿಕೊಂಡು ಹೋದಾಗ,
– *ಯುದ್ಧಕ್ಕೆ ಕರೆದಾಗ ಓಡಿ ಹೋಗುವನಂತೆ ಕೃಷ್ಣ ಹೋದಾಗ*
ಎಚ್ಚರಗೊಂಡು ದಹಿಸಿದವನ *ಮಲಗಿದ್ದವನೆದ್ದ ಮುಚಕುಂದನ* ;
ಆಗ್ರಜನ – *ಅಂಬರೀಷನ*;
ಪಿತನ – *ಮಾಂಧಾತನ*;
ಗರ್ಭ ಧರಿಸಿದವರು – *ಯವನಾಶ್ವ*

ಯವನಾಶ್ವ ಪುತ್ರನ ಅಪೇಕ್ಷೆಯಿಂದ ಚ್ಯವನ ಋಷಿಗಳ ಮೂಲಕ ಯಜ್ಞ ಮಾಡುತ್ತಿದ್ದಾಗ, ಆ ಯಜ್ನದಲ್ಲಿ ತನ್ನ ಪತ್ನಿಗಾಗಿ ಸಿದ್ಧವಿದ್ದ ನೀರನ್ನು ಬಾಯಾರಿಕೆಯಿಂದ ತಾನೇ ಕುಡಿಯಲು ಯವನಾಶ್ವನೇ ಗರ್ಭ ಧರಿಸಿ ಪಡೆದ ಪುತ್ರನೇ ಮಾಂಧಾತಾ ಮಹಾರಾಜ

$$$$$$$$$$$$$$$$$$$$$$$$$$$$$$$$$$$$$$$$$$$$

*ಒಗಟಿನ ಪ್ರಶ್ನೆ 66*

ಯಜ್ಞದಲ್ಲಿ ಜನಿಸಿದವನ ; ಸಹೋದರಿಯ ;
ವರಿಸಿದವನ ; ಮಾತೆಯ ; ಅಗ್ರಜನ ;
ಪುತ್ರಿಯ ; ಸುತನ ; ಸತಿಯ ; ಮಾತುಳನಿಂದ ;
ಕಾಮಪೀಡೆಗೆ ಒಳಪಟ್ಟವಳ ಪಾತ್ರದ ಹೆಸರೇನು ?

ಉತ್ತರ :

ಯಜ್ಞದಲ್ಲಿ ಜನಿಸಿದವನ – *ಧೃಷ್ಟದ್ಯುಮ್ನನ*
ಸಹೋದರಿಯ – *ದ್ರೌಪದಿಯ*
ವರಿಸಿದವನ – *ಅರ್ಜುನನ*
ಮಾತೆಯ – *ಕುಂತಿಯ*
ಅಗ್ರಜನ – *ವಸುದೇವನ*
ಪುತ್ರಿಯ – *ಸುಭದ್ರೆಯ*
ಸುತನ – *ಅಭಿಮನ್ಯುವಿನ*
ಸತಿಯ – *ಉತ್ತರೆಯ*
ಮಾತುಳನಿಂದ- *ಕೀಚಕನಿಂದ*
ಕಾಮಪೀಡೆಗೆ ಒಳಪಟ್ಟವಳ
ಪಾತ್ರದ ಹೆಸರೇನು ? – *ಮಾಲಿನಿ*

ಸೈರಂಧ್ರಿಯಾಗಿ ಅಂದರೆ ರಾಣಿ ಸುಧೇಷ್ಣೆಯ ಜಾಸ್ತಿಯಾಗಿ ಕೇಶವಿನ್ಯಾಸಕಿಯಾಗಿದ್ದ ದ್ರೌಪದಿಯ ಪಾತ್ರದ ಹೆಸರು ಮಾಲಿನಿ

#######################################$##

Sumadhwa Seva © 2013