ಒಗಟಿನ ಪ್ರಶ್ನೋತ್ತರ

ಒಗಟಿನ ಪ್ರಶ್ನೋತ್ತರ

ಪ್ರಶ್ನೆಗಳು :

೧. ಆತಿಥ್ಯ ಸ್ವೀಕರಿಸಿ ದಾಕ್ಷಿಣ್ಯಕೆ ಸಾರಥಿಯಾದವನ ;
ಅಳಿಯನ ; ತಂದೆಯ; ಹಿರಿ ಮಡದಿಯ; ಹಿರಿ ಮಗನ
ಆಶ್ರಯವಿತ್ತವನ:ತಾಯಿಯ ; ಸಹೋದರನ;
ಸಂಹರಿಸಿದವನ ತಾಯಿ ಯಾರು ?

ಉತ್ತರ ;

ಆತಿಥ್ಯ  ಸ್ವೀಕರಿಸಿ ದಾಕ್ಷಿಣ್ಯಕೆ
ಸಾರಥಿಯಾದವನ = ಶಲ್ಯನ
ಅಳಿಯನ = ನಕುಲನ
ತಂದೆಯ = ಪಾಂಡುವಿನ

ಹಿರಿ ಮಡದಿಯ =ಕುಂತಿಯ
ಹಿರಿ ಮಗನ= ಕರ್ಣನ
ಆಶ್ರಯವಿತ್ತವನ = ದುರ್ಯೋಧನನ
ತಾಯಿಯ = ಗಾಂಧಾರಿಯ
ಸಹೋದರನಾದ = ಶಕುನಿಯ
ಸಂಹರಿಸಿದವನ = ಸಹದೇವ
ತಾಯಿ –  ಮಾದ್ರಿ

*ಉತ್ತರ – ಮಾದ್ರಿ*

************

೨. ಪ್ರಶ್ನೆ ;

ಗಂಡನ ರಥವ ಓಡಿಸಿ ರಕ್ಷಿಸಿದವಳ ತಂದೆಯ ಅಳಿಯನ
ಹಿರಿಮಗನ ಪತ್ನಿಯ ತಂದೆಯ ಸಹೋದರನ ಅಳಿಯನ
ಅಪ್ಪನ ಕಿರಿಪತ್ನಿಯ ಸೂಸೆ ಯಾರು ?

ಉತ್ತರ :
ದಶರಥನ ಯುದ್ಧದಲ್ಲಿ ಅವನಿಗೆ ಸಹಾಯಮಾಡಿ ರಥವನ್ನು ಓಡಿಸಿದ್ದ

ಕೈಕೇಯಿಯ
ತಂದೆ – ಅಶ್ವಪತಿಯ
ಅಳಿಯ – ದಶರಥನ
ಹಿರಿಮಗ – ರಾಮನ
ಪತ್ನಿ – ಸೀತೆಯ
ತಂದೆ – ಸೀರಧ್ವಜ
ಅವನ ಸಹೋದರ – ಕುಶಧ್ವಜ
ಅವನ ಅಳಿಯ – ಭರತನ
ಅವನ ತಂದೆ – ದಶರಥನ
ಕಿರಿಪತ್ನಿ – ಕೈಕೇಯಿಯ
ಸೊಸೆ – ಮಾಂಡವಿ.

*ಉತ್ತರ – ಮಾಂಡವಿ*

#####################

೩. ಪ್ರಶ್ನೆ

ಕಾಲಿಗೆ ಅಭಿಮಾನಿ ದೇವತೆಯ ರೂಪದ ವಾಯಸಕ್ಕೆ ಶಿಕ್ಷಿಸಿದವನ
ಪತ್ನಿಯ ಮೈದುನನ ಮಾವನ ಸಹೋದರನ ಮಗಳ ಮಾವನ
ಮೊಮ್ಮಕ್ಕಳಿಗೆ ಆಶ್ರಯ ನೀಡಿದವರು ಯಾರು ?

ಉತ್ತರ -.

ಕಾಲಿಗೆ ಅಭಿಮಾನಿ ದೇವತೆ – ಜಯಂತ.

ಇವನು ವಾಯಸ ರೂಪದಲ್ಲಿದ್ದ (ಕಾಗೆ) ಅವನ ತಪ್ಪಿಗಾಗಿ
ವಾಯಸಕ್ಕ (ಕಾಗೆಗೆ) ಒಂದು ಕಣ್ಣು ತೆಗೆದ – ರಾಮ.

ಅವನ ಪತ್ನಿ – ಸೀತಾ
ಅವಳ ಮೈದುನ – ಲಕ್ಷ್ಮಣ
ಅವನ ಮಾವ – ಕುಶಧ್ವಜ
ಅವನ ಮಡದಿ – ಶೃತಕೀರ್ತಿ
ಅವಳ ಮಾವ – ದಶರಥ
ಅವನ ಮೊಮ್ಮಕ್ಕಳು – ಲವಕುಶ
ಅವರಿಗೆ ಆಶ್ರಯ ನೀಡಿದವರು – ವಾಲ್ಮೀಕಿ

*ಉತ್ತರ – ವಾಲ್ಮೀಕಿ*

#################

4. ಪ್ರಶ್ನೆ ;

ರಥದ ಚಕ್ರ ಹಿಡಿದು ಹೋರಾಡಿದವನ ಮಗನ ತಾಯಿಯ ತಂದೆಯ ಬಂಧಿಸಿದ್ದವನಿಂದ ಬಿಡಿಸಿದವನ ತಮ್ಮನ ಮಗ ಯಾರು ?

ಉತ್ತರ :
ರಥದ ಚಕ್ರ ಹಿಡಿದು ಹೋರಾಡಿದ್ದು ನಿರಾಯುಧನಾಗಿದ್ದ – ಅಭಿಮನ್ಯು;
ಅವನ ಮಗ – ಪರೀಕ್ಷಿತ ;
ಅವನ ತಾಯಿ – ಉತ್ತರೆ ;
ಅವಳು ತಂದೆ – ವಿರಾಟರಾಜ ;
ಅವನನ್ನು ಬಂಧಿಸಿದ್ದು – ಸುಶರ್ಮ ದುರ್ಯೋಧನನಿಗಾಗಿ ;
ಅವನಿಂದ ಬಿಡಿಸಿದ್ದು – ಭೀಮ;
ಅವನ ತಮ್ಮ – ಅರ್ಜುನ
ಅವನ ಮಗ – *ಅಭಿಮನ್ಯು*

ಉತ್ತರ – ಅಭಿಮನ್ಯು

±+++++++++

*ಒಗಟಿನ ಪ್ರಶ್ನೆ 53*
👇🏾
ದೇವಲ ಋಷಿಯ ಛೇಡಿಸಿದವರು ಕರಿನಕ್ರನಾಗೆಂದು ಶಪಿಸಲ್ಪಟ್ಟು; ಮುಂದೆ; ದೇವಪೂಜೆ ಗೈಯುತ್ತಿದ್ದವನ ನೋಡಲು ಬಂದ ಕುಂಭ‌ಸಂಭವನಿಂದ ಶಪಿತನಾಗಿ ;
ಕರಿಯ ಕಾಲನ್ನೆಳೆದ ನಕ್ರನ ಕಡಿಯಲು ಮಡದಿಗೆ
ಪೇಳದೆ ದುಡುದುಡು ಬಂದವನಾರು ?
Answer for ಒಗಟಿನ ಪ್ರಶ್ನೆ 53
ದೇವಲ ಋಷಿಯ ಛೇಡಿಸಿದವರು –
*ಹಾಹಾ ಹೂಹೂ ಗಂಧರ್ವರು*
ಕರಿನಕ್ರನಾಗೆಂದು ಶಪಿಸಲ್ಪಟ್ಟು ;
*ಆನೆ ಮೊಸಳೆಯರಾಗೆಂದು* ಶಪಿಸಲ್ಪಟ್ಟು ಮುಂದೆ;
ದೇವಪೂಜೆ ಗೈಯುತ್ತಿದ್ದವನ  – *ಇಂದ್ರದ್ಯುಮ್ನನ* ಅರಮನೆಗೆ ಬಂದ ಕುಂಭ‌ಸಂಭವನಿಂದ – *ಅಗಸ್ತ್ಯನಿಂದ*  ಶಪಿತನಾಗಿ ;
ಕರಿಯ –  *ಗಜೇಂದ್ರನ*
ಕಾಲನ್ನೆಳೆದವನ – *ನಕ್ರನ* (ಮೊಸಳೆಯ)  ಕಡಿಯಲು
ಮಡದಿಗೆ  – *ಮಹಾಲಕ್ಷ್ಮೀಗೆ*
ಪೇಳದೆ ದುಡುದುಡು ಬಂದವನು –
🙏🏽 *ಶ್ರೀಮನ್ನಾರಾಯಣ* 🙏🏽
@@@@@@@@@@@@@@

*ಒಗಟಿನ ಪ್ರಶ್ನೆ 51*

ಘೋರ ತಪಗೈಯುತ್ತಿದ್ದ ಋಷಿಯ ; ತಪಭಂಗಕ್ಕೆ ಬಂದವಳ ;
ಬಸಿರಲಿ ಜನಿಸಿದವಳ ; ಪತಿಯ ; ಪುತ್ರನು
ಯಾವ ರಾಜ್ಯದ ರಾಜ ?

ಉತ್ತರ Answer for *ಒಗಟಿನ ಪ್ರಶ್ನೆ 51*

ಘೋರ ತಪಗೈಯುತ್ತಿದ್ದ ಋಷಿಯ – *ವಿಶ್ವಾಮಿತ್ರನ*
ತಪಭಂಗಕ್ಕೆ ಬಂದವಳ – *ಮೇನಕೆಯ*
ಬಸಿರಲಿ ಜನಿಸಿದವಳ – *ಶಕುಂತಲೆಯ*
ಪತಿಯ – *ದುಶ್ಯಂತನ*
ಪುತ್ರನು – *ಭರತನು*
ಯಾವ ರಾಜ್ಯದ ರಾಜ – *ಹಸ್ತಿನಾಪುರ*

@@@@@@@@@@@@@#

 

############################
ಒಗಟಿನ ಪ್ರಶ್ನೆ 54.  
ಯಾದವರಲ್ಲಿ ಉಳಿದ ಏಕೈಕನೂ, ಪರಮಾತ್ಮನ ದ್ವಾಪರ ಅವತಾರ ಆಪ್ತನೂ, ಬಾಲ್ಯದಿಂದಲೂ ಪರಮಾತ್ಮನ ನಿತ್ಯ ಪೂಜಕನೂ,  ಪರಮಾತ್ಮನಿಂದ ಉಪದೇಶ ಪಡೆದವ ಯಾರು? ಅವನು ಪಡೆದ ಉಪದೇಶ ಏನೆಂದು ಪ್ರಸಿದ್ಧಿ?
Answer for *ಒಗಟಿನ ಪ್ರಶ್ನೆ 54*
*ಉದ್ಧವ* ಮತ್ತು *ಉದ್ಧವಗೀತ*
ಉದ್ದವ ತನ್ನ ಚಿಕ್ಕ ವಯಸ್ಸಿನಿಂದಲೂ ಕೃಷ್ಣ ಭಕ್ತ.  ಅವನ  ತಾಯಿ ಮಗನನ್ನು ಮಧ್ಯಾಹ್ನ ಭೋಜನಕ್ಕೆ ಕರೆದರೆ ಇನ್ನೂ ದೇವರ ಪೂಜೆ ಮುಗಿದಿಲ್ಲ ತಾಳಮ್ಮ ಎನ್ನುತ್ತಿದ್ದ ಐದು ವರ್ಷದ ಉದ್ಧವ.  ಅಂತಹ ಉದ್ಧವನೂ ಕೃಷ್ಣನ ಸಂಬಂಧಿ ಮತ್ತು ಯಾದವ.   ದೂರ್ವಾಸ ಋಷಿಗಳ ಶಾಪ ನಿಜ ಮಾಡಲು ಮತ್ತು ತನ್ನ ಅವತಾರ ಸಮಾಪ್ತಿಗೆ ಸನ್ನದ್ದನಾದ ಕೃಷ್ಣ ಉದ್ಧವನ ಕರೆದು ನೀನು ದ್ವಾರಕೆಯಲ್ಲಿರಬೇಡ ತೀರ್ಥಯಾತ್ರೆಗೆ ಹೋಗಿ ಮುಂದೆ ಸಜ್ಜನರಿಗೆ ನನ್ನ ಉಪದೇಶ ತಿಳಿಸು ಎಂದು  ಅರ್ಜುನನಿಗೆ ಉಪದೇಶಿಸಿದಂತೇ ಹಲವಾರು ಧರ್ಮೋಪದೇಶ ನೀಡಿದನು.  ಅದೇ *ಉದ್ಧವಗೀತ*
ಈರೀತಿ ಎಲ್ಲಾ ಯಾದವರೂ ಪರಸ್ಪರ ಬಡಿದಾಡಿ ಸತ್ತರೂ, ಯಾದವ ಮಾತ್ರ ಸಾಯಲಿಲ್ಲ.
🙏🏽ಉದ್ಧವ ವರದಾಯ ನಮಃ: 🙏🏽
$$$$$$$$$$$$$$$$$$$$$$_
ಒಗಟಿನ ಪ್ರಶ್ನೆ 55*
ಯಾದವ ಚಕ್ರವರ್ತಿಯ ; ಮಗಳ ; ದತ್ತುಪಡೆದವನ ;
ಅರಮನೆಗೆ ಬಂದಿದ್ದ ಮುನಿಯ; ಸೇವಿಸಿದ್ದವಳ ;  ಹಿರಿ ಪುತ್ರನಿಗೆ ; ರಾಜ್ಯವಿತ್ತು ಅಭಿಷೇಚಿಸಿದವನ ;
 ಮಾತೆಯ ; ಸಹೋದರನ ರಾಜ್ಯ ಯಾವುದು ?
ಉತ್ತರ Answer for
*ಒಗಟಿನ ಪ್ರಶ್ನೆ 55*
ಯಾದವ ಚಕ್ರವರ್ತಿಯ – *ಶೂರಸೇನನ*
ಮಗಳ – *ಪೃಥೆಯ*
ದತ್ತುಪಡೆದವನ – *ಕುಂತಿಭೋಜನ*
ಅರಮನೆಗೆ ಬಂದಿದ್ದ ಮುನಿಯ
– *ದುರ್ವಾಸರ*
ಸೇವಿಸಿದ್ದವಳ – *ಕುಂತಿಯ*
ಹಿರಿ ಪುತ್ರನಿಗೆ – *ಕರ್ಣನ*
ರಾಜವಿತ್ತು ಅಭಿಷೇಚಿಸಿದವನ  – *ದುರ್ಯೋಧನನ*
ಮಾತೆಯ – *ಗಾಂಧಾರಿಯ*
ಸಹೋದರನ – *ಶಕುನಿಯ*
ರಾಜ್ಯ – *ಗಾಂಧಾರ*

 

Sumadhwa Seva © 2013