Naraka Chaturdashi

  • What is Naraka Chaturdashi ? ನರಕಚತುರ್ದಶಿಯನ್ನು ಆಶ್ವೀಜ ಬಹುಳ ಚತುರ್ದಶಿಯಂದು ನರಕಾಸುರನ ಸಂಹಾರ ನಿಮಿತ್ತ ಆಚರಿಸಲಾಗುತ್ತದೆ.

Naraka Chaturdashi is celebrated to mark the end of Narakasura named daithya.  It is celebrated on Ashwija Krishna Chaturdashi.

Who is Narakasura?

Narakasura is a daithya born to Bhoodevi and Varahadevaru.   He was the king of Pragjyotisha Nagar (now in Assam).  He had occupied that King’s position after overthrowing danava king Ghatakasura.

Why Krishna & Satyabhama killed Narakasura?

Narakasura in association with Murasura, had brought control of the entire world under his belt.  He went to Swargaloka and attacked Devendra, who had to flew out of Indraloka.  He stole 16100 women (gopikaa stree, who are originally sons of Agni, born as ladies just to marry to Krishna) and had kept them in his Jail.  All gods approached  Srihari with the leadership of Indra, who assured them to put an end to Narakasura.  But Narakasura had a boon that he would face death only at the hands of his mother Bhoodevi. So, Krishna asks his wife Sathyabhama, the reincarnation of Bhudevi, to be his charioteer in the battle with Naraka.

 

Aditi, the mother of Devategalu approached Satyabhama for help, who in turn approached Srikrishna. Narakasura had 11 Akshohini Sainya,  Krishna went alongwith Satyabhama, attacked Narakasura and his fort, riding on his chariot Garuda.  Naraka’s palace was guarded by the five-headed daithya Murasura.  Murasura hurled countless weapons at Krishna, but  Krishna shot each one down with his bow and arrow. Then Krishna killed him with his Sudarshana dislocating Mura’s five heads.  That is why Krishna got the name “Murari”.

Then a fierce fight went on with Krishna and Narakasura.  Satyabhama also joined in fighting with the daithya.Krishna also killed Narakasura with his Sudarshana Chakra and freed all the 16100 women who were imprisoned by the daithya.   Bhoodevi then sang hymns in praise of Krishna and begged him to take Naraka’s son Bhagdatta under his protection.  Krishna placed Bhagadatta (Narakasura’s son Bhagadatta had fought for Kauravaas in Kurukshetra War)  on the throne and then freed all of Naraka’s prisoners. The devathaas showered Krishna with flowers from the heavens.  Before  dying, the Asura requested a boon that his death anniversary should be celebrated by all people on earth. This day is celebrated as ‘Naraka Chaturdashi’ – the first day of Diwali.

Why oil bath to be taken on Naraka Chaturdashi day?-

It is said Lord Krishna had an oil bath to rid himself off the blood spattered on his body when Naraka was killed. The tradition is followed and people offer prayers on the previous day of the Naraka Chaturdashi to the vessel in which water is being heated for having bath. Hindus light fireworks, which are regarded as the effigies of Narakasura who was killed on this day. Taking OIL-BATH is a must on this day. That Mahalakshmi would be getting from the bed. It has been said to  perform  pooja according to usage and custom.ನರಕಚತುರ್ದಶಿಯಂದು ಜಲದಲ್ಲಿ ಗಂಗೆಯೂ, ತೈಲದಲ್ಲಿ ಲಕ್ಷ್ಮೀದೇವಿಯೂ, ವಿಶೇಷವಾಗಿ ಸನ್ನಿಹಿತರಾಗಿರುವರು.

tailaabhyaMjana snaana saMkalpa –

…………  chaturdashyaaM shubhatithou chaMdrOdayakaalE narakaaMtaka shrI gOpaalakRuShNa prEraNayaa shrI gOpaalakRuShNa prItyarthaM saparivaaraaya shrI gOpaalakRuShNaaya sugaMdhi tailaabhyaMga samarpaNa pUjaaM kariShyE

Srikrishna paramathma has given a blessings on Narakasura that those who does the tailabhyanjana on this Day, i.e., Ashwayuja Bahula Chaturdashi will have putra, poutra, aishwarya and everything.  This is called as “Narakee Chaturdashi”, further they will not fear of “Naraka”.  Abhyanga Snana is a full body massage and ritual bathing on the Narak Chaturdasi day during Diwali. In some regions, Abhyang Snana is performed before sunrise.

Before doing Abhyanga Snaana – first have “Enne shaastra” from sumangali strees.  Then do have normal snaana.

 

Then do the abhyanga snaana to the idols in your house.  Then remains of the oil used for devata samarpana to be mixed with the oil and to be applied to the other membes of your house.

There is no Dosha for Vyateepaata, vaidhruthi, maataapitru Samvatsarika Shraddha also.  Everybody has to take abhyanjana snaana.  Even sanyasi have to take abhyanjana snaana on this day.

Yamatarpana –  After snaana, ahneeka, pooja, every one have to give tarpana to Yamadharmarajaru.  As Yamadharmaraja has devatva and pitrutva,  all should give tarpana.  Jeevanpitru must give tarpana without using ellu (tila) facing south direction.  Whereas those who are not having father they should give tarpana with apasavya with ellu (tila).

Yamaparpana sankalpa –   Achamana, sankalpa, pranavasya……..chaturdashyaam, shubatithou, mama naraka bhaya nivruttidwaara sri yamaantargata shrI bhaaratIramaNa muKyapraaNaaMtargata shrI lakShmI narasiMha/vEMkatEsha prItyarthaM, narakachaturdashi parvakaala prayuktaM yama tarpaNamahaM kariShyE.

yamaM tarpayaami | dharmaraajaM tarpayaami |
mRutyuM tarpayaami | aMtakaM tarpayaami |
vaivasvataM tarpayaami | kaalaM tarpayaami |
sarvabhUtakShayaM tarpayaami | ouduMbaraM tarpayaami |
daddhnaM tarpayaami | vRukOdaraM tarpayaami |
nIlaM tarpayaami | paramEShTinaM tarpayaami |
chitraM tarpayaami | chitraguptaM tarpayaami |

After Yamatarpana, those who are eligible for pitru tarpana shall give pitru tarpana to their 12 pitrus.

—————————————

ನರಕ ಚತುರ್ದಶಿ –   ಆಶ್ವೀಜ ಬಹುಳ ಚತುರ್ದಶಿ –

ತೈಲಾಭ್ಯಂಜನ ಕಡ್ಡಾಯ –  ನರಕ ಚತುರ್ದಶಿಯಂದು ಪ್ರತಿಯೊಬ್ಬ ಜೀವಿಯೂ ಅಭ್ಯಂಜನವನ್ನು ಮಾಡಲೇಬೇಕು.  ಇಲ್ಲದಿದ್ದರೆ ದಾರಿದ್ರ್ಯಾದಿಗಳಿಂದ ಪೀಡಿತರಾಗುವರು.

ಈ ದಿನ ಗಂಗೆಯು ಜಲದಲ್ಲಿ ಮತ್ತು ತೈಲದಲ್ಲಿ ಲಕ್ಷ್ಮೀದೇವಿಯು ವಿಶೇಷವಾಗಿ ಸನ್ನಿಹಿತಳಾಗಿರುತ್ತಾರೆ.

ಸಾಮಾನ್ಯವಾಗಿ ತಂದೆ ತಾಯಿಗಳ ಶ್ರಾದ್ಧ ದಿನಗಳಲ್ಲಿ, ವ್ಯತೀಪಾತ, ವೈಧೃತಿ ಯೋಗಗಳಲ್ಲಿ ಅಭ್ಯಂಜನವನ್ನು ಮಾಡಿಕೊಳ್ಳುವ ಸಂಪ್ರದಾಯವಿಲ್ಲ.  ವಿಧವೆಯರೂ, ಸನ್ಯಾಸಿಗಳೂ ಅಭ್ಯಂಜನವನ್ನು ಮಾಡಿಕೊಳ್ಳಬಾರದು ಸಾಮಾನ್ಯವಾಗಿ.   ಆದರೆ ನರಕ ಚತುರ್ದಶಿಯಂದು ಇದೆಲ್ಲ ಇದ್ದರೂ ಕೂಡ ಅಭ್ಯಂಜನವನ್ನು ಮಾಡಲೇಬೇಕು.   ಸನ್ಯಾಸಿಗಳೂ, ವಿಧವೆಯರೂ ಅಭ್ಯಂಜನವನ್ನು ಮಾಡಿಕೊಳ್ಳಲೇಬೇಕು.

ಏಕೆ ಅಭ್ಯಂಜನವನ್ನು ಮಾಡಿಕೊಳ್ಳಬೇಕು – ಈ ದಿನ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ನರಕಾಸುರನು ಒಂದು ವರವನ್ನು ಕೇಳುತ್ತಾನೆ.  “ನನ್ನ ಸಂಹಾರದ ನೆನಪಿಗಾಗಿ ಎಲ್ಲರೂ ಅಭ್ಯಂಜನವನ್ನು ಮಾಡಬೇಕು ಮತ್ತು ದೀಪಪ್ರಜ್ವಲನವನ್ನು ಮಾಡಬೇಕು” ಎಂದು ಕೇಳಿದುದರಿಂದ ಕೃಷ್ಣನು ಹಾಗೆಯೇ ಆಗಲಿ ಎಂದು ಅನುಗ್ರಹಿಸಿದ್ದನು.  ಅದರ ನಿಮಿತ್ತ ಎಲ್ಲರೂ ಅಭ್ಯಂಜನವನ್ನು ಮಾಡಿಕೊಳ್ಳಬೇಕು.  ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ಅವನ ಮೇಲೆ ರಕ್ತದ ಕಲೆಗಳು ಸಿಡಿದಿದ್ದವು.  ಅದನ್ನು ತೊಳೆದುಕೊಳ್ಳಲೆಂಬಂತೆ ಶ್ರೀಕೃಷ್ಣನೂ ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು.

ತೈಲಾಭ್ಯಂಜನ ಸ್ನಾನ ಸಂಕಲ್ಪ –
…………  ಚತುರ್ದಶ್ಯಾಂ ಶುಭತಿಥೌ ಚಂದ್ರೋದಯಕಾಲೇ ನರಕಾಂತಕ ಶ್ರೀ ಗೋಪಾಲಕೃಷ್ಣ ಪ್ರೇರಣಯಾ ಶ್ರೀ ಗೋಪಾಲಕೃಷ್ಣ ಪ್ರೀತ್ಯರ್ಥಂ ಸಪರಿವಾರಾಯ ಶ್ರೀ ಗೋಪಾಲಕೃಷ್ಣಾಯ ಸುಗಂಧಿ ತೈಲಾಭ್ಯಂಗ ಸಮರ್ಪಣ ಪೂಜಾಂ ಕರಿಷ್ಯೇ

ಅಭ್ಯಂಜನ ವಿಧಿ –  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಗರಿಕೆ ಮುಂತಾದುವನ್ನು ದೇವರ ಮುಂದಿಟ್ಟು
“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |
ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|

ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ಲಕ್ಷ್ಮಿ ಹಾಗೂ ಸಕಲ ದೇವತೆಗಳಿಗೂ, ಗುರುಹಿರಿಯರಿಗೂ ಸಮರ್ಪಿಸಿ, ನಮಸ್ಕರಿಸಿ, ಅವರಿಂದ ಆಶೀರ್ವಾದ ಪಡೆದು, ಮನೆಯ ಹಿರಿಯ ಸುಮಂಗಲೀ ಸ್ತ್ರೀಯರಿಂದಾಗಲೀ, ಅಥವಾ ನೆರೆಹೊರೆಯ ಬಂಧುಗಳಿಂದಾಗಲೀ, ಅಥವಾ ಯಾರೂ ಇಲ್ಲದಿದ್ದರೆ ತನ್ನ ಹೆಂಡತಿಯಿಂದಾಗಲೀ ಎಣ್ಣೆ ಶಾಸ್ತ್ರವನ್ನು ಮಾಡಿಸಿಕೊಂಡು ಗರಿಕೆಗಳಿಂದ :
ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||

ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.

ಯಮತರ್ಪಣಂ  यमतर्पणं

ಆಚಮನ, ಸಂಕಲ್ಪ –  ಪ್ರಣವಸ್ಯ…………………..ಚತುರ್ದಶ್ಯಾಮ್, ಶುಭತಿಥೌ, ಮಮ ನರಕ ಭಯ ನಿವೃತ್ತಿದ್ವಾರ ಶ್ರೀ ಯಮಾಂತರ್ಗತ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ/ವೇಂಕಟೇಶ ಪ್ರೀತ್ಯರ್ಥಂ, ನರಕಚತುರ್ದಶಿ ಪರ್ವಕಾಲ ಪ್ರಯುಕ್ತಂ ಯಮ ತರ್ಪಣಮಹಂ ಕರಿಷ್ಯೇ.

ಯಮಂ ತರ್ಪಯಾಮಿ | ಧರ್ಮರಾಜಂ ತರ್ಪಯಾಮಿ |
ಮೃತ್ಯುಂ ತರ್ಪಯಾಮಿ | ಅಂತಕಂ ತರ್ಪಯಾಮಿ |
ವೈವಸ್ವತಂ ತರ್ಪಯಾಮಿ | ಕಾಲಂ ತರ್ಪಯಾಮಿ |
ಸರ್ವಭೂತಕ್ಷಯಂ ತರ್ಪಯಾಮಿ | ಔದುಂಬರಂ ತರ್ಪಯಾಮಿ |
ದದ್ಧ್ನಂ ತರ್ಪಯಾಮಿ | ವೃಕೋದರಂ ತರ್ಪಯಾಮಿ |
ನೀಲಂ ತರ್ಪಯಾಮಿ | ಪರಮೇಷ್ಟಿನಂ ತರ್ಪಯಾಮಿ |
ಚಿತ್ರಂ ತರ್ಪಯಾಮಿ | ಚಿತ್ರಗುಪ್ತಂ ತರ್ಪಯಾಮಿ |

यमं तर्पयामि । धर्मराजं तर्पयामि ।
मृत्युं तर्पयामि । अंतकं तर्पयामि ।
वैवस्वतं तर्पयामि । कालं तर्पयामि ।
सर्वभूतक्षयं तर्पयामि । औदुंबरं तर्पयामि ।
दद्ध्नं तर्पयामि । वृकोदरं तर्पयामि ।
नीलं तर्पयामि । परमेष्टिनं तर्पयामि ।
चित्रं तर्पयामि । चित्रगुप्तं तर्पयामि ।

——————

ಉಲ್ಕಾದಾನ – ಸೂರ್ಯನು ತುಲಾದಲ್ಲಿರುವಾಗ ಪ್ರದೋಷಕಾಲದಲ್ಲಿ ಉಲ್ಕೆಯನ್ನು ಪ್ರದರ್ಶಿಸಬೇಕು.  ಇದರಿಂದ ಮಹಾಲಯಕ್ಕಾಗಿ ಯಮಲೋಕದಿಂದ ಬಂದ ಪಿತೃಗಳು ಹಿಂದಿರುಗುವಾಗ ದಾರಿಯನ್ನು ತೋರಲು ಹಾಗೂ ಕುಲದಲ್ಲಿ ಹುಟ್ಟಿ ಬೆಂಕಿಯಲ್ಲಿ ದಗ್ಧರಾದವರು, ಹಾಗೆಯೇ ಮೃತರಾದವರೂ, ಸಿಡಿಲು-ಮಿಂಚುಗಳಿಂದ ಮೃತರಾದವರೂ ಉತ್ತಮಗತಿಯನ್ನು ಹೊಂದಲು ಮನೆ ಸುತ್ತಮುತ್ತ ದೀಪಗಳನ್ನು ಬೆಳಗಿಸಬೇಕು.

When Surya is in Tularashi, we have to light of panju.  Because of this, those who have been burnt in your family, those who have been dead out of lightening and thunder, etc will get Sadgathi.  In order to get and to show the path, specially in temples, mutts, gardens, roads, goshala, etc, places are decorated with panju  light in olden days.

ಅಗ್ನಿದಗ್ದಾ: ಯೇ ಜೀವಾ ಯೇಪ್ಯದಗ್ದಾ: ಕುಲೇ ಮಮ |
ಉಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತು ವ್ರಜಂತು ತೇ |
ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಪದೇ |
ಉಜ್ವಲಜ್ಯೋತಿಷಾ ವರ್ತ್ಮ ಪ್ರಪಶ್ಯಂತೋ ವ್ರಜಂತು ತೇ
|

Updated: November 4, 2018 — 3:08 pm

Leave a Reply

Your email address will not be published.

Sumadhwa Seva © 2022