Shakambari Hunnime

“ಬನದ ಹುಣ್ಣಿಮೆ, ಶಾಕಾಂಬರಿ ರಥೋತ್ಸವ”

ಬನಶಂಕರಿ ಅಥವಾ ಶಾಕಾಂಬರಿ – ಇದು ದುರ್ಗಾ ಮಾತೆಯ ಮತ್ತೊಂದು ಹೆಸರು.   ಪುಷ್ಯಮಾಸದ ಶುದ್ಧ ಚತುರ್ದಶಿ ಮತ್ತು ಪೂರ್ಣಿಮೆಯಂದು ಬನಶಂಕರಿ ಪೂಜೆಯನ್ನು ಮಾಡುವ ಸಂಪ್ರದಾಯವಿದೆ.  ಈ ಪೂಜೆಯು ೭ ದಿನಗಳ ಪರ್ಯಂತ ವಿಶೇಷವಾಗಿ ನಡೆಯುತ್ತದೆ – ಅಂದರೆ ಪುಷ್ಯ ಶುದ್ಧ ಅಷ್ಟಮಿಯಿಂದ ಹುಣ್ಣಿಮೆ ಪರ್ಯಂತ ಜರುಗುತ್ತದೆ.  ಈ ಸಂದರ್ಭದಲ್ಲಿ ಪ್ರತಿಯೊಂದು ದಿನವೂ ನಿಷಿದ್ದವಲ್ಲದ ಒಂದೊಂದು ತರಕಾರಿ ಪಲ್ಯವನ್ನು ದುರ್ಗಾಮಾತೆಗೆ ನಿವೇದಿಸಲಾಗುತ್ತದೆ.  ಆದ್ದರಿಂದಲೇ ಈ ವ್ರತಕ್ಕೆ ಶಾಕಾಂಬರಿ ವ್ರತವೆಂದು ಹೆಸರು.  ಶಾಕ + ಅಂಬರಿ = ಶಾಕಾಂಬರಿ – ಯಾರು ಧರಿಸುತ್ತಾರೋ ಅವರೇ ಶಾಕಾಂಬರಿ
ಚತುರ್ದಶಿ – ಸರ್ವ ತರಕಾರಿಗಳನ್ನು ಸಮರ್ಪಿಸಲಾಗುತ್ತದೆ.  ಬನದ ಹುಣ್ಣಿಮೆ, ಜಾತ್ರೆ ವಿಶೇಷವಾಗಿ ನಡೆಸಲಾಗುತ್ತದೆ.  ಈ ಉತ್ಸವವನ್ನು ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ರಾಜಾಸ್ಥಾನಗಳಲ್ಲಿ ಆಚರಿಸಲಾಗುತ್ತದೆ.

ಪ್ರಮುಖ ಪ್ರಾಚೀನ ಶಾಕಾಂಬರಿ ದೇವಸ್ಥಾನಗಳು ಕರ್ನಾಟಕದ ಬಾದಾಮಿ ಮತ್ತು ಬೆಂಗಳೂರಿನಲ್ಲೂ, ಮಹಾರಾಷ್ಟ್ರದ ನಾಗೇವಾಡಿ, ಪುಣೆಯಲ್ಲೂ, ಉತ್ತರಪ್ರದೇಶದ ಶಹ್ರಾನ್ಪುರದಲ್ಲೂ, ರಾಜಸ್ಥಾನದ ಸಂಭಾರಿನಲ್ಲೂ, ಮತ್ತೂ ಜಾರ್ಖಂಡಿನಲ್ಲೂ ಕಾಣಬಹುದು.

ಚತುರ್ದಶಿ ಮತ್ತು ಹುಣ್ಣಿಮೆಯಂದು ೧೦೮ ತರಕಾರಿಗಳನ್ನು ಸಮರ್ಪಿಸುವ ಸಂಪ್ರದಾಯವಿದೆ.

ಈದಿನ ಶಾಕಾಂಬರಿ ಹುಟ್ಟಿದ ದಿನ.  ಸಾವಿರಾರು ವರ್ಷಗಳ ಹಿಂದೆ ದುರ್ಗಾಮಾಸುರನೆಂಬ ದೈತ್ಯನನ್ನು ಸಂಹರಿಸಲು, ಯಜ್ಞದಲ್ಲಿ ಉತ್ಪನ್ನಳಾದ ಶಕ್ತಿ ದೇವತೆಯೇ ಶಾಕಾಂಬರಿ.  ಆ ಕಾಲದಲ್ಲಿ ಬಹಳ ದುರ್ಭಿಕ್ಷೆಯಿದ್ದರಿಂದ ತಾನು ಬರುವಾಗ ಹಲವಾರು ತರಕಾರಿಗಳನ್ನು ತಂದು ಜನರನ್ನು ಉದ್ಧರಿಸಿದ್ದಳು.  ಆದ್ದರಿಂದ ಶಾಕಾಂಬರಿಯಾದಳು.

ಹುಣ್ಣಿಮೆಯಂದು ದೀಪೋತ್ಸವ, ದೀಪದಾನಕ್ಕೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗಿದೆ.

Shakambari Purnima is observed during full moon day, or Pournami, in Pushya maasa.

Who is Shakambari?

ಶಾಕಾಂಬರಿ –  ಶಾಕ + ಅಂಬರಿ shaaka + ambari

shaaka means vegetables ambari – means one who wears

It is said that Goddess Durga appeared as Shakambari after a dry period of hundred years.  She brought forth from her body fruits, flowers, vegetables and herbs to suffice the hunger of the people.

Goddess Shakambari incarnated on  Shakambari Pournami day.  The day also marks the end of the  week long Shakambari Navratri festival which began on Pushya Shudda Astami

Goddess Shakambari is worshipped during the period in Karnataka, Maharashtra, Uttar Pradesh and Rajasthan.   We as Madhwas must worship Goddess Shakambari alongwith Maharudradevaru – tadantargatha – Bharatiramana Mukyapranantargatha – Sri Lakshmi Narasimha Devaru.

On Pushya Shukla Chaturdashi we have do the naivedya of vegetables to Banashankari (Parvathi)  and we have to give daana to brahmana – muthaideyaru.  That is why this Vratha is called as “Shakambari Vratha”.

This Vratha is followed for 7 days from Pushya shudda Astami to Pushya p0urnami.  On all these days, different palyas of  vegetables (anishidda) to be prepared.

On the Hunnime day, deepotsava, special pooja and deepa daana to be done.

POURNAMI – ALAKSHMI NAASHA  “ಅಲಕ್ಷ್ಮೀನಾಶ”

On Pushyamasa Hunnime day, if it has pushya nakshatra, we must take snaana with lepana of  white sasive on our body and after snaana we must have nutana vastra dharana, we must have the darshana of the mirror, phalapushpa, cow and brahmana.   On this day one must do pooja of Chandra, Indira and Bruhaspathi.

“ಪುಷ್ಯ ಯೋಗ ಸಹಿತ ಪುಷ್ಯ ಹುಣ್ಣಿಮೆ”

ಪುಷ್ಯಮಾಸದ ಹುಣ್ಣಿಮೆಯಂದು ಪುಷ್ಯಾ ನಕ್ಷತ್ರವಿರುವಾಗ ಬಿಳಿ ಸಾಸಿವೆಯನ್ನು ಶರೀರಕ್ಕೆ ಲೇಪಿಸಿಕೊಂಡು ಸ್ನಾನವನ್ನು ಮಾಡಬೇಕು.  ಸ್ನಾನಾನಂತರ ನೂತನವಸ್ತ್ರಧಾರಣ ಮಾಡಿ ಮಂಗಳ ವಸ್ತುಗಳಾದ ಕನ್ನಡಿ, ಫಲಪುಷ್ಪಗಳು, ಹಸು, ಬ್ರಾಹ್ಮಣರು ಮುಂತಾದವುಗಳನ್ನು ದರ್ಶನ ಮಾಡಿದರೆ ನಮ್ಮ ಮನೆಯಲ್ಲಿರುವ ಅಲಕ್ಷ್ಮೀ ನಾಶವಾಗುತ್ತಾಳೆ, ಲಕ್ಷ್ಮೀ ನೆಲೆಸುತ್ತಾಳೆ.

(Source – Chaturvedi Vedavyasachar)

Leave a Reply

Your email address will not be published. Required fields are marked *