ಈ ಪ್ರಶ್ನೋತ್ತರಕ್ಕೆ ಆಧಾರ
ಮಧ್ವರಾಮಾಯಣ
ಸಂಗ್ರಹ ರಾಮಾಯಣ
ಬಾಲ ರಾಮಾಯಣ
೧. ರಾಮಾಯಣ ಬರೆದವರಾರು ?
ಉತ್ತರ: ವಾಲ್ಮೀಕಿ ಋಷಿಗಳು
೨. ಸಂಗ್ರಹ ರಾಮಾಯಣ ಬರೆದವರಾರು?
ಉತ್ತರ: ನಾರಾಯಣ ಪಂಡಿತರು
1. ರಾಮಚಂದ್ರನ ವಂಶ ಯಾವುದು ?
ಉತ್ತರ – ಸೂರ್ಯವಂಶ, ರಘುವಂಶ, ಇಕ್ಷ್ವಾಕು ವಂಶ
2. ರಾಮಚಂದ್ರನ ತಾಯಿ ಯಾರು?
ಉತ್ತರ – ಕೌಸಲ್ಯೆ
3. ರಾಮಚಂದ್ರನಿಗೆ ಹೆಣ್ಣು ಕೊಟ್ಟ ಜನಕರಾಜನ ಹೆಸರೇನು?
ಉತ್ತರ – ಸೀರಧ್ವಜ
4. ಜನಕರಾಜನ ರಾಜ್ಯ ಯಾವುದು?
ಉತ್ತರ – ಮಿಥಿಲಾನಗರ / ವಿಧೇಹರಾಜ್ಯ
5. ರಾಮನ ರಾಜ್ಯ ಯಾವುದು?
ಉತ್ತರ – ಅಯೋಧ್ಯೆ
6. ಜನಕರಾಜನ ಸಹೋದರನ ಹೆಸರೇನು?
ಉತ್ತರ – ಕುಶಧ್ವಜ
7. ದಶರಥನ ಮಕ್ಕಳು ಮತ್ತು ಸೊಸೆಯರ ಹೆಸರೇನು?
ಉತ್ತರ – ರಾಮ – ಸೀತೆ, ಲಕ್ಷ್ಮಣ – ಊರ್ಮಿಳೆ
ಭರತ – ಮಾಂಡವಿ ಶತ್ರುಜ್ಞ – ಶ್ರುತಕೀರ್ತಿ
8. ದಶರಥನ ಮೂರು ಮುಖ್ಯ ಪತ್ನಿಯರು ಯಾರು?
ಉತ್ತರ – ಕೌಸಲ್ಯೆ, ಸುಮಿತ್ರ, ಕೈಕೇಯಿ
9. ದಶರಥನು ಯಾವ ಯಾಗ ಮಾಡಿದನು?
ಉತ್ತರ – ಪುತ್ರಕಾಮೇಷ್ಠಿ ಯಾಗ
10. ಆ ಯಾಗ ಯಾರು ಮಾಡಿಸಿದರು?
ಉತ್ತರ – ಋಷ್ಯಶೃಂಗ.
11. ದಶರಥನ ಪುತ್ರಕಾಮೇಷ್ಟಿ ಯಾಗ ಮಾಡಿಸಿದವರು ಅವನಿಗೆ ಏನಾಗಬೇಕು?
ಉತ್ತರ : ದಶರಥನ ಮಗಳು ಶಾಂತಾಳ ಪತಿ
12. ಅಲ್ಲಿ ಬಂದ ಪಾಯಸವನ್ನು ಯಾವ ಪ್ರಮಾಣದಲ್ಲಿ ಹಂಚಿದನು?
ಉತ್ತರ – ಕೌಸಲ್ಯೆಗೆ ಅರ್ಧಭಾಗ, ರಾಣಿ ಸುಮಿತ್ರಾ ಕಾಲುಭಾಗ ಸೇವಿಸಿ ಮತ್ತು ರಾಣಿ ಕೈಕೇಯಿ ಉಳಿದ ಕಾಲುಭಾಗದಲ್ಲಿ ಸ್ವಲ್ಪ ಸೇವಿಸಿ ಮತ್ತೊಮ್ಮೆ ಎರಡನೇ ಬಾರಿಗೆ ಪಾಯಸ ಸೇವಿಸಲು ಸುಮಿತ್ರಾಳಿಗೆ ಮಡಕೆಯನ್ನು ನೀಡಿದರು. ಈ ರೀತಿಯಲ್ಲಿ ಪಾಯಸವನ್ನು ಹಂಚಿಕೊಂಡಿದ್ದರಿಂದ, ಹೆಚ್ಚು ಭಾಗವನ್ನು ಸೇವಿಸಿದ ರಾಣಿ ಕೌಸಲ್ಯ ಶ್ರೀ ರಾಮನಿಗೆ ಜನ್ಮ ನೀಡಿದರು. ರಾಣಿ ಕೈಕೇಯಿ ಭರತನಿಗೆ ಜನ್ಮ ನೀಡಿದರು ಮತ್ತು ಎರಡು ಬಾರಿ ಪಾಯಸ ಸೇವಿಸಿದ ರಾಣಿ ಸುಮಿತ್ರಾ ಲಕ್ಷ್ಮಣ ಮತ್ತು ಶತ್ರುಘ್ನರಿಗೆ ಜನ್ಮ ನೀಡಿದರು.
13. ದಶರಥನ ಮಂತ್ರಿ ಯಾರು?
ಉತ್ತರ – ಸುಮಂತ್ರ
14. ದಶರಥನ ಕುಲ ಪುರೋಹಿತರಾರು?
ಉತ್ತರ – ವಸಿಷ್ಠರು
15 ಲಕ್ಷ್ಮಣಾದಿಗಳಲ್ಲಿರುವ ಭಗವದ್ರೂಪ ಯಾವುದು?
ಉತ್ತರ : ರಾಮನೇ ಸ್ವತಃ: ವಾಸುದೇವ ರೂಪ; ಉಳಿದ ಮೂವರಲ್ಲಿ ಶ್ರೀಹರಿಯ ಆವೇಶ ರೂಪಗಳು – ಲಕ್ಷ್ಮಣ, ಭಾರತ, ಶತ್ರುಜ್ಞ ಇವರಲ್ಲಿ ಕ್ರಮವಾಗಿ ಸಂಕರ್ಷಣ, ಪ್ರದ್ಯುಮ್ನ ಅನಿರುದ್ಧ ರೂಪಗಳು.
16. ರಾಮಚಂದ್ರನ ಜನ್ಮದಿನ, ನಕ್ಷತ್ರ ಯಾವುದು?
ಉತ್ತರ – ಚೈತ್ರ ಶುಕ್ಲ ನವಮಿ, ಪುನರ್ವಸು ನಕ್ಷತ್ರ , ಬುಧವಾರ
17. ಬಾಲಕ ರಾಮನನ್ನು ತನ್ನ ಜೊತೆ ಕಳಿಸೆಂದು ಕೇಳಿದ ಋಷಿಗಳು ಯಾರು?
ಉತ್ತರ – ವಿಶ್ವಾಮಿತ್ರ
18. ವಿಶ್ವಾಮಿತ್ರರು ಯಜ್ಞ ಮಾಡಿದ್ದು ಯಾವ ಆಶ್ರಮದಲ್ಲಿ?
ಉತ್ತರ : ಸಿದ್ದಾಶ್ರಮ
19. ರಾಮಚಂದ್ರನು ಮೊದಲು ಕೊಂದಿದ್ದು ಯಾರನ್ನು?
ಉತ್ತರ – ತಾಟಕಿಯನ್ನು
20. ರಾಮನ ಬಾಣದ ಗುರಿಗೆ ನೂರಾರು ಮೈಲಿ ದಾಟಿ ಬಿದ್ದವನಾರು?
ಉತ್ತರ – ಮಾರೀಚ
21. ದಶರಥನು ಯಾರ ಅವತಾರ?
ಉತ್ತರ : ವೈವಸ್ವತ ಮನುವಿನ ಅವತಾರ, ಸ್ವಾಯಂಭುವ ಮನುವಿನ ಆವೇಶ.
22. ಕೇಸರಿ ಮತ್ತು ಅಂಜನಿ ಯಾರ ಅವತಾರ?
ಉತ್ತರ : ಕೇಸರಿಯು ಮರುತ್ ದೇವತೆಯ ಅವತಾರ ಮತ್ತು ಅಂಜನಿಯು ಪುಂಜಕಸ್ಥಲೀ ಎಂಬ ಅಪ್ಸರೆಯ ಅವತಾರ.
23. ಯಾವ ಯಾವ ದೇವತೆಗಳು ಯಾವ ಯಾವ ವಾನರಾದಿ ರೂಪದಿ ಅವತರಿಸಿದರು?
ಉತ್ತರ : ಬೃಹಸ್ಪತಿ – ತಾರ, ಚಂದ್ರ – ಅಂಗದ; ಶಚೀದೇವಿ – ತಾರೆ
ಯಮ – ಜಾಂಬವಂತ ; ವರುಣ – ಸುಷೇಣ;
ಅಶ್ವಿನಿ ದೇವತೆಗಳು – ಮೈಂದ ವಿವಿಧ. ;
ಅಗ್ನಿ – ನೀಲ ; ವಾಲಿ – ಇಂದ್ರ; ಸುಗ್ರೀವ – ಸೂರ್ಯ
24. ಭರತ, ಲಕ್ಷ್ಮಣ, ಶತ್ರುಜ್ಞರ ಮೂಲ ರೂಪ ಯಾವುದು?
ಉತ್ತರ – ಭರತನು ಕಾಮನ ಅವತಾರ, ಲಕ್ಷ್ಮಣನು ಆದಿ ಶೇಷನ ಅವತಾರ, ಶತ್ರುಜ್ಞನು ಅನಿರುದ್ಧನ ಅವತಾರ.
25 ಲಕ್ಷ್ಮಣಾದಿಗಳಲ್ಲಿರುವ ಭಗವದ್ರೂಪ ಯಾವುದು?
ಉತ್ತರ : ರಾಮನೇ ಸ್ವತಃ: ವಾಸುದೇವ ರೂಪ; ಉಳಿದ ಮೂವರಲ್ಲಿ ಶ್ರೀಹರಿಯ ಆವೇಶ ರೂಪಗಳು – ಲಕ್ಷ್ಮಣ, ಭಾರತ, ಶತ್ರುಜ್ಞ ಇವರಲ್ಲಿ ಕ್ರಮವಾಗಿ ಸಂರಕ್ಷಣೆ, ಪ್ರದ್ಯುಮ್ನ ಅನಿರುದ್ಧ ರೂಪಗಳು
26. ರಾಮಚಂದ್ರಾದಿ ನಾಲ್ಕು ಪುತ್ರರಿಗೆ ನಾಮಕರಣ ಮಾಡಿಸಿದ ಪುರೋಹಿತರು ಯಾರು?
ಉತ್ತರ – ವಸಿಷ್ಠರು
27 ದಶರಥನ ಸಭೆಗೆ ಆಗಮಿಸಿ ಯಜ್ಞರಕ್ಷಣೆಗಾಗಿ ಮಕ್ಕಳನ್ನು ಕಳಿಸೆಂದವರಾರು?
ಉತ್ತರ : ವಿಶ್ವಾಮಿತ್ರರು
28. ದಶರಥನಿಗೆ ಎಷ್ಟು ವರ್ಷ ಕಾಲ ಗಂಡು ಮಕ್ಕಳಿರಲಿಲ್ಲ?
ಉತ್ತರ : 9000 ವರ್ಷಗಳ ಕಾಲ.
29. ವಿಶ್ವಾಮಿತ್ರರ ಇನ್ನೊಂದು ಹೆಸರೇನು?
ಉತ್ತರ : ಕೌಶಿಕ
30. ವಿಶ್ವಾಮಿತ್ರರು ರಾಮನಿಗೆ ಯಾವ ವಿದ್ಯೆಯನ್ನು ಹೇಳಿಕೊಟ್ಟರು?
ಉತ್ತರ : ಬಲಾ, ಅತಿಬಲಾ ಎಂಬ ವಿದ್ಯೆಯನ್ನು ಸಮರ್ಪಿಸಿದರು.
31 ವಿಶ್ವಾಮಿತ್ರರ ಜೊತೆ ಬಂದ ರಾಮಲಕ್ಷ್ಮಣರು ಎಲ್ಲಿ ಸಂಧ್ಯೋಪಾಸನೆ ಮಾಡಿದರು?
ಉತ್ತರ : ಅನಂಗಾಶ್ರಮದಲ್ಲಿ.
32. ಶಿವನು ಕಾಮನನ್ನು ದಹಿಸಿದ ಸ್ಥಳವಾವುದು?
ಉತ್ತರ ; ಅನಂಗಾಶ್ರಮ
33 ತಾಟಕೆಯ ಪತಿ ಯಾರು? ತಾಟಕಿಯ ಮಕ್ಕಳಾರು?
ಉತ್ತರ : ತಾಟಕೆಯ ಪತಿ ಸುಂದ. ಅವಳ ಮಕ್ಕಳು ಮಾರೀಚ ಮತ್ತು ಸುಬಾಹು.
34. ಮಾರೀಚನ ಸಂಹರಿಸಲು ರಾಮನು ಉಪಯೋಗಿಸಿದ ಬಾಣ ಯಾವುದು?
ಉತ್ತರ : ವಾಯುವ್ಯಾಸ್ತ್ರ.
35. ವಿಶ್ವಾಮಿತ್ರರ ತಂದೆ ಯಾರು?
ಉತ್ತರ : ಗಾಧಿ ಮಹಾರಾಜ (ಇಂದ್ರನೇ ಗಾಂಧಿ ರಾಜನಾಗಿ ಅವತರಿಸಿದ್ದು)
36. ಶಿಲಾಸ್ಪರ್ಶದಿಂದ ರಾಮ ಯಾರನ್ನು ಉದ್ಧರಿಸಿದ?
ಉತ್ತರ : ಅಹಲ್ಯಾ
37. ಶಿಲೆಯಾಗೆಂದು ಶಪಿಸಿದವರಾರು?
ಉತ್ತರ : ಶಪಿಸಿದವರು ಅಹಲ್ಯಾ ಪತಿಗಳಾದ ಗೌತಮರು.
38. ಜನಕರಾಜನ ಯಜ್ಞಶಾಲೆ ಯಾವ ನಗರದಲ್ಲಿತ್ತು?
ಉತ್ತರ : ಮಿಥಿಲಾನಗರ.
39. ಜನಕರಾಜನಿಗೆ ಸೀತಾ ಪ್ರಕಟವಾಗಿದ್ದು ಹೇಗೆ?
ಉತ್ತರ : ಯಜ್ಞ ಮಾಡಲು ಭೂಮಿ ಅಗೆಯುತ್ತಿದ್ದಾಗ ಭೂಮಿಯಲ್ಲಿ ಪ್ರಾಪ್ತಳಾದಳು.
40. ಜನಕರಾಜನಿಗೆ ಶಿವಧನಸ್ಸು ನೀಡಿದವರಾರು?
ಉತ್ತರ : ಪಿನಾಕಪಾಣಿ ಶಿವ
41. ಸೀತಾ ಸ್ವಯಂವರಕ್ಕೆ ಜನಕರಾಜನ ಶರತ್ತು ಏನು?
ಉತ್ತರ : ಯಾರು ಶಿವಧನಸ್ಸು ಎತ್ತುವರೋ ಅವರಿಗೆ ಸೀತಾ ವಿವಾಹ ಎಂಬ ಶರತ್ತು.
42. ಸೀತಾ ಸ್ವಯಂವರ ನಂತರ ರಾಮನು ಕೊಂದಿದ್ದು ಯಾರನ್ನು?
ಉತ್ತರ : ಅತುಲ ಎಂಬ ದೈತ್ಯನನ್ನು.
43. ಕ್ಷತ್ರಿಯ ಕುಲ ಧ್ವಂಸಕ ಯಾರು ?
ಉತ್ತರ : ಪರಶುರಾಮ
44. ಅತುಲನು ಎಲ್ಲಿ ಅಡಗಿದ್ದ?
ಉತ್ತರ : ಪರಶುರಾಮನ ಉದರದಲ್ಲಿದ್ದ.
45. ಹರಿ ಮತ್ತು ಹರರ ಧನಸ್ಸು ಯಾವುದು?
ಉತ್ತರ : ಹರಿಯ ಧನಸ್ಸು ಶಾಂಙ್ಗ ಮತ್ತು ಹರನ ಧನಸ್ಸು ಪಿನಾಕ.
46. ಪರಮಾತ್ಮನ ಎರಡು ರೂಪಗಳು ಸೀತಾ ಸ್ವಯಂವರದಲ್ಲಿ ಕಂಡುಬಂದವು. ಅವು ಯಾವುದು?
ಉತ್ತರ : ರಾಮ ಮತ್ತು ಪರಶುರಾಮ.
47. ದಶರಥನ ಇಚ್ಛೆಯಂತೆ ರಾಮನ ಪಟ್ಟಾಭಿಷೇಕದ ಸಿದ್ಧತೆ ಮೊದಲು ಅಪ್ರಿಯವೆನಿಸಿದ್ದು ಯಾರಿಗೆ?
ಉತ್ತರ : ಮೊದಲು ಕ್ಷೋಭೆಗೊಳಗಾದವಳು ಮಂಥರೆ.
48. ರಾಮನ ಪಟ್ಟಾಭಿಷೇಕದ ವಾರ್ತೆಯಿಂದ ಖಿನ್ನಳಾದ ಮಂಥರೆ ಯಾರಿಗೆ ದುಷ್ಟ ಬುದ್ಧಿ ಪ್ರೇರೇಪಿಸಿದರು?
ಉತ್ತರ : ಮಂಥರೆ ಕೈಕೇಯಿಗೆ ದುಷ್ಟ ಬುದ್ಧಿ ಪ್ರಚೋದಿಸಿದಳು.
49. ಹಿಂದೆ ಕೈಕೇಯಿ ದಶರಥನಿಗೆ ಮಾಡಿದ್ದ ಸಹಾಯವೇನು?
ಉತ್ತರ : ಹಿಂದೆ ಶಂಬರಾಸುರನೊಂದಿಗೆ ಯುದ್ಧ ಮಾಡುತ್ತಿದ್ದಾಗ ಪ್ರಜ್ಞೆ ತಪ್ಪಿದ್ದ ದಶರಥನ ರಥವನ್ನು ತಾನೇ ಓಡಿಸಿ, ರಥದ ಕೀಲು ಕಳಚಿದ್ದನ್ನು ಗಮನಿಸಿ, ತನ್ನ ಬೆರಳನ್ನೇ ಕೀಲಿನಂತಿರಿಸಿ, ರಥವನ್ನು ರಕ್ಷಿಸಿದ್ದಳು.
50. ಕೈಕೇಯಿ ತನ್ನ ಬೆರಳನ್ನು ರಥದ ಗಾಲಿಗೆ ಕೊಟ್ಟು ರಕ್ಷಿಸಿದ್ದು ಹೇಗೆ?
ಉತ್ತರ : ಕೈಕೇಯಿ ತನ್ನ ಬಾಲ್ಯದಲ್ಲಿ ಮನೆಗೆ ಬಂದಿದ್ದ ವೃದ್ಧ ಮುನಿಗಳ ಕೋಲು ಮುಚ್ಚಿಟ್ಟು, ಅವರ ಮುಖಕ್ಕೆ ಮಸಿ ಬಳಿದು ವಿಕಾರಗೊಳಿಸಿದ್ದಳು. ಕೋಪಗೊಂಡ ಮುನಿಗಳು ಶಪಿಸಿದ್ದರು . “ನಿನ್ನ ಮುಖದ ಕಾಂತಿ ಕಾಣದಾಗಲಿ” ಎಂದು. ಚೇಷ್ಟೆಗೆ ಮಾಡಿದ್ದ ತಪ್ಪಿನ ಅರಿವಾಗಿ, ಮನ್ನಿಸಲು ಕೋರಿ, ಮುಚ್ಚಿಟ್ಟಿದ್ದ ಕೋಲನ್ನು ಹಿಂತಿರುಗಿಸಿದಳು ಕೈಕೇಯಿ. ಆಗ ಸಂತಸಗೊಂಡ ಮುನಿಗಳು ಅವಳಿಗೆ ಕೊಟ್ಟ ಶಾಪದ ಜೊತೆಗೆ ವರವನ್ನೂ ಕೊಟ್ಟರು. “ನಿನ್ನ ಕೈಯು ಕಬ್ಬಿಣದಂತೆ ಕಠಿಣವಾಗಲಿ. ಈ ಶಾಪ ಮತ್ತು ವರ ಎರಡನ್ನೂ ನಿನ್ನ ಅವಶ್ಯಕತೆ ಇದ್ದಾಗ ಉಪಯೋಗಿಸಿಕೋ” ಎಂದು. ಶಾಪದಿಂದ ಅವಳ ಮುಖ ಕಾಂತಿಹೀನವಾಗಿ ಶತ್ರುಗಳಿಗೂ, ಯಾರಿಗೂ ಕಾಣದಾಯಿತು ಮತ್ತು ಅವಳ ಕೈ ಕಬ್ಬಿಣದಂತೆ ಆಗಿ ರಥದ ಗಾಲಿಯ ಕೀಲಿಯಂತೆ ಕಾಠಿಣ್ಯಗೊಂಡಿತು. ಹೀಗೆ ಆ ವರ ಮತ್ತು ಶಾಪವನ್ನು ಈಗ ಉಪಯೋಗಿಸಿದಳು.
51. ಕೈಕೇಯಿ ದಶರಥನಿಗೆ ಯಾವ ವರ ಕೇಳಿದಳು ?
ಉತ್ತರ – ತನ್ನನ್ನು ರಕ್ಷಿಸಿದ್ದರಿಂಧ ಸಂತಸದಲ್ಲಿ ಕೈಕೇಯಿಗೆ ಏನಾದರೂ ಎರಡು ವಾರ ಕೇಳು ಎಂದಿದ್ದ ದಶರಥ. ಅ ವರವನ್ನು ಈಗ ಮಂಥರೆಯ ಪ್ರಚೋದನೆಯಿಂದ ಕೇಳಿ ರಾಮನನ್ನು 14 ವರ್ಷ ವನವಾಸ ಕಳಿಸಿ ಭರತನಿಗೆ ಪಟ್ಟಾಭಿಷೇಕ ಮಾಡಬೇಕು ಎಂದು ಕೇಳಿದಳು.
50. ರಾಮನಿಗೆ ವನವಾಸ ಹೋಗಬೇಕೆಂದು ವಿಷಯ ತಿಳಿಸಿದವರಾರು?
ಉತ್ತರ : ದಶರಥ ರಾಮನಿಗೆ ವಿಷಯ ತಿಳಿಸಲು ಅಶಕ್ತನಾದ್ದರಿಂದ : ಕೈಕೇಯಿಯೇ ಸ್ವತಃ ತಿಳಿಸಿದಳು.
51. ರಾಮನೊಂದಿಗೆ ವನವಾಸಕ್ಕೆ ಹೊರಟವರಾರು?
ಉತ್ತರ : ಲಕ್ಷ್ಮಣ ಮತ್ತು ಸೀತಾ
52. ವನವಾಸ ಪೂರ್ವದಲ್ಲಿ ರಾಮನು ಯಾರಿಗೆ ಸಾವಿರ ಗೋವುಗಳ ದಾನ ನೀಡಿದ?
ಉತ್ತರ : ತ್ರಿಜಟನೆಂಬ ಬಡ ಬ್ರಾಹ್ಮಣನಿಗೆ.
53. ದಶರಥನು ಯಾರ ಅವತಾರ?
ಉತ್ತರ : ವೈವಸ್ವತ ಮನುವಿನ ಅವತಾರ, ಸ್ವಾಯಂಭುವ ಮನುವಿನ ಆವೇಶ.
54. ಕೈಕೇಯಲ್ಲಿ ಯಾರ ಆವೇಶವಿತ್ತು?
ಉತ್ತರ : ಕೈಕೇಯಿಯಲ್ಲಿ ನಿಕೃತಿ ಎಂಬ ರಾಕ್ಷಸಿಯ ಆವೇಶವಿತ್ತು.
55. ವನವಾಸಕ್ಕೆ ಹೊರಟ ರಾಮನನ್ನು ಗಂಗಾತೀರದಲ್ಲಿ ಯಾರು ಪೂಜಿಸಿದರು?
ಉತ್ತರ : ಗಂಗಾತೀರದಲ್ಲಿ ನಿಷಾದರಾಜ ಗುಹ ಪೂಜಿಸಿದನು.
56. ಭಾರದ್ವಾಜ ಮುನಿಗಳ ಆಶ್ರಮ ಎಲ್ಲಿತ್ತು?
ಉತ್ತರ : ಪ್ರಯಾಗ ಕ್ಷೇತ್ರದಲ್ಲಿತ್ತು.
57. ದಶರಥನು ಸತ್ತಾಗ ರಾಮ ವನವಾಸಕ್ಕೆ ಹೋಗಿ ಎಷ್ಟು ದಿನವಾಗಿತ್ತು?
ಉತ್ತರ : ಆರು ದಿನವಾಗಿತ್ತು.
58. ಭರತನು ರಾಮನನ್ನು ಎಲ್ಲಿ ಭೇಟಿಯಾದರು?
ಉತ್ತರ : ಚಿತ್ರಕೂಟದಲ್ಲಿ ಭೇಟಿಯಾದನು
59. ರಾಮನು ತಿರುಗಿ ಬರಲು ಒಪ್ಪದುದರಿಂದ ಭರತನು ರಾಮನಲ್ಲಿ ಏನನ್ನು ಕೇಳಿ ಪಡೆದನು?
ಉತ್ತರ – ರಾಮನ ಪಾದುಕೆಗಳನ್ನು ಪಡೆದನು.
60. ಭರತನು ಎಲ್ಲಿ ವಾಸಿಸತೊಡಗಿದನು ?
ಉತ್ತರ : ಅಯೋಧ್ಯೆಯ ಹೊರಗಿರುವ ನಂದಿ ಗ್ರಾಮದಲ್ಲಿ.
61. ಸೀತಾದೇವಿಯ ಕುಕ್ಕಿದ ಪ್ರಾಣಿ ಯಾವುದು?
ಉತ್ತರ : ಕಾಗೆ
62. ಕಾಗೆ ರೂಪದಿ ಬಂದವನಾರು? ಅವನಲ್ಲಿದ್ದ ಅಸುರನಾರು?
ಉತ್ತರ : ಕಾಗೆ ರೂಪದಿ ಬಂದವನು ಇಂದ್ರಪುತ್ರ ಜಯಂತ.
ಅವನಲ್ಲಿದ್ದ ಅಸುರ – ಕುರಂಗ.
63. ರಾಮ ಜಯಂತನಿಗೆ ನೀಡಿದ ಶಿಕ್ಷೆ ಏನು?
ಉತ್ತರ : ರಾಮನು ಪ್ರಯೋಗಿಸಿದ ಹುಲ್ಲು ಕಡ್ಡಿಯಿಂದ ಜಯಂತ ವಾಯಸದ ಕಣ್ಣಿನಲ್ಲಿದ್ದ ಕುರಂಗ ಸಂಹಾರ. ಆ ಅಸುರ ಶಿವವರದಿಂದ ಎಲ್ಲಾ ಕಾಗೆಗಳ ಕಣ್ಣಿನಲ್ಲಿ ಸೇರಿದ್ದ. ಶಿವನ ವಿಚಾರವೇನೆಂದರೆ ಎಲ್ಲಿಯವರೆಗೂ ಕಾಗೆಗಳಿಗೆ ಎರಡೂ ಕಣ್ಣು ಇರುವುದೋ ಅಲ್ಲಿಯವರೆಗೂ ಕುರಂಗನಿಗೆ ಸಾವಿಲ್ಲ. ರಾಮ ಕಾಗೆಗಳ ಒಂದು ಕಣ್ಣು ತೆಗೆದು ಕುರಂಗ ಸಂಹರಿಸಿದ.
64. ದಂಡಕಾರಣ್ಯದಲ್ಲಿ ರಾಮ ಯಾರನ್ನು ಕೊಂದನು?
ಉತ್ತರ : ರಾಮನು ಖರ ದೂಷಣರನ್ನು ಕೊಂದನು. ಅವರು ರಾವಣನ ಮಲ ಸಹೋದರರು.
65. ರಾವಣನು ಯಾರ ಮಗ?
ರಾವಣನು ವಿಶ್ರವಸ್ ಮುನಿ ಮತ್ತು ರಾಕ್ಷಸೀ ಕೈಕಸೀ ಮಗ. ಪುಲಸ್ತ್ಯನ ಮೊಮ್ಮಗ.
66. ದಶರಥನ ಮರಣವನ್ನಪ್ಪಿದಾಗ ಜೊತೆಗೆ ಯಾವ ಮಕ್ಕಳಿದ್ದರು?
ಉತ್ತರ : ಯಾವ ಮಕ್ಕಳೂ ಹತ್ತಿರವಿರಲಿಲ್ಲ. ರಾಮಲಕ್ಷ್ಮಣರು ಕಾಡಿಗೂ, ಭರತ ಶತ್ರುಘ್ನರು ತಮ್ಮ ಮಾವನ ಮನೆಗೂ ಹೋಗಿದ್ದರು.
67. ಮರಣವನ್ನಪ್ಪಿದ ದಶರಥನನ್ನು ಹೇಗೆ ಸಂರಕ್ಷಿಸಿದ್ದರು?
ಉತ್ತರ : ಎಣ್ಣೆಯ ಕೊಪ್ಪರಿಗೆ ನಲ್ಲಿಟ್ಟು ದೇಹವನ್ನು ರಕ್ಷಿಸಿದ್ದರು.
68. ದಶರಥನಿಗೆ ಶಾಪವನಿತ್ತವರಾರು?
ಉತ್ತರ : ವೃದ್ಧ ಕುರುಡ ದಂಪತಿಗಳು
69. ದಶರಥನ ಔರ್ಧ್ವ ದೈಹಿಕ ಕಾರ್ಯ ಯಾರು ಮಾಡಿದರು?
ಉತ್ತರ : ವಸಿಷ್ಠ ಮತ್ತು ಜಾಬಾಲಿ ಋಷಿಗಳ ಅಪ್ಪಣೆಯಂತೆ ಭಾರತ ಶತ್ರುಜ್ಞರು ಮಾಡಿದರು.
70. ರಾಮನಿಗೆ “ಧರ್ಮ ಅವಶ್ಯಕತೆ ಇಲ್ಲ. ಜಗತ್ತಿಗೇ ದೇವನಾದ ನೀನು ತಂದೆಯಾಜ್ಞೆ ಪಾಲಿಸಬೇಕಿಲ್ಲ” ಎಂದವರಾರು?
ಉತ್ತರ : ಜಾಬಾಲಿ ಋಷಿಗಳು
71. ವಿಶ್ರವಸ್ ಮುನಿಗಳ ಮಕ್ಕಳು ಯಾರ್ಯಾರು?
ಉತ್ತರ : ಮೊದಲ ಪತ್ನಿ ಇಲಾವಿದಳಲ್ಲಿ (ಇಲಾವಿದಳು ಭಾರದ್ವಾಜರ ಪುತ್ರಿ) ಕುಬೇರ ಜನಿಸಿದನು.
ಕೈಕಸಿಯಿಂದ ರಾವಣ, ಕುಂಭಕರ್ಣ, ವಿಭೀಷಣ
ಇನ್ನೊಬ್ಬ ಪತ್ನಿ ರಾಕಾಳಲ್ಲಿ ಖರ ಮತ್ತು ಶೂರ್ಪಣಖಿ ಜನಿಸಿದರು
72. ಶರೀರ ತ್ಯಾಗ ಮಾಡಲು ಇಚ್ಛಿಸಿದವನಿಗೆ ರಾಮ ಯಾರಿಗೆ ಅಪ್ಪಣೆ ನೀಡಿದ?
ಉತ್ತರ : ಶರಭಂಗನಿಗೆ ಅಪ್ಪಣೆಯಿತ್ತ.
73. ತನ್ನ ವಿಶಾಲ ಬಾಹುಗಳಿಂದ ರಾಮ ಲಕ್ಷ್ಮಣರನ್ನು ಹೊತ್ತೊಯ್ದು ಯಾರನ್ನು ರಾಮ ಎರಡೂ ತೋಳುಗಳ ಕತ್ತರಿಸಿದನು.
ಉತ್ತರ : ವಿರಾಧನನ್ನು.
74. ಇಂದ್ರನು ರಾಮನಿಗೆ ಯಾರ ಮೂಲಕ ಶಾಂಘ ಧನಸ್ಸು ಕಳಿಸಿದನು.?
ಉತ್ತರ : ಕುಂಭಸಂಭವ ಅಗಸ್ತ್ಯರಿಂದ
75. ಶೂರ್ಪಣಖಿಯ ಪತಿಯನ್ನು ಕೊಂದವರಾರು?
ಉತ್ತರ : ಶೂರ್ಪನಖಿಯ ಪತಿ ವಿದ್ವಜ್ಜಿಹ್ವನನ್ನು ರಾವಣನೇ ಯುದ್ಧದಲ್ಲಿ ಶತ್ರುವೆಂದು ಭಾವಿಸಿ ಕೊಂದನು.
76. ರಾಮ ಸೀತೆಯರಿಗೆ ವಿವಾಹವಾದಾಗ ಎಷ್ಟು ವಯಸ್ಸು?
ಉತ್ತರ : ರಾಮನಿಗೆ 18. ಸೀತೆಗೆ 8 ವರ್ಷ.
77. ರಾವಣನ, ಕುಂಭಕರ್ಣನ, ವಿಭೀಷಣನ ಪತ್ನಿಯ ಹೆಸರೇನು?
ಉತ್ತರ : ರಾವಣನ ಪತ್ನಿ ಮಯಾಸುರನ ಮಗಳು ಮಂಡೋದರಿ,
ಕುಂಭಕರ್ಣನ ಪತ್ನಿ ಪುರೋಚನನ ಮಗಳು ಜ್ವಲಾ
ವಿಭೀಷಣನ ಪತ್ನಿ ದೈಲೂಷನೆಂಬ ಗಂಧರ್ವನ ಮಗಳು ಸರಮೆ.
78. ಶೂರ್ಪನಖಿಯು ರಾಮನನ್ನು ಏನು ಕೇಳಿದಳು?
ಉತ್ತರ : ಶೂರ್ಪನಖಿಯು ರಾಮನನ್ನು ಮದುವೆಯಾಗೆಂದಳು.
79. ಶೂರ್ಪಣಖಿಗೆ ರಾಮ ಏನು ಶಿಕ್ಷೆ ಕೊಡಲು ಲಕ್ಷ್ಮಣನಿಗೆ ಹೇಳಿದನು.?
ಉತ್ತರ : ವಿಧವೆಯಾದ ಶೂರ್ಪಣಖಿಯು ಪುನರ್ವಿವಾಹ ಬಯಸಿದ್ದರಿಂದ, ಅವಳು ಅಪರಾಧಿ. ಅದಕ್ಕೇ ಅವಳ ಕಿವಿ ಮೂಗು ಕತ್ತರಿಸಲು ಹೇಳಿದನು.
80. ಖರ ರಾಮನ ಕೊಲ್ಲಲು ಎಷ್ಟು ಜನರನ್ನು ಕಳಿಸಿದನು?
ಉತ್ತರ : ಖರ 14000 ಜನರನ್ನು ಕಳಿಸಿದನು. ಎಲ್ಲರನ್ನೂ ರಾಮನು
ಅತ್ಯಲ್ಪ ಸಮಯದಲ್ಲೇ ಸಂಹರಿಸಿದನು.
81. ರಾವಣ ಮಾರೀಚನನ್ನು ಹುಡುಕಿಕೊಂಡು ಎಲ್ಲಿಗೆ ಬಂದ?
ಉತ್ತರ : ಗೋಕರ್ಣಕ್ಕೆ. ರಾಮನ ಬಾಣದ ರುಚಿಗೆ ನೂರಾರು ಯೋಜನ ಧಾಟಿ ಗೋಕರ್ಣದಲ್ಲಿ ಬಿದ್ದ ಮಾರೀಚನು ಅಲ್ಲೇ ತಪಸ್ಸು ಮಾಡುತ್ತಿದ್ದ.
82. ಖರ ದೂಷಣರ ಸಂಹಾರ ವಿಚಾರ ರಾವಣನಿಗೆ ಯಾರು ತಿಳಿಸಿದರು?
ಉತ್ತರ : ರಾವಣನ ಮಂತ್ರಿ ಅಕಂಪನ ಖರದೂಷಣರ ಸಂಹಾರ ವಿಚಾರ ತಿಳಿಸಿದನು
83. ರಾವಣನು ಮಾರೀಚನಿಗೆ ಯಾವ ಜವಾಬ್ದಾರಿ ಕೊಟ್ಟನು?
ಉತ್ತರ : ಮಾರೀಚನಿಗೆ ಮಾಯಾಮೃಗವಾಗಿ ಹೋಗಿ ವಂಚಿಸಲು ಹೇಳಿದನು.
84. ಮಾರೀಚನು ಏನು ಮಾಡಿದನು ?
ಉತ್ತರ : ಮಾರೀಚನು ಬಂಗಾರದ ಮಾಯಾ ಜಿಂಕೆಯಾಗಿ ಸೀತೆಯ ಮುಂದೆ ಓಡಾಡಿದನು.
85. ಮಾರೀಚನು ಜಿಂಕೆಯಾಗಿ ಬಂದಾಗ ರಾಮ ಸೀತೆಯರು ಇದ್ದ ಸ್ಥಳ ಯಾವುದು?
ಉತ್ತರ : ದಂಡಕಾರಣ್ಯ
86. ಆ ಜಿಂಕೆಯ ನೋಡಿ ಸೀತೆ ಬಯಸಿದ್ದೇನು?
ಉತ್ತರ : ಆ ಮಾಯಾ ಜಿಂಕೆಯ ನೋಡಿ ಸೀತೆ ತನಗೆ ಆ ಜಿಂಕೆ ಬೇಕೆಂದು ಕೇಳಿದಳು.
87. ಮಾರೀಚನು ರಾಮ ಅಟ್ಟಿಸಿಕೊಂಡು ಬಂದಾಗ ಮಾಡಿದ್ದೇನು?
ಉತ್ತರ : ರಾಮ ಅಟ್ಟಿಸಿಕೊಂಡು ಬಂದಾಗ ಮಾರೀಚ ವೇಗವಾಗಿ ಓಡುತ್ತಾ ರಾಮನು ಬಾಣ ಪ್ರಯೋಗ ಮಾಡಿದಾಗ ” ಹಾ ಲಕ್ಷ್ಮಣ, ಹಾ ಸೀತಾ” ಎಂದು ರಾಮನ ಧ್ವನಿಯಲ್ಲಿ ಕೂಗಿದನು.
88. ಆ ಕೂಗನ್ನು ಕೇಳಿ ಸೀತೆ ಮಾಡಿದ್ದೇನು?
ಉತ್ತರ : ಸೀತೆಯು ಲೋಕ ವಿಡಂಬನಾ ರೀತ್ಯಾ ರಾಮನಿಗೆ ಏನೋ ಆಗಿದೆ ಎಂದು ಲಕ್ಷ್ಮಣನನ್ನು ಕಳಿಸಿದಳು.
89. ಲಕ್ಷ್ಮಣನು ಹೋಗುವಾಗ ಏನು ಮಾಡಿದನು?
ಉತ್ತರ : ತನ್ನ ಬಿಲ್ಲಿನಿಂದ ರೇಖೆ ಎಳೆದು ಇದನ್ನು ಯಾವುದೇ ಕಿರಣಕ್ಕೂ ಧಾಟದಿರಲು ಹೇಳಿದನು. (ಆನಂದ ರಾಮಾಯಣ)
90. ಆಗ ರಾವಣನು ಯಾವ ವೇಷದಲ್ಲಿ ಬಂದನು?
ಉತ್ತರ : ರಾವಣನು ಮಾಯಾ ಸನ್ಯಾಸಿಯಾಗಿ ಬಂದನು.
91. ಸೀತೆಯನ್ನು ರಾವಣ ಹೇಗೆ ಅಪಹರಿಸಿದ?
ಉತ್ತರ : ಭಿಕ್ಷೆ ಬೇಡಲು ಬಂದ ರಾವಣನಿಗೆ ಸೀತೆ ಆ ಲಕ್ಷ್ಮಣ ರೇಖೆಯ ಒಳಗೇ ನಿಂತು ಭಿಕ್ಷೆ ಹಾಕಲು ಹೋದಾಗ ರಾವಣನು ರೇಖೆ ದಾಟಿ ಬಂದು ಹಾಕಲು ಹೇಳಿದನು. ಆ ಸಮಯದಲ್ಲಿ ಅವಳನ್ನು ಮುಟ್ಟಲೂ ಆಗದ ರಾವಣನು ಸೀತೆಯು ನಿಂತಿದ್ದ ಭೂಮಿಯ ಬಗೆದು ಅದರ ಸಮೇತ ಹೊತ್ತನ್ನು.
92. ರಾವಣ ಹೊತ್ತೊಯ್ದದ್ದು ಯಾರನ್ನು?
ಉತ್ತರ : ಅಗ್ನಿಯು ಸೀತಾಕೃತಿ ಸಿದ್ದಪಡಿಸಿ, ತಂದರು. ಆ ಸೀತಾ ಕೃತಿಯಲ್ಲಿ ಇಂದ್ರದೇವರು ಆವಿಷ್ಟರಾಗಿ ಚೇಷ್ಟಪ್ರದರಾಗಿದ್ದರು. ಲಕ್ಷ್ಮೀ ಸನ್ನಿಧಾನವೂ ಇತ್ತು. ಸೀತಾದೇವಿ ಕೈಲಾಸಕ್ಕೆ ತೆರಳಿ ರುದ್ರದೇವರಿಂದ ಸೇವಿತರಾದರು. ರಾವಣ ಕದ್ದೊಯ್ದದ್ದು ಸೀತಾಕೃತಿಯನ್ನೇ ಹೊರತು ಸೀತೆಯನ್ನಲ್ಲ.
93. ರಾವಣ ಒಯ್ದದ್ದು ಸೀತಾ ಕೃತಿಯನ್ನು ಸೀತೆಯನ್ನಲ್ಲ ಎಂದು ಹೇಗೆ ವಿಮರ್ಶಿಸಿದ್ದಾರೆ?
ಉತ್ತರ : ಕೂರ್ಮಪುರಾಣ, ವರಾಹ ಪುರಾಣ, ಬ್ರಹ್ಮ ವೈವರ್ಥ್ಯ, ಭವಿಷ್ಯೋತ್ತರ, ಅಗ್ನಿ ಪುರಾಣ ಮೊದಲಾದ ಪುರಾಣಗಳಲ್ಲಿ ಲಭ್ಯವಿದೆ.
94. ಸೀತಾ ಕೃತಿಯನ್ನು ಒಯ್ದ ರಾವಣನನ್ನು ಮೊದಲು ತಡೆದಿದ್ದು ಯಾರು?
ಉತ್ತರ : ಮೊದಲು ತಡೆದಿದ್ದು ಜಟಾಯು
95. ಜಟಾಯು ರಾವಣರ ಯುದ್ಧ ಹೇಗಿತ್ತು?
ಜಟಾಯು ಅರವತ್ತು ಸಾವಿರ ವರ್ಷಗಳ ವೃದ್ಧ ಪಕ್ಷಿ (ಹದ್ದು). ಅವನು ರಾವಣನೊಂದಿಗೆ ಎರಡು ಮುಹೂರ್ತ ಯುದ್ಧ ಮಾಡಿದ. ಕಡೆಗೆ ರಾವಣ ಜಟಾಯುವಿನ ರೆಕ್ಕೆಗಳನ್ನು ಕುಡಿದು ಕೊಂದನು. (ಜಟಾಯು ದಶರಥನ ಸ್ನೇಹಿತ.)
96. ಸತ್ತ ಜಟಾಯುವಿಗೆ ಅಂತ್ಯಕ್ರಿಯೆ ಯಾರು ಮಾಡಿದರು?
ಉತ್ತರ – ಸುತ್ತ ಜಟಾಯುವಿಗೆ ರಾಮಚಂದ್ರನೇ ಅಂತ್ಯಕ್ರಿಯೆ ಮಾಡಿ
ಸದ್ಗತಿಯನ್ನೇ ನೀಡಿದ.
97. ಒಂದೇ ದಿನ ಸತ್ತ ಮಾರೀಚ ಮತ್ತು ಜಟಾಯುವಿನ ವ್ಯತ್ಯಾಸ ಏನು?
ಉತ್ತರ : ರಾಮನಿಂದ ಮಾರೀಚ ಸೀತಾ ಅಪಹರಣವಾಗಲೆಂದು ಸತ್ತ.
ರಾವಣನಿಂದ ಸೀತಾ ಅಪಹರಣ ತಪ್ಪಿಸಲು ಹೋಗಿ ಜಟಾಯು ಸತ್ತ.
ಮಾರೀಚ ರಾಮನಿಂದ ಸತ್ತಿದ್ದು ದುಷ್ಟ ಕಾರ್ಯದಿಂದ ತಮಸ್ಸಿಗೆ ಹೋದ. ಜಟಾಯು ಸತ್ತಿದ್ದು ರಾವಣನಿಂದ ಸುಕಾರ್ಯಕ್ಕಾಗಿ ಮೋಕ್ಷ ಪಡೆದ. ಇಬ್ಬರೂ ಸತ್ತಿದ್ದು ದಂಡಕಾರಣ್ಯದಲ್ಲೇ.
98. ಕಬಂಧ ಯಾರು?
ಉತ್ತರ – ಕಬಂಧ “ದನು( ವಿಶ್ವಾಸವು) ” ಎಂಬ ಹೆಸರಿನ ಗಂಧರ್ವ. ಸ್ಥೂಲಶಿರಸ್ ಎಂಬ ಮುನಿಯನ್ನು ಕೆಣಕಿ ಶಾಪಗ್ರಸ್ಥನಾಗಿ ತ್ರಿಜಟೆಯ ಮಗನಾಗಿ ರಾಕ್ಷಸನಾಗಿದ್ದ. ಬ್ರಹ್ಮ ದೇವರಿಂದ ಅಜೇಯತ್ವ ಅವಧ್ವತ್ವ ಪಡೆದಿದ್ದ. ಇಂದ್ರನ ಕೆಣಕಿ ವಜ್ರಾಯುಧದಿಂದ ಪೆಟ್ಟು ತಿಂದಿದ್ದ. ಆಗ ಅವನ ತಲೆ ಉದರದೊಳಗೆ ಸೇರಿಕೊಂಡಿತು. ಇಂದ್ರವರದಿಂದ ಉದರದಲ್ಲೇ ಬಾಯಿ ಉಂಟಾಯಿತು. ಹೀಗೆ ರುಂಡವಿಲ್ಲದೇ ಭಾರೀ ಬೆಳೆಯಬಲ್ಲ ಬಾಹುಗಳಿದ್ದರಿಂದ ಕಬಂಧ ಎಂದೇ ಹೆಸರು. ಅವನಿಗೆ ತನ್ನ ಕೈಗಳು ಯೋಜನಗಟ್ಟಲೆ ಬೆಳೆಸಿ ಪ್ರಾಣಿಗಳ ತಿನ್ನುತ್ತಿದ್ದ.
99. ರಾಮ ಲಕ್ಷ್ಮಣರನ್ನು ಕಬಂಧ ಏನು ಮಾಡಿದ? ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ?
ಉತ್ತರ : ರಾಮಲಕ್ಷ್ಮಣರು ಸೀತಾನ್ವೇಷಣೆಗಾಗಿ ಬಂದಾಗ ಅವರನ್ನೂ ಕಬಂಧ ತನ್ನ ಬಾಹುವಿನಿಂದ ಹಿಡಿದಾಗ, ಅವನ ಬಲತೋಳನ್ನು ರಾಮನೂ, ಎಂಬ ತೋಳನ್ನು ಲಕ್ಷ್ಮಣನೂ ಕತ್ತರಿಸಿ,. ಅವನನ್ನು ಬಿಲದಲ್ಲಿ ಬೀಳಿಸಿ ಸುಟ್ಟರು. ಹೀಗೆ ಪಾಪಯೋನಿಯಿಂದಲೂ, ಶಾಪದಿಂದಲೂ ಕಬಂಧನನ್ನು ಮುಕ್ತನಾಗಿಸಿದನು ರಾಮಚಂದ್ರ. ಅವನೇ ಮುಂದೆ ದ್ವಾಪರಯುಗದಲ್ಲಿ ದಮಘೋಷನಾಗಿ ಶಿಶುಪಾಲನಾ ತಂದೆಯಾಗುತ್ತಾನೆ.
100. ಕಬಂಧ ಮರಣಾನಂತರ ರಾಮಲಕ್ಷ್ಮಣರು ಏನು ಮಾಡಿದರು?
ಉತ್ತರ : ನಂತರ ರಾಮಲಕ್ಷ್ಮಣರು ಸೀತೆಯನರಸಿ ಪಂಪಾ ಸರೋವರದತ್ತ ಹೊರಟರು.
101. ಪಂಪಾ ತೀರದಲ್ಲಿ ಯಾವ ಆಶ್ರಮಕ್ಕೆ ಬಂದರು ?
ಉತ್ತರ : ಮತಂಗಾಶ್ರಮಕ್ಕೆ ಬಂದರು.
102. ಮತಂಗಾಶ್ರಮದಲ್ಲಿ ರಾಮದೇವರಿಗೆ ಕಾಯುತ್ತಿದ್ದವರು ಯಾರು?
ಉತ್ತರ : ಅಲ್ಲಿ ಶಬರಿ ರಾಮ ದರ್ಶನಕ್ಕಾಗಿ ಕಾಯುತ್ತಿದ್ದಳು.
103. ಶಬರಿ ಮೂಲತಃ:ಯಾರು ?
ಉತ್ತರ : ಶಬರಿ ಮೂಲತಃ: ಒಬ್ಬ ಅಪ್ಸರಾಸ್ತ್ರೀ. ಇಂದ್ರನ ಮುಂದೆ ಗರ್ವ ತೋರಿದ್ದರಿಂದ ಶಚೀದೇವಿ ಶಾಪಕ್ಕೊಳಗಾಗಿ ಬೇಡತಿಯಾಗಿ ಜನಿಸಿದ್ದು.
104. ಸೀತಾಕೃತಿ ಯಾರು?
ಉತ್ತರ : ಅವಳೇ ಮುಂದೆ ಶ್ರೀನಿವಾಸ ಕಲ್ಯಾಣದಲ್ಲಿ ಪದ್ಮಾವತಿಯಾಗಲಿರುವ ವೇದವತಿ.
105. ರಾಮನು ಸೀತೆಯನ್ನು ಕೊಂಡೊಯ್ದದ್ದು ಹೇಗೆ?
ಉತ್ತರ : ಪುಷ್ಪಕ ವಿಮಾನದಲ್ಲಿ.
106. ಸೀತೆಯು ತನ್ನ ಆಭರಣಗಳನ್ನು ಎಸೆದಿದ್ದು ಎಲ್ಲಿ?
ಉತ್ತರ : ಕಿಷ್ಕಿಂಧೆಯಲ್ಲಿ ಸುಗ್ರೀವಾದಿಗಳ ಎದುರು.
107. ಸೀತೆಯನ್ನು ಕೊಂಡೊಯ್ದ ರಾವಣನು ಅವಳನ್ನು ಎಲ್ಲಿ ಇರಿಸಿದ ?
ಉತ್ತರ : ಅವಳನ್ನು ಅಶೋಕವನದಲ್ಲಿರಿಸಿದ.
108. ಶ್ರೀರಾಮನು ಹನುಮಂತನನ್ನು ನೋಡಿದ್ದು ಎಲ್ಲಿ?
ಉತ್ತರ : ಋಷ್ಯಮೂಕದಲ್ಲಿ
109.
ಮುಂದುವರಿಯುವುದು ……….
Ramayana and Mahabharatha are two epics are the two authorities of Indian culture. I take this opportunity to thank profusely for providing seventy five questions as first installment.
One cannot read the mula Ramayana in full and remember all the characters. Narahari’s work will help all interesed to teach, or make their wards to take interest in Ramayana in the form of question and answers. at the age of 64 if these questions were asked to me I would have answered five or six questions and this is our ignorance.
Sir thank you. only request to you is that publish them to enable us to download and store.
Thanks again.