“ದ್ರೌಪದಿಯ ಪಂಚಪತಿತ್ವ”

 

ಮಹಾಭಾರತದ ಬಹಳಷ್ಟು ಪಾತ್ರಗಳು ರೋಚಕವಾಗಿದೆ.

 

ಮಹಾರಾಜ ಶಂತನು ಗಂಗೆಯನ್ನು ಕಳೆದುಕೊಂಡು ಸತ್ಯವತಿಯ ಬಯಸಿ, ಅವಳಿಗಾಗಿ ತನ್ನ ಮಗನೇ ಆಜನ್ಮ ಬ್ರಹ್ಮಚಾರಿ ಆಗುತ್ತಾನೆ.  ಕುರುಡ ಪತಿಗಾಗಿ ಪತ್ನಿ ಗಾಂಧಾರಿ ಜೀವಮಾನವಿಡೀ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾಳೆ.    ಸತ್ಯವತಿ ಪರಾಶರರ ಮಗನಾದ ವ್ಯಾಸರು ಮಹಾಭಾರತ ಬರೆದರೆ, ದ್ರೋಣಾಚಾರ್ಯರು ದೊನ್ನೆಯಲ್ಲಿ ರಕ್ಷಿಸಲ್ಪಟ್ಟು ಜನಿಸುತ್ತಾರೆ.  ವಿರಾಟರಾಜ ಮೀನಿನ ಉದರದಲ್ಲಿ ಜನಿಸಿದರೆ, ದುರ್ಯೋಧನಾದಿಗಳು ಮಡಿಕೆಯಲ್ಲಿ ಸಂರಕ್ಷಿಸಲ್ಪಟ್ಟು ಜನಿಸುತ್ತಾರೆ.   ಪಿತಾಮಹ ಎನಿಸಿ ಏಳು ತಲೆಮಾರುಗಳ ಕಂಡರೂ, ಸಿಂಹಾಸನಕ್ಕೆ ಅಧಿಕಾರವಿದ್ದರೂ, ಸೇವಕನಾಗಿ ದುಡಿಯುತ್ತಾನೆ ಭೀಷ್ಮ.  ದ್ರೌಪದಿ ಧೃಷ್ಟದ್ಯುಮ್ನರು ಅಗ್ನಿಯಿಂದ ಜನಿಸುತ್ತಾರೆ.    ಪಾಂಡವರು ದೇವತಾ ಅನುಗ್ರಹ ಬಲದಿಂದ ಕುಂತಿಯಲ್ಲಿ ಜನಿಸುತ್ತಾರೆ.  ವಿವಾಹ ಪೂರ್ವ ಸೂರ್ಯಾನುಗ್ರಹದಿಂದ ಜನಿಸಿದ ಕರ್ಣ ರಾಧೇಯನಾಗುತ್ತಾನೆ.    ಪಾಂಡವರ ಧರ್ಮನೀತಿ, ಕೌರವರ ಅಧರ್ಮ, ಧೃತರಾಷ್ಟ್ರನ ಪುತ್ರ ವ್ಯಾಮೋಹ, ಕಪಟಿ ಶಕುನಿಯ ದಾಹಕ್ಕೆ ಬಿದ್ದ ಪಾಂಡವರು, ಹೆಜ್ಜೆ ಹೆಜ್ಜೆಗೂ ಅವರ ಸಂರಕ್ಷಿಸಿದ ಕೃಷ್ಣ , ಗೀತೋಪದೇಶದಿಂದ ಇಡೀ ಆರ್ಯಾವರ್ತದಲ್ಲೇ ಧರ್ಮಜಾಗೃತಿ ಮಾಡಿದ.  ಮಹಾಭಾರತ ಯುದ್ಧ ನೋಡುವುದಕ್ಕೆ ಪಾಂಡವ ಕೌರವರ ಯುದ್ಧದಂತೆ ಕಂಡರೂ, ನಿಜವಾಗಿ ಸಂಪೂರ್ಣ ಯುದ್ಧಮಾಡಿದವನು ಕೃಷ್ಣನೇ.  ಧರ್ಮವಿದ್ದರೆ ಅವರ ಹಿಂದೆ, ಅಧರ್ಮ ಮಾಡಿದವರಿಗೆ ತಕ್ಕ ರೀತಿಯಲ್ಲಿ ಸೋಲಿಸಿದನು ಕೃಷ್ಣನೇ.

ಅದೇ ರೀತಿ ಮಹಾಭಾರತದ ಅತ್ಯದ್ಭುತ ಪಾತ್ರ ದ್ರೌಪದಾ ದೇವಿಯರದ್ದು. ಕೆಲವು ಕುಹಕಿ ಕವಿಗಳು ಪಂಚವಲ್ಲಭೆ ಪಾಂಚಾಲಿ ಎಂದೂ,  ಮತ್ತೆ ಕೆಲವರು ಪಾಂಚಾಲಿ ಅರ್ಜುನನ ಹೆಂಡತಿಯೆಂದೂ, ಅವರವರ ಭಾವಕ್ಕೆ ತಕ್ಕಂತೆ ಚಿತ್ರಿಸಿದರೂ ಕೂಡ ಅವಳು ಮಹಾಪತಿವ್ರತೆಯೆಂದು “ಪಂಚಪತಿವ್ರತೆ”ಯರಲ್ಲಿ ಸೇರಿಸಿದ್ದಾರೆ.

 

ದ್ರೌಪದಿ :   ಇವಳ ಜನ್ಮನಾಮ ಕೃಷ್ಣಾ.  ಯಜ್ಞದಲ್ಲಿ ಜನಿಸಿದ್ದರಿಂದ ಯಾಜ್ಞಸೇನಿ, ದ್ರುಪದ ರಾಜನ ಮಗಳಾದ್ದರಿಂದ “ದ್ರೌಪದಿ”, ಪಾಂಚಾಲಿ ರಾಜಕುವರಿಯಾದ್ದರಿಂದ “ಪಾಂಚಾಲಿ”,    ಕಷ್ಟಗಳ, ಅವಮಾನಗಳ ಸರಮಾಲೆಯನ್ನು ಎದುರಿಸಿದ, ಪಾಂಡವರ ವನವಾಸಕಾಲದಲ್ಲಿ ಸಹಸ್ರಾರು ಬ್ರಾಹ್ಮಣರಿಗೆ ಭೋಜನ ನೀಡಿದವಳೂ, ಧರ್ಮನ ನೀತಿ,. ಭೀಮನ ಆಡಳಿತ, ಎಲ್ಲದರಲ್ಲೂ ಭಾಗಿಯಾಗಿ ಐದೂ ಜನ ಪತಿಯರಿಗೆ ಮಾರ್ಗದರ್ಶನ ನೀಡಿದ ಮಹಾ ಮಾತೆ ದ್ರೌಪದಿ