ಜಾತಾಶೌಚ ಮೃತಾಶೌಚ

*ಜಾತಾಶೌಚ ಮೃತಾಶೌಚ*

ನಮ್ಮ ಪರಂಪರೆಯಲ್ಲಿ ಹೇಳಿರುವ ಪ್ರಕಾರ ಸೂತಕದಲ್ಲಿ 2 ವಿಧಗಳಿವೆ. – ಜಾತಾಶೌಚ ಮತ್ತು ಮೃತಾಶೌಚ. ಒಂದು ಹುಟ್ಟಿನ ಸೂತಕ ಮತ್ತೊಂದು ಸಾವಿನ ಸೂತಕ. ಈ ಎರಡೂ ಸೂತಕಗಳಲ್ಲಿ ಹುಟ್ಟಿನ ಸೂತಕ ಮರಣ ಸೂತಕಕ್ಕಿಂತ ಹೆಚ್ಚಿನ ಪರಿಣಾಮಕಾರಿ ಎಂದು ಶ್ರೀ ದೇವೇಂದ್ರ ತೀರ್ಥರು ಹೇಳುತ್ತಿದ್ದರು. ಏಕೆಂದರೆ ಒಬ್ಬರು ಹುಟ್ಟಿನಿಂದ ಮನೆಯಲ್ಲಿ ಹೆಚ್ಚಿನ ಅಭಿಮಾನ ವೃದ್ಧಿಯಾಗುತ್ತದೆ. ಅದಕ್ಕೇ ಇದಕ್ಕೆ ವೃದ್ಧಿ, ಪುರುಡು, ಜಾತಾಶೌಚ ಎಂದೂ ಕರೆಯುತ್ತಾರೆ.

ಸತ್ತವರು ಯೋಗ್ಯರಾಗಿರಲೀ, ಅಯೋಗ್ಯರಾಗಿರಲೀ, ನಿಮಗೆ ಆಪ್ತ ಬಂಧುವಾಗಿರಲೀ, ನಿಮ್ಮ ಬಂಧುಶತ್ರುವಾಗಿರಲಿ, ಅವರನ್ನು ಎಂದೂ ನೋಡದಿದ್ದರೂ, ಅವರಿಂದ ಏನೂ ಉಪಕಾರವಾಗಿರದಿದ್ದರೂ, ದಾಯಾದಿ ಸಂಬಂಧಿಗಳು ಮೃತಾಶೌಚ ಆಚರಣೆ ಮಾಡಲೇಬೇಕು.

ಮನೆಯಲ್ಲಿ ಸೂತಕ ಸಮಯವಿದ್ದರೆ ಇಂತಹ ಸ್ಥಿತಿಯಲ್ಲಿ ದೇವರ ಕರ್ಮಗಳನ್ನು ಮಾಡಬಾರದು ಎಂದು ಪೂರ್ವ ಕಾಲದಿಂದಲೂ ನಮ್ಮ ಹಿರಿಯರು ಈ ಪದ್ದತಿಯನ್ನು ಆಚರಿಸುತ್ತಾ ಬರುತ್ತಿದ್ದಾರೆ. ನಮ್ಮ ಹಿಂದೂ ಗ್ರಂಥಗಳಲ್ಲಿ ಹೇಳಿದ ಪ್ರಕಾರ ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ 7 ತಲೆಮಾರಿನವರೆಗೂ ಸೂತಕದ ಅವಧಿ ಇರುತ್ತದೆ ಎಂದು ಹೇಳಲಾಗಿದೆ. ಇನ್ನು ಹೆಣ್ಣು ಮಕ್ಕಳ ವಿಚಾರಕ್ಕೆ ಬಂದರೆ ಮದುವೆಯಾದ ಹೆಣ್ಣುಮಕ್ಕಳು 3 ದಿನಗಳವರೆಗೂ ಸೂತಕದ ಅವಧಿಯಲ್ಲಿ ಇರುತ್ತಾರೆ.

ಅ. ದೇವರ ಪೂಜೆ ಇಲ್ಲ.‌ ತುಲಸೀ ಪೂಜೆ ಇಲ್ಲ. ಯಾವುದೇ ಹಬ್ಬ ಆಚರಣೆ ಇಲ್ಲ. ಆದರೆ ಅಕ್ಕಪಕ್ಕದ ಮನೆಯಿಂದ ನಿರ್ಮಾಲ್ಯ ಮತ್ತು ತೀರ್ಥ ತರಿಸಿಕೊಂಡು ಸೇವಿಸುತ್ತಿದ್ದರು.

ಆ. ಅಕ್ಕಪಕ್ಕದ ಮನೆಯವರು ಮಾಡಿದ ನೈವೇದ್ಯ ಸ್ವೀಕಾರಾರ್ಹ.

ಇ. ಊಟಕ್ಕೆ ಕುಳಿತಾಗ ಚಿತ್ರಾಹುತಿ ಇಲ್ಲ.‌‌ ಅಂಗಾರ ಮಾತ್ರ ಧರಿಸಬೇಕು. ಗಂಧ ಅಕ್ಷತೆ ಹಚ್ಚುವಂತಿಲ್ಲ. ಗಾಯತ್ರಿ ಮಂತ್ರದಿಂದ ಪರಿಶೇಚನ ಮಾಡಬೇಕು.
ಆಪೋಶನ ತೆಗೆದುಕೊಳ್ಳಿ.

ಈ. ದೇವರ ಸ್ತೋತ್ರ ಜಪವಿಲ್ಲ. ಪಾರಾಯಣವಿಲ್ಲ ಆದರೆ ಅಚ್ಯುತ, ಅನಂತ, ಮಾಧವ, ಕೃಷ್ಣ, ನಾರಾಯಣ, ರಾಮ ಇತ್ಯಾದಿ ಸ್ಮರಿಸಬಹುದು.

ಉ. ಸೂತಕವಿಲ್ಲದವರ ಮುಟ್ಟಿಕೊಳ್ಳಬಾರದು. ಅವರು ಅಕಸ್ಮಾತ್ ಮುಟ್ಟಿದರೆ ಬಟ್ಟೆ ನೆನೆಸಿ ಜನಿವಾರ ಬದಲಿಸಬೇಕು.

ಊ. ಆ ಸಮಯದಲ್ಲಿ ಬೇರೆಯವರ ಮನೆಗೆ ಹೋಗಬಾರದು. ಬೇರೆಯವರು ನಿಮ್ಮ ಮನೆಗೆ ಬಂದು ನಿಮ್ಮ ಅವಶ್ಯಕತೆ ಇರುವುದನ್ನು ತೆಗೆದುಕೊಡಬಹುದು.

ಋ. ಅವಶ್ಯಕತೆ ಇರುವಷ್ಟೇ ಬಟ್ಟೆ ತೆಗೆದುಕೊಳ್ಳಿ. ‌ಎಲ್ಲವನ್ನೂ ಸೂತಕ ಮುಗಿದ ಕೂಡಲೇ ನೆನೆಸಬೇಕು.

ಎ. ಸೂತಕ ಸಮಯದಲ್ಲಿ ಮನೆಯಲ್ಲಿ ಅಡುಗೆ ಮಾಡುವಂತಿಲ್ಲ. ಬೇರೆಯವರ ಮನೆಯಲ್ಲಿ ಮಾಡಿಸಿಕೋಬೇಕು. ಆದರೆ ಈಗಿನ ಕಾಲದಲ್ಲಿ ಬೇರೆಯವರ ಮನೆಯಲ್ಲಿ ಮಾಡುವ ಅನುಕೂಲ ಇರುವುದಿಲ್ಲ. ಆದ್ದರಿಂದ ನಾವೇ ಮಾಡಿಕೊಳ್ಳಬಹುದು. ಆದರೆ ಈ ಸಮಯದಲ್ಲಿ ಉಪಯೋಗಿಸಿದ ಸಾರಿನ ಪುಡಿ, ಹುಳಿ ಪುಡಿ ಉಪ್ಪಿನಕಾಯಿ ಇತ್ಯಾದಿ ಉಳಿದರೆ ಮತ್ತೆ ಸೂತಕ ಮುಗಿದ ಮೇಲೆ ಉಪಯೋಗಿಸುವಂತಿಲ್ಲ. ಎಸೆಯಬೇಕು.

ಏ. ಮನೆಯ ಮುಂದೆ ರಂಗೋಲಿ ಹಾಕಬಾರದು

ಐ. ಈ ಸಮಯದಲ್ಲಿ ಏಕಾದಶಿ, ಚಾತುರ್ಮಾಸ್ಯ ಬಂದರೆ ಆಚರಿಸಬೇಕು.

ಒ. ಮೃತಾಶೌಚ ಅಥವಾ ಜಾತಾಶೌಚ ಮುಗಿದ ಮೇಲೆ ಎಲ್ಲಾ ಬಟ್ಟೆಗಳ ನೆನೆಸಿ, ಬೇರೆಯವರಿಂದ ನೀರು ಹಾಕಿಸಿಕೊಳ್ಳಿ.

ಓ. ಸೂತಕಾನಂತರ ಜನಿವಾರ ಬದಲಿಸಬೇಕು

ಔ. ಈ ಸಮಯದಲ್ಲಿ ರಜಸ್ವಲೆಯಾದವರೂ ಬೇರೆಯವರು ಸೂತಕವಿರುವವರನ್ನು ಸ್ಪರ್ಶಿಸುವಂತಿಲ್ಲ. ಸೂತಕದ ಮೈಲಿಗೆಯೇ ಬೇರೆ ರಜಸ್ವಲೆಯ ಮೈಲಿಗೆಯೇ ಬೇರೆ.

ಅಂ. ರಜಸ್ವಲೆಯಾದವರು ಅಡುಗೆ ಎಂದೂ ಮಾಡಬಾರದು. ಬೇರೆಯವರ ಕೈಲಿ ಮಾಡಿಸಿಕೊಂಡು ತಿನ್ನಬೇಕು. ‌ಅವರು ಅಡುಗೆ ಮನೆಗೇ ಹೋಗಬಾರದು.

*ರಜಸ್ವಲಾ* :
ಅ: ಹೆಂಡತಿ ರಜಸ್ವಲೆ ಸಮಯದಲ್ಲಿ ಗಂಡನೋ ಮಕ್ಕಳೋ ಇನ್ನಾರೋ ಅಡುಗೆ ಮಾಡಬೇಕು.

Sumadhwa Seva © 2022