ಜಯರಾಯರ ನೋಡಿರೋ ಸಜ್ಜನರೆಲ್ಲ

ಶ್ರೀ ವಿಜಯದಾಸರ ಕೃತಿ

ಜಯರಾಯರ ನೋಡಿರೋ ಸಜ್ಜನರೆಲ್ಲ – ಟೀಕಾಚಾರ್ಯರ ಕುರಿತಾದ ವಿಜಯದಾಸರ ಕೃತಿ
ವಿಶ್ಲೇಷಣೆ – ಮಧ್ವಶಾಸ್ತ್ರ ಸಂಪನ್ನ ಶ್ರೀ ಹೊಳವನಹಳ್ಳಿ ಶ್ರೀನಿವಾಸಾಚಾರ್ಯರಿಂದ

ಜಯರಾಯರ ನೋಡಿರೋ ಸಜ್ಜನರೆಲ್ಲ
ಜಯರಾಯರ ನೋಡಿರೋ ||pa||

ಜಯರಾಯರ ನೋಡಿ ಜಪಿಸಿ ಮನದಿ ಪಾಡಿ
ಜಯವಾಗುವುದು ನಿಮಗೆ
ಭಯನಾಶ ಸಂತತ ||a.pa||

ದುರುಳಮತವೆಂಬೊ ಕರಿಗೆ ಅಂಕುಶವಿತ್ತು
ಸುರಸಾದ ಗ್ರಂಥ ಆನಂದಮುನಿ
ವಿರಚಿಸಿ ಇರಲಾಗಿ ಪರಮಭಕ್ತಿಯಿಂದ ವಿ
ಸ್ತರ ಮಾಡಿದಾ ಕರದ ಕನ್ನಡಿಯಂತೆ ||1||

ವಾದಿಗಳನ್ನೆಲ್ಲಾ ಜೈಸಿ ಡಂಗುರ ಹೊಯ್ಸಿ
ಭೇದಾರ್ಥ ಸುಜ್ಞಾನ ಸತ್ಯವೆನಿಸಿ
ಈ ಧರಿಯೊಳಗೆ ಹರಿಪರ ದೈವವೆಂದು
ಸಾಧಿಸಿ ಉದ್ದಂಡವಾದ ಗುರುತಿಲಕ ||2||

ಅಕ್ಷೋಭ್ಯತೀರ್ಥರ ಕರದಿಂದ ಜನಿಸಿ
ಮೋಕ್ಷಕೆ ಜಯ ಪತ್ರಿಕೆ ಕೊಡಿಸಿ
ಪಕ್ಷಿವಾಹನ ಸಿರಿ ವಿಜಯವಿಠ್ಠಲನನ್ನ
ನೀಕ್ಷಿಸುವದಕೆ ಉಪದೇಶ ಕೊಡುವ ಋಷಿ||3||

Sumadhwa Seva © 2022