Mahipati Dasaru
ಜಗದ್ಗುರುಮ್ ಕೃಪಾಸಿಂಧುಮ್ ಶರಣಾಗತ ವತ್ಸಲಮ್
ಭಕ್ತಮಾನಸ ಸಂಚಾರಂ ಮಹೀಪತಿ ಗುರುಂ ಭಜೇ
ಸ್ವಭಕ್ಥಾನುಗ್ರಹಾರ್ಥಾಯ ಸಾಮೀಪ್ಯಾತ್ ಧ್ರುವಮಾಗಥಾನ್
ಮಹೀಪತಿಗುರೂನ್ ವಂದೇ ಸರ್ವವಿದ್ಯಾವಿಶಾರದಾನ್ |
जगद्गुरुम् कृपासिंधुम् शरणागत वत्सलम्
भक्तमानस संचारं महीपति गुरुं भजे
स्वभक्थानुग्रहार्थाय सामीप्यात् ध्रुवमागथान्
महीपतिगुरून् वंदे सर्वविद्याविशारदान् ।
Aradhana – Karthika Bahula Amavasye
Period – 1611 – 1681
Vyavahara naama – Mahipati Rayaru
Ankita – Mahipati
Place – Khakandaki
For devaranama – click here
Hrudaya Shuddavagade – click
========================================================
ಮಹಿಪತಿದಾಸರ ವೃಂದಾವನ ಆದಂಥ ವಿಷಯ
(Source Pavan Haridas) :
ಮಹಿಪತಿದಾಸರಿಗೆ ತಮ್ಮ ಅವಸಾನ ಕಾಲ ಸಮೀಪವಾಗಿದೆಯೆಂದು ತಿಳಿಯಿತು. ಆಗ ಕುಲಗುರುಗಳಾದ ಕೊಲ್ಹಾರದ ಕೃಷ್ಣಾಚಾರ್ಯರನ್ನು ನೋಡಬೇಕೆಂಬ ಆಸೆಯಾಯಿತು. ಅವರು ಈ ವಿಷಯವನ್ನು ತಮ್ಮ ಹಿರಿಯ ಮಗನಾದ ದೇವರಾಯನಿಗೆ ಕೃಷ್ಣರಾಯರಿಂದ ಸುದ್ಡಿ ಕಳಿಸಿ, ತಾವು ಕೃಷ್ಣರಾಯರಿಂದ ಕೂಡಿಕೊಂಡು ಕೊಲ್ಹಾರಕ್ಕೆ ತೆರಳಿ ಅಲ್ಲಿ 6 ದಿನಗಳಿದ್ದು ಸರಿಯಾಗಿ 7ನೆ ದಿನ ಪ್ರಾಪ್ತಿಯಾಗಲು ಕೃಷ್ಣಾನದಿ ಸ್ನಾನ ಮಾಡಿಕೊಂಡು ಅನುಷ್ಟಾನಕ್ಕೆ ಕುಳಿತವರೇ ತಮ್ಮ ದೇಹತ್ಯಾಗವನ್ನು ಮಾಡಿದರು.
ಪುತ್ರದ್ವಯರಿಬ್ಬರು ಉತ್ತರಕ್ರಿಯೆಗಳನ್ನು ಮುಗಿಸಿ ಅಸ್ತಿಸಂಚಯನ ಮಾಡುತ್ತಿದ್ದಾಗ ಕೈಯಲ್ಲಿ ಹಿಡಿದ ಅಸ್ಥಿಗಳು ನೀರಾಗಿ ಹೋದವು. ಮತ್ತು ಅಶರೀರ ವಾಣಿಯಾಯಿತಂತೆ “ಮಗು ಚಿಂತಿಸಬೇಡ ಇವುಗಳು ಗಂಗೆಯಲ್ಲಿ ವಿಸರ್ಜನಗೊಂಡಿವೆ” ಎಂದು ಹೇಳಿದರಂತೆ. ನಂತರ ಕೃಷ್ಣರಾಯರಿಗೆ ಸಮಾಧಾನವಾಗದಿದ್ದುದನ್ನು ತಿಳಿದು ಮುಂದುವರೆಸಿ , ನಾನು ಕಾಖಂಡಕಿಯಲ್ಲಿ ಅನುಷ್ಥಾನಕ್ಕೆ ಕುಳಿತುಕೊಳ್ಳುತ್ತಿದ್ದ ಶಮೀವೃಕ್ಷದ ಕೆಳಗೆ ಹನ್ನೆರಡು ಸಾಲಿಗ್ರಾಮಗಳಿವೆ ಅವುಗಳನ್ನು ತೆಗೆದು ಅದೇ ಜಾಗದಲ್ಲಿ ನನ್ನ ವೃಂದಾವನವನ್ನು ನಿರ್ಮಿಸು ಎಂದು ಹೇಳಿದರಂತೆ.
ಈಗಿರುವ ವೃಂದಾವನವು ಒಂದು ಕ್ಷೇತ್ರ ಶಾಲಿಗ್ರಮಗಳ ಸನ್ನಿಧಿಯಿರುವಂತಾಗಿದೆ. ತಂದೆಯ ಆಜ್ಞೆಯಂತೆಯೇ ಕಾಖಂಡಕಿಗೆ ಬಂದು ಅವರು ಅನುಷ್ಠಾನ ಮಾಡುತ್ತಿದ್ದ ಹೊಲದಲ್ಲಿ ಬಂದು ವೃಂದಾವನ ನಿರ್ಮಿಸಬೇಕೆನ್ನುತ್ತಿರುವಾಗ ಹೊಲದ ಮಾಲೀಕನಾದ ಗೌಡನು ಅದಕ್ಕೆ ಒಪ್ಪಲಿಲ್ಲ. ಚಿಂತಾಕ್ರಾಂತರಾಗಿ ಕೃಷ್ಣರಾಯರು ಅಲ್ಲಿಯೇ ನಿಂತಾಗ ಸೇವಕನೊಬ್ಬ ಓಡಿಬಂದು ಗೌಡನ ಪುತ್ರನು ತೀರಿಕೊಂಡ ವಿಷಯ ತಿಳಿಸಿದ. ದುಖಿತನಾದ ಗೌಡನು ನಿಮ್ಮ ತಂದೆಯು ಮೊರದೆಪ್ಪನ ಹೆಂಡತಿಯನ್ನು ಬದುಕಿಸಿದಂತೆ, ನೀವು ನನ್ನ ಮಗನನ್ನು ಬದುಕಿಸಿ ಎಂದು ಹೇಳಿದರು ರಾಯರು, ನನ್ನ ತಂದೆ ಪವಾಡಗಳನ್ನು ಮಾಡಬೇಡ ಎಂದು ಆಜ್ಞೆ ನೀಡಿದ್ದಾರೆ. ಆದ್ದರಿಂದ ನಾನು ಬದುಕಿಸಲಾರೆ, ಇನ್ನು ನಾಲ್ಕು ತಲೆಮಾರು ದತ್ತುಪುತ್ರರಿಂದಲೇ ವಂಶ ಬೆಳೆದು ನಂತರ ನಿಮ್ಮ ಸಂತತಿಯಿಂದಲೇ ವೃದ್ಧಿಯಾಗುತ್ತದೆಂದು, ಸಂಪತ್ಭರಿತ ಜೀವನ ನಡೆಸುವಿರೆಂದು, ದಾಸರ ಸೇವೆ ಮಾಡುವಂತೆ ತಿಳಿಸಿದರು. ಅವನ ಹೊಲವನ್ನು ದಾಸರಿಗೆನೀಡಿದ ಗೌಡರ ಮನೆತನ ಇಂದಿಗೂ ಆರಾಧನೆ ಸಮಯದಲ್ಲಿ ತುಂಬಾ ಸೇವೆ ಗೈಯುತ್ತಾರೆ. ಈಗ ವೃಂದಾವನವು ಅದೇ ಹೊಲದಲ್ಲಿ ಪ್ರತಿಷ್ಥಾಪನೆಗೊಂಡಿದೆ.
ವೃಂದಾವನ ಸಾನ್ನಿಧ್ಯ ಸಾಕ್ಷಿಗಾಗಿ ಒಮ್ಮೆ ಕೃಷ್ಣರಾಯರು “ವೃಂದಾವನೀದೇವಿ ತಂದೆ ಮಹೀಪತಿಯ ಪಾದವ ತೋರೆ” ಎಂದು ಹಾಡಲು ಸಾಕ್ಷಾತ್ ಮಹಿಪತಿರಾಯರು ವೃಂದಾವನದಿಂದ ತಮ್ಮ ಪಾದುಕೆಗಳನ್ನು ನೀಡಿದ್ದಾರೆ. ಅವುಗಳು ಇಂದಿಗೂ ಪೂಜೆಗೊಳ್ಳುತ್ತಿವೆ.

#1 by Suma Manjunath on December 29th, 2009
| Quote
please give me the sahithya of Estu Dayanadide ati sojige E Brashta Manavanalli
from Mahipathi dasaru
#2 by SURESH KUMAR on February 6th, 2010
| Quote
your article in kannada about Mahipathi dasaru is very excellent. I kindly request you can you mail me in details about his life history and his works.Also i more interested to know about the sufi saint that mahipathi met? kindly enlighten me.
Regards
Suresh Kumar