krishna paramaatma

 •  ಶ್ರೀಕೃಷ್ಣನೇ ಪ್ರಾಜ್ಞ ನಾಮಕ ಪರಮಾತ್ಮ

ಯಶೋದೆ ಕೃಷ್ಣನಿಗೆ ನಿದ್ರಿಸು ಎಂದಾಗ, ಕೃಷ್ಣ ನಿದ್ರೆಯೆಂದರೇನು ಮತ್ತು ಅದರ ಪ್ರಯೋಜನವೇನು ಎನ್ನುತ್ತಾನೆ.   ಆಗ ಯಶೋದೆ ಹೇಳುತ್ತಾಳೆ – ಎರಡೂ ಕಣ್ಣುಗಳನ್ನು ಮುಚ್ಚಿಕೊಂಡು ಪ್ರಾಜ್ಞನಾಮಕ ಭಗವನಂತನನ್ನು ಆಲಿಂಗಿಸಿಕೊಳ್ಳುವುದೇ ನಿದ್ದೆ ಮತ್ತು ನಿದ್ರೆಯಿಂದ ತಿಂದಿದ್ದು ಜೀರ್ಣವಾಗುವುದು ಎನ್ನುತ್ತಾಳೆ.  ಆಗ, ಕೃಷ್ಣ ತನ್ನ ಕಣ್ಣುಗಳನ್ನು ಮುಚ್ಚಿಕೊಂಡು ತನ್ನ ದೇಹವನ್ನೇ ಗಾಡವಾಗಿ ಆಲಿಂಗಿಸಿಕೊಳ್ಳುತ್ತಾ ಯಶೋದೆಗೆ ಹೇಳಿದ ” ಅಮ್ಮ ಎಲ್ಲವೂ ಜೀರ್ಣವಾಯಿತು”.  ಇಲ್ಲಿ ಪ್ರಾಜ್ಞ ನಾಮಕ ಹರಿ ತಾನೇ ಎಂದು ತಿಳಿಸಿಕೊಡುತ್ತಾನೆ ಕೃಷ್ಣ.

 • ಕೃಷ್ಣನಿಗೆ ನಾಮಕರಣ :

ಕೃಷ್ಣನಿಗೆ ವಸುದೇವ ಅಥವಾ ನಂದಗೋಪರು ನಾಮಕರಣ ಮಾಡುವ ಮುನ್ನವೇ ತನ್ನ ಲೀಲೆಗಳಿಂದ ತನ್ನ ಹೆಸರನ್ನು ತಾನೇ ಪಡೆದ.

ಪೂತನಿಯ ಸಂಹಾರದಿಂದ “ಪೂತನಾಜೀವಿತಹರ:” ಎಂದಾದರೆ, ಶಕಟಾಸುರನ ಮರ್ಧನದಿಂದ “ಶಕಟಾಸುರಭಂಜನ”, ತೃಣಾವರ್ತನ ನಿಗ್ರಹದಿಂದ ಮತ್ತು ಯಮಳಾರ್ಜುನ ನಿಗ್ರಹದಿಂದ “ತೃಣೀಕೃತ ತೃಣಾವರ್ತೋ ಯಮಳಾರ್ಜುನ ಭಂಜನ:” ಎಂದಾದ ಕೃಷ್ಣ.

 • ನಂತರ ಶ್ರೀ ಗರ್ಗಾಚಾರ್ಯರ ಪೌರೋಹೀತ್ಯದಲ್ಲಿ ಕೃಷ್ಣನೆಂದು ನಾಮಕರಣವಾಯಿತು.
 • ಎಲ್ಲರನ್ನೂ ಆಕರ್ಷಿಸುತ್ತಿದ್ದರಿಂದ “ಕೃಷ್ಣ”
 • ಕಪ್ಪುಬಣ್ಣದವನಾಗಿದ್ದರಿಂದ ಕೃಷ್ಣ

 

 • ಗೋಪಿಕಾಸ್ತ್ರೀಯರು ಕಂಡ ಕೃಷ್ಣ
 • ಗೋಪಿಕೆ ಯಶೋದೆಯ ಬಳಿ ದೂರುತ್ತಾಳೆ.   ನಿನ್ನ ಮಗ ಹಾಲನ್ನು ತಾನು ಕದ್ದು ಕುಡುಯುವುದಲ್ಲದೆ ಬೆಕ್ಕು ಮತ್ತು ಕಪಿಗಳಿಗೂ ಕುಡಿಸುತ್ತಾನೆ.
 • ಮತ್ತೊಬ್ಬ ಗೋಪಿ ಹೇಳುತ್ತಾಳೆ –  ನಿನ್ನ ಮಗ ಒಂದು ಕೈಯಲ್ಲಿ ಘಂಟೆಯನ್ನು ಹಿಡುದು, ಮತ್ತೊಂದರಲ್ಲಿ ಪಾತ್ರೆಯನ್ನು ಹಿಡಿದು, ಮತ್ತೊಂದರಲ್ಲಿ ಹಾಲು ಕುಡಿಯುತ್ತಾ, ಇನ್ನೊಂದರಲ್ಲಿ ಗೆಳೆಯರಿಗೆ ನೀಡುತ್ತಾ ಇದ್ದು ವಿಸ್ಮಿತಳಾದಳು.
 • ಕೃಷ್ಣ ಕರುಗಳನ್ನು ಬಿಚ್ಚಿ ಹಸುಗಳ ಬಳಿ ಬುಡುತ್ತಿದ್ದ ಎಂದು ದೂರನ್ನು ಗೋಪಿಕೆಯರು ನೀಡಿದಾಗ – ಅದು ನನ್ನ ಸ್ವಭಾವ, ಕಟ್ಟಿದ್ದನ್ನು ಬಿಚ್ಚಿ ಹಾಕುವುದು ನನ್ನ ಸ್ವಭಾವ” ಎಂದನು.
 • ಕೃಷ್ಣ ಮನೆಮನೆಗಳಲ್ಲಿ ಹಾಲನ್ನು ಕದಿಯಲು ಕಾರಣ ಅವನು ಸದಾ ತನ್ನ ಭಕ್ತರ ಪಾಪವನ್ನು ಕದಿಯುತ್ತಿದ್ದ ಅಭ್ಯಾಸವೇ ಕಾರಣ.
 • ಬೆಣ್ಣೆಯನ್ನೇಕೆ ಕದ್ದೆ ಎಂದರೆ ಕೃಷ್ಣ ನೀಡುತ್ತಿದ್ದ ಕಾರಣ –  ಅತಿ ಕಠಿಣ ಹೃದಯದವಳ ಮನೆಯಲ್ಲಿ ಈ ಮೃದುವಾದ ಬೆಣ್ಣೆಯು ಇರುವುದು ತರವಲ್ಲ, ಅದಕ್ಕೇ ನನ್ನ ಮೃದುವಾದ ಚಿತ್ತದಲ್ಲಿ ಪ್ರೀತಿಯಿಂದ ಅದನ್ನು ಇರಿಸಿಕೊಳ್ಳಬೇಕೆಂದು ಕದ್ದೆ” ಎನ್ನುತ್ತಿದ್ದ.
 • ಕೃಷ್ಣ ಹಾಲಿನ ಪಾತ್ರೆಯನ್ನು ಕೆಲವೆಡೆ ಕೈಯಿಂದ, ಕೆಲವೆಡೆ ಪಾದದಿಂದ, ಬೆನ್ನಿನಿಂದ ಹೇಗೋ ಗಮನಿಸುತ್ತಿದ್ದ.  ಇವನಿಗೆ ದೇಹವೆಲ್ಲ ಕಣ್ಣಿರುವುದೇ ಎಂದು ಒಬ್ಬ ಗೋಪಿ ಅನುಮಾನಿಸಿದಳು.    ಹೌದು. ಪರಮಾತ್ಮ “ವಿಶ್ವತಶ್ಚಕ್ಷು:” ಅವನು ಎಲ್ಲವನ್ನು ಎಲ್ಲಿಬೇಕಾದರೂ ಹ್ಯಾಂಗೆ ಬೇಕಾದರೂ ನೋಡ ಬಲ್ಲ ಸಾಮರ್ಥ್ಯ ಇದೆ.
 • ಶಕಟಾಸುರನ ಪಾದಕಮಲದಿಂದ ಪುಡಿಪುಡಿಮಾಡಿದ ನೀನು ಮೃದುವೇ, ಎಂದು ಗೋಪಿಕೆ ಕೇಳಲು ಕೃಷ್ಣ ಹೇಳುತ್ತಿದ್ದ – ” ಚಿಕ್ಕಂದಿನಲ್ಲಿ ನನ್ನನ್ನು ನಿನ್ನ ಎದೆಯ ಮೇಲೆ ನಿಲ್ಲಿಸಿ ನರ್ತನ ಮಾಡಿಸುತ್ತಿದ್ದ ನಿನ್ನ ಸಂಪರ್ಕದಿಂದ ನನ್ನ ಕಾಲಿನಲ್ಲಿ ಮಾತ್ರ ಕಾಠಿಣ್ಯವುಂಟಾಗಿದೆ”
 • ಶ್ರೀ ಕೃಷ್ಣ ಮನೆಗೆ ಬಂದು ಪಾತ್ರೆಗಳನ್ನು ಒಡೆದು ಹಾಲು ಕುಡಿಯತೊಡಗಲು, ಅವನ ದಂತ ಪಂಕ್ತಿ ಮತ್ತು ಕುಡಿನೋಟಗಳ ಕಾಂತಿಯ ಚಿಂಟಿಸಿದರೆ ಕೋಪವೇ ಹುಟ್ಟುತ್ತಲಿರಲಿಲ್ಲ
 • ಕೃಷ್ಣ ಕದಿಯಲು ಬಂದಾಗ ಆ ಪದಾರ್ಥಗಳು ದೇವರ ನೈವೇದ್ಯಕ್ಕೆಂದು ಮೀಸಲು ಎಂದ ಗೋಪಿಕೆಯರಿಗೆ “ನಾನೇ ದೇವರು, ಅವೆಲ್ಲ ನನಗೇ ಮೀಸಲು” ಎನ್ನುತ್ತಿದ್ದ.  ಈ ಮೂಲಕ ತಾನು ಸ್ವತ: ಪರಬ್ರಹ್ಮ ಎಂಬ ತತ್ತ್ವವನ್ನು ಸಾರುತ್ತಿದ್ದ.
 • ಮನೆಮನೆಗಳಲ್ಲಿ ಬೆಣ್ಣೆ, ಹಾಲು ಮೊಸರು ಎಲ್ಲವನ್ನು ಅಪಹರಿಸಿ, ತಿಂದರೂ ತೃಪ್ತಿಗೊಳ್ಳದಿದ್ದ ಅವನಲ್ಲಿ ಭೂತಪ್ರೇತಗಳೇನಾದರು ನೆಲೆಸಿವೆಯಾ ಎಂದು ಸಂದೇಹಿಸಿದರು ಕೆಲವು ಗೋಪಿಯರು.    ಭೂತಾನಿ ಎಂಬಲ್ಲಿ ಬ್ರಹ್ಮಾದಯೋ ಹಿ ಭೂತಾನಿ ಎಂಬಂತೆ, ಬ್ರಹ್ಮರುದ್ರಾದಿ ಸಮಸ್ತ ದೇವತೆಗಳೂ ಕೃಷ್ಣನ ಉದರದಲ್ಲಿ ಆಶ್ರಯ ಪಡೆದು ನೆಲೆಸಿರುವ ತತ್ತ್ವ ಸೂಚಿತವಾಗಿದೆ.
 • ಮತ್ತೊಬ್ಬ ಗೋಪಿಕೆ ಹೇಳುತ್ತಾಳೆ – ನಿನ್ನ ಮಗ ಕೃಷ್ಣ ಮನೆಮನೆಗಳಲ್ಲಿ ಹೋಗಿ ತುಂಬಾ ಬಿಸಿಯಾದ ಹಾಲು ಕುಡಿದರೂ ತನಗೇನಾಗುವುದಿಲ್ಲ.  ಅವನ ಬಾಯಲ್ಲಿ ಸಾಗರವೇನಾದರೂ ಇದೆಯಾ?.   ಹೌದು.  ವರುಣನು ಶ್ರೀ ಹರಿಯ ಬಾಯಿಯನ್ನು ಆಧರಿಸಿಯೇ ಇರುವುದು.   ಮತ್ತು ಅಗ್ನಿಯೊಳಗಿದ್ದು ಅವನಿಗೆ ಸುಡುವ ಸಾಮರ್ಥ್ಯವನ್ನು ನೀಡಿಸಿದವನೂ ಸಾಕ್ಷಾತ್ ಪರಶುರಾಮ ರೂಪಿ ಶ್ರೀಹರಿಯೇ.
 • ತನ್ನನ್ನು ಹಾಲು ಮೊಸರಿನ ಕಳ್ಳನೆಂದು ಕರೆದ ಗೋಪಿಯ ಎದುರಿಗೇ ಮಣ್ಣು ತಿಂದಾಗ, ತನ್ನ ತಾಯಿ ಅನುಮಾನಿಸಿ ಬಾಯಿಯನ್ನು ನೋಡೆದರೆ ಯಶೋದೆಗೆ ಇಡೀ ಲೋಕವನ್ನೇ ತೋರಿದ.

 

ಕೃಷ್ಣನಿಂದ ಹತರಾದ ದೈತ್ಯರು :

 1. ಪೂತನಾ – ಮೊಲೆಯ ಹಾಲು ಕುಡಿಸುವ ನೆಪದಲ್ಲಿ ವಿಷ ನೀಡಲು ಬಂದಾಗ –  ಸ್ತನ್ಯಪಾನದಿಂದಲೇ ಅವಳ ಸಂಹಾರ.
 2. ತೃಣಾವರ್ತ – ಸುಂಟರ ಗಾಳಿಯ ರೂಪದಿ ಬಂದ ಪಾರ್ವತೀದೇವಿಯ ವರ ಪಡೆದೆದ್ದ ಅವನು ಕೃಷ್ಣನನ್ನು ಅತಿ ಎತ್ತರಕ್ಕೆ ಕೊಂಡೊಯ್ದು ಸಾಯಿಸಲು ಪ್ರಯತ್ನಕ್ಕೆ ಅವನೇ ಸಂಹೃತನಾದ.
 3. ಶಕಟಾಸುರ – ಬಂಡಿ ರೂಪದಿ ಬಂದ ಶಕತನ ಸಂಹಾರ
 4. ವತ್ಸಾಸುರ – ಗೋವುಗಳಿಗೆ ಹುಲ್ಲು ಮೇಯಿಸುತ್ತಿದ್ದ ಕೃಷ್ಣನ ಕೊಲ್ಲಲು ಪಶುವಿನ  (ಕರುವಿನ) ರೂಪದಿ ಧಾವಿಸಿದ  ವತ್ಸಾಸುರನ ಅಪ್ಪಳಿಸಿ ಸಂಹಾರ.
 5. ಬಕಾಸುರ –  ಬಕಪಕ್ಷಿಯ ರೂಪದಿ ಬಂದ ದೈತ್ಯನನು ಕೃಷ್ಣನನ್ನೇ ನುಂಗಲು ಕೃಷ್ಣನು ಅವನ ಕಂಟದ ಉಸಿರನ್ನೇ ತಡೆದ.  ಆಗ ತಡೆಯಲಾರದೆ ಬಾಯಿಯಿಂದ ಹೊರಹಾಕಿದ ದೈತ್ಯ.  ಆ ಬಕನ ಕೊಕ್ಕನ್ನು ಇಭ್ಭಾಗವಾಗಿ ಸೀಳಿ ಸಂಹಾರ
 6. ಉಗ್ರಾಸುರ – ವಿಷವೃಕ್ಷದ ರೂಪದಿ ಕಾಣಿಸಿದ ಅವನು ವಿಷವ್ರುಕ್ಷದ ವಾಸನೆಯಿಂದ, ಬುಡವನ್ನು ಆಶ್ರಯಿಸಿದವರನ್ನೆಲ್ಲ ಸಾಯಿಸುತ್ತಿದ್ದ.  ಕೃಷ್ಣ ಆ ವೃಕ್ಷವನ್ನು ಬುಡ ಸಮೇತ ಕಿತ್ತು ಅವನ ಮತ್ತು ಅವನ ಸಹಾಯಕರ ಸಂಹಾರ.
 7.  ಧೇನುಕಾಸುರ – ವಿನಾಯಕನ ವರದಿಂದ ಕೊಬ್ಬಿದ್ದ ಕತ್ತೆ ರೂಪದಿ ಬಂದ ಅಸುರ ಬಲರಾಮನನ್ನು ಒದೆಯಲು ಪ್ರಯತ್ನಿಸಿದಾಗ ಅವನ ಕಾಲನ್ನು ಹಿಡಿದು ಅಪ್ಪಳಿಸಿ ತಾಳವೃಕ್ಷದ ತುದಿಯಲ್ಲಿ ಜೋರಾಗಿ ಬಿಸಾಡಿದ ಬಲರಾಮ.  (ಬಲರಾಮನಲ್ಲಿ ಪರಮಾತ್ಮನ ಶುಕ್ಲ ಕೇಶ ರೂಪದ ಆವೇಶವಿದ್ದಿತು)
 8. ಪ್ರಲಂಬ – ವ್ಯೋಮ – ಬಲರಾಮನು ಪ್ರಲಂಬಾಸುರನನ್ನೂ ಕೃಷ್ಣನು ವ್ಯೋಮಾಸುರನನ್ನೂ ಸಂಹರಿಸಿದರು
 9.  ಶಂಖಚೂಡ – ಶಿವನ ವರ ಪಡೆದಿದ್ದ ಕುದುರೆಯ ವೇಷದಿ ಬಂದ ದೈತ್ಯನನ್ನು ಸಂಹರಿಸಿದ
 10.  ಅರಿಷ್ಟನೇಮಿ – ಶಿವನ ವರ ಬಲದಿಂದ ಒಂದು ವೃಷಬದ ರೂಪದಲಿ ಬಂದ ದೈತ್ಯನನ ಕೋಡುಗಳನ್ನು ಕಿತ್ತು ಹಾಕಿದನು
 11.  ಕೇಶಿ –  ಇವನು ಹಯಗ್ರೀವಾಸುರನ ಅವತಾರ.  ಅಶ್ವ ರೂಪದಿ ಬಂದ ಅಸುರನು ಕೃಷ್ಣನ ನುಂಗಲು ಪ್ರಯತ್ನಿಸಿದಾಗ ಕೃಷ್ಣನು ಅವನ ಬಾಯಿಯಲ್ಲಿ ತನ್ನ ಕೈಯನ್ನು ತುರುಕಿ ಅವನ ಹೃದಯದಲ್ಲಿದ್ದ ಪ್ರಾಣವನ್ನೇ ಹಿಂಗಿದ.
 12.  ರಜಕ –  ಮಥುರಾನಗರಕ್ಕೆ ಆಗಮಿಸಿದ ಕೃಷ್ಣ ಕೆಟ್ಟ ವಚನಗಳ ನುಡಿದ ಕಂಸನ ಭೃತ್ಯ ಅಗಸನ ತಲೆಯನ್ನು ಕತ್ತರಿಸಿದ
 13.  ಕವಲಯಾಪೀಡ – ಕೃಷ್ಣನ ಕೊಲ್ಲಲು ಬಂದ ಆನೆ ರೂಪದ ದೈತ್ಯ ಕವಲಯಾಪೀಡನ ದಂತಗಳನ್ನು ಮುರಿದು, ಅದೇ ದಂತದಿಂದ ಮಾವಟಿಗನ ಕೊಂದು,  ಆನೆಯನ್ನೂ ಸಂಹರಿಸಿದ
 14. ಚಾಣೂರ-ಮುಷ್ಟಿಕಾಸುರ – ಮಲ್ಲ ಯುದ್ಧ ಪ್ರವೀಣರಾದ ಮುಷ್ಠಿಕನ ಬಲರಾಮ ಕೊಂದರೆ ಚಾಣೂರರು ಕೃಷ್ಣನೇ ಕೊಂದನು.
 15. ಕಂಸ – ಸೋದರಮಾವ ಕಂಸ ತನ್ನ ತಂದೆ ಯಾಯಿಯರ ಹಿಂಸಿಸಿದ್ದ. ತನ್ನ ಒಡ ಹುಟ್ಟಿದವರೆಲ್ಲರ ಕೊಂದಿದ್ದ.  ಸಾವಿರಾರು ಮಕ್ಕಳ ಕೊಲ್ಲಿಸಿದ್ದ, ಬ್ರಾಹ್ಮಣರ ಕೊಲ್ಲಿಸಿದ್ದ.   ಅಂತಹ ಕಂಸನನ್ನು ಅವನ ಆಸ್ಥಾನದಲ್ಲೇ ಅವನ ಭೃತ್ಯರ ಎದುರೇ ಕೊಂದ ಕೃಷ್ಣ.
 16. ಪಂಚಜನ – ಪಂಚಜನ ಎಂಬ ದೈತ್ಯನ ದೇಹದಲ್ಲಿದ್ದ ಪಂಚ ಪ್ರಾಣಗಳನ್ನು ಹೊರ ಹಾಕಿ ಅವನಲ್ಲಿದ್ದ ಪಾಂಚಜನ್ಯವೆಂಬ ಶಂಖದ ಒಡೆಯನಾದ
 17.  ಜರಾಸಂಧ ನಿಗ್ರಹ – ೧೮ ಬಾರಿ ಯುದ್ಧಕ್ಕೆ ಬಂದಾಗಲೂ, ಶಿವ ವರವಿದ್ದರೂ, ಆ ಜರಾಸಂಧನು ಕೃಷ್ಣನ ಮಣಿಸಲಾಗಲಿಲ್ಲ.    ಆದರೂ ಅವನನ್ನು ಕೊಲ್ಲದೆ ಭೀಮನಿಗಾಗಿ ಮೀಸಲಿಟ್ಟ.
 18. ಕಾಲಯವನ ಸಂಹಾರ –  ಕ್ಷಣಮಾತ್ರದಿ ದ್ವಾರಕಾಪಟ್ಟಣ ನಿರ್ಮಿಸಿ,  ಮಧುರಾ ನಗರದ ತನ್ನ ಜನರೆಲ್ಲರನ್ನೂ ಕರೆದುಕೊಂಡು ಹೋದನು.  ತನ್ನನ್ನು ಕೊಲ್ಲಲು ಬಂದ ಕಾಲಯವನನಿಗೆ ಹೆದರಿ ಓಡಿದಂತೆ ಕಂಡ ಕೃಷ್ಣನು ಓಡಿ ಓಡಿ ಬದರೀ ಕ್ಷೇತ್ರದ ಗುಹೆಯಲ್ಲಿ ಪ್ರವೇಶಿಸಿ, ಅಲ್ಲಿ ಮಲಗಿದ್ದ ಮುಚುಕುಂದ ಮಹಾರಾಜನ ಮುಖಾಂತರ ಕಾಲಯವನನನ್ನು ಸಂಹರಿಸಿದನು.   (ಮುಚುಕುಂದ ದೇವ ದಾನವ ಯುದ್ಧದಲ್ಲಿ ಭಾಗವಹಿಸಿ, ದೇವತೆಗಳಿಂದ ವರ ಪಡೆದು ಒಳ್ಳೆ ನಿದ್ರೆಯನ್ನು ಪಡೆದು ಮಲಗಿದ್ದ.   ಆಗ ಅವನನ್ನು ಎಬ್ಬಿಸಿದ ಕಾಲಯವನನ್ನು ನೋಡಿದ ಕೂಡಲೆ ಆ ದೈತ್ಯ ಸತ್ತುಹೋದ.  )

 

 

ಶ್ರೀಕೃಷ್ಣ ಕಲ್ಯಾಣ

 

 1. ನೀಲಾದೇವಿ – ಇವಳು ಷಣ್ಮಹಿಷಿಯರಲ್ಲಿ ಒಬ್ಬಳು – ಯಶೋದೆಯ ಸಹೋದರ ನಗ್ನಜಿತ್ ಮಗಳು ನೀಲಾದೇವಿ.  ತನ್ನ ಮಗಳ ವಿವಾಹಾರ್ಥ ಸ್ವಯಂವರವನ್ನು ಏರ್ಪಡಿಸಿದ್ದ.  – ಅದರಂತೆ  ಏಳು ಗೂಳಿಗಳನ್ನು ನಿಗಹಿಸಿ ಕೃಷ್ಣ ಅವಳನ್ನು ಪತ್ನಿಯಾಗಿ ಸ್ವೀಕರಿಸಿದ್ದ.   ಆಗ ಅವನಿಗಿನ್ನೂ ಉಪನಯನವಾಗಿರಲಿಲ್ಲ.  – ಪುತ್ರರು – ವೀರ, ಚಂದ್ರ, ಅಶ್ವಸೇನ, ಚಿತ್ರಗು, ವೇಗವಂತ, ವೃಕ್ಷ, ಆಮ, ಶಂಕು ಮತ್ತು ಕುಂತಿ
 2. ರುಕ್ಮಿಣಿ – ವಿದರ್ಭದ ದೊರೆ ಭೀಷ್ಮಕನ ಮಗಳು,.   ಅವಳ ಸಹೋದರ ರುಕ್ಮಿಯು ಜರಾಸಂಧನ ಆದೇಶದಂತೆ (ತನ್ನ ತಂದೆಯ ಇಚ್ಛೆಯ ವಿರುದ್ಧವಾಗಿ) ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಬೇಕೆಂದು ತೀರ್ಮಾನಿಸಿರುತ್ತಾನೆ.  ಆದರೆ ರುಕ್ಮಿಣಿ ದೇವಿಯ ಕೋರಿಕೆಯಂತೆ ಕೃಷ್ಣನು ಬಂದು ಅವಳನ್ನು ಅಪಹರಿಸಿ, ದ್ವಾರಕೆಗೆ ಕರೆತಂದು ವಿವಾಹವಾಗುತ್ತಾನೆ.   ಮಕ್ಕಳು – ಪ್ರದ್ಯುಮ್ನ, ಚಾರುದೇಶ್ನ, ಸುಧೇಶ್ನ, ಚಾರುದೇಹ, ಸುಚಾರು, ಚಾರುಗುಪ್ಪ, ಚರುಚನ್ದ್ರ, ವಿಚಾರು, ಭದ್ರಚಾರು, ಚಾರುಮತಿ
 3. ಜಾಂಭವತೀ ವಿವಾಹ – ಸತ್ರಾಜಿತನು ಕಳೆದುಕೊಂಡಿದ್ದ ಶ್ಯಮಂತಕಮಣಿಯನ್ನು ಹುಡುಕಲು ಹೊರಟ ಕೃಷ್ಣ ಜಾಂಬವಂತನಿದ್ದ ಗುಹೆಗೆ ಪ್ರವೇಶಿಸಿ, ಅವನೊಂದಿಗೆ ೨೧ ದಿನಗಳವರೆಗೆ ಯುದ್ಧ ಮಾಡಿ ಅವನಿಗೆ ರಾಮಚಂದ್ರ ರೂಪವ ದರ್ಶಿಶಿ, ಅವನ ಮಗಳಾದ ಜಾಂಬವತಿಯನ್ನು ವಿವಾಹವಾದ.  ಮಕ್ಕಳು – ಸಾಂಬ, ಸುಮಿತ್ರ, ಪುರುಜಿತ್, ಶತಜಿತ್, ಸಹಸ್ರಜಿತ್, ವಿಜಯ, ಚಿತ್ರಕೇತು, ವಸುಮಾನ, ದ್ರವಿಡ, ಕ್ರತು
 4. ಸತ್ಯಭಾಮ ವಿವಾಹ – ನಂತರ ಜಾಂಬವಂತ ಹಿಂತಿರುಗಿಸಿದ ಶ್ಯಮಂತಕ ಮಣಿಯನ್ನು ಅವನಿಗೇ ಹಿಂತಿರುಗಿಸಿದಾಗ, ತನ್ನ ತಪ್ಪಿಗೆ ನಾಚಿ ಸೋತಿದ್ದ ಸತ್ರಾಜಿತ್ತ ಅವನ ಮಗಳಾದ ಭೂದೇವಿ  ಅವತಾರಳಾದ ಸತ್ಯಭಾಮಳನ್ನು ಪಾಣಿಗ್ರಹಣ ಮಾಡಿದನು.    ಮಕ್ಕಳು – ಭಾನು, ಸುಭಾನು, ಸ್ವರ್ಭಾನು, ಪ್ರಭಾನು, ಭಾನುಮಂತ, ಚಂದ್ರಭಾನು, ಬ್ರುಹದ್ಭಾನು, ಅತಿಭಾನು, ಶ್ರೀಭಾನು
 5. ಮಿತ್ರವೃಂದ –    ಅವಂತಿ ರಾಜ ಜಯಸೇನನ ಮಗಳು.   ಜಯಸೇನನ ಮಡದಿ ರಾಜಾಧಿದೇವಿ ವಸುದೇವನ ಸಹೋದರಿ.  ಮಿತ್ರವೃಂದಳ ಸಹೋದರರು ದುರ್ಯೋಧನನಿಗೆ ಅವಳನ್ನು ವಿವಾಹ ಮಾಡಬೇಕೆಂದು ಪ್ರಯತ್ನಿಸುತ್ತಾರೆ.  ಆದರೆ ಅವಳಿಗೆ ಕೃಷ್ಣನ ಮೇಲೆ ಆಸೆ.   ಅವಳ ಸಹೋದರರು ವಿಂದ ಮತ್ತು ಅನ್ವಿಂದ ಸ್ವಯಂವರವನ್ನು ಏರ್ಪಡಿಸುತ್ತಾರೆ.   ಕೃಷ್ಣಬಲರಾಮರಿಗೆ ಆಹ್ವಾನವಿಲ್ಲ.  ದುರ್ಯೋಧನನಿಗೆ ಆಮಂತ್ರಣವಿರುತ್ತದೆ.  ಬಲರಾಮನು ಕೃಷ್ಣನಿಗೆ ಮಿತ್ರವೃಂದಳನ್ನು ಅಪಹರಿಸುವಂತೆ ಹೇಳುತ್ತಾನೆ.  ಆ ಸಂದರ್ಭದಲ್ಲಿ ಆದ ಯುದ್ಧದಲ್ಲಿ ಕೃಷ್ಣ ಜಯಗಳಿಸಿ, ಅವಳನ್ನು ಅಪಹರಿಸುತ್ತಾನೆ.    ಮಕ್ಕಳು – ವೃಕ, ಹರ್ಶ, ಅನಿಲ, ಘ್ರುಧ್ರ, ವರ್ಧನ, ಉನ್ನಾದ, ಮಹಾಶ, ಪಾವನ, ವನ್ಹಿ, ಕ್ಷುಧಿ,
 6.  ಭದ್ರ – ಇವಳು ವಸುದೇವನ ಸಹೋದರಿ ಶ್ರುತಕೀರ್ತಿ ಮತ್ತು ಧೃಷ್ಟಕೇತುವಿನ ಮಗಳು.  ಇವಳೂ ಕೂಡ ಸ್ವಯಂವರದಲ್ಲಿ ಕೃಷ್ಣನನ್ನು ವಿವಾಹವಾದಳು.    ಮಕ್ಕಳು – ಸಂಗ್ರಾಮಜಿತ್, ಬ್ರುಹತ್ಸೇನ, ಶೂರ, ಪ್ರಹರಣ, ಅರಿಜಿತ್, ಜಯ, ಸುಭದ್ರ, ವಾಮ, ಆಯು, ಸತ್ಯಕ
 7.  ಕಾಳಿಂದಿ – ಇವಳು ಸೂರ್ಯ ಪುತ್ರಿ.  ಒಮ್ಮೆ ಕೃಷ್ಣ ಮತ್ತು ಅರ್ಜುನರು ವಿಹಾರಕ್ಕೆಂದು ಹೋಗಿದ್ದಾಗ, ಅಲ್ಲಿ ತಪಗೈಯುತ್ತಿದ್ದ .   ಅವಳನ್ನು ವಿಚಾರಿಸಲು, ತಾನು ಕೃಷ್ಣನಲ್ಲದೇ ಬೇರಾರನ್ನೂ ವಿವಾಹವಾಗುವುದಿಲ್ಲ.  ಅವನಿಗಾಗಿಯೇ ತಪಸ್ಸನ್ನಾಚರಿಸುತ್ತಿರುವೆ ಎನ್ನುತ್ತಾಳೆ.  ಅವಳ ಇಚ್ಚೆಯಂತೆ ಅವಳನ್ನು ವಿವಾಹವಾಗುತ್ತಾನೆ .  ಪುತ್ರರು – ಶ್ರುತ, ಕವಿ, ವೃಶ, ವೀರ, ಸುಬಾಹು, ಭದ್ರ, ದರ್ಶ, ಪುರ್ನಮಾಸ, ಸೋಮಕ, ಶಾಂತಿ
 8. ಲಕ್ಷ್ಮಣದೇವಿ – ಮದ್ರರಾಜನ ಮಗಳು.   ಅವಳ ತಂದೆ ಸ್ವಯಂವರವನ್ನು ಏರ್ಪಡಿಸಿರುತ್ತಾರೆ.  ಸ್ವಯಂವರಕ್ಕೆ ಬಿಲ್ಲುವಿದ್ಯೆಯ ಪ್ರಾವೀಣ್ಯತೆಯ ಗುರಿಯಲ್ಲಿ ದುರ್ಯೋಧನ, ಜರಾಸಂಧಾದಿಗಳೂ ಸೋಲುತ್ತಾರೆ.  ಕೃಷ್ಣನೊಬ್ಬನೇ ಗುರಿ ಇಟ್ಟು ಪ್ರಯೋಗಿಸಿ ಗೆಲ್ಲುತ್ತಾನೆ.  ಅವಳ ಮಕ್ಕಳು – ಪ್ರಘೋಶ, ಘತ್ರವನ್, ಸಿಮ್ಹಬಲ, ಪ್ರಬಲ, ಊರ್ಧ್ವಗ, ಮಹಾಶಕ್ತಿ, ಶಹ, ಓಜ ಮತ್ತು ಆರಾಜಿತ.

 

 

 

 

 

 

Posted in Albums

Leave a Reply

Your email address will not be published. Required fields are marked *